ಮಂಗಳೂರು
ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿರುವ ಕೈ ಪಡೆ- ಇಂದು (ಫೆ 17)ಮಂಗಳೂರಿನ ಅಡ್ಯಾರ್ ನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ – ಇಲ್ಲಿದೆ ಟ್ರಾಫಿಕ್ ಬದಲಾವಣೆ – ಪಾರ್ಕಿಂಗ್ ವಿವರ
ಗಳೂರು: ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಮಂಗಳೂರಿನ ಆಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಎಐಸಿಸಿ ಸೂಚನೆ ಮೇರೆಗೆ ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಲ್ಲಾ ಸಚಿವರು, ಸಂಸದರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳು, ಎಲ್ಲಾ ಹಂತದ ಅಧ್ಯಕ್ಷರು ಕಾರ್ಯಕರ್ತರ ಸಮಾವೇಶದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ಸಮಾವೇಶ ನಡೆಯುವ ಅಡ್ಯಾರ್ ಮೈದಾನದ ಬಳಿ ಟ್ರಾಫಿಕ್ ಬದಲಾವಣೆ
ಸಮಾವೇಶ ಹಿನ್ನಲೆ ಕಾರ್ಯಕ್ರಮ ನಡೆಯುವ ಅಡ್ಯಾರ್ ಮೈದಾನದ ಬಳಿ ಫೆ.17 ರ ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಟ್ರಾಫಿಕ್ ಬದಲಾವಣೆ ಮಾಡಲಾಗಿದೆ. ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ನಂತೂರು-ಪಂಪ್ವೆಲ್-ತೊಕ್ಕೊಟ್ಟು-ಡಿಪುಪು-ಮೆಲ್ಕಾರ್ ಮೂಲಕ ಸಂಚರಿಸುವುದು. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೆಲ್ಲಾರ್-ಮುಡಿಪು-ತೊಕ್ಕೊಟ್ಟು-ಪಂಪ್ವೆಲ್ ಮೂಲಕ ಸಂಚರಿಸಬೇಕು.
ಬಂಟ್ವಾಳದಿಂದ ಬರುವ ಗಣ್ಯರ ಕಾರುಗಳು ಹಾಗೂ ಸಾರ್ವಜನಿಕರ ಮೋಟಾರು ಸೈಕಲ್ಗಳನ್ನು ಕಾಮತ್ ಮೈದಾನದಲ್ಲಿ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಬಂಟ್ವಾಳದಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಕಾರುಗಳನ್ನು ಅಡ್ಯಾರ್ನ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್. ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಕಾರ್ಯಕರ್ತರನ್ನು ಕಾಮತ್ ಪಾರ್ಕಿಂಗ್ ಬಳಿ ಇಳಿಸಿ ಮೋತಿಶ್ಯಾಮ್/ಷಾ ಮೈದಾನದಲ್ಲಿ ಪಾರ್ಕಿಂಗ್. ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳನ್ನು ಅಡ್ಯಾರ್ ಗಾರ್ಡನ್ನಲ್ಲಿ ಪಾರ್ಕಿಂಗ್. ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಷಾ ಮೈದಾನದಲ್ಲಿ ಪಾರ್ಕಿಂಗ್ ಮತ್ತು ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮೋಟಾರ್ ಸೈಕಲ್ಗಳನ್ನು ಅಡ್ಯಾರ್ ಗಾರ್ಡನ್ ಮೈದಾನದಲ್ಲಿ ಪಾರ್ಕಿಂಗ್ ಹಾಗೂ ಅಡ್ಯಾರ್ ಕಟ್ಟೆಯಲ್ಲಿರುವ ಜಯಶೀಲ ರವರ ಮೈದಾನದಲ್ಲಿ ಕೂಡಾ ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ.
ಮಂಗಳೂರು
Luxury ship-ಮಂಗಳೂರಿಗೆ ಬಂದ 8ನೇ ಬೃಹತ್ ಐಷಾರಾಮಿ ಹಡಗು
ಪಣಂಬೂರು ಮೇ 5: ಈ ವರ್ಷದ 8ನೇ ಐಷಾರಾಮಿ ಕ್ರೂಸ್ ‘ಎಂಎಸ್ ಇನ್ಸೈನಿಯಾ’ ನವಮಂಗಳೂರು ಬಂದರಿಗೆ ರವಿವಾರ ಆಗಮಿಸಿತು. ನವಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ) ದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ವಿದೇಶೀ ಪ್ರವಾಸಿಗರಿಗೆ ಪರಿಚಯಿಸಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ನಾರ್ವೇಜಿಯನ್ ಕ್ರೂಸ್ ಲೈನರ್ 509 ಪ್ರಯಾಣಿಕರು ಮತ್ತು 407 ಸಿಬಂದಿ ಒಳಗೊಂಡಿದೆ. ಎನ್ ಎಂಪಿಎಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕ್ಷಿಪ್ರ ಕ್ಲಿಯರಿಂಗ್ ವ್ಯವಸ್ಥೆ ಸೌಲಭ್ಯ ಅಳವಡಿಸಲಾಗಿದೆ.
ಕಾರ್ಕಳ ಗೋಮಟೇಶ್ವರ ಬೆಟ್ಟ ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.
ಮಂಗಳೂರು
Panolibail-ಪಣೋಲಿಬೈಲ್ನಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆ ಬುಕ್ಕಿಂಗ್; ಪೂರ್ಣಗೊಳ್ಳಬೇಕಾದರೆ ಕನಿಷ್ಠ ಎಷ್ಟು ವರ್ಷ ಬೇಕು ಗೊತ್ತೇ ?
ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಕಾರಣಿಕ ಕ್ಷೇತ್ರವಾಗಿದ್ದು, ದೈವಗಳನ್ನು ನಂಬುವ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಯಾವುದಾದರೂ ಸಂದರ್ಭದಲ್ಲಿ ಪಣೋಲಿಬೈಲು ದೈವಕ್ಕೆ ಹರಕೆ ಹೇಳಿಕೊಳ್ಳುವುದುಂಟು. ಅದನ್ನು ಈಡೇರಿಸಲು ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಇಲ್ಲಿ ಅಗೇಲು ಸೇವೆ (ಕೋಳಿ, ಕುಚ್ಚಲಕ್ಕಿ, ಬಾಳೆ, ತೆಂಗಿನಕಾಯಿ, ಕೇಪುಳ ಹೂ ಒಪ್ಪಿಸುವುದು) ಹಾಗೂ ಕೋಲ ಸೇವೆ ಪ್ರಸಿದ್ಧ. ಕೋಲ ಸೇವೆಗಾಗಿ ಭಕ್ತರು ಬುಕ್ ಮಾಡುವುದುಂಟು. ಹೀಗೆ 23 ಸಾವಿರ ಸೇವೆಗಳು ಈ ಸನ್ನಿಧಿಯಲ್ಲಿ ಬುಕ್ ಆಗಿವೆ. ದಿನವೊಂದಕ್ಕೆ 4, ವಾರದಲ್ಲಿ 5 (ಕೆಲವು ದಿನ, ತಿಂಗಳು ಇರುವುದಿಲ್ಲ) ಸೇರಿ ಒಟ್ಟು 600ರಿಂದ 700 ಕೋಲ ಸೇವೆಗಳು ಇಲ್ಲಿ ನಡೆಯುತ್ತವೆ ಎಂದು ಲೆಕ್ಕ ಹಾಕಿದರೆ, ಇವತ್ತು ಬುಕ್ ಮಾಡಿದವರಿಗೆ 35 ವರ್ಷಗಳ ನಂತರ ಇಲ್ಲಿ ಸೇವೆ ಮಾಡಿಸಲು ಅವಕಾಶ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಈಗ ಕೋಲಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ.
23 ಸಾವಿರಕ್ಕೂ ಅಧಿಕ ಕೋಲ ಸೇವೆ ಬುಕ್ಕಿಂಗ್ :
ಪಣೋಲಿಬೈಲಿಗೆ ತುಳುನಾಡ ಜಿಲ್ಲೆಗಳಷ್ಟೇ ಅಲ್ಲ, ಹೊರಗಿನಿಂದಲೂ ಆಗಮಿಸುವ ಭಕ್ತರು ಅಗೇಲು, ಕೋಲ ಸೇವೆ ನಡೆಸುತ್ತಾರೆ. ವಿಶೇಷ ಹರಕೆ ರೂಪದಲ್ಲಿ ಕೋಲ ಸೇವೆಯನ್ನು ನೀಡುತ್ತಾರೆ. ಇದುವರೆಗೆ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ ಆಗಿದೆ. ಕ್ಷೇತ್ರದಲ್ಲಿ ಅಗೇಲು ಮತ್ತು ಕೋಲ ಸೇವೆಗಳು ವಿಶೇಷವಾಗಿದೆ. ವಾರದ ಮೂರು ದಿನಗಳು ಅಗೇಲು ಹಾಗೂ ವಾರದ 5 ದಿನಗಳ ಕೋಲ ಸೇವೆ ಸಂದಾಯವಾಗುತ್ತದೆ. ಬೆಳಗ್ಗೆ ನಿಗದಿತ ಸಮಯದೊಳಗೆ ಬಂದವರಿಗೆ ಎಷ್ಟು ಬೇಕಾದರೂ ಅಗೇಲು ಸೇವೆ ನೀಡುವುದಕ್ಕೆ ಅವಕಾಶವಿದೆ. ದಿನವೊಂದಕ್ಕೆ ಕೋಲ ಸೇವೆ ನೀಡುವುದಕ್ಕೆ ಕೇವಲ ನಾಲ್ವರಿಗೆ ಮಾತ್ರ ಅವಕಾಶವಿತ್ತು. ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಾಗುತ್ತಿದ್ದು, ಅದು ಪೂರ್ಣಗೊಳ್ಳಬೇಕಾದರೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.
ಸುದೀರ್ಘ ವರ್ಷಕ್ಕೆ ಬುಕ್ಕಿಂಗ್ ಮಾಡಿದವರಿಗೆ ಶೀಘ್ರ ಸೇವೆ :
ಕೋಲಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆ ಮೇ 3ರಂದು ಆರಂಭಗೊಂಡಿದ್ದು, ಇದು ವಾರದಲ್ಲಿ 5 ದಿನ ಇರುತ್ತದೆ. ಇದರಿಂದ ಸುದೀರ್ಘ ವರ್ಷಕ್ಕೆ ಬುಕ್ಕಿಂಗ್ ಮಾಡಿದವರಿಗೆ ಶೀಘ್ರ ಸೇವೆ ಸಂದಾಯವಾಗುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಇದುವರೆಗೆ ವರ್ಷಕ್ಕೆ 600ರಿಂದ 700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು. ಬುಕಿಂಗ್ ಸಂಖ್ಯೆ ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಶೀಘ್ರ ಸೇವೆಗೆ ಅವಕಾಶ ನೀಡುವ ದೃಷ್ಟಿಯಿಂದ ದೈವದ ಬಳಿ ಹರಕೆ ಮಾಡಿ, ಮಾಗಣೆಯ ದೈವದ ಅಪ್ಪಣೆ ಪಡೆದು, ದಿನಕ್ಕೆ ನಾಲ್ಕು ಕೋಲ ಸೇವೆ ನೀಡಿದರೂ ಪ್ರತಿ ಕೋಲದಲ್ಲಿ ಇಬ್ಬರಿಗೆ ಪ್ರಸಾದದಂತೆ 8 ಮಂದಿಗೆ ಪ್ರಸಾದ ನೀಡುವುದಕ್ಕೆ ನಿರ್ಧರಿಸಲಾಯಿತು. ಹೀಗಾಗಿ ಮುಂದಿನ ದಿನಗಳಲ್ಲಿ ಕೋಲ ಸೇವೆ ನೀಡಲು ಬುಕಿಂಗ್ ಮಾಡುವವರಿಗೆ ಅನುಕೂಲವಾಗಲಿದೆ. ಪ್ರತಿದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸೇವೆ ಮಾಡಿಸುವವರಿಗೂ ಅನುಕೂಲವಾಗಿದೆ.
ಕ್ಷೇತ್ರ ಪಣೋಲಿಬೈಲ್ ಎಲ್ಲಿದೆ
ಮಂಗಳೂರಿನಿಂದ ಬಿಸಿ ರೋಡಿಗೆ ಹೆದ್ದಾರಿಯಲ್ಲಿ ಬಂದು ಮುಂದಕ್ಕೆ ಸಾಗಿದಾಗ ಮೇಲ್ಕಾರ್ನಿಂದ ಬಲಭಾಗಕ್ಕೆ ಕೊಣಾಜೆ ಮಾರ್ಗದಲ್ಲಿ ಸಾಗುವ ಸಂದರ್ಭ ಮಾರ್ನಬೈಲ್ ನಲ್ಲಿ ಎಡಭಾಗಕ್ಕೆ ತಿರುಗಿ ಸುಮಾರು 4 ಕಿಮೀ ದೂರದಲ್ಲಿ ಸಾಗಿದರೆ, ಪಣೋಲಿಬೈಲ್ ಕ್ಷೇತ್ರ ಕಾಣಲು ಸಿಗುತ್ತದೆ. ಇಲ್ಲಿ ಕಲ್ಲುರ್ಟಿ ಕಲ್ಕುಡರು ನೆಲೆಯಾಗಿದ್ದಾರೆ.
ಕೋಲ ಯಾವಾಗೆಲ್ಲ ಇರುತ್ತದೆ
ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದೆ. ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜಿಪಮಾಗಣೆಯ ಜಾತ್ರೆ, ಉತ್ಸವಾದಿಗಳ ಸಂದರ್ಭ ಕೋಲ ಸೇವೆ ಇರುವುದಿಲ್ಲ.
ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರ ತುಳುನಾಡಿನ ಅತ್ಯಂತ ಶ್ರೀಮಂತ ಕ್ಷೇತ್ರ. ವಾರಕ್ಕೆ ಐದು ದಿವಸ ಇಪ್ಪತ್ತು ಹರಕೆಯ ಕೋಲ ಅದೇ ರೀತಿ ವಾರದ ಮೂರು ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಅಗೆಲು ಸೇವೆ ಹರಕೆಯನ್ನು ಪಡೆಯುತ್ತಿರುವ ಕ್ಷೇತ್ರವಿದು. ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ ಉದ್ಯೋಗಕ್ಕೆ ಅಲ್ಲದೆ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತ್ತರ ದುಷ್ಟಶಕ್ತಿಗಳನ್ನು ಕೋಲದಲ್ಲಿ ವಿಮೋಚನೆಗೊಳಿಸುತ್ತಾರೆ. ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು.
ಇಲ್ಲಿಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ನೆಲ್ಯಾಡಿ, ಮಡಿಕೇರಿ, ಮಂಗಳೂರು, ಮಂಜೇಶ್ವರ, ಕಾಸರಗೋಡು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ, ಕೊಡಗು ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ. ಇತರ ಪ್ರದೇಶಗಳಿಂದಲೂ ಗಮನಾರ್ಹ ಪ್ರಮಾಣದ ಭಕ್ತರು ನಡೆದುಕೊಳ್ಳುತ್ತಾರೆ. ಹರಕೆ ಕಾಣಿಕೆ, ಅಗೇಲು ಕೋಲ ಬೆಳ್ಳಿ ಬಂಗಾರದ ಸೇವೆಯನ್ನು ಕೊಡುತ್ತಿದ್ದಾರೆ. ಆಸ್ತಿ ವಿಚಾರ ತಕರಾರು, ಕೋರ್ಟ್ ವಿಚಾರ ಇನ್ನಿತರ ಕಷ್ಟ ಕಾರ್ಪಣ್ಯದಲ್ಲಿದ್ದವರು ಈ ಕ್ಷೇತ್ರಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ. ಸತ್ಯ, ಧರ್ಮ, ನ್ಯಾಯವನ್ನು ಎತ್ತಿ ಹಿಡಿಯುವ ಈ ದೈವವು ಎಲ್ಲಾ ಮೂಲೆಗಳಂದಲೂ ಭಕ್ತರನ್ನು ಸೆಳೆದುಕೊಳ್ಳುತ್ತಿದೆ.
ಮಂಗಳೂರು
ವಿಟ್ಲ: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮಗು ಸಹಿತ ಮೂವರಿಗೆ ಗಾಯ
ವಿಟ್ಲ: ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ.
ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡುಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.
ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟ ಗಾಯವಾಗಿದೆ.
ಗಂಭೀರ ಗಾಯಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆ ಕೊಂಡೊಯ್ಯಲಾಗಿತ್ತು. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
,
-
ಉದ್ಯೋಗ22 hours ago
Puttur’s ‘Bindu’-ಆಂಧ್ರಕ್ಕೆ ತಲುಪಿದ ಪುತ್ತೂರಿನ ‘ಬಿಂದು’ : ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ
-
ರಾಜ್ಯ1 day ago
Heavy rainfall-ನಾಳೆಯಿಂದ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆಯಾಗುವ ಸಾಧ್ಯತೆ; ಪ್ರವಾಹ ಎದುರಿಸಲು ಸಜ್ಜಾಗುವಂತೆ ಸೂಚನೆ
-
ಬಿಗ್ ನ್ಯೂಸ್17 hours ago
Anantkumar Hegde | ಚುನಾವಣೆಗೆ ಕೆಲವೇ ಗಂಟೆಗಳಿರುವಾಗ ಮಹತ್ವದ ಬೆಳವಣಿಗೆ : ಬಿಜೆಪಿಗೆ ಓಟ್ ಹಾಕಿ ಎಂದು ತನ್ನ ಫೋಟೋ ಬಳಸಿ ಫೋಸ್ಟ್ ಮಾಡಿದ್ದರ ವಿರುದ್ದ ಫೈರ್ ಬ್ರ್ಯಾಂಡ್ ನಾಯಕ , ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆಯಿಂದ ದೂರು ದಾಖಲು
-
ಉಡುಪಿ22 hours ago
Kapu: Pili Kola-ಕಾಪು : ಪಿಲಿ ಕೋಲ – ನಗರ ಪ್ರದಕ್ಷಿಣೆ ವೇಳೆ ಓರ್ವನ ಸ್ಪರ್ಶಿಸಿ ದೈವಸ್ಥಾನಕ್ಕೆ ಓಡಿ ಬಂದ ದೈವ..!
-
ಮಂಗಳೂರು1 day ago
Panolibail-ಪಣೋಲಿಬೈಲ್ನಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆ ಬುಕ್ಕಿಂಗ್; ಪೂರ್ಣಗೊಳ್ಳಬೇಕಾದರೆ ಕನಿಷ್ಠ ಎಷ್ಟು ವರ್ಷ ಬೇಕು ಗೊತ್ತೇ ?
-
ಸ್ಥಳೀಯ1 day ago
Marriage cancelled-ಸ್ವೀಟ್ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡ ಮದುವೆ
-
ಚಿನ್ನ-ಬೆಳ್ಳಿ ದರ1 day ago
Gold Rate Today – ಏರಿಕೆಯಾದ ಚಿನ್ನದ ಬೆಲೆ; ಕುಸಿತ ಕಂಡ ಬೆಳ್ಳಿ ಬೆಲೆ
-
ಬಿಗ್ ನ್ಯೂಸ್1 day ago
Heat Wave | ಕರ್ನಾಟಕ ಕರಾವಳಿಯಲ್ಲಿ ಬಿಸಿಗಾಳಿ – ಆರೆಂಜ್ ಎಲರ್ಟ್ ಘೋಷಣೆ