Bus Accident ಮೂಡುಬಿದಿರೆ: ಬೆಂಗಳೂರಿಗೆ 27 ಪ್ರಯಾಣಿಕರನ್ನು ಕರೆದುಕೊಂಡು ಹೋಗತ್ತಿದ್ದ ಖಾಸಗಿ ಬಸ್ಸು ಮೂಡುಬಿದಿರೆ ಸಮೀಪದ ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಶುಕ್ರವಾರ ರಾತ್ರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಹಲವು ಮಂದಿಗೆ ಗಾಯವಾಗಿದೆ.
ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಅಪಘಾತಕ್ಕಿಡಾದ ಬಸ್ಸು. ಚಾಲಕನ ನಿಯಂತ್ರಣ ತಪ್ಪಿ ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಬಸ್ಸು ಅಪಘಾತಕ್ಕಿಡಾಗಿದೆ ಎನ್ನಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಲೇ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಊರವರು ಜಮಾಯಿಸಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಸೇವೆಯ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.



