ರಾಜಕೀಯ
Puttur-ಪುತ್ತೂರು ಕ್ಷೇತ್ರಕ್ಕೆ ₹654 ಕೋಟಿಗೂ ಅಧಿಕ ಗ್ಯಾರಂಟಿ ಸೌಲಭ್ಯ: ಬಿಜೆಪಿ ಟೀಕೆಗೆ ಉಮಾನಾಥ ಶೆಟ್ಟಿ ಪೆರ್ನೆ ತಿರುಗೇಟು
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಬಿಜೆಪಿ ಆರೋಪಕ್ಕೆ ಅಂಕಿಅಂಶಗಳ ಮೂಲಕ ಉತ್ತರಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ₹654 ಕೋಟಿಗೂ ಅಧಿಕ ಮೊತ್ತದ ಗ್ಯಾರಂಟಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಪುತ್ತೂರು: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಬಿಜೆಪಿ ಆರೋಪಕ್ಕೆ ಅಂಕಿಅಂಶಗಳ ಮೂಲಕ ಉತ್ತರಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ₹654 ಕೋಟಿಗೂ ಅಧಿಕ ಮೊತ್ತದ ಗ್ಯಾರಂಟಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ ನಿರ್ಮಾಣವಲ್ಲ. ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರುವುದೂ ಅಭಿವೃದ್ಧಿಯ ಭಾಗವಾಗಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದು, ಅರ್ಹ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪಿಸಲಾಗುತ್ತಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಪುತ್ತೂರು ಮತ್ತು ವಿಟ್ಲ ಭಾಗಗಳಲ್ಲಿ 80,371 ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 46,176 ಕುಟುಂಬಗಳಿಗೆ ₹293.91 ಕೋಟಿ ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 37 ಸಾವಿರಕ್ಕೂ ಅಧಿಕ ಕುಟುಂಬಗಳು ಸೌಲಭ್ಯ ಪಡೆಯುತ್ತಿವೆ. ಶಕ್ತಿ ಯೋಜನೆಯಡಿ 4.11 ಕೋಟಿಗೂ ಅಧಿಕ ಮಹಿಳಾ ಪ್ರಯಾಣಗಳು ನಡೆದಿದ್ದು, ಟಿಕೆಟ್ ಮೌಲ್ಯ ₹102.36 ಕೋಟಿ ಆಗಿದೆ. ಯುವನಿಧಿ ಯೋಜನೆಯಡಿ 1,005 ಮಂದಿಗೆ ಸುಮಾರು ₹2.50 ಕೋಟಿ ವಿತರಿಸಲಾಗಿದೆ ಎಂದು ವಿವರಿಸಿದರು.
ಗೃಹಲಕ್ಷ್ಮೀ ಯೋಜನೆಯ ಹಣ ಉಳಿತಾಯ ಮಾಡಿ ಹೈನುಗಾರಿಕೆ ಆರಂಭಿಸಿರುವ ಹಿರೇಬಂಡಾಡಿನ ಸುಂದರಿ ಅವರ ಉದಾಹರಣೆಯನ್ನು ಉಲ್ಲೇಖಿಸಿದರು. ಏಳು ದನಗಳನ್ನು ಹೊಂದಿರುವ ಅವರು ದಿನಕ್ಕೆ 50ರಿಂದ 60 ಲೀಟರ್ ಹಾಲು ಉತ್ಪಾದಿಸಿ, ತಿಂಗಳಿಗೆ ಸುಮಾರು ₹60 ಸಾವಿರ ಆದಾಯ ಗಳಿಸುತ್ತಿದ್ದಾರೆ.
ಮಂಗಳೂರು
Ashwini Vaishnaw-ಕೊಂಕಣ ರೈಲ್ವೆ ವಿಲೀನಕ್ಕೆ 4 ರಾಜ್ಯಗಳ ಸಮ್ಮತಿ ಅನಿವಾರ್ಯ; ಪಶ್ಚಿಮ ಘಟ್ಟದ ರೈಲು ಮಾರ್ಗಕ್ಕೆ ಹೊಸ ರೂಪ-ಸಚಿವ ಅಶ್ವಿನಿ ವೈಷ್ಣವ್
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ಪಾಲುದಾರ ರಾಜ್ಯಗಳ ಒಪ್ಪಿಗೆಯಿಲ್ಲದೆ ಇದು ಅಸಾಧ್ಯ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗುರುವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದ ಪ್ರಮುಖ ರೈಲ್ವೆ ಯೋಜನೆಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.
ಮಂಗಳೂರು: ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ಪಾಲುದಾರ ರಾಜ್ಯಗಳ ಒಪ್ಪಿಗೆಯಿಲ್ಲದೆ ಇದು ಅಸಾಧ್ಯ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗುರುವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದ ಪ್ರಮುಖ ರೈಲ್ವೆ ಯೋಜನೆಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.
ಕೊಂಕಣ ರೈಲ್ವೆ ವಿಲೀನದ ತಾಂತ್ರಿಕ ಅಡಚಣೆಗಳೇನು?
ವಿಲೀನ ಪ್ರಕ್ರಿಯೆ ಕುರಿತು ವಿವರಿಸಿದ ಸಚಿವರು, “ಕೊಂಕಣ ರೈಲ್ವೆಯು ಕೇವಲ ಕೇಂದ್ರ ಸರ್ಕಾರದ ಸಂಸ್ಥೆಯಲ್ಲ; ಇದರಲ್ಲಿ ಕೇಂದ್ರದ ಜೊತೆಗೆ ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಷೇರು ಪಾಲುದಾರಿಕೆಯಿದೆ. ನಿಯಮದ ಪ್ರಕಾರ, ಈ ಎಲ್ಲಾ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ವಿಲೀನಕ್ಕೆ ಸಮ್ಮತಿ ಸೂಚಿಸಿದರೆ ಮಾತ್ರ ಮುಂದಿನ ಹೆಜ್ಜೆ ಇಡಲು ಸಾಧ್ಯ. ಈಗಾಗಲೇ ಎಲ್ಲಾ ರಾಜ್ಯಗಳಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಅವರ ಒಪ್ಪಿಗೆ ದೊರೆತ ತಕ್ಷಣ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ” ಎಂದು ಸ್ಪಷ್ಟಪಡಿಸಿದರು.
ಘಾಟ್ ಮಾರ್ಗದ ದ್ವಿಪಥಕ್ಕೆ (Doubling) ವಿನೂತನ ವಿನ್ಯಾಸ:
ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗವನ್ನು ದ್ವಿಪಥಗೊಳಿಸುವ ಯೋಜನೆಗೆ ಸರ್ಕಾರ ಸಂಪೂರ್ಣ ಆದ್ಯತೆ ನೀಡಿದೆ ಎಂದ ಸಚಿವರು, ಈ ಕುರಿತ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟರು:
- ಡಿಪಿಆರ್ ಸಿದ್ಧತೆ ಆರಂಭ: ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ (FLS) ಪೂರ್ಣಗೊಂಡಿದ್ದು, ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
- ಇಳಿಜಾರು ತಗ್ಗಿಸಲು ಪ್ಲಾನ್: ಪಶ್ಚಿಮ ಘಟ್ಟದ ಕಡಿದಾದ ಪ್ರದೇಶದಲ್ಲಿ ಹಳಿ ನಿರ್ಮಿಸುವುದು ಸವಾಲಿನ ಕೆಲಸ. ಮೊದಲ ಹಳಿಯಲ್ಲಿರುವಂತೆ ಅತಿಯಾದ ಏರು-ಇಳಿಜಾರು (Steep gradient) ಸಮಸ್ಯೆ ಎದುರಾಗದಂತೆ ತಡೆಯಲು, ಎರಡನೇ ಹಳಿಯನ್ನು ಸಾಧಾರಣ ಇಳಿಜಾರು (Moderate gradient) ಹೊಂದಿರುವಂತೆ ಹೊಸದಾಗಿ ವಿನ್ಯಾಸಗೊಳಿಸಲಾಗುತ್ತಿದೆ.
- ಕರಾವಳಿ-ರಾಜಧಾನಿ ನಡುವೆ ವಂದೇ ಭಾರತ್ ಸಂಭ್ರಮ:
“ಶುಕ್ರವಾರದಿಂದ (ನಾಳೆ) ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಕರಾವಳಿ ಕರ್ನಾಟಕವನ್ನು ರಾಜಧಾನಿಯೊಂದಿಗೆ ಬೆಸೆಯುವ ಈ ಯೋಜನೆಗೆ ಘಾಟ್ ಪ್ರದೇಶದ ವಿದ್ಯುದ್ದೀಕರಣ ಹಾಗೂ ರೈಲಿನ ತಾಂತ್ರಿಕ ಮಾರ್ಪಾಡುಗಳಂತಹ ದೊಡ್ಡ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತಿದ್ದೇವೆ. ಇದೇ ವೇಳೆ ಉಡುಪಿಯಲ್ಲಿ ಎಫ್‌ಎಂ ರೇಡಿಯೋ ಟ್ರಾನ್ಸ್‌ಮಿಟರ್ ಕೂಡ ಉದ್ಘಾಟನೆಯಾಗಲಿದೆ” ಎಂದು ಹೇಳಿದರು. - ಕಾಂಗ್ರೆಸ್ ಅವಧಿಯ ಬಜೆಟ್ ಎಷ್ಟಿತ್ತು? ಎಂ.ಬಿ. ಪಾಟೀಲ್‌ಗೆ ಸಚಿವರ ಪ್ರಶ್ನೆ:
ರಾಜ್ಯಕ್ಕೆ ಪ್ರಮುಖ ರೈಲ್ವೆ ಯೋಜನೆಗಳನ್ನು ನೀಡುವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂಬ ಸಚಿವ ಎಂ.ಬಿ. ಪಾಟೀಲ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವೈಷ್ಣವ್, “ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಮೇಲೆಯೇ ಕರ್ನಾಟಕದ ರೈಲ್ವೆ ಕ್ಷೇತ್ರಕ್ಕೆ ನ್ಯಾಯ ಸಿಕ್ಕಿದೆ. ಇಂದು ರಾಜ್ಯದಲ್ಲಿ ₹75,000 ಕೋಟಿ ಮೊತ್ತದ ಬೃಹತ್ ಯೋಜನೆಗಳು ನಡೆಯುತ್ತಿವೆ. ಬುಲೆಟ್ ರೈಲು, ವಂದೇ ಭಾರತ್, ವಂದೇ ಭಾರತ್ ಸ್ಲೀಪರ್ ಹಾಗೂ ನಿಲ್ದಾಣಗಳ ಆಧುನೀಕರಣದಂತಹ ಕೆಲಸಗಳು ಹಿಂದೆಂದೂ ನಡೆದಿರಲಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕರ್ನಾಟಕಕ್ಕೆ ಎಷ್ಟು ಅನುದಾನ ಸಿಕ್ಕಿತ್ತು ಎಂಬುದನ್ನು ಎಂ.ಬಿ. ಪಾಟೀಲ್ ಅವರೇ ಉತ್ತರಿಸಲಿ” ಎಂದು ಸವಾಲು ಹಾಕಿದರು.
ರಾಜಕೀಯ
New app-ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ: ಮೂರು ತಿಂಗಳಲ್ಲಿ ಹೊಸ ಆ್ಯಪ್ ಜಾರಿ
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯ ನಿರ್ವಹಣೆ ಹಾಗೂ ವಿಲೇವಾರಿ ಮೇಲೆ ನಿಗಾ ಇಡಲು ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಈ ನೂತನ ವ್ಯವಸ್ಥೆಯನ್ನು ಮೂರು ತಿಂಗಳೊಳಗೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೆಂಗಳೂರು: ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯ ನಿರ್ವಹಣೆ ಹಾಗೂ ವಿಲೇವಾರಿ ಮೇಲೆ ನಿಗಾ ಇಡಲು ವಿಶೇಷ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಈ ನೂತನ ವ್ಯವಸ್ಥೆಯನ್ನು ಮೂರು ತಿಂಗಳೊಳಗೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ‘ಟ್ರೇಸಬಿಲಿಟಿ ಆ್ಯಪ್’ ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಆ್ಯಪ್ ಮೂಲಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಖರೀದಿಸುವ ಅಡುಗೆ ಎಣ್ಣೆಯ ಪ್ರಮಾಣ ಹಾಗೂ ಬಳಕೆಯಾದ ಬಳಿಕ ಅದನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯ ಮೇಲೆ ನಿಗಾ ಇರಿಸಲಾಗುತ್ತದೆ ಎಂದು ಹೇಳಿದರು.
ಅಡುಗೆ ಎಣ್ಣೆಯನ್ನು ಪದೇಪದೇ ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ದೊಡ್ಡ ಹೋಟೆಲ್‌ಗಳು ಮತ್ತು ಕಾರ್ಖಾನೆಗಳು ಸಗಟು ಪ್ರಮಾಣದಲ್ಲಿ ಎಣ್ಣೆ ಖರೀದಿಸಿದ ಬಳಿಕ ಬಳಸಿದ ಎಣ್ಣೆಯನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಇರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಎಣ್ಣೆ ಸಣ್ಣ ಹೋಟೆಲ್‌ಗಳಿಗೆ ಮರುಮಾರಾಟವಾಗುವುದನ್ನು ತಡೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು.
ನೂತನ ಆ್ಯಪ್‌ನಲ್ಲಿ ಅಡುಗೆ ಎಣ್ಣೆ ಖರೀದಿಯ ಪ್ರಮಾಣ ಮತ್ತು ಬಳಸಿದ ಎಣ್ಣೆಯ ವಿತರಣೆಗೆ ಸಂಬಂಧಿಸಿದ ದತ್ತಾಂಶವನ್ನು ದಾಖಲಿಸಲಾಗುತ್ತದೆ. ಇದರಿಂದ ಬಳಸಿದ ಎಣ್ಣೆಯ ಚಲನವಲನವನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಯಮದ ಪ್ರಕಾರ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವಂತಿಲ್ಲ. ಈ ನೂತನ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಜಾರಿಗೊಳಿಸಲಾಗುವುದು. ಎಫ್‌ಎಸ್‌ಎಸ್‌ಎಐ ಬಳಸಿದ ಅಡುಗೆ ಎಣ್ಣೆಗೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸಿದರೆ, ಅದನ್ನು ವೈಮಾನಿಕ ಇಂಧನ ಉತ್ಪಾದನೆಗೆ ರಫ್ತು ಮಾಡುವ ಅವಕಾಶವಿದೆ ಎಂದು ಸಚಿವರು ಹೇಳಿದರು.
ರಾಜಕೀಯ
Hariprasad-ಮತಾಂತರ ನಿಷೇಧ ಕಾಯ್ದೆ ರದ್ದು ಫಿಕ್ಸ್? ಹರಿಪ್ರಸಾದ್ ಬಿಗ್ ಸುಳಿವು..!
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ವಿವಾದಿತ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕಾಯ್ದೆಯನ್ನು ವಾಪಸ್ ಪಡೆಯುವ ಸಾಧ್ಯತೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸುಳಿವು ನೀಡಿದ್ದಾರೆ.
ಬೆಂಗಳೂರು, ನ.12: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ವಿವಾದಿತ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕಾಯ್ದೆಯನ್ನು ವಾಪಸ್ ಪಡೆಯುವ ಸಾಧ್ಯತೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸುಳಿವು ನೀಡಿದ್ದಾರೆ.
2022ರ ಹಿಂದಿನ ವ್ಯವಸ್ಥೆ ಮರುಜಾರಿ:
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತ ಸಂಘಟನೆಗಳ ‘ವಚನಭ್ರಷ್ಟ ಹೋರಾಟ’ದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಹರಿಪ್ರಸಾದ್, “ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ. 2022ರಲ್ಲಿ ಹೇಗಿತ್ತೋ ಅದೇ ರೀತಿಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುವುದು” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದಾಗಿ ಭರವಸೆ ನೀಡಿತ್ತು.
ಕಾಯ್ದೆ ಹಿಂಪಡೆಯುವ ನಿರ್ಧಾರಕ್ಕೆ ಬಿಜೆಪಿಯಿಂದ ವಿರೋಧ:
ಇನ್ನೊಂದೆಡೆ, ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಸೇನಾ ತರಬೇತಿ ನೀಡುವ ಹೆಸರಿನಲ್ಲಿ ಹಿಂದೂಗಳಿಂದ ಅವರನ್ನು ಪ್ರತ್ಯೇಕಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ಇಂತಹ ಕ್ರಮಗಳ ವಿರುದ್ಧ ಸೂಕ್ತ ಸಂದರ್ಭದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
-
ಬಿಗ್ ನ್ಯೂಸ್10 hours agoHigh Court-ಈಶ್ವರಮಂಗಲ: ಮೇನಾಲದ ಹೈಟೆಕ್ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್ಗೆ ಹೈಕೋರ್ಟ್ ಆದೇಶ..!
-
ಅಪರಾಧ12 hours agoMangalore-ಮಂಗಳೂರು: ₹1.15 ಕೋಟಿ ದರೋಡೆಗೆ ಸಂಚು ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್-ಕೆಲಸದಿಂದ ಅಮಾನತು
-
ಸುಳ್ಯ12 hours agoAreca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
-
ಅಪರಾಧ11 hours agoArrested-ಬಡ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಬೃಹತ್ ಜಾಲ ಪತ್ತೆ: 11 ಮಂದಿ ಅರೆಸ್ಟ್; ಅಕ್ಕಪಡೆಯ ಮಹಿಳಾ ಪೊಲೀಸರ ಸಾಹಸಕ್ಕೆ ಮೆಚ್ಚುಗೆ
-
ರಾಜಕೀಯ12 hours agoHariprasad-ಮತಾಂತರ ನಿಷೇಧ ಕಾಯ್ದೆ ರದ್ದು ಫಿಕ್ಸ್? ಹರಿಪ್ರಸಾದ್ ಬಿಗ್ ಸುಳಿವು..!
-
ಕ್ರೈಂ10 hours agoSeven murder case-ಏಳು ಕೊಲೆ ಪ್ರಕರಣಕ್ಕೆ ₹4 ಕೋಟಿ ಆಸ್ತಿ ನಂಟು? ತಂದೆ-ಮಗಳನ್ನು ಒಟ್ಟಿಗೆ ಕೂರಿಸಿ ವಿಚಾರಣೆ; ಮಗಳಿಗೆ ಆಸ್ತಿ ಆಮಿಷವೊಡ್ಡಿ ಸಂಚಿಗೆ ಬಳಸಿಕೊಂಡ ತಂದೆ
-
ನಿಧನ ವಾರ್ತೆ10 hours agoMelkar-ಮೆಲ್ಕಾರ್: ಸ್ವರಾಜ್ ಸ್ಟುಡಿಯೋ ಮಾಲೀಕರ ಪುತ್ರಿ ನಿಧನ
-
ಸ್ಥಳೀಯ11 hours agoArrested-ಮಣಿಪಾಲದಲ್ಲಿ ವೇಶ್ಯಾವಾಟಿಕೆ ದಂಧೆ: ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಪಿಂಪ್ಗಳ ಬಂಧನ















