ನಿಧನ ವಾರ್ತೆ
Shaji Kumar-ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ ನಿಧನ; ‘ಪುಲಿಮುರುಗನ್’, ‘ನರನ್’ ಚಿತ್ರಗಳಿಗೆ ಕ್ಯಾಮೆರಾ ಕೈಚಳಕ..!
ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ (57) ಅವರು ಮಂಗಳವಾರ ನಿಧನರಾಗಿದ್ದಾರೆ. ಮೋಹನ್‌ಲಾಲ್ ಅಭಿನಯದ ಸೂಪರ್‌ಹಿಟ್ ಸಿನಿಮಾಗಳಾದ ‘ಪುಲಿಮುರುಗನ್’, ‘ನರನ್’ ಹಾಗೂ ‘ತುಡರುಮ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಅದ್ಭುತ ದೃಶ್ಯಸೌಂದರ್ಯ ನೀಡಿದ್ದ ಅವರು, ತಮ್ಮ ಛಾಯಾಗ್ರಹಣದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.
ಕೊಚ್ಚಿ: ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ (57) ಅವರು ಮಂಗಳವಾರ ನಿಧನರಾಗಿದ್ದಾರೆ. ಮೋಹನ್‌ಲಾಲ್ ಅಭಿನಯದ ಸೂಪರ್‌ಹಿಟ್ ಸಿನಿಮಾಗಳಾದ ‘ಪುಲಿಮುರುಗನ್’, ‘ನರನ್’ ಹಾಗೂ ‘ತುಡರುಮ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಅದ್ಭುತ ದೃಶ್ಯಸೌಂದರ್ಯ ನೀಡಿದ್ದ ಅವರು, ತಮ್ಮ ಛಾಯಾಗ್ರಹಣದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.
ಆಲಪ್ಪುಳದಲ್ಲಿ ನಟ ದಿಲೀಪ್ ಅಭಿನಯದ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಶಾಜಿ ಕುಮಾರ್ ಅವರಿಗೆ ಶನಿವಾರ ರಾತ್ರಿ ಹೋಟೆಲ್ ಕೊಠಡಿಯಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ತಕ್ಷಣವೇ ಅವರು ಚಿತ್ರದ ನಿರ್ದೇಶಕ ಉಲ್ಲಾಸ್ ಕೃಷ್ಣ ಅವರಿಗೆ ವಿಷಯ ತಿಳಿಸಿದ್ದರು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರಂಭಿಕ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಅವರು ಸಹಜವಾಗಿ ಮಾತನಾಡುವ ಸ್ಥಿತಿಯಲ್ಲಿದ್ದರು. ಆದರೆ ಭಾನುವಾರ ರಾತ್ರಿ ಆರೋಗ್ಯ ಸ್ಥಿತಿ ದಿಢೀರ್ ಹದಗೆಟ್ಟಿತ್ತು. ಇದೀಗ ಅವರ ನಿಧನದ ಸುದ್ದಿ ಮಲಯಾಳಂ ಚಿತ್ರರಂಗಕ್ಕೆ ಆಘಾತ ಉಂಟುಮಾಡಿದೆ.
‘ಫೆಫ್ಕಾ’ (FEFKA) ನಿರ್ದೇಶಕರ ಸಂಘವು ಶಾಜಿ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮಲಯಾಳಂ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದೆ.
ಹಲವು ಸೂಪರ್‌ಹಿಟ್ ಚಿತ್ರಗಳಿಗೆ ದೃಶ್ಯಸೌಂದರ್ಯ ನೀಡಿದ್ದ ಛಾಯಾಗ್ರಾಹಕ
ಹಿರಿಯ ಛಾಯಾಗ್ರಾಹಕ ವಿಪಿನ್ ಮೋಹನ್ ಅವರ ಶಿಷ್ಯನಾಗಿ ವೃತ್ತಿಜೀವನ ಆರಂಭಿಸಿದ್ದ ಶಾಜಿ ಕುಮಾರ್, ಬಳಿಕ ಸ್ವತಂತ್ರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡರು. ಫಿಲ್ಮ್ ಕ್ಯಾಮೆರಾಗಳ ಕಾಲದಿಂದಲೇ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿದ್ದ ಅವರು, ಬೆಳಕಿನ ಸಂಯೋಜನೆ, ಬಣ್ಣಗಳ ಬಳಕೆ ಹಾಗೂ ಫ್ರೇಮಿಂಗ್‌ನಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ತಂತ್ರಜ್ಞಾನ ಬದಲಾದಂತೆ ಡಿಜಿಟಲ್ ಛಾಯಾಗ್ರಹಣಕ್ಕೂ ಹೊಂದಿಕೊಂಡು ತಮ್ಮದೇ ಶೈಲಿಯಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು.
ಜೋಶಿ, ಶಾಜಿ ಕೈಲಾಸ್, ವಿ.ಎಂ. ವಿನು, ಎಂ. ಪದ್ಮಕುಮಾರ್ ಹಾಗೂ ವೈಶಾಖ್ ಅವರಂತಹ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಅವರು, ತರುಣ್ ಮೂರ್ತಿ ಸೇರಿದಂತೆ ಯುವ ನಿರ್ದೇಶಕರ ಸಿನಿಮಾಗಳಿಗೂ ಛಾಯಾಗ್ರಹಣದ ಕೊಡುಗೆ ನೀಡಿದ್ದಾರೆ.
ಮೋಹನ್‌ಲಾಲ್ ಅಭಿನಯದ ‘ಅತಿಮನೋಹರಂ’ ಹಾಗೂ ಸುರೇಶ್ ಗೋಪಿ ಅವರ ‘ಒಟ್ಟಕೊಂಬನ್’ ಅವರ ಇತ್ತೀಚಿನ ಪ್ರಮುಖ ಸಿನಿಮಾಗಳಾಗಿವೆ.
ಪತ್ನಿ, ಇಬ್ಬರು ಪುತ್ರರನ್ನು ಅಗಲಿದ ಶಾಜಿ ಕುಮಾರ್
ಮೂಲತಃ ತಿರುವನಂತಪುರದವರಾದ ಶಾಜಿ ಕುಮಾರ್ ಕಳೆದ ಹಲವು ವರ್ಷಗಳಿಂದ ಪೆರುಂಬವೂರ್‌ನಲ್ಲಿ ನೆಲೆಸಿದ್ದರು. ಪತ್ನಿ ಸ್ಮಿತಾ ಹಾಗೂ ಪುತ್ರರಾದ ಆರ್ಯನ್ ಮತ್ತು ಸೂರ್ಯನ್ ಅವರನ್ನು ಅಗಲಿದ್ದಾರೆ.
‘ನರನ್’, ‘ಪುಲಿಮುರುಗನ್’, ‘ರಾಮಲೀಲಾ’, ‘ಒಡಿಯನ್’, ‘ಮಧುರ ರಾಜ’, ‘ಇಟ್ಟಿಮಾನಿ: ಮೇಡ್ ಇನ್ ಚೀನಾ’, ‘ನೈಟ್ ಡ್ರೈವ್’, ‘ಪತ್ತೊಂಬತ್ತಾಂ ನೂಡ್ಕೊಂಡು’, ‘ಬಾಂದ್ರಾ’, ‘ವನ್ಸ್ ಅಪಾನ್ ಎ ಟೈಮ್ ಇನ್ ಕೊಚ್ಚಿ’ ಹಾಗೂ ‘ತುಡರುಮ್’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದ ಅವರ ನಿಧನದಿಂದ ಮಲಯಾಳಂ ಚಿತ್ರರಂಗ ಒಬ್ಬ ಪ್ರತಿಭಾವಂತ ತಂತ್ರಜ್ಞನನ್ನು ಕಳೆದುಕೊಂಡಿದೆ.
ನಿಧನ ವಾರ್ತೆ
Accident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ. ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಸುಳ್ಯ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ.
ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ತಾಯಿ ಕಮರು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿಧನ ವಾರ್ತೆ
Pakistani TV anchor-ಪಾಕಿಸ್ತಾನದ ಖ್ಯಾತ ಟಿವಿ ಆ್ಯಂಕರ್ ನಿವಾಸದಲ್ಲೇ ಗುಂಡೇಟಿಗೆ ಬಲಿ: ಪತಿ ಪೊಲೀಸ್ ವಶಕ್ಕೆ
ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯ ಖ್ಯಾತ ಟಿವಿ ನಿರೂಪಕಿ ರಬಿಯಾ ಅಹ್ಸಾನ್ (41) ಅವರು ರಾವಲ್ಪಿಂಡಿಯ ಗುಲ್ಪನಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುತ್ತಿಗೆ ಹಾಗೂ ತಲೆಗೆ ಗುಂಡೇಟು ತಗುಲಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ರಾವಲ್ಪಿಂಡಿ: ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯ ಖ್ಯಾತ ಟಿವಿ ನಿರೂಪಕಿ ರಬಿಯಾ ಅಹ್ಸಾನ್ (41) ಅವರು ರಾವಲ್ಪಿಂಡಿಯ ಗುಲ್ಪನಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುತ್ತಿಗೆ ಹಾಗೂ ತಲೆಗೆ ಗುಂಡೇಟು ತಗುಲಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಜಾಬ್ ವಿಧಿವಿಜ್ಞಾನ ವಿಜ್ಞಾನ ಸಂಸ್ಥೆಯ (PFSA) ತಂಡ ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಬಿಯಾ ಅವರ ಪತಿ ಅಕ್ಸಾನ್ ತಾಹಿರ್ ಖಾನ್ ತಾನೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಗೆ ಬಳಸಲಾಗಿದೆ ಎಂದು ಶಂಕಿಸಲಾದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ. ವಿಚಾರಣೆ ವೇಳೆ ಪತಿ ಅಕ್ಸಾನ್, ತಾನು ಪಿಸ್ತೂಲ್ ಕೈಯಲ್ಲಿ ಹಿಡಿದುಕೊಂಡಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಹೇಳಿದ್ದಾನೆ. ಅಲ್ಲದೆ, ಪಿಸ್ತೂಲ್‌ನಲ್ಲಿ ಗುಂಡು ತುಂಬಿರುವುದು ತನಗೆ ತಿಳಿದಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ಘಟನೆ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಯಾರು ಈ ರಬಿಯಾ ಅಹ್ಸಾನ್?
ರಬಿಯಾ ಅಹ್ಸಾನ್ ಅವರು ಪಾಕಿಸ್ತಾನದ ’92 ನ್ಯೂಸ್’ ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿರಿಯ ಪತ್ರಕರ್ತರಾದ ಅಮೀರ್ ಮಾತೀನ್ ಮತ್ತು ರೌಫ್ ಕಾಸ್ರಾ ಅವರೊಂದಿಗೆ ಪ್ರಚಲಿತ ವಿದ್ಯಮಾನಗಳ ಕುರಿತ ಕಾರ್ಯಕ್ರಮವೊಂದನ್ನು ಸಹ-ನಿರೂಪಣೆ ಮಾಡುತ್ತಿದ್ದರು.
ಖ್ಯಾತ ನಿರೂಪಕಿಯ ಹತ್ಯೆಯ ಸುದ್ದಿ ಪಾಕಿಸ್ತಾನದ ಪತ್ರಿಕೋದ್ಯಮ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಅವರ ಸಹೋದ್ಯೋಗಿಗಳು ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಿಧನ ವಾರ್ತೆ
ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ

ಪುತ್ತೂರು: ಪುತ್ತೂರಿನ ಪ್ರಸಿದ್ಧ ಉದ್ಯಮಿ, ಶಿವಾನಿ ಬಾಟ್ಲಿಂಗ್ (ಮಹೇಶ್ವರ ಬಾಟ್ಲಿಂಗ್ ಕಂಪನಿ) ಹಾಗೂ ಸಂತೋಷ್ ವೈನ್ಸ್ ಸಂಸ್ಥೆಗಳ ಮಾಲೀಕ, ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಎ. (69) ಅವರು ನ. 7ರಂದು ನಿಧನರಾದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿಯೂ, ಪರಿವಾರ ಬಂಟರ ಸಂಘ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಉದ್ಯಮ ಕ್ಷೇತ್ರದ ಜತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದ ಅವರು ಪುತ್ತೂರಿನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.
ಮಂಗಳೂರಿನಲ್ಲಿ ನ. 4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಅವರು, ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ನೆಹರೂನಗರ ಕಾಯರ್ ಮಜಲು ನಿವಾಸಿಯಾಗಿದ್ದ ಅವರು ಪತ್ನಿ ನಿಶಾ, ಪುತ್ರಿಯರಾದ ನೇಹಾ ಸಂದೀಪ್ ನಾಯಕ್, ಸಮೀಕ್ಷಾ ಸುಶಿತ್ ನಾಯಕ್, ಪುತ್ರ ರಾಹುಲ್, ಸಹೋದರ ನವೀನ್ ನಾಯಕ್, ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ನ. 9ರಂದು ಅಂತ್ಯಸಂಸ್ಕಾರ
-
ನಿಧನ ವಾರ್ತೆ12 hours agoAccident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
-
ಕ್ರೈಂ17 hours agoMani-ಮಾಣಿ: ವ್ಯಕ್ತಿಯ ಮೇಲೆ ಜೀಪು ಹತ್ತಿಸಲು ಯತ್ನಿಸಿ ಕೊಲೆ ಬೆದರಿಕೆ; ಆರೋಪಿ ಜಗದೀಶ್ ಜೈನ್ ಬಂಧನ
-
ಅಂತರ ರಾಜ್ಯ18 hours agoSonia Gandhi autobiography-ಸೋನಿಯಾ ಗಾಂಧಿ ಆತ್ಮಕಥನ: ಹೆರಿಗೆ ಸಂದರ್ಭ ಮೊದಲ ಮಗು ಸಾವು : ನದಿಯಲ್ಲಿ ಕೊಳೆತ ಮೃತದೇಹ ಕಂಡು ಬೆಚ್ಚಿದ ದಂಪತಿ..!
-
ಅಂತರ ರಾಜ್ಯ17 hours agoMenaka Gandhi-ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಗಾಂಧಿ ಕುಟುಂಬದ ಒಳಜಗಳ ಬಯಲು: ಮನೇಕಾ ಗಾಂಧಿ ಜೊತೆಗಿನ ಸಂಬಂಧ ಹದಗೆಟ್ಟಿದ್ದೇಕೆ?
-
ಅಂತರ ರಾಜ್ಯ17 hours agoMysterious explosion-ಡಾ. ರಾಜ್ಕುಮಾರ್ ಸಂಬಂಧಿಕರ ಮನೆಯ ಮುಂದೆ ನಿಗೂಢ ಸ್ಫೋಟ: ಕಚ್ಚಾ ಬಾಂಬ್ ಶಂಕೆ, ಯುವಕರು ವಶಕ್ಕೆ..!
-
ಸ್ಥಳೀಯ15 hours agoSurabhi Goshala-ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ
-
ಶಿಕ್ಷಣ13 hours agoPuttur-ಪುತ್ತೂರು: ಕರ್ನಾಟಕ ಅಂಡರ್-23 ಮಹಿಳಾ ಕ್ರಿಕೆಟ್ ತಂಡಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನಘಾ ಆಯ್ಕೆ
-
ಉಡುಪಿ18 hours agoಬೆಂಗಳೂರು ಟು ಗೋವಾ ಇನ್ನು ವಂದೇ ಭಾರತ್ನಲ್ಲಿ ಪ್ರಯಾಣ: ನ.13ಕ್ಕೆ ಪ್ರಧಾನಿ ಮೋದಿ ಚಾಲನೆ
















