Connect with us

ಅಪರಾಧ

PFI Ban : ದೇಶದಲ್ಲಿ PFIನಿಂದ ಒಟ್ಟು10 ಹತ್ಯೆ- ಕರಾವಳಿಯ ಇಬ್ಬರ ಸಹಿತ ರಾಜ್ಯದ ನಾಲ್ವರ ಹತ್ಯೆ : ನಿಷೇಧಕ್ಕೆ ಒಳಗಾದ PFIಯ 8 ಅಂಗ ಸಂಘಟನೆಗಳ ವಿವರ ಹಾಗೂ ಕಾರಣ ಇಲ್ಲಿದೆ

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಬುಧವಾರ ಬೆಳಿಗ್ಗೆ ಆದೇಶ ಹೊರಡಿಸಿದೆ. ಪಿಎಫ್ಐ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಸಂಘಟನೆಗಳ ಮೇಲೆ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳವು ಸರಣಿ ದಾಳಿ ನಡೆಸಿತ್ತು. ಹಾಗೂ ನೂರಕ್ಕೂ ಮಿಕ್ಕಿ ಮುಖಂಡರನ್ನು ಬಂಧಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಎಂಟು ಸಂಘಟನೆಗಳ ನಿಷೇಧಿಸಿ ಆದೇಶ ಹೊರಡಿಸಿದೆ.

Ad Widget

Ad Widget

Ad Widget

ಕಾನೂಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

Ad Widget

ನಿಷೇಧಕ್ಕೆ ಒಳಗಾದ ಸಂಘಟನೆಗಳು.

ಪಿಎಫ್ಐ ಅಂಗಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (ಆರ್ ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ ಸಿಎಚ್ ಆರ್ ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಲಾಗಿದೆ.

Ad Widget

Ad Widget

Gold Rate Today : ಚಿನ್ನದ ದರ ಯಥಾಸ್ಥಿತಿ – ಖರೀದಿಗೂ ಮುನ್ನ ಇಂದಿನ ಚಿನ್ನ ಹಾಗೂ ಬೆಳ್ಳಿಯ ರೇಟ್ ತಿಳಿಯಿರಿ

Ad Widget

Ad Widget

Ad Widget

ಪಿಎಫ್ಐ ಕಾರ್ಯಕರ್ತರು ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಹಾಗೂ ಹತ್ತು ಹಲವಾರು ವ್ಯಕ್ತಿಗಳ ಹತ್ಯೆಯಲ್ಲೂ ಭಾಗಿಯಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಲ್ಲಿ ಕರ್ನಾಟಕದ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯೂ ಸೇರಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೇಶಾದ್ಯಂತ ಒಟ್ಟು 10 ಜನರ ಹತ್ಯೆಯಲ್ಲಿ ಪಿಎಫ್ಐ ಕಾರ್ಯಕರ್ತರು ಬಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ಹತ್ಯೆಗಳು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ , ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆದಿದೆ.

ಕರ್ನಾಟಕದ ನಾಲ್ವರ ಹತ್ಯೆಯಲ್ಲಿ ಭಾಗಿ :

2017ರಲ್ಲಿ ದ.ಕ. ಜಿಲ್ಲೆಯಲ್ಲಿ ನಡೆದ ಶರತ್ ಮಡಿವಾಳ, 2016 ರಲ್ಲಿ ಕೊಡಗಿನಲ್ಲಿ ನಡೆದ ಪ್ರವೀಣ್ ಪೂಜಾರಿ, 2016 ರಲ್ಲಿ ಬೆಂಗಳೂರಿನಲ್ಲಿ ನಡೆದ ರುದ್ರೇಶ್ ಹಾಗೂ ಇತ್ತೀಚೆಗೆ ಬೆಳ್ಳಾರೆಯ ನೆಟ್ಟಾರ್ ವಿನಲ್ಲಿ ಪ್ರವೀಣ್ ಹತ್ಯೆಯಲ್ಲಿ ಪಿಎಫೈ ಕಾರ್ಯಕರ್ತರು ನೇರ ಭಾಗಿಯಾಗಿರುವ ಬಗ್ಗೆಯೂ ಆದೇಶದಲ್ಲಿ ವಿವರಿಸಲಾಗಿದೆ.

High Drama : ಕಟ್ಟಿಕೊಂಡವಳಿಗೆ ಕೈ ಕೊಟ್ಟು, ಇಟ್ಟುಕೊಂಡವಳ ಜತೆಯಿರಲು ಉಡುಪಿಯಲ್ಲಿ ಯುವಕನ ಹೈಡ್ರಾಮ : ಸೇತುವೆ ಬಳಿ ಬೈಕ್‌ ಅಪಘಾತವಾಗಿದೆ ಬಿಂಬಿಸಿ ಕೋಳಿ ರಕ್ತ ಹರಿಸಿ ಈತ ಮಾಡಿದ ಡ್ರಾಮ ಒಂದೇ ಎರಡೇ ?

ಮೇಲಿನ ಅಪರಾಧ ಚಟುವಟಿಕೆಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ಏಕೈಕ ಉದ್ದೇಶಕ್ಕಾಗಿ PFI ಕಾರ್ಯಕರ್ತರು ಕ್ರೂರ ಕೊಲೆಗಳನ್ನು ನಡೆಸುತ್ತಿದ್ದಾರೆ ಶಾಂತಿ ಮತ್ತು ನೆಮ್ಮದಿಗೆ ತೊಂದರೆ ಕೊಟ್ಟು ಸಾರ್ವಜನಿಕರ ಮನಸ್ಸಿನಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಈ ಸಂಘಟನೆಯ ಕಾರ್ಯಕರ್ತರ ಕೃತ್ಯ ಎಂದು ಆದೇಶದಲ್ಲಿ ವಿವರಿಸಲಾಗಿದೆ

ಪಿಎಫ್ಐ ಸಂಘಟನೆಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ (UAPA Act) ಯಡಿ ಪಿಎಫ್ಐ ಸಂಘಟನೆಯ ಮೇಲೆ ನಿಷೇಧ ಹೇರಿದೆ.

‘ಪಿಎಫ್ಐ ಹಾಗೂ ಅದರ ಅಧೀನ ಸಂಸ್ಥೆಗಳು ಮೇಲ್ನೋಟಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಆದರೆ ಆ ಸಂಘಟನೆಗಳು ಒಂದು ಸಮುದಾಯವನ್ನು ಮೂಲಭೂತವಾದೀಕರಣ ಮಾಡುವ ಗುಪ್ತ ಕಾರ್ಯಸೂಚಿ ಹೊಂದಿತ್ತು. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ದುರ್ಬಲಗೊಳಿಸುವ ಹಾಗೂ ದೇಶದ ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನ ಸ್ಥಾಪನೆಗೆ ಅಗೌರವ ತೋರುವ ಅಜೆಂಡಾ ಹೊಂದಿತ್ತು’ ಎಂದು ಕೇಂದ್ರ ಸರ್ಕಾರ ಪಿಎಫ್ಐ ನಿಷೇಧಕ್ಕೆ ಕಾರಣ ಕೊಟ್ಟಿದೆ.

ಸುಳ್ಯ : ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ –  ಯುವಕನ ಬಂಧನ

PFI ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ ಕಾರಣಗಳೇನು?

  1. 2006 ರಲ್ಲಿ ಕೇರಳದಲ್ಲಿ ಜನ್ಮ ತಾಳಿದ ಪಿಎಫ್ಐ ಸಂಘಟನೆಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಇದು ದೇಶದ ಭದ್ರತೆ ಹಾಗೂ ಕೋಮು ಸೌಹಾರ್ದಕ್ಕೆ ಮಾರಕವಾಗಿ ನಡೆದುಕೊಂಡಿದೆ.
  2. ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು.
  3. ಪಿಎಫ್ಐನ ಸಂಸ್ಥಾಪಕ ಸದಸ್ಯರು ನಿಷೇಧಿತ ಭಯೋತ್ಪಾದನಾ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ – Students Islamic Movement of India (SIMI) Jamat-ul-Mujahideen Bangladesh (JMB) ಸಂಘಟನೆಯೊಂದಿಗೆ ಪಿಎಫ್ಐಗೆ ನಂಟು ಇತ್ತು.
  4. ಪಿಎಫ್ಐ ಸಂಘಟನೆಗೆ ಜಾಗತಿಕ ಉಗ್ರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್- Islamic State of Iraq and Syria ISIS) ಜತೆಗೂ ನಂಟು ಇತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
  5. ಪಿಎಫ್ಐ ಸಂಘಟನೆಯು ಮೂಲಭೂತವಾದಕ್ಕೆ ಬೆಂಬಲ ಕೊಡುತ್ತಿತ್ತು ಹಾಗೂ ದೇಶದಲ್ಲಿ ಅಭದ್ರತೆ ಸೃಷ್ಠಿಗೆ ಕಾರಣವಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

PFI ban | Big Breaking: ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳು ದೇಶಾದ್ಯಂತ 5 ವರ್ಷ ನಿಷೇಧ

ಈ ಮೇಲಿನ ಕಾರಣಗಳನ್ನು ನೀಡಿ ಕೇಂದ್ರ ಸರ್ಕಾರವು ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳನ್ನು ನಿಷೇಧಿಸಿದೆ. ‘ಈ ಮೇಲಿನ ಕಾರಣಗಳಿಂದ ಕೇಂದ್ರ ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳು ಕಾನೂನು ಬಾಹಿರ ಸಂಘಟನೆಗಳು ಎಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಘೋಷಣೆ ಮಾಡಲಾಗಿದೆ. ಯುಎಪಿಎ ಕಾಯ್ದೆಯ ಸೆಕ್ಷನ್ 3 (3) ರಲ್ಲಿ ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರವನ್ನು ಬಳಸಿಕೊಂಡು ಈ ಆದೇಶ ಮಾಡಲಾಗಿದೆ. ಮುಂದಿನ ಐದು ವರ್ಷ ಈ ಆದೇಶ ಜಾರಿಯಲ್ಲಿರಲಿದೆ’ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ನಿಷೇಧದ ಆದೇಶದಲ್ಲಿ ಹೇಳಲಾಗಿದೆ

Click to comment

Leave a Reply

ಅಂತರ ರಾಜ್ಯ

Baba Ramdev’s-ದಾರಿ ತಪ್ಪಿಸುವ ಜಾಹೀರಾತು – ಬಾಬ ರಾಮದೇವ್ ಕಂಪೆನಿ ಪತಂಜಲಿಯಯ ಪರವಾನಗಿ ಅಮಾನತು

Ad Widget

Ad Widget

Ad Widget

Ad Widget

ನವದೆಹಲಿ : ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ.

Ad Widget

Ad Widget

Ad Widget

ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ನ ಕೋಪಕ್ಕೂ ತುತ್ತಾಗಿದ್ದಾರೆ.

Ad Widget

ಉತ್ತರಾಖಂಡ ಸರ್ಕಾರವು ಏ. 15ರಂದು ಈ ಅಮಾನತು ಆದೇಶ ಹೊರಡಿಸಿದೆ. ಅಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ರಾಮದೇವ ಅವರ ವಕ್ತಾರರು ನಿರಾಕರಿಸಿದ್ದಾರೆ.

Ad Widget

Ad Widget

ಪರವಾನಗಿ ಅಮಾನತ್ತಾದ 14 ಔಷಧಗಳ ಪಟ್ಟಿ ಇಂತಿದೆ…

Ad Widget

Ad Widget

Ad Widget
  • ಸ್ವಸರಿ ಗೋಲ್ಡ್
  • ಸ್ವಸರಿ ವತಿ
  • ಬ್ರಾಂಕೋಮ್
  • ಸ್ವಸರಿ ಪ್ರವಾಹಿ
  • ಸ್ವಸರಿ ಅವಲೇಹ್
  • ಮುಕ್ತಾವತಿ ಎಕ್ಸ್ಟ್ರಾ ಪವರ್
  • ಲಿಪಿಡೋಮ್
  • ಬಿಪಿ ಗ್ರಿಟ್
  • ಮಧುಗ್ರಿಟ್
  • ಮಧುನಾಶಿನಿವತಿ ಎಕ್ಸ್ಟ್ರಾ ಪವರ್
  • ಲಿವಾಮೃತ್ ಅಡ್ವಾನ್ಸ್
  • ಲಿವೋಗ್ರಿಟ್
  • ಐಗ್ರಿಟ್ ಗೋಲ್ಡ್
  • ಪತಂಜಲಿ ದೃಷ್ಟಿ ಐ ಡ್ರಾಪ್
Continue Reading

ಅಪರಾಧ

Low marks-ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ-ಪರಸ್ಪರ ಚಾಕುವಿನಿಂದ ಇರಿದುಕೊಂಡ ತಾಯಿ, ಮಗಳು; ಮಗಳು ಕೊಲೆಯಾದರೆ, ತಾಯಿ ಗಂಭೀರ

Ad Widget

Ad Widget

Ad Widget

Ad Widget

ಮಂಗಳೂರು(ಬೆಂಗಳೂರು) : ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವುದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget

ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ (60) ಮಗಳನ್ನು ಕೊಲೆಗೈದ ತಾಯಿ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

Ad Widget

ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಜೆ ಚಾಕುವಿನಿಂದ ಪರಸ್ಪರ ಇರಿದು ಕೊಂಡಿದ್ದರಿಂದ ಮಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget
Continue Reading

ಅಪರಾಧ

Covishield-ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಪೆಕ್ಟ್ – ಮೊದಲ ಬಾರಿ ಒಪ್ಪಿಕೊಂಡ ಉತ್ಪಾದಕ ಕಂಪೆನಿ; ‘ಥೋಂಬೋಸಿಸ್” ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ

Ad Widget

Ad Widget

Ad Widget

Ad Widget

ಲಂಡನ್: ಕೋವಿಡ್ ಮಹಾಮಾರಿಯು 2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ್ದು ಇದರ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೋವಿಡ್ ಲಸಿಕೆಗಳ ಅಡ್ಡಪರಿಣಾಮದ ಕುರಿತು ಕಂಪನಿ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ ಬಗ್ಗೆ ನಾನಾ ವದಂತಿಗಳು ಇದ್ದವಾದರೂ ಕಂಪೆನಿ ಬಹಿರಂಗವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿ.

Ad Widget

Ad Widget

Ad Widget

ಇದೇ ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡಾ ಇದೇ ಆಗಿದೆ.

Ad Widget

ಆಸ್ಟ್ರಾಜೆನಿಕಾ ಹೇಳಿದ್ದು
ನಾವು ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆಕಾರಣವಾಗುವುದು ನಿಜ. ಲಸಿಕೆ ಪಡೆದವರು ಥೋಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಇದೆ. ಆ ಕಾರಣ, ಲಂಡನ್ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ನೀಡಿದ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Ad Widget

Ad Widget

ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಆದರೆ ಈ ಲಸಿಕೆ ಪಡೆದ ಪರಿಣಾಮ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅಡ್ಡಪರಿಣಾಮಗಳು ಸಂಭವಿಸಿವೆ ಮತ್ತು ಹಲವು ಸಾವು ಸಂಭವಿಸಿದೆ ಎಂದು ಆರೋಪಿಸಿ ಬ್ರಿಟನ್‌ನ ವಿವಿಧ ನ್ಯಾಯಾಲಯಗಳಲ್ಲಿ ಹಲವು ದೂರು ಸಲ್ಲಿಕೆಯಾಗಿದ್ದವು. ಈ ಪೈಕಿ ಜೇಮಿ ಸ್ಕಾಟ್ ಎಂಬುವವರು 2021ರ ಏಪ್ರಿಲ್‌ನಲ್ಲಿ ನಾನು ಲಸಿಕೆ ಪಡೆದ ಬಳಿಕ ಮೆದುಳಿನಲ್ಲಿ ಶಾಶ್ವತ ಗಾಯ ಸಂಭವಿಸಿದೆ ಎಂದು ಆರೋಪಿಸಿದ್ದರು.

Ad Widget

Ad Widget

Ad Widget

ಈ ಬಗ್ಗೆ ಕಂಪನಿ ಹೇಳಿದ್ದೇನು?: ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನಿಕಾದ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು ಅದರಲ್ಲಿ ‘ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗುವುದು ನಿಜ. ಲಸಿಕೆ ಪಡೆದವರು ಹೊಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾ ದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ’ ಎಂಬುದಾಗಿ ಸಂಸ್ಥೆ ತಪ್ಪೊಪ್ಪಿಕೊಂಡಿದೆ. ಆಸ್ಟ್ರಾಜೆನಿಕಾ ಸಂಸ್ಥೆ ತಯಾರಿಸಿರುವ ಕೋವಿಡ್ ಲಸಿಕೆಯು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದನೆಯಾಗಿ 174 ಕೋಟಿ ಡೋಸ್‌ನಷ್ಟು ಲಸಿಕೆ ನೀಡಲಾಗಿತ್ತು.

ವಿಶ್ವದಾದ್ಯಂತ 70 ಲಕ್ಷ ಸಾವು: ಕೋವಿಡ್‌ ಸೋಂಕು ವಿಶ್ವದಾದ್ಯಂತ 78 ಕೋಟಿ ಜನರಿಗೆ ತಗುಲಿದ್ದು, 70 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿ 5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading