ನಿಧನ ವಾರ್ತೆ
Suicide-ದೀಪಾವಳಿ ಸಂಭ್ರಮದಲ್ಲಿದ್ದ ಪಿಗ್ಮಿ ಸಂಗ್ರಹಕಾರ ಆತ್ಮಹತ್ಯೆಗೆ ಶರಣು
ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11ರ ರಾತ್ರಿ ನಡೆದಿದೆ.
ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11ರ ರಾತ್ರಿ ನಡೆದಿದೆ.
ಬೆಳ್ತಂಗಡಿ: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11ರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿಯಾಗಿದ್ದ ಪುನೀತ್ ಅವರು ಅವಿವಾಹಿತರಾಗಿದ್ದರು. ಪಿಗ್ಮಿ ಸಂಗ್ರಹಕಾರರ ಕೆಲಸಕ್ಕೆ ರಜೆ ಹಾಕಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಂಬಂಧಿಕರು ಹಾಗೂ ಸಹೋದರರೊಂದಿಗೆ ಉತ್ಸಾಹದಿಂದ ಕಾಲ ಕಳೆದಿದ್ದರು. ಆದರೆ, ನ.11ರ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ತಂದೆ ಸೇಸಪ್ಪ ಗೌಡ, ತಾಯಿ ವನಜಾ, ಸಹೋದರ ಶೇಖರ್, ಸಹೋದರಿ ದಿವ್ಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ನಿಧನ ವಾರ್ತೆ
Melkar-ಮೆಲ್ಕಾರ್: ಸ್ವರಾಜ್ ಸ್ಟುಡಿಯೋ ಮಾಲೀಕರ ಪುತ್ರಿ ನಿಧನ
ಪಾಣೆಮಂಗಳೂರು-ಮೆಲ್ಕಾರ್‌ನ ಸ್ವರಾಜ್ ಸ್ಟುಡಿಯೋ ಮಾಲೀಕ ರಾಜರತ್ನ ಅವರ ಪುತ್ರಿ ನೇಹಾ (29) ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದ ತಲೆಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಂಟ್ವಾಳ: ಪಾಣೆಮಂಗಳೂರು-ಮೆಲ್ಕಾರ್‌ನ ಸ್ವರಾಜ್ ಸ್ಟುಡಿಯೋ ಮಾಲೀಕ ರಾಜರತ್ನ ಅವರ ಪುತ್ರಿ ನೇಹಾ (29) ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಒಂದು ವರ್ಷದಿಂದ ತಲೆಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ನೇಹಾ ಅವರು ಪತಿ ಪ್ರತೀಕ್ ಅವರೊಂದಿಗೆ ಉದ್ಯೋಗ ನಿಮಿತ್ತ ಕುವೈತ್‌ನಲ್ಲಿ ನೆಲೆಸಿದ್ದರು. ಮೃತರು ಪತಿ, ತಂದೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನ ವಾರ್ತೆ
Arrested-ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ: ಯುವಕನನ್ನು ತಳ್ಳಿ ಕೊಂದ ಆರೋಪ; ಇಬ್ಬರ ಬಂಧನ-ಅಪ್ರಾಪ್ತ ವಶಕ್ಕೆ..!
ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದಿದೆ. ಮೃತನನ್ನು ಜುಹು ನಿವಾಸಿ ನನು ಅಲಿಯಾಸ್ ಶುಭಂಕರ್ ಮುಖಿಯಾ ಎಂದು ಗುರುತಿಸಲಾಗಿದೆ.
ಮುಂಬೈ: ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದಿದೆ.
ಮೃತನನ್ನು ಜುಹು ನಿವಾಸಿ ನನು ಅಲಿಯಾಸ್ ಶುಭಂಕರ್ ಮುಖಿಯಾ ಎಂದು ಗುರುತಿಸಲಾಗಿದೆ.
ಲಕ್ಷ್ಮೀ ಪೂಜೆಯ ದಿನ ವಿಕ್ರಮ್ ಮೈದಾನ ರಸ್ತೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ವಿಲೆ ಪಾರ್ಲೆ ಪಶ್ಚಿಮದ ನೆಹರೂ ನಗರದ ನಿವಾಸಿಗಳಾದ ರಾಹುಲ್ ಸಂತೋಷ್ ಮಂಡಲ್ (23) ಮತ್ತು ರವಿಕುಮಾರ್ ಶರ್ವಣನ್ ದೇವೇಂದ್ರ (22) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ರಸ್ತೆ ಬದಿಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಅಲ್ಲೇ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನದ ಸಮೀಪ ಪಟಾಕಿ ಸಿಡಿಸದಂತೆ ಶುಭಂಕರ್ ಮನವಿ ಮಾಡಿದ್ದ. ಆದರೆ ಆತನ ಮನವಿಯನ್ನು ನಿರ್ಲಕ್ಷಿಸಿದ ಆರೋಪಿಗಳು ಪಟಾಕಿ ಸಿಡಿಸುವುದನ್ನು ಮುಂದುವರಿಸಿದ್ದರು.
ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಗಲಾಟೆ ತೀವ್ರಗೊಂಡಿದೆ. ಈ ವೇಳೆ ಆರೋಪಿಗಳು ಶುಭಂಕರ್ ಮೇಲೆ ಹಲ್ಲೆ ನಡೆಸಿದ್ದು, ಅವರಲ್ಲೊಬ್ಬ ಬಲವಾಗಿ ತಳ್ಳಿದ್ದಾನೆ ಎನ್ನಲಾಗಿದೆ. ಇದರಿಂದ ನೆಲಕ್ಕೆ ಬಿದ್ದ ಯುವಕನಿಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ.
ತಕ್ಷಣ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆಯ ವೇಳೆ ಮೃತನೊಂದಿಗಿದ್ದ ಸ್ನೇಹಿತ ವಿವೇಕ್ ಸಿಂಗ್ ನೀಡಿದ ದೂರಿನ ಮೇರೆಗೆ ಜುಹು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಬಳಿಕ ಆರೋಪಿಗಳು ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇಬ್ಬರು ವಯಸ್ಕ ಆರೋಪಿಗಳನ್ನು ಬಂಧಿಸಿ, ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ನಿಧನ ವಾರ್ತೆ
Accident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ. ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಸುಳ್ಯ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ.
ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ತಾಯಿ ಕಮರು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
-
ಬಿಗ್ ನ್ಯೂಸ್10 hours agoHigh Court-ಈಶ್ವರಮಂಗಲ: ಮೇನಾಲದ ಹೈಟೆಕ್ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್ಗೆ ಹೈಕೋರ್ಟ್ ಆದೇಶ..!
-
ಅಪರಾಧ12 hours agoMangalore-ಮಂಗಳೂರು: ₹1.15 ಕೋಟಿ ದರೋಡೆಗೆ ಸಂಚು ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್-ಕೆಲಸದಿಂದ ಅಮಾನತು
-
ಸುಳ್ಯ12 hours agoAreca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
-
ಅಪರಾಧ11 hours agoArrested-ಬಡ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಬೃಹತ್ ಜಾಲ ಪತ್ತೆ: 11 ಮಂದಿ ಅರೆಸ್ಟ್; ಅಕ್ಕಪಡೆಯ ಮಹಿಳಾ ಪೊಲೀಸರ ಸಾಹಸಕ್ಕೆ ಮೆಚ್ಚುಗೆ
-
ರಾಜಕೀಯ12 hours agoHariprasad-ಮತಾಂತರ ನಿಷೇಧ ಕಾಯ್ದೆ ರದ್ದು ಫಿಕ್ಸ್? ಹರಿಪ್ರಸಾದ್ ಬಿಗ್ ಸುಳಿವು..!
-
ಕ್ರೈಂ10 hours agoSeven murder case-ಏಳು ಕೊಲೆ ಪ್ರಕರಣಕ್ಕೆ ₹4 ಕೋಟಿ ಆಸ್ತಿ ನಂಟು? ತಂದೆ-ಮಗಳನ್ನು ಒಟ್ಟಿಗೆ ಕೂರಿಸಿ ವಿಚಾರಣೆ; ಮಗಳಿಗೆ ಆಸ್ತಿ ಆಮಿಷವೊಡ್ಡಿ ಸಂಚಿಗೆ ಬಳಸಿಕೊಂಡ ತಂದೆ
-
ನಿಧನ ವಾರ್ತೆ10 hours agoMelkar-ಮೆಲ್ಕಾರ್: ಸ್ವರಾಜ್ ಸ್ಟುಡಿಯೋ ಮಾಲೀಕರ ಪುತ್ರಿ ನಿಧನ
-
ಸ್ಥಳೀಯ11 hours agoArrested-ಮಣಿಪಾಲದಲ್ಲಿ ವೇಶ್ಯಾವಾಟಿಕೆ ದಂಧೆ: ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಪಿಂಪ್ಗಳ ಬಂಧನ















