Connect with us

ದಿನ ಭವಿಷ್ಯ

ಈ ವಾರ ಯಾವಾ ರಾಶಿಯವರಿಗೆ ಲಾಭ..? ಯಾವೂದಕ್ಕೆ ನಷ್ಟ..? ಇಲ್ಲಿದೆ ಓದಿ ‘ವಾರ ಭವಿಷ್ಯ’

Published

on



Ad Widget

Ad Widget

Ad Widget

Ad Widget

ವಾರ ಭವಿಷ್ಯ: 20-03-2023 ರಿಂದ 26-03-2023 ರವರೆಗೆ ಜ್ಯೋತಿಷಿ : ಶಿವಪ್ರಸಾದ್ ಭಾರದ್ವಾಜ್ ಪುತ್ತೂರು
94484 10257

Ad Widget

Ad Widget

Ad Widget

Ad Widget

ಮೇಷ : ಚಿನ್ನ, ಬೆಳ್ಳಿ ಇನ್ನಿತರ ಆಭರಣ ಸಂಬಂಧಿತ ವ್ಯಾಪಾರಿಗಳಿಗೆ ಭಾರಿ ಲಾಭದ ನಿರೀಕ್ಷೆಯಿದೆ. ಮನೆಯಲ್ಲಿ ಶಾಂತಿಯುತವಾದ ವಾತಾವರಣವಿದ್ದು, ಸುಖ-ಸಂತೋಷಗಳನ್ನು ಹಂಚಿಕೊಳ್ಳುವಿರಿ.

Ad Widget

Ad Widget

Ad Widget alt="Ad Widget"/>

Ad Widget

ವೃಷಭ : ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಪ್ರವಾಸೋದ್ಯಮ ವಿಚಾರದಲ್ಲಿ ಕೆಲಸ ನಿರ್ವಹಿಸುವವರಿಗೆ ಲಾಭಕರ ವಾರ. ಮಕ್ಕಳೊಂದಿಗೆ ಸಂತೋಷವಾಗಿ ಪಾಲ್ಗೊಳ್ಳುವಿರಿ.

Ad Widget

Ad Widget <> Ad Widget

ಮಿಥುನ : ಬೇಸರಗೊಂಡಿರುವ ಮನಸುಗಳಿಗೆ ಸಮಾಧಾನ ಹೇಳುವಿರಿ. ಪೂರೈಸಲಾಗದಷ್ಟು ಕೆಲಸವನ್ನು ವಹಿಸಿಕೊಳ್ಳಬೇಡಿ. ಕೆಲವೊಂದು ಸಮಸ್ಯೆಗಳಿಂದ ಹೊರಬರುವುದು ಕಷ್ಟವಾದೀತು.



Ad Widget

ಕರ್ಕಾಟಕ : ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ನೇರನಡೆ-ನುಡಿಯವರು ಎಂದು ಗುರುತಿಸುವರು. ನಿಮ್ಮ ಶಿಸ್ತು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ನಿಮ್ಮ ಯಾವುದಾದರೂ ದಾಖಲೆ ಪತ್ರಗಳು ದೋಷಪೂರಿತವಾಗಿ ಇದ್ದಲ್ಲಿ ಸರಿಪಡಿಸಿ.

Ad Widget

Ad Widget

ಸಿಂಹ : ನೀವು ಮಾಡುವ ಕೆಲಸದಲ್ಲಿ ಒಂದಷ್ಟು ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟವರ ಜೊತೆ ಗಂಭೀರವಾಗಿ ಚರ್ಚಿಸಿಕೊಳ್ಳುವುದು ಒಳಿತು. ಹಣವನ್ನು ಬುದ್ದಿವಂತಿಕೆಯಿಂದ ಖರ್ಚುಮಾಡುವಿರಿ.

ಕನ್ಯಾ : ನಿಮ್ಮ ಯಶಸ್ಸಿನ ಬಗ್ಗೆ ಜನರು ಅಸೂಯೆಪಡುವ ಸಾಧ್ಯತೆ ಇದೆ. ನಿಮಗೆ ಅತಿ ಪ್ರಿಯವಾದ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ಪ್ರೇಮ ಜೀವನ ಯಶಸ್ವಿಯಾಗುವ ಸಾಧ್ಯತೆ ಇದೆ.

ತುಲಾ : ಕಳೆದು ಹೋದ ವಸ್ತುವನ್ನು ಹುಡುಕುವುದರಲ್ಲಿ ಸಮಯ ವ್ಯರ್ಥವಾಗುವುದು. ಅನಗತ್ಯ ವಿಚಾರಗಳಲ್ಲಿ ಮಾತನಾಡಬೇಡಿ. ನಿಮ್ಮ ವರ್ತನೆಯು ಮನೆಯವರಿಗೆ ಸಂತೋಷ ಉಂಟು ಮಾಡಬಹುದು.

ವೃಶ್ಚಿಕ : ಅಣ್ಣ-ತಮ್ಮಂದಿರ ವಿಚಾರದಲ್ಲಿ ಮಾತು ಮತ್ತು ನಿಮ್ಮ ನಡವಳಿಕೆ ಹಿತ-ಮಿತವಾಗಿ ಇರಲಿ. ನಿಮ್ಮ ಕೆಲಸ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತವಾಗುವುದು. ಅನಗತ್ಯ ಯೋಚನೆಯನ್ನು ಬಿಟ್ಟುಬಿಡಿ.

ಧನಸ್ಸು : ಕೆಲವೊಂದು ವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ. ತಂದೆ-ತಾಯಿಗಳ ಆರೋಗ್ಯ ವಿಚಾರದಲ್ಲಿ ಕಾಳಜಿ ವಹಿಸಿ.

ಮಕರ : ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿ ಇರಲಿದೆ. ಸಮಸ್ಯೆ ಎಷ್ಟೇ ಗಂಭೀರವಾಗಿದ್ದರೂ ಅದು ಬಗೆಹರಿಯಲಿದೆ ಚಿಂತಿಸದಿರಿ.

ಕುಂಭ : ರಾಜಕೀಯ ವಿಚಾರದಲ್ಲಿ ಬಹಳ ಎಚ್ಚರವಾಗಿ ಇರುವುದು ಒಳಿತು. ಕೆಲಸ ಕಾರ್ಯಗಳು ನಿರಾತಂಕವಾಗಿ ಸಾಗುವವು. ಆದಾಯದ ಖರ್ಚಿಗೆ ಕೆಲವು ದಾರಿಗಳು ತೋರುವವು, ಜಾಗ್ರತೆಯಾಗಿರುವುದು ಒಳಿತು.

ಮೀನಾ : ನೀವು ಯೋಚಿಸಿದ ಮಹತ್ತರವಾದ ಕೆಲಸಗಳನ್ನು ಸಾಧಿಸಲು ಬಹಳ ಶ್ರಮದ ಅಗತ್ಯವಿದೆ. ನೀವು ಯೋಚಿಸಿದಂತೆಯೇ ಎಲ್ಲವೂ ಯಶಸ್ವಿ ಆಗಲಿದೆ. ಆಧ್ಯಾತ್ಮಿಕ ಪಥವನ್ನು ಗಟ್ಟಿಗೊಳಿಸುವಿರಿ.

Ad Widget
Click to comment

Leave a Reply

ಬಿಗ್ ನ್ಯೂಸ್

Raksha Bandhana ರಾಖಿ ಕಟ್ಟೋ ಸಹೋದರರಿಗೆ ಈ ಗಿಫ್ಟ್ ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ‌….! ಅದೃಷ್ಟ ಅಲ್ಲ ಅದು ದಾರಿದ್ರ್ಯಕ್ಕೆ ಆಹ್ವಾನ..!!

Published

on



Ad Widget

Ad Widget

Ad Widget

Ad Widget

ನಿಖರ ನ್ಯೂಸ್:- ಭಾರತ ಅಂದ್ರೆ ಅದು ಸಂಸ್ಕೃತಿಯ ನಾಡು. ಇಲ್ಲಿ ಅನೇಕ ಹಬ್ಬಗಳು ಕೂಡಾ ಅದರದ್ದೇ ಆದ ಹಿನ್ನೆಲೆ, ಮೌಲ್ಯ ಮತ್ತು ಅರ್ಥವನ್ನು ಹೊಂದಿದೆ. ಅದೇ ರೀತಿ ಸಹೋದರತೆಯ ಪ್ರತೀಕವಾದ, ಆ ಬಾಂಧವ್ಯವನ್ನು ಪ್ರೇರೇಪಿಸುವ ಹಬ್ಬವೆಂದರೆ ಅದು ರಕ್ಷಾಬಂಧನ. ಈ ದಿನ ರಾಖಿ ಕಟ್ಟಿ ಅದೆಷ್ಟೋ ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ಶುಭ ಕೋರುತ್ತಾರೆ. ಉಡುಗೊರೆಯನ್ನು ಕೂಡಾ ನೀಡುತ್ತಾರೆ. ಆದರೆ ಈ ಕೆಲವೊಂದು ರೀತಿಯ ಉಡುಗೊರೆ ಕೊಟ್ರೆ ನಿಮ್ಮ ಸಹೋದರಿಗೆ ಒಳ್ಳೆಯದಕ್ಕಿಂತ ಕೆಟ್ಟದಾಗೋದು ಜಾಸ್ತಿಯಂತೆ…!

Ad Widget

Ad Widget

Ad Widget

Ad Widget

ರಕ್ಷಾಬಂಧನಕ್ಕೆ ರಾಖಿ ಕಟ್ಟಿ ಉಡುಗೊರೆ ನೀಡೋದು ಸಹಜ

Ad Widget

Ad Widget

Ad Widget alt="Ad Widget"/>

Ad Widget

ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ರಕ್ಷಾಬಂಧನ ಹಬ್ಬವೂ ಒಂದು. ಇದು ಸಹೋದರ ಮತ್ತು ಸಹೋದರಿಯ ಪ್ರೀತಿಯ ಸಂಕೇತವಾಗಿದೆ. ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುತ್ತಾಳೆ ಮತ್ತು ಸಹೋದರನು ತನ್ನ ಸಹೋದರಿಯನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾನೆ. ತಂಗಿಗೆ ಒಂದಷ್ಟು ಉಡುಗೊರೆಗಳನ್ನೂ ಕೊಡುತ್ತಾನೆ. ಈ ವರ್ಷ ರಕ್ಷಾಬಂಧನವು ಆಗಸ್ಟ್ 19 ರಂದು ಬರುತ್ತದೆ. ಅದೆಷ್ಟೋ ಪ್ರೀತಿಯ ಸಹೋದರ ಬಂಧವನ್ನು ಬೆಸೆದಿರುವ ಅಣ್ಣ ತಂಗಿಯಂದಿರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.

Ad Widget

Ad Widget <> Ad Widget

ಯಾವ ರೀತಿಯ ಗಿಫ್ಟ್ ನೀಡಿದರೆ ಉತ್ತಮ..? ಬಗ್ಗೆ ಜ್ಯೋತಿಷಿಗಳ ಸಲಹೆ ಏನು ಗೊತ್ತಾ….?



Ad Widget

ಈ ಬಗ್ಗೆ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಅವರು ಸಲಹೆ ನೀಡಿದ್ದಾರೆ. ಚರ್ಮದ ವಸ್ತುಗಳು ಅಥವಾ ಚರ್ಮದ ಚೀಲಗಳು ಸೇರಿದಂತೆ ಮಾರುಕಟ್ಟೆಯಲ್ಲಿ ಅನೇಕ ಸೊಗಸಾದ ವಸ್ತುಗಳು ಲಭ್ಯವಿದೆ. ಅನೇಕ ಬಾರಿ ಇವುಗಳನ್ನು ಉಡುಗೊರೆಯಾಗಿ ಖರೀದಿಸಲಾಗುತ್ತದೆ, ಆದರೆ ಚರ್ಮದ ವಸ್ತುಗಳು ಶನಿಯೊಂದಿಗೆ ಸಂಬಂಧ ಹೊಂದಿವೆ, ಆದ್ದರಿಂದ ಈ ವಸ್ತುಗಳನ್ನು ಎಂದಿಗೂ ಸಹೋದರಿಗೆ ಉಡುಗೊರೆಯಾಗಿ ನೀಡಬೇಡಿ, ಏಕೆಂದರೆ ಅವು ಅವಳ ತೊಂದರೆಗಳನ್ನು ಹೆಚ್ಚಿಸಬಹುದು.

Ad Widget

Ad Widget

ಸಹೋದರಿಯರಿಗೆ ಉಡುಗೊರೆಗಳನ್ನು ಖರೀದಿಸುವಾಗ, ಬಣ್ಣವು ಕಪ್ಪು ಆಗಿರಬಾರದು. ಏಕೆಂದರೆ ಕಪ್ಪು ಬಣ್ಣವು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗಿದೆ. ರಕ್ಷಾಬಂಧನದಂದು ನಿಮ್ಮ ಸಹೋದರಿಗೆ ಕಪ್ಪು ಬಟ್ಟೆ ಅಥವಾ ಕಪ್ಪು ಬಣ್ಣದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ದಾರಿದ್ರ್ಯ ಕ್ಕೆ ಆಮಂತ್ರಣ ನೀಡಿದಂತೆ ಎಂದು ಜ್ಯೋತಿಷ್ಯ ಹೇಳುತ್ತದೆ.

ವಾಚ್, ಸ್ಮಾರ್ಟ್ ವಾಚ್ ಗಳು ಸೇರಿದಂತೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ರೀತಿಯ ವಾಚ್ ಗಳು ಲಭ್ಯವಿವೆ. ಆದಾಗ್ಯೂ, ರಕ್ಷಾಬಂಧನಕ್ಕೆ ಗಡಿಯಾರವನ್ನು ಉಡುಗೊರೆಯಾಗಿ ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳು ಗಡಿಯಾರಕ್ಕೆ ಸಂಬಂಧಿಸಿವೆ. ಈ ಹಬ್ಬದಂದು ತಪ್ಪಾಗಿ ವಾಚ್ ಉಡುಗೊರೆ ನೀಡಬೇಡಿ.

ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಯಾರಿಗಾದರೂ ತೀಕ್ಷ್ಣವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಯಾವ ಸಮಯದಲ್ಲಿ ರಕ್ಷೆ ಕಟ್ಟುವುದು ಶುಭಕರ…?

ಶ್ರಾವಣ ಮತ್ತು ರಕ್ಷಾಬಂಧನದಲ್ಲಿ ಸೋಮವಾರದಂದು ಅಶುಭ ನೆರಳು ಇರುತ್ತದೆ. ಹೀಗಾಗಿ ಈ ದಿನ ಉಪವಾಸ ಮಾಡಬೇಕೋ ಬೇಡವೋ, ಅಣ್ಣನಿಗೆ ರಾಖಿ ಕಟ್ಟಬೇಕೋ ಬೇಡವೋ ಎಂಬ ಹಲವು ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಮೂಡುತ್ತವೆ. ಸೋಮವಾರ ಮತ್ತು ಪೂರ್ಣಿಮೆಯಂದು ಉಪವಾಸ ಮಾಡುವವರು ರಕ್ಷಾ ಬಂಧನದ ದಿನವೂ ಉಪವಾಸ ಮಾಡಿ ಮರುದಿನ ಪಾರಣ ಮಾಡಬೇಕು. ಭದ್ರಾ ಕಾಲದಲ್ಲಿ ರಾಖಿ ಕಟ್ಟುವುದು ಅಶುಭಕರ.

ಈ ಮಾಹಿತಿ ಜ್ಯೋತಿಷ್ಯ ಪ್ರಕಾರ ನೀಡಲಾಗಿರುವುದರಿಂದ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಸಾಕ್ಷ್ಯಗಳಿಲ್ಲ..

Ad Widget
Continue Reading

ದಿನ ಭವಿಷ್ಯ

Ugadi Rashi Phala 2024: ಕ್ರೋಧಿ ಸಂವತ್ಸರದಲ್ಲಿ ದ್ವಾದಶ ರಾಶಿಗಳ ರಾಶಿ ಫಲ – ಯಾರಿಗೆ ಶುಭ ? ಯಾರಿಗೆ ಅಶುಭ ? ಸೂಕ್ತ ಪರಿಹಾರ ? ಜ್ಯೋತಿಷಿಗಳು ಏನು ಹೇಳುತ್ತಾರೆ ?

Published

on



Ad Widget

Ad Widget

Ad Widget

Ad Widget

ಜ್ಯೋತಿಷಿ: ಶಿವಪ್ರಸಾದ್ ಭಾರದ್ವಾಜ್ ಪುತ್ತೂರು ಮೊ: 9448410257
ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2024 ರ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಯುಗಾದಿ 2024 ಪಂಚಾಂಗದಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ಈ ಸಾಲಿನ ರಾಶಿ ಭವಿಷ್ಯವನ್ನು ಈ ಕೆಳಗೆ ನೀಡಲಾಗಿದೆ

Ad Widget

Ad Widget

Ad Widget

Ad Widget

ಮೇಷ : ದ್ವಿತೀಯದಲ್ಲಿನ ಗುರುವು ಉತ್ತಮನುಕೂಲವನ್ನು ಒದಗಿಸುವನು. ವಿದ್ಯೆ, ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಆದಾಯದಲ್ಲಿ ಹೆಚ್ಚಿನ ಅನುಕೂಲತೆ ಕಂಡುಬರಲಿದೆ. ಶನಿಯು ಲಾಭ ಸ್ಥಾನದಲ್ಲಿದ್ದು ಅರ್ಥವ್ಯವಸ್ಥೆಯಲ್ಲಿ ಪ್ರಗತಿ ಕಂಡುಬರುವುದು. ರಾಹು ವ್ಯಯ ಸ್ಥಾನದಲ್ಲಿ ಇರುವುದರಿಂದಾಗಿ ಮನೋಕ್ಲೇಶ, ಅವಮಾನಗಳನ್ನು ಎದುರಿಸಬೇಕಾದೀತು. ಸುಬ್ರಹ್ಮಣ್ಯ ಸೇವೆ ಕೈಗೊಂಡಲ್ಲಿ ರಾಹುವಿನಿಂದಾಗಿ ಬರುವ ಸಮಸ್ಯೆಗಳು ಪರಿಹಾರವಾಗುವವು.

Ad Widget

Ad Widget

Ad Widget alt="Ad Widget"/>

Ad Widget


ವೃಷಭ : ಗುರುವು ಜನ್ಮರಾಶಿಯಲ್ಲಿಯೂ, ಕೇತು ಪಂಚಮದಲ್ಲಿಯೂ, ಶನಿಯು ದಶಮದಲ್ಲಿಯೂ ಇರುವ ಕಾರಣ ಉದ್ಯೋಗದ ಬದಲಾವಣೆ, ಪಿತ್ತ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವವು, ಜನರಿಂದ ವಿರೋಧವನ್ನು ಎದುರಿಸಬೇಕಾದೀತು. ಆದರೂ ಧನ-ವಸ್ತçಗಳನ್ನು ಕೊಡುಗೆಯಾಗಿ ಪಡೆಯುವಿರಿ. ವರ್ಷದ ಮಧ್ಯದಲ್ಲಿ ಬಂಧುಗಳಿಂದ ಮಾನ-ಸಮ್ಮಾನಗಳು ಇರುವವು. ವರ್ಷಾಂತ್ಯದಲ್ಲಿ ಸ್ನೇಹಿತರಿಂದ ಒಂದಷ್ಟು ಲಾಭಗಳನ್ನು ನಿರೀಕ್ಷಿಸಬಹುದಾಗಿದೆ. ದುರ್ಗೆಯ ಆರಾಧನೆಯಿಂದ ಶುಭವನ್ನು ಕಾಣುವಿರಿ.

Ad Widget

Ad Widget <> Ad Widget


ಮಿಥುನ : ಗುರುವು ಏಕಾದಶದಲ್ಲಿದ್ದು ಉತ್ತಮ ಫಲವನ್ನು ನೀಡಿದರೂ ಮೇ ತಿಂಗಳಿನಿAದ ದ್ವಾದಶಕ್ಕೆ ಬರುತ್ತಾ ಆರ್ಥಿಕವಾಗಿ ಚಿಂತಗೀಡು ಮಾಡುವನು. ನ್ಯಾಯಾಲಯ ವ್ಯವಹಾರಗಳಲ್ಲಿ ಶತ್ರುಗಳಿಂದ ಜಯ ಹೊಂದುವಿರಿ. ವರ್ಷದ ಮಧ್ಯದಲ್ಲಿ ರಾಜಕೀಯ ಸಂಬAಧಿತ ಆತಂಕ ಉಂಟಾದೀತು. ವರ್ಷಾಂತ್ಯದಲ್ಲಿ ಕಫ, ರಕ್ತ ಸಂಬಂಧಿ ಬಾಧೆಗಳಿರುವವು. ವಿಷ್ಣು ದೇವರ ಸೇವೆಯಿಂದ ಸಮಸ್ಯೆಗಳು ಬಗೆಹರಿಯುವು.



Ad Widget


ಕರ್ಕಟಕ : ಸಂತ್ಸರಾರಂಭದಲ್ಲಿ ಗುರುವು ದಶಮ ಭಾವ ಸ್ಥಿತನಾಗಿ ಹಣದ ಕೊರತೆ ಉಂಟು ಮಾಡಿದ್ದರೂ, ಮೇ ತಿಂಗಳಿನಿಂದ ಏಕಾದಶ ಭಾವದಲ್ಲಿ ಇದ್ದು ಉತ್ತಮವಾದ ಆರ್ಥಿಕ ಪ್ರಗತಿಗೆ ಕಾರಣನಾಗುವನು. ಅಷ್ಟಮ ಭಾವದ ಶನಿಯು ಅನಾರೋಗ್ಯಕ್ಕೆ ಕಾರಣನಾಗುವನು. ರಾಹುವಿನಿಂದ ಮಂದಬುದ್ಧಿಯು ಇರುವುದು. ಕೇತುವಿನಿಂದಾಗಿ ಸ್ವಲ್ಪಮಟ್ಟಿನ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ. ಗಣಪತಿ ಹಾಗೂ ದುರ್ಗೆಯ ಆರಾಧನೆಯಿಂದ ಶುಭವಾಗಲಿದೆ.

Ad Widget

Ad Widget


ಸಿಂಹ : ದಶಮ ಭಾವದಲ್ಲಿನ ಗುರುವು ಉತ್ತಮ ದೈವಾನುಕೂಲದ ಜೊತೆಗೆ ವ್ಯವಹಾರದ ವೃದ್ಧಿಗೆ ಕಾರಣನಾಗುವನು. ಅಷ್ಟಮದ ರಾಹು, ದ್ವಿತೀಯ ಭಾವದ ಕೇತು, ಸಪ್ತಮದ ಶನಿ ಇವುಗಳಿಂದ ದಾಂಪತ್ಯದಲ್ಲಿ ವಿರಸ, ಉದರ ಸಂಬಂಧಿ ಅನಾರೋಗ್ಯ ಇರುವುದು. ಮಾತಿನಿಂದಾಗಿ ವಿರೋಧಿಗಳು ಹುಟ್ಟಿಕೊಳ್ಳುವರು. ದೇಹದಲ್ಲಿ ಆಯಾಸ, ಅತೀಕೋಪ ಕಾಣಿಸಬಹುದು. ನವಗ್ರಹರ ಆರಾಧನೆ, ವಿಷ್ಣು, ಶನಿ, ಗಣಪತಿ ಸೇವೆಯಿಂದ ಶುಭವಾಗುವುದು.


ಕನ್ಯಾ : ಗುರುವು ಭಾಗ್ಯ ಸ್ಥಾನದಲ್ಲಿರುವನು. ಶನಿ ಷಷ್ಠದಲ್ಲಿ ಇದ್ದು ಶುಭ ಫಲಗಳನ್ನು ನೀಡುವನು. ಆರ್ಥಿಕ ಪ್ರಗತಿ, ಉದ್ಯೋಗ-ವ್ಯವಹಾರಗಳು ಪ್ರಗತಿಯಾಗುವವು, ವಿವಾಹಾದಿ ಮಂಗಲ ಕಾರ್ಯಗಳು ನೆರವೇರುವವು. ಉತ್ತಮ ಸ್ಥಾನ-ಮಾನ ಪ್ರಾಪ್ತಿ, ಭೂ-ಲಾಭವಾದೀತು. ವರ್ಷದ ಅಂತ್ಯದಲ್ಲಿ ಶತ್ರುಬಾಧೆ ಇದ್ದರೂ ಜಯಸಾಧಿಸುವಿರಿ. ಆದಾಯವೃದ್ಧಿ ಆಗಲಿದೆ. ಗಣಪತಿ ಹಾಗೂ ಸುಬ್ರಹ್ಮಣ್ಯ ಸೇವೆಯಿಂದ ಶುಭ.


ತುಲಾ : ಗುರುವು ಅಷ್ಟಮದಲ್ಲಿರುವನು. ಪಂಚಮದಲ್ಲಿ ಶನಿಯೂ ಅನೇಕ ರೀತಿಯ ಕಷ್ಟಗಳಿಗೆ ಕಾರಣರಾಗುವರು. ದೈವಬಲವಿರುವುದಿಲ್ಲ. ಮನೋವ್ಯಾಕುಲತೆ ಕಾಡಬಹುದು. ಧನದ ಅಪವ್ಯಯದ ಬಗ್ಗೆ ಎಚ್ಚರವಿರಬೇಕು. ಸ್ತ್ರೀ ಕೋಪಕ್ಕೆ ಒಳಗಾಗುವಿರಿ. ದಾಂಪತ್ಯದಲ್ಲಿ ವಿರೋಧವನ್ನು ಎದುರಿಸುವಿರಿ. ರಕ್ತವ್ಯಾಧಿಯ ಬಗ್ಗೆ ಜಾಗರೂಕರಾಗಿರಬೇಕು. ನವಗ್ರಹರ ಆರಾಧನೆ ಮತ್ತು ಶಿವಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಸಿದಲ್ಲಿ ಮನೋಧರ‍್ಯ ಹೆಚ್ಚುವುದು.


ವೃಶ್ಚಿಕ : ಸಪ್ತಮ ಭಾವದ ಗುರುವಿನಿಂದಾಗಿ ದೈವಾನುಕೂಲವಿದೆ. ಕೃಷಿ ಚಟುವಟಿಕೆಯಲ್ಲಿ, ಕೈಗಾರಿಕಾ ವೃತ್ತಿಯವರಿಗೆ ಶುಭವಿದೆ. ಆದರೆ ಚತುರ್ಥ ಭಾವದ ಶನಿ ಹಾಗೂ ಪಂಚಮ ಭಾವದ ರಾಹುವಿನಿಂದ ಮನಸ್ಸಿಗೆ ಅಸಮಾಧಾನ ಇರುವಂತೆ ಭಾಸವಾಗಬಹುದು. ದೀರ್ಘಕಾಲದ ಸಮಸ್ಯೆಯು ಈ ವರ್ಷ ಬಗೆಹರಿಯುವುದು. ವಿವಿಧ ಮೂಲಗಳಿಂದ ಆರ್ಥಿಕ ಪ್ರಗತಿಕಾಣುವಿರಿ. ಸುಬ್ರಹ್ಮಣ್ಯ ಹಾಗೂ ಮೃತ್ಯುಂಜಯನನ್ನು ಆರಾಧಿಸುವುದು ಸೂಕ್ತ.


ಧನು : ತೃತೀಯ ಭಾವದ ಶನಿಯು ಶುಭ ಫಲಗಳನ್ನು ನೀಡುವನು. ಚತುರ್ಥದ ರಾಹು ಹಾಗೂ ದಶಮದ ಕೇತು ಸಖ-ದುಖಃ ಎರಡಕ್ಕೂ ಕಾರಣರಾಗುವರು. ರಕ್ತಸಂಬಂಧಿಕರಲ್ಲಿ ಕೆಲವೊಂದು ತಾಪತ್ರಯಗಳು ಇರುವವು. ವಿವಿಧ ಮೂಲಗಳಿಂದ ಆದಾಯವಿದ್ದರೂ ಖರ್ಚುಗಳು ಇರುವವು. ಕಾರ್ಯದಲ್ಲಿ ಪ್ರಗತಿ ಇರುವುದು. ಉದರ ಸಂಬಂಧಿ ರೋಗದ ಬಗ್ಗೆ ಎಚ್ಚರ ಅಗತ್ಯ. ವಿಷ್ಣು, ದುರ್ಗೆ, ಗಣಪತಿ ಸೇವೆಯಿಂದ ಶುಭವಾಗುವುದು.


ಮಕರ : ಗುರುವು ಪಂಚಮದಲ್ಲಿದ್ದು ಉತ್ತಮ ದೈವಾನುಕೂಲವಿರುವುದು. ಆತ್ಮವಿಶ್ವಾಸ ಹೆಚ್ಚುವುದು. ಆದರೆ ದ್ವಿತೀಯ ಭಾವಗತ ಶನಿಯು (ಸಾಡೇಸಾತಿ ಶನಿಯ ಕೊನೆಯಘಟ್ಟ) ಕೆಲವೊಂದು ಕಷ್ಟ-ನಷ್ಟಗಳಿಗೆ ಕಾರಣನಾಗುವನು. ವರ್ಷದ ಮಧ್ಯದಲ್ಲಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಮೂತ್ರಾಶಯ ಸಂಬAಧಿತ ವ್ಯಾಧಿಯ ಬಗ್ಗೆ ಎಚ್ಚರ ಅಗತ್ಯ. ವರ್ಷದ ಅಂತ್ಯದಲ್ಲಿ ಕೆಲವೊಂದು ಶುಭ ಫಲಗಳು ಅನುಭವಕ್ಕೆ ಬರುವವು. ಶಿವ, ವಿಷ್ಣು, ದುರ್ಗೆ, ಗಣಪತಿ ದೇವರಾರಾಧನೆ ಅವಶ್ಯವಿದೆ.


ಕುಂಭ : ಗುರುವು ಚತುರ್ಥದಲ್ಲಿದ್ದು, ಶನಿಯು ಜನ್ಮರಾಶಿಯಲ್ಲಿಯೂ, ರಾಹು ಮತ್ತು ಕೇತುಗಳು ಕ್ರಮವಾಗಿ ದ್ವಿತೀಯ ಹಾಗೂ ಅಷ್ಟಮದಲ್ಲಿಯೂ ಸಂಚರಿಸುತ್ತಿರುವ ಕಾರಣದಿಂದಾಗಿ ಆರ್ಥಿಕ ಅಡಚಣೆ ಕಂಡುಬರುವುದು. ಆರೋಗ್ಯ ವಿಚಾರವಾಗಿಯೂ ಚಿಂತಿಸಬೇಕಾದೀತು. ಬಂಧು ವಿಯೋಗದ ಬೇಸರ ಕಾಡಲಿದೆ. ವಿದ್ಯಾಭ್ಯಾಸ, ವ್ಯಾಪಾರ, ವ್ಯವಹಾರ, ಉದ್ಯೋಗದಲ್ಲಿ ವಿಶೇಷ ಗಮನ ನೀಡುವುದು ಉತ್ತಮ. ನವಗ್ರಹರ ಆರಾಧನೆ, ಶನಿ, ಗಣೇಶ, ಸುಬ್ರಹ್ಮಣ್ಯ ಆರಾಧನೆಯಿಂದ ಶುಭಫಲವನ್ನು ನಿರೀಕ್ಷಿಸಬಹುದಾಗಿದೆ.


ಮೀನ : ಗುರುವು ತೃತೀಯದಲ್ಲಿ ಇರುವುದರಿಂದಾಗಿ ಗುರುಬಲವಿರುವುದಿಲ್ಲ. ಆತ್ಮವಿಶ್ವಾಸದಿಂದ ಕೆಲವೊಂದು ಸಂಕಷ್ಟಗಳಿAದ ಪಾರಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಕಂಡುಬರಬಹುದು. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಗೃಹೋಪಕರಣಗಳ ಖರೀದಿ, ಬಂಧು-ಮಿತ್ರರಿಂದ ಸಹಾಯ ಒದಗಿಬರುವುದು. ಉತ್ತಮ ಯೋಚನೆಗಳಿಂದ ಪ್ರಗತಿ ಹೊಂದುವಿರಿ. ಜ್ವರಪೀಡೆ ಹೆಚ್ಚು ಕಂಡುಬರುವುದು. ಋಣಾತ್ಮಕ ಯೋಚನೆಯುಳ್ಳ ವ್ಯಕ್ತಿಗಳ ಸಾಮೀಪ್ಯ ಬಯಸದಿರುವುದು ಉತ್ತಮ. ಶನಿ, ಗಣೇಶ, ಸುಬ್ರಹ್ಮಣ್ಯ ಆರಾಧನೆಯಿಂದ ಶುಭಫಲವನ್ನು ನಿರೀಕ್ಷಿಸಬಹುದಾಗಿದೆ.

Ad Widget
Continue Reading

ದಿನ ಭವಿಷ್ಯ

Bitter Gourd health benefits: ಹಾಗಲಕಾಯಿ ನಾಲಿಗೆಗೆ ಕಹಿ – ಉದರಕ್ಕೆ ಸಿಹಿ… ಇಲ್ಲಿದೆ ಅದರ ಆರೋಗ್ಯ ಪ್ರಯೋಜನಗಳು

Published

on



Ad Widget

Ad Widget

Ad Widget

Ad Widget

ಹಾಗಲಾಯಿ (bitter Ground) ಮತ್ತು ಹಾಗಲಕಾಯಿಯ ಎಲೆಯು ನೈಸರ್ಗಿಕವಾಗಿ ಕಹಿ ರುಚಿಯನ್ನು ಪಡೆದುಕೊಂಡಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅತ್ಯಂತ ಸಮೃದ್ಧವಾಗಿರುತ್ತವೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳು ಅಧಿಕವಾಗಿವೆ. ಇವು ಮಧುಮೇಹ, (diabites) ಚರ್ಮದ ಆರೋಗ್ಯ, ರಕ್ತದ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಇನ್ನಿತರ ಅನಾರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಆಧುನಿಕ ಜೀವನ ಶೈಲಿಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳು (Health Issues) ಹಾಗೂ ದೇಹದಲ್ಲಿ ಉಂಟಾಗುವ ಏರಿಳಿತಗಳನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುವುದು.

Ad Widget

Ad Widget

Ad Widget

Ad Widget

ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಅನೇಕ ರೋಗಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

Ad Widget

Ad Widget

Ad Widget alt="Ad Widget"/>

Ad Widget

ಹಾಗಲಕಾಯಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಒಂದು ತರಕಾರಿ. ಮುಖ್ಯವಾಗಿ ಹಾಗಲಕಾಯಿಯಲ್ಲಿ ಜೀವಸತ್ವಗಳು, ಬಿ1, ಬಿ2 ಮತ್ತು ಬಿ3, ಸಿ, ಮೆಗ್ನೀಸಿಯಮ್‌, ಫೋಲೇಟ್‌, ಸತು, ರಂಜಕ, ಮ್ಯಾಂಗನೀಸ್‌ಗಳಿಂದ ಸಮೃದ್ಧವಾಗಿದೆ.
ಹಾಗಲಕಾಯಿಯ ಪ್ರಯೋಜನಗಳು ಇಂತಿವೆ..

Ad Widget

Ad Widget <> Ad Widget

*ಮಧುಮೇಹ ಹೊಂದಿರುವವರಿಗೆ ಒಳ್ಳೆಯದು:
ಹಾಗಲಕಾಯಿ ಪ್ರಸ್ತುತ ಮಧುಮೇಹ ಹೊಂದಿರುವವರಿಗೆ ಮಾತ್ರ ಸೀಮಿತವಾಗಿದೆ. ಇದು ಸಸ್ಯ ಆಧಾರಿತ ಇನ್ಸುಲಿನ್‌ ಅನ್ನು ಹೊಂದಿರುತ್ತದೆ. ಸಹಜವಾಗಿಯೇ ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.



Ad Widget

*ಹಾಗಲಕಾಯಿ ಆಸ್ತಮಾ ರೋಗಿಗಳಿಗೆ ಬಹಳ ಪ್ರಯೋಜನಕಾರಿ. ಆಸ್ತಮಾ ರೋಗಿಗಳಿಗೆ ಹಾಗಲಕಾಯಿ ತರಕಾರಿಯನ್ನು ಮಸಾಲೆ ಇಲ್ಲದೆ ತಿನ್ನಬೇಕು, ಇದು ಆಸ್ತಮಾವನ್ನು ಗುಣಪಡಿಸುತ್ತದೆ.

Ad Widget

Ad Widget

*ಹಾಗಲಕಾಯಿ ಸಂಧಿವಾತ ಮತ್ತು ಕೈ ಕಾಲುಗಳನ್ನು ಗುಣಪಡಿಸುತ್ತದೆ. ಹಾಗಲಕಾಯಿ ರಸವನ್ನು ಮಸಾಜ್ ಮಾಡುವುದರಿಂದ ಸಂಧಿವಾತದಲ್ಲಿ ಪರಿಹಾರ ಸಿಗುತ್ತದೆ.

*ತೂಕ ನಷ್ಟಕ್ಕೆ ಹಾಗಲಕಾಯಿ:ಹಾಗಲಕಾಯಿ ಅತ್ಯಂತ ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಇದು ತನ್ನ ಕಡಿಮೆ ಕೊಬ್ಬಿನ ಕಾರಣದಿಂದ ತೂಕ ನಷ್ಟಕ್ಕೆ ನೇರವಾಗಿ ಕಾರಣವಾಗುತ್ತದೆ. ಅಲ್ಲದೆ, ಇದರಲ್ಲಿ ಫೈಬರ್‌ ಯಥೇಚ್ಚವಾಗಿದೆ. ಫೈಬರ್‌ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಅಲ್ಲದೆ, ಪದೇ ಪದೇ ತಿನ್ನಬೇಕು ಎಂಬ ಹಸಿವಿನ ಬಯಕೆಯನ್ನು ತಡೆಯುತ್ತದೆ.

ಇಷ್ಟೇ ಅಲ್ಲ, ಹಾಗಲಕಾಯಿ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಸುಡುತ್ತದೆ. ಇದರ ಪರಿಣಾಮ ತೂಕ ನಷ್ಟಕ್ಕೆ ಕಾರಣವಾಗುತ್ತದೆ

*ಚರ್ಮ ಸಮಸ್ಯೆಗಳನ್ನು ಗುಣಪಡಿಸುತ್ತದೆ:ಹಾಗಲಕಾಯಿಯು ವ್ಯಾಪಕವಾಗಿ ರೋಗಗಳನ್ನು, ಚರ್ಮ ಸಮಸ್ಯೆಗಳನ್ನು ಗುಣ ಪಡಿಸುತ್ತದೆ. ಇದರಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಹೊಂದಿರುವುದರಿಂದ ಚರ್ಮ ಮತ್ತು ಕೂದಲಿಗೆ ರಕ್ಷಣೆಯಾಗಿ ನಿಲ್ಲುತ್ತದೆ. ಅನೇಕ ಚರ್ಮ ವ್ಯಾಧಿಗಳಾದ, ಸೋರಿಯಾಸಿಸ್, ಎಗ್ಜಿಮಾ ಮತ್ತು ಮೊಡವೆ ತ್ವಚೆಗೂ ಕೂಡ ಚಿಕಿತ್ಸೆ ನೀಡುತ್ತದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading