Connect with us

ಸ್ಥಳೀಯ

Hejamadi-ಹೆಜಮಾಡಿ: ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ: ಪಿಕ್‌ಅಪ್, ಕಾರು ಸಹಿತ ನಾಲ್ವರು ಅರೆಸ್ಟ್

Published

on



Ad Widget

Ad Widget

Ad Widget

Ad Widget

ಗೋವಾದಿಂದ ಯಾವುದೇ ಪರವಾನಗಿ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬುಧವಾರ (ನ. 11) ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯ ಸಾಗಾಟಕ್ಕೆ ಬಳಸಿದ್ದ ಪಿಕ್‌ಅಪ್ ವಾಹನ ಹಾಗೂ ಎಸ್ಕಾರ್ಟ್ ಮಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

Ad Widget

Ad Widget

Ad Widget

ಪಡುಬಿದ್ರಿ: ಗೋವಾದಿಂದ ಯಾವುದೇ ಪರವಾನಗಿ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬುಧವಾರ (ನ. 11) ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯ ಸಾಗಾಟಕ್ಕೆ ಬಳಸಿದ್ದ ಪಿಕ್‌ಅಪ್ ವಾಹನ ಹಾಗೂ ಎಸ್ಕಾರ್ಟ್ ಮಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಬಂಧಿತರನ್ನು ಕಾರವಾರದ ವಿನಯ್ (47), ಗಜಾನನ ಮಹಾಬಲೇಶ್ವರ ನಾಯ್ಕ (45), ಸುಜಿತ್ ತಾಳೆಕೆರೆ (25) ಮತ್ತು ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಆರೋಪಿಗಳಿಂದ ಸುಮಾರು 2,583 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹14.35 ಲಕ್ಷವಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ಮಹೀಂದ್ರಾ ಪಿಕ್‌ಅಪ್ ವಾಹನ ಹಾಗೂ ₹3 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ₹22.35 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



Ad Widget

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಙ್ಕತ್ ಆಲಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಹೆಜಮಾಡಿ ಟೋಲ್ ಬಳಿ ದಾಳಿ ನಡೆಸಲಾಯಿತು. ಈ ವೇಳೆ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ಮತ್ತು ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಮದ್ಯ ಸಾಗಾಟ ಬೆಳಕಿಗೆ ಬಂದಿದೆ.

Ad Widget

Ad Widget

ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರಂತೆ ಅಬಕಾರಿ ಕಾಯ್ದೆಯ ಕಲಂ 32, 34, 38(ಎ) ಹಾಗೂ ಬಿಎನ್‌ಎಸ್ ಕಲಂ 336(4)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿ ವಿನಯ್ ವಿರುದ್ಧ ಈ ಹಿಂದೆಯೂ ಕಾರವಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಅಙ್ಕತ್ ಆಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಡುಬಿದ್ರಿ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Ad Widget
Click to comment

Leave a Reply

ಕ್ರೈಂ

Rajajinagar-ರಾಜಾಜಿನಗರದ 7 ಕೊಲೆ ಪ್ರಕರಣ: ಆರೋಪಿ ಕೃತ್ಯದ ಆಡಿಯೊ ಪೊಲೀಸರ ಕೈಗೆ

Published

on



Ad Widget

Ad Widget

Ad Widget

Ad Widget

ರಾಜಾಜಿನಗರದ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಇಂದುಶೇಖರ್‌ನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಬಾಮೈದ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರನಿಂದಲೇ ಸಂಬಂಧಿಕರಿಗೆ ಕರೆ ಮಾಡಿಸಿ, ‘ಮೂರು ತಿಂಗಳು ವಾಪಸ್ ಬರುವುದಿಲ್ಲ’ ಎಂದು ಹೇಳಿಸಿದ್ದ ಆಡಿಯೊ ಸಂಭಾಷಣೆ ಪೊಲೀಸರ ಕೈಗೆ ಸಿಕ್ಕಿದೆ.

Ad Widget

Ad Widget

Ad Widget

ಬೆಂಗಳೂರು: ರಾಜಾಜಿನಗರದ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಇಂದುಶೇಖರ್‌ನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಬಾಮೈದ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರನಿಂದಲೇ ಸಂಬಂಧಿಕರಿಗೆ ಕರೆ ಮಾಡಿಸಿ, ‘ಮೂರು ತಿಂಗಳು ವಾಪಸ್ ಬರುವುದಿಲ್ಲ’ ಎಂದು ಹೇಳಿಸಿದ್ದ ಆಡಿಯೊ ಸಂಭಾಷಣೆ ಪೊಲೀಸರ ಕೈಗೆ ಸಿಕ್ಕಿದೆ.

Ad Widget

Ad Widget alt="Ad Widget"/>

Ad Widget

ಶಂಕರ್ ಮತ್ತು ನಳಿನಿ ದಂಪತಿಯನ್ನು ಕೊಲೆ ಮಾಡಿ, ಅವರ ಮೃತದೇಹಗಳನ್ನು ಶಿರಾಡಿ ಘಾಟ್‌ನ ಅರಣ್ಯ ಪ್ರದೇಶಕ್ಕೆ ಎಸೆದಿದ್ದ ಇಂದುಶೇಖರ್, ದಂಪತಿಯ ಪುತ್ರನನ್ನು ತನ್ನೊಂದಿಗೆ ಕರೆದೊಯ್ದಿದ್ದ. ಈ ವೇಳೆ ಉತ್ತರ ಭಾರತದ ತೀರ್ಥಯಾತ್ರೆಗೆ ಬಂದಿರುವುದಾಗಿ ಸಂಬಂಧಿಕರಿಗೆ ಹೇಳುವಂತೆ ಬಾಲಕನಿಗೆ ಸೂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget <> Ad Widget

ಆಡಿಯೊ ಸಂಭಾಷಣೆಯಲ್ಲಿ ಏನಿದೆ?
ನಳಿನಿ ಅವರ ಸಹೋದರಿ ಬಾಲಕನೊಂದಿಗೆ ಮಾತನಾಡುತ್ತಾ, ‘ಒಂದೇ ಒಂದು ಬಾರಿ ನಿಮ್ಮ ಅಮ್ಮನೊಂದಿಗೆ ಮಾತನಾಡುತ್ತೇನೆ. ನೀ ಎಲ್ಲಿದ್ದೀಯ ಮಗನೇ?’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕ, ‘ಆಫೀಸರ್ ಎಲ್ಲ ಇರುತ್ತಾರೆ. ಫೋನ್‌ನಲ್ಲಿ ಮಾತನಾಡಲು ಬಿಡುವುದಿಲ್ಲ. ಏನೇ ಇದ್ದರೂ ಮೆಸೇಜ್ ಮಾಡಿ ದೊಡ್ಡಮ್ಮ’ ಎಂದು ಹೇಳಿದ್ದಾನೆ.



Ad Widget

ಬಳಿಕ ‘ಬಸ್‌ನಿಂದ ಆಚೆ ಇದ್ದೇನೆ. ನೀವು ಫೋನ್ ಮಾಡುತ್ತಿದ್ದೀರಲ್ಲ, ಅದಕ್ಕೆ ಮಾತನಾಡಲು ಕಳುಹಿಸಿದ್ದಾರೆ’ ಎಂದು ತಿಳಿಸಿದ್ದಾನೆ. ಸಂಬಂಧಿಕರು ಅಮ್ಮನೊಂದಿಗೆ ಮಾತನಾಡಿಸುವಂತೆ ಕೇಳಿದಾಗಲೂ, ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದಾಗಲೂ ಬಾಲಕ ನಿರ್ದಿಷ್ಟ ಸ್ಥಳದ ಮಾಹಿತಿ ನೀಡದೆ, ‘ಯಾವುದೋ ಊರಲ್ಲಿದ್ದೇವೆ’ ಎಂದು ಉತ್ತರಿಸಿದ್ದಾನೆ.

Ad Widget

Ad Widget

ಶವ ಸಾಗಿಸಲು ಬೆಡ್‌ಶೀಟ್ ಖರೀದಿ!
ಮೃತದೇಹಗಳನ್ನು ಸಾಗಿಸಲು ಆರೋಪಿ ಒಂದು ಬಂಡಲ್ ಬೆಡ್‌ಶೀಟ್ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಸುನಿತಾ ಮತ್ತು ಅತ್ತೆ ರೂಪಾವತಿ ಅವರ ಮೃತದೇಹಗಳನ್ನು ಸುತ್ತಲು ನಾಲ್ಕು ಬೆಡ್‌ಶೀಟ್‌ಗಳನ್ನು ಬಳಸಿದ್ದಾನೆ. ಶಿವಕುಮಾರ್ ಹಾಗೂ ಶಂಕರ್ ದಂಪತಿಯನ್ನು ಅವರ ಬಟ್ಟೆಗಳಿಂದಲೇ ಕೈ ಮತ್ತು ಮೊಣಕಾಲುಗಳನ್ನು ಕಟ್ಟಿ, ಬಳಿಕ ಬೆಡ್‌ಶೀಟ್ ಸುತ್ತಿ ಮೃತದೇಹಗಳನ್ನು ಎಸೆದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ತ್ವರಿತ ನ್ಯಾಯಾಲಯ ಸ್ಥಾಪನೆಗೆ ಚಿಂತನೆ

ಏಳು ಮಂದಿಯ ಹತ್ಯೆ ಪ್ರಕರಣದ ಹಿಂದೆ ವೈಯಕ್ತಿಕ ಕಾರಣಗಳ ಜತೆಗೆ ಆರ್ಥಿಕ ಕಾರಣಗಳೂ ಇರುವ ಸುಳಿವು ಸಿಕ್ಕಿದೆ. ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವುದು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲ ಮೃತದೇಹಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಾಬಾ ಸಾಹೇಬ್ ನೇಮಗೌಡ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಕೃತ್ಯದ ಹಿಂದಿರುವ ಉದ್ದೇಶಗಳ ಕುರಿತು ನಿರ್ಣಾಯಕ ಸುಳಿವುಗಳು ಲಭ್ಯವಾಗಿವೆ. ಆದಷ್ಟು ಬೇಗ ಸಾಕ್ಷ್ಯಗಳು ಹಾಗೂ ಕೃತ್ಯಕ್ಕೆ ಬಳಸಿದ ಪರಿಕರಗಳನ್ನು ಒಳಗೊಂಡಂತೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

Ad Widget
Continue Reading

ರಾಜಕೀಯ

Puttur-“ನನ್ನಷ್ಟು ರಾಜಕೀಯ ಅನುಭವ ಅಶೋಕ್ ರೈಗಿಲ್ಲ, ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ” – ಪುತ್ತೂರು ಶಾಸಕರಿಗೆ ಸವಾಲು ಹಾಕಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

Published

on



Ad Widget

Ad Widget

Ad Widget

Ad Widget

“ಅಶೋಕ್ ರೈ ಅವರಿಗೆ ವಯಸ್ಸಾಗಿರಬಹುದು. ಆದರೆ ರಾಜಕೀಯ ಅನುಭವದ ವಿಚಾರದಲ್ಲಿ ನನ್ನಷ್ಟು ಅನುಭವ ಅವರಿಗಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಮೂರನೇ ಮಹಡಿಯಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂಬುದೂ ತಿಳಿದಿದೆ. ನಮಗೆ ಬಂದು ಪಾಠ ಹೇಳಲು ಪ್ರಯತ್ನಿಸಬೇಡಿ. ಪುತ್ತೂರಿನಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಆಹ್ವಾನ ನೀಡಿ, ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸವಾಲು ಹಾಕಿದರು.

Ad Widget

Ad Widget

Ad Widget

ಪುತ್ತೂರು: “ಅಶೋಕ್ ರೈ ಅವರಿಗೆ ವಯಸ್ಸಾಗಿರಬಹುದು. ಆದರೆ ರಾಜಕೀಯ ಅನುಭವದ ವಿಚಾರದಲ್ಲಿ ನನ್ನಷ್ಟು ಅನುಭವ ಅವರಿಗಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಮೂರನೇ ಮಹಡಿಯಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂಬುದೂ ತಿಳಿದಿದೆ. ನಮಗೆ ಬಂದು ಪಾಠ ಹೇಳಲು ಪ್ರಯತ್ನಿಸಬೇಡಿ. ಪುತ್ತೂರಿನಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಆಹ್ವಾನ ನೀಡಿ, ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸವಾಲು ಹಾಕಿದರು.

Ad Widget

Ad Widget alt="Ad Widget"/>

Ad Widget

ಉಪ್ಪಿನಂಗಡಿ–ಪಿಲಿಗೂಡು ರಸ್ತೆಯ ಮರು ಡಾಮರೀಕರಣಕ್ಕೆ ಅನುದಾನ ಬಿಡುಗಡೆ ಮಾಡದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರದ ವತಿಯಿಂದ ನ.11ರಂದು ಆಯೋಜಿಸಿದ್ದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆಯ ಬಳಿಕ ಕಲ್ಲೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Ad Widget

Ad Widget <> Ad Widget

ಬಿಜೆಪಿ ಸರಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ಎಷ್ಟು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂಬುದಕ್ಕೆ ದಾಖಲೆಗಳನ್ನು ಮುಂದಿಡುತ್ತೇನೆ. ಅದೇ ರೀತಿ ನೀವು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದೀರಿ ಎಂಬುದಕ್ಕೆ ದಾಖಲೆ ನೀಡಿ ಎಂದು ಅವರು ಆಗ್ರಹಿಸಿದರು.



Ad Widget

ಪುತ್ತೂರು ಶಾಸಕರು, ಮುಡಾ ಅಧ್ಯಕ್ಷರು ಹಾಗೂ ಪಕ್ಷದ ನಾಯಕರು ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದಾಗಲೆಲ್ಲ ಮೆಡಿಕಲ್ ಕಾಲೇಜು ಮತ್ತು ಮಹಾಲಿಂಗೇಶ್ವರ ದೇವಸ್ಥಾನವನ್ನು ಮುಂದಿಡುತ್ತಾರೆ. ಆದರೆ ಅಭಿವೃದ್ಧಿ ಎಂದರೆ ಈ ಎರಡು ಮಾತ್ರವಲ್ಲ. ಪುತ್ತೂರು ಕ್ಷೇತ್ರದಲ್ಲಿ 43 ಗ್ರಾಮಗಳಿವೆ ಎಂಬುದನ್ನು ಮರೆಯಬಾರದು. ಬೆಳ್ತಂಗಡಿ ಕ್ಷೇತ್ರದಲ್ಲಿ 81 ಗ್ರಾಮಗಳಿದ್ದು, ಈ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಕಳೆದ ಮೂರೂವರೆ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದೇನೆ. ಪುತ್ತೂರಿಗೆ ನೀವು ಎಷ್ಟು ಅನುದಾನ ತಂದಿದ್ದೀರಿ ಎಂದು ತಿಳಿಸಿ ಎಂದು ಹರೀಶ್ ಪೂಂಜ ಪ್ರಶ್ನಿಸಿದರು.

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಆದರೆ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡುವುದು ರಾಜ್ಯ ಸರಕಾರವಲ್ಲ, ಕೇಂದ್ರ ಸರಕಾರದ ಅಧೀನದಲ್ಲಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ. ಜಿಲ್ಲೆಯ ಸಂಸದರು ಮನಸ್ಸು ಮಾಡಿದರೆ ಮಾತ್ರ ಅನುಮತಿ ಪಡೆಯಲು ಸಾಧ್ಯ. ಜಿಲ್ಲೆಯ ಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಸಂಸದರಲ್ಲಿ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದೇವೆ. ನಿಮ್ಮಂತೆ ನಾವು ಚೀಪ್ ಪಾಲಿಟಿಕ್ಸ್ ಮಾಡುವುದಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇಳಿದಷ್ಟು ಅನುದಾನ ನೀಡಲಾಗುತ್ತಿತ್ತು. ಆ ಸರಕಾರ ಜಿಲ್ಲೆಗೆ ಕಲ್ಪವೃಕ್ಷ, ಕಾಮಧೇನುವಿನಂತಿತ್ತು. ಗ್ರಾಮಗಳ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನೂ ಹೆಚ್ಚಿಸಲಾಗಿತ್ತು. ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹಲವು ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪುತ್ತೂರು ಕ್ಷೇತ್ರದಲ್ಲೇ ಅಂದಿನ ಶಾಸಕ ಸಂಜೀವ ಮಠಂದೂರು ಅವರು 40ರಿಂದ 50 ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಿದ್ದರು ಎಂದು ಹೇಳಿದರು.

ಹಾಲಿ ಶಾಸಕ ಅಶೋಕ್ ರೈ ಅವರು ಎಷ್ಟು ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ? ಎಷ್ಟು ಕಿಲೋಮೀಟರ್ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ? ಆರ್‌ಡಿಪಿಆರ್ ಇಲಾಖೆಯಡಿ ಎಷ್ಟು ಕಾಮಗಾರಿಗಳನ್ನು ಮಾಡಿಸಿದ್ದಾರೆ? ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ? ಎಂಬುದನ್ನು ದಾಖಲೆ ಸಮೇತ ತಿಳಿಸಲಿ ಎಂದು ಹರೀಶ್ ಪೂಂಜ ಸವಾಲು ಹಾಕಿದರು.

Ad Widget
Continue Reading

ರಾಜಕೀಯ

Puttur-ಚುನಾವಣಾ ಭರವಸೆ ಈಡೇರಿಸಿದ ಶಾಸಕ ಅಶೋಕ್ ರೈ; ಪುತ್ತೂರಿನಲ್ಲಿ ನಾಲ್ಕು ಸಮುದಾಯಗಳಿಗೆ ನಿವೇಶನ ಭಾಗ್ಯ: ಬ್ರಾಹ್ಮಣ, ವಿಶ್ವಕರ್ಮ, ಮುಸ್ಲಿಂ, ಮಲೆಯಾಳಿ ಬಿಲ್ಲವ ಸಮಾಜಕ್ಕೆ ಏಕಕಾಲದಲ್ಲಿ ಮಂಜೂರಾತಿ ಪತ್ರ

Published

on



Ad Widget

Ad Widget

Ad Widget

Ad Widget

ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಗ್ರಾಮದ ಕಟ್ಟಕಡೆಯ ವ್ಯಕ್ತಿ ಬಳಸುವ ರಸ್ತೆಯ ಅಭಿವೃದ್ಧಿಯಿಂದ ಹಿಡಿದು ಮೆಡಿಕಲ್ ಕಾಲೇಜು ಸ್ಥಾಪನೆಯವರೆಗೆ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸಮುದಾಯಗಳಿಗೂ ನಿವೇಶನ ಒದಗಿಸುವ ಭರವಸೆ ನೀಡಿದ್ದು, ಅದರಂತೆ ಇದೀಗ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

Ad Widget

Ad Widget

Ad Widget

ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಗ್ರಾಮದ ಕಟ್ಟಕಡೆಯ ವ್ಯಕ್ತಿ ಬಳಸುವ ರಸ್ತೆಯ ಅಭಿವೃದ್ಧಿಯಿಂದ ಹಿಡಿದು ಮೆಡಿಕಲ್ ಕಾಲೇಜು ಸ್ಥಾಪನೆಯವರೆಗೆ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸಮುದಾಯಗಳಿಗೂ ನಿವೇಶನ ಒದಗಿಸುವ ಭರವಸೆ ನೀಡಿದ್ದು, ಅದರಂತೆ ಇದೀಗ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

Ad Widget

Ad Widget alt="Ad Widget"/>

Ad Widget

ಪುತ್ತೂರಿನಲ್ಲಿ ಬ್ರಾಹ್ಮಣ, ವಿಶ್ವಕರ್ಮ, ಮುಸ್ಲಿಂ ಹಾಗೂ ಮಲೆಯಾಳಿ ಬಿಲ್ಲವ ಸಮಾಜಗಳಿಗೆ ಏಕಕಾಲದಲ್ಲಿ ನಿವೇಶನ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

Ad Widget

Ad Widget <> Ad Widget

ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಮುಖ ಸಮುದಾಯಗಳಿಗೆ ಸರಕಾರದ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಈಗಾಗಲೇ ಕುಲಾಲ, ಭಂಡಾರಿ ಹಾಗೂ ಬಂಟ ಸಮಾಜಗಳಿಗೆ ನಿವೇಶನ ಒದಗಿಸಲಾಗಿದೆ. ನಿವೇಶನಗಳನ್ನು ಗುರುತಿಸಿ, ವಿವಿಧ ಸಮುದಾಯಗಳಿಗೆ ಹಂಚಿಕೆ ಮಾಡುವ ಸಂಬಂಧ ಕಡತವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರಿ ದಾಖಲೆಗಳ ಪ್ರಕಾರ ಆಯಾ ಸಮಾಜಗಳ ಹೆಸರಿನಲ್ಲಿ ನಿವೇಶನ ನೋಂದಣಿಯಾಗಲಿದೆ ಎಂದು ತಿಳಿಸಿದರು.



Ad Widget

ಒಂದೇ ವಾರದಲ್ಲಿ ಅನುಮೋದಿತ ಪತ್ರ ಕೈಗೆ – ಮಹೇಶ್ ಕಜೆ:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಮುಖರ ನಿಯೋಗ ವಾರದ ಹಿಂದೆ ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ನಿವೇಶನಕ್ಕಾಗಿ ಮನವಿ ಸಲ್ಲಿಸಿತ್ತು. ಮನವಿ ಸಲ್ಲಿಸಿದ ಒಂದೇ ವಾರದಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ 2.50 ಎಕರೆ ನಿವೇಶನದ ಕಡತಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಅನುಮೋದನೆ ಪಡೆದು ಮಂಜೂರಾತಿ ಪತ್ರವನ್ನು ಶಾಸಕರು ನೀಡಿದ್ದಾರೆ ಎಂದು ಬ್ರಾಹ್ಮಣ ಸಮಾಜದ ಪ್ರಮುಖ ಹಾಗೂ ವಕೀಲ ಮಹೇಶ್ ಕಜೆ ಹೇಳಿದರು.

Ad Widget

Ad Widget

ರಾಜಕಾರಣಿಗಳು ನೀಡುವ ಭರವಸೆಗಳ ಪೈಕಿ ಕೆಲವೇ ಕೆಲವು ಈಡೇರುತ್ತವೆ. ಆದರೆ ಅಶೋಕ್ ರೈ ಅವರು ನೀಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂದಿನ ಕೆಲವೇ ತಿಂಗಳಲ್ಲಿ ಬ್ರಾಹ್ಮಣ ಸಭಾದ ಹೆಸರಿನಲ್ಲಿ ನಿವೇಶನ ಮಂಜೂರಾಗುವ ವಿಶ್ವಾಸವಿದೆ. ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಶಾಸಕರನ್ನು ಪಡೆದಿರುವುದೇ ನಮ್ಮ ಪುಣ್ಯ – ಪುರುಷೋತ್ತಮ:
ಮಲೆಯಾಳಿ ಬಿಲ್ಲವ ಸಮಾಜಕ್ಕೆ ಒಂದು ಎಕರೆ ನಿವೇಶನ ಮಂಜೂರಾಗಿದ್ದು, ಅದರ ಅನುಮೋದಿತ ಪತ್ರವನ್ನು ಶಾಸಕರು ನೀಡಿದ್ದಾರೆ ಎಂದು ತೀಯಾ ಸಮಾಜದ ಗೌರವಾಧ್ಯಕ್ಷ ಪುರುಷೋತ್ತಮ ತಿಳಿಸಿದರು.

ಈ ಹಿಂದೆ ಹಲವು ಶಾಸಕರಿಗೆ ನಿವೇಶನಕ್ಕಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಮನವಿ ಸಲ್ಲಿಸಿದ ಒಂದೂವರೆ ತಿಂಗಳಲ್ಲೇ ನಿವೇಶನ ಮಂಜೂರಾತಿ ದೊರೆತಿದೆ. ಮಂಜೂರಾದ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ನಮ್ಮ ಬೇಡಿಕೆಗೆ ಸ್ಪಂದಿಸಿದ ಶಾಸಕರೊಂದಿಗೆ ಸಮಾಜ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.

ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಬಳಕೆ – ಆಝಾದ್:
ಮುಸ್ಲಿಂ ಸಮಾಜಕ್ಕೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲೇ 2.88 ಎಕರೆ ನಿವೇಶನ ಮಂಜೂರು ಮಾಡಿರುವುದು ಸಂತಸದ ವಿಚಾರ ಎಂದು ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ಹೇಳಿದರು.

ಮುಖ್ಯಮಂತ್ರಿಗಳಿಂದ ಅನುಮೋದನೆಗೊಂಡ ಪತ್ರವನ್ನು ಶಾಸಕರು ಹಸ್ತಾಂತರಿಸಿದ್ದು, ಮುಂದಿನ ದಿನಗಳಲ್ಲಿ ಈ ನಿವೇಶನವನ್ನು ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಶಾಸಕರು ಧರ್ಮಭೇದವಿಲ್ಲದೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಪರಿಗಣಿಸಿ ನಿವೇಶನ ಒದಗಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ಪ್ರಯತ್ನಕ್ಕಾಗಿ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಜಾತ್ಯತೀತ ಸಿದ್ಧಾಂತದಂತೆ ಶಾಸಕ ಅಶೋಕ್ ರೈ ಅವರು ಜಾತಿ, ಮತ ಭೇದವಿಲ್ಲದೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ನಿವೇಶನ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೆಸರುಗದ್ದೆ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದೆವು – ದಿವಾಕರ ಆಚಾರ್ಯ:
ಮೂರು ತಿಂಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕೆಸರುಗದ್ದೆ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ಅವರನ್ನು ಆಹ್ವಾನಿಸಿದ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಪರವಾಗಿ ನಿವೇಶನಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಇದೀಗ ಕೇವಲ ಮೂರು ತಿಂಗಳಲ್ಲೇ ಒಂದು ಎಕರೆ ನಿವೇಶನದ ಮಂಜೂರಾತಿ ಪತ್ರ ದೊರೆತಿದೆ ಎಂದು ವಿಶ್ವಕರ್ಮ ಯುವಮಿಲನ್ ಕಾರ್ಯದರ್ಶಿ ದಿವಾಕರ ಆಚಾರ್ಯ ಹೇಳಿದರು.

ಇದು ನಮ್ಮ ಸಮಾಜದ 15 ವರ್ಷಗಳ ಬೇಡಿಕೆಯಾಗಿತ್ತು. ಈ ಹಿಂದೆ ಹಲವು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿರಲಿಲ್ಲ. ಇದೀಗ ಬೇಡಿಕೆ ಈಡೇರಿರುವುದು ಸಂತಸದ ವಿಚಾರ. ನಮ್ಮ ಸಮಾಜದ ಪಾಲಿಗೆ ಈ ದಿನ ದೀಪಾವಳಿ ಹಬ್ಬದಂತಾಗಿದೆ ಎಂದರು.

ವಿಶ್ವಕರ್ಮ ಯುವಮಿಲನ್ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ, 15 ವರ್ಷಗಳಿಂದ ವಿವಿಧ ಶಾಸಕರಿಗೆ ನಿವೇಶನಕ್ಕಾಗಿ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜಿಲ್ಲಾ ಮಟ್ಟದಲ್ಲಿ ಪುತ್ತೂರಿನಲ್ಲೇ ವಿಶ್ವಕರ್ಮ ಸಮಾಜಕ್ಕೆ ಮೊದಲ ಬಾರಿಗೆ ನಿವೇಶನ ದೊರೆತಿರುವುದು ಸಂತಸದ ವಿಚಾರ. ಶಾಸಕರ ಈ ಕೊಡುಗೆಯನ್ನು ಸಮಾಜ ಮರೆಯುವುದಿಲ್ಲ ಎಂದು ಹೇಳಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!