Connect with us

ಬಿಗ್ ನ್ಯೂಸ್

Blood donation camp-ಸಂಸ್ಥಾಪಕರ ದಿನಕ್ಕೆ ಸಮಾಜಮುಖಿ ಸ್ಪರ್ಶ: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಿಂದ ರಕ್ತದಾನ ಶಿಬಿರ‘ರಕ್ತದಾನ ಜೀವ ಉಳಿಸುವ ಪವಿತ್ರ ಕಾರ್ಯ; ಪ್ರತಿಯೊಬ್ಬರಲ್ಲೂ ರಕ್ತದಾನದ ಮನೋಭಾವ ಬೆಳೆಸಬೇಕು’ – ಜಿ.ಎಲ್. ಬಲರಾಮ ಆಚಾರ್ಯ

Published

on



Ad Widget

Ad Widget

Ad Widget

Ad Widget

ಸಂಸ್ಥಾಪಕರ ದಿನಾಚರಣೆಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯದ ಮೂಲಕ ಆಚರಿಸುವ ಉದ್ದೇಶದಿಂದ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಯಿತು.

Ad Widget

Ad Widget

Ad Widget

ಪುತ್ತೂರು: ಸಂಸ್ಥಾಪಕರ ದಿನಾಚರಣೆಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯದ ಮೂಲಕ ಆಚರಿಸುವ ಉದ್ದೇಶದಿಂದ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಯಿತು.

Ad Widget

Ad Widget alt="Ad Widget"/>

Ad Widget

ಪುತ್ತೂರು ಮುಖ್ಯರಸ್ತೆಯಲ್ಲಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಹಾಗೂ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಸೆಂಟರ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಸಂಸ್ಥೆಯ ಚೇರ್ಮನ್ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿದರು.

Ad Widget

Ad Widget <> Ad Widget

ರಕ್ತದಾನ ಅತ್ಯಂತ ಪವಿತ್ರವಾದ ಕಾರ್ಯ. ಒಬ್ಬ ವ್ಯಕ್ತಿ ನೀಡುವ ರಕ್ತ ಮತ್ತೊಬ್ಬರ ಜೀವ ಉಳಿಸಲು ನೆರವಾಗುತ್ತದೆ. ಹೀಗಾಗಿ ರಕ್ತದಾನವನ್ನು ಕೇವಲ ಶಿಬಿರಗಳಿಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರಲ್ಲೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕೆಂಬ ಮನೋಭಾವ ಬೆಳೆಯಬೇಕು. ಪುತ್ತೂರಿನ ಆರೋಗ್ಯ ಕ್ಷೇತ್ರದಲ್ಲಿ ಬ್ಲಡ್ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತಿದ್ದು, ಸಂಸ್ಥೆಯ ಸಂಸ್ಥಾಪಕರ ದಿನವನ್ನು ಸಮಾಜಮುಖಿಯಾಗಿ ಆಚರಿಸಬೇಕೆಂಬ ಆಶಯದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.



Ad Widget

ವ್ಯಾಪಾರ ಮತ್ತು ಉದ್ಯಮದ ಯಶಸ್ಸಿನ ಜತೆಗೆ ಸಮಾಜದ ಆರೋಗ್ಯ ಹಾಗೂ ಜೀವ ರಕ್ಷಣೆಯ ಕಾರ್ಯಗಳಲ್ಲೂ ಸಂಸ್ಥೆಗಳು ಕೈಜೋಡಿಸಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು.

Ad Widget

Ad Widget

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಈ ಶಿಬಿರದಲ್ಲಿ ರಕ್ತದಾನಿಗಳು ಭಾಗವಹಿಸುವ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದರು.

Ad Widget
Click to comment

Leave a Reply

ಬಿಗ್ ನ್ಯೂಸ್

Radhas-ಮಕ್ಕಳ ದಿನಾಚರಣೆ ಸಂಭ್ರಮ: ಪುತ್ತೂರಿನ ರಾಧಾಸ್‌ನಲ್ಲಿ ನಾಳೆ ಪುಟಾಣಿಗಳ ಫ್ಯಾಷನ್ ಶೋ

Published

on



Ad Widget

Ad Widget

Ad Widget

Ad Widget

ಮಕ್ಕಳ ದಿನಾಚರಣೆಯ ಅಂಗವಾಗಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಜನಪ್ರಿಯ ರಾಧಾಸ್ ಜವುಳಿ ಮಳಿಗೆಯು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ನ.14ರಂದು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮಕ್ಕಳಿಗಾಗಿ ಫ್ಯಾಷನ್ ಶೋ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಪುಟಾಣಿ ಮಾಡೆಲ್‌ಗಳ Ramp ವಾಕ್ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದೆ.

Ad Widget

Ad Widget

Ad Widget

ಪುತ್ತೂರು: ಮಕ್ಕಳ ದಿನಾಚರಣೆಯ ಅಂಗವಾಗಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಜನಪ್ರಿಯ ರಾಧಾಸ್ ಜವುಳಿ ಮಳಿಗೆಯು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ನ.14ರಂದು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮಕ್ಕಳಿಗಾಗಿ ಫ್ಯಾಷನ್ ಶೋ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಪುಟಾಣಿ ಮಾಡೆಲ್‌ಗಳ Ramp ವಾಕ್ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದೆ.

Ad Widget

Ad Widget alt="Ad Widget"/>

Ad Widget

ಜವುಳಿ ಉದ್ಯಮದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ರಾಧಾಸ್ ಮಳಿಗೆಯ ಈ ವಿನೂತನ ಪ್ರಯತ್ನ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸಲು ಉತ್ತಮ ಅವಕಾಶ ಕಲ್ಪಿಸಲಿದೆ.

Ad Widget

Ad Widget <> Ad Widget

14 ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಿಗಳಿಗೆ ಅಗತ್ಯವಿರುವ ಆಕರ್ಷಕ ಉಡುಗೆಗಳನ್ನು ಮಳಿಗೆಯ ವತಿಯಿಂದಲೇ ಒದಗಿಸಲಾಗುತ್ತದೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು.



Ad Widget

ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ವೇದಿಕೆಯ ಅನುಭವ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ಫ್ಯಾಷನ್ ಶೋ ಪುಟಾಣಿಗಳಿಗೆ ವಿಶೇಷ ಸಂಭ್ರಮ ನೀಡಲಿದೆ.

Ad Widget

Ad Widget

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಮಕ್ಕಳು ಕಾರ್ಯಕ್ರಮದ ದಿನ ಬೆಳಿಗ್ಗೆಯೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 8861333531 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ad Widget
Continue Reading

ಬಿಗ್ ನ್ಯೂಸ್

Court order-ಸುದ್ದಿ ಪ್ರಕಟಿಸದಂತೆ ತಡೆಯುವ ಯತ್ನ ವಿಫಲ – ನಿರ್ಬಂಧಕ್ಕೆ ಮುಂದಾಗಿದ್ದ ಅರ್ಜಿ ವಜಾ..! ʻನಿಖರ ನ್ಯೂಸ್ʼ ಪರ ಕೋರ್ಟ್ ಆದೇಶ

Published

on



Ad Widget

Ad Widget

Ad Widget

Ad Widget

ನಿಖರ ನ್ಯೂಸ್ ವೆಬ್ ಪೋರ್ಟಲ್ನಲ್ಲಿ ಪ್ರಕಟವಾದ ವರದಿಯೊಂದು ಮಾನಹಾನಿಕರವಾಗಿದೆ ಎಂದು ಆರೋಪಿಸಿ, ಮುಂದಿನ ದಿನಗಳಲ್ಲಿ ಅಂತಹ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು ಮತ್ತು ಈಗಾಗಲೇ ಪ್ರಕಟಿತ ವರದಿಯನ್ನು ವೆಬ್ ಪೋರ್ಟಲ್ ನಿಂದ ಅಳಿಸಿ ಹಾಕಬೇಕೆಂದು ಕೋರಿ ಉದ್ಯಮಿ ಉಜ್ವಲ್ ಕುಮಾರ್ ಪ್ರಭು ಸಲ್ಲಿಸಿದ್ದ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳನ್ನು ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ.

Ad Widget

Ad Widget

Ad Widget

ಪುತ್ತೂರು: ನಿಖರ ನ್ಯೂಸ್ ವೆಬ್ ಪೋರ್ಟಲ್ನಲ್ಲಿ ಪ್ರಕಟವಾದ ವರದಿಯೊಂದು ಮಾನಹಾನಿಕರವಾಗಿದೆ ಎಂದು ಆರೋಪಿಸಿ, ಮುಂದಿನ ದಿನಗಳಲ್ಲಿ ಅಂತಹ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು ಮತ್ತು ಈಗಾಗಲೇ ಪ್ರಕಟಿತ ವರದಿಯನ್ನು ವೆಬ್ ಪೋರ್ಟಲ್ ನಿಂದ ಅಳಿಸಿ ಹಾಕಬೇಕೆಂದು ಕೋರಿ ಉದ್ಯಮಿ ಉಜ್ವಲ್ ಕುಮಾರ್ ಪ್ರಭು ಸಲ್ಲಿಸಿದ್ದ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳನ್ನು ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ.

Ad Widget

Ad Widget alt="Ad Widget"/>

Ad Widget

ಪ್ರಕರಣದ ಹಿನ್ನೆಲೆ:
2026ರ ಜೂನ್ 8ರಂದು ನಿಖರ ನ್ಯೂಸ್ನಲ್ಲಿ ಕೆಮ್ಮಿಂಜೆ ಸಮೀಪದ ಸರಕಾರಿ ಗೋಮಾಳ ಜಮೀನು ಹಾಗೂ ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದ ಅಕ್ರಮ ಒತ್ತುವರಿ ಬಗೆಗಿನ ಆರೋಪಗಳ ಕುರಿತು ವರದಿ ಪ್ರಕಟವಾಗಿತ್ತು. ವರದಿಯಲ್ಲಿ ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ. ಇದರಿಂದ ವೈಯಕ್ತಿಕ ಗೌರವ ಮತ್ತು ಉದ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಉಜ್ವಲ್ ಕುಮಾರ್ ಪ್ರಭು ಅವರು ನಿಖರ ನ್ಯೂಸ್‌ನ ಪ್ರಕಾಶಕರು, ಸಂಪಾದಕರು ಸೇರಿದಂತೆ ಪ್ರತಿವಾದಿಗಳ ವಿರುದ್ಧ O.S. No.29/2026ರಂತೆ ದಾವೆ ಹೂಡಿದ್ದರು.

Ad Widget

Ad Widget <> Ad Widget

ಸದರಿ ಸುದ್ದಿಯನ್ನು ಮರುಪ್ರಕಟಿಸುವುದು ಮತ್ತು ಅದೇ ರೀತಿಯ ಸುದ್ದಿಗಳನ್ನು ಇನ್ನೂ ಪ್ರಕಟಿಸಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಹಾಗೂ ಪ್ರಸಾರ ಮಾಡುವುದನ್ನು ತಡೆಯುವಂತೆ ನಿರ್ಬಂಧಾಜ್ಞೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಅಲ್ಲದೆ, ಈಗಾಗಲೇ ಪ್ರಕಟಿಸಿರುವ ಸುದ್ದಿಯನ್ನು ತೆಗೆದುಹಾಕುವಂತೆ ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದರು.



Ad Widget

ನಿಖರ ನ್ಯೂಸ್ ಪರ ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ವಾದ ಮಂಡಿಸಿ, ಪ್ರಕಟಿತ ವರದಿಯು ವಾದಿ ಉಜ್ವಲ್ ಕುಮಾರ್ ಪ್ರಭು ವಿರುದ್ಧದ ವೈಯಕ್ತಿಕ ಆರೋಪವಾಗಿರದೆ, ಸರ್ಕಾರಿ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರಿಗೆ ಸಲ್ಲಿಸಲಾದ ದೂರಿನ ಆಧಾರದ ಮೇಲೆ ಪ್ರಕಟಿಸಲಾದ ಸುದ್ದಿಯಾಗಿದೆ ಅಲ್ಲದೆ, ಸುದ್ದಿಯಲ್ಲಿ ವಾದಿ ಉಜ್ವಲ್ ಪ್ರಭು ಅವರ ಹೆಸರು ಅಥವಾ ಅವರ ವ್ಯವಹಾರದ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Ad Widget

Ad Widget

ಅಲ್ಲದೇ ಸುದ್ದಿಯನ್ನು ಪ್ರಕಟಿಸದಂತೆ ನಿರ್ಬಂಧಾಕಾಜ್ಞೆ ನೀಡಿದಲ್ಲಿ ಅದು ಪ್ರತಿವಾದಿಗಳಿಗೆ ಸಂವಿಧಾನದಲ್ಲಿ ನೀಡಿದ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದ್ದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಪ್ರಕರಣದ ಈ ಹಂತದಲ್ಲಿ ಪ್ರಕಟಿತ ಸುದ್ದಿಯು ವಾದಿ ಉಜ್ವಲ್ ಕುಮಾರ್ ಪ್ರಭು ಅವರ ವಿರುದ್ಧ ನೇರವಾಗಿ ಮಾನಹಾನಿಕರ ಹೇಳಿಕೆಗಳನ್ನು ಒಳಗೊಂಡಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟು ಸುದ್ದಿಯು ಮಾನಹಾನಿಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರ್ಧರಿಸಬೇಕಾದ ವಿಷಯವಾಗಿದೆ ಅಲ್ಲದೆ, ಪ್ರತಿವಾದಿಗಳ ಪತ್ರಿಕಾ ಸ್ವಾತಂತ್ರ್ಯ ಹಾಗೂ ಸಂವಿಧಾನದ ಕಲಂ 19(1)(a)ರ ಅಡಿಯಲ್ಲಿ ದೊರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಹಂತದಲ್ಲಿ ಪತ್ರಿಕಾ ಪ್ರಕಟಣೆಗಳ ಮೇಲೆ ನಿರ್ಬಂಧ ಹೇರುವುದು ಸೂಕ್ತವಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟು ಉದ್ಯಮಿ ಉಜ್ವಲ್ ಪ್ರಭು, ತನ್ನ ವಿರುದ್ದ ವರದಿಗಳನ್ನು ಪ್ರಕಟಿಸದಂತೆ ಹಾಗೂ ಪ್ರಕಟಿತ ವರದಿಯನ್ನು ತೆಗೆದು ಹಾಕಬೇಕೆಂದು ಕೋರಿ ಸಲ್ಲಿಸಿದ ಎರಡೂ ಮಧ್ಯಂತರ ಅರ್ಜಿಗಳನ್ನು ವಜಾಗೊಳಿಸಿ, ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಎಸಿಜೆಎಂ ನ್ಯಾಯಾಲಯವು ಆದೇಶ ಹೊರಡಿಸಿದೆ.

Ad Widget
Continue Reading

ಬಿಗ್ ನ್ಯೂಸ್

High Court-ಈಶ್ವರಮಂಗಲ: ಮೇನಾಲದ ಹೈಟೆಕ್ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್‌ಗೆ ಹೈಕೋರ್ಟ್ ಆದೇಶ..!

Published

on



Ad Widget

Ad Widget

Ad Widget

Ad Widget

ಈಶ್ವರಮಂಗಲದ ಮೇನಾಲ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದ ‘ಹೈಟೆಕ್ ಆರ್ಗಾನಿಕ್ ಫರ್ಟಿಲೈಸರ್’ ಹೆಸರಿನ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ.

Ad Widget

Ad Widget

Ad Widget

ಪುತ್ತೂರು: ಈಶ್ವರಮಂಗಲದ ಮೇನಾಲ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದ ‘ಹೈಟೆಕ್ ಆರ್ಗಾನಿಕ್ ಫರ್ಟಿಲೈಸರ್’ ಹೆಸರಿನ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ.

Ad Widget

Ad Widget alt="Ad Widget"/>

Ad Widget

ಘಟಕದಿಂದ ಪರಿಸರದಲ್ಲಿ ಹರಡುತ್ತಿದ್ದ ತೀವ್ರ ದುರ್ವಾಸನೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಘಟಕದ ಕಾರ್ಯಾಚರಣೆಯಿಂದ ಸ್ಥಳೀಯ ನಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆಗಳಿಗೆ ನ್ಯಾಯಾಲಯದ ಈ ಆದೇಶದಿಂದ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.



Ad Widget

ಈ ಬೆಳವಣಿಗೆಯನ್ನು ಈಶ್ವರಮಂಗಲದ ಮೇನಾಲ ಪರಿಸರದ ಜನರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೆಂದು ಸ್ಥಳೀಯರು ಪರಿಗಣಿಸಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!