ವಾಸ್ತು
Nails-ಈ ದಿನಗಳಲ್ಲಿ ಉಗುರು ತೆಗೆದರೆ ಲಕ್ಷ್ಮಿ ಪರ್ಸ್‌ನಿಂದ ಎಸ್ಕೇಪ್; ಯಾವ ದಿನಗಳಲ್ಲಿ ಉಗುರು ಕತ್ತರಿಸುವುದು ಸೂಕ್ತವಲ್ಲ?
ರಾತ್ರಿ ವೇಳೆ ಅಥವಾ ಸೂರ್ಯಾಸ್ತದ ನಂತರ ಉಗುರು ಕತ್ತರಿಸುವುದರಿಂದ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗಬಹುದು ಮತ್ತು ಲಕ್ಷ್ಮಿ ದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದರಿಂದ ಜೀವನದಲ್ಲಿ ಅನಗತ್ಯ ಅಡೆತಡೆಗಳು ಉಂಟಾಗಬಹುದು.
“ನಮ್ಮ ಜೀವನಶೈಲಿಯಲ್ಲಿ ಸಣ್ಣಪುಟ್ಟ ವಿಷಯಗಳೂ ನಮ್ಮ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರಬಹುದು ಎಂದು ಪ್ರಾಚೀನ ಭಾರತೀಯ ಜ್ಞಾನ ಪರಂಪರೆ ಹೇಳುತ್ತದೆ. ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರಗಳು, ದಿನದ ನಿರ್ದಿಷ್ಟ ಸಮಯಗಳು ಮತ್ತು ವಾರಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸುತ್ತವೆ. ಉಗುರು ಕತ್ತರಿಸುವಂತಹ ಸಾಮಾನ್ಯ ಕ್ರಿಯೆಗೂ ಕೆಲವು ಮಾರ್ಗದರ್ಶನಗಳಿವೆ.
ರಾತ್ರಿ ವೇಳೆ ಅಥವಾ ಸೂರ್ಯಾಸ್ತದ ನಂತರ ಉಗುರು ಕತ್ತರಿಸುವುದರಿಂದ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗಬಹುದು ಮತ್ತು ಲಕ್ಷ್ಮಿ ದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದರಿಂದ ಜೀವನದಲ್ಲಿ ಅನಗತ್ಯ ಅಡೆತಡೆಗಳು ಉಂಟಾಗಬಹುದು. ಯಾವ ದಿನಗಳಲ್ಲಿ ಉಗುರು ಕತ್ತರಿಸುವುದನ್ನು ತಪ್ಪಿಸಬೇಕು ಮತ್ತು ಯಾವ ದಿನಗಳು ಶುಭಕರ ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಈ ದಿನಗಳಲ್ಲಿ ಉಗುರು ಕತ್ತರಿಸದಿರುವುದು ಉತ್ತಮ:
ಮಂಗಳವಾರ: ಈ ದಿನ ಉಗುರು ಕತ್ತರಿಸುವುದರಿಂದ ಆರ್ಥಿಕ ಒತ್ತಡಗಳು ಹೆಚ್ಚಾಗಬಹುದು ಮತ್ತು ಸಾಲದ ಸಮಸ್ಯೆಗಳು ತಲೆದೋರಬಹುದು ಎಂಬ ನಂಬಿಕೆಯಿದೆ. ಹನುಮಂತನ ಆರಾಧಕರು ಈ ದಿನ ವಿಶೇಷ ಎಚ್ಚರಿಕೆ ವಹಿಸುವುದು ಸೂಕ್ತ.
ಗುರುವಾರ: ವೈವಾಹಿಕ ಜೀವನದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಗುರುವಾರದಂದು ಉಗುರು ಕತ್ತರಿಸುವುದನ್ನು ತಪ್ಪಿಸುವುದು ಒಳ್ಳೆಯದು. ಇದು ಸಂಗಾತಿಗಳ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ.
ಶನಿವಾರ: ಶನಿಗ್ರಹದ ಪ್ರಭಾವವಿರುವ ಈ ದಿನ, ವಿಶೇಷವಾಗಿ ಜಾತಕದಲ್ಲಿ ಶನಿ ದೋಷವಿದ್ದವರು ಉಗುರು ಕತ್ತರಿಸಿದರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆರ್ಥಿಕ ನಷ್ಟದ ಸಾಧ್ಯತೆಯನ್ನೂ ಇದು ಸೂಚಿಸುತ್ತದೆ.
ಭಾನುವಾರ: ಈ ದಿನ ಉಗುರು ಕತ್ತರಿಸುವುದು ವ್ಯಕ್ತಿಯ ಪ್ರಗತಿಗೆ ಅಡ್ಡಿಯುಂಟುಮಾಡಬಹುದು ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಇದು ಯಶಸ್ಸಿಗೆ ಮಾರಕವಾಗುವುದಲ್ಲದೆ, ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡಬಹುದು ಎಂಬ ನಂಬಿಕೆಯಿದೆ.
ವಾಸ್ತು
Lighting lamps-ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ವಾಸ್ತು ನಿಯಮಗಳು
“ಸನಾತನ ಸಂಪ್ರದಾಯಗಳಲ್ಲಿ ದೀಪಾರಾಧನೆಗೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ, ಸಂಧ್ಯಾಕಾಲದಲ್ಲಿ ಗೃಹದ ಮುಖ್ಯ ದ್ವಾರದಲ್ಲಿ ದೀಪವನ್ನು ಪ್ರಜ್ವಲಗೊಳಿಸುವುದು ವಾಸ್ತುಶಾಸ್ತ್ರೀಯ ದೃಷ್ಟಿಯಿಂದ ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದು ಗೃಹದಲ್ಲಿ ಧನಾತ್ಮಕ ಶಕ್ತಿಯ ಸಂಚಲನವನ್ನು ಹೆಚ್ಚಿಸಿ, ಐಶ್ವರ್ಯದೇವತೆಯಾದ ಲಕ್ಷ್ಮೀಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಸಹಕಾರಿ ಎಂಬುದು ಪ್ರಾಜ್ಞರ ಅಭಿಮತ. ಆದಾಗ್ಯೂ, ಈ ಪವಿತ್ರ ಆಚರಣೆಯ ಸಂಪೂರ್ಣ ಫಲವನ್ನು ಪಡೆಯಲು ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
“ಸನಾತನ ಸಂಪ್ರದಾಯಗಳಲ್ಲಿ ದೀಪಾರಾಧನೆಗೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ, ಸಂಧ್ಯಾಕಾಲದಲ್ಲಿ ಗೃಹದ ಮುಖ್ಯ ದ್ವಾರದಲ್ಲಿ ದೀಪವನ್ನು ಪ್ರಜ್ವಲಗೊಳಿಸುವುದು ವಾಸ್ತುಶಾಸ್ತ್ರೀಯ ದೃಷ್ಟಿಯಿಂದ ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದು ಗೃಹದಲ್ಲಿ ಧನಾತ್ಮಕ ಶಕ್ತಿಯ ಸಂಚಲನವನ್ನು ಹೆಚ್ಚಿಸಿ, ಐಶ್ವರ್ಯದೇವತೆಯಾದ ಲಕ್ಷ್ಮೀಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಸಹಕಾರಿ ಎಂಬುದು ಪ್ರಾಜ್ಞರ ಅಭಿಮತ. ಆದಾಗ್ಯೂ, ಈ ಪವಿತ್ರ ಆಚರಣೆಯ ಸಂಪೂರ್ಣ ಫಲವನ್ನು ಪಡೆಯಲು ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
ಕಾಲ ನಿರ್ಣಯ:
ವಾಸ್ತುಶಾಸ್ತ್ರದ ಅನುಸಾರ, ಸಂಧ್ಯಾಕಾಲದ ‘ಪ್ರದೋಷ’ ಸಮಯದಲ್ಲಿ ದೀಪಾರಾಧನೆ ಮಾಡುವುದು ಶ್ರೇಷ್ಠ. ಸೂರ್ಯಾಸ್ತದ ನಂತರ ಸುಮಾರು ಅರ್ಧ ತಾಸಿನ ಅವಧಿಯನ್ನು ಪ್ರದೋಷ ಕಾಲವೆಂದು ಗುರುತಿಸಲಾಗಿದ್ದು, ಈ ಸಮಯದಲ್ಲಿ ದೀಪ ಪ್ರಜ್ವಲನವು ಅತ್ಯಂತ ಮಂಗಳಕರ.
ದಿಕ್ಕುಗಳ ಮಹತ್ವ:
ಗೃಹದ ಮುಖ್ಯದ್ವಾರದಲ್ಲಿ ದೀಪವನ್ನು ಇರಿಸುವಾಗ ದಿಕ್ಕಿನ ಆಯ್ಕೆ ಪ್ರಮುಖವಾಗುತ್ತದೆ. ಉತ್ತರ ಅಥವಾ ಪೂರ್ವ ದಿಕ್ಕಿಗೆ ದೀಪದ ಮುಖವಿರುವಂತೆ ಸ್ಥಾಪಿಸಬೇಕು. ವಿಶೇಷವಾಗಿ, ಲಕ್ಷ್ಮೀ ಆರಾಧನೆಗೆ ಉತ್ತರ ದಿಕ್ಕು ಸರ್ವೋತ್ಕೃಷ್ಟವೆಂದು ಪರಿಗಣಿಸಲಾಗಿದೆ. ಪಿತೃಗಳಿಗೆ ದೀಪವನ್ನು ಸಮರ್ಪಿಸುವ ಸಂದರ್ಭದಲ್ಲಿ ದಕ್ಷಿಣ ದಿಕ್ಕನ್ನು ಆಯ್ದುಕೊಳ್ಳುವುದು ಸೂಕ್ತ. ಈ ನಿಯಮಗಳ ಪಾಲನೆಯಿಂದ ಆಯಾ ದೇವತೆಗಳ ಅನುಗ್ರಹ ಅಧಿಕವಾಗುವುದೆಂಬ ನಂಬಿಕೆಯಿದೆ.
ದ್ವಾರ ಬಂಧನದ ವಿಧಿ:
ದೀಪವನ್ನು ಬೆಳಗಿದ ತಕ್ಷಣವೇ ಗೃಹದ ಮುಖ್ಯದ್ವಾರವನ್ನು ಮುಚ್ಚುವುದು ವಾಸ್ತು ಸಮ್ಮತವಲ್ಲ. ದೀಪದ ಪ್ರಭೆಯು ಕೆಲಕಾಲ ಗೃಹದೊಳಗೆ ಪ್ರಸರಿಸಲು ಅವಕಾಶ ನೀಡಬೇಕು. ತದನಂತರ ದ್ವಾರವನ್ನು ಬಂಧಿಸುವುದು ಶ್ರೇಯಸ್ಕರ. ಇದರಿಂದ ಬಾಹ್ಯ ಪರಿಸರದಲ್ಲಿರುವ ಶುಭ ಶಕ್ತಿಗಳು ಗೃಹವನ್ನು ಪ್ರವೇಶಿಸಿ, ಅಲ್ಲಿ ನೆಲೆನಿಲ್ಲುತ್ತವೆ ಎಂಬುದು ಹಿರಿಯರ ನಂಬಿಕೆ. ತತ್‌ಕ್ಷಣದ ದ್ವಾರಬಂಧನವು ಶುಭಫಲಗಳ ನ್ಯೂನತೆಗೆ ಕಾರಣವಾಗಬಹುದು.
ದೀಪದ ಶುದ್ಧತೆ:
ದೀಪವು ಮೃತ್ತಿಕೆ, ಹಿತ್ತಾಳೆ ಅಥವಾ ತಾಮ್ರ, ಯಾವುದೇ ವಸ್ತುವಿನಿಂದ ಮಾಡಲ್ಪಟ್ಟಿರಲಿ, ಅದನ್ನು ಪ್ರತಿನಿತ್ಯ ಶುಚಿಗೊಳಿಸುವುದು ಅತ್ಯಾವಶ್ಯಕ. ದೀಪವು ಕಪ್ಪು ಬಣ್ಣಕ್ಕೆ ತಿರುಗುವುದು ಅಶುಭದ ಸೂಚಕವೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ, ದೀಪವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಅಥವಾ ನೂತನ ದೀಪವನ್ನು ಉಪಯೋಗಿಸಬೇಕು. ಶುದ್ಧವಾದ ದೀಪದಿಂದ ಹೊಮ್ಮುವ ಪ್ರಕಾಶಮಾನವಾದ ಬೆಳಕು ಗೃಹದಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ.”
ವಾಸ್ತು
Clock-ಗಡಿಯಾರವನ್ನು ವಾಸ್ತು ಪ್ರಕಾರ ಇಟ್ಟು ನೋಡಿ – ನಿಮ್ಮ ಬದುಕಿನ ʼಟೈಮ್ʼ ಬದಲಾಗುತ್ತದೆ
ಸಮಯ ಎಂಬುದು ಎಲ್ಲರ ಜೀವನದಲ್ಲೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಮ್ಮೆ ಕಳೆದುಹೋದ ಆ ಅಮೂಲ್ಯ ಸಮಯವನ್ನು ಮತ್ತೆ ವಾಪಸ್ ಪಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ನಮಗೆ ದೊರೆಯುವ ಪ್ರತಿ ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ಹಿರಿಯರು. ಸಮಯ ಎಂದರೆ ನಮಗೆ ನೆನಪಾಗುವುದು ಗಡಿಯಾರ. ಅದು ಇಲ್ಲದಿದ್ದರೆ ನಮ್ಮ ದಿನ ನಿತ್ಯದ ಕೆಲಸಗಳು ಆಗುವುದೇ ಇಲ್ಲ.
ಬೆಳಗ್ಗೆ ಬೇಗ ಏಳಲು ಗಡಿಯಾರದಲ್ಲಿ ಅಲಾರಂ ಫಿಕ್ಸ್ ಮಾಡಿಕೊಳ್ಳಬೇಕು. ದಿನ ನಿತ್ಯದ ಕೆಲಸಗಳನ್ನು ಶುರು ಮಾಡಲು ಸಮಯ ನೋಡಬೇಕು, ಕಚೇರಿ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಲು ಗಡಿಯಾರ ನೋಡಬೇಕು. ಮಕ್ಕಳನ್ನು ಶಾಲೆಗೆ ಕಳಿಸಲು, ತಿಂಡಿ, ಊಟ ಮಾಡಲು ಎಲ್ಲದಕ್ಕೂ ಗಡಿಯಾರದಲ್ಲಿ ಸಮಯವನ್ನು ನೋಡಲೇಬೇಕು. ಗಡಿಯಾರಕ್ಕೆ ವಾಸ್ತುಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಗೋಡೆ ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದರ ಬಗ್ಗೆ ಕೂಡಾ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ.
ಗಡಿಯಾರಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳು
ಅಯ್ಯೋ ಗಡಿಯಾರಕ್ಕೂ ದಿಕ್ಕು ಇದೆಯೇ? ಸಮಯ ನೋಡಲು ತಾನೇ ಎಲ್ಲಿ ಬೇಕಾದರೂ ಇಡಬಹುದು ಎಂದುಕೊಂಡರೆ ಅದು ತಪ್ಪು. ಇದರ ಬಗ್ಗೆ ಅನೇಕ ಜನರಿಗೆ ಗೊಂದಲವಿದೆ. ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾರ್ಪೊರೇಟ್ ವಲಯದಲ್ಲಿ ಕೈ ಗಡಿಯಾರಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ವಾಸ್ತು ಶಾಸ್ತ್ರದಲ್ಲಿ ಗಡಿಯಾರಕ್ಕೆ ಸಂಬಂಧಿಸಿದ ಕೆಲವೊಂದು ಪ್ರಮುಖ ವಿಚಾರಗಳಿವೆ.
ಮನೆಯಲ್ಲಿ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಏಕೆಂದರೆ ಗಡಿಯಾರದ ದಿಕ್ಕು ನಮ್ಮ ಕೆಲಸದ ದಿಕ್ಕು ಮತ್ತು ಅದರ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ವಾಸ್ತು ಪ್ರಕಾರ, ಗಡಿಯಾರವನ್ನು ಮನೆ-ಕಚೇರಿಯ ಪೂರ್ವ, ಪಶ್ಚಿಮ ಅಥವಾ ಉತ್ತರದ ಗೋಡೆಯ ಮೇಲೆ ಇಡಬೇಕು. ಈ ದಿಕ್ಕುಗಳಲ್ಲಿ ಇರಿಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೊರ ಸೂಸುತ್ತದೆ. ಇದಲ್ಲದೆ, ಈ ದಿಕ್ಕುಗಳಲ್ಲಿ ಗಡಿಯಾರವನ್ನು ಇಟ್ಟರೆ ನಾವು ಆರಂಭಿಸುವ ಎಲ್ಲಾ ಕೆಲಸಗಳೂ ಸುಗಮವಾಗಿ ನೆರವೇರುತ್ತವೆ. ಆದ್ದರಿಂದ ಗಡಿಯಾರವನ್ನು ಇಡುವಾಗ ಈ ಮೂರೂ ದಿಕ್ಕುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬಾರದು?
ಮನೆಯಲ್ಲಿ ಮಾತ್ರವಲ್ಲ ನೀವು ಕಚೇರಿಯಲ್ಲಿ ಕೂಡಾ ಗಡಿಯಾರವನ್ನು ಕಚೇರಿಯಲ್ಲಿ ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇರಿಸುವುದು ನಿಮಗೆ ನಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಆದ್ದರಿಂದ, ಸರಿಯಾದ ದಿಕ್ಕನ್ನು ಆರಿಸುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನೆ ಅಥವಾ ಕಚೇರಿಯ ದಕ್ಷಿಣ ಗೋಡೆಯ ಮೇಲೆ ಗಡಿಯಾರವನ್ನು ಇಡಬಾರದು. ಏಕೆಂದರೆ ದಕ್ಷಿಣ ದಿಕ್ಕನ್ನು ಯಮ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆ ದಿಕ್ಕನ್ನು ಸಾವಿನ ದೇವರು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇರಿಸುವುದರಿಂದ, ವ್ಯವಹಾರದಲ್ಲಿ ಅಡೆತಡೆಗಳು ಎದುರಾಗುತ್ತವೆ. ಇದಲ್ಲದೆ, ಇದು ಮನೆಯಲ್ಲಿರುವ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯ ದಕ್ಷಿಣ ದಿಕ್ಕನ್ನು ಹೊರತು ಪಡಿಸಿ ಮನೆಯ ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ಇಡಬಾರದು.
ನಿಂತ ಗಡಿಯಾರವನ್ನು ಮನೆಯಲ್ಲಿ ಇಡಬಾರದು
ನಿಂತ ಗಡಿಯಾರವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು. ನಿಂತ ಗಡಿಯಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯವರಿಗೆ ತೊಂದರೆ ಉಂಟಾಗುತ್ತವೆ. ಅಷ್ಟೇ ಅಲ್ಲ ಕೆಲವರು ಸಮಯವನ್ನು 10 ನಿಮಿಷ ಮುಂದೆ, ಅಥವಾ ಹಿಂದೆ ಹಾಕುತ್ತಾರೆ. ಆದರೆ ಈ ರೀತಿ ಮಾಡುವುದು ಕೂಡಾ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಗಡಿಯಾರವನ್ನು ಫಿಕ್ಸ್ ಮಾಡಿ.
ಕೈ ಗಡಿಯಾರವನ್ನು ದಿಂಬಿನ ಕೆಳಗೆ ಇಡಬೇಡಿ
ನಮ್ಮಲ್ಲಿ ಹೆಚ್ಚಿನವರು ಮಲಗುವ ಮುನ್ನ ಗಡಿಯಾರವನ್ನು ತೆಗೆದು ತಲೆ ದಿಂಬಿನ ಕೆಳಗೆ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ವಾಸ್ತು ಪ್ರಕಾರ ದಿಂಬಿನ ಕೆಳಗೆ ವಾಚ್ ಇಟ್ಟು ಮಲಗಬಾರದು. ದಿಂಬಿನ ಕೆಳಗೆ ಗಡಿಯಾರ ಇಟ್ಟುಕೊಂಡು ಮಲಗಿದರೆ ಅದರ ಸದ್ದು ನಮ್ಮ ನಿದ್ರೆಗೆ ಭಂಗ ತರುವುದಲ್ಲದೆ ಅದರಿಂದ ಹೊರ ಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು ನಮ್ಮ ಮೆದುಳು ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಅಲೆಗಳ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಕೋಣೆಯ ಉದ್ದಕ್ಕೂ ಪರಿಚಲನೆಗೊಳ್ಳುತ್ತದೆ. ಇದು ನಿಮ್ಮ ಮನಸ್ಸಿಗೆ, ನಿಮ್ಮ ಕೆಲಸಗಳಿಗೆ ಅಡೆ ತಡೆ ಉಂಟು ಮಾಡುತ್ತದೆ.
ದಿನ ಭವಿಷ್ಯ
Ugadi Rashi Phala 2024: ಕ್ರೋಧಿ ಸಂವತ್ಸರದಲ್ಲಿ ದ್ವಾದಶ ರಾಶಿಗಳ ರಾಶಿ ಫಲ – ಯಾರಿಗೆ ಶುಭ ? ಯಾರಿಗೆ ಅಶುಭ ? ಸೂಕ್ತ ಪರಿಹಾರ ? ಜ್ಯೋತಿಷಿಗಳು ಏನು ಹೇಳುತ್ತಾರೆ ?
ಜ್ಯೋತಿಷಿ: ಶಿವಪ್ರಸಾದ್ ಭಾರದ್ವಾಜ್ ಪುತ್ತೂರು ಮೊ: 9448410257
ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2024 ರ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಯುಗಾದಿ 2024 ಪಂಚಾಂಗದಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ಈ ಸಾಲಿನ ರಾಶಿ ಭವಿಷ್ಯವನ್ನು ಈ ಕೆಳಗೆ ನೀಡಲಾಗಿದೆ
ಮೇಷ : ದ್ವಿತೀಯದಲ್ಲಿನ ಗುರುವು ಉತ್ತಮನುಕೂಲವನ್ನು ಒದಗಿಸುವನು. ವಿದ್ಯೆ, ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಆದಾಯದಲ್ಲಿ ಹೆಚ್ಚಿನ ಅನುಕೂಲತೆ ಕಂಡುಬರಲಿದೆ. ಶನಿಯು ಲಾಭ ಸ್ಥಾನದಲ್ಲಿದ್ದು ಅರ್ಥವ್ಯವಸ್ಥೆಯಲ್ಲಿ ಪ್ರಗತಿ ಕಂಡುಬರುವುದು. ರಾಹು ವ್ಯಯ ಸ್ಥಾನದಲ್ಲಿ ಇರುವುದರಿಂದಾಗಿ ಮನೋಕ್ಲೇಶ, ಅವಮಾನಗಳನ್ನು ಎದುರಿಸಬೇಕಾದೀತು. ಸುಬ್ರಹ್ಮಣ್ಯ ಸೇವೆ ಕೈಗೊಂಡಲ್ಲಿ ರಾಹುವಿನಿಂದಾಗಿ ಬರುವ ಸಮಸ್ಯೆಗಳು ಪರಿಹಾರವಾಗುವವು.
ವೃಷಭ : ಗುರುವು ಜನ್ಮರಾಶಿಯಲ್ಲಿಯೂ, ಕೇತು ಪಂಚಮದಲ್ಲಿಯೂ, ಶನಿಯು ದಶಮದಲ್ಲಿಯೂ ಇರುವ ಕಾರಣ ಉದ್ಯೋಗದ ಬದಲಾವಣೆ, ಪಿತ್ತ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವವು, ಜನರಿಂದ ವಿರೋಧವನ್ನು ಎದುರಿಸಬೇಕಾದೀತು. ಆದರೂ ಧನ-ವಸ್ತçಗಳನ್ನು ಕೊಡುಗೆಯಾಗಿ ಪಡೆಯುವಿರಿ. ವರ್ಷದ ಮಧ್ಯದಲ್ಲಿ ಬಂಧುಗಳಿಂದ ಮಾನ-ಸಮ್ಮಾನಗಳು ಇರುವವು. ವರ್ಷಾಂತ್ಯದಲ್ಲಿ ಸ್ನೇಹಿತರಿಂದ ಒಂದಷ್ಟು ಲಾಭಗಳನ್ನು ನಿರೀಕ್ಷಿಸಬಹುದಾಗಿದೆ. ದುರ್ಗೆಯ ಆರಾಧನೆಯಿಂದ ಶುಭವನ್ನು ಕಾಣುವಿರಿ.
ಮಿಥುನ : ಗುರುವು ಏಕಾದಶದಲ್ಲಿದ್ದು ಉತ್ತಮ ಫಲವನ್ನು ನೀಡಿದರೂ ಮೇ ತಿಂಗಳಿನಿAದ ದ್ವಾದಶಕ್ಕೆ ಬರುತ್ತಾ ಆರ್ಥಿಕವಾಗಿ ಚಿಂತಗೀಡು ಮಾಡುವನು. ನ್ಯಾಯಾಲಯ ವ್ಯವಹಾರಗಳಲ್ಲಿ ಶತ್ರುಗಳಿಂದ ಜಯ ಹೊಂದುವಿರಿ. ವರ್ಷದ ಮಧ್ಯದಲ್ಲಿ ರಾಜಕೀಯ ಸಂಬAಧಿತ ಆತಂಕ ಉಂಟಾದೀತು. ವರ್ಷಾಂತ್ಯದಲ್ಲಿ ಕಫ, ರಕ್ತ ಸಂಬಂಧಿ ಬಾಧೆಗಳಿರುವವು. ವಿಷ್ಣು ದೇವರ ಸೇವೆಯಿಂದ ಸಮಸ್ಯೆಗಳು ಬಗೆಹರಿಯುವು.
ಕರ್ಕಟಕ : ಸಂತ್ಸರಾರಂಭದಲ್ಲಿ ಗುರುವು ದಶಮ ಭಾವ ಸ್ಥಿತನಾಗಿ ಹಣದ ಕೊರತೆ ಉಂಟು ಮಾಡಿದ್ದರೂ, ಮೇ ತಿಂಗಳಿನಿಂದ ಏಕಾದಶ ಭಾವದಲ್ಲಿ ಇದ್ದು ಉತ್ತಮವಾದ ಆರ್ಥಿಕ ಪ್ರಗತಿಗೆ ಕಾರಣನಾಗುವನು. ಅಷ್ಟಮ ಭಾವದ ಶನಿಯು ಅನಾರೋಗ್ಯಕ್ಕೆ ಕಾರಣನಾಗುವನು. ರಾಹುವಿನಿಂದ ಮಂದಬುದ್ಧಿಯು ಇರುವುದು. ಕೇತುವಿನಿಂದಾಗಿ ಸ್ವಲ್ಪಮಟ್ಟಿನ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ. ಗಣಪತಿ ಹಾಗೂ ದುರ್ಗೆಯ ಆರಾಧನೆಯಿಂದ ಶುಭವಾಗಲಿದೆ.
ಸಿಂಹ : ದಶಮ ಭಾವದಲ್ಲಿನ ಗುರುವು ಉತ್ತಮ ದೈವಾನುಕೂಲದ ಜೊತೆಗೆ ವ್ಯವಹಾರದ ವೃದ್ಧಿಗೆ ಕಾರಣನಾಗುವನು. ಅಷ್ಟಮದ ರಾಹು, ದ್ವಿತೀಯ ಭಾವದ ಕೇತು, ಸಪ್ತಮದ ಶನಿ ಇವುಗಳಿಂದ ದಾಂಪತ್ಯದಲ್ಲಿ ವಿರಸ, ಉದರ ಸಂಬಂಧಿ ಅನಾರೋಗ್ಯ ಇರುವುದು. ಮಾತಿನಿಂದಾಗಿ ವಿರೋಧಿಗಳು ಹುಟ್ಟಿಕೊಳ್ಳುವರು. ದೇಹದಲ್ಲಿ ಆಯಾಸ, ಅತೀಕೋಪ ಕಾಣಿಸಬಹುದು. ನವಗ್ರಹರ ಆರಾಧನೆ, ವಿಷ್ಣು, ಶನಿ, ಗಣಪತಿ ಸೇವೆಯಿಂದ ಶುಭವಾಗುವುದು.
ಕನ್ಯಾ : ಗುರುವು ಭಾಗ್ಯ ಸ್ಥಾನದಲ್ಲಿರುವನು. ಶನಿ ಷಷ್ಠದಲ್ಲಿ ಇದ್ದು ಶುಭ ಫಲಗಳನ್ನು ನೀಡುವನು. ಆರ್ಥಿಕ ಪ್ರಗತಿ, ಉದ್ಯೋಗ-ವ್ಯವಹಾರಗಳು ಪ್ರಗತಿಯಾಗುವವು, ವಿವಾಹಾದಿ ಮಂಗಲ ಕಾರ್ಯಗಳು ನೆರವೇರುವವು. ಉತ್ತಮ ಸ್ಥಾನ-ಮಾನ ಪ್ರಾಪ್ತಿ, ಭೂ-ಲಾಭವಾದೀತು. ವರ್ಷದ ಅಂತ್ಯದಲ್ಲಿ ಶತ್ರುಬಾಧೆ ಇದ್ದರೂ ಜಯಸಾಧಿಸುವಿರಿ. ಆದಾಯವೃದ್ಧಿ ಆಗಲಿದೆ. ಗಣಪತಿ ಹಾಗೂ ಸುಬ್ರಹ್ಮಣ್ಯ ಸೇವೆಯಿಂದ ಶುಭ.
ತುಲಾ : ಗುರುವು ಅಷ್ಟಮದಲ್ಲಿರುವನು. ಪಂಚಮದಲ್ಲಿ ಶನಿಯೂ ಅನೇಕ ರೀತಿಯ ಕಷ್ಟಗಳಿಗೆ ಕಾರಣರಾಗುವರು. ದೈವಬಲವಿರುವುದಿಲ್ಲ. ಮನೋವ್ಯಾಕುಲತೆ ಕಾಡಬಹುದು. ಧನದ ಅಪವ್ಯಯದ ಬಗ್ಗೆ ಎಚ್ಚರವಿರಬೇಕು. ಸ್ತ್ರೀ ಕೋಪಕ್ಕೆ ಒಳಗಾಗುವಿರಿ. ದಾಂಪತ್ಯದಲ್ಲಿ ವಿರೋಧವನ್ನು ಎದುರಿಸುವಿರಿ. ರಕ್ತವ್ಯಾಧಿಯ ಬಗ್ಗೆ ಜಾಗರೂಕರಾಗಿರಬೇಕು. ನವಗ್ರಹರ ಆರಾಧನೆ ಮತ್ತು ಶಿವಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಸಿದಲ್ಲಿ ಮನೋಧರ‍್ಯ ಹೆಚ್ಚುವುದು.
ವೃಶ್ಚಿಕ : ಸಪ್ತಮ ಭಾವದ ಗುರುವಿನಿಂದಾಗಿ ದೈವಾನುಕೂಲವಿದೆ. ಕೃಷಿ ಚಟುವಟಿಕೆಯಲ್ಲಿ, ಕೈಗಾರಿಕಾ ವೃತ್ತಿಯವರಿಗೆ ಶುಭವಿದೆ. ಆದರೆ ಚತುರ್ಥ ಭಾವದ ಶನಿ ಹಾಗೂ ಪಂಚಮ ಭಾವದ ರಾಹುವಿನಿಂದ ಮನಸ್ಸಿಗೆ ಅಸಮಾಧಾನ ಇರುವಂತೆ ಭಾಸವಾಗಬಹುದು. ದೀರ್ಘಕಾಲದ ಸಮಸ್ಯೆಯು ಈ ವರ್ಷ ಬಗೆಹರಿಯುವುದು. ವಿವಿಧ ಮೂಲಗಳಿಂದ ಆರ್ಥಿಕ ಪ್ರಗತಿಕಾಣುವಿರಿ. ಸುಬ್ರಹ್ಮಣ್ಯ ಹಾಗೂ ಮೃತ್ಯುಂಜಯನನ್ನು ಆರಾಧಿಸುವುದು ಸೂಕ್ತ.
ಧನು : ತೃತೀಯ ಭಾವದ ಶನಿಯು ಶುಭ ಫಲಗಳನ್ನು ನೀಡುವನು. ಚತುರ್ಥದ ರಾಹು ಹಾಗೂ ದಶಮದ ಕೇತು ಸಖ-ದುಖಃ ಎರಡಕ್ಕೂ ಕಾರಣರಾಗುವರು. ರಕ್ತಸಂಬಂಧಿಕರಲ್ಲಿ ಕೆಲವೊಂದು ತಾಪತ್ರಯಗಳು ಇರುವವು. ವಿವಿಧ ಮೂಲಗಳಿಂದ ಆದಾಯವಿದ್ದರೂ ಖರ್ಚುಗಳು ಇರುವವು. ಕಾರ್ಯದಲ್ಲಿ ಪ್ರಗತಿ ಇರುವುದು. ಉದರ ಸಂಬಂಧಿ ರೋಗದ ಬಗ್ಗೆ ಎಚ್ಚರ ಅಗತ್ಯ. ವಿಷ್ಣು, ದುರ್ಗೆ, ಗಣಪತಿ ಸೇವೆಯಿಂದ ಶುಭವಾಗುವುದು.
ಮಕರ : ಗುರುವು ಪಂಚಮದಲ್ಲಿದ್ದು ಉತ್ತಮ ದೈವಾನುಕೂಲವಿರುವುದು. ಆತ್ಮವಿಶ್ವಾಸ ಹೆಚ್ಚುವುದು. ಆದರೆ ದ್ವಿತೀಯ ಭಾವಗತ ಶನಿಯು (ಸಾಡೇಸಾತಿ ಶನಿಯ ಕೊನೆಯಘಟ್ಟ) ಕೆಲವೊಂದು ಕಷ್ಟ-ನಷ್ಟಗಳಿಗೆ ಕಾರಣನಾಗುವನು. ವರ್ಷದ ಮಧ್ಯದಲ್ಲಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಮೂತ್ರಾಶಯ ಸಂಬAಧಿತ ವ್ಯಾಧಿಯ ಬಗ್ಗೆ ಎಚ್ಚರ ಅಗತ್ಯ. ವರ್ಷದ ಅಂತ್ಯದಲ್ಲಿ ಕೆಲವೊಂದು ಶುಭ ಫಲಗಳು ಅನುಭವಕ್ಕೆ ಬರುವವು. ಶಿವ, ವಿಷ್ಣು, ದುರ್ಗೆ, ಗಣಪತಿ ದೇವರಾರಾಧನೆ ಅವಶ್ಯವಿದೆ.
ಕುಂಭ : ಗುರುವು ಚತುರ್ಥದಲ್ಲಿದ್ದು, ಶನಿಯು ಜನ್ಮರಾಶಿಯಲ್ಲಿಯೂ, ರಾಹು ಮತ್ತು ಕೇತುಗಳು ಕ್ರಮವಾಗಿ ದ್ವಿತೀಯ ಹಾಗೂ ಅಷ್ಟಮದಲ್ಲಿಯೂ ಸಂಚರಿಸುತ್ತಿರುವ ಕಾರಣದಿಂದಾಗಿ ಆರ್ಥಿಕ ಅಡಚಣೆ ಕಂಡುಬರುವುದು. ಆರೋಗ್ಯ ವಿಚಾರವಾಗಿಯೂ ಚಿಂತಿಸಬೇಕಾದೀತು. ಬಂಧು ವಿಯೋಗದ ಬೇಸರ ಕಾಡಲಿದೆ. ವಿದ್ಯಾಭ್ಯಾಸ, ವ್ಯಾಪಾರ, ವ್ಯವಹಾರ, ಉದ್ಯೋಗದಲ್ಲಿ ವಿಶೇಷ ಗಮನ ನೀಡುವುದು ಉತ್ತಮ. ನವಗ್ರಹರ ಆರಾಧನೆ, ಶನಿ, ಗಣೇಶ, ಸುಬ್ರಹ್ಮಣ್ಯ ಆರಾಧನೆಯಿಂದ ಶುಭಫಲವನ್ನು ನಿರೀಕ್ಷಿಸಬಹುದಾಗಿದೆ.
ಮೀನ : ಗುರುವು ತೃತೀಯದಲ್ಲಿ ಇರುವುದರಿಂದಾಗಿ ಗುರುಬಲವಿರುವುದಿಲ್ಲ. ಆತ್ಮವಿಶ್ವಾಸದಿಂದ ಕೆಲವೊಂದು ಸಂಕಷ್ಟಗಳಿAದ ಪಾರಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಕಂಡುಬರಬಹುದು. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಗೃಹೋಪಕರಣಗಳ ಖರೀದಿ, ಬಂಧು-ಮಿತ್ರರಿಂದ ಸಹಾಯ ಒದಗಿಬರುವುದು. ಉತ್ತಮ ಯೋಚನೆಗಳಿಂದ ಪ್ರಗತಿ ಹೊಂದುವಿರಿ. ಜ್ವರಪೀಡೆ ಹೆಚ್ಚು ಕಂಡುಬರುವುದು. ಋಣಾತ್ಮಕ ಯೋಚನೆಯುಳ್ಳ ವ್ಯಕ್ತಿಗಳ ಸಾಮೀಪ್ಯ ಬಯಸದಿರುವುದು ಉತ್ತಮ. ಶನಿ, ಗಣೇಶ, ಸುಬ್ರಹ್ಮಣ್ಯ ಆರಾಧನೆಯಿಂದ ಶುಭಫಲವನ್ನು ನಿರೀಕ್ಷಿಸಬಹುದಾಗಿದೆ.
-
ನಿಧನ ವಾರ್ತೆ23 hours agoKadaba-ಕಡಬ : ಹೆದ್ದಾರಿಯಲ್ಲಿ ದಿಢೀರ್ ಪ್ರತ್ಯಕ್ಷವಾದ ಕಡವೆ; ಕಾರಿಗೆ ಡಿಕ್ಕಿ, ಸ್ಥಳದಲ್ಲೇ ಸಾವು
-
ಬಿಗ್ ನ್ಯೂಸ್18 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಪುತ್ತೂರು14 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಮಂಗಳೂರು17 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
Uncategorized23 hours agoಅ.6: ಮಂಗಳೂರಿನ ಪುರಭವನದಲ್ಲಿ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
-
ಅಂತರ ರಾಜ್ಯ20 hours agoECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
-
ಬಿಗ್ ನ್ಯೂಸ್16 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ರಾಜ್ಯ20 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!


















