ಬಿಗ್ ನ್ಯೂಸ್
Bantwal-ಬಂಟ್ವಾಳ: ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಉರುಳಿದ ಬುಲೆಟ್; ಸವಾರನಿಗೆ ಗಂಭೀರ ಗಾಯ
ಬಿಸಿರೋಡಿನ ಫ್ಲೈಓವರ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬುಲೆಟ್ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಫ್ಲೈಓವರ್ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನ.9ರಂದು ನಡೆದಿದೆ.
ಬಂಟ್ವಾಳ: ಬಿಸಿರೋಡಿನ ಫ್ಲೈಓವರ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬುಲೆಟ್ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಫ್ಲೈಓವರ್ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನ.9ರಂದು ನಡೆದಿದೆ.
ಎರಡು ಬುಲೆಟ್ ಬೈಕ್ಗಳು ಫ್ಲೈಓವರ್ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರ ಕೆಳಕ್ಕೆ ಬಿದ್ದಿದ್ದಾನೆಯೇ ಅಥವಾ ಬೈಕ್ನ ನಿಯಂತ್ರಣ ತಪ್ಪಿ ಫ್ಲೈಓವರ್ನಿಂದ ಕೆಳಗೆ ಬಿದ್ದಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಫ್ಲೈಓವರ್ನಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ ಸರ್ವೀಸ್ ರಸ್ತೆಗೆ ಅಪ್ಪಳಿಸಿದ್ದಾನೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರವಿಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಸವಾರ ಹೆಲ್ಮೆಟ್ ಧರಿಸಿದ್ದರೂ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇದೇ ಫ್ಲೈಓವರ್ನಲ್ಲಿ 2016ರಲ್ಲಿಯೂ ರಾತ್ರಿ ವೇಳೆ ಬೈಕ್ವೊಂದು ತಡೆಗೋಡೆಗೆ ಡಿಕ್ಕಿಯಾಗಿ ಕೆಳಕ್ಕೆ ಬಿದ್ದ ಪರಿಣಾಮ ಸವಾರ ಮೃತಪಟ್ಟಿದ್ದ ಘಟನೆ ನಡೆದಿತ್ತು.
ಸ್ಥಳೀಯ
Uppinangadi-ಉಪ್ಪಿನಂಗಡಿ: ಕೂಟೇಲಿನಲ್ಲಿ ಕಾರು-ಬೈಕ್ ಡಿಕ್ಕಿ; ರಸ್ತೆಯಲ್ಲೇ ಹೊತ್ತಿ ಉರಿದ ಬೈಕ್
ಕಾರಿಗೆ ಡಿಕ್ಕಿ ಹೊಡೆದ ಬೈಕ್ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನ.10ರಂದು ಉಪ್ಪಿನಂಗಡಿಯ ಕೂಟೇಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಸ್ಥಳದಲ್ಲಿ ಕೂಡಲೇ ಬೆಂಕಿ ನಂದಿಸುವ ವ್ಯವಸ್ಥೆ ಇಲ್ಲದ ಕಾರಣ ಬೈಕ್ ಬೆಂಕಿಗಾಹುತಿಯಾಗಿದೆ.
ಉಪ್ಪಿನಂಗಡಿ: ಕಾರಿಗೆ ಡಿಕ್ಕಿ ಹೊಡೆದ ಬೈಕ್ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನ.10ರಂದು ಉಪ್ಪಿನಂಗಡಿಯ ಕೂಟೇಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ದ್ವಿಪಥದ ಏಕಮುಖ ರಸ್ತೆಯಲ್ಲಿ ಏಕಾಏಕಿ ಮತ್ತೊಂದು ಪಥಕ್ಕೆ ಬಂದಿದ್ದಾನೆ ಎನ್ನಲಾಗಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಗೆ ಉರುಳಿ ಬಿದ್ದಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿ ಕೂಡಲೇ ಬೆಂಕಿ ನಂದಿಸುವ ವ್ಯವಸ್ಥೆ ಇಲ್ಲದ ಕಾರಣ ಬೈಕ್ ಬೆಂಕಿಗಾಹುತಿಯಾಗಿದೆ.
ಅದೃಷ್ಟವಶಾತ್ ಬೈಕ್ ಸವಾರ ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ
Beltangadi-ಪಟಾಕಿ ಮೇಲೆ ಕಾಲಿಟ್ಟ ಯುವಕ – ಪಾದ ಛಿದ್ರ..!
ಪಟಾಕಿ ಸಿಡಿಯುವುದನ್ನು ತಡೆಯುವ ಉದ್ದೇಶದಿಂದ ಅದರ ಮೇಲೆ ಕಾಲಿಟ್ಟ ಯುವಕನ ಬಲಗಾಲಿಗೆ ಸ್ಫೋಟದ ಪರಿಣಾಮ ಗಾಯವಾದ ಘಟನೆ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ಸಮೀಪದ ಪೊರ್ಕಂಡದಲ್ಲಿ ನ. 9ರಂದು ಸಂಜೆ ನಡೆದಿದೆ. ಪೊರ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಗಾಯಗೊಂಡ ಯುವಕ.
ಬೆಳ್ತಂಗಡಿ: ಪಟಾಕಿ ಸಿಡಿಯುವುದನ್ನು ತಡೆಯುವ ಉದ್ದೇಶದಿಂದ ಅದರ ಮೇಲೆ ಕಾಲಿಟ್ಟ ಯುವಕನ ಬಲಗಾಲಿಗೆ ಸ್ಫೋಟದ ಪರಿಣಾಮ ಗಾಯವಾದ ಘಟನೆ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ಸಮೀಪದ ಪೊರ್ಕಂಡದಲ್ಲಿ ನ. 9ರಂದು ಸಂಜೆ ನಡೆದಿದೆ.
ಪೊರ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಗಾಯಗೊಂಡ ಯುವಕ.
ಮನೆಯ ಅಂಗಳದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ಮನೆಯವರು ಒಳಗಿನಿಂದ ಹೊರಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಪಟಾಕಿಯಿಂದ ಅಪಾಯವಾಗದಂತೆ ತಡೆಯುವ ಉದ್ದೇಶದಿಂದ ಲಿಕೇಶ್ ಅವರು ಅದರ ಮೇಲೆ ಬಲಗಾಲು ಇಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆ ಪಟಾಕಿ ಏಕಾಏಕಿ ಸ್ಫೋಟಗೊಂಡಿದ್ದು, ಸ್ಫೋಟದ ರಭಸಕ್ಕೆ ಅವರ ಬಲಗಾಲಿಗೆ ಭಾಗಶಃ ಗಾಯವಾಗಿದೆ.
ತಕ್ಷಣ ಮನೆಯವರು ಹಾಗೂ ಸ್ನೇಹಿತರು ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಲಿಕೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂತರ ರಾಜ್ಯ
Divorce-ಮೂರನೇ ಪತ್ನಿಯಿಂದಲೂ ಡೈವರ್ಸ್: ಪವನ್ ಕಲ್ಯಾಣ್- ಅನ್ನಾ ದಾಂಪತ್ಯದಲ್ಲಿ ಬಿರುಕು..!
ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೇಲ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಪ್ರತ್ಯೇಕವಾಗುತ್ತಿರುವುದಾಗಿ ದಂಪತಿ ಘೋಷಿಸಿದ್ದು, 13 ವರ್ಷಗಳ ವೈವಾಹಿಕ ಜೀವನ ಮುಕ್ತಾಯಗೊಂಡಿದೆ.
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೇಲ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಪ್ರತ್ಯೇಕವಾಗುತ್ತಿರುವುದಾಗಿ ದಂಪತಿ ಘೋಷಿಸಿದ್ದು, 13 ವರ್ಷಗಳ ವೈವಾಹಿಕ ಜೀವನ ಮುಕ್ತಾಯಗೊಂಡಿದೆ.
ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೇಲ ಅವರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಗಳು ಕೆಲವು ಸಮಯದಿಂದ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದ್ದವು. ಇದೀಗ ಪ್ರತ್ಯೇಕತೆಯ ನಿರ್ಧಾರ ಅಧಿಕೃತವಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಬೇಸರ ಮೂಡಿಸಿದೆ.
ವಿಚ್ಛೇದನದ ಸುಳಿವು ನೀಡಿದ್ದ ಮೂರು ಬೆಳವಣಿಗೆಗಳು!
ದಂಪತಿಯ ಪ್ರತ್ಯೇಕತೆಯ ನಿರ್ಧಾರಕ್ಕೂ ಮುನ್ನ ನಡೆದ ಕೆಲವು ಘಟನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ. ಈ ಬೆಳವಣಿಗೆಗಳು ಹಲವು ತಿಂಗಳ ಹಿಂದೆಯೇ ದಂಪತಿ ಪ್ರತ್ಯೇಕವಾಗುವ ನಿರ್ಧಾರ ಕೈಗೊಂಡಿದ್ದರೇ ಎಂಬ ಊಹಾಪೋಹಗಳಿಗೆ ಕಾರಣವಾಗಿವೆ.
ಅನ್ನಾ ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯ:
ಕೆಲವು ಸಮಯದ ಹಿಂದೆ ಅನ್ನಾ ಕೊನಿಡೇಲ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಆಗಲೇ ಅಭಿಮಾನಿಗಳಲ್ಲಿ ಹಲವು ಅನುಮಾನಗಳು ಮೂಡಿದ್ದವು. ಇದೀಗ ದಂಪತಿಯ ಪ್ರತ್ಯೇಕತೆಯ ಸುದ್ದಿ ಹೊರಬಂದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮತ್ತೆ ಚರ್ಚೆಯಾಗುತ್ತಿದೆ.
ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದ ಪವನ್:
ಸುಮಾರು ಎರಡು ವಾರಗಳ ಹಿಂದೆ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಆರಂಭದಲ್ಲಿ ಈ ಭೇಟಿಯನ್ನು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತ ರಾಜಕೀಯ ಚರ್ಚೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಪವನ್ ಅವರ ವೈಯಕ್ತಿಕ ವಿಚಾರದ ಬಗ್ಗೆಯೂ ಚರ್ಚೆ ನಡೆದಿರಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಜನಸೇನಾ ಮತ್ತು ಟಿಡಿಪಿ ನಡುವೆ ರಾಜಕೀಯ ಮೈತ್ರಿ ಇರುವುದರಿಂದ ಈ ಭೇಟಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಸಾಯಿ ದುರ್ಗಾ ತೇಜ್ ನಿಶ್ಚಿತಾರ್ಥಕ್ಕೆ ಅನ್ನಾ ಗೈರು:
ಪವನ್ ಕಲ್ಯಾಣ್ ಅವರ ಸಂಬಂಧಿ, ನಟ ಸಾಯಿ ದುರ್ಗಾ ತೇಜ್ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಅನ್ನಾ ಕೊನಿಡೇಲ ಗೈರಾಗಿದ್ದರು. ಪವನ್ ಕಲ್ಯಾಣ್ ಕೂಡ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ರಾಜಕೀಯ ಕಾರ್ಯಕ್ರಮದ ಕಾರಣದಿಂದ ಪವನ್ ಗೈರಾಗಿದ್ದರು ಎನ್ನಲಾಗಿತ್ತು. ಆದರೆ ಅನ್ನಾ ಅವರ ಗೈರುಹಾಜರಿ ದಂಪತಿಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿತ್ತು.
ಮೂರನೇ ದಾಂಪತ್ಯಕ್ಕೂ ಅಂತ್ಯ:
ಪವನ್ ಕಲ್ಯಾಣ್ ಅವರಿಗೆ ಇದು ಮೂರನೇ ವಿವಾಹವಾಗಿತ್ತು. 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದ ಅವರು, 2008ರಲ್ಲಿ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದಿದ್ದರು. ಬಳಿಕ ನಟಿ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ಈ ದಾಂಪತ್ಯವೂ ಹೆಚ್ಚು ಕಾಲ ಉಳಿಯದೆ ಇಬ್ಬರೂ ಪ್ರತ್ಯೇಕವಾಗಿದ್ದರು. ಪವನ್ ಮತ್ತು ರೇಣು ದೇಸಾಯಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಇದೀಗ ಅನ್ನಾ ಕೊನಿಡೇಲ ಅವರೊಂದಿಗಿನ 13 ವರ್ಷಗಳ ದಾಂಪತ್ಯವೂ ಅಂತ್ಯಗೊಂಡಿದೆ. ಆದರೆ ದಂಪತಿ ಪ್ರತ್ಯೇಕವಾಗಲು ನಿಖರವಾದ ಕಾರಣವೇನು ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಬೆಳವಣಿಗೆ ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
-
ಕ್ರೈಂ18 hours ago7 ಮಂದಿಯ ಕೊಲೆ : ಶಿರಾಡಿ ಘಾಟ್ ನಲ್ಲಿ ಕೊನೆಯ ಎರಡು ಶವ ಪತ್ತೆ..! ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ..!
-
ಸುಳ್ಯ20 hours ago
ಕಾಣಿಯೂರು : ಚಾರ್ವಕದ ಕೋಳಿ ಅಂಕದಲ್ಲಿ ಹಣದ ಪಣ; ಪೊಲೀಸರ ದಾಳಿಗೆ ಜೂಜಾಟಗಾರರ ಪಲಾಯನ!; ಓರ್ವನ ಬಂಧನ
-
ಮಂಗಳೂರು15 hours agoMangalore-ರಾತ್ರೋರಾತ್ರಿ ಸುಟ್ಟು ಕರಕಲಾದ ಕಾರು; ಹರೇಕಳದಲ್ಲಿ ನಿಗೂಢ ಘಟನೆಯ ಸುತ್ತ ಹಲವು ಅನುಮಾನ..!
-
ಅಂತರ ರಾಜ್ಯ17 hours agoSupreme Court-48 ಗಂಟೆ ನ್ಯಾಯಾಂಗ ಬಂಧನದಲ್ಲಿದ್ದರೆ ಸರ್ಕಾರಿ ನೌಕರ ಅಮಾನತು; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ
-
ಕಾರ್ಯಕ್ರಮಗಳು11 hours agoBolwar-ಬೊಳುವಾರಿನಲ್ಲಿ 32ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ
-
ಮಂಗಳೂರು17 hours agoMangalore-ಮಂಗಳೂರು: ಅತ್ತಾವರದ ಹೋಟೆಲ್ ಇಹಾಮ್ ಪ್ಯಾರಡೈಸ್ನಲ್ಲಿ ಬೆಂಕಿ ಅವಘಡ
-
ಸ್ಥಳೀಯ10 hours agoBeltangadi-ಪಟಾಕಿ ಮೇಲೆ ಕಾಲಿಟ್ಟ ಯುವಕ – ಪಾದ ಛಿದ್ರ..!
-
ಬಿಗ್ ನ್ಯೂಸ್15 hours agoKrupa Alva-ಸ್ಟಿಂಗ್ ಆಪರೇಷನ್ ಪ್ರಕರಣ: ಸೈಬರ್ ಕ್ರೈಂ ಪೊಲೀಸರ ವಿಚಾರಣೆಗೆ ಹಾಜರಾದ ಕೃಪಾ ಆಳ್ವ
















