Connect with us

ನಿಧನ ವಾರ್ತೆ

Accident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು

Published

on



Ad Widget

Ad Widget

Ad Widget

Ad Widget

ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ. ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

Ad Widget

Ad Widget

Ad Widget

ಸುಳ್ಯ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಗ ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನಡಿಗೆ ಸಿಲುಕಿ ತಾಯಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸುಳ್ಯದ ದುಗಲಡ್ಕದಲ್ಲಿ ಸಂಭವಿಸಿದೆ.

Ad Widget

Ad Widget alt="Ad Widget"/>

Ad Widget

ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಮಕ್ಕಳಲ್ಲಿ ಒಬ್ಬರು ಹಿಂದಕ್ಕೆ ತೆಗೆಯುತ್ತಿದ್ದಾಗ, ಕಾರಿನ ಹಿಂದೆ ನಿಂತಿದ್ದ ತಾಯಿಯನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ತಾಯಿ ಕಮರು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

Ad Widget
Click to comment

Leave a Reply

ನಿಧನ ವಾರ್ತೆ

Suicide-ದೀಪಾವಳಿ ಸಂಭ್ರಮದಲ್ಲಿದ್ದ ಪಿಗ್ಮಿ ಸಂಗ್ರಹಕಾರ ಆತ್ಮಹತ್ಯೆಗೆ ಶರಣು

Published

on



Ad Widget

Ad Widget

Ad Widget

Ad Widget

ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11ರ ರಾತ್ರಿ ನಡೆದಿದೆ.

Ad Widget

Ad Widget

Ad Widget

ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11ರ ರಾತ್ರಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಬೆಳ್ತಂಗಡಿ: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11ರ ರಾತ್ರಿ ನಡೆದಿದೆ.

Ad Widget

Ad Widget <> Ad Widget

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿಯಾಗಿದ್ದ ಪುನೀತ್ ಅವರು ಅವಿವಾಹಿತರಾಗಿದ್ದರು. ಪಿಗ್ಮಿ ಸಂಗ್ರಹಕಾರರ ಕೆಲಸಕ್ಕೆ ರಜೆ ಹಾಕಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಂಬಂಧಿಕರು ಹಾಗೂ ಸಹೋದರರೊಂದಿಗೆ ಉತ್ಸಾಹದಿಂದ ಕಾಲ ಕಳೆದಿದ್ದರು. ಆದರೆ, ನ.11ರ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



Ad Widget

ಮೃತರು ತಂದೆ ಸೇಸಪ್ಪ ಗೌಡ, ತಾಯಿ ವನಜಾ, ಸಹೋದರ ಶೇಖರ್, ಸಹೋದರಿ ದಿವ್ಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Ad Widget

Ad Widget

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget
Continue Reading

ನಿಧನ ವಾರ್ತೆ

Arrested-ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ: ಯುವಕನನ್ನು ತಳ್ಳಿ ಕೊಂದ ಆರೋಪ; ಇಬ್ಬರ ಬಂಧನ-ಅಪ್ರಾಪ್ತ ವಶಕ್ಕೆ..!

Published

on



Ad Widget

Ad Widget

Ad Widget

Ad Widget

ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದಿದೆ. ಮೃತನನ್ನು ಜುಹು ನಿವಾಸಿ ನನು ಅಲಿಯಾಸ್ ಶುಭಂಕರ್ ಮುಖಿಯಾ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

ಮುಂಬೈ: ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತನನ್ನು ಜುಹು ನಿವಾಸಿ ನನು ಅಲಿಯಾಸ್ ಶುಭಂಕರ್ ಮುಖಿಯಾ ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಲಕ್ಷ್ಮೀ ಪೂಜೆಯ ದಿನ ವಿಕ್ರಮ್ ಮೈದಾನ ರಸ್ತೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.



Ad Widget

ಬಂಧಿತರನ್ನು ವಿಲೆ ಪಾರ್ಲೆ ಪಶ್ಚಿಮದ ನೆಹರೂ ನಗರದ ನಿವಾಸಿಗಳಾದ ರಾಹುಲ್ ಸಂತೋಷ್ ಮಂಡಲ್ (23) ಮತ್ತು ರವಿಕುಮಾರ್ ಶರ್ವಣನ್ ದೇವೇಂದ್ರ (22) ಎಂದು ಗುರುತಿಸಲಾಗಿದೆ.

Ad Widget

Ad Widget

ಪೊಲೀಸರ ಪ್ರಕಾರ, ಆರೋಪಿಗಳು ರಸ್ತೆ ಬದಿಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಅಲ್ಲೇ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನದ ಸಮೀಪ ಪಟಾಕಿ ಸಿಡಿಸದಂತೆ ಶುಭಂಕರ್ ಮನವಿ ಮಾಡಿದ್ದ. ಆದರೆ ಆತನ ಮನವಿಯನ್ನು ನಿರ್ಲಕ್ಷಿಸಿದ ಆರೋಪಿಗಳು ಪಟಾಕಿ ಸಿಡಿಸುವುದನ್ನು ಮುಂದುವರಿಸಿದ್ದರು.

ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಗಲಾಟೆ ತೀವ್ರಗೊಂಡಿದೆ. ಈ ವೇಳೆ ಆರೋಪಿಗಳು ಶುಭಂಕರ್ ಮೇಲೆ ಹಲ್ಲೆ ನಡೆಸಿದ್ದು, ಅವರಲ್ಲೊಬ್ಬ ಬಲವಾಗಿ ತಳ್ಳಿದ್ದಾನೆ ಎನ್ನಲಾಗಿದೆ. ಇದರಿಂದ ನೆಲಕ್ಕೆ ಬಿದ್ದ ಯುವಕನಿಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ.

ತಕ್ಷಣ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಘಟನೆಯ ವೇಳೆ ಮೃತನೊಂದಿಗಿದ್ದ ಸ್ನೇಹಿತ ವಿವೇಕ್ ಸಿಂಗ್ ನೀಡಿದ ದೂರಿನ ಮೇರೆಗೆ ಜುಹು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಳಿಕ ಆರೋಪಿಗಳು ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇಬ್ಬರು ವಯಸ್ಕ ಆರೋಪಿಗಳನ್ನು ಬಂಧಿಸಿ, ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ನಿಧನ ವಾರ್ತೆ

Shaji Kumar-ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ ನಿಧನ; ‘ಪುಲಿಮುರುಗನ್’, ‘ನರನ್’ ಚಿತ್ರಗಳಿಗೆ ಕ್ಯಾಮೆರಾ ಕೈಚಳಕ..!

Published

on



Ad Widget

Ad Widget

Ad Widget

Ad Widget

ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ (57) ಅವರು ಮಂಗಳವಾರ ನಿಧನರಾಗಿದ್ದಾರೆ. ಮೋಹನ್‌ಲಾಲ್ ಅಭಿನಯದ ಸೂಪರ್‌ಹಿಟ್ ಸಿನಿಮಾಗಳಾದ ‘ಪುಲಿಮುರುಗನ್’, ‘ನರನ್’ ಹಾಗೂ ‘ತುಡರುಮ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಅದ್ಭುತ ದೃಶ್ಯಸೌಂದರ್ಯ ನೀಡಿದ್ದ ಅವರು, ತಮ್ಮ ಛಾಯಾಗ್ರಹಣದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.

Ad Widget

Ad Widget

Ad Widget

ಕೊಚ್ಚಿ: ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ (57) ಅವರು ಮಂಗಳವಾರ ನಿಧನರಾಗಿದ್ದಾರೆ. ಮೋಹನ್‌ಲಾಲ್ ಅಭಿನಯದ ಸೂಪರ್‌ಹಿಟ್ ಸಿನಿಮಾಗಳಾದ ‘ಪುಲಿಮುರುಗನ್’, ‘ನರನ್’ ಹಾಗೂ ‘ತುಡರುಮ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಅದ್ಭುತ ದೃಶ್ಯಸೌಂದರ್ಯ ನೀಡಿದ್ದ ಅವರು, ತಮ್ಮ ಛಾಯಾಗ್ರಹಣದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.

Ad Widget

Ad Widget alt="Ad Widget"/>

Ad Widget

ಆಲಪ್ಪುಳದಲ್ಲಿ ನಟ ದಿಲೀಪ್ ಅಭಿನಯದ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಶಾಜಿ ಕುಮಾರ್ ಅವರಿಗೆ ಶನಿವಾರ ರಾತ್ರಿ ಹೋಟೆಲ್ ಕೊಠಡಿಯಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ತಕ್ಷಣವೇ ಅವರು ಚಿತ್ರದ ನಿರ್ದೇಶಕ ಉಲ್ಲಾಸ್ ಕೃಷ್ಣ ಅವರಿಗೆ ವಿಷಯ ತಿಳಿಸಿದ್ದರು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

Ad Widget

Ad Widget <> Ad Widget

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರಂಭಿಕ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಅವರು ಸಹಜವಾಗಿ ಮಾತನಾಡುವ ಸ್ಥಿತಿಯಲ್ಲಿದ್ದರು. ಆದರೆ ಭಾನುವಾರ ರಾತ್ರಿ ಆರೋಗ್ಯ ಸ್ಥಿತಿ ದಿಢೀರ್ ಹದಗೆಟ್ಟಿತ್ತು. ಇದೀಗ ಅವರ ನಿಧನದ ಸುದ್ದಿ ಮಲಯಾಳಂ ಚಿತ್ರರಂಗಕ್ಕೆ ಆಘಾತ ಉಂಟುಮಾಡಿದೆ.



Ad Widget

‘ಫೆಫ್ಕಾ’ (FEFKA) ನಿರ್ದೇಶಕರ ಸಂಘವು ಶಾಜಿ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮಲಯಾಳಂ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದೆ.

Ad Widget

Ad Widget

ಹಲವು ಸೂಪರ್‌ಹಿಟ್ ಚಿತ್ರಗಳಿಗೆ ದೃಶ್ಯಸೌಂದರ್ಯ ನೀಡಿದ್ದ ಛಾಯಾಗ್ರಾಹಕ
ಹಿರಿಯ ಛಾಯಾಗ್ರಾಹಕ ವಿಪಿನ್ ಮೋಹನ್ ಅವರ ಶಿಷ್ಯನಾಗಿ ವೃತ್ತಿಜೀವನ ಆರಂಭಿಸಿದ್ದ ಶಾಜಿ ಕುಮಾರ್, ಬಳಿಕ ಸ್ವತಂತ್ರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡರು. ಫಿಲ್ಮ್ ಕ್ಯಾಮೆರಾಗಳ ಕಾಲದಿಂದಲೇ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿದ್ದ ಅವರು, ಬೆಳಕಿನ ಸಂಯೋಜನೆ, ಬಣ್ಣಗಳ ಬಳಕೆ ಹಾಗೂ ಫ್ರೇಮಿಂಗ್‌ನಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ತಂತ್ರಜ್ಞಾನ ಬದಲಾದಂತೆ ಡಿಜಿಟಲ್ ಛಾಯಾಗ್ರಹಣಕ್ಕೂ ಹೊಂದಿಕೊಂಡು ತಮ್ಮದೇ ಶೈಲಿಯಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು.

ಜೋಶಿ, ಶಾಜಿ ಕೈಲಾಸ್, ವಿ.ಎಂ. ವಿನು, ಎಂ. ಪದ್ಮಕುಮಾರ್ ಹಾಗೂ ವೈಶಾಖ್ ಅವರಂತಹ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಅವರು, ತರುಣ್ ಮೂರ್ತಿ ಸೇರಿದಂತೆ ಯುವ ನಿರ್ದೇಶಕರ ಸಿನಿಮಾಗಳಿಗೂ ಛಾಯಾಗ್ರಹಣದ ಕೊಡುಗೆ ನೀಡಿದ್ದಾರೆ.

ಮೋಹನ್‌ಲಾಲ್ ಅಭಿನಯದ ‘ಅತಿಮನೋಹರಂ’ ಹಾಗೂ ಸುರೇಶ್ ಗೋಪಿ ಅವರ ‘ಒಟ್ಟಕೊಂಬನ್’ ಅವರ ಇತ್ತೀಚಿನ ಪ್ರಮುಖ ಸಿನಿಮಾಗಳಾಗಿವೆ.

ಪತ್ನಿ, ಇಬ್ಬರು ಪುತ್ರರನ್ನು ಅಗಲಿದ ಶಾಜಿ ಕುಮಾರ್
ಮೂಲತಃ ತಿರುವನಂತಪುರದವರಾದ ಶಾಜಿ ಕುಮಾರ್ ಕಳೆದ ಹಲವು ವರ್ಷಗಳಿಂದ ಪೆರುಂಬವೂರ್‌ನಲ್ಲಿ ನೆಲೆಸಿದ್ದರು. ಪತ್ನಿ ಸ್ಮಿತಾ ಹಾಗೂ ಪುತ್ರರಾದ ಆರ್ಯನ್ ಮತ್ತು ಸೂರ್ಯನ್ ಅವರನ್ನು ಅಗಲಿದ್ದಾರೆ.

‘ನರನ್’, ‘ಪುಲಿಮುರುಗನ್’, ‘ರಾಮಲೀಲಾ’, ‘ಒಡಿಯನ್’, ‘ಮಧುರ ರಾಜ’, ‘ಇಟ್ಟಿಮಾನಿ: ಮೇಡ್ ಇನ್ ಚೀನಾ’, ‘ನೈಟ್ ಡ್ರೈವ್’, ‘ಪತ್ತೊಂಬತ್ತಾಂ ನೂಡ್ಕೊಂಡು’, ‘ಬಾಂದ್ರಾ’, ‘ವನ್ಸ್ ಅಪಾನ್ ಎ ಟೈಮ್ ಇನ್ ಕೊಚ್ಚಿ’ ಹಾಗೂ ‘ತುಡರುಮ್’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದ ಅವರ ನಿಧನದಿಂದ ಮಲಯಾಳಂ ಚಿತ್ರರಂಗ ಒಬ್ಬ ಪ್ರತಿಭಾವಂತ ತಂತ್ರಜ್ಞನನ್ನು ಕಳೆದುಕೊಂಡಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!