Connect with us

ಅಪರಾಧ

PFI SDPI Raid : ಮಂಗಳೂರು : ಬೆಳ್ಳಂಬೆಳಿಗ್ಗೆ SDPI, ನಿಷೇಧಿತ PFI ಕಾರ್ಯಕರ್ತರ ಮನೆಗಳ ಮೇಲೆ ದಾಳಿ – ಐವರು ಪೊಲೀಸ್ ವಶ | ಯುಎಪಿಎ ಕಾಯ್ದೆಯಡಿ ಪ್ರಕರಣ

Ad Widget

Ad Widget

Ad Widget

Ad Widget

ಮಂಗಳೂರು, ಅಕ್ಟೋಬರ್ 13: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ SDPI, ನಿಷೇಧಿತ PFI ಕಾರ್ಯಕರ್ತರ ಮನೆಗಳ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ಅ 13 ರಂದು ಬೆಳ್ಳಂಬೆಳಿಗ್ಗೆ ನಡೆದಿದೆ. ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ, ಉಳ್ಳಾಲ ಸೇರಿ ಏಳೆಂಟು ಕಡೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ.

Ad Widget

Ad Widget

Ad Widget

ಮಂಗಳೂರು ಪೊಲೀಸ್ ಕಮಿಷನರ್ N.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಮನೆಗಳನ್ನು ಸಂಪೂರ್ಣವಾಗಿ ಜಾಲಾಡಿರುವ ಪೊಲೀಸರು ದಾಖಲೆ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇದರ ಅಧಾರದಲ್ಲಿ ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Ad Widget

ಈ ದಾಳಿ ಈ ಹಿಂದೆ ನಡೆದ ಕೃತ್ಯದ ತನಿಖೆಯ ಭಾಗವಾಗಿ ನಡೆದಿದೆಯೇ ಅಥಾವ ದುಷ್ಕೃತ್ಯ ನಡೆಸುವ ಮುನ್ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆಯೇ ಎಂದು ಖಚಿತಗೊಂಡಿಲ್ಲ. ಕೆಲ ವಾರಗಳ ಹಿಂದೆ ರಾಷ್ಟ್ರೀಯ ತನಿಖಾದಳ ಹಾಗೂ ಕರ್ನಾಟಕ ಪೊಲೀಸರು SDPI ಪಕ್ಷ ಹಾಗೂ PFI ಸಂಘಟನೆಯ ಹಲವು ನಾಯಕರುಗಳ ಮನೆ ಮೇಲೆ ದಾಳಿ ನಡೆಸಿದ್ದರು. ಅದಾದ ಬಳಿಕ PFI ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ.

Ad Widget

Ad Widget

Gold Rate Today : ಗೋಲ್ಡ್ ಖರೀದಿಸ ಬಯಸುವವರಿಗೆ ಸಂತಸದ ಸುದ್ದಿ – ರೇಟ್ ನಲ್ಲಿ ಮತ್ತಷ್ಟೂ ಇಳಿಕೆ : ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಇಲ್ಲಿ ತಿಳಿಯಿರಿ
ಇಂದಿನ ಪೊಲೀಸರ ಕಾರ್ಯಚರಣೆ ಯು ಈ ಹಿಂದಿನ ದಾಳಿಯ ವೇಳೆ ಸಿಕ್ಕ ಸುಳಿವುಗಳ ಅಧಾರದ ಮೇಲೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈಕಾರ್ಯಚರಣೆಯ ಬಗೆಗಿನ ಯಾವುದೇ ಅಧಿಕೃತ ಮಾಹಿತಿ ಪೊಲೀಸ್ ಇಲಾಖೆಯ ವತಿಯಿಂದ ಬಂದಿಲ್ಲ. ಆದರೆ ವಶಕ್ಕೆ ಪಡೆದ ಪಿಎಫ್ಐ ಮುಂಡರ ವಿರುದ್ಧ UAPA Act, sec121 ಹಾಗೂ ವಿವಿಧ ಸೆಕ್ಷನ್ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

Scholarship : ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ – ಯಾರೆಲ್ಲ ಅರ್ಜಿ ಸಲ್ಲಿಸಬಹುದು? ನಿಯಮಗಳೇನು?

Click to comment

Leave a Reply

ಅಂತರ ರಾಜ್ಯ

Baba Ramdev’s-ದಾರಿ ತಪ್ಪಿಸುವ ಜಾಹೀರಾತು – ಬಾಬ ರಾಮದೇವ್ ಕಂಪೆನಿ ಪತಂಜಲಿಯಯ ಪರವಾನಗಿ ಅಮಾನತು

Ad Widget

Ad Widget

Ad Widget

Ad Widget

ನವದೆಹಲಿ : ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ.

Ad Widget

Ad Widget

Ad Widget

ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ನ ಕೋಪಕ್ಕೂ ತುತ್ತಾಗಿದ್ದಾರೆ.

Ad Widget

ಉತ್ತರಾಖಂಡ ಸರ್ಕಾರವು ಏ. 15ರಂದು ಈ ಅಮಾನತು ಆದೇಶ ಹೊರಡಿಸಿದೆ. ಅಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ರಾಮದೇವ ಅವರ ವಕ್ತಾರರು ನಿರಾಕರಿಸಿದ್ದಾರೆ.

Ad Widget

Ad Widget

ಪರವಾನಗಿ ಅಮಾನತ್ತಾದ 14 ಔಷಧಗಳ ಪಟ್ಟಿ ಇಂತಿದೆ…

Ad Widget

Ad Widget

Ad Widget
  • ಸ್ವಸರಿ ಗೋಲ್ಡ್
  • ಸ್ವಸರಿ ವತಿ
  • ಬ್ರಾಂಕೋಮ್
  • ಸ್ವಸರಿ ಪ್ರವಾಹಿ
  • ಸ್ವಸರಿ ಅವಲೇಹ್
  • ಮುಕ್ತಾವತಿ ಎಕ್ಸ್ಟ್ರಾ ಪವರ್
  • ಲಿಪಿಡೋಮ್
  • ಬಿಪಿ ಗ್ರಿಟ್
  • ಮಧುಗ್ರಿಟ್
  • ಮಧುನಾಶಿನಿವತಿ ಎಕ್ಸ್ಟ್ರಾ ಪವರ್
  • ಲಿವಾಮೃತ್ ಅಡ್ವಾನ್ಸ್
  • ಲಿವೋಗ್ರಿಟ್
  • ಐಗ್ರಿಟ್ ಗೋಲ್ಡ್
  • ಪತಂಜಲಿ ದೃಷ್ಟಿ ಐ ಡ್ರಾಪ್
Continue Reading

ಅಪರಾಧ

Low marks-ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ-ಪರಸ್ಪರ ಚಾಕುವಿನಿಂದ ಇರಿದುಕೊಂಡ ತಾಯಿ, ಮಗಳು; ಮಗಳು ಕೊಲೆಯಾದರೆ, ತಾಯಿ ಗಂಭೀರ

Ad Widget

Ad Widget

Ad Widget

Ad Widget

ಮಂಗಳೂರು(ಬೆಂಗಳೂರು) : ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವುದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget

ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ (60) ಮಗಳನ್ನು ಕೊಲೆಗೈದ ತಾಯಿ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

Ad Widget

ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಜೆ ಚಾಕುವಿನಿಂದ ಪರಸ್ಪರ ಇರಿದು ಕೊಂಡಿದ್ದರಿಂದ ಮಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget
Continue Reading

ಅಪರಾಧ

Covishield-ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಪೆಕ್ಟ್ – ಮೊದಲ ಬಾರಿ ಒಪ್ಪಿಕೊಂಡ ಉತ್ಪಾದಕ ಕಂಪೆನಿ; ‘ಥೋಂಬೋಸಿಸ್” ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ

Ad Widget

Ad Widget

Ad Widget

Ad Widget

ಲಂಡನ್: ಕೋವಿಡ್ ಮಹಾಮಾರಿಯು 2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ್ದು ಇದರ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೋವಿಡ್ ಲಸಿಕೆಗಳ ಅಡ್ಡಪರಿಣಾಮದ ಕುರಿತು ಕಂಪನಿ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ ಬಗ್ಗೆ ನಾನಾ ವದಂತಿಗಳು ಇದ್ದವಾದರೂ ಕಂಪೆನಿ ಬಹಿರಂಗವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿ.

Ad Widget

Ad Widget

Ad Widget

ಇದೇ ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡಾ ಇದೇ ಆಗಿದೆ.

Ad Widget

ಆಸ್ಟ್ರಾಜೆನಿಕಾ ಹೇಳಿದ್ದು
ನಾವು ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆಕಾರಣವಾಗುವುದು ನಿಜ. ಲಸಿಕೆ ಪಡೆದವರು ಥೋಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಇದೆ. ಆ ಕಾರಣ, ಲಂಡನ್ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ನೀಡಿದ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Ad Widget

Ad Widget

ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಆದರೆ ಈ ಲಸಿಕೆ ಪಡೆದ ಪರಿಣಾಮ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅಡ್ಡಪರಿಣಾಮಗಳು ಸಂಭವಿಸಿವೆ ಮತ್ತು ಹಲವು ಸಾವು ಸಂಭವಿಸಿದೆ ಎಂದು ಆರೋಪಿಸಿ ಬ್ರಿಟನ್‌ನ ವಿವಿಧ ನ್ಯಾಯಾಲಯಗಳಲ್ಲಿ ಹಲವು ದೂರು ಸಲ್ಲಿಕೆಯಾಗಿದ್ದವು. ಈ ಪೈಕಿ ಜೇಮಿ ಸ್ಕಾಟ್ ಎಂಬುವವರು 2021ರ ಏಪ್ರಿಲ್‌ನಲ್ಲಿ ನಾನು ಲಸಿಕೆ ಪಡೆದ ಬಳಿಕ ಮೆದುಳಿನಲ್ಲಿ ಶಾಶ್ವತ ಗಾಯ ಸಂಭವಿಸಿದೆ ಎಂದು ಆರೋಪಿಸಿದ್ದರು.

Ad Widget

Ad Widget

Ad Widget

ಈ ಬಗ್ಗೆ ಕಂಪನಿ ಹೇಳಿದ್ದೇನು?: ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನಿಕಾದ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು ಅದರಲ್ಲಿ ‘ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗುವುದು ನಿಜ. ಲಸಿಕೆ ಪಡೆದವರು ಹೊಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾ ದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ’ ಎಂಬುದಾಗಿ ಸಂಸ್ಥೆ ತಪ್ಪೊಪ್ಪಿಕೊಂಡಿದೆ. ಆಸ್ಟ್ರಾಜೆನಿಕಾ ಸಂಸ್ಥೆ ತಯಾರಿಸಿರುವ ಕೋವಿಡ್ ಲಸಿಕೆಯು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದನೆಯಾಗಿ 174 ಕೋಟಿ ಡೋಸ್‌ನಷ್ಟು ಲಸಿಕೆ ನೀಡಲಾಗಿತ್ತು.

ವಿಶ್ವದಾದ್ಯಂತ 70 ಲಕ್ಷ ಸಾವು: ಕೋವಿಡ್‌ ಸೋಂಕು ವಿಶ್ವದಾದ್ಯಂತ 78 ಕೋಟಿ ಜನರಿಗೆ ತಗುಲಿದ್ದು, 70 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿ 5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading