Connect with us

ಕ್ರೀಡೆ

World Cup 2023 Prediction: ಸಕ್ಕತ್ ವೈರಲ್ ಆಗುತ್ತಿದೆ ಈ ಬಾರಿಯ ವಿಶ್ವಕಪ್ ಫಲಿತಾಂಶ ಕುರಿತ ಆಟಗಾರೊಬ್ಬರ ಶಾಕಿಂಗ್ ಭವಿಷ್ಯವಾಣಿಯ ವಿಡಿಯೋ

Ad Widget

Ad Widget

Ad Widget

Ad Widget

ಇಅಂದು ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಟೀಂ ಇಂಡಿಯಾ (Team India) ವಿರುದ್ಧ ಆಸ್ಟ್ರೇಲಿಯಾ ಫೈನಲ್ ಪಂದ್ಯವನ್ನು ಆಡಲಿದೆ. ಇದರ ನಡುವೆ ಆಸೀಸ್‌ನ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ಅವರ ಭವಿಷ್ಯವಾಣಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Ad Widget

Ad Widget

Ad Widget

ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಫೈನಲ್ಗೆ ಪ್ರವೇಶ ಪಡೆಯುತ್ತಿದ್ದಂತೆ ಮಿಚೆಲ್‌ ಮಾರ್ಷ್‌ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

vAd Widget

Ad Widget

2023ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಮಿಚೆಲ್ ಮಾರ್ಷ್ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು. ಮುಂಬರುವ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸುತ್ತದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ 2 ವಿಕೆಟ್ ನಷ್ಟಕ್ಕೆ 450 ರನ್ ಗಳಿಸಲಿದೆ. ಭಾರತ 65 ರನ್ಗಳಿಗೆ ಆಲ್‌ಔಟ್ ಆಗಲಿದೆ’ ಎಂದು ಮಿಚೆಲ್‌ ಮಾರ್ಷ್‌ ಅವರು ಭವಿಷ್ಯ ನುಡಿದಿದ್ದರು

Ad Widget

Ad Widget

ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 450 ರನ್ ಬಾರಿಸುತ್ತೆ, ಇದಕ್ಕೆ ಪ್ರತಿಯಾಗಿ ಭಾರತ 65ಕ್ಕೆ ಆಲೌಟ್ ಆಗುತ್ತೆ ಎಂಬ ಮಿಚೆಲ್ ಮಾರ್ಷ್ ಅವರ ಭವಿಷ್ಯವಾಣಿ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಮಾರ್ಷ ಭವಿಷ್ಯ ಭ್ರಮೆಯಷ್ಟೇ ಎಂದು ತಿರುಗೇಟು ನೀಡಿದ್ದಾರೆ.

Ad Widget

Ad Widget

Ad Widget
Click to comment

Leave a Reply

ಅಂತರ ರಾಜ್ಯ

Rohit Sharma-ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಮ್ ನಲ್ಲಿ ರೋಹಿತ್ ಶರ್ಮಾ ಕಣ್ಣೀರು – ವಿಡಿಯೋ ವೈರಲ್

Ad Widget

Ad Widget

Ad Widget

Ad Widget

ಸತತ ಸೋಲಿನ ಬಳಿಕ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಶತಕದ ಬಳಿಕ ಐದು ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದೆ. ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯಾಕೂಟದ 55ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಗಳಿಂದ ಮುಂಬೈ ಗೆಲುವು ಸಾಧಿಸಿತ್ತು. 174 ರನ್ ನ ಟಾರ್ಗೆಟ್ ಬೆನ್ನು ಹತ್ತಿದ್ದ ಮುಂಬೈ 31 ರನ್ ಗೆ 3 ವಿಕೆಟ್ ಕಳಕೊಂಡರು. 18 ನೇ ಒವರ್‌ನಲ್ಲಿ ಗೆಲುವಿನ ನಗೆ ಬೀರಿತು.

Ad Widget

Ad Widget

Ad Widget

ಆದಾಗ್ಯೂ, ಮುಂಬೈ ಸೂಪರ್ ಸ್ಟಾರ್ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇನ್ನಿಂಗ್ಸ್ ಆರಂಭಿಸಿದ ಅವರು, ಪ್ಯಾಟ್ ಕಮ್ಮಿನ್ಸ್ʼ ಎಸೆತಕ್ಕೆ ಬಲಿಯಾಗುವುದರ ಮೊದಲು ಕೇವಲ ನಾಲ್ಕು ರನ್ ಅಷ್ಟೆ ಸಂಪಾದಿಸಿದರು. ಹೀಗಾಗಿ ಮುಂಬೈ ಜಯ ಕಂಡರೂ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸಂತಸಗೊಂಡಂತೆ ಕಾಣಿಸುತ್ತಿರಲಿಲ್ಲ. ಅವರು ಡ್ರೆಸ್ಸಿಂಗ್ ರೂಮ್ನಲ್ಲಿ ಅಳುತ್ತಿರುವ ಹಾಗೇ ಕಾಣುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೇ ಅವರು ನಿಜಕ್ಕೂ ಅಳುತ್ತಿದ್ದರೇ ಎಂಬುವುದು ಖಚಿತಗೊಂಡಿಲ್ಲ .

vAd Widget

Ad Widget

ಒಂದೊಮ್ಮೆ ಆಳುತ್ತಿದ್ದರೂ ರೋಹಿತ್ ನಿಜವಾಗಿಯೂ ಅಳುತ್ತಿದ್ದಾರೆ ಅಥವಾ ಇನ್ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರೇ ಎಂಬುದು ಕಿರು ಕ್ಲಿಪ್ ನಿಂದ ಸ್ಪಷ್ಟವಾಗಿಲ್ಲ. ಆದರೇ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಈ ವಿಡಿಯೋವನ್ನು ಗಮನಿಸಿ ಆ ಕ್ಲಿಪನ್ನು ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ ಈ ಐಪಿಎಲ್ ನಲ್ಲಿ ತೀವ್ರ ಕುಸಿತ ಅನುಭವಿಸಿರುವದರಿಂದ ಹತಾಶರಾಗಿ ರೋಹಿತ್ ಅಳುತ್ತಿರಬಹುದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Ad Widget

Ad Widget

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ ಶತಕ ಬಾರಿಸಿದ ನಂತರ, ರೋಹಿತ್ ಅವರು ತಮ್ಮ ಮುಂದಿನ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 69 ರನ್ ಅಷ್ಟೇ ಗಳಿಸಿದ್ದಾರೆ. ಆ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ, ಒಂದಂಕಿ ಸ್ಕೋರ್ ಅಷ್ಟೇ ಗಳಿಸಿ ಔಟಾಗಿದ್ದಾರೆ. ಐಪಿಎಲ್ 2024 ರ ಬಳಿಕ ಭಾರತೀಯ ಆಟಗಾರರು ಟಿ20 ವಿಶ್ವಕಪ್ಗಾಗಿ ಯುಎಸ್ಎಗೆ ತೆರಳುವ ಭಾರತ ತಂಡದ ಕಪ್ತಾನನಾಗಿ ರೋಹಿತ್ ನೇಮಕಗೊಂಡಿದ್ದಾರೆ. ಅವರು ಫಾರ್ಮ್ ಗೆ ಮರಳಲು ಮತ್ತು ಟಿ -20 ವಿಶ್ವ ಕಪ್ ಗಿಂತ ಮೊದಲು ಅಗತ್ಯ ಆತ್ಮವಿಶ್ವಾಸವನ್ನು ಪಡೆಯಲು ಕೇವಲ ಎರಡು ಪಂದ್ಯಗಳನ್ನು ಹೊಂದಿದ್ದಾರೆ.

Ad Widget

Ad Widget

Ad Widget

USA ಗೆ ಹಾರುವ 15 ಜನರ ತಂಡದ ನಾಯಕನಾಗಿ ರೋಹಿತ್ ನೇಮಕಗೊಂಡಿದ್ದಾರೆ. ಭಾರತವನ್ನು ಪಾಕಿಸ್ತಾನ, ಐರ್ಲೆಂಡ್, ಯುಎಸ್ಎ ಮತ್ತು ಕೆನಡಾ ಒಂದು ಗುಂಪಿನಲ್ಲಿದೆ. ಜೂನ್ 5 ರಂದು ಸ್ಪರ್ಧೆಯ ಮೊದಲ ಪಂದ್ಯವನ್ನು ಆಡಲಿದೆ.

Continue Reading

ಅಂತರ ರಾಜ್ಯ

Rohit Sharma-ವಿರಾಟ್ ಸ್ಟ್ರೈಕ್ ರೇಟ್ ಬಗೆಗಿನ ಪ್ರಶ್ನೆಗೆ ರೋಹಿತ್ ಶರ್ಮಾ ಅಚ್ಚರಿ ರಿಯಾಕ್ಷನ್

Ad Widget

Ad Widget

Ad Widget

Ad Widget

ನವದೆಹಲಿ: ಕ್ರಿಕೆಟ್​ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್​ನ ಆಟದ ಶೈಲಿ ವಿಭಿನ್ನವಾಗಿರುತ್ತದೆ. ಎಲ್ಲರೂ ಒಂದೇ ರೀತಿ ಆಡುವುದಿಲ್ಲ. ಕೆಲವರು ಮೊದಲ ಎಸೆತದಿಂದಲೇ ಸ್ಪೋಟಕ ಆಟವಾಡಲು ಆರಂಭಿಸುತ್ತಾರೆ. ಇನ್ನೂ ಕೆಲವರು ನಿಧಾನವಾಗಿ ಆಡುತ್ತಾರೆ. ಕೆಲವರು ಆರಂಭದಲ್ಲಿ ನಿಧಾನವಾಗಿ ಆಡಿದರೂ ಗೇರ್ ಬದಲಾಯಿಸಿ ಅಗತ್ಯಕ್ಕೆ ತಕ್ಕಂತೆ ವೇಗ ಹೆಚ್ಚಿಸುತ್ತಾರೆ. ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಕೂಡ ಹೀಗೆ ಆಡುತ್ತಾರೆ.

Ad Widget

Ad Widget

Ad Widget

ಅಂದ ಹಾಗೆ ರಕ್ಷಣಾತ್ಮಕ ಆಟವಾಡುವುದು ತಂಡ ದೊಡ್ಡ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಿಗೆ ಮಾತ್ರ ಇದು ಸೂಕ್ತವಾಗಿದೆ. ಆದರೆ, ಟಿ20 ಪಂದ್ಯಗಳು ಕೊಂಚ ವಿಭಿನ್ನವಾಗಿದೆ. ಇಲ್ಲಿ ಬ್ಯಾಟ್ಸ್​ಮನ್​ ಸ್ಟ್ರೈಕ್​ ರೇಟ್​ ತುಂಬಾ ಪ್ರಮುಖವಾಗಿರುತ್ತದೆ. ಸ್ಟ್ರೈಕ್​ ರೇಟ್​ ಅಂದಕೊಡಲೇ ಇತ್ತೀಚೆಗೆ ವಿರಾಟ್​ ಕೊಹ್ಲಿ ನೆನಪಾಗುತ್ತಾರೆ. ಏಕೆಂದರೆ, ಐಪಿಎಲ್​-2024ರಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ನೀಡಿರುವ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್​ ಆಗಿದೆ.

vAd Widget

Ad Widget

ಪ್ರಸಕ್ತ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 10 ಪಂದ್ಯಗಳಲ್ಲಿ 509 ರನ್ ಗಳಿಸುವ ಮೂಲಕ ಟಾಪ್​ ಸ್ಕೋರರ್​ ಆಗಿದ್ದಾರೆ. ಆದರೆ, ಕೊಹ್ಲಿ ಸ್ಟ್ರೈಕ್ ರೇಟ್ ಮಾತ್ರ 146. ಹೀಗಾಗಿ ಎಲ್ಲರೂ ಕೊಹ್ಲಿಯನ್ನು ಟೀಕೆ ಮಾಡುತ್ತಿದ್ದಾರೆ. ಇಷ್ಟು ನಿಧಾನವಾಗಿ ಆಡಿದರೆ ವಿಶ್ವಕಪ್ ಗೆಲ್ಲಲು ಕಷ್ಟವಾಗಬಹುದು, ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವಂತೆ ಕೊಹ್ಲಿಗೆ ಸೂಚಿಸುತ್ತಿದ್ದಾರೆ. ಇದು ಕೊಹ್ಲಿಗೂ ಸಹ ಅರಿವಾಗಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ವೇಗವಾಗಿ ಆಟವಾಡಲು ಆರಂಭಿಸಿದ್ದಾರೆ. ಇದೀಗ ಕೊಹ್ಲಿ ಸ್ಟ್ರೈಕ್​ ರೇಟ್​ ಈ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಹಿಟ್‌ಮ್ಯಾನ್ ರೋಹಿತ್​ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

Ad Widget

Ad Widget

ಎಲ್ಲ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರಿಸಿದ ರೋಹಿತ್, ಪತ್ರಕರ್ತರು ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಕೇಳಿದಾಗ ಜೋರಾಗಿ ನಕ್ಕರು. ಹಿಟ್‌ಮ್ಯಾನ್‌ನ ಪಕ್ಕದಲ್ಲಿದ್ದ ಅಗರ್ಕರ್‌ಗೆ ನಗು ತಡೆಯಲಾಗಲಿಲ್ಲ. ವಿರಾಟ್ ಸ್ಟ್ರೈಕ್ ರೇಟ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ನಗುವನ್ನು ನಿಯಂತ್ರಿಸಿಕೊಂಡು ಅಗರ್ಕರ್ ಹೇಳಿದರು. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಕೊಹ್ಲಿ ಉತ್ತಮವಾಗಿ ಆಡುತ್ತಾರೆ ಎಂದು ಸ್ಪಷ್ಟಪಡಿಸಿದರು.

Ad Widget

Ad Widget

Ad Widget
Continue Reading

ಕ್ರೀಡೆ

T20 World Cup: ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ: ಕೆ ಎಲ್ ರಾಹುಲ್ ಗೆ ಕೋಖ್

Ad Widget

Ad Widget

Ad Widget

Ad Widget

ಬೆಂಗಳೂರು: ಮುಂಬರುವ ಬಹುನಿರೀಕ್ಷಿತ ಐಸಿಸಿ ಟ್ವೆಂಟಿ-20 ವಿಶ್ವಕಪ್ಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಪ್ರಕಟಿಸಿದೆ. ಐಸಿಸಿ ಪುರುಷರ ಟಿ 20 ವಿಶ್ವಕಪ್ ನ ಒಂಬತ್ತನೇ ಆವೃತ್ತಿಯು 2024 ರ ಜೂನ್ 1 ರಿಂದ 29 ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ.

Ad Widget

Ad Widget

Ad Widget

ಜೂನ್ 2 ರ ಭಾನುವಾರ ಟೆಕ್ಸಾಸ್ ನ ಗ್ರ್ಯಾಂಡ್ ಪ್ರೈರಿಯಲ್ಲಿ ಯುಎಸ್ಎ ಮತ್ತು ಕೆನಡಾ ನಡುವಿನ ಪಂದ್ಯಾವಳಿಯ ಆರಂಭಿಕ ಪಂದ್ಯದೊಂದಿಗೆ ಪ್ರಾರಂಭವಾಗಿ ಜೂನ್ 29 ರ ಶನಿವಾರ ಬಾರ್ಬಡೋಸ್ ನ ಬ್ರಿಡ್ಜ್ಟೌ ಟೌನ್ ನಲ್ಲಿ ಫೈನಲ್ ನೊಂದಿಗೆ ಕೊನೆಗೊಳ್ಳುತ್ತದೆ.

vAd Widget

Ad Widget

ಪ್ರಕಟಿತ ತಂಡದಲ್ಲಿ ಕನ್ನಡಿಗರಿಗೆ ಸ್ಥಾನ ಲಭಿಸಿಲ್ಲ.
ಬಹು ನಿರೀಕ್ಷಿತ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿತ್ತು. ಈ ಪ್ರಶ್ನೆಗೆ ಬಿಸಿಸಿಐ ಆಯ್ಕೆ ಸಮಿತಿ ಉತ್ತರ ನೀಡಿದ್ದು, ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಿಷಭ್ ಪಂತ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಇತ್ತೀಚೆಗೆ ನಡೆದ ಐಸಿಸಿ ವಿಶ್ವಕಪ್‌ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕೆ ಎಲ್‌ ರಾಹುಲ್‌ಗ ೆಕೋಖ್ ನೀಡಲಾಗಿದೆ

Ad Widget

Ad Widget

ರಿಷಭ್ ಬಹಳ ದಿನಗಳ ನಂತರ ಟೀಂ ಇಂಡಿಯಾಗೆ ಮರಳಿದ್ದಾರೆ. ಕಾರು ಅಪಘಾತವಾದಾಗಿನಿಂದ ಅವರು ಮೈದಾನದಿಂದ ದೂರವಿದ್ದರು. ಆದರೆ ಅವರು ಐಪಿಎಲ್ ಮೂಲಕ ಮೈದಾನಕ್ಕೆ ಮರಳಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ತಾವು ಟಿ20 ವಿಶ್ವಕಪ್ ಆಡಲು ಸಿದ್ಧರಾಗಿರುವುದಾಗಿ ಪ್ರದರ್ಶನದ ಮೂಲಕ ತಿಳಿಸಿದ್ದರು.

Ad Widget

Ad Widget

Ad Widget

ಭಾರತ ತಂಡ ಇಂತಿದೆ:

  1. ರೋಹಿತ್ ಶರ್ಮಾ (ನಾಯಕ)
  2. ಯಶಸ್ವಿ ಜೈಸ್ವಾಲ್
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ರಿಷಭ್ ಪಂತ್ (ವಿಕೆಟ್ ಕೀಪರ್)
  6. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  7. ಹಾರ್ದಿಕ್ ಪಾಂಡ್ಯ (ಉಪನಾಯಕ)
  8. ಶಿವಂ ದುಬೆ
  9. ರವೀಂದ್ರ ಜಡೇಜ
  10. ಅಕ್ಷರ್ ಪಟೇಲ್
  11. ಕುಲದೀಪ್ ಯಾದವ್
  12. ಯಜುವೇಂದ್ರ ಚಾಹಲ್
  13. ಆರ್ಶದೀಪ್ ಸಿಂಗ್
  14. ಜಸ್ಪ್ರೀತ್ ಬೂಮ್ರಾ
  15. ಮೊಹಮ್ಮದ್ ಸಿರಾಜ್

  16. ಮೀಸಲು ಆಟಗಾರರು:
    ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್ ಮತ್ತು ಆವೇಶ್ ಖಾನ್.

ಗ್ರೂಪ್ ಎ: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್ಎ
ಬಿ ಗುಂಪು: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್
ಸಿ ಗುಂಪು: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂಗಿನಿಯಾ
ಗ್ರೂಪ್ ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ನೇಪಾಳ

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading