Connect with us

ಪುತ್ತೂರು

ಅರುಣ್ ಪುತ್ತಿಲ ಮನೆ ಬಳಿ ಅಣ್ಣಾಮಲೈಗೆ ಅದ್ದೂರಿ ಸ್ವಾಗತ

Ad Widget

Ad Widget

Ad Widget

Ad Widget

ಲೋಕಸಭಾ ಚುನಾವಣೆ ಹಿನ್ನಲೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟರವರ ಪ್ರಚಾರರ್ಥವಾಗಿ ಪುತ್ತೂರಿನಲ್ಲಿ ಏ 22ರಂದು ರೋಡ್ ಶೋ ನಡೆಸಲು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆಗಮಿಸಿದ್ದು ಅವರನ್ನು ಬಿಜೆಪಿ ಮುಖಂಡ ಅರುಣ್ ಪುತ್ತಿಲರವರು ತಮ್ಮ ಮನೆ ಬಳಿ ಪೇಟ ತೊಡಿಸಿ ಶಾಲು ಹಾಕಿ ಪಟಾಕಿ ಸಿಡಿಸಿ ಸ್ವಾಗತಿಸಿದರು.

Ad Widget

Ad Widget

Ad Widget

ಕಡಬದಲ್ಲಿ ರೋಡ್ ಶೋ ಮುಗಿಸಿ ಪುತ್ತೂರಿಗೆ ಆಗಮಿಸುವ ವೇಳೆ ನರಿಮೊಗರಿನ ಅರುಣ್ ಪುತ್ತಿಲರ ಮನೆ ಬಳಿ ಅರುಣ್ ಪುತ್ತಿಲ ಹಾಗು ಬೆಂಬಲಿಗರು ಅಣ್ಣಾಮಲೈ, ಬ್ರೀಜೆಶ್ ಚೌಟ ಮತ್ತು ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

Ad Widget


ಬಳಿಕ ಅಣ್ಣಾಮಲೈ ಚೌಟ ಹಾಗು ಇತರ ನಾಯಕರು ನರಿಮೊಗರಿನ ಬಿಂದು ಪ್ಯಾಕ್ಟರಿಗೆ ತೆರಳಿ ಮತ ಯಾಚಿಸಿದರು.

Ad Widget

Ad Widget
Click to comment

Leave a Reply

ಶಿಕ್ಷಣ

Aitthappa Naik-ಅಂಬಿಕಾ ಮಹಾವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ; ಜೀವನ ಕೌಶಲ್ಯ ಕರಗತ ಮಾಡಿಕೊಳ್ಳುವುದು ಅಗತ್ಯ : ಐತ್ತಪ್ಪ ನಾಯ್ಕ್

Ad Widget

Ad Widget

Ad Widget

Ad Widget

ಪುತ್ತೂರು: ಪಠ್ಯದ ಸಂಗತಿಗಳಷ್ಟೇ ಜೀವನವನ್ನು ರೂಪಿಸುವುದಿಲ್ಲ. ಪಠ್ಯದ ಜತೆ ಜತೆಗೆ ನಾವು ಯಾವ ಬಗೆಯ ಕೌಶಲ್ಯಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಭವಿಷ್ಯಕ್ಕೆ ಪೂರಕವೆನಿಸುತ್ತದೆ. ಅನೇಕ ವಿದ್ಯಾರ್ಥಿಗಳು ಅಂಕ ಗಳಿಸುವಲ್ಲಿ ಸೋತರೂ ತಮ್ಮಲ್ಲಿರುವ ಕೌಶಲ್ಯಗಳಿಂದಾಗಿ ಬದುಕಿನಲ್ಲಿ ಯಶಸ್ಸನ್ನು ಕಂಡ ನೂರಾರು ಉದಾಹರಣೆಗಳಿವೆ. ಹಾಗಾಗಿ ಜೀವನ ಕೌಶಲಗಳ ಬಗೆಗೆ ವಿದ್ಯಾರ್ಥಿಗಳು ಗಂಭೀರವಾಗಿ ಆಲೋಚಿಸಬೇಕು ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ಐತ್ತಪ್ಪ ನಾಯ್ಕ್ ಹೇಳಿದರು.

Ad Widget

Ad Widget

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪರ್ಸನಲ್ ಡೆವೆಲಪ್‌ಮೆಂಟ್ ಅಂಡ್ ಲೈಫ್ ಸ್ಕಿಲ್ಸ್ ಎಂಬ ವಿಷಯದ ಮೇಲೆ ಹದಿನಾರು ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ಸರ್ಟಿಫಿಕೇಟ್ ಕೋಸ್ ಅನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

Ad Widget

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಅವಕಾಶಗಳನ್ನು ಬಳಸಿಕೊಳ್ಳುವುದು ಜಾಣತನವೆನಿಸುತ್ತದೆ. ಬದುಕಿನ ವಿವಿಧ ಘಟ್ಟಗಳಲ್ಲಿ ಒಂದಿಲ್ಲೊAದು ಅವಕಾಶಗಳು ನಮ್ಮ ಎದುರಾಗುತ್ತವೆ. ಆದರೆ ಅಂತಹ ಅವಕಾಶಗಳನ್ನು ಅವಜ್ಞೆಯ ಕಾರಣಕ್ಕಾಗಿ ನಾವು ಕಳೆದುಕೊಳ್ಳುತ್ತಾ ಬರುತ್ತೇವೆ. ಜೀವನದ ಸಂಧ್ಯಾಕಾಲದಲ್ಲಿ ಕುಳಿತು ಹಿನ್ನೋಟಗೈದಾಗ ಕಳೆದುಕೊಂಡ ಅವಕಾಶಗಳ ಬಗೆಗೆ ಖಿನ್ನರಾಗುವ ಸ್ಥಿತಿ ಒದಗಿಬರುತ್ತದೆ. ಆದ್ದರಿಂದ ಅವಕಾಶ ದೊರೆತಾಗಲೆಲ್ಲಾ ಬಾಚಿಕೊಳ್ಳುವುದಕ್ಕೆ ನಾವು ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.

Ad Widget

Ad Widget

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್.ನಟ್ಟೋಜ, ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಮಯ್ಯಾಳ ಪ್ರಾರ್ಥಿಸಿ, ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು. ವಿದ್ಯಾರ್ಥಿನಿ ದೀಪ ಸ್ವಾಗತಿಸಿ, ಸ್ಪೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

Ad Widget

Ad Widget

Ad Widget

ಸರ್ಟಿಫಿಕೇಟ್ ಕೋರ್ಸ್ : ವಿದ್ಯಾರ್ಥಿಗಳ ರಜಾ ಅವಧಿಯ ಸದ್ಬಳಕೆಗೆ ಈ ಸರ್ಟಿಫಿಕೇಟ್ ಕೋರ್ಸ್ ಅತ್ಯಂತ ಉಪಯೋಗಿ. ಜೀವನಕ್ಕೆ ಬೇಕಾದ ಎಲ್ಲಾ ಕೌಶಲಗಳನ್ನು ಈ ಸರ್ಟಿಫಿಕೇಟ್ ಕೋರ್ಸ್ ಒದಗಿಸಿಕೊಡುತ್ತದೆ. ಸಂವಹನ ಕಲೆ, ಇಂಗ್ಲಿಷ್ ಸಂವಹನ, ಕಾನೂನು ಜ್ಞಾನ, ಒತ್ತಡ ನಿರ್ವಹಣಾ ತಂತ್ರಗಾರಿಕೆ, ನಾಯಕತ್ವ ಗುಣ, ಬ್ಯಾಂಕಿAಗ್ ಜ್ಞಾನ, ಬರವಣಿಗೆ ಕಲೆಯೇ ಮೊದಲಾದ ಹತ್ತು ಹಲವು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಇಲ್ಲಿ ಕಲಿಸಿಕೊಡಲಾಗುತ್ತದೆ. ಪ್ರತಿಯೊಂದು ವಿಭಾಗದಲ್ಲೂ ಚಟುವಟಿಕೆ, ಪ್ರಾಯೋಗಿಕ ಪಾಠದ ಮೂಲಕವೇ ಎಲ್ಲವನ್ನೂ ಹೇಳಿಕೊಡುವುದರಿಂದ ವಿದ್ಯಾರ್ಥಿಗಳ ಒಟ್ಟು ವ್ಯಕ್ತಿತ್ವ ಹಾಗೂ ಜ್ಞಾನದ ಮೇಲೆ ಈ ಸರ್ಟಿಫಿಕೇಟ್ ಕೋರ್ಸ್ ಪರಿಣಾಮ ಮಾಡಲಿದೆ.

ಪತ್ರಿಕೋದ್ಯಮ, ಭಾಷೆ, ಮನಃಶಾಸ್ತç, ವಾಣಿಜ್ಯ ಹಾಗೂ ಕಾನೂನು ವಿಷಯಗಳಿಂದ ನಿತ್ಯ ಬದುಕಿಗೆ ಅನಿವಾರ್ಯವಾದ ಸಂಗತಿಗಳನ್ನು ಆಯ್ದು ಈ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಪಠ್ಯಕ್ರಮವಾಗಿ (ಸಿಲಬಸ್) ಅಳವಡಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಔದ್ಯೋಗಿಕ ಬದುಕಿಗೂ ಈ ಕಲಿಕೆ ಪೂರಕವೆನಿಸಲಿದೆ. ಉದ್ಯೋಗ ಜಗತ್ತಿಗೆ ಕಾಲಿಡುವಾಗ ಸಂದರ್ಶನವನ್ನು ಎದುರಿಸಬೇಕಾದ ಬಗೆಗಳ ಕುರಿತೂ ಇಲ್ಲಿ ಪ್ರಾಯೋಗಿಕ ಪಾಠವಿದೆ. ಸಮೂಹ ಚರ್ಚೆಯಲ್ಲಿ ಭಾಗವಹಿಸಬೇಕಾದ ವಿಧಾನದ ಬಗೆಗೂ ತಿಳುವಳಿಕೆ ನೀಡಲಾಗುತ್ತದೆ.

ವರದಿಗಾರಿಕೆ, ವೀಡಿಯೋ ಎಡಿಟಿಂಗ್, ರೀಲ್ಸ್ ತಯಾರಿಯಂತಹ ಆಕರ್ಷಕ ವಿಚಾರಗಳನ್ನೂ ಈ ಕೋರ್ಸ್ ತಿಳಿಸಿಕೊಡುತ್ತದೆ. ಸಣ್ಣ ಸಣ್ಣ ಕುತೂಹಲಭರಿತ ವೀಡಿಯೋಗಳನ್ನು ಮಾಡಿ ಯೂಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿ, ಸಣ್ಣ ಮಟ್ಟಿನ ಆದಾಯ ಗಳಿಸುವ ಕಲೆಯನ್ನು ಈ ಕೋರ್ಸ್ ಹೇಳಿಕೊಡಲಿದೆ. ಶೇರು ಮಾರುಕಟ್ಟೆಯ ಬಗೆಗಿನ ಕನಿಷ್ಟ ಜ್ಞಾನವನ್ನು ಇದು ನೀಡಲಿದೆ.

ಎಸ್.ಎಸ್.ಎಲ್.ಸಿ ಅಥವ ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ ಅಧ್ಯಯನ ನಡೆಸುತ್ತಿರುವವರು ಈ ಕೋರ್ಸ್ಗೆ ಹಾಜರಾಗಬಹುದು. ಇನ್ನು ಕೆಲವು ಅವಕಾಶಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು ಆಸಕ್ತರು 9449102080 ಸಂಖ್ಯೆಗೆ ಕರೆ ಮಾಡಿ ದಾಖಲಾತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

Continue Reading

ಶಿಕ್ಷಣ

Prof. P.L. Dharma-ವಿವೇಕಾನಂದ ಪದವಿ ಕಾಲೇಜಿನಲ್ಲಿ ಸಪ್ತಪರ್ಣೋತ್ಸವ-ವಿದ್ಯಾರ್ಥಿ ಸಂಘದ ದಿನಾಚರಣೆ; ದೇಶದ ಮುಂದಿನ ಭವಿಷ್ಯದ ರೂವಾರಿಗಳು ನಮ್ಮ ವಿದ್ಯಾರ್ಥಿಗಳು – ಪ್ರೊ. ಪಿ.ಎಲ್. ಧರ್ಮ

Ad Widget

Ad Widget

Ad Widget

Ad Widget

ಪುತ್ತೂರು, ಮೇ.3: ವಿವೇಕಾನಂದ ಕಾಲೇಜು ಹಲವಾರು ವರ್ಷಗಳಿಂದ ವಿವಿಧ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದೆ. ಪ್ರಸ್ತುತ ಸ್ವಾಯತ್ತ ಸಂಸ್ಥೆಯಾಗಿ ಮುನ್ನಡೆಯುತ್ತಿದೆ.ಕಾಲೇಜು ಈಗಾಗಲೇ ಬೆಳವಣಿಗೆ ಹೊಂದಿ, ಇನ್ನು ಹೊಸ ಹೊಸ ಪ್ರಯೋಗ ಗಳನ್ನು ಕಾಲೇಜು ಮಾಡಬೇಕಿದೆ ಜೊತೆಗೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಶಿಸ್ತು,ಉತ್ತಮ ಮೌಲ್ಯಗಳಿವೆ. ವಿದ್ಯಾರ್ಥಿ ಮತ್ತು ಅಧ್ಯಾಪಕ ಪರಂಪರೆಯನ್ನು ಬೆಳೆಯಬೇಕು. ಇಂದಿನ ವಿದ್ಯಾರ್ಥಿ ಸಮೂಹವೇ ನಮ್ಮ ದೇಶದ ಮುಂದಿನ ಭವಿಷ್ಯದ ರೂವಾರಿಗಳು .ಆದ್ದರಿಂದ ನಾವೆಲ್ಲರು ಒಗ್ಗಟ್ಟಾಗಿ ಶ್ರಮಿಸಬೇಕು. ಪರಸ್ಪರ ಗೌರವ ಕೊಡುವುದನ್ನು ಬೆಳೆಸಿಕೊಳ್ಳೋಣ ಎಲ್ಲರಲ್ಲೂ ಸಮಾನತೆ ಕಾಣೋಣ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್ ಧರ್ಮ ಹೇಳಿದರು.

Ad Widget

Ad Widget

Ad Widget

ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ನಡೆದ ಸಪ್ತಪರ್ಣೊತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಅಧ್ಯಕ್ಷೀಯಮಾತುಗಳನ್ನಾಡಿ,ಹೊಸ ಚಿಂತನೆ ಹೊಸ ಕಲ್ಪನೆಯೊಂದಿಗೆ ಹಳೆಯ ಆಚರಣೆಗಳು ಮುನ್ನೆಲೆಗೆ ಬರಬೇಕು. ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ. ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ವಿಶೇಷ ಚೈತನ್ಯ ಇವರಲ್ಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗೋಣ ಎಂದು ಹೇಳಿದರು.

Ad Widget

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ,ಇಂದು ವಿದ್ಯಾರ್ಥಿಗಳು ಶಿಕ್ಷಣವಂತರಾಗುತ್ತಿದ್ದಾರೆ, ಆದರೆ ನಮ್ಮ ಮುಂದಿರುವ ಸಮಸ್ಯೆ ಅವರನ್ನು ಉದ್ಯೋಗಸ್ಥರನ್ನಾಗಿ ಮಾಡುವುದು. ವಿದ್ಯಾರ್ಥಿಗಳ ಮುಂದೆ ನಮ್ಮ ಆಚರಣೆ, ಸಂಪ್ರದಾಯ, ಮತ್ತು ಸಂಸ್ಕೃತಿಯನ್ನು ಉಳಿಸಿ ಅದನ್ನು ಮುಂದುವರಿಸುವ ದೊಡ್ಡ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.

Ad Widget

Ad Widget

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀ ಕೃಷ್ಣ ಕೆ.ಎನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ,ಕ್ರೀಡಾಕೂಟಗಳಲ್ಲಿ ವಿಜೇತರಾದ ಮತ್ತು ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾಲೇಜಿನ ಈ ಬಾರಿಯ ವಿದ್ಯಾರ್ಥಿ ಸಂಘದ ವರದಿಯನ್ನು ತೃತೀಯ ಬಿಕಾಂ ವಿದ್ಯಾರ್ಥಿ ಪವನ್ ರಾಜ್ ವಾಚಿಸಿದರು.

Ad Widget

Ad Widget

Ad Widget

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್, ಆಡಳಿತ ಮಂಡಳಿಯ ಖಜಾಂಜಿ ಎಂ.ಶ್ರೀನಿವಾಸ ಸಾಮಂತ, ಆಡಳಿತ ಮಂಡಳಿಯ ಸದಸ್ಯರುಗಳಾದ ಜಗನ್ನಾಥ ಎ, ಶುಭ ಅಡಿಗ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಹೆಚ್. ಜಿ ಶ್ರೀಧರ್, ಕಾಲೇಜಿನ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಸ್ ಸ್ವಾಗತಿಸಿ,ಜೊತೆ ಕಾರ್ಯದರ್ಶಿ ಅನಿಷಾ ಎಮ್.ಎನ್ ವಂದಿಸಿ, ದ್ವಿತೀಯ ಎಂಕಾA ವಿದ್ಯಾರ್ಥಿನಿ ಸ್ವಾತಿ. ಎನ್ ಹಾಗೂ ತೃತೀಯ ಬಿಕಾಂ ವಿದ್ಯಾರ್ಥಿನಿ ಕೀರ್ತನಾ ನಿರ್ವಹಿಸಿದರು.

ಈ ಸಂದರ್ಭದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ಪ್ರಥಮ ಬಿಎ ಯ ಸುಬ್ರಮಣ್ಯ ಇವರನ್ನು ಅಭಿನಂದಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್ ಧರ್ಮ ಅವರನ್ನು ಕಾಲೇಜು ಪರವಾಗಿ ಮತ್ತು ವಿವೇಕಾನಂದ ಬಿ. ಎಡ್ ಕಾಲೇಜು ಪರವಾಗಿ ಸನ್ಮಾನಿಸಲಾಯಿತು ಮತ್ತು ವಿಶೇಷ ಸಾಧನೆ ಮಾಡಿದ ಕಾಲೇಜಿನ ಉಪನ್ಯಾಸಕರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Continue Reading

ಅಪರಾಧ

Suspension order-ಪುತ್ತೂರು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ದೊರೆತು ಕರ್ತವ್ಯಕ್ಕೆ ತೊಡಗಿದ ಬೆನ್ನಲ್ಲೇ ಅಮಾನತು ಆದೇಶ

Ad Widget

Ad Widget

Ad Widget

Ad Widget

ಪುತ್ತೂರು ಎಪಿಎಂಸಿಯ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು, ಕರ್ನಾಟಕ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಂ.ಗಂಗಾಧರ ಸ್ವಾಮಿ ಅವರು ಸೇವೆಯಿಂದ ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ. ಗುರುವಾರ ಬೆಳಿಗ್ಗೆ ವರ್ಗಾವಣೆ ವಿರುದ್ಧ ಕೆಎಟಿಯಿಂದ ತಡೆಯಾಜ್ಞೆ ತಂದು ಕರ್ತವ್ಯಕ್ಕೆ ಹಾಜರಾಗಿದ್ದ ರಾಮಚಂದ್ರ ಅವರಿಗೆ ಮಧ್ಯಾಹ್ನ ವೇಳೆ ಅಮಾನತು ಆದೇಶ ನೀಡಲಾಗಿದೆ.

Ad Widget

Ad Widget

Ad Widget

‘ರಾಮಚಂದ್ರ ಅವರು ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪರವಾನಗಿ ನೀಡದೆ ಇರುವುದರಿಂದ ವ್ಯಾಪಾರದಲ್ಲಿ ನಷ್ಟ ಆಗಿದೆ’ ಎಂದು ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ಜ. 4ರಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

Ad Widget

ಈ ದೂರಿನ ತನಿಖೆಗಾಗಿ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಈ ಮಧ್ಯೆ ರಾಮಚಂದ್ರ ಅವರನ್ನು ಜ.16ರಿಂದ 2 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಆದೇಶ ಮಾಡಿದ್ದರು. ಈ ನಡುವೆ ರಾಮಚಂದ್ರ ಅವರ ವಿರುದ್ಧದ ದೂರಿನ ಕುರಿತು ಇಲಾಖಾ ವಿಚಾರಣೆ ನಡೆಸಲು ಆಡಳಿತಾತ್ಮಕ ದೃಷ್ಟಿಯಿಂದ ಅವರನ್ನು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖಾಲಿ ಇದ್ದ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ವರ್ಗಾಯಿಸಿ ಕೃಷಿ ಮಾರಾಟ ಇಲಾಖೆ ಆದೇಶ ಮಾಡಿತ್ತು. ರಾಮಚಂದ್ರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಕೇಂದ್ರ ಕಚೇರಿಗೆ ವರದಿ ಸಲ್ಲಿಸಲು ಪುತ್ತೂರು ಎಪಿಎಂಸಿ ಸಮಿತಿ ಕಾರ್ಯದರ್ಶಿಗೆ ಸೂಚಿಸಲಾಗಿತ್ತು.

Ad Widget

Ad Widget

ರಾಮಚಂದ್ರ ಅವರು ರಾಯಚೂರಿನಲ್ಲಿ ಕರ್ತವ್ಯಗೆ ಹಾಜರಾಗದೆ ವರ್ಗಾವಣೆ ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಕ್ಕೆ (ಕೆಎಟಿಗೆ) ದೂರು ಸಲ್ಲಿಸಿದ್ದರು. ಕೆಎಟಿ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಗುರುವಾರ ಬೆಳಿಗ್ಗೆ ಅವರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಕರ್ತವ್ಯಕ್ಕೆ ಹಾಜರಾಗಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಅಮಾನತು ಆದೇಶ ಬಂದಿದೆ.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading