Connect with us

ಮಂಗಳೂರು

Mangalore-ರಾತ್ರೋರಾತ್ರಿ ಸುಟ್ಟು ಕರಕಲಾದ ಕಾರು; ಹರೇಕಳದಲ್ಲಿ ನಿಗೂಢ ಘಟನೆಯ ಸುತ್ತ ಹಲವು ಅನುಮಾನ..!

Published

on



Ad Widget

Ad Widget

Ad Widget

Ad Widget

ಉಳ್ಳಾಲ ಸಮೀಪದ ಹರೇಕಳದ ಮುಖ್ಯರಸ್ತೆಯಲ್ಲಿ ಇಕೋ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

Ad Widget

Ad Widget

Ad Widget

ಮಂಗಳೂರು: ಉಳ್ಳಾಲ ಸಮೀಪದ ಹರೇಕಳದ ಮುಖ್ಯರಸ್ತೆಯಲ್ಲಿ ಇಕೋ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

Ad Widget

Ad Widget alt="Ad Widget"/>

Ad Widget

ಹರೇಕಳ ಕಡವಿನಿಂದ ಗ್ರಾಮಚಾವಡಿ ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಇಡೀ ಈ ರಸ್ತೆಯಲ್ಲಿ ಹಲವು ವಾಹನಗಳು ಸಂಚರಿಸಿದ್ದರೂ, ಕಾರು ಬೆಂಕಿಗೆ ಆಹುತಿಯಾದ ಘಟನೆ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

Ad Widget

Ad Widget <> Ad Widget

ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಯಾರಾದರೂ ಇದ್ದರೇ? ವಾಹನ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತೇ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆಯೇ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿವೆ.



Ad Widget

ಇದಲ್ಲದೆ, ಹಳೆಯ ಕಾರಿಗೆ ವಿಮಾ ಹಣ ಪಡೆಯುವ ಉದ್ದೇಶದಿಂದ ಬೆಂಕಿ ಹಚ್ಚಲಾಗಿದೆಯೇ ಅಥವಾ ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗೆ ವಾಹನ ಬಳಸಲಾಗಿತ್ತೇ ಎಂಬ ಶಂಕೆಯನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Ad Widget

Ad Widget

ಸುಟ್ಟು ಕರಕಲಾದ ಕಾರಿನ ಮಾಲೀಕರು ಯಾರು? ಬೆಂಕಿ ಅವಘಡಕ್ಕೆ ನಿಖರ ಕಾರಣವೇನು? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯ ಹಿಂದಿನ ಸತ್ಯಾಂಶವನ್ನು ಪತ್ತೆಹಚ್ಚಲು ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸದ್ಯ ಹರೇಕಳದ ಮುಖ್ಯರಸ್ತೆಯಲ್ಲಿ ಪತ್ತೆಯಾದ ನಿಗೂಢವಾಗಿ ಸುಟ್ಟು ಕರಕಲಾದ ಇಕೋ ಕಾರಿನ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.

Ad Widget
Click to comment

Leave a Reply

ಶಿಕ್ಷಣ

Sahyadri College-ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಮತ್ತು ಶೈನ್ ಫೌಂಡೇಶನ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವ ‘ಸೈನೆರ್ಜಿಯಾ’26’

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಶೈನ್ ಫೌಂಡೇಶನ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವವಾದ ‘ಸೈನೆರ್ಜಿಯಾ’26’ ಅನ್ನು ಆಯೋಜಿಸಲಾಗಿದೆ.

Ad Widget

Ad Widget

Ad Widget

ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಶೈನ್ ಫೌಂಡೇಶನ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವವಾದ‘ಸೈನೆರ್ಜಿಯಾ’26’ ಅನ್ನು ಆಯೋಜಿಸಲಾಗಿದೆ.

Ad Widget

Ad Widget alt="Ad Widget"/>

Ad Widget

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ತಾಂತ್ರಿಕ ಜ್ಞಾನ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಉತ್ಸವವನ್ನು ರೂಪಿಸಲಾಗಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಒಂದಾಗಿ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸೃಜನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಉತ್ಸವ ಅವಕಾಶ ಕಲ್ಪಿಸಲಿದೆ.

Ad Widget

Ad Widget <> Ad Widget

ಉದ್ಘಾಟನಾ ಸಮಾರಂಭವು 2026ರ ನವೆಂಬರ್ 12ರಂದು ನಡೆಯಲಿದ್ದು, ಶೈಕ್ಷಣಿಕ, ಕೈಗಾರಿಕಾ ಹಾಗೂ ಸರ್ಕಾರಿ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಜಿಟಿಟಿಸಿ (GTTC) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ ಅವರು ಹಾಗು ಇಜಿ ಇಂಡಿಯಾ (EG India) ಸಂಸ್ಥೆಯ ಮುಖ್ಯ ಡೇಟಾ ವಿಜ್ಞಾನಿ ಹಾಗೂ ತಂಡದ ವ್ಯವಸ್ಥಾಪಕರಾದ ಡಾ. ಪ್ರಖ್ಯಾತ್ ರೈ (Dr. Prakyath Rai) ಅವರು ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.



Ad Widget

ನವೆಂಬರ್ 14ರಂದು ನಡೆಯಲಿರುವ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಶ್ರೀ ಶಶಿಧರ್ ಹೆಗ್ಡೆ (Shashidhar Hegde) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗಣ್ಯರು ಹಾಗೂ ಕೈಗಾರಿಕಾ ಕ್ಷೇತ್ರದ ತಜ್ಞರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಮೂರು ದಿನಗಳ ಉತ್ಸವದಲ್ಲಿ 425ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಂದ 5,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸೈನೆರ್ಜಿಯಾ’26 ಉತ್ಸವವು 2026ರ ನವೆಂಬರ್ 12ರಿಂದ 14ರವರೆಗೆ ನಡೆಯಲಿದೆ.

Ad Widget

Ad Widget

ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH) ಸೈನೆರ್ಜಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 13ನೇ ಆವೃತ್ತಿಯ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH) ಶಾಲಾ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ತಮ್ಮ ನಾವೀನ್ಯಪೂರ್ಣ ಆಲೋಚನೆಗಳನ್ನು ಮತ್ತು ಸ್ಥಳೀಯ ಸಮುದಾಯದ ಸಮಸ್ಯೆಗಳಿಗೆ ಪರಿಹಾರಗಳನ್ನು ಪ್ರಸ್ತುತಪಡಿಸಲು ವೇದಿಕೆಯಾಗಲಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಟ್ಟು ₹2,00,000 ಮೊತ್ತದ ಆರಂಭಿಕ ಅನುದಾನ (Seed Grant) ನೀಡಲಾಗುವುದು. ಅಲ್ಲದೆ, ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ತಜ್ಞರ ಮಾರ್ಗದರ್ಶನ ಹಾಗೂ ನಾವೀನ್ಯತಾ ಮೂಲಸೌಕರ್ಯಗಳನ್ನು ಬಳಸಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು. ಇದರಿಂದ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಪ್ರಾಯೋಗಿಕ
ಪರಿಕಲ್ಪನಾ ಮಾದರಿಗಳಾಗಿ (Proof of Concept – PoC) ಅಭಿವೃದ್ಧಿಪಡಿಸಿಕೊಳ್ಳಬಹುದು.

ಡೆವ್‌ಹೋಸ್ಟ್ (DevHost)ಈ ಬಾರಿಯ ಸೈನೆರ್ಜಿಯಾದಲ್ಲಿ 9ನೇ ಆವೃತ್ತಿಯ ಡೆವ್‌ಹೋಸ್ಟ್ ಕೂಡ ನಡೆಯಲಿದೆ. EG ಸಂಸ್ಥೆಯು ಇದರ ಶೀರ್ಷಿಕೆ ಪ್ರಾಯೋಜಕರಾಗಿದೆ. ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯುನಿಟಿ (SOSC) ಆಯೋಜಿಸುವ ಈ ರಾಷ್ಟ್ರೀಯ ಮಟ್ಟದ ತಾಂತ್ರಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ 36 ಗಂಟೆಗಳ ಹ್ಯಾಕಥಾನ್. ಇದರೊಂದಿಗೆ ಸಾಫ್ಟ್‌ವೇರ್ ಡೆವಲಪರ್‌ಗಳ ವಿಶೇಷ ಉಪನ್ಯಾಸಗಳು, ಮಾಸ್ಟರ್‌ಕ್ಲಾಸ್‌ಗಳು, ಕೈಗಾರಿಕಾ ತಜ್ಞರಿಂದ ಕಾರ್ಯಾಗಾರಗಳು ಹಾಗೂ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿವೆ.

ಏರೋಫಿಲಿಯಾ (Aerophilia) ಟೀಮ್ ಚಾಲೆಂಜರ್ಸ್ ಆಯೋಜಿಸುವ ಮತ್ತು ನೈನೆಟ್ರಾನ್ ಟೆಕ್ (Ninetron Tech) ಪ್ರಾಯೋಜಕತ್ವ ವಹಿಸಿರುವ ರಾಷ್ಟ್ರೀಯ ಮಟ್ಟದ ಏರೋ-ಟೆಕ್ ಉತ್ಸವ ಏರೋಫಿಲಿಯಾ ಎರಡು ದಿನಗಳ ಕಾಲ ನಡೆಯಲಿದೆ. 13ನೇ ತಾರೀಕು ಬೆಳಿಗ್ಗೆ 9 ಗಂಟೆಗೆ ಏರ್ ಶೋ ನಡೆಯಲಿದೆ ಈ ಉತ್ಸವದಲ್ಲಿ ಏರೋಮಾಡೆಲಿಂಗ್ ಪ್ರದರ್ಶನಗಳು, ಡ್ರೋನ್ ರೇಸಿಂಗ್, ರಿಮೋಟ್ ಕಂಟ್ರೋಲ್ ವಿಮಾನಗಳ ಹಾರಾಟ, ಏರ್ ಶೋಗಳು, ಗೇಮಿಂಗ್ ಸ್ಪರ್ಧೆಗಳು ಹಾಗೂ ಸಂವಾದಾತ್ಮಕ ಕಾರ್ಯಾಗಾರಗಳು ನಡೆಯಲಿವೆ. ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುವುದು ಇದರ ಉದ್ದೇಶವಾಗಿದೆ.

ರೋಬೋಟಿಕ್ಸ್ ಸ್ಪರ್ಧೆಗಳು ಸಹ್ಯಾದ್ರಿ ರೋಬೋಟಿಕ್ಸ್ ಕ್ಲಬ್ (SRC) ವತಿಯಿಂದ ರೋಬೋ ಸಾಕರ್, ಸುಮೋ ರೋಬೋಟಿಕ್ಸ್ ಹಾಗೂ ಸ್ವಯಂಚಾಲಿತ ಸಂಚರಣೆ (Autonomous Navigation) ಸೇರಿದಂತೆ ವಿವಿಧ ರೋಬೋಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಯಾಂತ್ರಿಕ ವಿನ್ಯಾಸ, ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳಲ್ಲಿನ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸಲಿವೆ.

ಯುವ ಉದ್ಯಮಶೀಲತೆಗೆ ಸೈನೆರ್ಜಿಯಾದ ಕೊಡುಗೆ ಕಳೆದ ಹಲವು ವರ್ಷಗಳಿಂದ ಸೈನೆರ್ಜಿಯಾ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮೂಲವಾಗಿದ್ದು, ಅನೇಕ ಪ್ರಾದೇಶಿಕ
ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಪ್ರೇರಣೆಯಾಗಿದೆ. ಸಹ್ಯಾದ್ರಿಯ ಇನ್‌ಕ್ಯುಬೇಷನ್ ವ್ಯವಸ್ಥೆಯ ಮೂಲಕ ಬೆಳವಣಿಗೆ ಕಂಡ ಯಶಸ್ವಿ ಉದ್ಯಮಗಳೆಂದರೆ STEM ಆಟಿಕೆಗಳ ಬ್ರ್ಯಾಂಡ್ Dreamkit.cc, ಸಹಾಯಕ ತಂತ್ರಜ್ಞಾನ ಉದ್ಯಮ Prafal ಹಾಗೂ ಡೀಪ್-ಟೆಕ್ ಆಡಿಯೋ ಸ್ಟಾರ್ಟ್‌ಅಪ್ Sonic Lamb. ಇಂತಹ ಯಶೋಗಾಥೆಗಳು ವಿದ್ಯಾರ್ಥಿಗಳ ನವೀನ ಆಲೋಚನೆಗಳನ್ನು ಉದ್ಯಮಶೀಲತೆಯಾಗಿ ಪರಿವರ್ತಿಸುವಲ್ಲಿ ಸೈನೆರ್ಜಿಯಾದ ಪಾತ್ರವನ್ನು ಪ್ರತಿಬಿಂಬಿಸುತ್ತವೆ.

ಸಾರ್ವಜನಿಕರಿಗೆ ಮುಕ್ತ ಆಹ್ವಾನ ಸೈನೆರ್ಜಿಯಾ’26 ಸಾರ್ವಜನಿಕರಿಗೂ ಮುಕ್ತವಾಗಿದ್ದು, ನವೆಂಬರ್ 12ರಿಂದ 14ರವರೆಗೆ ನಡೆಯಲಿರುವ ಈ ಮೂರು ದಿನಗಳ ನಾವೀನ್ಯತಾ ಉತ್ಸವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ತಂತ್ರಜ್ಞಾನ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಆಸಕ್ತರಿಗೆ ಸ್ಥಳದಲ್ಲಿಯೇ ನೋಂದಣಿ (Spot Registration) ಮಾಡಿಕೊಳ್ಳುವ ಅವಕಾಶವಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಹಾಗೂ ಭವಿಷ್ಯದ ಬದಲಾವಣೆಯ ಹರಿಕಾರರನ್ನು ರೂಪಿಸಲು ಕೈಗಾರಿಕಾ ಸಂಸ್ಥೆಗಳು ಮತ್ತು ಉದ್ಯಮದ ಪ್ರಮುಖರು ಸಹ್ಯಾದ್ರಿ ಕಾಲೇಜಿನೊಂದಿಗೆ ಸಹಕರಿಸುವಂತೆ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಇ-ಮೇಲ್: synergia@sahyadri.edu.in
ಡಾ. ಪ್ರಶಾಂತ್ ರಾವ್ – 9448983914 (ಪ್ರಾದ್ಯಾಪಕ ಸಂಯೋಜಕರು)
ಭವಿಷ್ ಶೆಟ್ಟಿ – 9535670414 (ಕಾರ್ಯಕ್ರಮ ಸಂಯೋಜಕರು)
ಖುಷಿ ಶೆಟ್ಟಿ – 7676938425 (ಕಾರ್ಯಕ್ರಮ ಸಂಯೋಜಕರು)

ಸಹ್ಯಾದ್ರಿ ಕಾಲೇಜು ಆಡಳಿತಾಧಿಕಾರಿ ಮತ್ತು ಟ್ರಸ್ಟೀ ಶ್ರೀಕೃಷ್ಣ ಹೆಗ್ಡೆ, ಪ್ರಾಂಶುಪಾಲ ಡಾ. ಇಂಜಗನೇರಿ, ಡೀನ್ ಅಕ್ಯಾಡೆಮಿಕ್ ಡಾ ಶಮಂತ್ ರೈ ಹಾಗೂ ಕಾರ್ಯಕ್ರಮದ ಸಂಯೋಜಕರು ಮತ್ತು ಡೀನ್ ಸ್ಟೂಡೆಂಟ್ ವೆಲ್ಫೇರ್ ಡಾ. ಪ್ರಶಾತ್ ರಾವ್ ಇವರುಗಳು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

Ad Widget
Continue Reading

ಮಂಗಳೂರು

Mangalore-ಮಂಗಳೂರು: ಅತ್ತಾವರದ ಹೋಟೆಲ್ ಇಹಾಮ್ ಪ್ಯಾರಡೈಸ್‌ನಲ್ಲಿ ಬೆಂಕಿ ಅವಘಡ

Published

on



Ad Widget

Ad Widget

Ad Widget

Ad Widget

ಮಂಗಳೂರು ನಗರದ ಅತ್ತಾವರದಲ್ಲಿರುವ ಹೋಟೆಲ್ ಇಹಾಮ್ ಪ್ಯಾರಡೈಸ್‌ನಲ್ಲಿ ನಿನ್ನೆ ಸಂಜೆ ಸುಮಾರು 7 ಗಂಟೆಯ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ಕ್ಷಣವೇ ಮಾಹಿತಿ ತಿಳಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

Ad Widget

Ad Widget

Ad Widget

ಮಂಗಳೂರು: ನಗರದ ಅತ್ತಾವರದಲ್ಲಿರುವ ಹೋಟೆಲ್ ಇಹಾಮ್ ಪ್ಯಾರಡೈಸ್‌ನಲ್ಲಿ ನಿನ್ನೆ ಸಂಜೆ ಸುಮಾರು 7 ಗಂಟೆಯ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ.

Ad Widget

Ad Widget alt="Ad Widget"/>

Ad Widget

ಹೋಟೆಲ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಮಾಹಿತಿ ತಿಳಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

Ad Widget

Ad Widget <> Ad Widget

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಹಾಗೂ ಘಟನೆಯಿಂದ ಉಂಟಾಗಿರುವ ನಷ್ಟದ ಪ್ರಮಾಣ ಎಷ್ಟು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.



Ad Widget
Ad Widget
Continue Reading

ಮಂಗಳೂರು

‌ಮಂಗಳೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ : ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ಕೇಸ್

Published

on



Ad Widget

Ad Widget

Ad Widget

Ad Widget

ಮಂಗಳೂರು: ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರೇರಾ ಚರ್ಚ್‌ನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ (65) ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

ಪೆರ್ಮನ್ನೂರು ಗ್ರಾಮದ ಸೈಂಟ್ ಸೆಬಾಸ್ಟಿಯನ್ ಚರ್ಚ್‌ಗೆ ಪ್ರತಿ ಭಾನುವಾರ ಪ್ರಾರ್ಥನೆಗೆ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಮೇ 13ರಂದು ಧರ್ಮಗುರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಂತ್ರಸ್ತ ಬಾಲಕನ ಕಡೆಯಿಂದ ದೂರು ಬಂದ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಿಎನ್‌ಎಸ್‌ನ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

Ad Widget

Ad Widget alt="Ad Widget"/>

Ad Widget

ಇದಕ್ಕೂ ಮೊದಲು 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಕ್ಟೋಬರ್ 15ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಧರ್ಮಗುರು ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಅಕ್ಟೋಬರ್ 18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಕ್ಟೋಬರ್ 30ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಅವರು ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Ad Widget

Ad Widget <> Ad Widget

ಪ್ರಸ್ತುತ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡನೇ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿಗೆ ವಹಿಸಲಾಗಿದೆ.



Ad Widget

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!