Connect with us

ಸಾಮಾಜಿಕ ಮಾಧ್ಯಮ

Mani Balavikash Girl-ಮತದಾನ ಜಾಗೃತಿ ಮೂಡಿಸಲು ಅವಕಾಶ ಮಾಣಿ ಬಾಲವಿಕಾಸ ಬಾಲಕಿಯಿಂದ ಚುನಾವಣಾ ಆಯೋಗಕ್ಕೆ ಪತ್ರನಿಯಮಾನುಸಾರ ಕ್ರಮಕ್ಕೆ ಡಿಸಿ, ಜಿ.ಪಂ. ಸಿಇಒಗೆ ಆಯೋಗ ಸೂಚನೆ

Ad Widget

Ad Widget

Ad Widget

Ad Widget

ವಿಟ್ಲ : ಮತದಾನ ಜಾಗೃತಿಯ ಹಿನ್ನೆಲೆಯಲ್ಲಿ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ಸನ್ನಿಧಿ ಎಲ್.ಎಸ್.‌ ರವರು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಆಯೋಗ ಪುರಸ್ಕರಿಸಿದೆ. ಸನ್ನಿಧಿಯವರು ಕಳುಹಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಆಯೋಗ ಮುಖ್ಯಕಾರ್ಯನಿರ್ವಾಹಕಣಾಧಿಕಾರಿಗೆ ಆದೇಶಿಸಿದೆ.

Ad Widget

Ad Widget

Ad Widget

ಬಾಲಕಿಯು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ತನ್ನ ಸ್ನೇಹಿತರ ಜತಗೂಡಿ ಬಾಳ್ತಿಲ ಭಾಗದಲ್ಲಿ ಮತದಾನದ ಕುರಿತು ಜಾಗೃತಿಯ ಕಾರ್ಯ ಮಾಡಿದ್ದರು. ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭ 100 ಶೇ ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ತಾವು ದ.ಕ. ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸನ್ನಿಧಿ ವಿವರಿಸಿದ್ದರು.

Ad Widget

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಅರಿವು ಹಾಗೂ ಜಾಗೃತಿ ಕೈಗೊಳ್ಳಲು ಸ್ವೀಪ್‌ ಕಾರ್ಯಕ್ರಮಗಳಲ್ಲಿ, ಸನ್ನಿಧಿಯವರ ಪ್ರಸ್ತಾವನೆಯನ್ನು ಪರಿಶೀಲಿಸಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರು ದ.ಕ. ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಡಿಸಿಯವರು ಹಾಗೂ ಜಿಲ್ಲಾ ಸ್ವೀಪ್‌ನ ನೋಡೆಲ್‌ ಅಧಿಕಾರಿಯಾಗಿರುವ ಜಿ.ಪಂ.ಸಿಇಒಗೆ ಪತ್ರ ಬರೆದಿದ್ದಾರೆ.

Ad Widget

Ad Widget

ಚುನಾವಣೆಯ ಸಂದರ್ಭ ಯಾವುದೇ ರಾಜಕೀಯ ವ್ಯಕ್ತಿ ಮತ್ತು ಪಕ್ಷದ ಪರವಾಗಿರದೆ ಹಮ್ಮಿಕೊಳ್ಳುವಂತೆ ಅಗತ್ಯ ಸಲಹೆ ಮತ್ತು ಸಹಕಾರವನ್ನು ನೀಡಲು ಸನ್ನಿಧಿ ಎಲ್.ಎಸ್.‌ರವರ ಪ್ರಸ್ತಾವನೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಧು ಎ.ಸಿ. ಅವರು ಪತ್ರ ಬರೆದು ಆದೇಶಿಸಿದ್ದಾರೆ.

Ad Widget

Ad Widget

Ad Widget

ಜಿಲ್ಲಾಧಿಕಾರಿಯವರಿಂದ ಸನ್ಮಾನ : ಮತದಾನ ಜಾಗೃತಿ ಮೂಡಿಸುತ್ತಿರುವ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಕಶೆಕೋಡಿ ಅವರನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಕಚೇರಿಯಲ್ಲಿ ಸಮ್ಮಾನಿಸಿದರು.

ಸನ್ನಿಧಿ ಕಶೆಕೋಡಿ ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದಿಂದ ಶಹಬ್ಬಾಸ್‌ಗಿರಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಯವರು ಸನ್ನಿಧಿಯವರನ್ನು ತಮ್ಮ ಕಛೇರಿಗೆ ಆಹ್ವಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸನ್ನಿಧಿ ಜತೆ ಕೆಲಕಾಲ ಮಾತುಕತೆ ನಡೆಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಈ ವೇಳೆ ಸನ್ನಿಧಿಯ ಪೋಷಕರು ಹಾಗೂ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಉಪಸ್ಥಿತರಿದ್ದರು.

Click to comment

Leave a Reply

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

ಸಾಮಾಜಿಕ ಮಾಧ್ಯಮ

Dhruv Rathee | ಕನ್ನಡ ಸೇರಿ ಪಂಚಭಾಷೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ

Ad Widget

Ad Widget

Ad Widget

Ad Widget

ಹೊಸದಿಲ್ಲಿ: ರಾಜಕೀಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಶ್ಲೇಷಕ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಅವರು ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

Ad Widget

Ad Widget

Ad Widget

ಖ್ಯಾತ ಯೂಟ್ಯೂಬ‌ರ್ ಧ್ರುವ್ ರಾಠಿ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ್ದ ಯೂಟ್ಯೂಬ್ ವಿಡಿಯೋಗಳು ಭಾರೀ ವೈರಲ್ ಆಗಿ ದೇಶದಾದ್ಯಂತ ಚರ್ಚೆಯಾಗಿದೆ. ತನ್ನ ವಿಡಿಯೋ ಎಲ್ಲಾ ಭಾಷಿಕರಿಗೆ ತಲುಪುವಂತೆ ಮಾಡಲು ಧ್ರುವ್ ರಾಠಿ ಈಗ ಕನ್ನಡ ಸಹಿತ ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್‌ ಆರಂಭಿಸಿದ್ದಾರೆ.

Ad Widget

ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆ ಗೆಲ್ಲಲು ವಿರೋಧ ಪಕ್ಷಗಳನ್ನು ಹೇಗೆ ಕಟ್ಟಿ ಹಾಕಿದೆ?. ದೇಶದ ಉನ್ನತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಸವಿವರವಾದ ವಿಡಿಯೋ ಬಿಡುಗಡೆಗೊಳಿಸಿದ್ದರು. ಅಲ್ಲದೇ ಚುನಾವಣಾ ಬಾಂಡ್ ಕುರಿತ ವಿಡಿಯೋ ಕೂಡ ಮಾಡಿದ್ದು, ಮೋದಿ ಸರ್ವಾಧಿಕಾರಿಯೇ ಎಂಬ ಕೂಡ ಕೋಟಿ ವೀಕ್ಷಣೆ ಕಂಡಿದೆ. ಇದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿತ್ತು. ಇವರ ಎಲ್ಲಾ ವೀಡಿಯೋಗಳು ಮಿಲಿಯನ್ ಗಟ್ಟಲೆ ವ್ಯೂವ್ಸ್ ಕಾಣುತ್ತಿದೆ.

Ad Widget

Ad Widget

ಚುನಾವಣಾ ಬಾಂಡ್‌ಗಳು ರಾಜಕೀಯ ನಾಯಕರ ಬಂಧನಕ್ಕೆ ಹೇಗೆ ಕಾರಣವಾಗಿದೆ ಎನ್ನುವುದನ್ನು ಸಾಕಷ್ಟು ಆಧಾರಗಳೊಂದಿಗೆ ತಮ್ಮ ವಿಡಿಯೋದಲ್ಲಿ ಮಾಹಿತಿ ನೀಡಿದ್ದರು. ನಂತರ ಹಲವು ಬಲಪಂಥೀಯರು ಧ್ರುವ್ ರಾಠಿ ಅವರನ್ನು ಗುರಿಯಾಗಿರಿಸಿದ್ದರು.

Ad Widget

Ad Widget

Ad Widget

ಇದೀಗ ಅವರು ಎಐ ತಂತ್ರಜ್ಞಾನದ ಮೂಲಕ ಕನ್ನಡ ಸೇರಿ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಧ್ರುವ್ ರಾಠಿ, “ತಮಿಳು, ತೆಲುಗು, ಬೆಂಗಾಳಿ, ಕನ್ನಡ, ಮರಾಠಿ ಸೇರಿ ಇಂದು 5 ಭಾರತೀಯ ಭಾಷೆಗಳಲ್ಲಿ ನನ್ನ ವಿಡಿಯೋ ಬಿಡುಗಡೆಯಾಗಿದೆ. ಈ ರಾಜ್ಯಗಳ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರಮುಖ ವೀಡಿಯೊ ಈಗಾಗಲೇ ಈ ಚಾನಲ್‌ಗಳಲ್ಲಿ ಲೈವ್ ಆಗಿದೆ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Continue Reading

ಸಾಮಾಜಿಕ ಮಾಧ್ಯಮ

New calculation-ಇಂದಿನಿಂದ ಹಣಕಾಸು ದುನಿಯಾ ಬದಲು: ಇನ್ನೇನಿದ್ದರೂ ಹೊಸ ಲೆಕ್ಕ; ಹಲವು ಬದಲಾವಣೆ

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಏ. 1 ಸೋಮವಾರದಿಂದ ಹೊಸ ವಿತ್ತ ವರ್ಷಆರಂಭವಾಗಲಿದ್ದು ಹಲವು ಬದಲಾವಣೆಗಳಿಗೆ ನಾಂದಿ ಹಾಡಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಪಿಎಫ್ಒ, ಫಾಸ್ಟ್ ಟ್ಯಾಗ್ ಇತ್ಯಾದಿಗಳ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಹೀಗಾಗಿ ಯಾವುದಕ್ಕೆಲ್ಲಾ ಸೇವಾ ಶುಲ್ಕ ಏರಿಕೆಯಾಗಲಿದೆ? ಯಾವುದಕ್ಕೆಲ್ಲಾ ಇಳಿಕೆ? ಯಾವುದಕ್ಕೆ ಅನುಕೂಲ? ಯಾವ ಸಂಗತಿ ನಿಮ್ಮ ಜೇಬಿಗೆ ಕತ್ತರಿ ತಂದು ಹಾಕಲಿದೆ ಎಂಬಿದ್ಯಾತಿಗಳ ಬಗ್ಗೆ ಇಲ್ಲಿದೆ ಮಾಹಿತಿ.

Ad Widget

Ad Widget

Ad Widget

ಎಸ್‌ಬಿಐ ಡೆಬಿಟ್‌ ಕಾರ್ಡ್‌ ಶುಲ್ಕ ಹೆಚ್ಚಳ
ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಡೆಬಿಟ್‌ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು ಸುಮಾರು 75 ರೂ. ಹೆಚ್ಚಿಸಿದೆ. ಈ ಶುಲ್ಕಗಳು ಏ. 1ರಿಂದ ಜಾರಿಗೆ ಬರಲಿವೆ. ಇದಲ್ಲದೆ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೂ ಆಘಾತ ನೀಡಿದ್ದು, ಬಾಡಿಗೆ ಪಾವತಿಗೆ ಏ. 1ರ ನಂತರ ರಿವಾರ್ಡ್‌ ಪಾಯಿಂಟ್‌ ಲಭ್ಯವಿರುವುದಿಲ್ಲ. ಇದು ಔರಮ್‌, ಎಸ್‌ಬಿಐ ಕಾರ್ಡ್‌ ಎಲೈಟ್‌, ಎಸ್‌ಬಿಐ ಕಾರ್ಡ್‌ ಪಲ್ಸ್‌, ಎಸ್‌ಬಿಐ ಕಾರ್ಡ್‌ ಎಲೈಟ್‌ ಅಡ್ವಾಂಟೇಜ್‌ ಮತ್ತು ಸಿಂಪ್ಲಿ ಸೇವ್‌ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.

Ad Widget

ಕಾರುಗಳ ದರ
ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ತನ್ನ ಆಯ್ದ ಮಾಡೆಲ್‌ಗಳ ದರವನ್ನು ಶೇ.1ರಷ್ಟು ಹೆಚ್ಚಿಸಿದೆ. ಕಳೆದ ಜನವರಿಯಲ್ಲಷ್ಟೇ ದರ ಏರಿಕೆಯಾಗಿತ್ತು. ಕಿಯಾ ಇಂಡಿಯಾ ಏಪ್ರಿಲ್‌ 1ರಿಂದ ತನ್ನ ವಾಹನಗಳ ದರವನ್ನು ಶೇ.3ರಷ್ಟು ಏರಿಕೆ ಮಾಡಿದೆ.

Ad Widget

Ad Widget

ಔಷಧಗಳು
ಭಾರತೀಯ ಔಷಧಿ ಬೆಲೆ ನಿಯಂತ್ರಣ ಪ್ರಾಧಿಕಾರವು ರಾಷ್ಟ್ರೀಯ ಅಗತ್ಯ ಔಷಧಿಗಶಳ ಪಟ್ಟಿ (ಎನ್‌ಎಲ್‌ಇಎಂ)ಯ ಅಡಿಯಲ್ಲಿ ಕೆಲವು ಅಗತ್ಯ ಔಷಧಿಗಳ ಬೆಲೆಗಳಲ್ಲಿ ವಾರ್ಷಿಕ ಶೇ. 0.0055ರಷ್ಟು ಹೆಚ್ಚಳವನ್ನು ಘೋಷಿಸಿದೆ. ಇದರಿಂದ ನೋವು ನಿವಾರಕಗಳು, ಇಮ್ಯೂನಿಟಿ ಬೂಸ್ಟರ್‌ ಮತ್ತು ಸೋಂಕು ನಿವಾರಕ ಔಷಧಿಗಳು ಸೇರಿದಂತೆ ಅನೇಕ ಅಗತ್ಯ ಔಷಧಿಗಳ ಬೆಲೆಗಳು ಏ. 1 ರಿಂದ ಹೆಚ್ಚಲಿವೆ. ಕಳೆದ ವರ್ಷ ಶೇ.12, ಇದರ ಹಿಂದಿನ 2022ರಲ್ಲಿ ಶೇ.10ರಷ್ಟು ದರ ಏರಿಕೆಯಾಗಿತ್ತು.
ಪ್ಯಾರಸಿಟಮಾಲ್‌, ಅಜಿಥ್ರೊಮೈಸಿನ್‌, ವಿಟಮಿನ್‌ಗಳು, ಮಿನರಲ್‌ಗಳು, ಕೋವಿಡ್‌-19 ಅನ್ನು ಎದುರಿಸುವ ಔಷಧಗಳೂ ಮತ್ತು ಸ್ಟೀರಾಯ್ಡ್‌ಗಳೂ ಸೇರಿದಂತೆ 800 ಔಷಧಗಳ ದರದಲ್ಲಿ ಅಲ್ಪ ಏರಿಕೆಯಾಗಲಿದೆ.

Ad Widget

Ad Widget

Ad Widget

ಅಮೆರಿಕ ವೀಸಾ
ಬಹಳ ಅಗತ್ಯದ ಎಚ್‌-1ಬಿ, ಎಲ್‌-1 ಮತ್ತು ಇಬಿ-5 ಸೇರಿದಂತೆ ಅಮೆರಿಕದ ವೀಸಾ ಶುಲ್ಕಗಳು ಏರಿಕೆಯಾಗಲಿವೆ.

ಫಾಸ್ಟ್‌ಟ್ಯಾಗ್‌ನ ಹೊಸ ನಿಯಮ
ಏ. 1ಕ್ಕೂ ಮೊದಲು ಫಾಸ್ಟ್‌ಟ್ಯಾಗ್‌ ಕೆವೈಸಿ ಅನ್ನು ಅಪ್‌ಡೇಟ್‌ ಮಾಡುವಂತೆ ಎನ್‌ಎಚ್‌ಎಐ ಸೂಚನೆ ನೀಡಿದೆ. ಒಂದೊಮ್ಮೆ ಕೆವೈಸಿ ಮಾಡಲು ವಿಫಲವಾದರೆ ನಿಮ್ಮ ಫಾಸ್ಟ್‌ಟ್ಯಾಗ್‌ ಖಾತೆ ನಿಷ್ಕ್ರಿಯವಾಗಲಿದೆ. ನಂತರ ನಿಮ್ಮ ಖಾತೆಯಲ್ಲಿ ಹಣವಿದ್ದರೂ, ನಿಮ್ಮ ಟೋಲ್‌ ಪಾವತಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಕೆವೈಸಿ ಮಾಡಿಸದಿ ದ್ದವರು ಹೆದ್ದಾರಿಯಲ್ಲಿ ದುಪ್ಪಟ್ಟು ಟೋಲ್ ಕಟ್ಟಬೇಕಾಗುತ್ತದೆ.

ಮ್ಯೂಚುವಲ್‌ ಫಂಡ್‌
ಮ್ಯೂಚುವಲ್‌ ಫಂಡ್‌ಗಳಿಗೂ ಕೆವೈಸಿ ಏ.1ರಿಂದ ಕಡ್ಡಾಯವಾಗಲಿದೆ. ಯಾರು ಕೆವೈಸಿ ಮಾಡಿಸಿಲ್ಲವೋ ಅವರ ಎಂಎಫ್‌ ವಹಿವಾಟುಗಳು ಸ್ಥಗಿತಗೊಳ್ಳಲಿವೆ.

ವಿಮೆ ಪಾಲಿಸಿ ಡಿಜಿಟಲೀಕರಣ ಕಡ್ಡಾಯ
ಏ.1ರಿಂದ ವಿಮಾ ಪಾಲಿಸಿಗಳ ಡಿಜಿಟಲೀಕರಣ ಕಡ್ಡಾಯವಾಗಲಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ. ಇದರ ಅಡಿ ಜೀವ, ಆರೋಗ್ಯ ಮತ್ತು ಸಾಮಾನ್ಯ ವಿಮೆ ಸೇರಿದಂತೆ ವಿವಿಧ ವರ್ಗಗಳ ಎಲ್ಲಾ ವಿಮಾ ಪಾಲಿಸಿಗಳನ್ನು ವಿದ್ಯುನ್ಮಾನವಾಗನ ನೀಡಲಾಗುವುದು.

ಏ 1ರಿಂದ ವಿಮಾ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಐಆರ್‌ಡಿಎಐ ನಿಯಮಗಳನ್ನು ಬದಲಾಯಿಸುವ ಮೂಲಕ ಸರೆಂಡರ್‌ ಮೌಲ್ಯದ ನಿಯಮಗಳನ್ನು ಬದಲಾಯಿಸಿದೆ. ಇನ್ನು ಮುಂದೆ ಗ್ರಾಹಕರು ಪಾಲಿಸಿಯನ್ನು ಎಷ್ಟು ತಡವಾಗಿ ಸರೆಂಡರ್ …ಮಾಡುತ್ತಾರೋ ಅಷ್ಟು ಹೆಚ್ಚು ಸರೆಂಡರ್‌ ಮೌಲ್ಯವನ್ನು ಪಡೆಯಲಿದ್ದಾರೆ. ನೀವು 3 ವರ್ಷಗಳೊಳಗೆ ಪಾಲಿಸಿಯನ್ನು ಸರೆಂಡರ್‌ ಮಾಡಿದರೆ, ನೀವು ಮುಖಬೆಲೆಗಿಂತ ಕಡಿಮೆ ಸರೆಂಡರ್‌ ಮೌಲ್ಯವನ್ನು ಪಡೆಯುತ್ತೀರಿ. ಆದಾಗ್ಯೂ, ಪಾಲಿಸಿಯನ್ನು 4ರಿಂದ 7 ವರ್ಷಗಳೊಳಗೆ ಸರೆಂಡರ್‌ ಮಾಡಿದರೆ, ಸರೆಂಡರ್‌ ಮೌಲ್ಯದಲ್ಲಿ ಸ್ವಲ್ಪ ಹೆಚ್ಚಳವಾಗುತ್ತದೆ.

ಇನ್ಮುಂದೆ ಇ-ಇನ್ಶೂರೆನ್ಸ್‌ ಅಷ್ಟೇ!
ಏ.1ರ ಬಳಿಕ ಲೈಫ್‌, ಹೆಲ್ತ್‌ ಅಥವಾ ಯಾವುದೇ ಜನರಲ್‌ ವಿಮೆ ಪಾಲಿಸಿ ಖರೀದಿಸಿದರೂ, ವಿಮಾ ಕಂಪನಿಗಳು ಕಾಗದದ ರೂಪದ ದಾಖಲೆ ಪತ್ರಗಳನ್ನು ನೀಡುವುದಿಲ್ಲ. ಕೇವಲ ಡಿಜಿಟಲ್‌ ಫಾರ್ಮೆಟ್‌ನಲ್ಲಷ್ಟೇ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತವೆ.

ಎನ್‌ಪಿಎಸ್‌ಗೆ ಭದ್ರತೆ
ಎನ್‌ಪಿಎಸ್‌ ಖಾತೆಗೆ ಲಾಗಿನ್‌ ಆಗುವ ನಿಯಮಗಳನ್ನು ಪಿಂಚಣಿ ನಿಯಂತ್ರಕ ಸಂಸ್ಥೆ ಪಿಇಆರ್‌ಡಿಎ ಬದಲಾಯಿಸಿದೆ. ಇನ್ನು ಮುಂದೆ ‘ಎನ್‌ಪಿಎಸ್‌’ ಖಾತೆಗೆ ಲಾಗಿನ್‌ ಆಗಲು ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ ಅಲ್ಲದೆ ಆಧಾರ್‌ಗೆ ಲಿಂಕ್‌ ಮಾಡಲಾದ ಮೊಬೈಲ್‌ ಸಂಖ್ಯೆಯೂ ಅಗತ್ಯವಾಗಿದೆ. ನಿಮ್ಮ ಆಧಾರ್‌ಗೆ ಲಿಂಕ್‌ ಮಾಡಲಾದ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದ್ದು, ಇದನ್ನು ನಮೂದಿಸಿದ ನಂತರವೇ ನೀವು ಎನ್‌ಪಿಎಸ್‌ ಖಾತೆಗೆ ಲಾಗಿನ್‌ ಆಗಬಹುದು.

ಇಪಿಎಫ್‌ಒ ನಿಯಮಗಳು ಬದಲು
ಏಪ್ರಿಲ್‌ 1ರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ನಿಯಮಗಳಲ್ಲಿದೊಡ್ಡ ಬದಲಾವಣೆಯೊಂದು ಜಾರಿಗೆ ಬರುತ್ತಿದೆ. ಇನ್ನು ಮುಂದೆ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿಉದ್ಯೋಗಿಯ ಇಪಿಎಫ್‌ಒ ಖಾತೆಯನ್ನು ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲಾಗುತ್ತದೆ. ಈ ಹಿಂದೆ ಖಾತೆದಾರರ ಕೋರಿಕೆಯ ಮೇರೆಗೆ ಮಾತ್ರ ಖಾತೆಗಳನ್ನು ವರ್ಗಾಯಿಸಲಾಗುತ್ತಿತ್ತು.

ಹೊಸ ಆದಾಯ ತೆರಿಗೆ ಪದ್ಧತಿ ಆರಂಭ
ಏ. 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿಯೂ ಪ್ರಮುಖ ಬದಲಾವಣೆ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ. ಅಂದರೆ, ನೀವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ನಡುವೆ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳದೇ ಇದ್ದಲ್ಲಿ ನಿಮ್ಮ ಐಟಿಆರ್‌ ಅನ್ನು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಸಲ್ಲಿಸಲಾಗುತ್ತದೆ. ಒಮ್ಮೆ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡರೆ ಹಳೆ ತೆರಿಗೆ ಪದ್ಧತಿ ಆಯ್ದುಕೊಳ್ಳುವ ಆಯ್ಕೆ ಇರುವುದಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ7 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಕ್ರೆಡಿಟ್‌ ಕಾರ್ಡ್‌ದಾರರಿಗೆ ಸೌಲಭ್ಯ
‘ಯೆಸ್‌ ಬ್ಯಾಂಕ್‌’ ತನ್ನ ಕ್ರೆಡಿಟ್‌ ಕಾರ್ಡ್‌ ನಿಯಮಗಳನ್ನು ಬದಲಾಯಿಸಿದೆ. ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ತ್ರೈಮಾಸಿಕದಲ್ಲಿ ಕನಿಷ್ಠ 10,000 ರೂ.ಗಳನ್ನು ಖರ್ಚು ಮಾಡಿದರೆ, ಅವರು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ ಪ್ರವೇಶವನ್ನು ಪಡೆಯುತ್ತಾರೆ. ಈ ಸೌಲಭ್ಯ ಏ.1ರಿಂದ ಜಾರಿಗೆ ಬರಲಿದೆ.

ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ ‘ಐಸಿಐಸಿಐ’ ತನ್ನ ಗ್ರಾಹಕರಿಗೆ ಒಂದು ತ್ರೈಮಾಸಿಕದಲ್ಲಿ 35,000 ರೂ.ವರೆಗೆ ವೆಚ್ಚ ಮಾಡಿದಲ್ಲಿ ಕಾಂಪ್ಲಿಮೆಂಟರಿ ಏರ್‌ಪೋರ್ಟ್‌ ಲಾಂಜ್‌ ಪ್ರವೇಶವನ್ನು ನೀಡುತ್ತಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading