Connect with us

ಆರೋಗ್ಯ

Dr Ramachandar Guruji ಪುತ್ತೂರಿಗೆ ಪ್ರಪ್ರಥಮ ಭೇಟಿ ನೀಡಲಿದ್ದಾರೆ ಸಮ್ಮೋಹಿನಿ ವಿದ್ಯೆ ಪಾರಂಗತ ಕುಂಡಲಿನಿ ಯೋಗ ಗುರೂಜಿ – ಡಿ.16ರಂದು  ಅಂಬಿಕಾ ವಿದ್ಯಾಲಯದ ದಶಾಂಬಿಕೋತ್ಸವದಲ್ಲಿ ಸಾದರಪಡಲಿದೆ ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳು..! ವಿಶ್ವದಾದ್ಯಂತ ಅಸಂಖ್ಯಾತ ಕಾರ್ಯಗಾರ ನಡೆಸಿದ  ಡಾ. ರಾಮಚಂದ್ರ ಗುರೂಜಿ ಯಾರು ಗೊತ್ತೆ ?

Ad Widget

Ad Widget

Ad Widget

Ad Widget

ಪುತ್ತೂರು: ಸಂಮೋಹಿನಿ  ತಜ್ಞ  ಕುಂಡಲಿನಿ ಯೋಗ ಗುರು ಡಾ. ರಾಮಚಂದ್ರ ಗುರೂಜಿಯವರು ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸುತ್ತಿದ್ದು  , ಅವರು ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಸಿ.ಬಿ.ಎಸ್.ಇ. ಆವರಣದ ಶ್ರೀ ಶಂಕರ ಸಭಾ ಭವನದಲ್ಲಿ  ಡಿ.16ರಂದು ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳು ಕಾರ್ಯಕ್ರಮ  ನಡೆಸಿಕೊಡಲಿದ್ದಾರೆ  ಎಂದು ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕಜೆ ಹೇಳಿದರು.

Ad Widget

Ad Widget

Ad Widget

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “  ವಿದ್ಯಾರ್ಥಿಗಳು ಮುಂದಿನ ರಾಷ್ಟ್ರ ನಿರ್ಮಾಣದ ಅಡಿಗಲ್ಲುಗಳಾಗಿದ್ದು, ಸಮಾಜಕ್ಕೆ ಅವರನ್ನು ಕೊಡುಗೆಯಾಗಿ ನೀಡುವ ಜತೆಗೆ ಸಮಾಜಕ್ಕೂ ವಿಚಾರಗಳು ತಿಳಿಯಬೇಕೆಂಬ ನಿಟ್ಟಿನಲ್ಲಿ ದಶಾಂಬಿಕೋತ್ಸವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ  ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಸಾಹಿತ್ತಿಕ, ರಾಷ್ಟ್ರ ನೀತಿ ಕಾಯಕ, ಆರೋಗ್ಯ ಪ್ರದಾಯಕ, ಆದ್ಯಾತ್ಮಿಕ, ಜ್ಞಾನ ಭೋದಿಕ ಮತ್ತು ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ ಎಂದರು.

Ad Widget

ಕುಂಡಲಿನಿ ಯೋಗ ಗುರು ಅವರಿಂದ ಮೂರು ಹಂತದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಯಂಕಾಲ 4.30ರಿಂದ 7ರವರೆಗೆ ಪೋಷಕರು ಹಾಗೂ ಸಮಾಜದ ಸಜ್ಜನ ಬಂಧುಗಳಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸುಮಾರು 2ಸಾವಿರ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಎರಡು ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳು ನಡೆಯಲಿದೆ ಎಂದರು.

Ad Widget

Ad Widget

BESCOM Recruitment 2023 – ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಖಾಲಿ ಇರುವ 400 ಹುದ್ದೆಗಳ ನೇಮಕಾತಿ: ಈ ಕೂಡಲೇ ಅರ್ಜಿ ಸಲ್ಲಿಸಿ.

Ad Widget

Ad Widget

Ad Widget

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ 2013ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಮಕ್ಕಳಿಗೆ ಮಾತ್ರ ಶಿಕ್ಷಣವನ್ನು ನೀಡದೆ, ಜನತೆಗೂ ಲಾಭವಾಗಬೇಕೆಂಬ ಉದ್ದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಪ್ಪಳಿಗೆಯಲ್ಲಿನ ಸಿಬಿಎಸ್‌ಇ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿ ಹತ್ತನೇ ವರ್ಷವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕೆಂದು ದಶಾಂಬಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ. ಉಪಸ್ಥಿತರಿದ್ದರು.

Kitchen Hacks ಮನೆಯಲ್ಲಿ ಕಾಟ ಕೊಡುತ್ತಿರುವ ಇಲಿಗಳನ್ನು ಓಡಿಸಲು ಇಲ್ಲಿದೆ ಟಿಪ್ಸ್

ಯಾರು ಈ  ಡಾ.ರಾಮಚಂದ್ರ ಗುರೂಜಿ ?

ಡಾ ಶ್ರೀ ರಾಮಚಂದ್ರ ಗುರೂಜಿ ಅವರು ಅಂತರಾಷ್ಟ್ರೀಯವಾಗಿ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳು ಮತ್ತು ಪೂರ್ವಜನ್ಮದೆಡೆಗಿನ ಹಿನ್ನೋಟ, ಮನಃಶಾಸ್ತ್ರೀಯ-ಆಧ್ಯಾತ್ಮಿಕ ಹಿಪ್ಪೋಥೆರಪಿ, ಹೀಲಿಂಗ್ ಮತ್ತು ಹನುಮಾನ್ ಚಾಲೀಸಾದಲ್ಲಿ ಸಿದ್ಧಪುರುಷರೆನಿಸಿದ್ದಾರೆ. ಅವರು ನಾನಾ ಬಗೆಯ ಚಿಕಿತ್ಸೆ ಮತ್ತು ಮನಃವಿಶ್ರಾಂತಿ ತಂತ್ರಗಳನ್ನು ಕಂಡುಹಿಡಿದಿದ್ದಾರೆ ಮತ್ತು ಪರಿಚಯಿಸಿದ್ದಾರೆ. 10,000 ಕ್ಕೂ ಹೆಚ್ಚು ಜನರಿಗೆ ಪೂರ್ವಜನ್ಮ ಹಿನ್ನೋಟಗಳನ್ನು ನಡೆಸಿಕೊಟ್ಟಿದ್ದಾರೆ ಮತ್ತು ಆ ಬಗೆಗೆ ಪ್ರಪಂಚದಾದ್ಯಂತ 2000ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅವರ ಈ ಕಾರ್ಯಾಗಾರಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ.

ಸ್ವಯಂ ಹಿಪ್ಯಾಸಿಸ್, ಗುರಿ ನಿಗದಿ, ಸಮ್ಮೋಹಿನಿ=ಸಂಜೀವಿನಿ, ಕರ್ಮ ಚಿಕಿತ್ಸೆ, ಧ್ಯಾನಂ ಸರ್ವತ್ರ ಸಾಧನಂ, ಜೀನ್ ಥೆರಪಿ, ಸೋಲ್ ಹೀಲಿಂಗ್, ಪೇರೆಂಟಿಂಗ್ ಕಲೆ, ಆರ್ಥಿಕ ಸಮೃದ್ಧಿ, ಹನುಮಾನ್ ಚಾಲೀಸಾ ಮತ್ತು ಆಕರ್ಷಣಾ ನಿಯಮ ಮುಂತಾದ ವಿವಿಧ ವಿಷಯಗಳ ಕುರಿತು ಅಸಂಖ್ಯಾತ ಏಕದಿನ ಕಾರ್ಯಾಗಾರಗಳನ್ನು ನಡೆಸಿರುವ ಕೀರ್ತಿ ಗುರೂಜಿಯವರಿಗೆ ಸಲ್ಲುತ್ತದೆ. ಇಷ್ಟಲ್ಲದೆ, ಗುರೂಜಿಯವರು ಯೋಗಾಸಫಿ (ಯೋಗ ಸಂಸ್ಥೆ) ಅಂ, ಗೌರವ ನಿರ್ದೇಶಕರಾಗಿದ್ದಾರೆ. ಭಾರತದಲ್ಲಿ ಮತ್ತು ಭಾರತದ ಹೊರಗೆ ಅಸಂಖ್ಯ ಉಪನ್ಯಾಸಗಳನ್ನಿತ್ತ ಅನುಭವಿ. ವಾಷಿಂಗ್ಟನ್ ಡಿಸಿ, ಚಿಕಾಗೋ, ಲಾಸ್ ಏಂಜಲೀಸ್, ಪೆನ್ಸಿಲ್ವೇನಿಯಾ, ಟೆಕ್ಸಾಸ್, ದುಬೈ, ಅಬುಧಾಬಿ, ಸಿಂಗಾಪುರ್, ಮಲೇಷ್ಯಾ, ಶ್ರೀಲಂಕಾ ಮುಂತಾದ ಅನೇಕ ಸ್ಥಳಗಳಲ್ಲಿ ಬೃಹತ್ ಸಭೆಗಳ ಮುಂದೆ ಭಾರತೀಯತೆಯನ್ನು ಪಸರಿಸಿದ ಹೆಮ್ಮೆ ಗುರೂಜಿಯವರದ್ದು. ತನ್ನ ಆಧ್ಯಾತ್ಮಿಕ ಅನ್ವೇಷಣೆಗಾಗಿ ಅಲ್ಪ ಸಮಯಗಳ ಕಾಲ ಹಿಮಾಲಯದಲ್ಲಿ ವಾಸ್ತವ್ಯವಿದ್ದ ಗುರೂಜಿಯವರು ತಮ್ಮ ಬದುಕನ್ನೇ ಯೋಗ – ಧ್ಯಾನ, ಅಂತರ್ಮನಸ್ಸಿನ ಶಕ್ತಿಗಳ ಅನಾವರಣಕ್ಕಾಗಿ ಮುಡಿಪಾಗಿಟ್ಟವರು. ಇದೀಗ ಪುತ್ತೂರಿನಲ್ಲಿ ಮೊದಲ ಬಾರಿ ಅಂಬಿಕಾ ವೇದಿಕೆಯಲ್ಲಿ ಅವರ ಪ್ರಾತ್ಯಕ್ಷತೆ ನಡೆಯುತ್ತಿದೆ.

Click to comment

Leave a Reply

ಆರೋಗ್ಯ

Home remedies-ಬೇಸಿಗೆಯಲ್ಲಿ ಕಾಡುವ ಚರ್ಮದ ಸಮಸ್ಯೆಗಳಿಗೆ ಕೆಲವು ಮನೆಮದ್ದುಗಳು

Ad Widget

Ad Widget

Ad Widget

Ad Widget

ಬೇಸಗೆಯಲ್ಲಿ ಚರ್ಮವು ಅತೀ ಹೆಚ್ಚು ಶೋಷಣೆಗೆ ಒಳಗಾಗುವುದು ಎಂದರೆ ತಪ್ಪಾಗದು. ಮಿತಿಮೀರಿದ ಉಷ್ಣತೆಯಿಂದಾಗಿ ಬೇಸಿಗೆಯಲ್ಲಿ ದೇಹವು ಬೇಗನೆ ಬಸವಳಿದು ಹೋಗುವುದು ಮಾತ್ರವಲ್ಲದೆ, ಅತಿಯಾದ ಬೆವರು, ಕಜ್ಜಿ, ಬೆವರುಸಾಲೆ ಮೂಡುವುದು ಸಹಜ.

Ad Widget

Ad Widget

Ad Widget

ದೇಹದ ಕೆಲವೊಂದು ಸೂಕ್ಷ್ಮ ಭಾಗದಲ್ಲಿ ಬೆವರು ನಿಲ್ಲುವ ಕಾರಣದಿಂದಾಗಿ ಅಲ್ಲಿ ತುರಿಕೆ ಬರುವುದು ಹೆಚ್ಚು. ಆ ಜಾಗದಲ್ಲಿ ಪದೇ ಪದೇ ತುರಿಕೆ ಬಂದು ಮತ್ತಷ್ಟು ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಇಂತಹ ತುರಿಕೆ ಸಮಸ್ಯೆ ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಅದು ಬೇಸಗೆಯಲ್ಲಿ ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

Ad Widget

ತುರಿಕೆ ಬರಲು ಕಾರಣವೇನು?
ಬಿಸಿಲಿನಲ್ಲಿ ಚರ್ಮವು ಸುಡುವುದರಿಂದ ದೇಹದಲ್ಲಿ ತುರಿಕೆ ಕಂಡುಬರುವುದು. ದೀರ್ಘಕಾಲಕ್ಕೆ ಯುವಿ ಕಿರಣಗಳಿಗೆ ಚರ್ಮವು ಒಗ್ಗಿಕೊಂಡ ಸಂದರ್ಭದಲ್ಲಿ ಚರ್ಮಕ್ಕೆ ಹಾನಿ ಆಗಿ, ಅದರಿಂದ ತುರಿಕೆ ಮತ್ತು ಉರಿಯೂತ ಕಾಣಿಸುವುದು.

Ad Widget

Ad Widget

ಬೆವರಿನ ನಾಳಗಳು ಬ್ಲಾಕ್ ಆದ ಸಂದರ್ಭದಲ್ಲಿ ಅಲ್ಲಿ ಬೆವರು ಹೊರಬರಲಾಗದೆ, ಚರ್ಮವು ಕೆಂಪಾಗುವುದು, ಬೊಕ್ಕೆ ಮತ್ತು ತುರಿಕೆ ಕಂಡುಬರುವುದು. ಬೇಸಗೆಯಲ್ಲಿ ಹೊರಗಡೆ ತಿರುಗಾಡಲು ಹೋದರೆ ಆಗ ಸೊಳ್ಳೆ, ಕೀಟಗಳ ಕಡಿತದಿಂದಲೂ ಚರ್ಮದಲ್ಲಿ ತುರಿಕೆ ಕಂಡುಬರಬಹುದು. ಕೆಲವು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಇದು ತುರಿಕೆ ಕಡಿಮೆ ಮಾಡಲು ಸಹಕಾರಿ ಆಗಿರುವುದು.

Ad Widget

Ad Widget

Ad Widget

ತಂಪು ಶಾಖ
ಒದ್ದೆ ಬಟ್ಟೆ ಅಥವಾ ಐಸ್ ಪ್ಯಾಕ್ ನ್ನು ತುರಿಕೆ ಉಂಟು ಮಾಡುವ ಜಾಗಕ್ಕೆ ಇಟ್ಟುಕೊಂಡರೆ ಆಗ ಅದರಿಂದ ಉರಿಯೂತ, ಕಿರಿಕಿರಿ ಕಡಿಮೆ ಆಗುವುದು. ತಂಪು ಶಾಖವು ಚರ್ಮವನ್ನು ಮರಗಟ್ಟುವಂತೆ ಮಾಡಿ ತುರಿಕೆ ನಿವಾರಿಸುವುದು ಮತ್ತು ತುರಿಕೆಯಿಂದ ತಕ್ಷಣವೇ ಪರಿಹಾರ ನೀಡುವುದು.

ಅಲೋವೆರಾ ಲೋಳೆ
ತಾಜಾ ಅಲೋವೆರಾ ಲೋಳೆಯನ್ನು ನೇರವಾಗಿ ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಂಡರೆ ಆಗ ಇದರಿಂದ ಚರ್ಮಕ್ಕೆ ಶಮನ ಸಿಗುವುದು.

ಅಲೋವೆರಾವು ತಂಪುಕಾರಿ ಮತ್ತು ಉರಿಯೂತ ಶಮನಕಾರಿ ಗುಣವು ಇದೆ. ಇದು ಬಿಸಿಲಿನ ಸುಟ್ಟ ಗಾಯ, ಕೀಟದ ಕಡಿತ ಮತ್ತು ಇತರ ತುರಿಕೆಯನ್ನು ಕಡಿಮೆ ಮಾಡಿ, ಹಠಾತ್ ಶಮನ ನೀಡುವುದು ಮತ್ತು ಚರ್ಮವನ್ನು ಸರಿಪಡಿಸುವುದು.

ಓಟ್ ಮೀಲ್ ಸ್ನಾನ!
ಕೊಲೊಯ್ಡಲ್ ಓಟ್ ಮೀಲ್ ನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿಕೊಂಡು ಅದರಲ್ಲಿ 15-20 ನಿಮಿಷ ಕಾಲ ಹಾಗೆ ಕುಳಿತುಕೊಂಡರೆ ಆಗ ತುರಿಕೆ ಮತ್ತು ಕಿರಿಕಿರಿ ಕಡಿಮೆ ಆಗುವುದು.

ಓಟ್ ಮೀಲ್ ನಲ್ಲಿ ಉರಿಯೂತ ಶಮನಕಾರಿ ಗುಣವಿದ್ದು, ಇದು ಚರ್ಮಕ್ಕೆ ಶಮನ ನೀಡುವುದು ಹಾಗೂ ನೈಸರ್ಗಿಕ ಪದರವನ್ನು ನಿರ್ಮಿಸಿ, ಬಿಸಿಲು ಮತ್ತು ಕೀಟಗಳಿಂದ ಆಗಿರುವ ಹಾನಿಯನ್ನು ತಡೆಯುವುದು.

ಆ್ಯಪಲ್ ಸೀಡರ್ ವಿನೇಗರ್
ನೀರಿಗೆ ಸಮಪ್ರಮಾಣದಲ್ಲಿ ಆ್ಯಪಲ್ ಸೀಡರ್ ವಿನೇಗರ್ ಹಾಕಬೇಕು ಮತ್ತು ಇದನ್ನು ಚರ್ಮದಲ್ಲಿ ತುರಿಕೆ ಇರುವ ಜಾಗಕ್ಕೆ ಹಚ್ಚಬೇಕು.

ಆ್ಯಪಲ್ ಸೀಡರ್ ವಿನೇಗರ್ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ತುರಿಕೆ ತಗ್ಗಿಸುವುದು ಮತ್ತು ಉರಿಯೂತ ಕಡಿಮೆ ಮಾಡುವುದು. ಬಿಸಿಲಿನಿಂದ ಸುಟ್ಟ ಗಾಯ, ಕೀಟದ ಕಡಿತ ಮತ್ತು ಶಾಖದ ದದ್ದುವನ್ನು ಇದು ನಿವಾರಣೆ ಮಾಡುವುದು.

ಬೇಕಿಂಗ್ ಸೋಡಾ
ನೀರಿನಲ್ಲಿ ಬೇಕಿಂಗ್ ಸೋಡಾವನ್ನು ಹಾಕಿಕೊಂಡು ಪೇಸ್ಟ್ ಮಾಡಬೇಕು ಮತ್ತು ಇದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಂಡರೆ, ಆಗ ಅದರಿಂದ ಶಮನ ಸಿಗುವುದು. ಬೇಕಿಂಗ್ ಸೋಡಾದಲ್ಲಿ ಉರಿಯೂತ ಶಮನಕಾರಿ ಗುಣಗಳು ಇದ್ದು, ತುರಿಕೆ ಮತ್ತು ಉರಿಯೂತ ಕಡಿಮೆ ಮಾಡಲು ಇದು ಸಹಕಾರಿ. ಬೇಸಗೆಯಲ್ಲಿ ಕಂಡುಬರುವ ಬಿಸಿಲಿನ ಸುಟ್ಟ ಗಾಯ, ಶಾಖದ ದದ್ದು ಮತ್ತು ಅಲರ್ಜಿಯನ್ನು ಕಡಿಮೆ ಮಾಡುವುದು.

ತೆಂಗಿನ ಎಣ್ಣೆ ಮಸಾಜ್
ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಆಗ ಇದು ಚರ್ಮವನ್ನು ಮೊಶ್ಚಿರೈಸ್ ಮಾಡುವುದು ಮತ್ತು ಕಿರಿಕಿರಿಯಿಂದ ಶಮನ ನೀಡುವುದು. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲವಿದ್ದು, ಇದು ಚರ್ಮವನ್ನು ಹೈಡ್ರೇಟ್ ಮಾಡುವುದು ಮತ್ತು ಉರಿಯೂತ ತಗ್ಗಿಸುವುದು.

ಇದರಿಂದ ಬೇಸಗೆಯಲ್ಲಿ ಕಂಡುಬರುವ ತುರಿಕೆ, ಚರ್ಮ ಒಣಗುವುದು, ಬಿಸಿಲಿನ ಸುಟ್ಟ ಗಾಯ ಮತ್ತು ಕೀಟದ ಕಡಿತವನ್ನು ಇದು ದೂರ ಮಾಡುವುದು. ಇದರಲ್ಲಿ ಸೂಕ್ಷಕ್ರಿಮಿ ವಿರೋಧಿ ಗುಣಗಳು ಇವೆ ಮತ್ತು ಇದು ಸೋಂಕು ತಡೆಯುವುದು ಮತ್ತು ಚರ್ಮಕ್ಕೆ ಶಮನ ನೀಡುವುದು.

ಪುದೀನಾ ಎಣ್ಣೆ
ಪುದೀನಾ ಎಣ್ಣೆಯನ್ನು ತೆಂಗಿನ ಎಣ್ಣೆಯ ಜತೆಗೆ ಸೇರಿಸಿಕೊಂಡು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಂಡರೆ ಆಗ ಇದು ಶಮನ ನೀಡುವುದು. ಪುದೀನಾ ಎಣ್ಣೆಯಲ್ಲಿ ಇರುವ ಗುಣವು ಚರ್ಮವನ್ನು ಮರಗಟ್ಟುವಂತೆ ಮಾಡುವುದು ಮತ್ತು ತುರಿಕೆ ನಿವಾರಿಸುವುದು.

ಬಿಸಿಲಿನ ಸುಟ್ಟ ಗಾಯ, ಶಾಖದ ದದ್ದು, ಕೀಟದ ಕಡಿತವನ್ನು ಇದು ನಿವಾರಣೆ ಮಾಡುವುದು. ಇದರಲ್ಲಿ ಇರುವ ಸೂಕ್ಷ್ಮ ಕ್ರಿಮಿ ವಿರೋಧಿ ಗುಣಗಳು ಸೋಂಕನ್ನು ಕಡಿಮೆ ಮಾಡುವುದು ಮತ್ತು ಚರ್ಮಕ್ಕೆ ಶಮನ ನೀಡುವುದು.

Continue Reading

ಆರೋಗ್ಯ

Lemon juice-ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗೋ ಆರೋಗ್ಯ ಲಾಭಗಳೇನು?

Ad Widget

Ad Widget

Ad Widget

Ad Widget

ಬೇಸಿಗೆಯಲ್ಲಿ ಪ್ರತಿದಿನ ಒಂದು ಗ್ಲಾಸ್‌ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇವೆ. ಇದು ಹಲವಾರು ಪ್ರಮುಖ ಪೋಷಕಾಂಶಗಳನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ.

Ad Widget

Ad Widget

Ad Widget

ನಿಂಬೆಹಣ್ಣುಗಳು ಆರೋಗ್ಯಕರ ಜೀರ್ಣಾಂಗವನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾಗಿವೆ ಏಕೆಂದರೆ ಅವುಗಳ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ.

Ad Widget

ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ.
ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಇದರಲ್ಲಿರುವ ಆಮ್ಲೀಯತೆಯು ಹೊಟ್ಟೆಯ ಆಮ್ಲಗಳನ್ನು ಪೂರೈಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Ad Widget

Ad Widget

ಬೇಸಿಗೆಯಲ್ಲಿ ರಿಫ್ರೆಶ್ ಮತ್ತು ಆರೋಗ್ಯಕರವಾಗಿರಲು ನಿಂಬೆ ಹಣ್ಣಿನ ಜ್ಯೂಸ್ ಕುಡಿಯಬೇಕು. ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಎಲೆಕ್ಟೋಲೈಟ್‌ಗಳಲ್ಲಿ ಸಮೃದ್ಧವಾಗಿದ್ದು, ಬಿಸಿ ವಾತಾವರಣದಲ್ಲಿ ಬೆವರಿನ ಮೂಲಕ ಕಳೆದುಕೊಳ್ಳುವ ಪ್ರಮುಖ ಪೋಷಕಾಂಶಗಳನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ.

Ad Widget

Ad Widget

Ad Widget

ನಿಂಬೆಹಣ್ಣುಗಳು ಆರೋಗ್ಯಕರ ಜೀರ್ಣಾಂಗವನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾಗಿವೆ ಏಕೆಂದರೆ ಅವುಗಳ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ. ಇದರ ಅಂತರ್ಗತ ಆಮ್ಲೀಯತೆಯು ದೇಹದ pH ಸಮತೋಲನಕ್ಕೆ ಕೊಡುಗೆ ನೀಡುತ್ತಿದ್ದು, ಚರ್ಮದ ಆರೋಗ್ಯ ಮತ್ತು ಒಟ್ಟಾರೆ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ.

ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರ ಎಲ್ಲಾ ನಂಬಲಾಗದ ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ಮೂತ್ರಪಿಂಡದ ಕಲ್ಲುಗಳು :
ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಹೇರಳವಾಗಿರುವ ಸಿಟ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಕ್ಯಾಲ್ಸಿಯಂ ಅನ್ನು ಬಂಧಿಸಿ ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ :
ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜಲಸಂಚಯನವನ್ನು ಉತ್ತೇಜಿಸುತ್ತದೆ, ಇದು ಚಯಾಪಚಯ ಮತ್ತು ಜೀವಕೋಶದ ಪರಿಮಾಣವನ್ನು ಹೆಚ್ಚಿಸಿ ಇವೆರಡೂ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

  1. ವರ್ಕೌಟ್ ಬೂಸ್ಟ್ :
    ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ದೈಹಿಕ ಪರಿಶ್ರಮದ ಸಮಯದಲ್ಲಿ ಹೆಚ್ಚಿದ ಬೆವರುವಿಕೆಯಿಂದ ಸೋಡಿಯಂ ನಷ್ಟವನ್ನು ಕಡಿಮೆ ಮಾಡುತ್ತದೆ. ಕ್ರೀಡಾಪಟುಗಳು ಮತ್ತು ವ್ಯಾಯಾಮದ ಕಾರ್ಯಕ್ರಮತೆಗೆ ಪ್ರಯೋಜನವನ್ನು ನೀಡುತ್ತದೆ. ನಿಂಬೆಯ ಆಸ್ತೀಯತೆಯು pH ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿ, ಚರ್ಮದ ಆರೋಗ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ.
  2. ಮಾನಸಿಕ ಯೋಗಕ್ಷೇಮ :
    ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಇದರಲ್ಲಿನ ಹೆಚ್ಚಿನ ಪ್ಲೇವನಾಯ್ಡ್ ಅಂಶದಿಂದಾಗಿ, ಸಿಟ್ರಸ್ ರಸವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ, ಸಿಟ್ರಿಕ್ ಆಮ್ಲವು ಕಡಿಮೆ ಮಾಡುವ ಮೂಲಕ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವ ಮೂಲಕ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳನ್ನು ತಡೆಯುತ್ತದೆ.
  3. ಜೀರ್ಣಕ್ರಿಯೆಯನ್ನು ಸುಧಾರಿಸಿ :
    ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಇದರಲ್ಲಿರುವ ಆಮ್ಲೀಯತೆಯು ಹೊಟ್ಟೆಯ ಆಮ್ಲಗಳನ್ನು ಪೂರೈಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಂಬೆ ಸಿಪ್ಪೆಯಲ್ಲಿ ಕಂಡುಬರುವ ಫೈಬರ್ ತಿರುಳಿನ ನಿಂಬೆ ನೀರಿನೊಂದಿಗೆ ಸೇವಿಸಿದಾಗ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  4. ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ :
    ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಇದು ಸಿಟ್ರಸ್ ಆಧಾರಿತವಾಗಿರುವುದರಿಂದ ವಯಸ್ಸಾದ ವಿರೋಧಿ, ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಸುಕ್ಕುಗಳನ್ನು ನಿಗ್ರಹಿಸಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕಾಲಜನ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮದ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತದೆ.
Continue Reading

ಆರೋಗ್ಯ

Bourn Vita | ಬೋರ್ನ್ ವಿಟಾವನ್ನು ಎಲ್ಲಾ ಹೆಲ್ತ್ ಡ್ರಿಂಕ್ಸ್ ವರ್ಗದಿಂದ ತೆಗೆದುಹಾಕುವಂತೆ ಆದೇಶಿಸಿದ ಕೇಂದ್ರ ಸರ್ಕಾರ : ಅಧಿಕ ಪ್ರಮಾಣದ ಸಕ್ಕರೆ ಅಂಶವನ್ನು ಬಯಲಿಗೆಳೆದ ಯೂಟ್ಯೂಬರ್

Ad Widget

Ad Widget

Ad Widget

Ad Widget

ನವದೆಹಲಿ ಎ.14: ಮಕ್ಕಳಿಗೆ ಕುಡಿಸುವ ಬೋರ್ನ್ ವಿಟಾ (Bourn Vita) ಇನ್ನು ಮುಂದೆ ಹೆಲ್ತ್ ಡ್ರಿಂಕ್ಸ್ ವರ್ಗದಿಂದ ತೆಗೆದು ಹಾಕುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ. ಪೋರ್ಟಲ್ ಮತ್ತು ಪ್ಲಾಟ್‍ಫಾರ್ಮ್‍ಗಳಲ್ಲಿ ಬೋರ್ನ್‍ವಿಟಾ ಸೇರಿದಂತೆ ಎಲ್ಲಾ ಪಾನೀಯಗಳು ಈ ವರ್ಗದಿಂದ ಕೈಬಿಡುವಂತೆ ಆದೇಶ ನೀಡಲಾಗಿದೆ.

Ad Widget

Ad Widget

Ad Widget

ಒಬ್ಬ ಯುಟ್ಯೂಬರ್ ಬೋರ್ನ್ ವೀಟಾದಲ್ಲಿ ಹೆಚ್ಚಿನ ಪ್ರಮಾಣ ಸಕ್ಕರೆ ಅಂಶ ಇರುವ ಬಗ್ಗೆ ವಿಡಿಯೋ ಮಾಡಿದ್ದ, ಅಲ್ಲದೆ ಪ್ರಯೋಗ ಮೂಲಕ ಆತ ಅದನ್ನು ತೋರಿಸಿದ್ದ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್‌ನ ತನಿಖೆಯಯಲ್ಲಿ ಬೋರ್ನ್‍ವಿಟಾ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Ad Widget

ಕಂಪನಿಗಳು ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿವೆ. ಅಲ್ಲದೇ ಆರೋಗ್ಯಕರ ಪಾನೀಯಗಳು ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‍ಸಿಪಿಸಿಆರ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸೂಚಿಸಿತ್ತು.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading