Connect with us

ರಾಜ್ಯ

KSRTC Special Bus : ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTCಯಿಂದ ಸಿಹಿ ಸುದ್ದಿ: 2000 ವಿಶೇಷ ಬಸ್, ಹಾಗೂ ಟಿಕೆಟ್‌ ಮೇಲೆ ರಿಯಾಯಿತಿ

Ad Widget

Ad Widget

Ad Widget

Ad Widget

ಬೆಂಗಳೂರು Bangalore ಸೆ 27 : ರಾಜ್ಯದಲ್ಲಿ ನಾಡ ಹಬ್ಬ ದಸಾರ ಕಳೆಗಟ್ಟಲು ಆರಂಭಿಸಿದೆ. ವಿಶ್ವ ಪ್ರಸಿದ್ದ ದಸಾರಕ್ಕೆ ಮೈಸೂರಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ರಾಜ್ಯದ ಇನ್ನೆರಡು ಜನಪ್ರಿಯ ದಸಾರಗಳಾದ ಮಂಗಳೂರು ಹಾಗೂ ಮಡಿಕೇರಿಯಲ್ಲೂ ನಾಡ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ದಸಾರ ನಿಮಿತ್ತ ರಾಜ್ಯದ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

Ad Widget

Ad Widget

Ad Widget

ಈ ಹಬ್ಬದ ಸೀಸನಿನಲ್ಲಿ ರಾಜ್ಯದ ಸಾರಿಗೆ ವ್ಯವಸ್ಥೆಯ ಮೇಲೂ ಭಾರೀ ಒತ್ತಡ ಉಂಟಾಗಲಿದೆ. ಹಬ್ಬದ ಸೀಸನಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಊರಿನತ್ತ ಮುಖ ಮಾಡಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ  ರಾಜ್ಯ ಸಾರಿಗೆ ನಿಗಮ ಕೆ ಎಸ್‌ ಅರ್‌ ಟಿಸಿ  ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ವಿವಿಧಡೆಗೆ ಹೆಚ್ಚುವರಿಗಾಗಿ 2000 ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ. 30 ರಿಂದ ಅ. 3 ರವರೆಗೆ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ.

Ad Widget

ಬೆಂಗಳೂರಿನಿಂದ ಮೈಸೂರಿಗೆ ಹೆಚ್ಚುವರಿ 200 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರಿಂದ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ 250 ವಿಶೇಷ ಬಸ್ ಮತ್ತು ಪ್ರವಾಸ ಪ್ಯಾಕೇಜ್ ನೀಡಲಾಗಿದೆ. ರಾಜ್ಯದ ಜಿಲ್ಲಾ ಮತ್ತು ತಾಲೂಕು ನಿಲ್ದಾಣಗಳಲ್ಲಿಯೂ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.

Ad Widget

Ad Widget

Gold Rate Today : ಚಿನ್ನದ ದರ ಯಥಾಸ್ಥಿತಿ – ಖರೀದಿಗೂ ಮುನ್ನ ಇಂದಿನ ಚಿನ್ನ ಹಾಗೂ ಬೆಳ್ಳಿಯ ರೇಟ್ ತಿಳಿಯಿರಿ

Ad Widget

Ad Widget

Ad Widget

ದಾವಣಗೆರೆ, ಮಂಗಳೂರು, ಶಿವಮೊಗ್ಗ, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಪ್ರಮುಖ ನಗರ, ಧಾರ್ಮಿಕ ಸ್ಥಳಗಳು, ಹಲವು ಮಾರ್ಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಮತ್ತು ಹೊರ ರಾಜ್ಯದ ಪ್ರಮುಖ ನಗರಗಳಿಂದ ಅ. 7ರಿಂದ 9 ರವರೆಗೆ ಬೆಂಗಳೂರಿಗೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.

Breaking : Raid On PFI: ತಡರಾತ್ರಿ ಕಾರ್ಯಚರಣೆ : ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಹಲವು PFI ಮುಖಂಡರು ಪೊಲೀಸ್ ವಶ

Click to comment

Leave a Reply

ಕ್ರೈಂ

Prajwal Revanna Sex Scandal: ತಕ್ಷಣ ತನಿಖೆಗೆ ಹಾಜರಾಗಿ : ಪ್ರಜ್ವಲ್ ರೇವಣ್ಣ ಹಾಗೂ ಎಚ್‌ ಡಿ ರೇವಣ್ಣ  ಮನೆಗೆ ನೋಟಿಸ್‌ ಅಂಟಿಸಿದ SIT

Ad Widget

Ad Widget

Ad Widget

Ad Widget

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಾಸಲೀಲೆ  ಪ್ರಕರಣದ ತನಿಖೆ ಕಳೆದೆರಡು ದಿನಗಳಿಂದ ಎಸ್‍ಐಟಿ ಹೆಗಲೇರಿದೆ.  ತನಿಖೆಯ ಮೂರನೇಯ ದಿನವಾದ ಇಂದು ಇಳಿದಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್  ಜಾರಿ ಮಾಡಿದ್ದಾರೆ.

Ad Widget

Ad Widget

Ad Widget

ಮಾಜಿ ಸಚಿವ ಎಚ್‌.ಡಿ ರೇವಣ್ಣ ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣರ  ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು, ಎಚ್‌ಡಿ ರೇವಣ್ಣ ಅವರು ಉತ್ತರ ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ

Ad Widget

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಹೆಣ್ಣು ಮುಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಲೈಂಗಿಕ ಆರೋಪ ಎದುರಿಸುತ್ತಿದ್ದಾರೆ. ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT)ಕ್ಕೆ ಪ್ರಕರಣದ ತನಿಖೆ ಹಸ್ತಾಂತರಿಸಿತ್ತು.

Ad Widget

Ad Widget

ಪ್ರಕರಣ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು ಐದು ಮಂದಿ ಸಂತ್ರಸ್ತರನ್ನು ಸೋಮವಾರ ವಿಚಾರಣೆ ಮಾಡಿದ್ದಾರೆ. ಎಸ್‌ ಐ ಟಿ ಒಟ್ಟು 3 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದೆ.

Ad Widget

Ad Widget

Ad Widget

ನೋಟಿಸ್‌ ನಲ್ಲಿ ಏನಿದೆ ?

ನೋಟಿಸ್ ಸಿಕ್ಕ ತಕ್ಷಣ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ಇಲ್ಲದೇ ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿಯೇ ಕಾನೂನು ಕ್ರಮದ ಎಚ್ಚರಿಕೆ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  

Continue Reading

ರಾಷ್ಟ್ರೀಯ

RBI Guidelines on Penal Interest : ಸಾಲಕ್ಕೆ ಹೆಚ್ಚುವರಿ ಬಡ್ಡಿ ಬೇಡ – ಬ್ಯಾಂಕ್ಗಳ ಆಟಾಟೋಪಕ್ಕೆ ಆರ್ಬಿಐನಿಂದ ಮೂಗುದಾರ; ಬ್ಯಾಂಕುಗಳಿಗೆ RBI ನೀಡಿದ ಖಡಕ್ ಸೂಚನೆಯೇನು ?

Ad Widget

Ad Widget

Ad Widget

Ad Widget

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್’ಗಳು ಹೆಚ್ಚಿನ ಬಡ್ಡಿದರ ವಿಧಿಸುವ ಮೂಲಕ ಗ್ರಾಹಕರಿಗೆ ಮೋಸ ಮಾಡುವುದನ್ನ ತಡೆಯಲು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಸೋಮವಾರ ಈ ಕುರಿತು ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ (NBFCs) ಸೂಚನೆಗಳನ್ನ ನೀಡಿದೆ.

Ad Widget

Ad Widget

Ad Widget

ಗ್ರಾಹಕರಿಗೆ ವಿಧಿಸುವ ಬಡ್ಡಿಯು ನ್ಯಾಯೋಚಿತ ಹಾಗೂ ಪಾರದರ್ಶಕವಾಗಿರಬೇಕು. ಈ ಕುರಿತ ನಿಮ್ಮ ಪ್ರವೃತ್ತಿ ಮತ್ತು ಅಭ್ಯಾಸಗಳನ್ನು ಪರಾಮರ್ಶಿಸಿ ಕೊಂಡು ತಿದ್ದಿಕೊಳ್ಳಿ ಎಂದು ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ.ಮಾರ್ಚ್ 31, 2023ರ ಅವಧಿಯಲ್ಲಿ ಬ್ಯಾಂಕ್ ಗಳು, ಎನ್ಬಿಎಫ್ಸಿ ಹಾಗೂ ಹೌಸಿಂಗ್ ಫೈನಾನ್ಸ್ ಕಂಪನಿಗಳ ಕಾರ್ಯಚಟುವಟಿಕೆಯನ್ನು ಆರ್ಬಿಐ ಪರಿಶೀಲಿಸಿದೆ.

Ad Widget

ಕೆಲವೊಂದುಸಾಲ ನೀಡುವ ಸಂಸ್ಥೆಗಳು, ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸುವ ಪ್ರಕರಣಗಳನ್ನ ಆರ್ಬಿಐ ಗುರುತಿಸಿದೆ. ಗ್ರಾಹಕರಿಂದ ವಿಧಿಸುವ ಬಡ್ಡಿಯು ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹಣಕಾಸು ಸಂಸ್ಥೆಗಳು ತಕ್ಷಣವೇ ತಮ್ಮ ನೀತಿಗಳನ್ನ ಪರಿಶೀಲಿಸಲು ಅರ್ ಬಿ ಐ ಆದೇಶಿಸಿಸಿದೆ.

Ad Widget

Ad Widget

ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳ ಆನ್-ಸೈಟ್ ತಪಾಸಣೆಯ ಸಂದರ್ಭ ಗ್ರಾಹಕರಿಗೆ ಬಡ್ಡಿಯನ್ನ ವಿಧಿಸುವಲ್ಲಿ ಅನ್ಯಾಯದ ಎಸಗುತ್ತಿರುವ ನಿದರ್ಶನಗಳು ಕಂಡುಬಂದಿವೆ ಎಂದು ಹೇಳಿದೆ. ಸಿಸ್ಟಮ್ ಮಟ್ಟದ ಬದಲಾವಣೆಗಳನ್ನು ಒಳಗೊಂಡಂತೆ ಸರಿಪಡಿಸುವ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು ಈ ಹಣಕಾಸು ಸಂಸ್ಥೆಗಳಿಗೆ ಆರ್ ಬಿ ಐ ಸೂಚಿಸಿ ಸುತ್ತೋಲೆ ಹೊರಡಿಸಿದೆ.

Ad Widget

Ad Widget

Ad Widget

ವಸೂಲಿ ಮಾಡಿದ ಬಡ್ಡಿಯನ್ನ ಹಿಂತಿರುಗಿಸಬೇಕು.!

ಗ್ರಾಹಕರೊಂದಿಗೆ ವ್ಯವಹರಿಸುವಾಗ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಮನೋಭಾವಕ್ಕೆ ಅನುಗುಣವಾಗಿಲ್ಲದ ಬಡ್ಡಿಯನ್ನ ವಿಧಿಸುವ ಪ್ರಮಾಣಿತವಲ್ಲದ ಅಭ್ಯಾಸಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ ಎಂದು ಆರ್ಬಿಐ ಹೇಳಿದೆ. ಅಂತಹ ಅಭ್ಯಾಸಗಳು ಬೆಳಕಿಗೆ ಬಂದರೆ, ಬ್ಯಾಂಕ್ಗಳು, ಎನ್ಬಿಎಫ್ಸಿಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ಬಡ್ಡಿಯನ್ನ ಪಾವತಿಸುವುದನ್ನ ಖಚಿತಪಡಿಸಿಕೊಳ್ಳಲು ಆರ್ಬಿಐ ಮೇಲ್ವಿಚಾರಣಾ ತಂಡಗಳು ಕ್ರಮ ಕೈಗೊಳ್ಳುತ್ತವೆ. ಇತರ ಶುಲ್ಕಗಳನ್ನ ಗ್ರಾಹಕರಿಗೆ ಮರುಪಾವತಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ವಿತರಣೆಗಾಗಿ ಕೆಲವು ಸಂದರ್ಭಗಳಲ್ಲಿ ಚೆಕ್’ಗಳನ್ನ ನೀಡುವ ಬದಲು ಆನ್ಲೈನ್ ಬ್ಯಾಂಕ್ ವರ್ಗಾವಣೆಯನ್ನ ಬಳಸಲು ಸಾಲದಾತರನ್ನ ಪ್ರೋತ್ಸಾಹಿಸುತ್ತಿದೆ.

ಪರಾಮರ್ಶೆ ಬಳಿಕ ಆರ್ಬಿಐ ಹೇಳಿದ್ದೇನು?
• ಸಾಲ ಮಂಜೂರಾದ ದಿನಾಂಕದಿಂದ ಅಥವಾ ಸಾಲ ಒಪ್ಪಂದ ಕಾರ್ಯಗತಗೊಳಿಸಿದ ದಿನಾಂಕದಿಂದ ಬಡ್ಡಿಯನ್ನು ವಿಧಿಸುವುದು ಸರಿಯಲ್ಲ. ಗ್ರಾಹಕನಿಗೆ ಸಾಲವನ್ನು ನೀಡಿದ ದಿನದ ಲೆಕ್ಕವನ್ನು ಆಧರಿಸಿ ಬಡ್ಡಿಯನ್ನು ವಿಧಿಸಲಾಗುತ್ತಿಲ್ಲ. ಚೆಕ್ ಮೂಲಕ ಸಾಲ ವಿತರಣೆ ಮಾಡುವ ಸಂದರ್ಭದಲ್ಲಿ ಚೆಕ್ನಲ್ಲಿ ನಮೂದಿಸಿರುವ ದಿನಾಂಕದಿಂದಲೇ ಬಡ್ಡಿ ವಿಧಿಸಲಾಗುತ್ತದೆ. ಆದರೆ ಗ್ರಾಹಕನಿಗೆ ಚೆಕ್ ಹಸ್ತಾಂತರವಾದ ದಿನವನ್ನು ಬಡ್ಡಿ ನಿಗದಿಗೆ ಪರಿಗಣಿಸುತ್ತಿಲ್ಲ. ಇದು ನ್ಯಾಯೋಚಿತ ಕ್ರಮವಲ್ಲ
• ತಿಂಗಳ ಅವಧಿಯಲ್ಲಿ ಸಾಲ ವಿತರಣೆ ಅಥವಾ ಮರುಪಾವತಿ ಸಂದರ್ಭದಲ್ಲಿ ಕೆಲವು ಬ್ಯಾಂಕುಗಳು ಸಾಲ ಬಾಕಿ ಇರುವ ಅವಧಿಗೆ ಮಾತ್ರ ಬಡ್ಡಿ ವಿಧಿಸುವ ಬದಲು ಇಡೀ ತಿಂಗಳಿಗೆ ಬಡ್ಡಿಯನ್ನು ವಿಧಿಸುತ್ತಿರುವುದು ಕಂಡುಬಂದಿದೆ. ಒಂದೆರಡು ದಿನ ವಿಳಂಬ ಮಾಡಿದರೆ ಬಡ್ಡಿ ವಿಳಂಬದ ಅವಧಿಯನ್ನು ಪರಿಗಣಿಸಬೇಕೇ ಹೊರತು ಇಡೀ ತಿಂಗಳಲ್ಲ.
• ಕೆಲವು ಸಂದರ್ಭಗಳಲ್ಲಿ ಬ್ಯಾಂಕುಗಳು ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಚಿತವಾಗಿ ಸಂಗ್ರಹಿಸುತ್ತಿವೆ. ಆದರೆ ಬಡ್ಡಿ ವಿಧಿಸಲು ಪೂರ್ಣ ಸಾಲದ ಮೊತ್ತವನ್ನು ಲೆಕ್ಕಹಾಕುತ್ತಿವೆ. ಇದು ಸರಿಯಲ್ಲ.
• ಕೆಟ್ಟ ಅಭ್ಯಾಸಗಳು ಬೆಳಕಿಗೆ ಬಂದಲ್ಲಿ ಸಂಬಂಧಪಟ್ಟ ಬ್ಯಾಂಕ್ಗಳು, ಎನ್ಬಿಎಫ್ಸಿ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಹೆಚ್ಚುವರಿಯಾಗಿ ವಸೂಲಿ ಮಾಡಿದ ಬಡ್ಡಿ ಹಾಗೂ ಇತರ ಶುಲ್ಕಗಳನ್ನು ಮರುಪಾವತಿಸಬೇಕು.

Continue Reading

ಅಪರಾಧ

Hasana Files 2 ಪೆನ್ ಡ್ರೈವ್‌,  2900ಕ್ಕೂ ಅಧಿಕ ಅಶ್ಲೀಲ ವಿಡಿಯೋ – 40 ಜಿಬಿ ಪೆನ್‌ ಡ್ರೈವ್‌ SIT ವಶ:   ಜೀವ ಭೀತಿಯಲ್ಲಿ  ಸಂತ್ರಸ್ತೆಯರು –  ಮನಃಶಾಸ್ತ್ರಜ್ಞರ ನೆರವು ನೀಡಲು ಸಿದ್ದತೆ

Ad Widget

Ad Widget

Ad Widget

Ad Widget

ಹಾಸನದ ಬಿಜೆಪಿ ಬೆಂಬಲಿತ ಹಾಗೂ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಪೆನ್‌ ಡ್ರೈವ್‌ ಹಗರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಅತ್ಯಂತ ನಿರ್ಲಜ್ಜೆಯಿಂದ ಚಿತ್ರಿಸಲಾಗಿರುವ ಕೊಳಕು ಅಸಹ್ಯ ಉಂಟು ಮಾಡುವ ಈ ವಿಡಿಯೊಗಳಲ್ಲಿ ವಿವಿಧ ವಯಸ್ಸಿನ 2900 ಮಹಿಳೆಯರ ಮಾನ ಹರಾಜು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ

Ad Widget

Ad Widget

Ad Widget

ಹಾಸನ ಸಂಸದ ನಡೆಸಿದ್ದಾರೆ ಎನ್ನಲಾದ ರಾಸಲೀಲೆ ವಿಡಿಯೋಗಳನ್ನು ಎಸ್‌ಐಟಿ ಸಂಗ್ರಹಿಸಿದೆ. 2 ಪೆನ್ ಡ್ರೈವ್‌ಗಳಲ್ಲಿ 2900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳಿವೆ. ಈ ವಿಡಿಯೋಗಳಲ್ಲಿರುವ ಮಹಿಳೆಯರ ಫೋಟೋ ತೆಗೆದು ಅವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಎಸ್‌ಐಟಿ ಇಳಿದಿದೆ ಎಂದು ಮೂಲಗಳು ಹೇಳಿವೆ.

Ad Widget

ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ಒಟ್ಟು 40 ಜಿಬಿಯ ಪೆನ್ ಡ್ರೈವ್‍ಗಳನ್ನು ವಶಕ್ಕೆ ಪಡೆದಿದ್ದಾರೆ.32 ಜಿಬಿ ಮತ್ತು 8 ಜಿಬಿ ಎರಡು ಪೆನ್ ಡ್ರೈವ್‍ಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ಎರಡು ಪೆನ್‍ಡ್ರೈವ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ತಾಂತ್ರಿಕ ಸಾಕ್ಷ್ಯ ಕಲೆಹಾಕಲು ತಯಾರಿ ನಡೆಸಲಾಗುತ್ತಿದೆ.

Ad Widget

Ad Widget

ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಲೇ ರಾಜ್ಯ ಸರಕಾರ ಎಸ್‌ ಐಟಿ ತನಿಖೆಗೆ ಆದೇಶಿಸಿದೆ. ಎಸ್‌ ಐಟಿಯು ಈಗಾಗಲೇ ತನಿಖೆ ಆರಂಭಿಸಿದ್ದು,  ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಕರೆಯಿಸಿ ಮಾಹಿತಿ ಸಂಗ್ರಹಿಸಿದೆ. ಎಸ್‌ ಐಟಿ   ಕರೆ ಹಿನ್ನೆಲೆಯಲ್ಲಿ ಸೋಮವಾರ ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜೀತಾ ಅವರು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಕೇಂದ್ರ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಅವರನ್ನು ಭೇಟಿಯಾದರು.

Ad Widget

Ad Widget

Ad Widget

ಈ ವೇಳೆ ಸಂಸದರ ವಿರುದ್ಧ ಕೇಳಿ ಬಂದಿರುವಲೈಂಗಿಕ ದೌರ್ಜನ್ಯ ಆರೋಪಗಳು ಹಾಗೂ ಪೆನ್ ಡ್ರೈವ್ ಸ್ಪೋಟದ ಹಿಂದೆ ನಡೆದಿರುವ ಸಂಚು.. ಹೀಗೆ ಹಾಸನ ಜಿಲ್ಲೆಯಲ್ಲಿ ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ಗತಿಸಿರುವ ಬೆಳವಣಿಗೆಗಳ ಬಗ್ಗೆ ಎಸ್ಪಿ ಅವರಿಂದ ಎಸ್‌ಐಟಿ ಮುಖ್ಯಸ್ಥರು ಮಾಹಿತಿ ಪಡೆದಿದ್ದಾರೆ. ಈ ವೇಳೆ ಕೆಲವು ಮಹತ್ವದ ಮಾಹಿತಿಯನ್ನು ಎಸ್‌ಐಟಿ ಮುಖ್ಯಸ್ಥರೊಂದಿಗೆ ಎಸ್ಪಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಜೀವ ಭೀತಿಗೊಳಗಾದ ಸಂತ್ರಸ್ತೆಯರು:

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಪತ್ತೆಗೆ ಸಹಕಾರ ನೀಡುವಂತೆ ಎಸ್ಪಿ ಅವರಿಗೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಶೋಷಣೆಗೊಳಗಾದ ಮಹಿಳೆಯರ ಪೈಕಿ ಕೆಲವರನ್ನು ಗುರುತಿಸಲಾಗಿದೆ. ಆದರೆ ಕೆಲವರು ಮರ್ಯಾದೆ ಹಾಗೂ ಜೀವ ಭೀತಿಗೊಳಗಾಗಿ ತಮ್ಮ ಮೇಲಿನ ದೌರ್ಜನ್ಯ ಬಗ್ಗೆ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಎಸ್ ಐಟಿಗೆ ಸ್ಥಳೀಯರ ಪೊಲೀಸರು ಗಮನಕ್ಕೆ ತಂದಿದ್ದಾರೆ. ಈ ಜೀವ ಭೀತಿ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿರುವುದಾಗಿ ತಿಳಿದು ಬಂದಿದೆ.

 ಮೂರು ತಂಡ

ಲೈಂಗಿಕ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ಮಾಡಲು ಮುಖ್ಯಸ್ಥರು ನಿರ್ಧರಿಸಿದ್ದಾರೆ. ಅಂತೆಯೇ ಜಿಲ್ಲೆಯಲ್ಲೇ ಬೀಡು ಬಿಟ್ಟು ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲಿದೆ. ಈ ತಂಡಕ್ಕೆ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್‌ಮೇಲುಸ್ತುವಾರಿ ನಡೆಸಲಿದ್ದು, ಹಾಸನಜಿಲ್ಲೆಗೆ ತೆರಳಿ ಸಂತ್ರಸ್ತೆ ಮಹಿಳೆಯರನ್ನು ಎಸ್ಪಿ ಕೂಡಾ ಖುದ್ದು  ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಮತ್ತೊಂದು ತಂಡವು ಎಸ್‌ಐಟಿ ಕೇಂದ್ರ ಕಚೇರಿಗೆ ಸಂತ್ರಸ್ತರನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿದೆ. ಇದಕ್ಕೆ ಎಐಜಿಪಿ ಸುಮನಾ ಪನ್ನೇಕರ್ ಉಸ್ತುವಾರಿ ವಹಿಸಲಿದ್ದಾರೆ. ಈ 3 ತಂಡಗಳು ತಾವು ಸಂಗ್ರಹಿಸಿರುವ ಮಾಹಿತಿಯನ್ನು ಎಸ್‌ಐಟಿ ಮುಖ್ಯ ಸ್ಥರಿಗೆ ವರದಿ ಮಾಡಲಿದೆ ಎನ್ನಲಾಗಿದೆ. ಇನ್ನೊಂದು ತಂಡವು ಅಶ್ಲೀಲ ವಿಡಿಯೋಗಳನ್ನು ಪರಿಶೀಲಿಸಲಿದೆ. ಇದಕ್ಕೆ ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳು ನೆರವು ನೀಡಲಿದ್ದಾರೆ.

ಮನಃಶಾಸ್ತ್ರಜ್ಞರ ನೆರವಿಗೆ ಮೊರೆ

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರನ್ನು ತನಿಖೆಗೊಳಪಡಿಸುವ ಮುನ್ನ ಅವರಿಗೆ ನಿಮ್ಹಾನ್ಸ್ ಸಂಸ್ಥೆಯ ಮನಃ ಶಾಸ್ತ್ರಜ್ಞರಿಂದ ಆಪ್ತ ಸಮಾಲೋಚನೆಗೊಳ ಪಡಿಸಲು ಎಸ್‌ಐಟಿ ಮುಂದಾಗಿದೆ. ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಮನಸ್ಥಿತಿ ಅರಿಯಬೇಕಿದೆ. ಈ ಕೃತ್ಯದ ವಿಡಿಯೋಗಳು ಬಹಿರಂಗವಾಗಿರುವ ಕಾರಣ ಸಂತ್ರಸ್ತೆಯರು ಮಾನಸಿಕ ಆಘಾ ತಕ್ಕೊಳಗಾಗಿರಬಹುದು. ಹೀಗಾಗಿ ಏಕಾಏಕಿ ಅವರನ್ನು ವಿಚಾರಣೆಗೊಳಪಡಿ ಸಿದರೆ ಮತ್ತಷ್ಟು ಮಾನಸಿಕ ಖಿನ್ನತೆಗೊಳಗಾ ಗಬಹುದು. ಈ ಕಾರಣಕ್ಕೆ ಕೌನ್ಸೆಲಿಂಗ್ ನಂತರ ಹೇಳಿಕೆ ಪಡೆಯಲಾಗುತ್ತದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading