Connect with us

ಕಾರ್ಕಳ

Parashurama Statue | ಕಾರ್ಕಳ : ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೊಂಡ ಪರಶುರಾಮ ಪ್ರತಿಮೆಯಲ್ಲಿ ಈಗ ಇರೋದು ಕೇವಲ ಪಾದದಿಂದ ಗಂಟಿನವರೆಗೆ ಮಾತ್ರ..! ಡ್ರೋನ್ ಕ್ಯಾಮರದಲ್ಲಿ ಹೊರ ಬಿತ್ತು ರಹಸ್ಯ

Ad Widget

Ad Widget

Ad Widget

Ad Widget

ಕಾರ್ಕಳ: ಶಾಸಕ ಆಗಿನ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ 14.42 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಕೈಯಲ್ಲಿ ಉದ್ಘಾಟನೆಗೊಂಡ ಕಾರ್ಕಳದ ಬೈಲೂರಿನ ಉಮಿಕಲ್ಲು ಬೆಟ್ಟದಲ್ಲಿ ಪರಶುರಾಮನ (Parashurama Statue) ಮೂರ್ತಿಯ ರಹಸ್ಯ ಡ್ರೋನ್ ಕ್ಯಾಮರದಲ್ಲಿ ಹೊರ ಬಿದ್ದಿದೆ.

Ad Widget

Ad Widget

Ad Widget

ಸಿಎಂ ಬೊಮ್ಮಯಿ ಸಮ್ಮುಖದಲ್ಲೇ ಪ್ರತಿಮೆ ನಿರ್ಮಿಸಿದವರಿಗೆ ಸನ್ಮಾನ ಎಂದ ಮಾಜಿ ಸಚಿವ ಸುನೀಲ್ ಕುಮಾರ್ ಭಾಷಣ ಇದೀಗ ವೈರಲ್ ಆಗ್ತಿದೆ. ಆದರೆ ಚುನಾವಣೆಯ ತುರತುರಿಯಲ್ಲಿ ಮೂರ್ತಿ ಉದ್ಘಾಟಿಸಿದ ಶಾಸಕ ಸುನೀಲ್ ಕುಮಾರ್ ವಿರುದ್ಧ ಕಾಂಗ್ರೇಸ್‍ನವರ ಮೌನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ .

Ad Widget

ಮೂರ್ತಿ ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ಕಾಂಗ್ರೆಸ್‌ ನಾಯಕರು ಶನಿವಾರ ಭೇಟಿ ನೀಡಿದರು.

Ad Widget

Ad Widget

ಈ ಸಂದರ್ಭ ಕಾಂಗ್ರೆಸ್‌ ನಾಯಕ ಉದಯ್‌ ಶೆಟ್ಟಿ ಮುನಿಯಾಲು ಮಾತನಾಡಿ, ಪರಶುರಾಮನ ಪಾದ ಹಾಗೂ ಗಂಟಿನ ತನಕದ ಭಾಗ ಮಾತ್ರ ಇಲ್ಲಿ ಉಳಿದಿದೆ. ಬೇರೆ ಯಾವ ಅಂಗವೂ ಇಲ್ಲಿಲ್ಲ. ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರ 15 ಟನ್‌ ಭಾರ ಹಾಗೂ 33 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಕನಿಷ್ಠ 2 ವರ್ಷ ಬೇಕಾಗುತ್ತದೆ. ಆದರೆ ಇದು ಕೇವಲ ಮೂರು ತಿಂಗಳಲ್ಲಿ ಆದ ಮೂರ್ತಿಯಾಗಿದೆ.

Ad Widget

Ad Widget

Ad Widget

ನವೆಂಬರ್‌ 30ರೊಳಗೆ ಕಾಮಗಾರಿ ಮುಗಿಸಲಿಕ್ಕೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ನಮಗೆ ಯಾವುದೇ ಅವಸರವಿಲ್ಲ. ನಿಧಾನಗತಿಯಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆದು ನಿಜವಾದ ಕಂಚಿನ ಮೂರ್ತಿಯ ನಿರ್ಮಾಣವಾಗಲಿ ಎಂದು ಆಗ್ರಹಿಸಿದ್ದಾರೆ.

ಬೈಲೂರಿನಲ್ಲಿ ಪ್ರವಾಸೋದ್ಯಮ ಬೆಳೆಯಬೇಕು, ಕಂಚಿನ ಪ್ರತಿಮೆ ಇಲ್ಲಿ ಪ್ರತಿಷ್ಠಾಪನೆ ಆಗಬೇಕು, ಅನ್ಯ ರಾಜ್ಯದ ಜನರು ಬಂದು ಪರಶುರಾಮರ ಪ್ರತಿಮೆಯನ್ನು ನೋಡಬೇಕು ಎನ್ನುವುದು ನಮ್ಮ ಆಸೆ ಕೂಡ ಎಂದವರು ತಿಳಿಸಿದರು.

ಉಡುಪಿಯ ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ವಹಿಸಿಕೊಂಡಿದೆ. ಆದರೆ ಅವರು ತಾಂತ್ರಿಕವಾಗಿ ಯೋಗ್ಯರಲ್ಲ. ಹಾಗಾಗಿ ಏಜೆನ್ಸಿಯನ್ನು ಬದಲಾಯಿಸಿ ಎಂದರು.

ಊರಿನವರು ಹಾಗೂ ಹಿರಿಯರ ಜತೆ ಸೇರಿಕೊಂಡು ಸತ್ಯ ಶೋಧನ ತಂಡವನ್ನು ರಚಿಸಿ ಅದರ ಮೂಲಕ ಕಾಮಗಾರಿಯಾಗಲಿ ಎಂದವರು ಆಗ್ರಹಿಸಿದರು.

Click to comment

Leave a Reply

ಕಾರ್ಕಳ

saanvi rao ದ್ವಿತೀಯ ಪಿ.ಯು.ಸಿ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ:ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ, ಭಕ್ತಿ ಕಾಮತ್ ರಾಜ್ಯಕ್ಕೆ ಐದನೇ ರ‍್ಯಾಂಕ್

Ad Widget

Ad Widget

Ad Widget

Ad Widget

ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದ್ದು ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಸಂಸ್ಕೃತ ಮತ್ತು ಇ.ಬಿ.ಎ.ಸಿ ಯಲ್ಲಿ ತಲಾ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್ ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು.

Ad Widget

Ad Widget

Ad Widget

ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 03 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಇವರು ಉತ್ತರಕನ್ನಡದ ಹೊನ್ನಾವರದ ಜಗದೀಶ್ ರಾವ್ ಬಿ ಎಸ್ ಮತ್ತು ವಿನುತಾ ಭಟ್ ದಂಪತಿಗಳ ಸುಪುತ್ರಿ.

Ad Widget

ವಾಣಿಜ್ಯ ವಿಭಾಗದ ಭಕ್ತಿ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ರ‍್ಯಾಂಕ್, ವಿಜ್ಞಾನ ವಿಭಾಗದ ಸಾಗರ್ ಎಸ್. ಟಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೆಯೇ ವಾಣಿಜ್ಯ ವಿಭಾಗದ ವಿನಯ್ ಪ್ರಶಾಂತ್ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ.

Ad Widget

Ad Widget

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

Ad Widget

Ad Widget

Ad Widget
Continue Reading

ಶಿಕ್ಷಣ

Karkala-ಕಾರ್ಕಳ: ದ್ವಿತೀಯ ಪಿಯುಸಿಯಲ್ಲಿ ಶೇ 100 ಫಲಿತಾಂಶ ಪಡೆದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ-ರಾಜ್ಯಮಟ್ಟದಲ್ಲಿ 6 Rank ಪಡೆದು ಮಹತ್ವದ ಸಾಧನೆ

Ad Widget

Ad Widget

Ad Widget

Ad Widget

ಕಾರ್ಕಳದಲ್ಲಿರುವ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನವು ದ್ವಿತೀಯ ಪಿಯುಸಿಯಲ್ಲಿ ಶೇ 100 ಫಲಿತಾಂಶ ಗಳಿಸಿದ್ದು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಾನ್ವಿ ರಾವ್‌ 595 ಅಂಕಗಳೊಂದಿಗೆ ರಾಜ್ಯದಲ್ಲಿ 3ನೇಯ Rank ಗಳಿಸಿದ್ದಾರೆ.

Ad Widget

Ad Widget

Ad Widget

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಭಾರತೀ ಕಾಮತ್‌ 592 ಅಂಕ ಹಾಗೂ ಎ.ಎಸ್. ಚಿನ್ಮಯ 592 ಅಂಗಳೊಂದಿಗೆ 6ನೇಯ Rank ಗಳಿಸಿದ್ದಾರೆ. ಎ. ಅನನ್ಯ ಜೈನ್‌ 589 ಅಂಕಗಳೊಂದಿಗೆ 9ನೇಯ Rank ಗಳಿಸಿದ್ದಾರೆ.

Ad Widget

ವಿಜ್ಞಾನ ವಿಭಾಗದಲ್ಲಿ ಸಿಂಚನ ಆರ್. ಎಚ್. 592 ಅಂಕಗಳೊಂದಿಗೆ 7ನೇ Rank ಮತ್ತು ಸುಜಿತ್‌ ಬಿ.ಕೆ. ಹಾಗೂ ಹಂಸಿನಿ ವಿ. 591 ಅಂಕ ಗಳಿಸಿ 8ನೇ Rank ಗಳಿಸಿದ್ದಾರೆ. ಪ್ರೇಮ್‌ ಸಾಗರ್‌ ಪಾಟೀಲ್‌ ಹಾಗೂ ವರ್ಷ ಎಚ್.ವಿ. 589 ಅಂಕ ಪಡೆದು 10ನೇಯ Rank ಗಳಿಸಿದ್ದಾರೆ.

Ad Widget

Ad Widget
Continue Reading

ಕಾರ್ಕಳ

ಕಾರ್ಕಳಕ್ಕೆ ಕಾಲಿಟ್ಟ ಪ್ರತಿಷ್ಠಿತ ವಿದ್ಯಾಮಾತಾ ಅಕಾಡೆಮಿ : ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಎಳೆಯ ವಯಸ್ಸಿನಲ್ಲಿಯೇ ಅರಿವು ಬೆಳೆಸಿಕೊಂಡರೆ ಪ್ರತೀ ಇಲಾಖೆಗಳಲ್ಲೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಕಾಣಬಹುದು – ಶಾಖಾ ಕಚೇರಿ ಉದ್ಘಾಟಿಸಿ ವಜ್ರದೇಹಿ ಶ್ರೀ

Ad Widget

Ad Widget

Ad Widget

Ad Widget

ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ತನ್ನ ಎರಡನೇ ಶಾಖೆಯನ್ನು ಕಾರ್ಕಳದಲ್ಲಿ ತೆರೆದಿದೆ.

Ad Widget

Ad Widget

Ad Widget

ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರನಂದ ಶ್ರೀಗಳು “ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕತೆಯ ಬಗ್ಗೆ ಯುವ ಜನತೆಯಲ್ಲಿ ಅರಿವನ್ನು ಮೂಡಿಸುವುದು ತೀರಾ ಅನಿವಾರ್ಯವಾಗಿದ್ದು ಈ ಅರಿವನ್ನು ಎಳೆಯ ವಯಸ್ಸಿನಲ್ಲಿಯೇ ಬೆಳೆಸಿಕೊಂಡರೆ ಪ್ರತೀ ಇಲಾಖೆಗಳಲ್ಲೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಕಾಣಬಹುದು” ಎಂದು ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿರುವ ವಿದ್ಯಾಮಾತಾ ಅಕಾಡೆಮಿ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ನುಡಿಯನ್ನಾಡಿ ಸಂಸ್ಥೆಗೆ ಶುಭಾಶೀರ್ವಾದ ನೀಡಿದರು.

Ad Widget

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮೃತ ಭಾರತಿ ಟ್ರಸ್ಟ್ ಇದರ ಕಾರ್ಯದರ್ಶಿಗಳಾದ ಶ್ರೀ ಗುರುದಾಸ್ ಶೆಣೈ ರವರು ಮಾತನಾಡಿ ಗ್ರಾಮೀಣ ಪ್ರದೇಶಗಳಿಂದ ಹಲವು ಅಧಿಕಾರಿಗಳನ್ನು ನೀಡಿದ ವಿದ್ಯಾಮಾತಾ ಅಕಾಡೆಮಿಯು ಉಡುಪಿ ಜಿಲ್ಲೆಗೂ ಕಾಲಿಟ್ಟದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

Ad Widget

Ad Widget

ಮತ್ತೊರ್ವ ಅತಿಥಿಯಾದ ಉಜ್ವಲ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಶೆಟ್ಟಿರವರು ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆಯ ಕೌಶಲ್ಯ ಸಾಮರ್ಥ್ಯವೂ ಕೂಡ ಬಹಳ ಮುಖ್ಯ ಎಂಬುದನ್ನು ಈ ಸಂಸ್ಥೆ ಈಗಾಗಲೇ ಸಾಬೀತು ಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Ad Widget

Ad Widget

Ad Widget

ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜ್ ಹಾಗೂ ಶ್ರೀ ವೆಂಕಟರಮಣ ಮಹಿಳಾ ಕಾಲೇಜ್ ನಲ್ಲಿ ಒಟ್ಟು 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರೊ.ಮಿತ್ರ ಪ್ರಭಾ ಹೆಗ್ಡೆ ಮತ್ತು ಶೈಕ್ಷಣಿಕ ಹಾಗೂ ಕನ್ನಡ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ಜ್ಯೋತಿ ಗುರುಪ್ರಸಾದ್ ರವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನೆಲೆಯಲ್ಲಿ ಮಾತನಾಡಿ ಸ್ವಾಗತಿಸಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಸಂಸ್ಥೆಯ ಏಳಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು. ಎ.10ರಿಂದ VAO ಮತ್ತು PDO ನೇಮಕಾತಿಯ ಆನ್ಲೈನ್ ತರಬೇತಿಯು ಪ್ರಾರಂಭವಾಗಲಿದೆ ಎಂದು ಘೋಷಿಸಿದರು.

ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆಯ ಸಂಚಾಲಕರಾದ ಶ್ರೀಮತಿ ರಮಿತ ಶೈಲೇಂದ್ರ ರಾವ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಅಭ್ಯಾಗತರನ್ನು ಅಭಿನಂದಿಸಿದರು, ನೂತನ ಶಾಖೆಯ ಶುಭಾರಂಭದ ಸುಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರರು, ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading