Connect with us

ದಕ್ಷಿಣ ಕನ್ನಡ

ಕೇರಳದ ಯುವ ಜೋಡಿಗೆ ಕಿರುಕುಳ : ಮಂಗಳೂರಿನ ಮೂವರ ಬಂಧನ

Ad Widget

Ad Widget

Ad Widget

Ad Widget

ಮಂಗಳೂರು: ಕೇರಳ  ಯುವ  ಜೋಡಿಯನ್ನು  ತಡೆದು  ಅವರ  ಧರ್ಮದ ಬಗ್ಗೆ ವಿಚಾರಿಸಿ ಮತೀಯ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಂಪನಕಟ್ಟೆಯ ಮಳಿಗೆಯೊಂದರ ಬಳಿ ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ನಿಂತಿದ್ದ ಕೇರಳದ ಯುವಕ ಹಾಗೂ ಆತನ ಜೊತೆಗಿದ್ದ ಯುವತಿಯನ್ನು ಯುವಕರ ಗುಂಪೊಂದು ವಿಚಾರಿಸಿತ್ತು.

Ad Widget

Ad Widget

Ad Widget

ಕೇರಳದ ಯುವಕ ಮತ್ತು ಯುವತಿಯ  ಧರ್ಮದ ಬಗ್ಗೆ ಪ್ರಶ್ನಿಸಿ, ಗುರುತಿನ ಚೀಟಿ ತೋರಿಸುವಂತೆ ಗುಂಪಿನಲ್ಲಿದ್ದ ಯುವಕನೊಬ್ಬ ಏರುಧ್ವನಿಯಲ್ಲಿ ಸೂಚಿಸಿದ ಹಾಗೂ ಅವರ ಸೊತ್ತುಗಳನ್ನು ಪರೀಶೀಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Ad Widget

ಬಂಟ್ವಾಳ ನಿವಾಸಿ ಸಂದೇಶ (28), ಆತನ ಜೊತೆಗಿದ್ದ ಪ್ರಶಾಂತ್‌ (31) ಹಾಗೂ ರೋನಿತ್‌ (31) ಅವರನ್ನು ಬಂಧಿತರು. ಆರೋಪಿಗಳ ವಿರುದ್ಧ ಶಾಂತಿಭಂಗಕ್ಕೆ ಉದ್ದೇಶಪೂರ್ವಕ ಪ್ರಚೋದನೆ ಮತ್ತು ಅಕ್ರಮವಾಗಿ ನಿರ್ಬಂಧ ವಿಧಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ

Ad Widget

Ad Widget

ಏನಿದು ಪ್ರಕರಣ ?

Ad Widget

Ad Widget

Ad Widget

ಹಂಪನಕಟ್ಟೆಯ  ಗುಡ್ ಟೈಮ್ ಶಾರ್ಟ್ ಈಟ್ಸ್  ಶಾಪ್ ಬಳಿ ಕೇರಳದ ಯುವಕ ಮತ್ತು ಯುವತಿಯನ್ನು ಸಂದೇಶ್ ಎಂಬಾತ ತಡೆದಿದ್ದಾನೆ. ಯುವಕ ಮುಸ್ಲಿಂ ಹಾಗೂ ಹಿಂದೂ ಯುವತಿ ಎಂಬ ಶಂಕೆಯಲ್ಲಿ ಆತ ಪರಿಶೀಲನೆ ನಡೆಸಿದ್ದಾಗಿ ಹೇಳಲಾಗುತ್ತಿದೆ. ಪ್ರಮುಖ ಆರೋಪಿ  ಅವರ ಮೇಲೆ ಕೂಗಾಡಿ ಐಡಿ ಕಾರ್ಡ್ ಕೇಳಿದ್ದಾನೆ. ಈ‌ ಸಂದರ್ಭ ಯುವಕ ಹಾಗೂ ಯುವತಿ ಆಟೋ ರಿಕ್ಷಾವನ್ನು ಹತ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದಾರೆ. ಆಗ ಆಟೋ ನಿಲ್ಲಿಸಲು ಯತ್ನಿಸಿದ ಸಂದೇಶ್ ಆಟೋ ಚಾಲಕನಿಗೂ ಗದರಿಸಿದ್ದಾನೆ. ಅಷ್ಟರಲ್ಲಿ ಇನ್ನಿಬ್ಬರು  ಸಂದೇಶ್‌ ಗೆ ಸಾಥ್‌ ನೀಡಿದ್ದಾರೆ.

ಜೋಡಿಯು ತಕ್ಷಣ  ತಮ್ಮನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಹೇಳಿದ್ದು ಆಟೋ ಚಾಲಕ ಅವರನ್ನು ಅಲ್ಲಿಗೆ ತಲುಪಿಸಿದ್ದಾರೆ. ಬಳಿಕ ಆಟೋ ಚಾಲಕನು ನೀಡಿದ ದೂರಿನನ್ವಯ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ

‘ಆ ಯುವಕ ಮತ್ತು ಯುವತಿ ಆಟೊ ಹತ್ತಿಕೊಂಡು ರೈಲು ನಿಲ್ದಾಣದತ್ತ ತೆರಳಿದರು. ಆಗಲೂ ಯುವಕರ ಗುಂಪು ಆಟೊವನ್ನು ತಡೆದು ದಾಂದಲೆ ನಡೆಸಿತ್ತು. ಅಲ್ಲದೇ ಯುವಕ- ಯುವತಿಯನ್ನು ಆಟೊಗೆ ಹತ್ತಿಸಿಕೊಂಡ ಚಾಲಕನನ್ನೂ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ ಯುವಕ- ಯುವತಿಯನ್ನು ಆಟೊದಲ್ಲಿ ಕಳುಹಿಸಿಕೊಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

ಮಂಗಳೂರು

Lightning Strike ಸುಬ್ರಹ್ಮಣ್ಯ : ಒಣಗಲು ಹಾಕಿದ ಆಡಿಕೆ ತೆಗೆಯುವಾಗ ಸಿಡಿಲು ಬಡಿದು ನವ ವಿವಾಹಿತ ಮೃತ್ಯು

Ad Widget

Ad Widget

Ad Widget

Ad Widget

ಸಿಡಿಲು ಬಡಿದು ನವವಿವಾಹಿತ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ
ಮೇ.3 ರ ಸಂಜೆ ನಡೆದಿದೆ.

Ad Widget

Ad Widget

Ad Widget

ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದ‌ರ್(34) ಮೃತ ಪಟ್ಟವರು. 10 ದಿನಗಳ ಹಿಂದೆಯಷ್ಟೇ ಅವರ ವಿವಾಹ ನಡೆದಿತ್ತು. ಇವರು ಪರ್ವತ ಮುಖಿ ಸಮೀಪ ದೇವಿಕಾ ಕಾರ್ ವಾಷಿಂಗ್ ನ ಸರ್ವಿಸ್ ಸೆಂಟರ್ ನಡೆಸುತ್ತಿದ್ದರು.

Ad Widget

ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಸುರಿದಿದ್ದೆ. ಅದಕ್ಕೂ ತುಸು ಮೊದಲು ಮನೆಯಂಗಲದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಸೋಮಸುಂದರ್ ರಾಶಿ ಮಾಡುತ್ತಿದ್ದ ವೇಳೆ ಅವರಿಗೆ ಸಿಡಿಲು ಬಡಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತರಾಗಿದ್ದಾರೆ. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.

Ad Widget

Ad Widget

ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದರು.

Ad Widget

Ad Widget

Ad Widget
Continue Reading

ಮನರಂಜನೆ

Speed passenger ship-ಲಕ್ಷದ್ವೀಪ – ಮಂಗಳೂರು ನಡುವೆ ಸ್ಪೀಡ್ ಪ್ಯಾಸೆಂಜರ್ ಹಡಗು ಪ್ರಾರಂಭ – ಪ್ರವಾಸಕ್ಕೆ ಹೋಗಲು ಇನ್ಯಾಕೆ ತಡ ? ಇಲ್ಲಿದೆ ದರ ವಿವರ

Ad Widget

Ad Widget

Ad Widget

Ad Widget

ಮಂಗಳೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪದ ಬೀಚ್‌ನಲ್ಲಿ ವಾಯುವಿಹಾರ ನಡೆಸುವ ಮೂಲಕ ಲಕ್ಷದ್ವೀಪ ಬಾರಿ ಸುದ್ದಿಯಾಗಿತ್ತು. ಈ ವೇಳೆ ಮಂಗಳೂರು ಲಕ್ಷದ್ವೀಪ ನಡುವೆ ಈ ಹಿಂದೆ ಇದ್ದ ಪ್ರಯಾಣಿಕರ ಹಡಗು ಆರಂಭಿಸಲು ಬೇಡಿಕೆ ಕೂಡಾ ಆರಂಭವಾಗಿತ್ತು.

Ad Widget

Ad Widget

Ad Widget

ಇದೀಗ ಲಕ್ಷದ್ವೀಪದ ಆಡಳಿತ ಮಂಗಳೂರಿಗೆ ಸ್ಪೀಡ್ ಪ್ಯಾಸೆಂಜರ್ ಹಡಗನ್ನು ಆರಂಭಿಸಿದೆ. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಸ್ಪೀಡ್ ಪ್ಯಾಸೆಂಜರ್ ಬೋಟ್‌ನಲ್ಲಿ 150 ಜನ ಲಕ್ಷದ್ವೀಪವಾಸಿಗಳು ಆಗಮಿಸಿದ್ದಾರೆ.

Ad Widget

ಪ್ರಯಾಣ ದರ ಎಷ್ಟು
ಮಂಗಳೂರು ಲಕ್ಷದ್ವೀಪದ ನಡುವೆ ಮತ್ತೆ ಸಂಪರ್ಕ ಸೇತುವೆ ನಿರ್ಮಿಸಲು ಲಕ್ಷದ್ವೀಪ ಆಡಳಿತ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭಿಸಿದೆ. ಕೋವಿಡ್ ಆರಂಭಕ್ಕೂ ಮೊದಲು ಮಂಗಳೂರು ಲಕ್ಷದ್ವೀಪದ ನಡುವೆ ಎರಡು ಪ್ರಯಾಣಿಕ ಹಡಗುಗಳು ಸಂಚಾರ ಮಾಡುತ್ತಿತ್ತು. ಸಾಕಷ್ಟು ಪ್ರಯಾಣಿಕರು ಮಂಗಳೂರು ಲಕ್ಷದ್ವೀಪ ನಡುವೆ ಪ್ರಯಾಣ ಮಾಡುವ ಮೂಲಕ ಅದರ ಅನುಕೂಲ ಪಡೆದುಕೊಂಡಿದ್ದರು.

Ad Widget

Ad Widget

ಲಕ್ಷದ್ವೀಪದವರಿಗೆ ತಮ್ಮ ದೈನಂದಿನ ಅವಶ್ಯಕತೆಗೆ ಮಂಗಳೂರು ಅವಲಂಬಿತರಾಗಿದ್ದರೆ, ಮಂಗಳೂರಿನ ಜನರಿಗೆ ಲಕ್ಷದ್ವೀಪ ವೀಕೆಂಡ್ ಪಾಯಿಂಟ್. ಆದ್ರೆ ಕೋವಿಡ್ ಕಾರಣದಿಂದ ಲಕ್ಷಾದ್ವೀಪಕ್ಕೆ ಇದ್ದ ಹಡಗಿನ ವ್ಯವಸ್ಥೆ ನಿಂತು ಹೋಗಿದ್ದು, ಈಗ ಮತ್ತೆ ಆರಂಭವಾಗಿದೆ. ಹಿಂದೆ 24 ಗಂಟೆ ಇದ್ದ ಪ್ರಯಾಣ ಕೇವಲ 5.30 ರಿಂದ 6 ಗಂಟೆಗಳಿಗೆ ಇಳಿದಿದೆ. ಹಡಗಿನಲ್ಲಿ ಎಲ್ಲಾ ವ್ಯವಸ್ಥೆ ಇರೋ ಕಾರಣದಿಂದ ಜನರು ಕೂಡಾ ಉತ್ಸಾಹದಿಂದ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಹೈ-ಸ್ಪೀಡ್ ಪ್ರಯಾಣಿಕ ಹಡಗಿನ ದರ ಕೇವಲ 450 ರೂ. ಆಗಿದೆ.

Ad Widget

Ad Widget

Ad Widget

ಹೆಚ್ಚಿನ ಹಡಗಿಗೆ ಬೇಡಿಕೆ :
ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಆರಂಭದಿಂದ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಲಕ್ಷದ್ವೀಪಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಂಗಳೂರಿನಿಂದ ತೆರಳುವ ಮೂಲಕ ಅಲ್ಲೂ ಕೂಡಾ ಆರ್ಥಿಕ ಅಭಿವೃದ್ದಿ ಆಗಲಿದೆ.

ಸ್ಪೀಡ್ ಪ್ಯಾಸೆಂಜರ್ ಹಡಗು ಕನಿಷ್ಟ ಎರಡು ದಿನಕ್ಕೊಮ್ಮೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವ ವ್ಯವಸ್ಥೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. ಈಗ ಆರಂಭವಾಗಿರೋ ಹಡಗಿನಲ್ಲಿ ಸುಖಕರ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಟಿವಿ, ಎಸಿ, ಸೇರಿದಂತೆ ಅಗತ್ಯ ಸೇವೆಗಳು ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಹಡಗಿನ ಬಳಕೆ ಮಾಡುವ ಸಾಧ್ಯತೆ ಇರುವ ಕಾರಣ ಹೆಚ್ಚಿನ ಹಡಗಿನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದೀಗ ಆರಂಭಗೊಂಡಿರೋ ಪ್ರಯಾಣಿಕರ ಹಡಗು ಸೇವೆ ಜೂನ್ ತಿಂಗಳ ಬಳಿಕ ಸ್ಥಗಿತವಾಗಲಿದೆ.

ಮಳೆಗಾಲ ಕಳೆದ ಬಳಿಕ ಇದು ಮತ್ತೆ ಆರಂಭವಾಗುತ್ತದೆಯೋ ಇಲ್ಲವೋ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ, ಮತ್ತೆ ಆರಂಭಿಸುವ ಬಗ್ಗೆ ಲಕ್ಷದ್ವೀಪ ಆಡಳಿತ ಭರವಸೆ ನೀಡಿದೆ. ಒಟ್ಟಾರೆ ಹೇಳೋದಾದ್ರೆ ಸದ್ಯಕ್ಕಂತೂ ಲಕ್ಷದ್ವೀಪಕ್ಕೆ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭದಿಂದ ಮಂಗಳೂರಿನ ಜನರಿಗಂತೂ ಸಾಕಷ್ಟು ಖುಷಿಯಾಗಿರೋದಂತು ನಿಜ.

Continue Reading

ಕಾರ್ಯಕ್ರಮಗಳು

Karpadi-ನೇಮೋತ್ಸವದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡ ಇತಿಹಾಸ ಪ್ರಸಿದ್ದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ

Ad Widget

Ad Widget

Ad Widget

Ad Widget

ಪುತ್ತೂರು: ಮೂರುಸಾವಿರ ವರ್ಷಗಳ ಇತಿಹಾಸವಿರುವ ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರೋತ್ಸವವು ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.

Ad Widget

Ad Widget

Ad Widget

ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವಕ್ಕೆ ಎ.20ರಂದು ಅದ್ದೂರಿ ಹೊರೆಕಾಣಿಕೆ ಸಮರ್ಪಣೆಯು ಮೂಲಕ ಚಾಲನೆ ನೀಡಲಾಗಿತ್ತು. ನಂತರ ಪ್ರತಿ ದಿನ ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದವು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧಿಪತಿಗಳು ಆಗಮಿಸಿ ಆಶೀರ್ಚನ ನೀಡಿದರು. ಅತಿಥಿ ಗಣ್ಯರು ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ದಿನವೂ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿಂದ ನಡೆದ ನಾಟಕ, ಯಕ್ಷಗಾನ, ಜಾದೂ ಪ್ರದರ್ಶನ ಸೇರಿದಂತೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಿದ್ದವು. ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ತಂಡೋಪ ತಂಡವಾಗಿ ಊರ, ಪರವೂರ ಭಕ್ತಾದಿಗಳ ಜನ ಸಾಗರವೇ ಹರಿದು ಬರುತ್ತಿತ್ತು. ಇದು ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

Ad Widget

40,000 ಮಂದಿಗೆ ಅನ್ನದಾನ: ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಎಂಟು ದಿನಗಳಲ್ಲಿಯೂ ಬೆಳಿಗ್ಗೆ ಹಾಗೂ ಸಂಜೆ ಶುಚಿ, ರುಚಿಯಾದ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನೆರವೇರಿದೆ. ಒಟ್ಟು ಎಂಟು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 40,000ಕ್ಕೂ ಅಧಿಕ ಮಂದಿ ದೇವರ ಅನ್ನಪ್ರಸಾದ ಸ್ವೀಕರಿಸಿದರು.

Ad Widget

Ad Widget

ಶಿಸ್ತು ಬದ್ಧವಾಗಿ ನಡೆದ ಬ್ರಹ್ಮಕಲಶೋತ್ಸವ: ಕ್ಷೇತ್ರದಲ್ಲಿ ಎಂಟು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸದಲ್ಲಿ ಹೊರೆ ಕಾಣಿಕೆ ಸಮರ್ಪಣೆ, ಸ್ಕಂದ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭೋಜನ ಶಾಲೆಯಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ, ಬೆಳಿಗ್ಗೆ ಹಾಗೂ ಸಂಜೆಯ ಉಪಾಹಾರಗಳು, ವಾಹನ ನಿಲುಗಡೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ವಿವಿಧ ಉಪ ಸಮಿತಿಗಳ ನೇತೃತ್ವದಲ್ಲಿ ಬಹಳಷ್ಟು ವ್ಯವಸ್ಥಿತ ಹಾಗೂ ಶಿಸ್ತು ಬದ್ದವಾಗಿ ನಡೆದಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಶುಚಿತ್ವಕ್ಕೆ ಬಹಳಷ್ಟು ಆದ್ಯತೆ ನೀಡಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಾರ್ಯಕ್ರಮದಲ್ಲಿ ಯಾವುದೇ ತೊಂದರೆ ಬರದಂತೆ ಸಮಿತಿಯವರು ವ್ಯವಸ್ಥೆ ಮಾಡಿದ್ದು ಭಕ್ತಾದಿಗಳಿಗೆ ಖುಷಿ ಕೊಟ್ಟಿದೆ. ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಉಪ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಹಗಲಿರುಳು ದುಡಿಯುತ್ತಿದ್ದ ಕರಸೇವಕರು, ಭಕ್ತಾದಿಗಳು, ಗ್ರಾಮಸ್ಥರು ದೇವರ ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿ ನೆರವೇರಿಸುವಲ್ಲಿ ಪಣತೊಟ್ಟಿದ್ದರು.

Ad Widget

Ad Widget

Ad Widget

ನಿರಂತರ ಶುಚಿ-ರುಚಿಯಾದ ಅನ್ನದಾನ: ಕ್ಷೇತ್ರದಲ್ಲಿ ಎ.20ರಿಂದ ಮಧ್ಯಾಹ್ನದಿಂದಲೇ ನಿರಂತರ ಅನ್ನದಾನ ಆರಂಭಗೊಂಡಿತ್ತು. ಪ್ರತೀ ಹೊತ್ತಿಗೂ ವಿಶೇಷ ಸಿಹಿ ಭಕ್ಷ್ಯ, ನೀಡಲಾಗಿತ್ತು. ಏಕಕಾಲದಲ್ಲಿ ಸುಮಾರು 300 ಮಂದಿ ಕುಳಿತು ಊಟ ಮಾಡುವ ಸೌಲಭ್ಯ, ಬಟ್ಟಲು ಊಟ ಹಾಗೂ ವಿಶೇಷವಾಗಿ ನೆಲದಲ್ಲಿ ಕುಳಿತು ಊಟ ಮಾಡುವ ವಿಶಾಲವಾದ ಅನ್ನಭತ್ರ ಸಿದ್ದಪಡಿಸಲಾಗಿತ್ತು. ಬೆಳಿಗ್ಗೆ ಹಾಗೂ ಸಂಜೆ ವಿವಿಧ ಬಗೆಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ವಿವಿಧ ಭಕ್ಷ್ಯಗಳೊಂದಿಗೆ ಪ್ರಸಾದ ಭೋಜನ ವಿತರಣೆಯು ಅಚ್ಚುಕಟ್ಟಾಗಿ ನಡೆದಿತ್ತು. ಬಟ್ಟಲು, ಗ್ಲಾಸ್‌ಗಳನ್ನು ಬಿಸಿ ನೀರಿನಲ್ಲಿ ತೊಳೆದೇ ಬಳಸಲಾಗಿತ್ತು.

ಉತ್ತಮ ಸ್ವಯಂಸೇವಕರ ತಂಡ: ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವಗಳು ಯಶಸ್ವಿಯಾಗಿ ನೆರವೇರುವಲ್ಲಿ ಭಕ್ತರ ಸಮರ್ಪಣಾ ಭಾವದ ಕರಸೇವೆಯು ಪ್ರಮುಖವಾಗಿತ್ತು. ಪ್ರತಿದಿನ ಸುಮಾರು 300ಕ್ಕೂ ಅಧಿಕ ಮಂದಿ ಉತ್ಸಾಹಿ ಯುವಕರು, ಮಹಿಳೆಯರು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಚಹಾ, ತಿಂಡಿಯಿಂದ ಹಿಡಿದು ಅನ್ನಸಂತರ್ಪಣೆ, ಪಾನೀಯ ವ್ಯವಸ್ಥೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೈದಿಕ ಕಾರ್ಯಕ್ರಮಗಳಿಗೆ ಬೇಕಾದ ಸುವಸ್ತುಗಳನ್ನು ಸಾಗಿಸುವುದು, ಸ್ವಚ್ಛತೆ, ಶುಚಿತ್ವ ಇತ್ಯಾದಿ ಎಲ್ಲಾ ಕೆಲಸಗಳಿಗೂ ಸ್ವಯಂಸೇವಕರ ತಂಡವೇ ಇಲ್ಲಿತ್ತು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಗ್ರಾಮದ ಭಕ್ತಾಧಿಗಳು ಕೂಡ ಸ್ವಯಂಸೇವಕರಾಗಿ ರಾತ್ರಿ, ಹಗಲು ಸೇವೆ ಸಲ್ಲಿಸಿದ್ದರು.

ದೈವಗಳ ನೇಮ: ವರ್ಷಾವಧಿ ಉತ್ಸವದ ಅಂಗವಾಗಿ ಎ.28ರಂದು ಬೆಳಿಗ್ಗೆ ದೇವರ ದರ್ಶನ ಬಲಿ ಬಟ್ಟಲು ಕಾಣಿಕ ನಡೆದು ಸಂಜೆ ವ್ಯಾಘ್ರಚಾಮುಂಡಿ ಹಾಗೂ ಗುಳಿಗ ದೈವದ ನೇಮ ನಡೆಯಿತು. ದೇವಸ್ಥಾನದ ಬಳಿಯಿರುವ ಶ್ರೀ ಉಳ್ಳಾಲ್ತಿ ಉಳ್ಳಾಕ್ಲು ಪರಿವಾರ ದೈವಸ್ಥಾನದಲ್ಲಿ ಎ.29ರಂದು ಸಂಜೆ ದೈವಗಳ ಭಂಡಾರ ತೆಗೆದು ಎ.30ರಂದು ಬೆಳಿಗ್ಗೆ ಉಳ್ಳಾಲ್ತಿ ಮಧ್ಯಾಹ್ನದ ಬಳಿಕ ಉಳ್ಳಾಕುಲು, ಮಹಿಷಂದಾಯ, ಪಂಜುರ್ಲಿ, ಕಲ್ಕುಡ, ಕಲ್ಲುರ್ಟಿ, ಪುರುಷರಾಯ, ಗುಳಿಗ ದೈವಗಳಿಗೆ ನೇಮ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಊರ, ಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವೈಭವದ ಬ್ರಹ್ಮಕಲಶೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading