ಸಿನೆಮಾ
Shivashree Skanda-ರಮೇಶ್ ಅರವಿಂದ್ ಅಭಿನಯದ ‘ದೈಜಿ’ ಮೂಲಕ ಸ್ಯಾಂಡಲ್‌ವುಡ್‌ಗೆ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ ಎಂಟ್ರಿ..!
ನಟ ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ 106ನೇ ಚಿತ್ರ ‘ದೈಜಿ’ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಖ್ಯಾತ ಶಾಸ್ತ್ರೀಯ ಗಾಯಕಿ ಶಿವಶ್ರೀ ಸ್ಕಂದ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರದ ವಿಶೇಷ ಹಾಡೊಂದಕ್ಕೆ ಅವರು ಧ್ವನಿಯಾಗಿದ್ದು, ಅಪರೂಪದ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಈ ಗೀತೆ ಮೂಡಿಬಂದಿದೆ ಎಂದು ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.
ಬೆಂಗಳೂರು: ನಟ ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ 106ನೇ ಚಿತ್ರ ‘ದೈಜಿ’ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಖ್ಯಾತ ಶಾಸ್ತ್ರೀಯ ಗಾಯಕಿ ಶಿವಶ್ರೀ ಸ್ಕಂದ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರದ ವಿಶೇಷ ಹಾಡೊಂದಕ್ಕೆ ಅವರು ಧ್ವನಿಯಾಗಿದ್ದು, ಅಪರೂಪದ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಈ ಗೀತೆ ಮೂಡಿಬಂದಿದೆ ಎಂದು ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.
ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶಿವಶ್ರೀ ಸ್ಕಂದ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಹಾರರ್ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಪ್ರಮುಖ ಘಟ್ಟವೊಂದರಲ್ಲಿ ಈ ಹಾಡು ಕಾಣಿಸಿಕೊಳ್ಳಲಿದೆ. ಇದೇ ಹಾಡಿನ ಮತ್ತೊಂದು ಆವೃತ್ತಿಯನ್ನು ‘ಕಾಂತಾರ 1’ ಖ್ಯಾತಿಯ ಅಬ್ಬಿ ವಿ ಹಾಡಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಇನ್ನು ಚಿತ್ರದ ಸಂಗೀತ ವಿಭಾಗದಲ್ಲೂ ಹಲವು ವಿಶೇಷತೆಗಳಿವೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನದ ಎರಡು ಹಾಡುಗಳಿಗೆ ನಟ ಡಾಲಿ ಧನಂಜಯ್ ಸಾಹಿತ್ಯ ರಚಿಸಿದ್ದಾರೆ. ಈ ಪೈಕಿ ಒಂದು ಹಾಡಿಗೆ ಖ್ಯಾತ ಗಾಯಕ ಸೋನು ನಿಗಮ್ ಧ್ವನಿಯಾಗಿದ್ದಾರೆ. ಮತ್ತೊಂದು ಹಾಡಿಗೆ ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸುವುದರ ಜೊತೆಗೆ ಗಾಯನವನ್ನೂ ಮಾಡಿದ್ದಾರೆ.
ರವಿ ಕಶ್ಯಪ್ ಹಾಗೂ ಸುಧಾ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಾಧಿಕಾ ನಾರಾಯಣ್, ದಿಗಂತ್, ಅವಿನಾಶ್ ಹಾಗೂ ಬಿ.ಎಂ. ಗಿರಿರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನೆಮಾ
Jailer-2-ತಮಿಳಿನ ಎಲ್ಲಾ ದಾಖಲೆ ಮುರಿದ ರಜಿನಿಕಾಂತ್ ‘ಜೈಲರ್-2’ – ₹710 ಕೋಟಿ ಕಲೆಕ್ಷನ್
ಸೂಪರ್‌ಸ್ಟಾರ್ ರಜಿನಿಕಾಂತ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್-2’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ದಾಖಲಿಸಿದೆ. ವಿಶ್ವಾದ್ಯಂತ ₹710.35 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ, ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾಗಳ ಪಟ್ಟಿಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಚೆನ್ನೈ: ಸೂಪರ್‌ಸ್ಟಾರ್ ರಜಿನಿಕಾಂತ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್-2’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ದಾಖಲಿಸಿದೆ. ವಿಶ್ವಾದ್ಯಂತ ₹710.35 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ, ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾಗಳ ಪಟ್ಟಿಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಚಿತ್ರದಲ್ಲಿ ರಜಿನಿಕಾಂತ್ ಅವರು ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಮಾಸ್ ಲುಕ್ ಹಾಗೂ ಅಭಿನಯ ಅಭಿಮಾನಿಗಳ ಗಮನ ಸೆಳೆದಿದೆ.
ಅಕ್ಟೋಬರ್ 15ರಂದು ಬಿಡುಗಡೆಯಾದ ‘ಜೈಲರ್-2’, ಅಕ್ಟೋಬರ್ 25ರ ಭಾನುವಾರದ ವೇಳೆಗೆ ವಿಶ್ವಾದ್ಯಂತ ಒಟ್ಟು ₹710.35 ಕೋಟಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0’ ಚಿತ್ರದ ₹691 ಕೋಟಿ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ₹466.85 ಕೋಟಿ ಗಳಿಕೆ
‘ಜೈಲರ್-2’ ಭಾರತದಲ್ಲಿ ಒಟ್ಟು ₹466.85 ಕೋಟಿ ಗಳಿಸಿದ್ದು, ನೆಟ್ ಗಳಿಕೆ ₹398.70 ಕೋಟಿ ಎಂದು ವರದಿಯಾಗಿದೆ. ವಿದೇಶಿ ಮಾರುಕಟ್ಟೆಗಳಿಂದ ₹243.50 ಕೋಟಿ ಸಂಗ್ರಹವಾಗಿದೆ. ಭಾನುವಾರವೊಂದರಲ್ಲೇ ಭಾರತದಲ್ಲಿ ಚಿತ್ರ ₹25.70 ಕೋಟಿ ಗಳಿಸಿದೆ ಎನ್ನಲಾಗಿದೆ.
‘ಸ್ಯಾಕ್‌ನಿಲ್ಕ್’ ವರದಿಯ ಪ್ರಕಾರ, ಬಿಡುಗಡೆಯ 11ನೇ ದಿನದಂದು ವಿವಿಧ ಭಾಷೆಗಳ ಆವೃತ್ತಿಗಳು ಉತ್ತಮ ಗಳಿಕೆ ದಾಖಲಿಸಿವೆ.
ತಮಿಳು: 5,683 ಪ್ರದರ್ಶನಗಳಿಂದ ₹17.35 ಕೋಟಿ
ತೆಲುಗು: 1,860 ಪ್ರದರ್ಶನಗಳಿಂದ ₹4.50 ಕೋಟಿ
ಹಿಂದಿ: 4,195 ಪ್ರದರ್ಶನಗಳಿಂದ ₹3.15 ಕೋಟಿ
ಕನ್ನಡ: 216 ಪ್ರದರ್ಶನಗಳಿಂದ ₹0.70 ಕೋಟಿ
ಇದಲ್ಲದೆ, ವಿಶ್ವಾದ್ಯಂತ ಅತಿ ವೇಗವಾಗಿ ₹300 ಕೋಟಿ ಗಳಿಸಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಯೂ ‘ಜೈಲರ್-2’ಗೆ ಲಭಿಸಿದೆ ಎಂದು ವರದಿಯಾಗಿದೆ.
ತಾರಾಬಳಗದಲ್ಲಿ ಘಟಾನುಘಟಿಗಳು
ಚಿತ್ರದಲ್ಲಿ ರಜಿನಿಕಾಂತ್ ಜತೆಗೆ ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು ಮತ್ತು ಜತಿನ್ ಸರ್ನಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಗಳಿಕೆಯೊಂದಿಗೆ ‘ಜೈಲರ್-2’ ತಮಿಳು ಚಿತ್ರರಂಗದ ಗಮನ ಸೆಳೆದಿದೆ.
ಸಿನೆಮಾ
Rashmika-Vijay-ಸುಳ್ಳು ಪ್ರಚಾರದ ವಿರುದ್ಧ ರಶ್ಮಿಕಾ–ವಿಜಯ್ ದಂಪತಿ ಕಾನೂನು ಸಮರ; ಸೈಬರ್ ಪೊಲೀಸರಿಗೆ ದೂರು
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಂಪತಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ ಎಂದು ‘ವಿರೋಶ್’ ತಂಡದ ಪ್ರತಿನಿಧಿಗಳು ತಿಳಿಸಿದ್ದಾರೆ.
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಂಪತಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ ಎಂದು ‘ವಿರೋಶ್’ ತಂಡದ ಪ್ರತಿನಿಧಿಗಳು ತಿಳಿಸಿದ್ದಾರೆ.
ಕರಣ್ ಜೋಹರ್ ಅವರ ಜನಪ್ರಿಯ ‘ಕಾಫಿ ವಿತ್ ಕರಣ್’ ಟಾಕ್ ಶೋನಲ್ಲಿ ಭಾಗವಹಿಸಿದ ಬಳಿಕ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್‌ಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಹರಡಲಾಗುತ್ತಿರುವ ಆನ್‌ಲೈನ್ ಪೋಸ್ಟ್‌ಗಳ ಕುರಿತು ತನಿಖೆ ನಡೆಸುವಂತೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.
ಸುಳ್ಳು ಮಾಹಿತಿ, ನಕಲಿ ಖಾತೆಗಳ ವಿರುದ್ಧ ಆರೋಪ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಗುರಿಯಾಗಿಸಿಕೊಂಡು ಪ್ರಕಟಿಸಲಾದ ಆನ್‌ಲೈನ್ ಪೋಸ್ಟ್‌ಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ತಮ್ಮ ಪ್ರತಿನಿಧಿ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ ಎಂದು ‘ವಿರೋಶ್’ ತಂಡದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ, ವೈಯಕ್ತಿಕ ಅಭಿಪ್ರಾಯ ಮತ್ತು ವಿಮರ್ಶೆಯ ಹಕ್ಕನ್ನು ಗೌರವಿಸುವುದಾಗಿ ತಿಳಿಸಿರುವ ತಂಡ, ಸುಳ್ಳು ಅಥವಾ ತಿರುಚಿದ ಮಾಹಿತಿಗಳನ್ನು ಸತ್ಯವೆಂದು ಬಿಂಬಿಸುವುದು ವಿಭಿನ್ನ ವಿಚಾರ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಸುಳ್ಳು ನಿರೂಪಣೆಗಳನ್ನು ಹರಡುವುದು, ಮಾರ್ಪಡಿಸಿದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವುದು, ನಕಲಿ ಖಾತೆಗಳ ಮೂಲಕ ಕಿರುಕುಳ ನೀಡುವುದು ಸೇರಿದಂತೆ ಹಲವು ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನಿಖೆಗೆ ಅಗತ್ಯವಿರುವ ಲಿಂಕ್‌ಗಳು ಮತ್ತು ಸಂಬಂಧಿತ ಸಾಕ್ಷ್ಯಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ತಂಡ ತಿಳಿಸಿದೆ.
ಕಾನೂನು ಕ್ರಮಕ್ಕೆ ಮನವಿ
ಸುಳ್ಳು ಪ್ರಚಾರ ಅಥವಾ ಹಣ ನೀಡಿ ನಡೆಸುವ ಉದ್ದೇಶಪೂರ್ವಕ ಅಭಿಯಾನಗಳು ಸಾಕ್ಷ್ಯಗಳ ಮೂಲಕ ದೃಢಪಟ್ಟಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ತಂಡ ಹೇಳಿದೆ. ಕಾನೂನುಬಾಹಿರ ವಿಷಯಗಳನ್ನು ಪ್ರಕಟಿಸುವುದು, ಮರುಹಂಚಿಕೆ ಮಾಡುವುದು ಅಥವಾ ವ್ಯಾಪಕವಾಗಿ ಹರಡುವ ಪ್ರಕರಣಗಳನ್ನೂ ಪರಿಶೀಲಿಸಲಾಗುವುದು ಎಂದು ಎಚ್ಚರಿಸಿದೆ.
ಈ ಕ್ರಮವು ನೈಜ ಅಭಿಪ್ರಾಯಗಳು ಅಥವಾ ವಿಮರ್ಶೆಗಳನ್ನು ತಡೆಯುವ ಉದ್ದೇಶ ಹೊಂದಿಲ್ಲ. ಬದಲಿಗೆ, ಸುಳ್ಳು ಮಾಹಿತಿ ಮತ್ತು ಕಾನೂನುಬಾಹಿರ ಕಿರುಕುಳದ ವಿರುದ್ಧ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವುದೇ ಉದ್ದೇಶ ಎಂದು ‘ವಿರೋಶ್’ ತಂಡ ಸ್ಪಷ್ಟಪಡಿಸಿದೆ.
ದೃಢೀಕರಿಸದ ಮಾಹಿತಿಯನ್ನು ಸತ್ಯವೆಂದು ಬಿಂಬಿಸದೆ, ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯಿಂದ ವರ್ತಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ತಂಡ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಗೌರವವನ್ನು ಕಾನೂನುಬದ್ಧ ಮಾರ್ಗಗಳ ಮೂಲಕ ರಕ್ಷಿಸಲು ಬದ್ಧವಾಗಿರುವುದಾಗಿ ತಿಳಿಸಿದೆ.
ಸಿನೆಮಾ
Chetan D’Souza-‘ಜೈಲರ್ 2’ನಲ್ಲಿ ರಜನಿಕಾಂತ್ ಆ್ಯಕ್ಷನ್ ಹಿಂದಿರುವುದು ಉಡುಪಿಯ ಚೇತನ್ ಡಿಸೋಜಾ..! ಸಾಹಸ ನಿರ್ದೇಶಕನ ಆಸಕ್ತಿದಾಯಕ ಸಿನಿ ಪಯಣದ ಕಥೆ ಇಲ್ಲಿದೆ
ಉಡುಪಿ ಮೂಡುಬೆಳ್ಳೆಯ ಚೇತನ್ ಡಿಸೋಜಾ ಈಗ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಾಹಸ ನಿರ್ದೇಶಕರಲ್ಲಿ ಒಬ್ಬರು. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಮೂಲಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಚೇತನ್ ಅವರ ಸಿನಿ ಪಯಣ ಆಸಕ್ತಿದಾಯಕವಾಗಿದೆ.
ಉಡುಪಿ ಮೂಡುಬೆಳ್ಳೆಯ ಚೇತನ್ ಡಿಸೋಜಾ ಈಗ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಾಹಸ ನಿರ್ದೇಶಕರಲ್ಲಿ ಒಬ್ಬರು. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಮೂಲಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಚೇತನ್ ಅವರ ಸಿನಿ ಪಯಣ ಆಸಕ್ತಿದಾಯಕವಾಗಿದೆ.
‘ಜೈಲರ್ 2’ನಲ್ಲಿ ರಜನಿಕಾಂತ್‌ಗೆ ಭರ್ಜರಿ ಆ್ಯಕ್ಷನ್
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಅದರ ಮುಂದುವರಿದ ಭಾಗವಾದ ‘ಜೈಲರ್ 2’ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ರಜನಿಕಾಂತ್ ಅವರ ಸಾಹಸ ದೃಶ್ಯಗಳು ವಿಶೇಷ ಆಕರ್ಷಣೆಯಾಗಿವೆ. ಈ ಸಾಹಸ ದೃಶ್ಯಗಳ ಹಿಂದಿನ ಪ್ರಮುಖ ವ್ಯಕ್ತಿ ಉಡುಪಿ ಮೂಡುಬೆಳ್ಳೆಯ ಚೇತನ್ ಡಿಸೋಜಾ.
ಚಿತ್ರದ ಆರಂಭಿಕ ಟೀಸರ್‌ನಲ್ಲಿನ ಸಾಹಸ ದೃಶ್ಯಗಳಿಗೂ ಚೇತನ್ ಕೆಲಸ ಮಾಡಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ. ದಿಗ್ಗಜ ನಟನೊಂದಿಗೆ ಕೆಲಸ ಮಾಡಿರುವುದು ವಿಭಿನ್ನ ಅನುಭವವಾಗಿದ್ದು, ಅವರಂತಹ ಕಲಾವಿದರೊಂದಿಗೆ ಕೆಲಸ ಮಾಡುವುದೇ ಖುಷಿಯ ಸಂಗತಿ ಎಂಬ ಅರ್ಥದಲ್ಲಿ ಚೇತನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಧೂಮಮ್’ನಿಂದ ‘ಆವೇಶಂ’ವರೆಗೆ ಅವಕಾಶಗಳ ಪಯಣ
ಚೇತನ್ ಡಿಸೋಜಾ ಅವರಿಗೆ ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಒದಗಿಬಂದಿವೆ. ಪವನ್ ಕುಮಾರ್ ನಿರ್ದೇಶನದ ‘ಧೂಮಮ್’ ಚಿತ್ರದಲ್ಲಿ ಕೆಲಸ ಮಾಡುವಾಗ ಮಲಯಾಳಂ ನಟ ಫಹಾದ್ ಫಾಸಿಲ್ ಅವರೊಂದಿಗೆ ಪರಿಚಯವಾಯಿತು. ನಂತರ ‘ಆವೇಶಂ’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಅವಕಾಶವೂ ದೊರೆಯಿತು.
‘ಆವೇಶಂ’ನ ಸಾಹಸ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದವು. ಈ ಕೆಲಸ ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಗಮನಕ್ಕೂ ಬಂದಿದ್ದು, ‘ಜೈಲರ್ 2’ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿತು.
‘ಡ್ರ್ಯಾಗನ್’, ‘ಫೌಜಿ’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶನ
ಚೇತನ್ ಡಿಸೋಜಾ ಅವರ ಕೆಲಸದ ವ್ಯಾಪ್ತಿ ದಕ್ಷಿಣ ಭಾರತದ ಹಲವು ಚಿತ್ರರಂಗಗಳಿಗೆ ವಿಸ್ತರಿಸಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದೆ. ಪ್ರಭಾಸ್ ಅಭಿನಯದ ‘ಫೌಜಿ’ ಹಾಗೂ ಸೂರ್ಯ ಅಭಿನಯದ ‘ಸೀನ್’ ಚಿತ್ರಗಳ ಸಾಹಸ ನಿರ್ದೇಶನದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.
ಒಂದೊಂದು ಚಿತ್ರದ ಅನುಭವ ಮತ್ತೊಂದು ದೊಡ್ಡ ಅವಕಾಶಕ್ಕೆ ದಾರಿ ಮಾಡಿಕೊಟ್ಟಿದ್ದು, ಚೇತನ್ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ.
ಕನ್ನಡದ ಸ್ಟಾರ್ ನಟರ ಚಿತ್ರಗಳಿಗೂ ಸಾಹಸ ನಿರ್ದೇಶನ
ಕನ್ನಡ ಚಿತ್ರರಂಗದಲ್ಲೂ ಚೇತನ್ ಡಿಸೋಜಾ ಹಲವು ಪ್ರಮುಖ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ‘ಬಘೀರ’, ‘ಯುಐ’, ‘45’, ‘ಭೈರತಿ ರಣಗಲ್’ ಮತ್ತು ‘ಮ್ಯಾಕ್ಸ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಕೆಲಸ ಗುರುತಿಸಿಕೊಂಡಿದೆ. ಶಿವರಾಜ್‌ಕುಮಾರ್, ಶ್ರೀಮುರಳಿ, ಕಿಚ್ಚ ಸುದೀಪ್, ರಾಜ್ ಬಿ. ಶೆಟ್ಟಿ ಹಾಗೂ ಉಪೇಂದ್ರ ಅವರ ಚಿತ್ರಗಳಲ್ಲೂ ಸಾಹಸ ದೃಶ್ಯಗಳನ್ನು ರೂಪಿಸಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರದಲ್ಲೂ ಕೆಲಸ ಮಾಡಿರುವ ಚೇತನ್, ಅವರ ಸಹಕಾರದಿಂದಲೇ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗದಿಂದ ಸಾಹಸ ನಿರ್ದೇಶಕರವರೆಗೆ
ಚೇತನ್ ಡಿಸೋಜಾ ಅವರ ಸಿನಿ ಪಯಣ ಆರಂಭದಿಂದಲೇ ಚಿತ್ರರಂಗದ ಹಿನ್ನೆಲೆಯಲ್ಲಿರಲಿಲ್ಲ. ಇವರು ಉಡುಪಿಯಲ್ಲೇ ಕರಾಟೆ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಆರಂಭಿಸಿದ್ದರು. ಬಳಿಕ ಸಿನಿಮಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡು ಸಾಹಸ ನಿರ್ದೇಶನದ ಹಾದಿ ಹಿಡಿದರು.
ಅವರು ನಿರ್ಮಿಸಿದ ‘Wrong Move’ ಎಂಬ ಕಿರುಚಿತ್ರ ನಿರ್ದೇಶಕ ಪವನ್ ಕುಮಾರ್ ಅವರ ಗಮನ ಸೆಳೆಯಿತು. ನಂತರ ಪವನ್ ಕುಮಾರ್ ಅವರ ‘U Turn’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡರು.
ಸಾಫ್ಟ್‌ವೇರ್ ಕ್ಷೇತ್ರದಿಂದ ಆರಂಭವಾದ ಪಯಣ ಇಂದು ಭಾರತೀಯ ಚಿತ್ರರಂಗದ ಪ್ರಮುಖ ನಟರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡುವ ಹಂತಕ್ಕೆ ತಲುಪಿದೆ. ಉಡುಪಿಯ ಚೇತನ್ ಡಿಸೋಜಾ ಅವರ ಈ ಸಾಧನೆ ಕನ್ನಡಿಗರಿಗೂ ಹೆಮ್ಮೆಯ ಸಂಗತಿಯಾಗಿದೆ.
-
ಅಪರಾಧ23 hours ago
Rakesh Murder :ಮಂಗಳೂರು : ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ: ಮೂವರು ಹಂತಕರಿಗೆ ಜೀವಾವಧಿ ಶಿಕ್ಷೆ!
-
Uncategorized21 hours ago
Puttur Pocso Case : ಅಪ್ರಾಪ್ತಗೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
-
ಅಂತರ ರಾಜ್ಯ9 hours agoBlack money-ಸಾಮಾನ್ಯ ಕುಟುಂಬದ ಸಹೋದರರ ಮನೆಯಲ್ಲಿ ಕಪ್ಪು ಹಣ? ಮನೆಯ ನೆಲದಡಿ 3 ಡ್ರಮ್ಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆ..! ಮನೆ ಸೀಲ್, ಓರ್ವನ ಬಂಧನ
-
ಬಿಗ್ ನ್ಯೂಸ್8 hours agoSoujanya case-ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಎಸ್ಐಟಿ ಮುಖ್ಯಸ್ಥರನ್ನು ಮನೆಗೆ ಕರೆಸಿಕೊಂಡು ಸಿಎಂ ಡಿಕೆಶಿ ಮಾಹಿತಿ ಪಡೆದುಕೊಂಡ ಆರೋಪ – ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತೆ..!
-
ಬಿಗ್ ನ್ಯೂಸ್10 hours agoKrupa Alva-ವಿಚಾರಣೆಗೆ ಹಾಜರಾದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ? ಅಮೆರಿಕಕ್ಕೆ ತೆರಳಿರುವ ಶಂಕೆ..!
-
ಬಿಗ್ ನ್ಯೂಸ್10 hours agoSiddaramaiah-ಸ್ಟಿಂಗ್ ಆಪರೇಷನ್ : ತನಿಖೆಯಲ್ಲಿ ಸಿದ್ದರಾಮಯ್ಯಗೆ ‘ಕ್ಲೀನ್ ಚೀಟ್’ : ತಿರುವು ನೀಡಿದ ಮುಸುಕುಧಾರಿ ಮಹಿಳೆಯ ಹೇಳಿಕೆ..! ಈ ಮಹಿಳೆಯನ್ನು ಪತ್ತೆ ಹಚ್ಚಿದ್ದೆಲ್ಲಿ ಗೊತ್ತೇ..?
-
ಮಂಗಳೂರು4 hours agoSoujanya Case-Big Breaking : ಸೌಜನ್ಯ ಪ್ರಕರಣ : ಶಶಿಕುಮಾರ್ ಸ್ಥಾನಕ್ಕೆ ಚೇತನ್ ರಾಥೋಡ್ – ವೆಂಕಟೇಶ್ ಪ್ರಸನ್ನ ಸ್ಥಾನಕ್ಕೆ ಶ್ರೀನಿಧಿ ನೇಮಕ
-
ಸ್ಥಳೀಯ9 hours agoNew toll pass rules-ನ.1ರಿಂದ ಹೊಸ ಟೋಲ್ ಪಾಸ್ ನಿಯಮ ಜಾರಿ: ಸ್ಥಳೀಯರಿಗೆ ₹350 ಮಾಸಿಕ ಪಾಸ್ ಬದಲು ₹1,500 ವಾರ್ಷಿಕ ಪಾಸ್


















