ಬಿಗ್ ನ್ಯೂಸ್
High Court-ಈಶ್ವರಮಂಗಲ: ಮೇನಾಲದ ಹೈಟೆಕ್ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್‌ಗೆ ಹೈಕೋರ್ಟ್ ಆದೇಶ..!
ಈಶ್ವರಮಂಗಲದ ಮೇನಾಲ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದ ‘ಹೈಟೆಕ್ ಆರ್ಗಾನಿಕ್ ಫರ್ಟಿಲೈಸರ್’ ಹೆಸರಿನ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಪುತ್ತೂರು: ಈಶ್ವರಮಂಗಲದ ಮೇನಾಲ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದ ‘ಹೈಟೆಕ್ ಆರ್ಗಾನಿಕ್ ಫರ್ಟಿಲೈಸರ್’ ಹೆಸರಿನ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಘಟಕದಿಂದ ಪರಿಸರದಲ್ಲಿ ಹರಡುತ್ತಿದ್ದ ತೀವ್ರ ದುರ್ವಾಸನೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ಆದೇಶ ನೀಡಿದೆ ಎಂದು ತಿಳಿದುಬಂದಿದೆ.
ಘಟಕದ ಕಾರ್ಯಾಚರಣೆಯಿಂದ ಸ್ಥಳೀಯ ನಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆಗಳಿಗೆ ನ್ಯಾಯಾಲಯದ ಈ ಆದೇಶದಿಂದ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ಈ ಬೆಳವಣಿಗೆಯನ್ನು ಈಶ್ವರಮಂಗಲದ ಮೇನಾಲ ಪರಿಸರದ ಜನರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೆಂದು ಸ್ಥಳೀಯರು ಪರಿಗಣಿಸಿದ್ದಾರೆ.
ಬಿಗ್ ನ್ಯೂಸ್
Meta CEO Zuckerberg-₹538 ಕೋಟಿಯ ಐತಿಹಾಸಿಕ ಕೋಟೆ ಖರೀದಿಸಿದ ಮೆಟಾ ಸಿಇಒ ಜುಕರ್‌ಬರ್ಗ್..!
ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್‌ನಲ್ಲಿ ಐತಿಹಾಸಿಕ ಕೋಟೆಯೊಂದನ್ನು ಖರೀದಿಸಿದ್ದಾರೆ. ಐರ್ಲೆಂಡ್‌ನ ಕೌಂಟಿ ವಾಟರ್‌ಫೋರ್ಡ್‌ನಲ್ಲಿರುವ ಐತಿಹಾಸಿಕ ‘ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್’ ಇದೀಗ ಜುಕರ್‌ಬರ್ಗ್ ದಂಪತಿಯ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ.
ವಾಷಿಂಗ್ಟನ್: ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್‌ನಲ್ಲಿ ಐತಿಹಾಸಿಕ ಕೋಟೆಯೊಂದನ್ನು ಖರೀದಿಸಿದ್ದಾರೆ. ಐರ್ಲೆಂಡ್‌ನ ಕೌಂಟಿ ವಾಟರ್‌ಫೋರ್ಡ್‌ನಲ್ಲಿರುವ ಐತಿಹಾಸಿಕ ‘ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್’ ಇದೀಗ ಜುಕರ್‌ಬರ್ಗ್ ದಂಪತಿಯ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ.
ಸುಮಾರು ₹538 ಕೋಟಿ ಮೌಲ್ಯದ ಈ ಭವ್ಯ ಎಸ್ಟೇಟ್ 440 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. 1830ರಲ್ಲಿ ನಿರ್ಮಾಣಗೊಂಡಿರುವ ಈ ಐತಿಹಾಸಿಕ ಕೋಟೆಯನ್ನು 2003ರಲ್ಲಿ ನವೀಕರಿಸಲಾಗಿತ್ತು.
ಮೂರು ಅಂತಸ್ತುಗಳನ್ನು ಹೊಂದಿರುವ ಮುಖ್ಯ ಬಂಗಲೆಯು ವಿಶೇಷ ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತದೆ. ಇತಿಹಾಸದ ಪ್ರಕಾರ, ಈ ಕಟ್ಟಡವನ್ನು ಅಂದಿನ ಸಂಸತ್ ಸದಸ್ಯ ಜಾನ್ ಕೀಲಿ ಅವರಿಗಾಗಿ ನಿರ್ಮಿಸಲಾಗಿತ್ತು.
ಐತಿಹಾಸಿಕ ಹಿನ್ನೆಲೆ, ವಿಶಾಲ ಪ್ರದೇಶ ಹಾಗೂ ಭವ್ಯ ವಿನ್ಯಾಸ ಹೊಂದಿರುವ ಈ ಕೋಟೆಯ ಖರೀದಿಯೊಂದಿಗೆ ಜುಕರ್‌ಬರ್ಗ್ ದಂಪತಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಅಂತರ ರಾಜ್ಯ
Fire-ಕೇರಳದಲ್ಲಿ ಕಾರಿಗೆ ಬೆಂಕಿ: ಕರ್ನಾಟಕದ ಆರು ಮಂದಿ ಕೂದಲೆಳೆ ಅಂತರದಲ್ಲಿ ಪಾರು..!
ಕೇರಳದಲ್ಲಿ ಅಪಘಾತಕ್ಕೀಡಾದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕರ್ನಾಟಕದ ಆರು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಕೋಯಿಕ್ಕೋಡ್ ಜಿಲ್ಲೆಯ ವಡಗರ ಸಮೀಪದ ಕುಂಜಿಪ್ಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದೆ.
ಕೋಯಿಕ್ಕೋಡ್: ಕೇರಳದಲ್ಲಿ ಅಪಘಾತಕ್ಕೀಡಾದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕರ್ನಾಟಕದ ಆರು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಕೋಯಿಕ್ಕೋಡ್ ಜಿಲ್ಲೆಯ ವಡಗರ ಸಮೀಪದ ಕುಂಜಿಪ್ಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅದೃಷ್ಟವಶಾತ್, ಕಾರಿನಲ್ಲಿದ್ದ ಆರು ಮಂದಿ ತಕ್ಷಣವೇ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ಬಳಿಕ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ಕರ್ನಾಟಕದವರಾಗಿದ್ದು, ಗುರುವಾಯೂರು ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರು ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಡುಪಿ
Udupi-ಉಡುಪಿ: ತಾಯಿ ಅಂತ್ಯಕ್ರಿಯೆಗೆ ಹಾಜರಾಗಲು ಭೂಗತ ಪಾತಕಿ ರವಿ ಪೂಜಾರಿಗೆ ಕೋರ್ಟ್ ಅನುಮತಿ
ತಾಯಿ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭೂಗತ ಪಾತಕಿ ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ ನೀಡಿದೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋರಿ ಸಲ್ಲಿಸಿದ್ದ ಮನವಿಗೆ, ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಸ್ವಗ್ರಾಮಕ್ಕೆ ಕರೆದೊಯ್ದು, ಅಂತ್ಯಕ್ರಿಯೆ ಮುಗಿದ ಬಳಿಕ ಮರಳಿ ಕರೆದುಕೊಂಡು ಹೋಗುವಂತೆ ನ್ಯಾಯಾಲಯ ಸೂಚಿಸಿದೆ.
ಉಡುಪಿ: ತಾಯಿ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭೂಗತ ಪಾತಕಿ ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ ನೀಡಿದೆ.
ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರಿ ಅವರು ನವೆಂಬರ್ 12ರ ರಾತ್ರಿ ನಿಧನರಾಗಿದ್ದಾರೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋರಿ ಸಲ್ಲಿಸಿದ್ದ ಮನವಿಗೆ ನ್ಯಾಯಾಲಯ ಅನುಮತಿ ನೀಡಿದ್ದು, ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಸ್ವಗ್ರಾಮಕ್ಕೆ ಕರೆದೊಯ್ದು, ಅಂತ್ಯಕ್ರಿಯೆ ಮುಗಿದ ಬಳಿಕ ಮರಳಿ ಕರೆದುಕೊಂಡು ಹೋಗುವಂತೆ ಸೂಚಿಸಿದೆ.
ಮಲ್ಪೆ ಸಮೀಪದ ನೆರ್ಗಿಯಲ್ಲಿರುವ ಕುಟುಂಬದ ಹಿರಿಯರ ಮನೆಯಲ್ಲಿ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ. ಭದ್ರತೆಯ ಜವಾಬ್ದಾರಿಯನ್ನು ಬೆಂಗಳೂರು ಕಾರಾಗೃಹ ಸಿಬ್ಬಂದಿ ವಹಿಸಿಕೊಳ್ಳಲಿದ್ದು, ಹೆಚ್ಚುವರಿ ಭದ್ರತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಒದಗಿಸಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಪ್ರಭಾವ ಹೊಂದಿದ್ದ ರವಿ ಪೂಜಾರಿ 2019ರ ಜನವರಿ 19ರಂದು ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿತನಾಗಿದ್ದ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಬೆಂಗಳೂರಿಗೆ ಕರೆತರಲಾಗಿತ್ತು.
ಕರ್ನಾಟಕ ಮತ್ತು ಮುಂಬೈ ಸೇರಿದಂತೆ ವಿವಿಧೆಡೆ ರವಿ ಪೂಜಾರಿ ವಿರುದ್ಧ 120ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕಲ್ಮಾಡಿಯ ಬಪ್ಪು ತೋಟದ ನಿವಾಸಿಯಾಗಿರುವ ರವಿ ಪೂಜಾರಿ, ಚಿಕ್ಕ ವಯಸ್ಸಿನಲ್ಲೇ ತಂದೆಯೊಂದಿಗೆ ಮುಂಬೈಗೆ ತೆರಳಿದ್ದ. 1992ರಲ್ಲಿ ಬಂಧನಕ್ಕೊಳಗಾಗಿದ್ದ ಈತ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ.
-
ಬಿಗ್ ನ್ಯೂಸ್22 hours agoCourt order-ಸುದ್ದಿ ಪ್ರಕಟಿಸದಂತೆ ತಡೆಯುವ ಯತ್ನ ವಿಫಲ – ನಿರ್ಬಂಧಕ್ಕೆ ಮುಂದಾಗಿದ್ದ ಅರ್ಜಿ ವಜಾ..! ʻನಿಖರ ನ್ಯೂಸ್ʼ ಪರ ಕೋರ್ಟ್ ಆದೇಶ
-
ಕ್ರೈಂ24 hours agoMurder-ಬೆಂಗಳೂರು: ಕುಟುಂಬದವರ ಎದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ
-
ಕಾರ್ಯಕ್ರಮಗಳು23 hours agoPuttur-ಪುತ್ತೂರು: ನ.27ರಂದು ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ
-
ರಾಜಕೀಯ21 hours agoPuttur-ಪುತ್ತೂರು ಕ್ಷೇತ್ರಕ್ಕೆ ₹654 ಕೋಟಿಗೂ ಅಧಿಕ ಗ್ಯಾರಂಟಿ ಸೌಲಭ್ಯ: ಬಿಜೆಪಿ ಟೀಕೆಗೆ ಉಮಾನಾಥ ಶೆಟ್ಟಿ ಪೆರ್ನೆ ತಿರುಗೇಟು
-
ಮಂಗಳೂರು24 hours agoAshwini Vaishnaw-ಕೊಂಕಣ ರೈಲ್ವೆ ವಿಲೀನಕ್ಕೆ 4 ರಾಜ್ಯಗಳ ಸಮ್ಮತಿ ಅನಿವಾರ್ಯ; ಪಶ್ಚಿಮ ಘಟ್ಟದ ರೈಲು ಮಾರ್ಗಕ್ಕೆ ಹೊಸ ರೂಪ-ಸಚಿವ ಅಶ್ವಿನಿ ವೈಷ್ಣವ್
-
ಸ್ಥಳೀಯ5 hours agoMurder-26 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಕೊಲೆ ಆರೋಪಿ..!
-
ಸ್ಥಳೀಯ4 hours agoMandya-ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ 6 ವರ್ಷಗಳ ಬಳಿಕ ಜೀವಂತ ಪ್ರತ್ಯಕ್ಷ..! ಮಾಡದ ತಪ್ಪಿಗೆ ಎರಡೂವರೆ ವರ್ಷ ಜೈಲಿನಲ್ಲಿದ್ದ ವ್ಯಕ್ತಿ
-
ಬಿಗ್ ನ್ಯೂಸ್21 hours agoRadhas-ಮಕ್ಕಳ ದಿನಾಚರಣೆ ಸಂಭ್ರಮ: ಪುತ್ತೂರಿನ ರಾಧಾಸ್ನಲ್ಲಿ ನಾಳೆ ಪುಟಾಣಿಗಳ ಫ್ಯಾಷನ್ ಶೋ















