Connect with us

ನಿಧನ ವಾರ್ತೆ

Pakistani TV anchor-ಪಾಕಿಸ್ತಾನದ ಖ್ಯಾತ ಟಿವಿ ಆ್ಯಂಕರ್ ನಿವಾಸದಲ್ಲೇ ಗುಂಡೇಟಿಗೆ ಬಲಿ: ಪತಿ ಪೊಲೀಸ್ ವಶಕ್ಕೆ

Published

on



Ad Widget

Ad Widget

Ad Widget

Ad Widget

ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯ ಖ್ಯಾತ ಟಿವಿ ನಿರೂಪಕಿ ರಬಿಯಾ ಅಹ್ಸಾನ್ (41) ಅವರು ರಾವಲ್ಪಿಂಡಿಯ ಗುಲ್ಪನಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುತ್ತಿಗೆ ಹಾಗೂ ತಲೆಗೆ ಗುಂಡೇಟು ತಗುಲಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

ರಾವಲ್ಪಿಂಡಿ: ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯ ಖ್ಯಾತ ಟಿವಿ ನಿರೂಪಕಿ ರಬಿಯಾ ಅಹ್ಸಾನ್ (41) ಅವರು ರಾವಲ್ಪಿಂಡಿಯ ಗುಲ್ಪನಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುತ್ತಿಗೆ ಹಾಗೂ ತಲೆಗೆ ಗುಂಡೇಟು ತಗುಲಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

Ad Widget

Ad Widget alt="Ad Widget"/>

Ad Widget

ಘಟನೆ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಜಾಬ್ ವಿಧಿವಿಜ್ಞಾನ ವಿಜ್ಞಾನ ಸಂಸ್ಥೆಯ (PFSA) ತಂಡ ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Ad Widget

Ad Widget <> Ad Widget

ಪ್ರಾಥಮಿಕ ಮಾಹಿತಿಯ ಪ್ರಕಾರ, ರಬಿಯಾ ಅವರ ಪತಿ ಅಕ್ಸಾನ್ ತಾಹಿರ್ ಖಾನ್ ತಾನೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



Ad Widget

ಕೊಲೆಗೆ ಬಳಸಲಾಗಿದೆ ಎಂದು ಶಂಕಿಸಲಾದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ. ವಿಚಾರಣೆ ವೇಳೆ ಪತಿ ಅಕ್ಸಾನ್, ತಾನು ಪಿಸ್ತೂಲ್ ಕೈಯಲ್ಲಿ ಹಿಡಿದುಕೊಂಡಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಹೇಳಿದ್ದಾನೆ. ಅಲ್ಲದೆ, ಪಿಸ್ತೂಲ್‌ನಲ್ಲಿ ಗುಂಡು ತುಂಬಿರುವುದು ತನಗೆ ತಿಳಿದಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ಘಟನೆ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ad Widget

Ad Widget

ಯಾರು ಈ ರಬಿಯಾ ಅಹ್ಸಾನ್?

ರಬಿಯಾ ಅಹ್ಸಾನ್ ಅವರು ಪಾಕಿಸ್ತಾನದ ’92 ನ್ಯೂಸ್’ ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿರಿಯ ಪತ್ರಕರ್ತರಾದ ಅಮೀರ್ ಮಾತೀನ್ ಮತ್ತು ರೌಫ್ ಕಾಸ್ರಾ ಅವರೊಂದಿಗೆ ಪ್ರಚಲಿತ ವಿದ್ಯಮಾನಗಳ ಕುರಿತ ಕಾರ್ಯಕ್ರಮವೊಂದನ್ನು ಸಹ-ನಿರೂಪಣೆ ಮಾಡುತ್ತಿದ್ದರು.

ಖ್ಯಾತ ನಿರೂಪಕಿಯ ಹತ್ಯೆಯ ಸುದ್ದಿ ಪಾಕಿಸ್ತಾನದ ಪತ್ರಿಕೋದ್ಯಮ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಅವರ ಸಹೋದ್ಯೋಗಿಗಳು ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Ad Widget
Click to comment

Leave a Reply

ನಿಧನ ವಾರ್ತೆ

ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ

Published

on



Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನ ಪ್ರಸಿದ್ಧ ಉದ್ಯಮಿ, ಶಿವಾನಿ ಬಾಟ್ಲಿಂಗ್ (ಮಹೇಶ್ವರ ಬಾಟ್ಲಿಂಗ್ ಕಂಪನಿ) ಹಾಗೂ ಸಂತೋಷ್ ವೈನ್ಸ್ ಸಂಸ್ಥೆಗಳ ಮಾಲೀಕ, ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಎ. (69) ಅವರು ನ. 7ರಂದು ನಿಧನರಾದರು.

Ad Widget

Ad Widget

Ad Widget

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿಯೂ, ಪರಿವಾರ ಬಂಟರ ಸಂಘ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಉದ್ಯಮ ಕ್ಷೇತ್ರದ ಜತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದ ಅವರು ಪುತ್ತೂರಿನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.

Ad Widget

Ad Widget alt="Ad Widget"/>

Ad Widget

ಮಂಗಳೂರಿನಲ್ಲಿ ನ. 4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಅವರು, ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

Ad Widget

Ad Widget <> Ad Widget

ನೆಹರೂನಗರ ಕಾಯರ್ ಮಜಲು ನಿವಾಸಿಯಾಗಿದ್ದ ಅವರು ಪತ್ನಿ ನಿಶಾ, ಪುತ್ರಿಯರಾದ ನೇಹಾ ಸಂದೀಪ್ ನಾಯಕ್, ಸಮೀಕ್ಷಾ ಸುಶಿತ್ ನಾಯಕ್, ಪುತ್ರ ರಾಹುಲ್, ಸಹೋದರ ನವೀನ್ ನಾಯಕ್, ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.



Ad Widget

ನ. 9ರಂದು ಅಂತ್ಯಸಂಸ್ಕಾರ

Ad Widget

Ad Widget

ಮೃತರ ಪುತ್ರಿಯರು ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಅವರು ಆಗಮಿಸಿದ ಬಳಿಕ ನ 9 ರಂದು ಅಂತ್ಯಸಂಸ್ಕಾರ ನದಶಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Ad Widget
Continue Reading

ನಿಧನ ವಾರ್ತೆ

Suicide-ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!

Published

on



Ad Widget

Ad Widget

Ad Widget

Ad Widget

ಮಂಡ್ಯ ತಾಲೂಕಿನ ವಿ.ಸಿ. ಫಾರಂ ಗೇಟ್ ಸಮೀಪ ರೈಲಿಗೆ ತಲೆಕೊಟ್ಟು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಗಳಾದ ಸಹನಾ (25) ಮತ್ತು ರಾಹುಲ್ (23) ಎಂದು ಗುರುತಿಸಲಾಗಿದೆ. ಸಹನಾ ಇಬ್ಬರು ಮಕ್ಕಳ ತಾಯಿಯಾಗಿದ್ದರು.

Ad Widget

Ad Widget

Ad Widget

ಮಂಡ್ಯ, ನ.6: ತಾಲೂಕಿನ ವಿ.ಸಿ. ಫಾರಂ ಗೇಟ್ ಸಮೀಪ ರೈಲಿಗೆ ತಲೆಕೊಟ್ಟು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಗಳಾದ ಸಹನಾ (25) ಮತ್ತು ರಾಹುಲ್ (23) ಎಂದು ಗುರುತಿಸಲಾಗಿದೆ. ಸಹನಾ ಇಬ್ಬರು ಮಕ್ಕಳ ತಾಯಿಯಾಗಿದ್ದರು.

Ad Widget

Ad Widget alt="Ad Widget"/>

Ad Widget

ಸುಮಾರು ಎಂಟು ವರ್ಷಗಳ ಹಿಂದೆ ಸಹನಾ ಆಟೋ ಚಾಲಕ ವೀರೇಶ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿ ಮೂರು ವರ್ಷಗಳ ಹಿಂದೆ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಅದೇ ಬಡಾವಣೆಯ ರಾಹುಲ್ ಪರಿಚಯವಾಗಿದ್ದ ಎನ್ನಲಾಗಿದೆ.

Ad Widget

Ad Widget <> Ad Widget

ನಂತರ ಮನೆ ಬದಲಾಯಿಸಿದರೂ ಸಹನಾ ಮತ್ತು ರಾಹುಲ್ ನಡುವಿನ ಸಂಬಂಧ ಮುಂದುವರಿದಿತ್ತು ಎಂದು ತಿಳಿದುಬಂದಿದೆ. ಪತಿ ವೀರೇಶ್ ತಮ್ಮಿಬ್ಬರನ್ನು ಒಟ್ಟಿಗೆ ಬಾಳಲು ಬಿಡುವುದಿಲ್ಲ ಎಂಬ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



Ad Widget
Ad Widget
Continue Reading

ನಿಧನ ವಾರ್ತೆ

Hormuz-ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ: ತಂದೆಯ ಹಾದಿಯಲ್ಲೇ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ಮಗ..!

Published

on



Ad Widget

Ad Widget

Ad Widget

Ad Widget

ಸುಮಾರು ಎರಡು ದಶಕಗಳ ಹಿಂದೆ ಸಮುದ್ರದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಗುಜರಾತ್‌ನ ದ್ವಾರಕ ಜಿಲ್ಲೆಯ ಸಲಾಯಾ ಗ್ರಾಮದ ಗಂಧರ್ ಕುಟುಂಬಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ನವೆಂಬರ್ 2ರಂದು ಭಾರತೀಯ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕುಟುಂಬದ ಕಿರಿಯ ಸದಸ್ಯ, ನಾವಿಕ ನಹೀಮ್ ಅಜೀಜ್ ಗಂಧರ್ ಮೃತಪಟ್ಟಿದ್ದಾರೆ.

Ad Widget

Ad Widget

Ad Widget

ಅಹಮದಾಬಾದ್: ಸುಮಾರು ಎರಡು ದಶಕಗಳ ಹಿಂದೆ ಸಮುದ್ರದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಗುಜರಾತ್‌ನ ದ್ವಾರಕ ಜಿಲ್ಲೆಯ ಸಲಾಯಾ ಗ್ರಾಮದ ಗಂಧರ್ ಕುಟುಂಬಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ನವೆಂಬರ್ 2ರಂದು ಭಾರತೀಯ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕುಟುಂಬದ ಕಿರಿಯ ಸದಸ್ಯ, ನಾವಿಕ ನಹೀಮ್ ಅಜೀಜ್ ಗಂಧರ್ ಮೃತಪಟ್ಟಿದ್ದಾರೆ.

Ad Widget

Ad Widget alt="Ad Widget"/>

Ad Widget

ನಹೀಮ್ ಅವರು ‘ಅಲ್ ಜುಸುಫಿ’ ಎಂಬ ಹಡಗಿನಲ್ಲಿದ್ದ 14 ಸಿಬ್ಬಂದಿಗಳ ಪೈಕಿ ಒಬ್ಬರಾಗಿದ್ದರು. ಯುಎಇಯ ಹಮ್ಮಿಯಾ ಬಂದರಿನಿಂದ ಪೋರಬಂದರ್‌ಗೆ 900 ಮೆಟ್ರಿಕ್ ಟನ್ ಖರ್ಜೂರ ಸಾಗಿಸುತ್ತಿದ್ದ ಈ ಹಡಗಿನ ಮೇಲೆ ಒಮನ್‌ನ ಲಿಮಾ ಸಮೀಪ ಕ್ಷಿಪಣಿ ದಾಳಿ ನಡೆದಿತ್ತು ಎನ್ನಲಾಗಿದೆ. ಘಟನೆಯಲ್ಲಿ ನಹೀಮ್ ಮೃತಪಟ್ಟಿದ್ದು, ಉಳಿದ 13 ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Ad Widget

Ad Widget <> Ad Widget

ಗಂಧರ್ ಕುಟುಂಬಕ್ಕೆ ಸಮುದ್ರದ ದುರಂತ ಹೊಸದೇನಲ್ಲ. ಸುಮಾರು 20-21 ವರ್ಷಗಳ ಹಿಂದೆ ನಹೀಮ್ ಅವರ ತಂದೆ ಅಜೀಜ್‌ಭಾಯಿ ಕೂಡ ಸಮುದ್ರದಲ್ಲೇ ಮೃತಪಟ್ಟಿದ್ದರು. ದುಬೈನಿಂದ ಹಿಂದಿರುಗುತ್ತಿದ್ದ ವೇಳೆ ಚಂಡಮಾರುತಕ್ಕೆ ಸಿಲುಕಿ ಅವರು ನಾಪತ್ತೆಯಾಗಿದ್ದರು. ಅವರ ಮೃತದೇಹವೂ ಪತ್ತೆಯಾಗಿರಲಿಲ್ಲ ಎಂದು ನಹೀಮ್ ಅವರ ಸಂಬಂಧಿ ಇರ್ಫಾನ್ ತಿಳಿಸಿದ್ದಾರೆ.



Ad Widget

ಅಜೀಜ್‌ಭಾಯಿ ಅವರ ಐವರು ಮಕ್ಕಳಲ್ಲಿ ನಹೀಮ್ ಕೊನೆಯವರಾಗಿದ್ದರು. ಅವರಿಗೆ ನಾಲ್ವರು ಸಹೋದರಿಯರು ಹಾಗೂ ಒಬ್ಬ ಅಣ್ಣ ಇದ್ದಾರೆ. ನಾಲ್ವರು ಸಹೋದರಿಯರಿಗೂ ವಿವಾಹವಾಗಿದ್ದು, ಅಣ್ಣ ಸ್ವಗ್ರಾಮದಲ್ಲೇ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದಾರೆ.

Ad Widget

Ad Widget

ಒಮನ್‌ನಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧಾರ

ದುರಂತಕ್ಕೀಡಾದ ಹಡಗಿನ ಮಾಲೀಕ ಹಾಜಿ ಅಕ್ಟರ್ ಸುಂಭಾನಿಯಾ ಮಾತನಾಡಿ, ನಹೀಮ್ ಅವರ ಅಂತ್ಯಕ್ರಿಯೆಯನ್ನು ಒಮನ್‌ನಲ್ಲೇ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕುಟುಂಬದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಮನ್‌ಗೆ ತೆರಳಲು ಬಯಸಿದ್ದರೂ, ವೀಸಾ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ. ಹೀಗಾಗಿ ಅಂತ್ಯಕ್ರಿಯೆಯನ್ನು ಮುಂದೂಡಲು ಕುಟುಂಬದವರು ಇಚ್ಛಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯ ರಾಯಭಾರ ಕಚೇರಿ ವಿರುದ್ಧ ಮಾಲೀಕರ ಆರೋಪ

ಹಡಗಿನಲ್ಲಿರುವ ಇತರ ಸಿಬ್ಬಂದಿ ಅಂತ್ಯಕ್ರಿಯೆಗೆ ಅಗತ್ಯವಾದ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಒಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸೂಕ್ತ ನೆರವು ದೊರೆಯುತ್ತಿಲ್ಲ ಎಂದು ಹಡಗಿನ ಮಾಲೀಕರು ಆರೋಪಿಸಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಲು 24 ಗಂಟೆಗಳ ಕಾಲ ವಿಳಂಬ ಮಾಡಿದ್ದಾರೆ ಎಂದು ದೂರಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಭಾರತದ ಹಲವು ಹಡಗುಗಳು ಹಾನಿಗೊಳಗಾಗಿವೆ. ಈ ವರ್ಷದ ಫೆಬ್ರುವರಿಯಿಂದ ಆರು ಹಡಗುಗಳು ಸಂಪೂರ್ಣ ನಾಶವಾಗಿದ್ದರೂ, ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂದು ಸುಂಭಾನಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಡಗಿನಲ್ಲಿದ್ದ ಸರಕು ಹಾಗೂ ಸಿಬ್ಬಂದಿಗೆ ವಿಮೆ ಮಾಡಿಸಿರಲಿಲ್ಲ. ಇದುವರೆಗೆ ಸರ್ಕಾರದಿಂದ ಒಂದು ರೂಪಾಯಿ ನೆರವೂ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಅಲ್ತಾಫ್ ತಾಲಬ್ ಕೇರ್ ಅವರ ಕುಟುಂಬಕ್ಕೆ ಮಾತ್ರ ಹಡಗು ಸಾಗಣೆ ಮಹಾನಿರ್ದೇಶನಾಲಯದಿಂದ ₹10 ಲಕ್ಷ ಪರಿಹಾರ ನೀಡಲಾಗಿತ್ತು ಎಂದು ಸುಂಭಾನಿಯಾ ಮಾಹಿತಿ ನೀಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!