Connect with us

ವೈರಲ್‌ ನ್ಯೂಸ್‌

ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ

Published

on



Ad Widget

Ad Widget

Ad Widget

Ad Widget

ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

Ad Widget

Ad Widget

Ad Widget

Ad Widget


ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget


ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.

Ad Widget

Ad Widget <> Ad Widget


ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.



Ad Widget


ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್‌ಓವರ್‌ನ ವಿಶೇಷತೆಯಾಗಿದೆ.

Ad Widget

Ad Widget


ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್‌ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.


2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.


ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.

Ad Widget

ಶಿಕ್ಷಣ

ಹವ್ಯಕ ಭಾಷಾ ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ; ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027ಕ್ಕೆ ಬರಹಗಳ ಆಹ್ವಾನ

Published

on



Ad Widget

Ad Widget

Ad Widget

Ad Widget

ಪುತ್ತೂರು: ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಹಾಗೂ ಹೊಸ ತಲೆಮಾರಿನ ಬರಹಗಾರರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡಿರುವ ‘ಹವ್ಯಕ ವಿಶ್ವ’ ಡಿಜಿಟಲ್ ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ‘ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027’ ಆಯೋಜಿಸಲಾಗಿದೆ. ಈ ಪ್ರಯುಕ್ತ ಹವ್ಯಕ ಭಾಷೆಯಲ್ಲಿ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯಾಸಕ್ತರಿಂದ ಬರಹಗಳನ್ನು ಆಹ್ವಾನಿಸಲಾಗಿದೆ.

Ad Widget

Ad Widget

Ad Widget

Ad Widget

ಕರ್ನಾಟಕದ ಕರಾವಳಿ ಭಾಗ (ಕಾಸರಗೋಡು ಸೇರಿದಂತೆ) ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಹವ್ಯಕ ಭಾಷೆಯ ಸಾಹಿತ್ಯಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಥೆ, ಕವನ, ಪ್ರಬಂಧ ಹಾಗೂ ಲಘುಬರಹ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಥೆ ಮತ್ತು ಲಘುಬರಹ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಕವನ ವಿಭಾಗಕ್ಕೆ ‘ಹಳ್ಳಿ ಮನೆಯೋ/ಬದುಕೋ, ಪೇಟೆ ಮನೆಯೋ/ಬದುಕೋ’ ಎಂಬ ವಿಷಯ ನೀಡಲಾಗಿದೆ. ಪ್ರಬಂಧ ವಿಭಾಗದಲ್ಲಿ ‘ಹವ್ಯಕ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಬರೆಯಬೇಕಾಗಿದೆ.

Ad Widget

Ad Widget <> Ad Widget

ಪ್ರತಿ ವಿಭಾಗದಲ್ಲಿ ಆಯ್ಕೆಯಾಗುವ ಬರಹಗಳಿಗೆ ಪ್ರಥಮ ಬಹುಮಾನವಾಗಿ 3,000 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ಮತ್ತು ದ್ವಿತೀಯ ಬಹುಮಾನವಾಗಿ 1,500 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.



Ad Widget

ಸ್ಪರ್ಧೆಗೆ ಸಲ್ಲಿಸುವ ಬರಹಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲಿರಬೇಕು. ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಬರಹಗಳನ್ನು ಯೂನಿಕೋಡ್ ಅಥವಾ ನುಡಿ ಫಾಂಟ್‌ನಲ್ಲಿ ಸಿದ್ಧಪಡಿಸಿ ವರ್ಡ್, ಪಿಡಿಎಫ್ ರೂಪದಲ್ಲಿ ಅಥವಾ ಕಾಗದದಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಬಹುದು.

Ad Widget

Ad Widget

ಬರಹಗಳನ್ನು ಕಳುಹಿಸಲು 2026ರ ಡಿಸೆಂಬರ್ 1 ಕೊನೆಯ ದಿನವಾಗಿದ್ದು, ಸ್ಪರ್ಧೆಯ ಫಲಿತಾಂಶವನ್ನು 2027ರ ಜನವರಿ 14ರ ಸಂಕ್ರಾಂತಿ ದಿನ ಪ್ರಕಟಿಸಲಾಗುವುದು.

ಆಸಕ್ತರು ತಮ್ಮ ಬರಹಗಳನ್ನು editor@havyakavishwa.com ಅಥವಾ havyakavishwa@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ವಾಟ್ಸ್ಆ್ಯಪ್ ಮೂಲಕವೂ +91 6360604365 ಸಂಖ್ಯೆಗೆ ಕಳುಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ havyakavishwa.com ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಹವ್ಯಕ ವಿಶ್ವ ಬಳಗದ ಪರವಾಗಿ ಕೃಷ್ಣ ಕಿಶೋರ್ ಯೇನಂಕೂಡ್ಲು ತಿಳಿಸಿದ್ದಾರೆ.

Ad Widget
Continue Reading

ಸ್ಥಳೀಯ

Reels-ರೀಲ್ಸ್‌ಗಾಗಿ ಮಗುವಿನ ಜೀವದ ಜೊತೆ ಆಟ? ಅಲೆಗಳ ನಡುವೆ ಸಿಲುಕಿದ ಪುಟ್ಟ ಮಗು; ಸಾರ್ವಜನಿಕರೊಬ್ಬರಿಂದ ರಕ್ಷಣೆ..!

Published

on



Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಚಿತ್ರೀಕರಿಸುವುದರಲ್ಲಿ ದಂಪತಿಯೊಬ್ಬರು ಮಗ್ನರಾಗಿದ್ದ ವೇಳೆ ಅವರ ಪುಟ್ಟ ಮಗು ಸಮುದ್ರದ ಅಲೆಗಳ ನಡುವೆ ಸಿಲುಕಿ ಪರದಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಅಪಾಯವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಧಾವಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಚಿತ್ರೀಕರಿಸುವುದರಲ್ಲಿ ದಂಪತಿಯೊಬ್ಬರು ಮಗ್ನರಾಗಿದ್ದ ವೇಳೆ ಅವರ ಪುಟ್ಟ ಮಗು ಸಮುದ್ರದ ಅಲೆಗಳ ನಡುವೆ ಸಿಲುಕಿ ಪರದಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಅಪಾಯವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಧಾವಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ವೈರಲ್ ಆಗಿರುವ ವಿಡಿಯೊದಲ್ಲಿ ದಂಪತಿ ಮೊಬೈಲ್ ಫೋನ್ ಅಥವಾ ಸೆಲ್ಫಿ ಸ್ಟಿಕ್ ಬಳಸಿ ಕಡಲತೀರದಲ್ಲಿ ರೀಲ್ಸ್ ಚಿತ್ರೀಕರಿಸುತ್ತಿರುವುದು ಕಾಣಿಸುತ್ತದೆ. ನೀರಿನ ಸಮೀಪ ನಡೆಯುವಾಗ ಮಹಿಳೆ ಮಗುವಿನ ಕೈ ಹಿಡಿದಿರುತ್ತಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಮಗು ಜಾರಿ ಮರಳಿನ ಮೇಲೆ ಬೀಳುತ್ತದೆ. ಈ ವೇಳೆ ಸಮುದ್ರದ ಅಲೆಗಳು ಮಗುವನ್ನು ಅತ್ತಿತ್ತ ತಳ್ಳಲಾರಂಭಿಸುತ್ತವೆ.

Ad Widget

Ad Widget <> Ad Widget

ಮಗು ಅಪಾಯದಲ್ಲಿರುವುದನ್ನು ಗಮನಿಸಿದರೂ ದಂಪತಿ ಚಿತ್ರೀಕರಣದಲ್ಲೇ ತಲ್ಲೀನರಾಗಿರುವಂತೆ ವಿಡಿಯೊದಲ್ಲಿ ಕಾಣಿಸುತ್ತದೆ. ಮಹಿಳೆ ಕ್ಯಾಮೆರಾ ಮುಂದೆ ಪೋಸ್ ನೀಡುತ್ತಿದ್ದರೆ, ಪುರುಷ ಚಿತ್ರೀಕರಣ ಮುಂದುವರಿಸುತ್ತಾನೆ. ಈ ನಡುವೆ ಮಗು ಅಲೆಗಳ ಹೊಡೆತಕ್ಕೆ ಸಿಲುಕಿ ಪರದಾಡುತ್ತದೆ. ಕೊನೆಗೆ ಪರಿಸ್ಥಿತಿಯನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ಮಗುವನ್ನು ನೀರಿನಿಂದ ಹೊರತರುತ್ತಾರೆ.



Ad Widget

‘ರೀಲ್ಸ್‌ಗಾಗಿ ಮಕ್ಕಳ ಸುರಕ್ಷತೆಯನ್ನೂ ಮರೆಯುವರೇ?’
ಎಕ್ಸ್ (X) ಬಳಕೆದಾರರಾದ ಮರಿಯಮ್ ಎಂಬುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಾವು ಪತಿಯೊಂದಿಗೆ ಕಡಲತೀರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ದಂಪತಿ ರೀಲ್ಸ್ ಚಿತ್ರೀಕರಣದಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ತಮ್ಮ ಮಗಳು ಎದುರಿಸುತ್ತಿದ್ದ ಅಪಾಯವನ್ನೇ ಗಮನಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ್ದರಿಂದ ಮಗು ಅಪಾಯದಿಂದ ಪಾರಾಯಿತು ಎಂದೂ ಹೇಳಿದ್ದಾರೆ.

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಧಾವಂತದ ಬಗ್ಗೆ ಪ್ರಶ್ನಿಸಿರುವ ಮರಿಯಮ್, ರೀಲ್ಸ್ ಮಾಡುವುದು ಅಷ್ಟೊಂದು ಮುಖ್ಯವೇ? ಅದಕ್ಕಾಗಿ ಜನರು ತಮ್ಮ ಸ್ವಂತ ಮಕ್ಕಳ ಸುರಕ್ಷತೆಯನ್ನೂ ನಿರ್ಲಕ್ಷಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಸತ್ಯಾಸತ್ಯತೆ ಬಗ್ಗೆ ಚರ್ಚೆ
ಮಂಗಳವಾರ ಸಂಜೆಯಿಂದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ಘಟನೆ ನಡೆದ ನಿಖರ ಸ್ಥಳ ಮತ್ತು ಸಮಯದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿಗಳ ಗುರುತನ್ನೂ ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ.

ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಅನೇಕ ಬಳಕೆದಾರರು, ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಸಮುದ್ರದ ಅಲೆಗಳ ಸಮೀಪ ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ಇರಿಸುವ ಅಗತ್ಯವನ್ನು ಈ ಘಟನೆ ನೆನಪಿಸಿದೆ.

ಇನ್ನೊಂದೆಡೆ, ವಿಡಿಯೊ ನಕಲಿಯಾಗಿರಬಹುದು ಅಥವಾ ವೈರಲ್ ಆಗುವ ಉದ್ದೇಶದಿಂದಲೇ ಯೋಜಿತವಾಗಿ ಚಿತ್ರೀಕರಿಸಿರಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಆದರೆ, ಈ ವಾದಗಳಿಗೆ ಯಾವುದೇ ಸ್ವತಂತ್ರ ದೃಢೀಕರಣ ಲಭ್ಯವಿಲ್ಲ. ಹೀಗಾಗಿ, ವಿಡಿಯೊದಲ್ಲಿನ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.

Ad Widget
Continue Reading

ಅಂತರ ರಾಜ್ಯ

Punjab-ಪಂಜಾಬ್ ವಿವಾಹದಲ್ಲಿ ವಧುವಿನ ಮೇಲೆ 8 ಕೋಟಿ ರೂ. ನೋಟುಗಳ ಮಳೆ: ಹಬ್ಬಿದ್ದ ವದಂತಿಗೆ ಬಿತ್ತು ಬ್ರೇಕ್; ಅಸಲಿ ಮೊತ್ತ ಎಷ್ಟು ಗೊತ್ತೇ?

Published

on



Ad Widget

Ad Widget

Ad Widget

Ad Widget

ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

Ad Widget

Ad Widget

Ad Widget

Ad Widget

ಅಮೃತಸರ, ಫೆ.19: ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಘಟನೆಯ ಹಿನ್ನೆಲೆ:
ರಾಜಮನೆತನದ ಶೈಲಿಯಲ್ಲಿ ನಡೆದ ಈ ವಿವಾಹದಲ್ಲಿ, ಸಂಭ್ರಮಾಚರಣೆಯ ಭಾಗವಾಗಿ ನೋಟುಗಳನ್ನು ಗಾಳಿಯಲ್ಲಿ ತೂರಿ ಸುರಿಮಳೆಗೈಯಲಾಗಿತ್ತು. ಅತಿಥಿಗಳು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಇದನ್ನು ಶ್ರೀಮಂತಿಕೆಯ ಪ್ರದರ್ಶನ ಎಂದು ಟೀಕಿಸಿದರೆ, ಇನ್ನು ಕೆಲವರು ಇದು ಅಲ್ಲಿನ ಸಂಪ್ರದಾಯ ಎಂದು ಅಭಿಪ್ರಾಯಪಟ್ಟಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು.

Ad Widget

Ad Widget <> Ad Widget

ಅಸಲಿ ಸತ್ಯ ಬಹಿರಂಗ:
ಆದರೆ, ಈ ಹರಡಿದ್ದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂಬುದು ಈಗ ತಿಳಿದುಬಂದಿದೆ. ಮದುವೆಯ ಕಾರ್ಯಕ್ರಮದಲ್ಲಿದ್ದ ಡಿಜೆ ಆಪರೇಟರ್ ಈ ಕುರಿತು ಅಸಲಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಾಸ್ತವವಾಗಿ ಅಲ್ಲಿ ಸುರಿಸಿದ್ದು 8 ಕೋಟಿ ರೂಪಾಯಿಗಳನ್ನಲ್ಲ, ಬದಲಿಗೆ ಕೇವಲ 3 ಲಕ್ಷ ರೂಪಾಯಿಗಳನ್ನು ಮಾತ್ರ!



Ad Widget

ಹಣದ ರಾಶಿ ದೊಡ್ಡದಾಗಿ ಕಾಣಲು ಕಾರಣವೆಂದರೆ, ಅಲ್ಲಿ ಬಳಸಲಾದ ಬಹುಪಾಲು ನೋಟುಗಳು 10 ರೂಪಾಯಿ ಮುಖಬೆಲೆಯದ್ದಾಗಿದ್ದವು. ಕಡಿಮೆ ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ನೋಡುವವರಿಗೆ ಅದು ಕೋಟ್ಯಂತರ ರೂಪಾಯಿಯಂತೆ ಭಾಸವಾಗಿತ್ತು. “ಇದು ಕುಟುಂಬದ ಸಂತೋಷವನ್ನು ವ್ಯಕ್ತಪಡಿಸುವ ಒಂದು ವಿಧಾನ ಮತ್ತು ಸ್ಥಳೀಯ ಆಚರಣೆಯ ಭಾಗವಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.

Ad Widget

Ad Widget

ಒಟ್ಟಿನಲ್ಲಿ, 8 ಕೋಟಿ ರೂಪಾಯಿ ಎಂದು ಹಬ್ಬಿದ್ದ ಸುದ್ದಿ ಕೇವಲ ಅತಿಶಯೋಕ್ತಿಯಾಗಿದ್ದು, ಸತ್ಯ ತಿಳಿಯುತ್ತಿದ್ದಂತೆ ವಿವಾದಕ್ಕೆ ತೆರೆ ಬಿದ್ದಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!