Connect with us

ರಾಜ್ಯ

Storms-ನ.14, 15ರಂದು ಶ್ರೀಲಂಕಾದಲ್ಲಿ ಚಂಡಮಾರುತ ಸಾಧ್ಯತೆ; ಕರ್ನಾಟಕದಲ್ಲಿ ಒಣಹವೆ ಮುಂದುವರಿಕೆ..!

Published

on



Ad Widget

Ad Widget

Ad Widget

Ad Widget

ರಾಜ್ಯದಲ್ಲಿ ಚಳಿ ಮತ್ತು ಬಿಸಿಲಿನ ವಾತಾವರಣ ಮುಂದುವರಿದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಇದೇ ವೇಳೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಅದು ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆ ಹವಾಮಾನ ವಲಯದಲ್ಲಿ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget

ರಾಜ್ಯದಲ್ಲಿ ಚಳಿ ಮತ್ತು ಬಿಸಿಲಿನ ವಾತಾವರಣ ಮುಂದುವರಿದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಇದೇ ವೇಳೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಅದು ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆ ಹವಾಮಾನ ವಲಯದಲ್ಲಿ ಕುತೂಹಲ ಮೂಡಿಸಿದೆ.

Ad Widget

Ad Widget alt="Ad Widget"/>

Ad Widget

ನ.14 ಅಥವಾ 15ರಂದು ಚಂಡಮಾರುತ ಸಾಧ್ಯತೆ
ಹವಾಮಾನ ತಜ್ಞರ ಅಂದಾಜಿನ ಪ್ರಕಾರ, ನವೆಂಬರ್ 13ರ ವೇಳೆಗೆ ಶ್ರೀಲಂಕಾದ ಪೂರ್ವ ಕರಾವಳಿ ಸಮೀಪ ಪ್ರಬಲ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಈ ವಾಯುಭಾರ ಕುಸಿತ ಮತ್ತಷ್ಟು ಬಲ ಪಡೆದು ನವೆಂಬರ್ 14 ಅಥವಾ 15ರ ವೇಳೆಗೆ ಚಂಡಮಾರುತವಾಗಿ ರೂಪುಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

Ad Widget

Ad Widget <> Ad Widget

ಕರ್ನಾಟಕದಲ್ಲಿ ಒಣಹವೆ ಮುಂದುವರಿಕೆ
ಸಂಭಾವ್ಯ ಚಂಡಮಾರುತದ ಪರಿಣಾಮ ಕರ್ನಾಟಕದ ಹವಾಮಾನದ ಮೇಲೆ ಹೇಗಿರಲಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ.



Ad Widget

ಹಗಲಿನಲ್ಲಿ ಬಿಸಿಲಿನ ವಾತಾವರಣವಿದ್ದರೆ, ರಾತ್ರಿ ವೇಳೆ ತಂಪು ಹೆಚ್ಚಾಗುವ ಸಾಧ್ಯತೆಯಿದೆ. ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಾತ್ರ ಹಗುರ ತುಂತುರು ಮಳೆಯಾಗುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.

Click to comment

Leave a Reply

ರಾಜಕೀಯ

India Block Mega Rally: ಮೊದಲು ಚುನಾವಣಾ ಆಯುಕ್ತರ ಬೇಟೆ, ಬಳಿಕ ಮೋದಿ–ಶಾ ಸರದಿ : ಇಂಡಿಯಾ ಬ್ಲಾಕ್‌ ಮೆಗಾ Rallyಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುಡುಗು!

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಾಶವಾಗಲು ಬಿಡುವುದಿಲ್ಲ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Ad Widget

Ad Widget alt="Ad Widget"/>

Ad Widget

ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿ ಮೊದಲ ಹೆಜ್ಜೆಯಾಗಲಿದೆ ಎಂದರು.

Ad Widget

Ad Widget <> Ad Widget

‘ಮೋದಿ ಎಲ್ಲಿಗೂ ಹೋಗುವುದಿಲ್ಲ’ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಗ್ಯಾನೇಶ್ ಕುಮಾರ್ ಬಳಿಕ ನಿಮ್ಮ ಸರದಿ ಬರಲಿದೆ. ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.



Ad Widget

ಈ ಸಭೆಯ ಮೂಲಕ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಜನರ ಸಂದೇಶವನ್ನು ತಲುಪಿಸುವ ಉದ್ದೇಶವಿದೆ. ಇದು ಕೇವಲ ರಾಜಕೀಯ ಪಕ್ಷದ ಧ್ವನಿಯಲ್ಲ. ದೇಶದ ಯುವಕರು, ರೈತರು ಮತ್ತು ಸಾಮಾನ್ಯ ಜನರ ಧ್ವನಿಯಾಗಿದೆ ಎಂದು ಅವರು ಹೇಳಿದರು.

Ad Widget

Ad Widget

ಮತದಾರರ ಹೆಸರು ಅಳಿಸಿರುವ ಆರೋಪ

2024ರ ಲೋಕಸಭಾ ಚುನಾವಣೆಯ ಬಳಿಕ ಸುಮಾರು 13.5 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಪ್ರತಿ ಏಳು ಮತದಾರರಲ್ಲಿ ಒಬ್ಬರಂತೆ, ಅಂದರೆ ಶೇ.15ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ 2024ರ ಚುನಾವಣೆಯಲ್ಲಿ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವಿನ ಮತಗಳ ಅಂತರ ಕೇವಲ ಶೇ.3ರಷ್ಟಿತ್ತು ಎಂದು ಅವರು ಹೇಳಿದರು.

ಇದು ಸಾಮಾನ್ಯ ಕಳ್ಳತನವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಮತ್ತು ಧ್ವನಿಯನ್ನು ಕಸಿದುಕೊಂಡಂತಾಗಿದೆ. ಇದೊಂದು ಅತ್ಯಂತ ಗಂಭೀರ ಪ್ರಕರಣ ಎಂದು ಆರೋಪಿಸಿದ ಅವರು, ಈ ಅಕ್ರಮಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವೇ ಉತ್ತರ ನೀಡಬೇಕಿದೆ ಎಂದರು.

ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ಜೈಲು ಶಿಕ್ಷೆಯಾಗುವ ಪರಿಸ್ಥಿತಿ ಬರಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಆರ್‌ಎಸ್‌ಎಸ್ ವಿರುದ್ಧವೂ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೇಶದ ಎಲ್ಲ ಪ್ರಮುಖ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ದೇಶದ ಸಂಸ್ಥೆಗಳು ಜನರಿಗೆ ಸೇರಿದ್ದವೇ ಹೊರತು ಆರ್‌ಎಸ್‌ಎಸ್ ಅಥವಾ ಬಿಜೆಪಿಗೆ ಸೇರಿದ್ದಲ್ಲ ಎಂದರು.

ಸರ್ಕಾರ ಕೆಲವೇ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ದೇಶದ ಸಂಪತ್ತು ಅದಾನಿ ಮತ್ತು ಅಂಬಾನಿಯಂತಹ ಕೆಲವೇ ಉದ್ಯಮಿಗಳ ಪಾಲಾಗುತ್ತಿದೆ. ಅವರ ಸಾಲ ಮನ್ನಾ ಮಾಡಲಾಗುತ್ತದೆ. ಆದರೆ ರೈತನ ಮಗ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದಿದ್ದರೆ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಟೀಕಿಸಿದರು.

ಎಲ್ಲವೂ ಅದಾನಿಯವರ ಪಾಲಾಗುವಂತಹ ದೇಶ ನಮಗೆ ಬೇಡ. ರೈತರು ಕಷ್ಟಪಟ್ಟು ದುಡಿದರೆ ಅವರ ಕನಸು ನನಸಾಗಬೇಕು. ವಿದ್ಯಾರ್ಥಿಗಳು ದಿನಕ್ಕೆ 18 ಗಂಟೆಗಳ ಕಾಲ ಓದಿದರೆ ಅವರಿಗೆ ಅದಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವ ಭಾರತ ನಿರ್ಮಾಣವಾಗಬೇಕು ಎಂದು ಹೇಳಿದರು.

ದ್ವೇಷ ರಾಜಕಾರಣಕ್ಕೆ ವಿರೋಧ

ತಮಗೆ ಪ್ರಧಾನಿ ಮೋದಿ, ಅಮಿತ್ ಶಾ ಅಥವಾ ಗ್ಯಾನೇಶ್ ಕುಮಾರ್ ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಬಿಜೆಪಿ ಅಥವಾ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ದಾಳಿ ಮಾಡುವುದಾಗಲಿ, ಹಿಂಸಾಚಾರ ನಡೆಸುವುದಾಗಲಿ ತಮ್ಮ ಉದ್ದೇಶವಲ್ಲ ಎಂದರು.

ಧರ್ಮಕ್ಕಿಂತಲೂ ಜನರ ಧ್ವನಿ ತಮಗೆ ಮುಖ್ಯ. ನನ್ನ ಧರ್ಮ ಯಾವುದು ಎಂದು ಕೇಳಿದರೆ ಜನರ ಧ್ವನಿಯೇ ನನ್ನ ಧರ್ಮ ಎಂದು ಹೇಳುತ್ತೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ ದೇಶಕ್ಕೆ ಹಾನಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

Ad Widget
Continue Reading

ರಾಜ್ಯ

Transfer-ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಭಾರಿ ವರ್ಗಾವಣೆ: ಡಿಎಚ್‌ಒ, ಜಿಲ್ಲಾ ಶಸ್ತ್ರಚಿಕಿತ್ಸಕರು ಸೇರಿ ಹಲವು ವೈದ್ಯಾಧಿಕಾರಿಗಳ ವರ್ಗಾವಣೆ

Published

on



Ad Widget

Ad Widget

Ad Widget

Ad Widget

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸರ್ಕಾರ ಭಾರಿ ಪ್ರಮಾಣದ ವರ್ಗಾವಣೆ ಪ್ರಕ್ರಿಯೆ ಕೈಗೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಡಿಎಚ್‌ಒ), ಜಿಲ್ಲಾ ಶಸ್ತ್ರಚಿಕಿತ್ಸಕರು, ಉಪ ನಿರ್ದೇಶಕರು, ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ನಿವಾಸಿ ವೈದ್ಯಾಧಿಕಾರಿಗಳು (ಆರ್‌ಎಂಒ), ತಾಲೂಕು ಆರೋಗ್ಯಾಧಿಕಾರಿಗಳು (ಟಿಎಚ್‌ಒ) ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ವೈದ್ಯಾಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Ad Widget

Ad Widget

Ad Widget

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸರ್ಕಾರ ಭಾರಿ ಪ್ರಮಾಣದ ವರ್ಗಾವಣೆ ಪ್ರಕ್ರಿಯೆ ಕೈಗೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಡಿಎಚ್‌ಒ), ಜಿಲ್ಲಾ ಶಸ್ತ್ರಚಿಕಿತ್ಸಕರು, ಉಪ ನಿರ್ದೇಶಕರು, ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ನಿವಾಸಿ ವೈದ್ಯಾಧಿಕಾರಿಗಳು (ಆರ್‌ಎಂಒ), ತಾಲೂಕು ಆರೋಗ್ಯಾಧಿಕಾರಿಗಳು (ಟಿಎಚ್‌ಒ) ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ವೈದ್ಯಾಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Ad Widget

Ad Widget alt="Ad Widget"/>

Ad Widget

ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣದಿಂದಲೇ ಹೊಸ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿ ಹುದ್ದೆಗಳಿಗೆ ಕೆಲವು ವೈದ್ಯರನ್ನು ಗರಿಷ್ಠ ಎರಡು ವರ್ಷಗಳ ಅವಧಿಗೆ ಅನ್ಯ ಇಲಾಖಾ ನಿಯೋಜನೆ ಮೇಲೆ ನೇಮಿಸಲಾಗಿದೆ.

Ad Widget

Ad Widget <> Ad Widget

ಸರ್ಕಾರದ ಉಪ ಕಾರ್ಯದರ್ಶಿ ವಿ. ಅಕ್ಕಮಹಾದೇವಿ ಅವರು ಈ ಕುರಿತು ಆದೇಶ ಹೊರಡಿಸಿದ್ದು, ವರ್ಗಾವಣೆಗೊಂಡ ಅಧಿಕಾರಿಗಳು ಪ್ರಭಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ.



Ad Widget

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವರ್ಗಾವಣೆ
ವೈದ್ಯಾಧಿಕಾರಿಯ ಹೆಸರು – ಎಲ್ಲಿಂದ ಎಲ್ಲಿಗೆ
ಡಾ. ನೀಲಾದೇವಿ: ಡಿವೈ. ಸಿಎಂಒ, ಚಾಮರಾಜನಗರ ಜಿಲ್ಲೆ- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಾಮರಾಜನಗರ
ಡಾ. ಸಿದ್ರಾಮಪ್ಪ ಪಾಟೀಲ: ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿ, ಕಲಬುರಗಿ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕಲಬುರಗಿ
ಡಾ. ಕೆ.ಪಿ. ಕಾಂತರಾಜು: ನೇತ್ರ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಹೊಳೆನರಸೀಪುರ, ಹಾಸನ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ , ಶಿವಮೊಗ್ಗ

Ad Widget

Ad Widget

ಜಿಲ್ಲಾ ಶಸ್ತ್ರಚಿಕಿತ್ಸಕರು
ವೈದ್ಯಾಧಿಕಾರಿಯ ಹೆಸರು -ಎಲ್ಲಿಂದ ಎಲ್ಲಿಗೆ
ಡಾ. ಜಿ.ಎಸ್. ಶ್ರೀಧರ್: ಹಿರಿಯ ನೇತ್ರ ತಜ್ಞರು, ಸಾರ್ವಜನಿಕ ಆಸ್ಪತ್ರೆ ಅರಕಲಗೂಡು, ಹಾಸನ-ಜಿಲ್ಲಾ ಶಸ್ತ್ರಚಿಕಿತ್ಸಕರು, ಶ್ರೀ ಚಾಮರಾಜೇಂದ್ರ ಆಸ್ಪತ್ರೆ, ಹಾಸನ
ಡಾ. ರಮೇಶ್ ಪಿ.ವಿ.: ನಿವಾಸಿ ವೈದ್ಯಾಧಿಕಾರಿ (RMO), ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ-ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ
ಡಾ. ಎಂ.ಎಸ್. ಪಲ್ಲೇದ: ಸ್ಥಳ ನಿರೀಕ್ಷೆಯಲ್ಲಿದ್ದವರು-ಜಿಲ್ಲಾ ಶಸ್ತ್ರಚಿಕಿತ್ಸಕರು, ಬೆಳಗಾವಿ ಜಿಲ್ಲೆ (ಖಾಲಿ ಹುದ್ದೆಗೆ)
ಡಾ. ವೀರಭದ್ರಪ್ಪ .ಪಿ: ತಾಲೂಕು ಆರೋಗ್ಯಾಧಿಕಾರಿ, ಮಳವಳ್ಳಿ, ಮಂಡ್ಯ ಜಿಲ್ಲೆ-ಜಿಲ್ಲಾ ಶಸ್ತ್ರಚಿಕಿತ್ಸಕರು, ಮಂಡ್ಯ ಜಿಲ್ಲೆ

ವೈದ್ಯಕೀಯ ಅಧೀಕ್ಷಕರು
ವೈದ್ಯಾಧಿಕಾರಿಯ ಹೆಸರು – ಎಲ್ಲಿಂದ ಎಲ್ಲಿಗೆ
ಡಾ. ಕಮಲಮ್ಮ .ಎಂ: ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ, ಕೋಲಾರ-ವೈದ್ಯಕೀಯ ಅಧೀಕ್ಷಕರು, ಕೆ.ಎನ್.ಟಿ.ಬಿ ಆಸ್ಪತ್ರೆ, ಕೋಲಾರ
ಡಾ. ಹರೀಶ್ ಎಂ. ಕೆ.: ಹಿರಿಯ ಮೂಳೆ ಶಸ್ತ್ರಚಿಕಿತ್ಸಕರು, ಸಾರ್ವಜನಿಕ ಆಸ್ಪತ್ರೆ, ಅರಕಲಗೂಡು-ಪ್ರಾಂಶುಪಾಲರು, ಜಿಲ್ಲಾ ತರಬೇತಿ ಸಂಸ್ಥೆ, ಹಾಸನ
ಡಾ. ಮಾರುತಿ ರಾವ್ ಕಾಂಬಳೆ: ತಾಲೂಕು ಆರೋಗ್ಯಾಧಿಕಾರಿ, ಕಲಬುರಗಿ-ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ (ಕು.ಕ), ಕಲಬುರಗಿ
ಡಾ. ಶರಣಬಸಪ್ಪ ಖ್ಯಾತನಾಳ: ಡಿಹೆಚ್‌ಒ (DHO), ಕಲಬುರಗಿ ಜಿಲ್ಲೆ-ಪ್ರಾಂಶುಪಾಲರು, ಪ್ರಾದೇಶಿಕ ಆರೋಗ್ಯ ಮತ್ತು ಕು.ಕ. ತರಬೇತಿ ಕೇಂದ್ರ, ಕಲಬುರಗಿ
ಡಾ. ಮಂಜುನಾಥ್ ಡಿ.ಎನ್.: ಇ.ಎನ್.ಟಿ ತಜ್ಞರು, ಸಾರ್ವಜನಿಕ ಆಸ್ಪತ್ರೆ, ರಾಣಿಬೆನ್ನೂರು-ಪ್ರಾಂಶುಪಾಲರು, ಜಿಲ್ಲಾ ತರಬೇತಿ ಸಂಸ್ಥೆ, ಚಿತ್ರದುರ್ಗ

ಉಪ ನಿರ್ದೇಶಕರು
ವೈದ್ಯಾಧಿಕಾರಿಯ ಹೆಸರು – ಎಲ್ಲಿಂದ ಎಲ್ಲಿಗೆ
ಡಾ. ಜನಾರ್ದನ್ ಹೆಚ್.ಐ.: ಹಿರಿಯ ವೈದ್ಯಾಧಿಕಾರಿ, ಪ್ರಾ.ಆ.ಕೇಂದ್ರ ಕೊನೇನಹಳ್ಳಿ, ಬೆಂ. ಗ್ರಾಮಾಂತರ ಉಪ ನಿರ್ದೇಶಕರು, NUHM & SNL QA ಮತ್ತು 15ನೇ ಹಣಕಾಸು ಆಯೋಗ, ಆರೋಗ್ಯಸೌಧ
ಡಾ. ವೀಣಾ ಕೆ.: ಹಿರಿಯ ಸ್ತ್ರೀರೋಗ ತಜ್ಞೆ, ಸಾರ್ವಜನಿಕ ಆಸ್ಪತ್ರೆ, ಶ್ರೀನಿವಾಸಪುರ -ಉಪ ನಿರ್ದೇಶಕರು, ಕಮ್ಯುನಿಟಿ ಮಾನಿಟರಿಂಗ್, ಆರೋಗ್ಯಸೌಧ, ಬೆಂಗಳೂರು
ಡಾ. ಡಿ.ಎಂ. ನೇತ್ರಾ ರಾಣಿ :ಹಿರಿಯ ವೈದ್ಯಾಧಿಕಾರಿ, ಜಿಲ್ಲಾ ಕುಷ್ಠರೋಗ ಕಚೇರಿ, ಬೆಂಗಳೂರು-ಉಪ ನಿರ್ದೇಶಕರು , ಆರೋಗ್ಯಸೌಧ, ಬೆಂಗಳೂರು
ಡಾ. ಯಲ್ಲ ರಮೇಶ್ ಬಾಬು: ನಗರ ಪ್ರಾ.ಆ.ಕೇಂದ್ರ ಅಗ್ರಹಾರ ಲೇಔಟ್, ಬೆಂಗಳೂರು-ಉಪ ನಿರ್ದೇಶಕರು, KSAPS, ಆರೋಗ್ಯಸೌಧ, ಬೆಂಗಳೂರು
ಡಾ. ಅಶೋಕ್ ರೆಡ್ಡಿ ಎಂ.: ಹಿರಿಯ ವಿಶೇಷ ತಜ್ಞ, ಕೆ.ಎನ್.ಟಿ.ಬಿ, ಕೋಲಾರ-ಉಪ ನಿರ್ದೇಶಕರು, ಕೆಎಸ್‌ಎಪಿಎಸ್, ಬೆಂಗಳೂರು
ಡಾ. ಕವಿತಾ: ಹಿರಿಯ ತಜ್ಞೆ, ಸಾರ್ವಜನಿಕ ಆಸ್ಪತ್ರೆ ಹೊಸಕೋಟೆ, ಬೆಂ. ಗ್ರಾಮಾಂತರ ಉಪ ನಿರ್ದೇಶಕರು, FW & LEPROSY, ಆರೋಗ್ಯಸೌಧ
ಡಾ. ಎಸ್. ಮಂಜುನಾಥ್: ತರಬೇತಿ ಅಧಿಕಾರಿ, ಪಿಎಚ್‌ಐ, ಬೆಂಗಳೂರು-ಉಪ ನಿರ್ದೇಶಕರು, ಪೌಷ್ಟಿಕಾಂಶ ವಿಭಾಗ, ಆರೋಗ್ಯಸೌಧ
ಡಾ. ಅನುಪಮಾ .ಡಿ: ಪ್ರಾ.ಆ.ಕೇಂದ್ರ ಅಜ್ಜನಹಳ್ಳಿ, ಮಾಗಡಿ ತಾಲೂಕು-ಉಪ ನಿರ್ದೇಶಕರು, ಕ್ಷಯರೋಗ ವಿಭಾಗ, ಆರೋಗ್ಯಸೌಧ
ಡಾ. ಜಿ. ಶ್ರೀನಿವಾಸ್: ಪ್ರಾ.ಆ.ಕೇಂದ್ರ ತಿಪ್ಪೇನಹಳ್ಳಿ, ಬೆಂಗಳೂರು-ಉಪ ನಿರ್ದೇಶಕರು, IEC & IPGRS, ಆರೋಗ್ಯಸೌಧ
ಡಾ. ಮಹೇಶ್ ಕುಮಾರ್ ಎಸ್.ಎಸ್.: ಸ್ಥಳ ನಿರೀಕ್ಷೆಯಲ್ಲಿದ್ದವರು-ಉಪ ನಿರ್ದೇಶಕರು (ವೈದ್ಯಕೀಯ), 108 ಆರೋಗ್ಯ ಕವಚ, ಬೆಂಗಳೂರು
ಡಾ. ಶ್ರೀಧರ್ ಎಸ್. ಎಂ.:ನಗರ ಪ್ರಾ.ಆ.ಕೇಂದ್ರ ಅಟ್ಟೂರು, ಬೆಂಗಳೂರು -ಉಪ ನಿರ್ದೇಶಕರು, 104 ಸಹಾಯವಾಣಿ (OOD ಆಧಾರದ ಮೇಲೆ)

ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು
ವೈದ್ಯಾಧಿಕಾರಿಯ ಹೆಸರು – ಎಲ್ಲಿಂದ ಎಲ್ಲಿಗೆ
ಡಾ. ಗಿರೀಶ್ ಪಿ.ಬಿ.: ಇಎನ್‌ಟಿ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಮೊಳಕಾಲ್ಮುರು-ಜಿಲ್ಲಾ ಕಣ್ಣಾವಲು ಅಧಿಕಾರಿ, ಚಿತ್ರದುರ್ಗ
ಡಾ. ಮೀರಾ ಅರ್ಷದ್ ಅಲಿ: ತಜ್ಞ ವೈದ್ಯಾಧಿಕಾರಿ, ಯಳಂದೂರು, ಚಾಮರಾಜನಗರ-ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (DFWO), ಚಾಮರಾಜನಗರ
ಡಾ. ರಾಮೇಗೌಡ ಪಿ.ಬಿ:. ಸ್ಥಳ ನಿರೀಕ್ಷೆಯಲ್ಲಿದ್ದವರು-ಜಿಲ್ಲಾ ಆರ್‌ಸಿಎಚ್ ಅಧಿಕಾರಿ (RCHO), ತುಮಕೂರು
ಡಾ. ರಮೇಶ್ ಅಲಿಯಾಸ್ ತಿರುಮಲೇಶ್: ಸಹಾಯಕ ಸೂಕ್ಷ್ಮಜೀವಿ ತಜ್ಞ, ಸಾರ್ವಜನಿಕ ಆರೋಗ್ಯ ಸಂಸ್ಥೆ, ಬೆಂಗಳೂರು-ಜಿಲ್ಲಾ ಮಲೇರಿಯಾ ಅಧಿಕಾರಿ, ಬೆಂಗಳೂರು ಗ್ರಾಮಾಂತರ
ಡಾ. ದಯಾನಂದ ಜಿ.ಆರ್.: ವೈದ್ಯಾಧಿಕಾರಿ, ರಾಜರಾಜೇಶ್ವರಿನಗರ, ಬಿಬಿಎಂಪಿ-ಜಿಲ್ಲಾ ಕುಷ್ಠರೋಗ ಅಧಿಕಾರಿ, ತುಮಕೂರು
ಡಾ. ಬಿ.ಎನ್. ಶಾಂತಲ: ಹಿರಿಯ ತಜ್ಞ ವೈದ್ಯರು, ಜಿಲ್ಲಾ ಆಸ್ಪತ್ರೆ, ರಾಮನಗರ -ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (DFWO), ತುಮಕೂರು
ಡಾ. ಮುರಳಿ ಮೋಹನ್: ಹಿರಿಯ ಮಕ್ಕಳ ತಜ್ಞರು, ಸಾರ್ವಜನಿಕ ಆಸ್ಪತ್ರೆ ಮಾಗಡಿ-ಜಿಲ್ಲಾ ಕ್ಷಯರೋಗ ಅಧಿಕಾರಿ (DTO), ಬೆಂಗಳೂರು ಗ್ರಾಮಾಂತರ
ಡಾ. ಮಲ್ಲಪ್ಪ .ಓ: RCHO, ಶಿವಮೊಗ್ಗ-ಜಿಲ್ಲಾ ಸರ್ವೇಕ್ಷಣಾಧಿಕಾರಿ (DSO), ಶಿವಮೊಗ್ಗ
ಡಾ. ಜಿ. ಪ್ರಸನ್ನ ಕುಮಾರ್: ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ (DTO), ಕೋಲಾರ-ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ, ಕೋಲಾರ
ಡಾ. ಪುಷ್ಪಲತ ವಿ.: ಇಎನ್‌ಟಿ ತಜ್ಞರು, ಜಿಲ್ಲಾ ಆಸ್ಪತ್ರೆ, ಕೋಲಾರ-ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ (DTO), ಕೋಲಾರ
ಡಾ. ಆಮೀನಾ ಅಸ್ಮ: ಪ್ರಾಥಮಿಕ ಆರೋಗ್ಯ ಕೇಂದ್ರ ರಾಮಗೊಂಡನಹಳ್ಳಿ, ತುಮಕೂರು-ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ (DTO), ತುಮಕೂರು
ಡಾ. ನೀಲಪ್ಪ ಬ. ಕಲ್ಕವಾಡ: ತಾಲೂಕು ಆರೋಗ್ಯಾಧಿಕಾರಿ, ಕಲಘಟಗಿ, ಧಾರವಾಡ-ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ, ಧಾರವಾಡ
ಡಾ. ವಿಜಯ್ ಗೋರೂರು ಎನ್.ಡಿ.: ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ (DTO), ಹಾಸನ-ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ (DMO), ಹಾಸನ
ಡಾ. ರಾಜೇಶ್ ಟಿ. ಎಸ್.: ಹಿರಿಯ ತಜ್ಞರು, ತಾಲೂಕು ಆಸ್ಪತ್ರೆ, ಮುಂಡರಗಿ, ಗದಗ-ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ (DFWO), ಗದಗ
ಡಾ. ರುದ್ರಗೌಡ ಪೊಲೀಸ್ ಪಾಟೀಲ್: ಮುಖ್ಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಲಿಂಗಸುಗೂರು-ಜಿಲ್ಲಾ ಫೈಲೇರಿಯಾ ವೈದ್ಯಾಧಿಕಾರಿ, ರಾಯಚೂರು
ಡಾ. ಅರವಿಂದ ಸಿ.ಎ.: ಆಡಳಿತ ವೈದ್ಯಾಧಿಕಾರಿ, ಉಪವಿಭಾಗೀಯ ಆಸ್ಪತ್ರೆ ಪಾಂಡವಪುರ-ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ (DMO), ಮಂಡ್ಯ
ಡಾ. ಅಮೃತ್: ಹಿರಿಯ ವೈದ್ಯಾಧಿಕಾರಿ, ಪ್ರಾ.ಆ.ಕೇಂದ್ರ ಚಂದ್ರಬಂಡಾ, ರಾಯಚೂರು-ಜಿಲ್ಲಾ ಕುಷ್ಠರೋಗ ಅಧಿಕಾರಿ, ರಾಯಚೂರು
ಡಾ. ಮಹಮ್ಮದ್ ಶಾಕಿರ್ ಮುಹಿಯುದ್ದೀನ್: ಯುಪಿಹೆಚ್‌ಸಿ ದೇವರ ಕಾಲೋನಿ, ರಾಯಚೂರು-RCHO, ರಾಯಚೂರು ಜಿಲ್ಲೆ
ಡಾ. ಚಂದ್ರಮೋಹನ್ ಡಿ.ಎಂ.: ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮಗೊಂಡನಹಳ್ಳಿ, ದಾವಣಗೆರೆ-ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ (DFWO), ದಾವಣಗೆರೆ
ಡಾ. ಜಾಫರ್ ಸಾದಿಕ್: ಹಿರಿಯ ನೇತ್ರ ತಜ್ಞರು, ಜಿಲ್ಲಾ ಆಸ್ಪತ್ರೆ (ಬ್ರಿಮ್ಸ್), ಬೀದರ್-RCHO, ಯಾದಗಿರಿ ಜಿಲ್ಲೆ
ಡಾ. ನಾಗರಾಜ್ ನಾಯಕ್ ಎಲ್.: DSO, ಶಿವಮೊಗ್ಗ-RCHO, ಶಿವಮೊಗ್ಗ ಜಿಲ್ಲೆ
ಡಾ. ಡಿ.ಬಿ. ಪಟ್ಟಣ ಶೆಟ್ಟಿ: ಪ್ರಾಥಮಿಕ ಆರೋಗ್ಯ ಕೇಂದ್ರ ಬೇವೂರು, ಬಾಗಲಕೋಟೆ-ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ (DTO), ಬಾಗಲಕೋಟೆ
ಡಾ. ಸುವರ್ಣಾ ಬಿ. ಕುಲಕರ್ಣಿ: ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ-ಬಾಗಲಕೋಟೆ RCHO, ಬಾಗಲಕೋಟೆ ಜಿಲ್ಲೆ
ಡಾ. ಮಂಜುನಾಥ ನಾಗಲೀಕರ: ಸಿಹೆಚ್‌ಸಿ ಹೊಳೆಲೂರು, ಶಿವಮೊಗ್ಗ-ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (DFWO), ಶಿವಮೊಗ್ಗ
ಡಾ. ಎಸ್.ಬಿ. ಕಳಸೂರ ಮಠ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ, ಧಾರವಾಡ-ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ (DTO), ಧಾರವಾಡ
ಡಾ. ಕೃಷ್ಣಾನಂದ ಶೆಟ್ಟಿ: ತುರ್ತು ಚಿಕಿತ್ಸಾ ವೈದ್ಯಾಧಿಕಾರಿ, ಜಿಲ್ಲಾ ಆಸ್ಪತ್ರೆ, ಉಡುಪಿ-ಜಿಲ್ಲಾ ಸರ್ವೇಕ್ಷಣಾಧಿಕಾರಿ (DSO), ಉಡುಪಿ
ಡಾ. ರಮೇಶ್ ರಂಗಣ್ಣವರ: ಸಿ.ಹೆಚ್.ಸಿ ಮುಗಳಖೋಡ, ರಾಯಬಾಗ, ಬೆಳಗಾವಿ-ಜಿಲ್ಲಾ ಸರ್ವೇಕ್ಷಣಾಧಿಕಾರಿ (DSO), ಉತ್ತರ ಕನ್ನಡ
ಡಾ. ಎಂ. ವೀರ ಕುಮಾರ್ ರೆಡ್ಡಿ: ಪ್ರಾ.ಆ.ಕೇಂದ್ರ ಮೇಲೂರು, ಕೆ.ಆರ್.ನಗರ, ಮೈಸೂರು-RCHO, ಬಳ್ಳಾರಿ ಜಿಲ್ಲೆ
ಡಾ. ಗಣೇಶ್ ಬಾಬು ಹೆಚ್.ಎಸ್.: ಪ್ರಾ.ಆ.ಕೇಂದ್ರ ಪಾವಗಡ, ತುಮಕೂರು ಜಿಲ್ಲೆ-ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (DFWO), ಚಿಕ್ಕಬಳ್ಳಾಪುರ
ಡಾ. ಅಮರದೀಪ ಪವಾರ: ಸಿ.ಹೆಚ್.ಸಿ ಗಾಣಗಾಪುರ, ಅಫಜಲಪುರ, ಕಲಬುರಗಿ-ಜಿಲ್ಲಾ ಸರ್ವೇಕ್ಷಣಾಧಿಕಾರಿ (DSO), ಕಲಬುರಗಿ

ನಿವಾಸಿ ವೈದ್ಯಾಧಿಕಾರಿಗಳು
ವೈದ್ಯಾಧಿಕಾರಿಯ ಹೆಸರು ಹಿಂದಿನ ಸ್ಥಳ / ಕರ್ತವ್ಯ (ಎಲ್ಲಿಂದ) ವರ್ಗಾಯಿಸಲಾದ ಹೊಸ ಹುದ್ದೆ ಮತ್ತು ಸ್ಥಳ (ಎಲ್ಲಿಗೆ)
ಡಾ. ವೆಂಕಟರೆಡ್ಡಿ ಬಿ.: ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ ಮಾಲೂರು, ಕೋಲಾರ-ಆರ್‌ಎಂಒ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು
ಡಾ. ಶಶಿಧರ್ ಎಸ್.: ಹಿರಿಯ ತಜ್ಞರು, ಕೆ.ಸಿ. ಜನರಲ್ ಆಸ್ಪತ್ರೆ, ಬೆಂಗಳೂರು-ಆರ್‌ಎಂಒ, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು
ಡಾ. ಅನಿಲ್: ಸ್ಥಳ ನಿರೀಕ್ಷೆಯಲ್ಲಿದ್ದವರು-ಆರ್‌ಎಂಒ, ಜಿಲ್ಲಾ ಆಸ್ಪತ್ರೆ ಬೆಂಗಳೂರು ದಕ್ಷಿಣ
ಡಾ. ಮಧುಸೂದನ್ ಇ.: ಆಕಸ್ಮಿಕ ವಿಭಾಗ ವೈದ್ಯಾಧಿಕಾರಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ-ಆರ್‌ಎಂಒ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು
ಡಾ. ಅಮೂಲ್ಯ ಕೆ. ಮೈವುಂಡಿ: ಜಿಲ್ಲಾ ಆಸ್ಪತ್ರೆ ಮಡಿಕೇರಿ, ಕೊಡಗು ಜಿಲ್ಲೆ-ಆರ್‌ಎಂಒ, ಜಿಡಿಸಿಆರ್‌ಐ (GDCRI), ಬೆಂಗಳೂರು
ಡಾ. ಸುಮಾ ಕೆ.ಎಸ್.: ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಮದ್ದೂರು, ಮಂಡ್ಯ-ಆರ್‌ಎಂಒ, ವಾಣಿ ವಿಲಾಸ ಆಸ್ಪತ್ರೆ, ಬೆಂಗಳೂರು

ತಾಲೂಕು ಆರೋಗ್ಯಾಧಿಕಾರಿಗಳು
ವೈದ್ಯಾಧಿಕಾರಿಯ ಹೆಸರು -ಎಲ್ಲಿಂದ ಎಲ್ಲಿಗೆ
ಡಾ. ಶರಣಬಸವರಾಜ್: ಪ್ರಾ.ಆ.ಕೇಂದ್ರ ಬ್ಯಾಗವಾಟ್, ಮಾನ್ವಿ, ರಾಯಚೂರು-ತಾಲೂಕು ಆರೋಗ್ಯಾಧಿಕಾರಿ , ಮಾನ್ವಿ, ರಾಯಚೂರು
ಡಾ. ವಿನಯ್ ಕುಮಾರ್ ಎಂಬಿ: ಶಸ್ತ್ರಚಿಕಿತ್ಸಕರು, ಸಾರ್ವಜನಿಕ ಆಸ್ಪತ್ರೆ, ಹಿರೇಕೆರೂರು-ತಾಲೂಕು ಆರೋಗ್ಯಾಧಿಕಾರಿ , ಆನೇಕಲ್
ಡಾ. ಸುಮಾ: ಇಎನ್‌ಟಿ ತಜ್ಞೆ, ಸಾರ್ವಜನಿಕ ಆಸ್ಪತ್ರೆ, ಟಿ.ನರಸೀಪುರ-ತಾಲೂಕು ಆರೋಗ್ಯಾಧಿಕಾರಿ , ಟಿ.ನರಸೀಪುರ, ಮೈಸೂರು
ಡಾ. ಮುತ್ತಾಹೀರ್ ಹಫೀಸ್: ಪ್ರಾ.ಆ.ಕೇಂದ್ರ ವಿಶ್ವನಾಥಪುರ, ದೇವನಹಳ್ಳಿ-ತಾಲೂಕು ಆರೋಗ್ಯಾಧಿಕಾರಿ , ದೇವನಹಳ್ಳಿ
ಡಾ. ದೀಪಕ್ ಕುಮಾರ್ ಆರ್.: ಪ್ರಾ.ಆ.ಕೇಂದ್ರ ಮಂಗಲಗಿ, ಚಿಂಚೋಳಿ, ಕಲಬುರಗಿ-ತಾಲೂಕು ಆರೋಗ್ಯಾಧಿಕಾರಿ , ಚಿಂಚೋಳಿ
ಡಾ. ಕಾಶಿ .ಎನ್.: ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ, ಚಿತ್ರದುರ್ಗ-ತಾಲೂಕು ಆರೋಗ್ಯಾಧಿಕಾರಿ , ಚಳ್ಳಕೆರೆ
ಡಾ. ಪ್ರಕಾಶ್: ಪ್ರಾ.ಆ.ಕೇಂದ್ರ ಕೋಮಲಾಪುರ, ಪಿರಿಯಾಪಟ್ಟಣ, ಮೈಸೂರು-ತಾಲೂಕು ಆರೋಗ್ಯಾಧಿಕಾರಿ , ಪಿರಿಯಾಪಟ್ಟಣ
ಡಾ. ವಿವೇಕಾನಂದ ಕೆ.ಎಸ್.: ಪ್ರಾ.ಆ.ಕೇಂದ್ರ ಚೌಡನಕುಪ್ಪೆ, ಕುಣಿಗಲ್, ತುಮಕೂರು-ತಾಲೂಕು ಆರೋಗ್ಯಾಧಿಕಾರಿ , ನೆಲಮಂಗಲ
ಡಾ. ದರ್ಶನ್ .ಈ: ಪ್ರಾ.ಆ.ಕೇಂದ್ರ ತಾಳ್ಯ, ಹೊಳಲ್ಕೆರೆ, ಚಿತ್ರದುರ್ಗ-ತಾಲೂಕು ಆರೋಗ್ಯಾಧಿಕಾರಿ , ಹೊಳಲ್ಕೆರೆ
ಡಾ. ಸ್ನೇಹ ಹೆಚ್.ಜಿ.: ಪ್ರಾ.ಆ.ಕೇಂದ್ರ ಕೆ.ಚನ್ನಾಪುರ, ಆಲೂರು, ಹಾಸನ-ತಾಲೂಕು ಆರೋಗ್ಯಾಧಿಕಾರಿ , ಆಲೂರು
ಡಾ. ಇರ್ಫಾನ್ ಅಂಜುಮ್: ಪ್ರಾ.ಆ.ಕೇಂದ್ರ ಬೆಟಗೇರಿ, ಕೊಪ್ಪಳ ಜಿಲ್ಲೆ-ತಾಲೂಕು ಆರೋಗ್ಯಾಧಿಕಾರಿ , ಹೊಸಪೇಟೆ
ಡಾ. ನಾಗನಾಥ ಡಬ್ಲ್ಯೂ : ಸಾರ್ವಜನಿಕ ಆಸ್ಪತ್ರೆ, ಮಾಗಡಿ, ರಾಮನಗರ-ತಾಲೂಕು ಆರೋಗ್ಯಾಧಿಕಾರಿ , ಮಾಗಡಿ
ಡಾ. ಮಹಾಂತಪ್ಪ ಎನ್. ಹಾಲಮಳ್ಳಿ: ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ ರಾಯಬಾಗ-ತಾಲೂಕು ಆರೋಗ್ಯಾಧಿಕಾರಿ , ಆಳಂದ, ಕಲಬುರಗಿ
ಡಾ. ರಾಜೇಂದ್ರ ಸ. ಮಿನದಾಳ: ಸಿ.ಹೆಚ್.ಸಿ ಕಬ್ಬೂರು, ಚಿಕ್ಕೋಡಿ, ಬೆಳಗಾವಿ-ತಾಲೂಕು ಆರೋಗ್ಯಾಧಿಕಾರಿ , ಚಿಕ್ಕೋಡಿ
ಡಾ. ಲಕ್ಷ್ಮೀಕಾಂತ್: ತಜ್ಞ ವೈದ್ಯರು, ಜಿಲ್ಲಾ ಆಸ್ಪತ್ರೆ, ಬಾಗಲಕೋಟೆ-ತಾಲೂಕು ಆರೋಗ್ಯಾಧಿಕಾರಿ , ರಾಯಚೂರು

ಸಿವಿಲ್ / ಒಪಿಡಿ ಶಸ್ತ್ರಚಿಕಿತ್ಸಕರು MLCD ಹಾಗೂ ಇತರೆ ಹುದ್ದೆಗಳು
ವೈದ್ಯಾಧಿಕಾರಿಯ ಹೆಸರು – ಎಲ್ಲಿಂದ ಎಲ್ಲಿಗೆ
ಡಾ. ಸೌಮ್ಯಶ್ರೀ ಹೆಚ್.ಕೆ. ಪ್ರಾ.ಆ.ಕೇಂದ್ರ ಚಲ್ಲಹಳ್ಳಿ, ಹುಣಸೂರು, ಮೈಸೂರು-ವೈದ್ಯಕೀಯ ಉಪನ್ಯಾಸಕ ಮತ್ತು ಪ್ರಾತ್ಯಕ್ಷಿಕ ಬೋಧಕ (MLCD), ಮೈಸೂರು
ಡಾ. ಪ್ರಭಾ ಆರ್. ಹಿರಿಯ ತಜ್ಞೆ, ಮಾತೃ ಶಿಶು ಆಸ್ಪತ್ರೆ ದೇವನಹಳ್ಳಿ-ಒಪಿಡಿ ಶಸ್ತ್ರಚಿಕಿತ್ಸಕಿ, ವಾಣಿ ವಿಲಾಸ ಆಸ್ಪತ್ರೆ, ಬೆಂಗಳೂರು
ಡಾ. ಹರೀಶ್ ಬಿ. ಹೆಚ್. ನೇತ್ರ ತಜ್ಞರು, ಸಾರ್ವಜನಿಕ ಆಸ್ಪತ್ರೆ ಹೊಸದುರ್ಗ-ಹೊರರೋಗಿ ಶಸ್ತ್ರಚಿಕಿತ್ಸಕರು, ಮಿಂಟೋ ಕಣ್ಣಿನ ಆಸ್ಪತ್ರೆ, ಬೆಂಗಳೂರು
ಡಾ. ರಘುನಾಥರಾವ ಮಾತಾಂಡರಾವ ಹಿರಿಯ ತಜ್ಞರು (ಪೆಥಾಲಜಿ), ಜಿಲ್ಲಾ ಆಸ್ಪತ್ರೆ ವಿಜಯಪುರ-ಒಪಿಡಿ ಸರ್ಜನ್, ಜಿಲ್ಲಾ ಆಸ್ಪತ್ರೆ, ಕಲಬುರಗಿ
ಡಾ. ಸುನೀತಾ ಕೆ.ಎಸ್. ಹಿರಿಯ ತಜ್ಞೆ, ತಾಲೂಕು ಆಸ್ಪತ್ರೆ ಟಿ.ನರಸೀಪುರ-ಸಿವಿಲ್ ಶಸ್ತ್ರಚಿಕಿತ್ಸಕರು, ಕೆ.ಆರ್. ಆಸ್ಪತ್ರೆ (MMC&RI), ಮೈಸೂರು
ಡಾ. ಸುಖೇಂದು ಜಿ.ಬಿ. ತುರ್ತು ಚಿಕಿತ್ಸಾ ವೈದ್ಯಾಧಿಕಾರಿ (CMO), ಜಯನಗರ ಆಸ್ಪತ್ರೆ-ಸಿವಿಲ್ ಸರ್ಜನ್, ಬೌರಿಂಗ್ ಆಸ್ಪತ್ರೆ (SABVMCRI), ಬೆಂಗಳೂರು
ಡಾ. ನಾಗಕನ್ಯೆ ಜಿ. ರಕ್ತನಿಧಿ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಹೊಳೆನರಸೀಪುರ – ಸಿವಿಲ್ ಸರ್ಜನ್-02, ಕೆ.ಆರ್. ಆಸ್ಪತ್ರೆ, ಮೈಸೂರು
ಡಾ. ಶಾಂತೇಶ್ ಪಾಟೀಲ್ ತರಬೇತಿ ಅಧಿಕಾರಿ, ಪಿಎಚ್‌ಐ, ಬೆಂಗಳೂರು-ಪಿಎಚ್‌ಐ (PHI), ಬೆಂಗಳೂರು ನಗರ ಜಿಲ್ಲೆ

ಬಿಬಿಎಂಪಿ / ನಗರಾಭಿವೃದ್ಧಿ ಇಲಾಖೆಗೆ ನಿಯೋಜನೆ
ವೈದ್ಯಾಧಿಕಾರಿಯ ಹೆಸರು ಎಲ್ಲಿಂದ ಎಲ್ಲಿಗೆ
ಡಾ. ರಮೇಶ್ ಹೆಚ್.: ಸ್ಥಳ ನಿರೀಕ್ಷೆಯಲ್ಲಿದ್ದವರು-ವೈದ್ಯಾಧಿಕಾರಿ (MOH), ಬಿಬಿಎಂಪಿ ವ್ಯಾಪ್ತಿ
ಡಾ. ರೇಷ್ಮಾ ಹೆಚ್. : ಪ್ರಾ.ಆ.ಕೇಂದ್ರ ಸೂಲಿಕೆರೆ, ಬೆಂಗಳೂರು ದಕ್ಷಿಣ-MOH, ಗೋವಿಂದರಾಜನಗರ ಕ್ಷೇತ್ರ, ಬಿಬಿಎಂಪಿ ಪಶ್ಚಿಮ
ಡಾ. ಶ್ರುತಿ ಎನ್.ಸಿ.: ಪ್ರಾ.ಆ.ಕೇಂದ್ರ ಲಕ್ಕೂರು, ಮಾಲೂರು, ಕೋಲಾರ-ಆರೋಗ್ಯಾಧಿಕಾರಿ, ಕೆ.ಆರ್.ಪುರಂ ವಲಯ, ಬಿಬಿಎಂಪಿ ಪೂರ್ವ
ಡಾ. ಚನ್ನಕೃಷ್ಣಪ್ಪ ಕೆ. ತಜ್ಞ ವೈದ್ಯರು, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (IDH), ಬೆಂ.-ಆರೋಗ್ಯಾಧಿಕಾರಿ, ಬ್ಯಾಟರಾಯನಪುರ ಕ್ಷೇತ್ರ, ಬಿಬಿಎಂಪಿ ಉತ್ತರ
ಡಾ. ಮದಕರಿ ನಾಯಕ್ ಹೆಚ್.ಬಿ.: ಸಾರ್ವಜನಿಕ ಆಸ್ಪತ್ರೆ, ಚಿಕ್ಕನಾಯಕನಹಳ್ಳಿ, ತುಮಕೂರು-ವೈದ್ಯಾಧಿಕಾರಿ (MOH), ಗ್ರೇಟರ್ ಬೆಂಗಳೂರು ಪ್ರಾಧಿಕಾರ

Ad Widget
Continue Reading

ರಾಜಕೀಯ

Election-ಕರ್ನಾಟಕ ವಿಧಾನಪರಿಷತ್ ಚುನಾವಣೆ : ಎಲ್ಲ ನಾಲ್ಕು ಸೀಟ್ NDA ಪಾಲು : ಆಡಳಿತರೂಡ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ – ಸಿದ್ದರಾಮಯ್ಯ ರಾಜೀನಾಮೆ ಬಳಿಕದ ಮೊದಲ ಚುನಾವಣೆ

Published

on



Ad Widget

Ad Widget

Ad Widget

Ad Widget

ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ 1 ಜೆಡಿಎಸ್‌, 3 ಬಿಜೆಪಿ ಗೆಲುವು ದಾಖಲಿಸಿದೆ. ಈ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಆಡಳಿತರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.

Ad Widget

Ad Widget

Ad Widget

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ 1 ಜೆಡಿಎಸ್‌, 3 ಬಿಜೆಪಿ ಗೆಲುವು ದಾಖಲಿಸಿದೆ. ಈ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಆಡಳಿತರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.

Ad Widget

Ad Widget alt="Ad Widget"/>

Ad Widget

ಅಕ್ಟೋಬರ್ 23 ರಂದು ನಡೆದಿದ್ದ ಮತದಾನದ ಬಳಿಕ, ಅಂತಿಮ ಫಲಿತಾಂಶಕ್ಕಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬ್ಯಾಲೆಟ್‌ ಪೇಪರ್‌ ಹಿನ್ನೆಲೆ ಅಕ್ಟೋಬರ್ 27 ಕ್ಕೆ ಆರಂಭವಾದ ಮತ ಎಣಿಕೆ ಕೆಲ ಕ್ಷೇತ್ರಗಳಲ್ಲಿ ಮಧ್ಯರಾತ್ರಿವರೆಗೂ, ಕೆಲವೆಡೆ ಮರು ದಿನದವರೆಗೂ ನಡೆಯಿತು. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಮೇಲ್ಮನೆ ಚುನಾವಣೆ ಯಶಸ್ಸು ಎನ್‌ಡಿಎ ಮೈತ್ರಿಕೂಟದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಹೊಸ ಹುರುಪು ಮೂಡಿಸಿದೆ.

Ad Widget

Ad Widget <> Ad Widget

ಜೆಡಿಎಸ್‌, ಬಿಜೆಪಿ ಅಭ್ಯರ್ಥಿ ಗೆಲುವು
ಬೆಂಗಳೂರು ಶಿಕ್ಷಕರ ಕ್ಷೇತ್ರ: ಜೆಡಿಎಸ್‌ ಬಿಜೆಪಿ ಮೈತ್ರಿ ಎನ್‌ಡಿಎ ಅಭ್ಯರ್ಥಿ ಎಪಿ ರಂಗನಾಥ್ ಅವರು 10,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪುಟ್ಟಣ್ಣನವರಿಂದ 9902 ಮತಪಡೆದಿದ್ದಾರೆ. 908 ಮತಗಳ ಅಂತರದಲ್ಲಿ ಎಪಿ ರಂಗನಾಥ್ ಚುನಾಯಿತರಾಗಿದ್ದಾರೆ.



Ad Widget

ಈಶಾನ್ಯ ಶಿಕ್ಷಕರ ಕ್ಷೇತ್ರ: ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರು 5ನೇ ಬಾರಿಗೆ ಪುನರಾಯ್ಕೆ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಪರಾಭವಗೊಂಡಿದ್ದಾರೆ.

Ad Widget

Ad Widget

ಪಶ್ಚಿಮ ಪದವೀಧರ ಕ್ಷೇತ್ರ: ಬಿಜೆಪಿಯ ಎಸ್‌ ವಿ ಸಂಕನೂರ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ ಸೋಲುಂಡಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರ: ಬಿಜೆಪಿಯ ಕೆಎಂ ಸುರೇಶ್ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಶಶಿ ಹುಲಿಕುಂಟೆಮಂಠ ಸೋಲುಂಡಿದ್ದಾರೆ.

ಕ್ಷೇತ್ರವಾರು ವಿವರ
ಕ್ರ.ಸಂ. ಕ್ಷೇತ್ರಗಳು ಕಾಂಗ್ರೆಸ್ ಅಭ್ಯರ್ಥಿ – ಮತಗಳು ಎನ್‌ಡಿಎ (ಬಿಜೆಪಿ / ಜೆಡಿಎಸ್) ಅಭ್ಯರ್ಥಿ- ಮತಗಳು
1 ಬೆಂಗಳೂರು ಶಿಕ್ಷಕರ ಕ್ಷೇತ್ರ ಪುಟ್ಟಣ್ಣ – ಸೋಲು (9,902 ಮತಗಳು) ಎಪಿ ರಂಗನಾಥ್ – ಗೆಲುವು
2 ಪಶ್ಚಿಮ ಪದವೀಧರರ ಕ್ಷೇತ್ರ ಮೋಹನ್ ಲಿಂಬಿಕಾಯಿ – ಸೋಲು (9323 ಮತಗಳು) ಎಸ್.ವಿ. ಸಂಕನೂರ – ಗೆಲುವು (33,711 ಮತಗಳು)
3 ಈಶಾನ್ಯ ಶಿಕ್ಷಕರ ಕ್ಷೇತ್ರ ಶರಣಪ್ಪ ಮತ್ತೂರ್ – ಸೋಲು (12,299 ಮತಗಳು) ಶಶೀಲ್ ಜಿ. ನಮೋಶಿ – ಗೆಲುವು (15,596 ಮತಗಳು)
4 ಆಗ್ನೇಯ ಪದವೀಧರರ ಕ್ಷೇತ್ರ ಶಶಿ ಹುಲಿಕುಂಟೆಮಠ – ಸೋಲು (42,922) ಕೆ.ಎಂ. ಸುರೇಶ್ -ಗೆಲುವು (66,020 ಮತಗಳು)

ಈಶಾನ್ಯ ಪದವೀಧರ ಕ್ಷೇತ್ರ ಅಭ್ಯರ್ಥಿವಾರು ಪಡೆದ ಮತಗಳ ವಿವರ
ಕ್ರಮ ಸಂಖ್ಯೆ ಅಭ್ಯರ್ಥಿಯ ಹೆಸರು ಪಡೆದ ಒಟ್ಟು ಮೊದಲ ಪ್ರಾಶಸ್ತ್ಯದ ಮತಗಳು
1 ಕೆಎಂ ಸುರೇಶ (ಬಿಜೆಪಿ) 66,020
2 ಶಶಿ ಹುಲಿಕುಂಟೆಮಠ (ಕಾಂಗ್ರೆಸ್‌) 42,922
3 ಅಡ್ವೊಕೇಟ್ ಬರೀದ್ 1,107
4 ಶಶಿ ಹುಲಿಕಟ್ಟಿ 449
5 ಲಕ್ಷ್ಮಯ್ಯ ಆರ್. (ಆರ್.ಎಲ್) 387
6 ಚಿಕ್ಕರಾಜು ಎಸ್. ಯಾದವ್ 377
7 ಲಕ್ಷ್ಮೀಕಾಂತ ಎಸ್. ಯಾದವ್ 369
8 ಜಿ.ಸಿ. ಪಟೇಲ್ 162
9 ಕಪನಿಗೌಡ 156
10 ಸೈಯದ್ ಅಫಾಕ್ ಅಹಮದ್ 113
ತಿರಸ್ಕೃತಗೊಂಡ ಮತಗಳು 20,076

ಈಶಾನ್ಯದಲ್ಲಿ ಶಶೀಲ್ ನಮೋಶಿ ಸತತ 5ನೇ ಗೆಲುವು
ರಾಜಕೀಯವಾಗಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಎನ್ ಡಿಎ ಮೈತ್ರಿಕೂಟದ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರು 5ನೇ ಬಾರಿಗೆ ಪುನರಾಯ್ಕೆ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ನಮೋಶಿ ಅವರು 3,297 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.

ಶಶೀಲ್ ನಮೋಶಿ: 15,596(ಬಿಜೆಪಿ)
ಶರಣಪ್ಪ ಮಟ್ಟೂರ್ : 12,299(ಕಾಂಗ್ರೆಸ್ )
ಗೆಲುವಿಗೆ ಬೇಕಾಗಿದ್ದ ಮತ: 14,191
ಗೆಲುವಿನ ಅಂತರ: 3,297
ಅಸಿಂಧು ಮತ: 1,873

ಪಶ್ಚಿಮ ಪದವೀಧರ ಕ್ಷೇತ್ರದ ಮತದಾನ ಎಣಿಕೆ ವಿವರ
ಕ್ರ. ಸಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1 ಎಸ್.ವಿ. ಸಂಕನೂರ ಬಿಜೆಪಿ 33,711 – ಗೆಲುವು
2 ಮೋಹನ ಲಿಂಬಿಕಾಯಿ ಕಾಂಗ್ರೆಸ್ 24,388
3 ಕಾಂತಕುಮಾರ ಆರ್ ಪಕ್ಷೇತರ 4,055
4 ಡಾ. ಜಿ.ಎಚ್. ಇಮ್ರಾಪುರ ಪಕ್ಷೇತರ 338
5 ಉಮೇಶ ಕೃಷ್ಣಪ್ಪ ದೈವಜ್ಞ್ ಪಕ್ಷೇತರ 228
6 ನಿಶಾಂತ ಶಂಕರ ಬಂಕಾಪುರ ಪಕ್ಷೇತರ 143
7 ಕೃಷ್ಣಾ ಎಚ್. ಬಳೆಗಾರ ಕೆ.ಆರ್. ಎಸ್ 141
8 ಅಬ್ದುಲ್ ಮನ್ನಾನ ಪಕ್ಷೇತರ 120
9 ಸಂತೋಷ ಮನೋಹರ ವೆರ್ಣಿಕರ ಪಕ್ಷೇತರ 85
10 ಜೀಶಾನ್ ಅಹ್ಮದಖಾನ್ ಪಟ್ಹಾನ್ ಪಕ್ಷೇತರ 62
11 ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಪಕ್ಷೇತರ 55
12 ತಳವಾರ ಶಿವಕುಮಾರ ಪಕ್ಷೇತರ 42
13 ಜಿಶಾನ್ ಡಿ. ಶಿರಸಂಗಿ ಪಕ್ಷೇತರ 39
14 ಬಸವರಾಜ ಶಂಕರಪ್ಪ ಕೊಟಗಿ ಪಕ್ಷೇತರ 39
10,245 ಮತಗಳು ತಿರಸ್ಕೃತಗೊಂಡಿದೆ. ಒಟ್ಟು ಮತಗಳು 63,446

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣಾ ಫಲಿತಾಂಶದ ವಿವರ
ಕ್ರ. ಸಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1 ಎ.ಪಿ. ರಂಗನಾಥ್ ಬಿಜೆಪಿ+ಜೆಡಿಎಸ್‌ 10,810
2 ಪುಟ್ಟಣ್ಣ ಕಾಂಗ್ರೆಸ್ 9,902
3 ಉಮೇಶ್ ಬಾಬು ಪಿಳ್ಳೆಗೌಡ ಪಕ್ಷೇತರ 215
4 ಡಾ. ಜಿ.ಆರ್. ಹೆಬ್ಬೂರು ಕರ್ನಾಟಕ ರಾಷ್ಟ್ರ ಸಮಿತಿ 94
5 ಡಾ. ಎನ್. ಲಕ್ಷ್ಮಣ ಸ್ವಾಮಿ ಪಕ್ಷೇತರ 24
6 ಬಿ. ಎಸ್. ನಾಗರಾಜು ಪಕ್ಷೇತರ 11

ಸತ್ಯಮೇವ ಜಯತೆ ಎಂದ ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎಪಿ ರಂಗನಾಥ್ ಭರ್ಜರಿ ಗೆಲುವು ಸಾಧಿಸಿದ್ದು, ಆ ಗೆಲುವನ್ನು ಸತ್ಯಮೇವ ಜಯತೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಬಣ್ಣಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸುಳ್ಳು, ದುರಾಡಳಿತ, ಹಣಬಲ, ತೋಳ್ಬಲಗಳು ಸೋತಿವೆ. ಈ ಚುನಾವಣೆ ಹೊಸ ಭರವಸೆಯ ಸೂರ್ಯೋದಯಕ್ಕೆ ನಾಂದಿ ಹಾಡಿದೆ ಎಂದಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಭರ್ಜರಿ ಜಯಭೇರಿ ಸಾಧಿಸಿದ್ದು, ನಮ್ಮ ಒಮ್ಮತದ ಅಭ್ಯರ್ಥಿ ಶ್ರೀ ಎ.ಪಿ.ರಂಗನಾಥ್ ಅವರಿಗೆ ಅಭಿನಂದನೆಗಳು. ಹಾಗೆಯೇ, ಉಳಿದ ಮೂರು ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಸಂತೋಷದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರು ಹಾಗೂ ಆಮಿಷ, ಅಧಿಕಾರದ ದರ್ಪವನ್ನು ದಿಕ್ಕರಿಸಿ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಗುರುವೇ ದಾರಿ ಎನ್ನುವಂತೆ ಮುಂದಿನ ಬದಲಾವಣೆಗೆ ಭಾಷ್ಯ ಬರೆದಿದ್ದಾರೆ ಎಂದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೆಲವು ಐತಿಹಾಸಿಕ. 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ. ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ, ಮುಂದಿನ ದೀಪಾವಳಿಗೆ ಕನ್ನಡ ನಾಡಿನಲ್ಲಿ ಮೈತ್ರಿಯ ಮುಂಬೆಳಕು ಮೂಡುವುದು ಖಚಿತ ಎಂದಿರುವ ಅವರು; ನಮ್ಮ ಮೈತ್ರಿಯ ಪ್ರೇರಕಶಕ್ತಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೂ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

ಎಪಿ ರಂಗನಾಥಗೆ ನಿಖಿಲ್ ಕುಮಾರಸ್ವಾಮಿ ಶುಭಾಶಯ
“ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಐತಿಹಾಸಿಕ ಗೆಲುವಿಗಾಗಿ ಅಹೋರಾತ್ರಿ ಶ್ರಮಿಸಿದ ಮೈತ್ರಿಕೂಟದ ಎರಡೂ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಮುಖ್ಯವಾಗಿ ಎನ್.ಡಿ.ಎ ಮೈತ್ರಿಕೂಟದ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಗೌರವಾನ್ವಿತ ಶಿಕ್ಷಕರ ಸಮುದಾಯಕ್ಕೆ ನನ್ನ ಧನ್ಯವಾದಗಳು ” ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ನಿರ್ಗಮನದ ದಿನಗಳು ಆರಂಭ
“ವಿಶೇಷವಾಗಿ, ಎರಡೂ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾವು ಎರಡೂ ಪಕ್ಷಗಳು ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಈ ಅದ್ಭುತ ಫಲಿತಾಂಶ ಲಭಿಸಿದೆ. ಕಾರ್ಯಕರ್ತರ ಈ ಅಪಾರ ಶ್ರಮ ಮತ್ತು ಒಗ್ಗಟ್ಟೇ ನಮ್ಮ ಗೆಲುವಿನ ನೈಜ ಶಕ್ತಿ. ಜನವಿರೋಧಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಈ ಚುನಾವಣೆ ಸ್ಪಷ್ಟ ಮುನ್ನುಡಿ ಬರೆದಿದ್ದು, ಅಧಿಕಾರದಿಂದ ಕಾಂಗ್ರೆಸ್ ನಿರ್ಗಮನದ ದಿನಗಳು ಈಗಿನಿಂದಲೇ ಆರಂಭವಾಗಿವೆ” ಎಂದಿದ್ದಾರೆ ನಿಖಿಲ್.

ಹಿಂದೆಯೂ ಬಿಜೆಪಿ ಮೇಲುಗೈ ಸಾಧಿಸಿತ್ತು
ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು (ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕ, ಆಗ್ನೇಯ ಪದವೀಧರ) ಈ ಹಿಂದೆ ಬಿಜೆಪಿಯ ವಶದಲ್ಲಿದ್ದವು. ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಬಳಿ ಇತ್ತು. ಈ ಚುನಾವಣೆಯು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಜನಪ್ರಿಯತೆ ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಹೊಂದಾಣಿಕೆಗೆ ಒಂದು ಪ್ರಮುಖ ಪರೀಕ್ಷೆಯಾಗಿತ್ತು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!