Connect with us

ಬಿಗ್ ನ್ಯೂಸ್

ಐತಿಹಾಸಿಕ ಧಾರ್ಮಿಕ ಕ್ಷೇತ್ರ ಕೇದಾರನಾಥ ಆವರಣದಲ್ಲಿ ಶೂ ಧರಿಸಿದ ಪ್ರಧಾನಿ ಮೋದಿ – ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ : ರಾಹುಲ್ ಗಾಂಧಿ ಈ ಕೃತ್ಯ ಎಸಗಿದ್ದರೆ ದೇಶದ್ರೋಹಿ ಅಂತ ಬಿಂಬಿಸ್ತಿದ್ದರು ಎಂದ ಕಾಂಗ್ರೇಸ್‍

Ad Widget

Ad Widget

Ad Widget

Ad Widget

ನವದೆಹಲಿ: ನವೆಂಬರ್ 5 ರಂದು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ 12 ಅಡಿಗಳಷ್ಟು ಎತ್ತರದ ಆದಿ ಶಂಕರಾಚಾರ್ಯರ  ಪ್ರತಿಮೆಯನ್ನು ಹಾಗೂ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದರು.

Ad Widget

Ad Widget

Ad Widget

ಈ ಭೇಟಿ ಸಂದರ್ಭದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಮೋದಿ, ಬಿಜೆಪಿ ಅಭಿಮಾನಿಗಳು ಪ್ರಚಾರಾರ್ಥ ಈ ಚಿತ್ರಗಳನ್ನು ಹಂಚಿಕೊಂಡರೆ, ವಿರೋಧಿ ಪಾಳೆಯದವರು ಈ ಶೋಆಫ್ ಬೇಕಿತ್ತಾ ಎನ್ನುವ ಅರ್ಥದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Ad Widget

ಮೋದಿ ಕೇದಾರನಾಥ ಭೇಟಿ ದೃಶ್ಯ:

Ad Widget

Ad Widget

ಎಲ್ಲಕ್ಕಿಂತ ಅಚ್ಚರಿ ಎಂದರೆ ಸೋಷಿಯಲ್ ಮೀಡಿಯಾ ಬಳಕೆದಾರರು ಮೋದಿ ಕೇದಾರನಾಥ ಭೇಟಿ ಸಂದರ್ಭದ ವಿಡಿಯೋಗಳಲ್ಲಿ ಮೋದಿ ಶೂ ಧರಿಸಿರುವುದನ್ನು ಪತ್ತೆ ಹಚ್ಚಿದ್ದು, ಮೋದಿ ನಡೆ ವಿವಾದಕ್ಕೆ ಕಾರಣವಾಗಿದೆ. 

Ad Widget

Ad Widget

Ad Widget


ಒಂದು ವೇಳೆ ರಾಹುಲ್ ಗಾಂಧಿ ಈ ಕೃತ್ಯ ಎಸಗಿದ್ದರೆ ದೇಶಾದ್ಯಂತ ಅವರನ್ನು ದೇಶದ್ರೋಹಿ ಎಂಬಂತೆ ಪ್ರತಿಬಿಂಬಿಸಲಾಗುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಟೀಕಿಸಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮೋದಿ ದೇವಾಲಯ ಆವರಣದಲ್ಲಿ ಶೂ ಧರಿಸಿ ನಡೆಯುತ್ತಿರುವ ವಿಡಿಯೊ ಹಂಚಿಕೊಂಡು, ಮೋದಿ ದೇವಾಲಯದಲ್ಲಿ ಶೂ ಧರಿಸಿ ನಮಸ್ಕರಿಸುತ್ತಿದ್ದಾರೆ ಎಂದರೆ ಅದೂ ಸಂಪ್ರದಾಯವಾಗಿರಬಹುದು ಎಂದು ಟ್ವೀಟ್ ಮಾಡಿದ್ದಾರೆ. 

जय बाबा केदारनाथ 🙏

अब ‘मोदी जी’ ने परिक्रमा के दौरान रेड कार्पेट पर अगर ‘जूते पहने है’ तो शायद ये परम्परा ही रही होगी? https://t.co/YpYw8xv6Eh

ಸನ್ ಗ್ಲಾಸ್ ಧರಿಸಿ ಮೋದಿ  ಪ್ರಾರ್ಥನೆ  ಮಾಡುವ ಪೋಟೋವೂ  ವೈರಲ್ ಆಗಿದ್ದು ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ.

इस ‘महंगे चश्मे’ में बेरोजगार नजर आते है? https://t.co/SDGy1qC7fi

ಇನ್ನೊಂದು ಚಿತ್ರದಲ್ಲಿ ಕೇದಾರನಾಥ ದೇವಸ್ಥಾನದ ಒಳಗೆ ಚಪ್ಪಲಿ ಕಳಚುವ ಪೋಟೋ ಒಂದು ವೈರಲ್ ಆಗಿದ್ದು ಅದರಲ್ಲಿ ಭದ್ರತಾ ಸಿಬ್ಬಂದಿಯೂ ಮುಖ್ಯಧ್ವಾರದೊಳಗೆ ಶೂ ಧರಿಸಿದ್ದಾರೆಂದು ಕೆಲವರು ಟ್ವೀಟ್ ಮಾಡಿದ್ದಾರೆ. 

ಇದೇ ವೇಳೆ ನರೇಂದ್ರ ಮೋದಿ ಧರಿಸಿರುವುದು ಶೂ ಅಲ್ಲ, ಬಟ್ಟೆಯ ಕವಚ. ಅಲ್ಲಿನ ಚಳಿಯಲ್ಲಿ ಭಕ್ತಾದಿಗಳು ವುಲನ್ ಸಾಕ್ಸ್ ಧರಿಸುವುದು ಸಾಮಾನ್ಯ ಎಂದು ಮೋದಿ ಅಭಿಮಾನಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಈಗಷ್ಟೆ ಚಳಿಗಾಲದ ಕಾರಣದಿಂದ ಕೇದಾರನಾಥ ಪ್ರವೇಶ ನಿರ್ಬಂಧಿಸಲು ದೇವಾಲಯದ ವೆಬ್ ಸೈಟಲ್ಲಿ ಬುಕಿಂಗ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ.  

Click to comment

Leave a Reply

ಕ್ರೈಂ

Prajwal Revanna Sex Scandal: ತಕ್ಷಣ ತನಿಖೆಗೆ ಹಾಜರಾಗಿ : ಪ್ರಜ್ವಲ್ ರೇವಣ್ಣ ಹಾಗೂ ಎಚ್‌ ಡಿ ರೇವಣ್ಣ  ಮನೆಗೆ ನೋಟಿಸ್‌ ಅಂಟಿಸಿದ SIT

Ad Widget

Ad Widget

Ad Widget

Ad Widget

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಾಸಲೀಲೆ  ಪ್ರಕರಣದ ತನಿಖೆ ಕಳೆದೆರಡು ದಿನಗಳಿಂದ ಎಸ್‍ಐಟಿ ಹೆಗಲೇರಿದೆ.  ತನಿಖೆಯ ಮೂರನೇಯ ದಿನವಾದ ಇಂದು ಇಳಿದಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್  ಜಾರಿ ಮಾಡಿದ್ದಾರೆ.

Ad Widget

Ad Widget

Ad Widget

ಮಾಜಿ ಸಚಿವ ಎಚ್‌.ಡಿ ರೇವಣ್ಣ ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣರ  ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು, ಎಚ್‌ಡಿ ರೇವಣ್ಣ ಅವರು ಉತ್ತರ ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ

Ad Widget

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಹೆಣ್ಣು ಮುಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಲೈಂಗಿಕ ಆರೋಪ ಎದುರಿಸುತ್ತಿದ್ದಾರೆ. ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT)ಕ್ಕೆ ಪ್ರಕರಣದ ತನಿಖೆ ಹಸ್ತಾಂತರಿಸಿತ್ತು.

Ad Widget

Ad Widget

ಪ್ರಕರಣ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು ಐದು ಮಂದಿ ಸಂತ್ರಸ್ತರನ್ನು ಸೋಮವಾರ ವಿಚಾರಣೆ ಮಾಡಿದ್ದಾರೆ. ಎಸ್‌ ಐ ಟಿ ಒಟ್ಟು 3 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದೆ.

Ad Widget

Ad Widget

Ad Widget

ನೋಟಿಸ್‌ ನಲ್ಲಿ ಏನಿದೆ ?

ನೋಟಿಸ್ ಸಿಕ್ಕ ತಕ್ಷಣ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ಇಲ್ಲದೇ ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿಯೇ ಕಾನೂನು ಕ್ರಮದ ಎಚ್ಚರಿಕೆ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  

Continue Reading

ರಾಷ್ಟ್ರೀಯ

RBI Guidelines on Penal Interest : ಸಾಲಕ್ಕೆ ಹೆಚ್ಚುವರಿ ಬಡ್ಡಿ ಬೇಡ – ಬ್ಯಾಂಕ್ಗಳ ಆಟಾಟೋಪಕ್ಕೆ ಆರ್ಬಿಐನಿಂದ ಮೂಗುದಾರ; ಬ್ಯಾಂಕುಗಳಿಗೆ RBI ನೀಡಿದ ಖಡಕ್ ಸೂಚನೆಯೇನು ?

Ad Widget

Ad Widget

Ad Widget

Ad Widget

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್’ಗಳು ಹೆಚ್ಚಿನ ಬಡ್ಡಿದರ ವಿಧಿಸುವ ಮೂಲಕ ಗ್ರಾಹಕರಿಗೆ ಮೋಸ ಮಾಡುವುದನ್ನ ತಡೆಯಲು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಸೋಮವಾರ ಈ ಕುರಿತು ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ (NBFCs) ಸೂಚನೆಗಳನ್ನ ನೀಡಿದೆ.

Ad Widget

Ad Widget

Ad Widget

ಗ್ರಾಹಕರಿಗೆ ವಿಧಿಸುವ ಬಡ್ಡಿಯು ನ್ಯಾಯೋಚಿತ ಹಾಗೂ ಪಾರದರ್ಶಕವಾಗಿರಬೇಕು. ಈ ಕುರಿತ ನಿಮ್ಮ ಪ್ರವೃತ್ತಿ ಮತ್ತು ಅಭ್ಯಾಸಗಳನ್ನು ಪರಾಮರ್ಶಿಸಿ ಕೊಂಡು ತಿದ್ದಿಕೊಳ್ಳಿ ಎಂದು ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ.ಮಾರ್ಚ್ 31, 2023ರ ಅವಧಿಯಲ್ಲಿ ಬ್ಯಾಂಕ್ ಗಳು, ಎನ್ಬಿಎಫ್ಸಿ ಹಾಗೂ ಹೌಸಿಂಗ್ ಫೈನಾನ್ಸ್ ಕಂಪನಿಗಳ ಕಾರ್ಯಚಟುವಟಿಕೆಯನ್ನು ಆರ್ಬಿಐ ಪರಿಶೀಲಿಸಿದೆ.

Ad Widget

ಕೆಲವೊಂದುಸಾಲ ನೀಡುವ ಸಂಸ್ಥೆಗಳು, ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸುವ ಪ್ರಕರಣಗಳನ್ನ ಆರ್ಬಿಐ ಗುರುತಿಸಿದೆ. ಗ್ರಾಹಕರಿಂದ ವಿಧಿಸುವ ಬಡ್ಡಿಯು ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹಣಕಾಸು ಸಂಸ್ಥೆಗಳು ತಕ್ಷಣವೇ ತಮ್ಮ ನೀತಿಗಳನ್ನ ಪರಿಶೀಲಿಸಲು ಅರ್ ಬಿ ಐ ಆದೇಶಿಸಿಸಿದೆ.

Ad Widget

Ad Widget

ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳ ಆನ್-ಸೈಟ್ ತಪಾಸಣೆಯ ಸಂದರ್ಭ ಗ್ರಾಹಕರಿಗೆ ಬಡ್ಡಿಯನ್ನ ವಿಧಿಸುವಲ್ಲಿ ಅನ್ಯಾಯದ ಎಸಗುತ್ತಿರುವ ನಿದರ್ಶನಗಳು ಕಂಡುಬಂದಿವೆ ಎಂದು ಹೇಳಿದೆ. ಸಿಸ್ಟಮ್ ಮಟ್ಟದ ಬದಲಾವಣೆಗಳನ್ನು ಒಳಗೊಂಡಂತೆ ಸರಿಪಡಿಸುವ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು ಈ ಹಣಕಾಸು ಸಂಸ್ಥೆಗಳಿಗೆ ಆರ್ ಬಿ ಐ ಸೂಚಿಸಿ ಸುತ್ತೋಲೆ ಹೊರಡಿಸಿದೆ.

Ad Widget

Ad Widget

Ad Widget

ವಸೂಲಿ ಮಾಡಿದ ಬಡ್ಡಿಯನ್ನ ಹಿಂತಿರುಗಿಸಬೇಕು.!

ಗ್ರಾಹಕರೊಂದಿಗೆ ವ್ಯವಹರಿಸುವಾಗ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಮನೋಭಾವಕ್ಕೆ ಅನುಗುಣವಾಗಿಲ್ಲದ ಬಡ್ಡಿಯನ್ನ ವಿಧಿಸುವ ಪ್ರಮಾಣಿತವಲ್ಲದ ಅಭ್ಯಾಸಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ ಎಂದು ಆರ್ಬಿಐ ಹೇಳಿದೆ. ಅಂತಹ ಅಭ್ಯಾಸಗಳು ಬೆಳಕಿಗೆ ಬಂದರೆ, ಬ್ಯಾಂಕ್ಗಳು, ಎನ್ಬಿಎಫ್ಸಿಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ಬಡ್ಡಿಯನ್ನ ಪಾವತಿಸುವುದನ್ನ ಖಚಿತಪಡಿಸಿಕೊಳ್ಳಲು ಆರ್ಬಿಐ ಮೇಲ್ವಿಚಾರಣಾ ತಂಡಗಳು ಕ್ರಮ ಕೈಗೊಳ್ಳುತ್ತವೆ. ಇತರ ಶುಲ್ಕಗಳನ್ನ ಗ್ರಾಹಕರಿಗೆ ಮರುಪಾವತಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ವಿತರಣೆಗಾಗಿ ಕೆಲವು ಸಂದರ್ಭಗಳಲ್ಲಿ ಚೆಕ್’ಗಳನ್ನ ನೀಡುವ ಬದಲು ಆನ್ಲೈನ್ ಬ್ಯಾಂಕ್ ವರ್ಗಾವಣೆಯನ್ನ ಬಳಸಲು ಸಾಲದಾತರನ್ನ ಪ್ರೋತ್ಸಾಹಿಸುತ್ತಿದೆ.

ಪರಾಮರ್ಶೆ ಬಳಿಕ ಆರ್ಬಿಐ ಹೇಳಿದ್ದೇನು?
• ಸಾಲ ಮಂಜೂರಾದ ದಿನಾಂಕದಿಂದ ಅಥವಾ ಸಾಲ ಒಪ್ಪಂದ ಕಾರ್ಯಗತಗೊಳಿಸಿದ ದಿನಾಂಕದಿಂದ ಬಡ್ಡಿಯನ್ನು ವಿಧಿಸುವುದು ಸರಿಯಲ್ಲ. ಗ್ರಾಹಕನಿಗೆ ಸಾಲವನ್ನು ನೀಡಿದ ದಿನದ ಲೆಕ್ಕವನ್ನು ಆಧರಿಸಿ ಬಡ್ಡಿಯನ್ನು ವಿಧಿಸಲಾಗುತ್ತಿಲ್ಲ. ಚೆಕ್ ಮೂಲಕ ಸಾಲ ವಿತರಣೆ ಮಾಡುವ ಸಂದರ್ಭದಲ್ಲಿ ಚೆಕ್ನಲ್ಲಿ ನಮೂದಿಸಿರುವ ದಿನಾಂಕದಿಂದಲೇ ಬಡ್ಡಿ ವಿಧಿಸಲಾಗುತ್ತದೆ. ಆದರೆ ಗ್ರಾಹಕನಿಗೆ ಚೆಕ್ ಹಸ್ತಾಂತರವಾದ ದಿನವನ್ನು ಬಡ್ಡಿ ನಿಗದಿಗೆ ಪರಿಗಣಿಸುತ್ತಿಲ್ಲ. ಇದು ನ್ಯಾಯೋಚಿತ ಕ್ರಮವಲ್ಲ
• ತಿಂಗಳ ಅವಧಿಯಲ್ಲಿ ಸಾಲ ವಿತರಣೆ ಅಥವಾ ಮರುಪಾವತಿ ಸಂದರ್ಭದಲ್ಲಿ ಕೆಲವು ಬ್ಯಾಂಕುಗಳು ಸಾಲ ಬಾಕಿ ಇರುವ ಅವಧಿಗೆ ಮಾತ್ರ ಬಡ್ಡಿ ವಿಧಿಸುವ ಬದಲು ಇಡೀ ತಿಂಗಳಿಗೆ ಬಡ್ಡಿಯನ್ನು ವಿಧಿಸುತ್ತಿರುವುದು ಕಂಡುಬಂದಿದೆ. ಒಂದೆರಡು ದಿನ ವಿಳಂಬ ಮಾಡಿದರೆ ಬಡ್ಡಿ ವಿಳಂಬದ ಅವಧಿಯನ್ನು ಪರಿಗಣಿಸಬೇಕೇ ಹೊರತು ಇಡೀ ತಿಂಗಳಲ್ಲ.
• ಕೆಲವು ಸಂದರ್ಭಗಳಲ್ಲಿ ಬ್ಯಾಂಕುಗಳು ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಚಿತವಾಗಿ ಸಂಗ್ರಹಿಸುತ್ತಿವೆ. ಆದರೆ ಬಡ್ಡಿ ವಿಧಿಸಲು ಪೂರ್ಣ ಸಾಲದ ಮೊತ್ತವನ್ನು ಲೆಕ್ಕಹಾಕುತ್ತಿವೆ. ಇದು ಸರಿಯಲ್ಲ.
• ಕೆಟ್ಟ ಅಭ್ಯಾಸಗಳು ಬೆಳಕಿಗೆ ಬಂದಲ್ಲಿ ಸಂಬಂಧಪಟ್ಟ ಬ್ಯಾಂಕ್ಗಳು, ಎನ್ಬಿಎಫ್ಸಿ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಹೆಚ್ಚುವರಿಯಾಗಿ ವಸೂಲಿ ಮಾಡಿದ ಬಡ್ಡಿ ಹಾಗೂ ಇತರ ಶುಲ್ಕಗಳನ್ನು ಮರುಪಾವತಿಸಬೇಕು.

Continue Reading

ಬಿಗ್ ನ್ಯೂಸ್

Eshwarappa Son | ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಬೆನ್ನಲ್ಲೇ ರೆಬಲ್ ನಾಯಕ ಈಶ್ವರಪ್ಪ ಪುತ್ರನಿಂದ ತಡೆಯಾಜ್ಞೆ..!

Ad Widget

Ad Widget

Ad Widget

Ad Widget

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಲವು ಹೆಣ್ಣುಮಕ್ಕಳ ಜೊತೆ ನಡೆಸಿದ್ದ ಲೈಂಗಿಕ ಕ್ರಿಯೆಯ ವಿಡಿಯೊಗಳು ಬಹಿರಂಗಗೊಂಡು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಮಾಜಿ ಬಿಜೆಪಿ ನಾಯಕ , ಶಿವಮೊಗ್ಗದ ಬಂಡಾಯ ಅಭ್ಯರ್ಥಿ ಕೆ ಎಸ್‌ ಈಶ್ವರಪ್ಪ ಅವರ ಪುತ್ರ ಕಾಂತೇಶ್‌ (Eshwarappa Son) ಏಪ್ರಿಲ್‌ 27ರಂದು ತಮ್ಮ ಬಗ್ಗೆ ಮಾನಹಾನಿಕರ ಸುದ್ದಿ, ಫೋಟೋ ಪ್ರಕಟಿಸದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ವರದಿಯಾಗಿದೆ.

Ad Widget

Ad Widget

Ad Widget

ರಾಜಕೀಯ ಮುಖಂಡರ ಅಶ್ಲೀಲ ವಿಡಿಯೋಗಳು ಬಹಿರಂಗಗೊಳ್ಳುವುದು ಮತ್ತು ಬಹಿರಂಗಗೊಳ್ಳುವ ಸೂಚನೆ ಸಿಗುತ್ತಿದ್ದಂತೆ ಕೋರ್ಟಿನಿಂದ ತಡೆಯಾಜ್ಞೆ ತರುವುದು ಹೊಸ ಬೆಳವಣಿಗೆಯೇನಲ್ಲ. ಎಲ್ಲಾ ಪಕ್ಷದ ಹಲವು ನಾಯಕರು ತಡೆಯಾಜ್ಞೆ ತಂದಿದ್ದಾರೆ ಆದರೂ ಬಿಜೆಪಿಯ ಇಂತಹ ಬೆಳವಣಿಗೆಗಳು ಹೆಚ್ಚು ಎನ್ನಲಾಗುತ್ತಿದೆ.

Ad Widget

ಹಾಗೆಯೇ, ರಾಜಕೀಯದಲ್ಲಿ ಅಶ್ಲೀಲ ವಿಡಿಯೋ, ಆಡಿಯೊ, ಫೋಟೊಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುವುದು ಸಹಜ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading