ಕಾರ್ಯಕ್ರಮಗಳು
Puttur-ಪುತ್ತೂರು: ನ.27ರಂದು ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ
ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ. ಸಂಸ್ಥೆಯ ನೂತನ ಕಟ್ಟಡವಾದ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ನ.13) ಬೆಳಗ್ಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪುತ್ತೂರು: ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ. ಸಂಸ್ಥೆಯ ನೂತನ ಕಟ್ಟಡವಾದ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ನ.13) ಬೆಳಗ್ಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಉಪಸ್ಥಿತಿಯಲ್ಲಿ ದೇವಳದ ಗರ್ಭಗುಡಿಯ ಮುಂಭಾಗದಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್, ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ, ಸಂಸ್ಥೆಯ ಡೈರೆಕ್ಟರ್ ಅಶ್ವಿನಿ ಎನ್., ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೃತಕೃಷ್ಣ ಎನ್., ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಮಂತ್ರಣ ಪತ್ರ ಬಿಡುಗಡೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್, “ಉಜ್ಜೀವನ ಸೇರಿದಂತೆ ಹಲವು ಬಡಾವಣೆಗಳನ್ನು ನಿರ್ಮಿಸುವ ಮೂಲಕ ದ್ವಾರಕಾ ಸಂಸ್ಥೆ ಈಗಾಗಲೇ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಇದೀಗ ಸ್ವಂತ ಕಚೇರಿ ಕಟ್ಟಡ ನಿರ್ಮಿಸಬೇಕೆಂಬ ಕನಸು ನನಸಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ದ್ವಾರಕಾ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ನ.27ರಂದು ನಡೆಯಲಿರುವ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದ್ವಾರಕಾ ಕಮರ್ಶಿಯಲ್ಸ್‌ನ ಪ್ರಧಾನ ಕಚೇರಿಯ ಜೊತೆಗೆ ಎಸ್ಕಲೇಟರ್ ಹಾಗೂ ದ್ವಾರಕಾ ಮಂಗಲ್ ಸ್ಟೋರ್ ಕೂಡ ಉದ್ಘಾಟನೆಗೊಳ್ಳಲಿದೆ.
ಸ್ಥಳೀಯ
Surabhi Goshala-ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ
ದ್ವಾರಕಾ ಕಾರ್ಪೋರೇಷನ್ ಪ್ರೈ.ಲಿ. ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ದೇರ್ಲದ ‘ಸುರಭಿ’ ಗೋಶಾಲಾ ವಠಾರದಲ್ಲಿ ಗೋಪೂಜೆ , ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಸಭೆ ಹಾಗೂ ಸುಡುಮದ್ದಿನ ಪ್ರದರ್ಶನ ಕಾರ್ಯಕ್ರಮ ನ.10 ರಂದು ನಡೆಯಿತು.
ದ್ವಾರಕಾ ಕಾರ್ಪೋರೇಷನ್ ಪ್ರೈ.ಲಿ. ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ದೇರ್ಲದ ‘ಸುರಭಿ’ ಗೋಶಾಲಾ ವಠಾರದಲ್ಲಿ ಗೋಪೂಜೆ , ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಸಭೆ ಹಾಗೂ ಸುಡುಮದ್ದಿನ ಪ್ರದರ್ಶನ ಕಾರ್ಯಕ್ರಮ 10/11/26 ರಂದು ನಡೆಯಿತು.
ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ, ಸಂಸ್ಥೆಯ ಡೈರೆಕ್ಟರ್ ಅಶ್ವಿನಿ ಎನ್. , ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೃತಕೃಷ್ಣ ಎನ್., ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ಮುಂತಾದವರು ಉಪಸ್ಥಿತರಿದ್ದರು.
ಗೋ ಪೂಜೆಯ ಅಂಗವಾಗಿ ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಿ ಆಹಾರ ನೀಡಲಾಯಿತು. ಬಳಿಕ ಆಕರ್ಷಕ ಸುಡುಮದ್ದಿನ ಪ್ರದರ್ಶನ ನಡೆಯಿತು. ಸಂಸ್ಥೆಯ ಸಿಬ್ಬಂದಿಗಳು ಹಾಗೂ ಹಿತೈಷಿಗಳು ಭಾಗವಹಿಸಿದರು.
ಸ್ಥಳೀಯ
Dharmasthala-ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ: ಧರ್ಮದೇವತೆಗಳಿಗೆ ಪರ್ವ ಸೇವೆ, ಬಲಿಯೇಂದ್ರ ಪೂಜೆ: ತುಳುನಾಡಿನ ವಿಶಿಷ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅನಾವರಣ
ಧರ್ಮಸ್ಥಳ: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವಂತೆಯೇ, ಪುಣ್ಯಕ್ಷೇತ್ರ ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಬಲಿಪಾಡ್ಯಮಿಯ ಪ್ರಯುಕ್ತ ಧರ್ಮದೇವತೆಗಳಿಗೆ ವಿಶೇಷ ಪರ್ವ ಸೇವೆ ಹಾಗೂ ಬಲಿಯೇಂದ್ರ ಪೂಜೆಯನ್ನು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ತಲೆತಲಾಂತರಗಳಿAದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಯು ತುಳುನಾಡಿನ ಶ್ರೀಮಂತ ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಪ್ರತಿಬಿಂಬಿಸುತ್ತದೆ.
ಧರ್ಮದೇವತೆಗಳಿಗೆ ವಿಶೇಷ ಪರ್ವ ಸೇವೆ
ಧರ್ಮದೇವತೆಗಳ ಮೂಲ ಸಾನ್ನಿಧ್ಯವಾಗಿರುವ ನೆಲ್ಯಾಡಿ ಬೀಡಿನಲ್ಲಿ ಪ್ರತಿವರ್ಷ ದೀಪಾವಳಿಯ ಬಲಿಪಾಡ್ಯಮಿಯಂದು ವಿಶೇಷ ಪರ್ವ ಸೇವೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆಲ್ಯಾಡಿ ಬೀಡಿಗೆ ಆಗಮಿಸಿ, ಸಂಪ್ರದಾಯದAತೆ ತೀರ್ಥಸ್ನಾನ ನೆರವೇರಿಸಿ ಪರ್ವ ಸೇವೆಯ ಮುಂದಾಳತ್ವ ವಹಿಸಿದರು.
ಪರ್ವ ಸೇವೆಗೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಸಂಪ್ರದಾಯಬದ್ಧವಾಗಿ ಕೈಗೊಳ್ಳಲಾಯಿತು. ದೈವಗಳ ಮಂಚದ ಮೇಲೆ ಮಡಿ ವಸ್ತ್ರವನ್ನು ಹಾಸಿ, ಬಾಳೆ ಎಲೆಯಲ್ಲಿ ಅವಲಕ್ಕಿ, ಹುರಿ, ಬೆಲ್ಲ, ದೋಸೆ ಸೇರಿದಂತೆ ವಿವಿಧ ಬಗೆಯ ಸಾಂಪ್ರದಾಯಿಕ ಭಕ್ಷ್ಯಗಳನ್ನು ಬಡಿಸಿ ಧರ್ಮದೇವತೆಗಳಿಗೆ ನೈವೇದ್ಯ ಅರ್ಪಿಸಲಾಯಿತು.
ಸಾಂಪ್ರದಾಯಿಕ ವಾದ್ಯಘೋಷಗಳೊಂದಿಗೆ ನೆಲ್ಯಾಡಿ ಬೀಡಿನ ಒಳಭಾಗದಲ್ಲಿ ಸುಮಾರು ಒಂದು ಗಂಟೆಯ ಕಾಲ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಈ ಸಂದರ್ಭದಲ್ಲಿ ವಿವಿಧ ಸಾಂಪ್ರದಾಯಿಕ ಸೇವೆಗಳನ್ನು ನಿರ್ವಹಿಸುವ ಸೇವಾಕರ್ತರು ತಮ್ಮ ತಮ್ಮ ಜವಾಬ್ದಾರಿಗಳನ್ನು ಶ್ರದ್ಧಾ-ಭಕ್ತಿಯಿಂದ ನಿರ್ವಹಿಸಿದರು.
ಬಲಿಯೇಂದ್ರ ಪೂಜೆಯ ವಿಶಿಷ್ಟ ಸಂಪ್ರದಾಯ
ಪರ್ವ ಸೇವೆಯ ಬಳಿಕ ನೆಲ್ಯಾಡಿ ಬೀಡಿನ ಹೊರಭಾಗದಲ್ಲಿ ಬಲಿಯೇಂದ್ರ ಪೂಜೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಬಲಿಯೇಂದ್ರ ಪೂಜೆಗೆ ಅಗತ್ಯವಾದ ಮರಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿಯೂ ವಿಶಿಷ್ಟ ಸಂಪ್ರದಾಯವಿದೆ. ದೀಪಾವಳಿಗೂ ಮುನ್ನ ಬರುವ ಹುಣ್ಣಿಮೆಯಂದು ಸಂಪ್ರದಾಯಬದ್ಧ ಸೇವಾಕರ್ತರು ಧರ್ಮಾಧಿಕಾರಿಗಳಿಂದ ಅಪ್ಪಣೆ ಪಡೆದು, ಪೂಜೆಗೆ ಅಗತ್ಯವಾದ ಹೊಂಗಾರೆ ಮರವನ್ನು ಸಂಗ್ರಹಿಸಿ ಸಿದ್ಧಪಡಿಸುತ್ತಾರೆ. ಅದೇ ರೀತಿ ಅಮಾವಾಸ್ಯೆಯಂದು ಬಲಿಯೇಂದ್ರನ ಕಂಬಕ್ಕೆ ಬೇಕಾಗುವ ಹಾಳೆ ಮರವನ್ನು ತರಲು ಅಪ್ಪಣೆ ಪಡೆಯಲಾಗುತ್ತದೆ.
ಸಂಗ್ರಹಿಸಿದ ಮರದಿಂದ ಸಂಪ್ರದಾಯದಂತೆ ಬಲಿಯೇಂದ್ರನ ವಿಶೇಷ ರಚನೆಯನ್ನು ಸಿದ್ಧಪಡಿಸಲಾಗುತ್ತದೆ. ಬಲಿಯೇಂದ್ರನಿಗೆ ಅಪರೂಪವಾಗಿ ದೊರೆಯುವ ಕುರುಡು ಹೂವನ್ನು ಅರ್ಪಿಸುವುದು ಈ ಆಚರಣೆಯ ಮತ್ತೊಂದು ವಿಶೇಷತೆಯಾಗಿದೆ.
ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬಲಿಯೇಂದ್ರನಿಗೆ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಬಲಿಯೇಂದ್ರನಿಗೆ ‘ಪೊಲಿ’ ಹೇಳಿ ಕೂಗುವ ಆಚರಣೆಯು ತುಳುನಾಡಿನ ಜನಪದ ನಂಬಿಕೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ.
ಸಾಮೂಹಿಕ ಸೇವೆ ಮತ್ತು ಸಂಪ್ರದಾಯದ ಮಹತ್ವ
ನೆಲ್ಯಾಡಿ ಬೀಡಿನಲ್ಲಿ ನಡೆಯುವ ಪರ್ವ ಸೇವೆ ಹಾಗೂ ಬಲಿಯೇಂದ್ರ ಪೂಜೆಯ ಯಶಸ್ವಿ ನಿರ್ವಹಣೆಯಲ್ಲಿ ವಿವಿಧ ಸಾಂಪ್ರದಾಯಿಕ ಸೇವಾಕರ್ತರು ಮತ್ತು ಕಾರ್ಯಕರ್ತರು ತಮ್ಮದೇ ಆದ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಪರಸ್ಪರ ಸಹಕಾರ, ಸೇವಾಭಾವನೆ ಮತ್ತು ಧಾರ್ಮಿಕ ಶ್ರದ್ಧೆಯೊಂದಿಗೆ ನೆರವೇರುವ ಈ ಆಚರಣೆಯು ಸಾಮೂಹಿಕ ಪಾಲ್ಗೊಳ್ಳುವಿಕೆ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ.
ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ ಪ್ರತಿಯೊಂದು ಸೇವೆಗೂ ತನ್ನದೇ ಆದ ಮಹತ್ವವಿದ್ದು, ಎಲ್ಲರ ಸಹಕಾರ ಮತ್ತು ಸಮರ್ಪಣಾಭಾವನೆಯಿಂದ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರುತ್ತವೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕ
ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ನಡೆಯುವ ಪರ್ವ ಸೇವೆ ಹಾಗೂ ಬಲಿಯೇಂದ್ರ ಪೂಜೆಯು ಕೇವಲ ದೀಪಾವಳಿ ಹಬ್ಬದ ಆಚರಣೆಗೆ ಸೀಮಿತವಾಗಿರದೆ, ಧರ್ಮದೇವತೆಗಳ ಆರಾಧನೆ, ನಂಬಿಕೆ, ಭಕ್ತಿ, ಸೇವೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ.
ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಯು ಇಂದಿಗೂ ತನ್ನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು, ಅದೇ ಶ್ರದ್ಧೆ ಮತ್ತು ಭಕ್ತಿಯಿಂದ ಮುಂದುವರಿಯುತ್ತಿರುವುದು ವಿಶೇಷವಾಗಿದೆ.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಆಚರಣೆಯು ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ, ಮುಂದಿನ ಪೀಳಿಗೆಗೂ ಅದರ ಮಹತ್ವವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ನೆರವೇರುವ ಈ ಪರ್ವ ಸೇವೆ ಹಾಗೂ ಬಲಿಯೇಂದ್ರ ಪೂಜೆಯು ಭಕ್ತಿ, ನಂಬಿಕೆ, ಸಾಮರಸ್ಯ, ಸಾಮೂಹಿಕ ಸೇವೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ.
ಕಾರ್ಯಕ್ರಮಗಳು
Bolwar-ಬೊಳುವಾರಿನಲ್ಲಿ 32ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ
ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಹಾಗೂ ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರು (ದ.ಕ) ಇದರ ವತಿಯಿಂದ ನಡೆಸಲ್ಪಡುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣದ 32ನೇ ಕೇಂದ್ರವನ್ನು ಪುತ್ತೂರಿನ ಬೊಳುವಾರು ಗಣೇಶ ಪ್ರಸಾದ ಕಟ್ಟಡದಲ್ಲಿರುವ, ಪ್ರೀಸ್ಕೂಲ್ ಮತ್ತು ಡೇ ಕೇರ್ ‘ಮಕ್ಕಳ ಮನೆ’ ಯಲ್ಲಿ ನ.10ರಂದು ಉದ್ಘಾಟಿಸಲಾಯಿತು.
ಪುತ್ತೂರು : ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಹಾಗೂ ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರು (ದ.ಕ) ಇದರ ವತಿಯಿಂದ ನಡೆಸಲ್ಪಡುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣದ 32ನೇ ಕೇಂದ್ರವನ್ನು ಪುತ್ತೂರಿನ ಬೊಳುವಾರು ಗಣೇಶ ಪ್ರಸಾದ ಕಟ್ಟಡದಲ್ಲಿರುವ, ಪ್ರೀಸ್ಕೂಲ್ ಮತ್ತು ಡೇ ಕೇರ್ ‘ಮಕ್ಕಳ ಮನೆ’ ಯಲ್ಲಿ ನವೆಂಬರ್ 10ರಂದು ಉದ್ಘಾಟಿಸಲಾಯಿತು.

ಉಷಾ ಮೆಡಿಕಲ್ಸ್ ನ ಮಾಲಕರಾದ ಪಿ. ಗಣೇಶ ಭಟ್ ಇವರು ದೀಪ ಬೆಳಗಿಸುವುದರ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಶಿಕ್ಷಣವು ಮಕ್ಕಳ ಜೊತೆ ಹೆತ್ತವರಿಗೂ ಅತ್ಯಂತ ಅಗತ್ಯವಿದೆ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುವ ಮಕ್ಕಳಿಗೆ ಹಿರಿಯರಿಂದ ಅನಾಯಾಸವಾಗಿ ಇಂತಹ ಮೌಲ್ಯಯುತ ಮಾರ್ಗದರ್ಶನವು ತನ್ನಿಂದ ತಾನಾಗಿ ದೊರೆಯುತ್ತಿತ್ತು ಎಂದರು. ತನ್ನ ಚಿಕ್ಕಂದಿನಲ್ಲಿ ಚಂದಮಾಮ, ಅಮರ ಚಿತ್ರಕಥೆ ಪುಸ್ತಕಗಳಲ್ಲಿ ಪೌರಾಣಿಕ ಕಥೆಗಳನ್ನು ಓದಿ ಪ್ರಭಾವಿತರಾದ ಬಗ್ಗೆ ನೆನಪಿಸುತ್ತಾ, ಧಾರ್ಮಿಕ ಶಿಕ್ಷಣ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದೇವಾಲಯ ಸಂವರ್ಧನ ಸಮಿತಿಯ ಸದಸ್ಯರಾದ ರಾಮದಾಸ್ ಗೌಡ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಕೇಂದ್ರದ LKG ಪುಟಾಣಿ ಸ್ಕಂದರಾಮ ಪ್ರಾರ್ಥಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳ ಮನೆಯ ಮುಖ್ಯಸ್ಥರಾದ ಸತ್ಯಪೂರ್ಣ ಇವರು ಕೇಂದ್ರದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಧಾರ್ಮಿಕ ಪುಸ್ತಕಗಳನ್ನು ಡಾ. ಸುಧಾ ರಾವ್ ಮತ್ತು ಪ್ರೊ. ವತ್ಸಲಾ ರಾಜ್ಞಿ ಇವರು ಹಸ್ತಾಂತರಿಸಿದರು. ಡಾ. ವಿಜಯ ಸರಸ್ವತಿಯವರು ಶ್ಲೋಕ ಹಾಗೂ ಅದರ ಅರ್ಥವನ್ನು ತಿಳಿಸಿಕೊಟ್ಟರು. ಶಂಕರಿ ಶರ್ಮ ಕಥೆಯನ್ನು ಹೇಳಿ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮದ ನಿರೂಪಣೆ ತೇಜಸ್ವಿ ರಾಜೇಶ್ ಅವರು ಮಾಡಿದರು, ಕೊನೆಯಲ್ಲಿ ವಿವಿಧ ವಿನೋದ ಆಟಗಳಿಂದ ಮಕ್ಕಳಲ್ಲಿ ಉತ್ಸಾಹ ತುಂಬಲಾಯಿತು.
-
ಬಿಗ್ ನ್ಯೂಸ್10 hours agoHigh Court-ಈಶ್ವರಮಂಗಲ: ಮೇನಾಲದ ಹೈಟೆಕ್ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್ಗೆ ಹೈಕೋರ್ಟ್ ಆದೇಶ..!
-
ಅಪರಾಧ12 hours agoMangalore-ಮಂಗಳೂರು: ₹1.15 ಕೋಟಿ ದರೋಡೆಗೆ ಸಂಚು ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್-ಕೆಲಸದಿಂದ ಅಮಾನತು
-
ಸುಳ್ಯ12 hours agoAreca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
-
ಅಪರಾಧ11 hours agoArrested-ಬಡ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಬೃಹತ್ ಜಾಲ ಪತ್ತೆ: 11 ಮಂದಿ ಅರೆಸ್ಟ್; ಅಕ್ಕಪಡೆಯ ಮಹಿಳಾ ಪೊಲೀಸರ ಸಾಹಸಕ್ಕೆ ಮೆಚ್ಚುಗೆ
-
ರಾಜಕೀಯ12 hours agoHariprasad-ಮತಾಂತರ ನಿಷೇಧ ಕಾಯ್ದೆ ರದ್ದು ಫಿಕ್ಸ್? ಹರಿಪ್ರಸಾದ್ ಬಿಗ್ ಸುಳಿವು..!
-
ಕ್ರೈಂ11 hours agoSeven murder case-ಏಳು ಕೊಲೆ ಪ್ರಕರಣಕ್ಕೆ ₹4 ಕೋಟಿ ಆಸ್ತಿ ನಂಟು? ತಂದೆ-ಮಗಳನ್ನು ಒಟ್ಟಿಗೆ ಕೂರಿಸಿ ವಿಚಾರಣೆ; ಮಗಳಿಗೆ ಆಸ್ತಿ ಆಮಿಷವೊಡ್ಡಿ ಸಂಚಿಗೆ ಬಳಸಿಕೊಂಡ ತಂದೆ
-
ನಿಧನ ವಾರ್ತೆ10 hours agoMelkar-ಮೆಲ್ಕಾರ್: ಸ್ವರಾಜ್ ಸ್ಟುಡಿಯೋ ಮಾಲೀಕರ ಪುತ್ರಿ ನಿಧನ
-
ಸ್ಥಳೀಯ11 hours agoArrested-ಮಣಿಪಾಲದಲ್ಲಿ ವೇಶ್ಯಾವಾಟಿಕೆ ದಂಧೆ: ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಪಿಂಪ್ಗಳ ಬಂಧನ
















