Connect with us

ರಾಜ್ಯ

ವಿವೇಕಾನಂದ ಜಯಂತಿಯಂದು ರಾಜ್ಯ ಸರಕಾರದಿಂದ ‘ನಿರುದ್ಯೋಗ ಭತ್ತೆ’  ಪಾವತಿ ಆರಂಭ – ನಿರುದ್ಯೋಗಿಗಳೆ ಯುವನಿಧಿ ಪಡೆಯುವುದು ಹೇಗೆ ?

Ad Widget

Ad Widget

Ad Widget

Ad Widget

ವಿವೇಕಾನಂದ ಜಯಂತಿಯಂದು, ಅಂದರೆ ಜ. 12ರಂದು ರಾಜ್ಯದ ಪದವೀಧರರು ಮತ್ತು ಡಿಪ್ಲೊಮಾ ಕೋರ್ಸ್ ಪೂರೈಸಿದ ಯುವಕರ ಖಾತೆಗೆ ಸರಕಾರದಿಂದ ನೇರವಾಗಿ ‘ನಿರುದ್ಯೋಗ ಭತ್ತೆ’ ಜಮೆ ಆಗಲಿದೆ.

Ad Widget

Ad Widget

Ad Widget

ಉದ್ದೇಶಿತ ಯುವನಿಧಿ ಯೋಜನೆ ಅಡಿ ನೋಂದಣಿ ಪ್ರಕ್ರಿಯೆ ಡಿ.26ರಿಂದ ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ. ಜ.12ರಿಂದ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳಿಗೆ ಹಣ ಜಮೆ ಆಗಲಿದ್ದು, ಈ ಕಾರ್ಯಕ್ರಮಕ್ಕೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು. ಇದರೊಂದಿಗೆ ಕಾಂಗ್ರೆಸ್ 2 ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ತನ್ನ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದಂತಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ| ಶರಣಪ್ರಕಾಶ್ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Ad Widget

 2022-23 ಶೈಕ್ಷಣಿಕ ಸಾಲಿನಲ್ಲಿ  ತೇರ್ಗಡೆಯಾದ ಪದವೀಧರರು ಮತ್ತು ಡಿಪ್ಲೊಮಾ ಕೋರ್ಸ್ ಪೂರೈಸಿದ ರಾಜ್ಯದಲ್ಲಿ ಕನಿಷ್ಠ 6 ವರ್ಷ ವ್ಯಾಸಂಗದ ಅವಧಿ(ಪದವಿ/ ಡಿಪ್ಲೊಮಾ)ಯಲ್ಲಿ ವಾಸವಾಗಿರುವವರು ಈ ಯೋಜನೆಗೆ ಅರ್ಹರು. ಅದರಂತೆ ಸುಮಾರು 5.29 ಲಕ್ಷ ಯುವಕರು ಯೋಜನೆಯಡಿ ಬರಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ 4.81 ಲಕ್ಷ ಪದವೀಧರರು ಹಾಗೂ 48,100   ಪದವೀಧರರಿದ್ದಾರೆ. ಈ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ ಸರಕಾರ 250 ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ ಪದವೀಧರರು ಮತ್ತು ಸ್ನಾತಕೋತ್ತರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪೂರೈಸಿದವರಿಗೆ ಮಾಸಿಕ 1,500 ರೂ. ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Ad Widget

Ad Widget

ಈ ನಿರುದ್ಯೋಗ ಭತ್ತೆಯನ್ನು ಗರಿಷ್ಠ ವರ್ಷಗಳವರೆಗೆ ಅಥವಾ ಉದ್ಯೋಗ ದೊರೆಯುವವರೆಗೆ ನೀಡಲಾಗುವುದು. ಫಲಾನುಭವಿಯು ಪ್ರತಿ ತಿಂಗಳು 25ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ನಿರುದ್ಯೋಗಿ ಸ್ಥಿತಿಯ ಬಗ್ಗೆ ಆಧಾರ್ ಒಟಿಪಿ ಮೂಲಕ ಸ್ವಯಂಘೋಷಣೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಸಚಿವ ಡಾ। ಶರಣಪ್ರಕಾಶ ಪಾಟೀಲ್ ಸ್ಪಷ್ಟಪಡಿಸಿದರು

Ad Widget

Ad Widget

Ad Widget

 ಜ. 12ಕ್ಕೆ ಖಾತೆಗೆ ಯುವ ನಿಧಿ ಹಣ ಜಮೆ; ಯಾರೆಲ್ಲಾ ಅರ್ಹರು, ಏನು ದಾಖಲೆ ಬೇಕು, ಅಪ್ಲೈ ಮಾಡುವುದು ಹೇಗೆ ಇಲ್ಲಿದೆ ವಿವರ

ಯಾರು ಫಲಾನುಭವಿಗಳು?

•          ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.

•          ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.

•          ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.

ಯಾರು ಅನರ್ಹರು?

•          ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.

•          ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು.

•          ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.

•          ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.

•          ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.

•          ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.

ರಾಜ್ಯದಲ್ಲಿ ವಾಸ ನಿರೂಪಿಸಲು ಇವು ಅಗತ್ಯ

ಪದವೀಧರರು ವರ್ಷಕರ್ನಾಟಕದ ವಾಸಿ ಎಂದು ನಿರೂಪಿಸಲು ಎಸೆಸೆಲ್ಸಿ, ಪಿಯುಸಿ ಅಥವಾ ಸಿಇಟಿಸಂಖ್ಯೆ ಅಥವಾ ಪಡಿತರಚೀಟಿ ಸಂಖ್ಯೆ ನೀಡಬೇಕು. ಡಿಪ್ಲೊಮಾ ಪೂರೈಸಿದವರು 8 ಮತ್ತು 9ನೇ ತರಗತಿ ಅಂಕಪಟ್ಟಿ (ಎಸೆಸೆಲ್ಸಿ ಮೂಲದಿಂದ ಡಿಪ್ಲೊಮಾ ಮಾಡಿದ್ದಲ್ಲಿ), ಎಸೆಸೆಲ್ಸಿ ಅಥವಾ ಪಡಿತರಚೀಟಿ ಸಂಖ್ಯೆ ನೀಡಬೇಕು.

ಯುವ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?

•          ‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು

•          ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ

•          ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೆಗೆದಿಟ್ಟುಕೊಳ್ಳಿ.

•          ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.

•          ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)

•          ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).

ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬೇಕು?

ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ಗಳಲ್ಲಿ ಅರ್ಜಿ ಸಲ್ಲಿಸಬಹುದು.

Click to comment

Leave a Reply

ರಾಜಕೀಯ

Voting in the sun-ಬಿಸಿಲಲ್ಲೂ ಕುಗ್ಗದ ಮತದಾನ : ಮಧ್ಯಾಹ್ನ 1 ಗಂಟೆಯವರೆಗೆ ಮತದಾನದ ವಿವರ ಇಲ್ಲಿದೆ

Ad Widget

Ad Widget

Ad Widget

Ad Widget

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭ
ದೇಶ– ನಾಡಿನ ಭವಿಷ್ಯ ರೂಪಿಸುವ ಲೋಕಸಭೆಯ ಎರಡನೇ ಹಂತದ ಮತದಾನಕ್ಕೆ ಅರ್ಧ ರಾಜ್ಯ ಸಜ್ಜಾಗಿದೆ. ರಾಜ್ಯದ 14 ಕ್ಷೇತ್ರ ಒಳಗೊಂಡಂತೆ 93 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಮತದಾರರ ಬರುವಿಕೆಗೆ ಮತಗಟ್ಟೆಗಳು ಅಣಿಗೊಂಡಿದ್ದು, ಬಿರುಬಿಸಿಲು ನಡುವೆಯೂ ಮತದಾರರು ತಮ್ಮ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆಂಬ ನಿರೀಕ್ಷೆ ಬಲಗೊಂಡಿದೆ. ಕರಾವಳಿ, ಮಲೆನಾಡು, ಮಧ್ಯ, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಿಜೆಪಿ– ಕಾಂಗ್ರೆಸ್ ಮಧ್ಯೆಯೇ ನೇರ ಹಣಾಹಣಿ ಇದೆ. ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಪೈಪೋಟಿ ನೀಡುತ್ತಿದ್ದು, ತ್ರಿಕೋನ ಸ್ಪರ್ಧೆಯ ವಾತಾವರಣ ಇದೆ.

Ad Widget

Ad Widget

Ad Widget

ಹೊಸಪೇಟೆ: ಬಿಸಿಲಲ್ಲೂ ಕುಗ್ಗದ ಮತದಾನ ಉತ್ಸಾಹ
ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ಝಳ ತೀವ್ರವಾಗಿ ಇದ್ದರೂ ಮತದಾರರ ಉತ್ಸಾಹಕ್ಕೆ ಅದು ಧಕ್ಕೆ ತಂದಿಲ್ಲ ಎಂಬುದನ್ನು ಮಧ್ಯಾಹ್ನದ ಮತಗಟ್ಟೆ ದೃಶ್ಯಗಳು ಸಾಬೀತುಪಡಿಸಿವೆ.

Ad Widget

ಬಿಸಿಲಿನ ಝಳ ಇದ್ದರೂ ಮಧ್ಯಾಹ್ನ 1 ಗಂಟೆಯ ಸಮಯದಲ್ಲೂ ಹಲವೆಡೆ ಉದ್ದರ ಸರದಿ ಸಾಲುಗಳು ಕಾಣಿಸಿದವು. ಹೊಸಪೇಟೆಯ ನಗರದ ಊರಮ್ಮನಬೈಲು ಮತಗಟ್ಟೆಯಲ್ಲಿ ಉದ್ದದ ಸರದಿ ಕಂಡರೆ, ಸೀತಾರಾಮ ತಾಂಡಾದಲ್ಲಿ ಶೇ 67ರಷ್ಟು ಮತದಾನವಾಗಿದೆ.

Ad Widget

Ad Widget

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 45.69ರಷ್ಟು ಮತದಾನ
ಬೆಳಗಾವಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 40.78ರಷ್ಟು ಮತದಾನ
ಬಳ್ಳಾರಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ.44.36ರಷ್ಟು ಮತದಾನ
ಧಾರವಾಡ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 40.05ರಷ್ಟು ಮತದಾನ
ಹಾವೇರಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 43.26ರಷ್ಟು ಮತದಾನ
ಬೀದರ್ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 37.97ರಷ್ಟು ಮತದಾನ
ವಿಜಯಪುರ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 40.18ರಷ್ಟು ಮತದಾನ

Ad Widget

Ad Widget

Ad Widget

ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಸುಡು ಬಿಸಿಲನಲ್ಲೂ ಜನರು ಮತಗಟ್ಟೆಯತ್ತ ಹೆಜ್ಜೆ ಹಾಕಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬೆಳಿಗ್ಗೆಯಿಂದ ಮಧ್ಯಾಹ್ನ 1ರ ವರೆಗೆ ಶೇ 40.18ರಷ್ಟು ಮತದಾನವಾಗಿದೆ. ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 41.93 ರಷ್ಟು ಮತದಾನವಾಗಿದೆ. ಉಳಿದಂತೆ ಮುದ್ದೇಬಿಹಾಳ ಶೇ 38.75, ದೇವರ ಹಿಪ್ಪರಗಿ ಶೇ 38.55 ಬಸವನ ಬಾಗೇವಾಡಿ ಶೇ 42.30, ಬಬಲೇಶ್ವರ ಶೇ 42.05, ನಾಗಠಾಣ ಶೇ 39.22, ಇಂಡಿ ಶೇ 39.67, ಸಿಂದಗಿ ಶೇ 38.92 ಸೇರಿದಂತೆ ಜಿಲ್ಲೆಯಾದ್ಯಂತ ಶೇ 40.18 ಮತದಾನ ಆಗಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1 ಗಂಟೆವರೆಗೆ ಶೇ 42.01ರಷ್ಟು ಮತದಾನ

Continue Reading

ರಾಜ್ಯ

Heavy rainfall-ನಾಳೆಯಿಂದ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆಯಾಗುವ ಸಾಧ್ಯತೆ; ಪ್ರವಾಹ ಎದುರಿಸಲು ಸಜ್ಜಾಗುವಂತೆ ಸೂಚನೆ

Ad Widget

Ad Widget

Ad Widget

Ad Widget

ಬೆಂಗಳೂರು: ಹವಾಮಾನ ಇಲಾಖೆಯು ಮುಂದಿನ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 7ರಿಂದ ಐದು ದಿನ, ಉತ್ತರ ಕನ್ನಡದಲ್ಲಿ ಮೇ 10ರಿಂದ ಮೂರು ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮೇ 7ರಿಂದ ಮೇ 10ರವರೆಗೆ ಜೋರಾಗಿ ಮಳೆಯಾಗಲಿದೆ.

Ad Widget

Ad Widget

Ad Widget

40ರ ಗಡಿ ದಾಟಿದ ಉಷ್ಣಾಂಶ: ಕಲಬುರಗಿಯಲ್ಲಿ ಭಾನುವಾರ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಯಾದಗಿರಿ 44, ಕೊಪ್ಪಳ 43.3, ಬಳ್ಳಾರಿ 43.3, ತುಮಕೂರು 43.1, ವಿಜಯಪುರ 42.5, ಬಾಗಲಕೋಟೆ 42.5, ಬೀದರ್ 42, ಧಾರವಾಡ 40 ಹಾಗೂ ಬೆಳಗಾವಿ 40 ಡಿ.ಸೆ. ಉಷ್ಣಾಂಶ ವರದಿಯಾಗಿದ್ದು, ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಬಿಸಿ ಗಾಳಿ ಬೀಸಲಿದೆ. ಸತತ ನಾಲ್ಕು ದಿನದ ಬಳಿಕ ಬೆಂಗಳೂರಿನಲ್ಲಿ 37 ಡಿ.ಸೆ.ಗೆ ಇಳಿದಿದೆ. ಮೇ 1ರಿಂದ ಮೇ 4ರವರೆಗೆ ನಗರದಲ್ಲಿ ಉಷ್ಣಾಂಶ 40ರ ಗಡಿ ದಾಟಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ವಾತಾವರಣ ಇರಲಿದೆ.

Ad Widget

ರಾಯಚೂರಿನಲ್ಲಿ 44.4 ಡಿಗ್ರಿ: ರಾಯಚೂರು ಜಿಲ್ಲೆಯಲ್ಲಿ ಕಳೆದ ಇಪ್ಪತ್ತೊಂದು ವರ್ಷಗಳಲ್ಲಿ ಶನಿವಾರ ಅತ್ಯಧಿಕ ತಾಪಮಾನ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ 26 ವರ್ಷಗಳ ನಂತರ ಕಂಡ ಅತ್ಯಧಿಕ ತಾಪಮಾನ ಇದಾಗಿದೆ. ಜನರು ಬಿಸಿಲ ಬೇಗೆಯಿಂದ ಸಂಕಷ್ಟ ಎದುರಿಸುವಂಥ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 1998ರ ಮೇನಲ್ಲಿ 44 ಡಿಗ್ರಿ ಸೆಲ್ಸಿಯಸ್ ಮತ್ತು 2019ರ ಮೇನಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಇದುವರೆಗಿನ ಅತ್ಯಧಿಕ ತಾಪಮಾನವಾಗಿತ್ತು.

Ad Widget

Ad Widget

ಪ್ರವಾಹ ಎದುರಿಸಲು ಸಜ್ಜಾಗಿ:
ರಾಜ್ಯದಲ್ಲಿ ಮುಂಗಾರು ಮಳೆ ಶೇ.104 ಇರುತ್ತದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಮಳೆ ಈ ಬಾರಿ ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಸಜ್ಜಾಗುವಂತೆ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕಂದಾಯ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವ ಇಲಾಖೆಯಿಂದ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

Ad Widget

Ad Widget

Ad Widget

ತಾಲೂಕು ಆಡಳಿತಗಳ ಜತೆ ಸಭೆ ನಡೆಸಿ ಪ್ರವಾಹದಿಂದಾಗುವ ಹಾನಿ ತಡೆಗಟ್ಟಲು ಸಜ್ಜಾಗುವಂತೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳನ್ನು ಸರಿಪಡಿಸಬೇಕು. ಚರಂಡಿ, ಸೇತುವೆಗಳಲ್ಲಿ ತುಂಬಿರುವ ಹೂಳು ತೆಗೆಯಬೇಕು.

ನದಿ, ನೀರಾವರಿ ಕೆರೆ ಕಾಲುವೆಗಳ ಸಮೀಪದ ನೆರೆಪೀಡಿತ ಪ್ರದೇಶವನ್ನು ಗುರುತಿಸಿ ಚರಂಡಿಗಳ ಮೇಲಿನ ಚಪ್ಪಡಿಗಳನ್ನು ಸುಸ್ಥಿತಿಯಲ್ಲಿರಿಸಲು ತಿಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ ಮೊಬೈಲ್ ನಂಬರ್ ಸಂಗ್ರಹಿಸಿ ವಾಟ್ಸ್ಆಪ್ ಗ್ರೂಪ್ ರಚಿಸಬೇಕು. ತುರ್ತು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಭೂ ಕುಸಿತವಾಗುವ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ವರುಣಾ ಮಿತ್ರದ ನೆರವು ಪಡೆಯಬೇಕು. ವಿದ್ಯುತ್, ಆರೋಗ್ಯ, ಪಶು ಸಂಗೋಪನೆ, ಕೌಶಲಾಭಿವೃದ್ಧಿ, ಅಗ್ನಿಶಾಮಕ ಸೇರಿ ಅಗತ್ಯ ಇಲಾಖೆಗಳನ್ನು ಸಜ್ಜುಗೊಳಿಸಬೇಕೆಂದು ಡಿಸಿಗಳಿಗೆ ನಿರ್ದೇಶನ ನೀಡಲಾಗಿದೆ.

Continue Reading

ಉದ್ಯೋಗ

Nandini brand-ಭರ್ಜರಿ ಮಾರಾಟವಾಗುತ್ತಿರುವ ನಂದಿನಿ ಬ್ರಾಂಡ್ ಐಸ್ ಕ್ರೀಂ; 100ಕ್ಕೂ ಹೆಚ್ಚು ಪ್ಲೇವರ್ ನ ಐಸ್ ಕ್ರೀಂ ತಯಾರಿಸಿರುವ ಕೆಎಂಎಫ್

Ad Widget

Ad Widget

Ad Widget

Ad Widget

ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಬಿಸಿಲಿನ ಪ್ರಕೋಪ ಹೆಚ್ಚಾಗಿದ್ದು, ಜನರು ಶಾಖಾಘಾತದಿಂದ ಹೈರಾಣಾಗಿದ್ದಾರೆ. ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗಳಿಗೆ ಜನ ಮೊರೆ ಹೋಗಿದ್ದಾರೆ. ಇದರಲ್ಲಿ ಪ್ರಮುಖವಾದದ್ದು, ಕೂಲ್ ಡ್ರಿಂಕ್ಸ್ ಮತ್ತು ಐಸ್ ಕ್ರೀಂ. ಮಾರುಕಟ್ಟೆಯಲ್ಲಿ ನಾನಾ ಬಗ್ಗೆಯ ಐಸ್ ಕ್ರೀಂಗಳು ಲಭ್ಯವಿದ್ದು, ಎಲ್ಲದಕ್ಕೂ ಡಿಮ್ಯಾಂಡ್ ಹೆಚ್ಚಿದೆ.

Ad Widget

Ad Widget

Ad Widget

ರಾಜ್ಯದ ಪ್ರತಿಷ್ಟಿತ ಬ್ರ್ಯಾಂಡ್ ಆಗಿರುವ ನಂದಿನಿ ಬ್ರಾಂಡ್ನ ಐಸ್ ಕ್ರೀಂಗಳಿಗೂ ಭರ್ಜರಿ ಬೇಡಿಕೆ ಸಿಗುತ್ತಿದೆ. ಕೆಎಂಎಫ್ ವಿವಿಧ ಪ್ಲೇವರ್ ನ ಐಸ್ ಕ್ರೀಂ ತಯಾರು ಮಾಡುತ್ತಿದ್ದು ಇದಕ್ಕೆ ಸಕ್ಕತ್ ಬೇಡಿಕೆ ಕಾಣಿಸಿದೆ. ಕೆಎಂಎಫ್ ಮೊದಲು ಕೇವಲ 20 ಪ್ಲೇವರಿಂಗ್ ಐಸ್ ಕ್ರೀಂ ತಯಾರು ಮಾಡುತ್ತಿತ್ತು. ಆದರೆ ಈಗ ಮಾವು, ಹಲಸು, ಬಾದಾಮಿ ಸೇರಿದಂತೆ ನಾನಾ ಬಗೆಯ 100ಕ್ಕೂ ಹೆಚ್ಚು ಬಗೆಯ ಐಸ್ ಕ್ರೀಂ ತಯಾರು ಮಾಡುತ್ತಿದೆ.

Ad Widget

ಈ ಹಿಂದೆ 20 ಸಾವಿರ ಲೀಟರ್ ಆಜು ಬಾಜಿನಲ್ಲಿದ್ದ ಬೇಡಿಕೆ ಪ್ರಮಾಣ ಹೆಚ್ಚಾಗಿ ಸರಾಸರಿ 37 ಸಾವಿರ ಲೀಟರ್ ಐಸ್ ಕ್ರೀಂ ಮಾರಾಟವಾಗುತ್ತಿದೆ. ಇದರಿಂದಾಗಿ ಐಸ್ ಕ್ರೀಂ ಉತ್ಪಾದನೆಗೆ 37 ಸಾವಿರ ಲೀಟರ್ ಹಾಲು ಬಳಕೆಯಾಗುತ್ತಿರುವುದು ವಿಶೇಷ.

Ad Widget

Ad Widget

ಕೆಎಂಎಫ್ ನಂದಿನಿ ಬ್ರಾಂಡ್ನ ಮೊಸರು ರಾಮನವಮಿ ದಿನ 16.50 ಲಕ್ಷ ಕೆಜಿ ಮಾರಾಟವಾಗಿದ್ದು, ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಬೇಸಿಗೆ ಪ್ರಾರಂಭವಾದ ಮೇಲೆ ಮೊಸರು ಮಾರಾಟ ಪ್ರಮಾಣವೂ 12 ಲಕ್ಷ ಕೆಜಿಗೆ ಜಿಗಿದಿದೆ.

Ad Widget

Ad Widget

Ad Widget

6 ಸಾವಿರ ಟನ್ ಹಾಲಿನ ಪುಡಿಗೆ ಬೇಡಿಕೆ
ಕೆಎಂಎಫ್ ಹೆಚ್ಚುವರಿಯಾಗಿ ಹಾಲು ಬಂದದ್ದನ್ನು ಪೌಡರ್ ಮಾಡಿ ಸಂಗ್ರಹ ಮಾಡಿದ್ದು, ಗೋದಾಮಿನಲ್ಲಿ 15 ಸಾವಿರ ಟನ್ಗೂ ಹೆಚ್ಚು ಸಂಗ್ರಹವಾಗಿತ್ತು. ಉತ್ತರ ಭಾರತದಿಂದ ಸುಮಾರು 6 ಸಾವಿರ ಟನ್ ಕೆಎಂಎಫ್ ಹಾಲಿನ ಪುಡಿಗೆ ಬೇಡಿಕೆ ಬಂದಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ಕೆಜಿ. ಪೌಡರ್ಗೆ 250 ರೂಗೆ ಜಿಗಿದಿದೆ.

81.5ಲಕ್ಷ ಲೀಟರ್ ಹಾಲು
ಕೆಎಂಎಫ್ ಗೆ ಬೇಸಿಗೆಯಲ್ಲಿಯೂ ಪ್ರತಿ ನಿತ್ಯ 80 ಲಕ್ಷ ಲೀಟರ್ ಹಾಲು ಬರುತ್ತಿರುವುದು ವಿಶೇಷ. ಕಳೆದ ವರ್ಷ ಬೇಸಿಗೆಯಲ್ಲಿ 75 ಲಕ್ಷ ಲೀಟರ್ ಹಾಲು ಮಾತ್ರ ಬರುತ್ತಿತ್ತು. ಈ ವರ್ಷ 51 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿರುವುದು ಕೂಡ ದಾಖಲೆಯಾಗಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading