ಸುಳ್ಯ
ಕಾಣಿಯೂರು : ಚಾರ್ವಕದ ಕೋಳಿ ಅಂಕದಲ್ಲಿ ಹಣದ ಪಣ; ಪೊಲೀಸರ ದಾಳಿಗೆ ಜೂಜಾಟಗಾರರ ಪಲಾಯನ!; ಓರ್ವನ ಬಂಧನ

ಕಡಬ: ತಾಲೂಕಿನ ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ನ.9ರಂದು ಸಂಜೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸ್ ಠಾಣೆಯ ಪ್ರಭಾರ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.
ಈ ವೇಳೆ ಜೂಜಾಟದಲ್ಲಿ ತೊಡಗಿದ್ದವರು ಪೊಲೀಸರನ್ನು ಕಂಡು ಓಡಿಹೋಗಿದ್ದು, ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತನ ಬಳಿಯಿಂದ ಜೂಜಾಟದಲ್ಲಿ ಗಳಿಸಿದ್ದ ₹1,030 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಐದು ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ನಿಧನ ವಾರ್ತೆ
Accident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ. ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಸುಳ್ಯ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ.
ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ತಾಯಿ ಕಮರು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯ
Corruption In Puttur Mescom alligation: ಪುತ್ತೂರು ಮೆಸ್ಕಾಂನಲ್ಲಿ ಭ್ರಷ್ಟಾಚಾರದ ಆರೋಪ: ಎಸ್‌ಐಟಿ ತನಿಖೆಗೆ ಆಗ್ರಹ | ಅಧಿಕಾರಿಯ ಪತ್ನಿ ಹೆಸರಿನಲ್ಲಿ ಗುತ್ತಿಗೆ, ಯುವತಿಯೊಂದಿಗೆ ಅನುಚಿತ ವರ್ತನೆ, ನಾಲ್ಕೇ ಮಂದಿಗೆ ಕಾಮಾಗಾರಿ ; ಜನಸಂಪರ್ಕ ಸಭೆಯಲ್ಲಿ ಆರೋಪಗಳ ಸುರಿಮಳೆ

ಪುತ್ತೂರು: ಮೆಸ್ಕಾಂ ಪುತ್ತೂರು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಗುತ್ತಿಗೆದಾರರು ಹಾಗೂ ಸಾರ್ವಜನಿಕರು, ಈ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮೆಸ್ಕಾಂ ವತಿಯಿಂದ ಬನ್ನೂರು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗಗಳ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ, ಗುತ್ತಿಗೆ ಹಂಚಿಕೆ, ಸಿಬ್ಬಂದಿಯ ಹಾಜರಾತಿ ಮತ್ತು ವಿದ್ಯುತ್ ಸರಬರಾಜಿನ ಸಮಸ್ಯೆಗಳ ಕುರಿತು ಗಂಭೀರ ಆರೋಪಗಳು ಹಾಗೂ ದೂರುಗಳು ಕೇಳಿಬಂದವು.
ಸರ್ಕಾರದ ಸುತ್ತೋಲೆಯಂತೆ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿಲ್ಲ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಮೂರು ತಿಂಗಳಿಗಿಂತ ಹೆಚ್ಚು ಅವಧಿಗೆ ಪ್ರಭಾರ ಹುದ್ದೆ ನೀಡಬಾರದೆಂಬ ನಿಯಮ ಪಾಲನೆಯಾಗುತ್ತಿಲ್ಲ. ತಾಂತ್ರಿಕ ಅರ್ಹತೆಯಿಲ್ಲದ ವ್ಯಕ್ತಿಗಳಿಗೆ ಹೊರಗುತ್ತಿಗೆ ಏಜೆನ್ಸಿ ನೀಡುವ ಮೂಲಕ ನಿಯಮ ಉಲ್ಲಂಘಿಸಲಾಗುತ್ತಿದೆ, ನಾಲ್ಕು ಮಂದಿ ಗುತ್ತಿಗೆದಾರರ ಹೊರತು ಬೇರೆಯವರಿಗೆ ಕಾಮಗಾರಿ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಆರೋಪಿಸಲಾಯಿತು.
ಕಚೇರಿಯ ಕೆಲಸ ಹೋಟೆಲ್‌ನಲ್ಲಿ ನಡೆಯುತ್ತಿದೆ!
ಗುತ್ತಿಗೆದಾರ ಲಕ್ಷ್ಮೀನಾರಾಯಣ ಮಾತನಾಡಿ, ಮೆಸ್ಕಾಂ ಕಚೇರಿಯಲ್ಲಿ ನಡೆಯಬೇಕಾದ ಕೆಲಸಗಳು ಬೊಳುವಾರಿನ ಹೋಟೆಲ್‌ನಲ್ಲಿ ನಡೆಯುತ್ತಿವೆ. ಕೆಲವು ಸಿಬ್ಬಂದಿ ಬೆಳಗ್ಗೆ 11ರಿಂದ 12 ಗಂಟೆಯವರೆಗೆ ಕಚೇರಿಗೆ ಬರುತ್ತಿಲ್ಲ. ಇದನ್ನು ಪ್ರಶ್ನಿಸುವವರೇ ಇಲ್ಲ. ನಾಲ್ವರು ಗುತ್ತಿಗೆದಾರರನ್ನು ಹೊರತುಪಡಿಸಿ ಉಳಿದವರಿಗೆ ಕಾಮಗಾರಿಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಅರ್ಹತೆಯಿಲ್ಲದವರಿಗೆ ಕಾಮಗಾರಿ ನೀಡಿದ ಪರಿಣಾಮ ಅಪಘಾತ ಸಂಭವಿಸಿದರೆ ಹೊಣೆ ಯಾರು? ಉಪ್ಪಿನಂಗಡಿ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು, ಅವುಗಳನ್ನು ಸರಿಪಡಿಸುವವರು ಯಾರು ಎಂದು ಪ್ರಶ್ನಿಸಿದರು.
ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ ವಾಹನ ಮತ್ತು ಸರ್ವೀಸ್ ಸ್ಟೇಷನ್ ವಾಹನದ ನಡುವೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಲ್ಲ ಎಂದೂ ಆರೋಪಿಸಿದರು.
ಇದೇ ವೇಳೆ, ಮೆಸ್ಕಾಂ ಅಧಿಕಾರಿಯೊಬ್ಬರು ಗುತ್ತಿಗೆದಾರರ ಸಹಾಯಕಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಪ್ರಸ್ತಾಪಿಸಿದರು. ಕೆಲಸದ ಅವಧಿಯಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ದೂರಿದರು. ಮಹಿಳೆಯರ ಗೌರವ ಹಾಗೂ ಸುರಕ್ಷತೆಯನ್ನು ಕಾಪಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಯ ಪತ್ನಿ ಹೆಸರಿನಲ್ಲಿ ಗುತ್ತಿಗೆ: ಉತ್ತರಿಸಲು ತಡವರಿಸಿದ ಅಧಿಕಾರಿಗಳು
ಮೆಸ್ಕಾಂ ಅಧಿಕಾರಿಯೊಬ್ಬರು ತಮ್ಮ ಪತ್ನಿಯ ಹೆಸರಿನಲ್ಲಿ ಗುತ್ತಿಗೆ ನಡೆಸಲು ಸಿ-2 ಪರವಾನಗಿ ಹೊಂದಿದ್ದಾರೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.
ಮೆಸ್ಕಾಂ ಅಧಿಕಾರಿಯ ಪತ್ನಿ ಹೆಸರಿನಲ್ಲಿ ಗುತ್ತಿಗೆ ನಡೆಸಲು ನಿಯಮದಲ್ಲಿ ಅವಕಾಶವಿದೆಯೇ? ಅಧಿಕಾರಿ ತಮ್ಮ ಪ್ರಭಾವ ಬಳಸಿ ಈ ಗುತ್ತಿಗೆಯ ಮೂಲಕ ಎಷ್ಟು ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ ಎಂದು ಗುತ್ತಿಗೆದಾರರು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ಅಧಿಕಾರಿಗಳು ತಡವರಿಸಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಪರಿವರ್ತಕಗಳ ಪೂರೈಕೆಗೆ ಒತ್ತಾಯ
ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ಮಾತನಾಡಿ, ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿಗಳ ಅವಲಂಬನೆ ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪರಿವರ್ತಕಗಳನ್ನು ಒದಗಿಸಬೇಕು. ಹಿಂದಿ ಅಭಿವೃದ್ಧಿಗಾಗಿ ಸಂಗ್ರಹಿಸಿರುವ ₹15 ಸಾವಿರ ಇದುವರೆಗೂ ಬಳಕೆಯಾಗಿಲ್ಲ. ಗಂಗಾಕಲ್ಯಾಣ ಯೋಜನೆಯ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ನಿಗದಿಪಡಿಸಿರುವ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬೆದ್ರಾಳದ ಪುತ್ರಮೂಲೆಯಲ್ಲಿನ ವಿದ್ಯುತ್ ಪರಿವರ್ತಕದ ಸಮಸ್ಯೆಯನ್ನು 2021ರಲ್ಲಿಯೇ ಇಲಾಖೆಯ ಗಮನಕ್ಕೆ ತಂದಿದ್ದರೂ ಪರಿಹಾರ ದೊರೆತಿಲ್ಲ ಎಂದು ಗ್ರಾಹಕ ಲಿಯೊ ದೂರಿದರು.
ಸಣ್ಣ ಪ್ರಮಾಣದ ಸಿಡಿಲು ಕಾಣಿಸಿಕೊಂಡರೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ರಾತ್ರಿ ವಿದ್ಯುತ್ ಹೋದರೆ ಬೆಳಗ್ಗೆಯವರೆಗೂ ಮರುಸ್ಥಾಪನೆಯಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕ ಸುಧಾಕರ ರಾವ್ ಮಾತನಾಡಿ, ಆರ್ಯಾಪು ಭಾಗಕ್ಕೆ ಹೆಚ್ಚಿನ ಪವರ್‌ಮನ್‌ಗಳನ್ನು ನಿಯೋಜಿಸಬೇಕು. ವಿದ್ಯುತ್ ಮಾರ್ಗಗಳ ನಿರ್ವಹಣೆ ಹಾಗೂ ಪೊದೆಗಳನ್ನು ತೆರವುಗೊಳಿಸುವ ಕೆಲಸವನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಡಾವು ಭಾಗದಲ್ಲಿ ಸುಮಾರು 40 ವರ್ಷಗಳಿಂದ ವಿದ್ಯುತ್ ತಂತಿಗಳನ್ನು ಬದಲಾಯಿಸಿಲ್ಲ ಎಂಬ ದೂರೂ ಕೇಳಿಬಂತು. ಸಭೆಯಲ್ಲಿ ಒಟ್ಟು 16 ದೂರುಗಳು ದಾಖಲಾಗಿವೆ.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್, ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಉಪಸ್ಥಿತರಿದ್ದರು.
ಲಿಖಿತ ದೂರು ನೀಡಿದರೆ ತನಿಖೆ: ಕಾರ್ಯನಿರ್ವಾಹಕ ಎಂಜಿನಿಯರ್
ಗುತ್ತಿಗೆದಾರರ ಸಿಬ್ಬಂದಿಯೊಂದಿಗೆ ಮೆಸ್ಕಾಂ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಮಾಹಿತಿ ತಮ್ಮ ಗಮನಕ್ಕೂ ಬಂದಿದೆ. ಆದರೆ, ಈ ಘಟನೆ ಕಚೇರಿಯ ಒಳಗಡೆ ನಡೆದಿಲ್ಲ, ಹೊರಗಡೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಖಚಿತ ಮಾಹಿತಿ ಇಲ್ಲ. ಇದುವರೆಗೆ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ. ಘಟನೆ ಕುರಿತು ಹೊರಗಡೆ ಚರ್ಚೆಗಳು ನಡೆಯುತ್ತಿವೆ. ಇ ಲಿಖಿತ ದೂರು ಸಲ್ಲಿಸಿದರೆ ಅಗತ್ಯ ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಸ್ಪಷ್ಟಪಡಿಸಿದರು.
ಸುಳ್ಯ
Dakshina Kannada Rajyotsava Award, Yoga Achiever Harish Kevala : ವಿದೇಶಗಳಲ್ಲೂ ಯೋಗದ ಕಂಪು ಹರಡಿದ ಹರೀಶ್ ಕೇವಲ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪುತ್ತೂರು: ಯೋಗ ಶಿಕ್ಷಣದ ಮೂಲಕ ದೇಶ-ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಯೋಗ ಪರಂಪರೆಯನ್ನು ಪರಿಚಯಿಸುತ್ತಿರುವ ಕಡಬ ತಾಲ್ಲೂಕಿನ ಕುಂತೂರು ಗ್ರಾಮದ ಹರೀಶ್ ಕೇವಲ ಅವರು 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 120 ಸಾಧಕರು ಹಾಗೂ 54 ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ಇವರಲ್ಲಿ ಯೋಗ ಕ್ಷೇತ್ರದ ಸಾಧನೆಗಾಗಿ ಹರೀಶ್ ಕೇವಲ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಡಬ ತಾಲ್ಲೂಕಿನ ಕುಂತೂರು ಗ್ರಾಮದ ಗೋವಿಂದ ಭಟ್ ಮತ್ತು ಕೃಷ್ಣ ಕುಮಾರಿ ದಂಪತಿಯ ಪುತ್ರರಾದ ಹರೀಶ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಂತೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪೂರೈಸಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಯೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನಲ್ಲಿ ಡಿಪ್ಲೊಮಾ ಇನ್ ಯೋಗ ಥೆರಪಿ ಪಡೆದಿದ್ದಾರೆ.

ಸುಮಾರು ಎರಡು ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು, ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಯೋಗ ತರಬೇತಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 2007ರಲ್ಲಿ ಯುಎಇಯ ಅಬುಧಾಬಿಯಲ್ಲಿ ನಾಲ್ಕು ವರ್ಷಗಳ ಕಾಲ ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಾಸ್ ಅಲ್ ಖೈಮಾದ ಪಂಚತಾರಾ ರೆಸಾರ್ಟ್‌ನಲ್ಲಿ ಆರು ವರ್ಷಗಳ ಕಾಲ ವಿವಿಧ ದೇಶಗಳ ಜನರಿಗೆ ಯೋಗಾಭ್ಯಾಸ ಕಲಿಸಿದ್ದಾರೆ. ಅಲ್ಲಿನ ಶಾಲಾ-ಕಾಲೇಜುಗಳಲ್ಲಿಯೂ ಯೋಗ ತರಬೇತಿ ನೀಡಿದ್ದಾರೆ.

2017ರಲ್ಲಿ ಮಾಲ್ಡೀವ್ಸ್‌ನಲ್ಲಿಯೂ ಯೋಗ ತರಬೇತಿ ನೀಡುವ ಮೂಲಕ ತಮ್ಮ ಸೇವೆಯನ್ನು ವಿಸ್ತರಿಸಿದ್ದರು. ಕೋವಿಡ್ ಅವಧಿಯಲ್ಲಿ ಭಾರತಕ್ಕೆ ಮರಳಿದ ಅವರು, ರಾಜ್ಯ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮದಡಿ ಸುಮಾರು ಎರಡು ವರ್ಷಗಳ ಕಾಲ ಮಂಗಳೂರು ಹಾಗೂ ಪುತ್ತೂರು ಭಾಗದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ಜನರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಗೆ ಯೋಗದ ಮಹತ್ವವನ್ನು ಪರಿಚಯಿಸಿದ್ದಾರೆ.
2022ರಲ್ಲಿ ಭಾರತ ಸರ್ಕಾರದ ವತಿಯಿಂದ ಡೊಮಿನಿಕನ್ ರಿಪಬ್ಲಿಕ್ ದೇಶದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದು, ಅಲ್ಲಿ ಭಾರತೀಯ ರಾಯಭಾರ ಕಚೇರಿಯ ಮೂಲಕ ಯೋಗ ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಯೋಗ ತರಗತಿಗಳನ್ನು ನಡೆಸಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯೋಗದ ಮಹತ್ವವನ್ನು ಸಾರಿದ್ದಾರೆ.
ಕಳೆದ ಸುಮಾರು 20 ವರ್ಷಗಳಲ್ಲಿ ನಾಲ್ಕು ದೇಶಗಳಲ್ಲಿ 150ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಯೋಗ ತರಬೇತಿ ನೀಡಿರುವ ಅವರು, 10 ಸಾವಿರಕ್ಕೂ ಅಧಿಕ ಮಂದಿಗೆ ಯೋಗಾಭ್ಯಾಸ ಕಲಿಸಿದ್ದಾರೆ. ಸಾಮಾನ್ಯ ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದರೂ, ತಮ್ಮ ಪರಿಶ್ರಮ ಮತ್ತು ಸಾಧನೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ವಿಶೇಷ.
ದೇಶ-ವಿದೇಶಗಳಲ್ಲಿ ಯೋಗ ಶಿಕ್ಷಣದ ಮೂಲಕ ಭಾರತೀಯ ಸಂಸ್ಕೃತಿಯ ಕಂಪು ಹರಡುತ್ತಿರುವ ಹರೀಶ್ ಕೇವಲ ಅವರ ಸಾಧನೆಗೆ ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿದೆ.
-
ನಿಧನ ವಾರ್ತೆ12 hours agoAccident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
-
ಕ್ರೈಂ17 hours agoMani-ಮಾಣಿ: ವ್ಯಕ್ತಿಯ ಮೇಲೆ ಜೀಪು ಹತ್ತಿಸಲು ಯತ್ನಿಸಿ ಕೊಲೆ ಬೆದರಿಕೆ; ಆರೋಪಿ ಜಗದೀಶ್ ಜೈನ್ ಬಂಧನ
-
ಅಂತರ ರಾಜ್ಯ18 hours agoSonia Gandhi autobiography-ಸೋನಿಯಾ ಗಾಂಧಿ ಆತ್ಮಕಥನ: ಹೆರಿಗೆ ಸಂದರ್ಭ ಮೊದಲ ಮಗು ಸಾವು : ನದಿಯಲ್ಲಿ ಕೊಳೆತ ಮೃತದೇಹ ಕಂಡು ಬೆಚ್ಚಿದ ದಂಪತಿ..!
-
ಅಂತರ ರಾಜ್ಯ17 hours agoMenaka Gandhi-ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಗಾಂಧಿ ಕುಟುಂಬದ ಒಳಜಗಳ ಬಯಲು: ಮನೇಕಾ ಗಾಂಧಿ ಜೊತೆಗಿನ ಸಂಬಂಧ ಹದಗೆಟ್ಟಿದ್ದೇಕೆ?
-
ಅಂತರ ರಾಜ್ಯ17 hours agoMysterious explosion-ಡಾ. ರಾಜ್ಕುಮಾರ್ ಸಂಬಂಧಿಕರ ಮನೆಯ ಮುಂದೆ ನಿಗೂಢ ಸ್ಫೋಟ: ಕಚ್ಚಾ ಬಾಂಬ್ ಶಂಕೆ, ಯುವಕರು ವಶಕ್ಕೆ..!
-
ಸ್ಥಳೀಯ15 hours agoSurabhi Goshala-ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ
-
ಶಿಕ್ಷಣ13 hours agoPuttur-ಪುತ್ತೂರು: ಕರ್ನಾಟಕ ಅಂಡರ್-23 ಮಹಿಳಾ ಕ್ರಿಕೆಟ್ ತಂಡಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನಘಾ ಆಯ್ಕೆ
-
ಉಡುಪಿ18 hours agoಬೆಂಗಳೂರು ಟು ಗೋವಾ ಇನ್ನು ವಂದೇ ಭಾರತ್ನಲ್ಲಿ ಪ್ರಯಾಣ: ನ.13ಕ್ಕೆ ಪ್ರಧಾನಿ ಮೋದಿ ಚಾಲನೆ
















