Connect with us

ಕೊಡಗು

Kodagu Rain | ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ : ಜು .7 ರಂದೂ ಶಾಲಾ ಕಾಲೇಜು ರಜೆ – ಸಂಪರ್ಕ ಕಡಿತದ ಭೀತಿಯಲ್ಲಿ ಸಂಪಾಜೆ ಘಾಟ್…!

Ad Widget

Ad Widget

Ad Widget

Ad Widget

ಕೊಡಗು ಜಿಲ್ಲೆಯಲ್ಲಿ (Kodagu Rain) ಮಳೆ ಬಿರುಸು ಪಡೆದಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಆಲರ್ಟ್ ಘೋಷಣೆ ಮಾಡಿದೆ. ಕಳೆದ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕು ಪಡೆದುಕೊಂಡಿದೆ.

Ad Widget

Ad Widget

Ad Widget

ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗಾಳಿಬೀಡು, ವಿರಾಜಪೇಟೆ ಸೇರಿದಂತೆ ವಿವಿಧ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

Ad Widget

ಕೊಡಗಿನ ಹಲವು ಭಾಗಗಳಲ್ಲಿ ಮಳೆ ಜೊತೆಗೆ ಗಾಳಿಯೂ ಹೆಚ್ಚಾಗಿದ್ದು, ಮರಗಳು ಧರೆಗುರುಳಿವೆ. ಬೋಹಿಕೇರಿ ಮತ್ತು ಕುಶಾಲನಗರಕ್ಕೆ ತೆರಳುವ ರಸ್ತೆಯಲ್ಲಿ ಮರ ಬಿದ್ದಿದ್ದು, ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಬಳಿಕ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ.

Ad Widget

Ad Widget

ಕೊಡಗು ಜಿಲ್ಲೆಯಾದ್ಯಂತ ಶಾಲಾ ಕಾಲೇಜಿಗೆ ಜು.7 ರಂದು ರಜೆ ಘೋಷಣೆಯಾಗಿದೆ.

Ad Widget

Ad Widget

Ad Widget

ಹೆದ್ದಾರಿ ಕುಸಿಯುವ ಭೀತಿ :-
ಭಾರಿ ಮಳೆ ಹಿನ್ನೆಲೆಯಲ್ಲಿ ಮಾಣಿ ಮೈಸೂರು ಹೆದ್ದಾರಿಯ ಕೊಡಗು- ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖೆ ಕಚೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಸಲ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.


ಕಳೆದ ಮಳೆಗಾಲದಲ್ಲೂ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟಿತ್ತು. ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬದಿಯಲ್ಲೇ ಮತ್ತೊಂದು ರಸ್ತೆಯನ್ನು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು.

ಇದೀಗ ಮತ್ತೊಮ್ಮೆ ಎರಡು ಜಿಲ್ಲೆಯ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

Click to comment

Leave a Reply

ಅಪರಾಧ

Daughter-in-law-ಅತ್ತೆಯನ್ನು ಕೊಂದು ಸಹಜ ಸಾವು ಎಂಬಂತೆ ಬಿಂಬಿಸಿದ ಸೊಸೆ – 15 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ

Ad Widget

Ad Widget

Ad Widget

Ad Widget

ಮಡಿಕೇರಿ: ಸೊಸೆಯೊಬ್ಬಳು ಅತ್ತೆಯನ್ನು ಕೊಲೆಗೈದು ಬಳಿಕ ಸಹಜ ಸಾವು ಎಂದು ಬಿಂಬಿಸಿದ್ದ ಆರೋಪದಡಿ ಆಕೆಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಅವರನ್ನು ಕೊಲೆಗೈದ ಸೊಸೆ ಬಿಂದು (26) ಬಂಧಿತ ಆರೋಪಿ.

Ad Widget

Ad Widget

Ad Widget

ಘಟನೆ ಹಿನ್ನೆಲೆ:
ಮರಗೋಡಿನಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಪತಿ ಪ್ರಸನ್ನ, ಒಂದು ವರ್ಷದ ಪುತ್ರಿ ಹಾಗೂ ಅತ್ತೆ ಪೂವಮ್ಮ ಜೊತೆಗೆ ಬಿಂದು ವಾಸವಾಗಿದ್ದು. ಅತ್ತೆ-ಸೊಸೆ ನಡುವೆ ಹಲವು ವರ್ಷಗಳಿಂದ ಮನಸ್ತಾಪ ಇತ್ತು. ಇಬ್ಬರ ನಡುವೆ ಕಲಹವೂ ಆಗಾಗ್ಗೆ ನಡೆಯುತ್ತಿತ್ತು ಎನ್ನಲಾಗಿದೆ. ಏ.15 ರಂದು ಪತಿ ಮೌಲ್ಯಮಾಪನ ಕರ್ತವ್ಯಕ್ಕಾಗಿ ಮಡಿಕೇರಿಗೆ ತೆರಳಿದ್ದ ಸಂದರ್ಭ ಪೂವಮ್ಮ ಕುಸಿದು ಬಿದ್ದಿರುವುದಾಗಿ ಪತಿ ಪ್ರಸನ್ನ ಅವರಿಗೆ ಬೆಳಗ್ಗೆ ಬಿಂದು ಕರೆ ಮಾಡಿ ತಿಳಿಸಿದ್ದಾಳೆ. ಅವರು ಬಂದು ನೋಡುವಷ್ಟರಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಂತರ ಮೃತ ಪೂವಮ್ಮ ಅವರನ್ನು ಅಗ್ನಿಸ್ಪರ್ಶದ ಮೂಲಕ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಪೂವಮ್ಮ ಹೃದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಆ ಕ್ಷಣದಲ್ಲಿ ಸಾವಿನ ಕುರಿತು ಹೆಚ್ಚಿನ ಅನುಮಾನವೂ ಕುಟುಂಬಸ್ಥರಲ್ಲಿ ಮೂಡಿರಲಿಲ್ಲ. ಅಂತ್ಯಸಂಸ್ಕಾರದ ಬಳಿಕ ಗ್ರಾಮದಲ್ಲಿ ಸಾವಿನ ಕುರಿತು ಊಹಾಪೋಹಗಳು ಕೇಳಿ ಬರುತ್ತಿದ್ದವು.

Ad Widget

ದಿನಕಳೆದಂತೆ ಪೂವಮ್ಮ ಸಾವಿನ ಬಗ್ಗೆ ಕುಟುಂಬಸ್ಥರಿಗೆ ತೀವ್ರ ಅನುಮಾನ ಮೂಡಿದೆ. ಅದರಲ್ಲೂ ಪತಿ ಪ್ರಸನ್ನ ಅವರಿಗೆ ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲೆ ರಕ್ತದ ಕಲೆ, ಮುಖದಲ್ಲಿ ಕೆಲವೊಂದು ಪರಚಿದ ಕಲೆಗಳು ಗಮನಿಸಿ ಸಂಶಯ ಮತ್ತಷ್ಟು ಹೆಚ್ಚಾಗಿದೆ. ಇದರೊಂದಿಗೆ ಬಿಂದು ನಡವಳಿಕೆಯಲ್ಲಿನ ಬದಲಾವಣೆಯೂ ಹೆಚ್ಚಿನ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಆದರೆ, ಘಟನೆ ನಡೆದ ದಿನದಂದು ಪೊಲೀಸರಿಗೆ ಈ ಬಗ್ಗೆ ಯಾರೂ ಮಾಹಿತಿ ನೀಡಿರುವುದಿಲ್ಲ.

Ad Widget

Ad Widget

ತಲೆಯ ಹಿಂಭಾಗಕ್ಕೆ ಮೊಬೈಲ್‌ನಿಂದ ಹಲ್ಲೆ:
ಅತ್ತೆಗೆ ಬೆಳಗ್ಗಿನ ಉಪಾಹಾರ ಮಾಡಲು ಬರುವಂತೆ ಬಿಂದು ಕರೆದಿದ್ದಾಳೆ. ಈ ಸಂದರ್ಭ ತಿಂಡಿ ಮಾಡಲು ನಿರಾಕರಿಸಿದ ಹಿನ್ನೆಲೆ ವಾಗ್ವಾದ ಉಂಟಾಗಿದೆ. ಈ ಸಂದರ್ಭ ಕೋಪಗೊಂಡ ಬಿಂದು ಕೈಯಲ್ಲಿದ್ದ ಮೊಬೈಲ್‌ನಿಂದ ತಲೆಯ ಹಿಂಭಾಗಕ್ಕೆ ಹಲ್ಲೆಗೈದಿದ್ದಾಳೆ. ಹಾಸಿಗೆ ಮೇಲೆ ಕುಸಿದು ಬಿದ್ದ ಪೂವಮ್ಮ ಅವರನ್ನು ನೋಡದೆ ಹಾಗೆಯೇ ತೆರಳಿದ್ದಾಳೆ. ತೀವ್ರ ರಕ್ತಸ್ರಾವವಾದ ಪರಿಣಾಮ ಪೂವಮ್ಮ ಕೊನೆಯುಸಿರೆಳೆದಿದ್ದಾರೆ. ನಂತರ ಸಾವಿನ ವಿಚಾರ ತಿಳಿದ ಬಿಂದು ಮನೆಯಲ್ಲಿ ಹರಿದಿದ್ದ ರಕ್ತವನ್ನು ಶುಚಿಮಾಡಿದ್ದಲ್ಲದೆ, ಹಾಸಿಗೆ ಮೇಲಿದ್ದ ಬೆಡ್‌ಶೀಟ್ ಸೇರಿದಂತೆ ಕೆಲ ಬಟ್ಟೆಯನ್ನು ಒಗೆಯಲು ಶೇಖರಿಸಿಡುವ ಬಾಸ್ಕೆಟ್‌ಗೆ ಹಾಕಿ ನೆಲಕ್ಕೆ ಹಾಸಿದ್ದ ಮ್ಯಾಟ್‌ನ್ನು ಬದಲಾಯಿಸಿ ಆಕೆ ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿಕೊಂಡು ಪ್ರಕರಣವನ್ನು ಮರೆಮಾಚುವ ಯತ್ನಕ್ಕೆ ಮುಂದಾಗಿದ್ದಳು ಎಂದು ಪತಿ ಪ್ರಸನ್ನ ದೂರಿನಲ್ಲಿ ಉಲ್ಲೇಖಿಸಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget

Ad Widget

Ad Widget

ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ತಪ್ಪೊಪ್ಪಿಕೊಂಡಿರುವ ಬಿಂದು ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಆರೋಪಿತೆ ಮಡಿಕೇರಿ ಬಂಧಿಖಾನೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.

Continue Reading

ಕೊಡಗು

Monsoon arrives-ಜೂನ್‌ನಲ್ಲಿ ಮುಂಗಾರು ಪ್ರವೇಶ; ಮೇ 2 , 3 ನೇ ವಾರದಲ್ಲಿಉತ್ತಮ ಮಳೆಯಾಗುವ ಸಾಧ್ಯತೆ

Ad Widget

Ad Widget

Ad Widget

Ad Widget

ಮಡಿಕೇರಿ : ಜೂನ್‌ನಲ್ಲಿ ಮುಂಗಾರು ಪ್ರವೇಶಿಸಲಿದ್ದು, ಮೇ 2 ಮತ್ತು 3 ನೇ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಫೆಸಿಫಿಕ್‌ ಸಾಗರದಲ್ಲಿ ಎಲ್‌ನಿನೋ ಪರಿಣಾಮ ದುರ್ಬಲವಾಗುತ್ತಿದ್ದು, ಈ ಬಾರಿ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಮಳೆಯಾಗಲಿದೆ ಎಂಬ ವರದಿ ಹವಾಮಾನ ಇಲಾಖೆಯಿಂದ ದೊರೆತಿದೆ.

Ad Widget

Ad Widget

Ad Widget

ಈ ಬಾರಿ ಉತ್ತಮ ಮಳೆ:
ಕಳೆದ ಬಾರಿ ಮುಂಗಾರಿನಲ್ಲಿ ಕೊಡಗಿಗೆ ಶೇ.38ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದರಿಂದ ಜಿಲ್ಲೆಯ ಎಲ್ಲಾ5 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಾಣಿಸಿಕೊಂಡಿತ್ತು. ವಾಡಿಕೆಯಂತೆ 2,729 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 1,690 ಮಿ.ಮೀ. ನಷ್ಟು ಮಾತ್ರ ಮಳೆಯಾದ ಕಾರಣ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿಈ ಬಾರಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಲಿದೆ. ಆದರೆ, ಹಾನಿಯಾಗುವ ಮಟ್ಟಕ್ಕೆ ಅತಿವೃಷ್ಟಿಯಾಗುವ ಲಕ್ಷಣಗಳಿಲ್ಲಎಂಬುದು ವಿಜ್ಞಾನಿಗಳ ಅಂದಾಜಾಗಿದೆ.

Ad Widget

ಮುಂಗಾರು ಕೊರತೆಗೆ ಕಾರಣವಾದ ಎಲ್‌ನಿನೋ ಅಂತ್ಯ:
ಫೆಸಿಫಿಕ್‌ ಸಾಗರದಲ್ಲಿ ಉಷ್ಣಾಂಶ ಹೆಚ್ಚಳದಿಂದ ಉಂಟಾಗುವ ಎಲ್‌ನಿನೋ ಪರಿಣಾಮದಿಂದಾಗಿ ಭಾರತದಲ್ಲಿ ಮುಂಗಾರು ದುರ್ಬಲಗೊಳ್ಳುತ್ತದೆ. 2 ರಿಂದ 7 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳವ ಎಲ್‌ನಿನೋ ಬರ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಕಳೆದ ವರ್ಷ ಉಂಟಾದ ಎಲ್‌ನಿನೋ ಪರಿಣಾಮ ಮುಂಗಾರು ಮಳೆಯ ಕೊರತೆ ಉಂಟಾಗಿತ್ತು. ಈಗ ಎಲ್‌ನಿನೋ ದುರ್ಬಲಗೊಳ್ಳುತ್ತಿದ್ದು, ಮೇ 2 ನೇ ಮತ್ತು 3 ನೇ ವಾರದ ಹೊತ್ತಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

Ad Widget

Ad Widget

ಏನಿದು ಎಲ್‌ ನಿನೋ, ಲಾ-ನಿನಾ?
ಎಲ್‌ನಿನೋ ಮತ್ತು ಲಾ-ನಿನಾ ಫೆಸಿಫಿಕ್‌ ಸಾಗರದಲ್ಲಾಗುವ ಹವಾಮಾನ, ಉಷ್ಟಾಂಶದ ಬದಲಾವಣೆಯಾಗಿದೆ. ಎಲ್‌ನಿನೋ ಕಾಣಿಸಿಕೊಂಡ ವರ್ಷ ಭಾರತದ ಮುಂಗಾರಿನ ಮೇಲೆ ನೇರ ಪರಿಣಾಮವಾಗುತ್ತದೆ. ಫೆಸಿಫಿಕ್‌ ಸಾಗರದಲ್ಲಿ ಉಷ್ಣಾಂಶ ಹೆಚ್ಚಾಗುವ ಕಾರಣ ಭಾರತದಲ್ಲಿ ಮಳೆ ಕೊರತೆಯಾಗಿ ಬಿಸಿಗಾಳಿಯ ವಾತಾವರಣವಿರುತ್ತದೆ.

Ad Widget

Ad Widget

Ad Widget

ಲಾ-ನಿನಾ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯಾಗಿದ್ದು, ಸಾಗರದ ತಾಪಮಾನ ತಂಪಾಗುತ್ತದೆ. ಇದು ಮಳೆ ಮಾರುತಗಳಿಗೆ ಅನುಕೂಲ ಮಾಡಿಕೊಡುವುದರಿಂದ ಲಾ-ನಿನಾ ಪರಿಣಾಮ ಇದ್ದಾಗ ಭಾರತದಲ್ಲಿಉತ್ತಮ ಮಳೆಯಾಗುತ್ತದೆ.

ಈ ಬಾರಿ ಎಲ್‌ನಿನೋ ದುರ್ಬಲಗೊಳ್ಳುತ್ತಿದ್ದು, ಮುಂಗಾರು ಅವಯ ಮಧ್ಯಭಾಗದಲ್ಲಿ ಲಾ-ನಿನೋ ಕಾಣಿಸಿಕೊಳ್ಳಲಿದೆ. ಹೀಗಾಗಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಈ ಬಾರಿ ಫೆಸಿಫಿಕ್‌ ಸಾಗರದಲ್ಲಿಎಲ್‌ನಿನೋ ಪರಿಣಾಮ ದುರ್ಬಲಗೊಳ್ಳುತ್ತಿದೆ. ಇದರಿಂದ ಭಾರತಕ್ಕೆ ಮುಂಗಾರು ಉತ್ತಮವಾಗಿರಲಿದೆ. ಮುಂದಿನ ಮೂರ್ನಾಲ್ಕು ದಿನ ಬಿಸಿಗಾಳಿ ಹೆಚ್ಚಾಗಿರಲಿದ್ದು, ಮೇ 2 ಮತ್ತು 3 ನೇ ವಾರದಲ್ಲಿ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯೆತೆಯಿದೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದ್ದು, ಅತಿವೃಷ್ಟಿ ಸಂಭವವಿಲ್ಲ.

Continue Reading

ಕೊಡಗು

Longest Glass Bridge | ಪ್ರವಾಸಿಗರ ಸ್ವರ್ಗ ಕೊಡಗಿನಲ್ಲಿ ತಲೆಯೆತ್ತಿದೆ ಮತ್ತೊಂದು ಗ್ಲಾಸ್ ಬ್ರಿಡ್ಜ್ – ದಕ್ಷಿಣ ಭಾರತದ ಅತಿ ದೊಡ್ಡ ಗಾಜು ಸೇತುವೆಯಲ್ಲಿ ನಡೆಯುವುದೇ ಮೈರೋಮಾಂಚನ..! ಬರ್ತ್ ಡೇ, ಪೋಟೋ ಶೂಟ್ ಗೆ ಇಲ್ಲಿದೆ ಸ್ಪೆಷಲ್ ಗ್ಲಾಸ್ ಗ್ಯಾಲರಿ

Ad Widget

Ad Widget

Ad Widget

Ad Widget

ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಗ್ಲಾಸ್ ಬ್ರಿಡ್ಜ್ (Longest Glass Bridge) ತಲೆ ಎತ್ತಿದೆ.
ಕೊಡಗು ಅಂದ್ರೆ ಎಲ್ಲರಿಗೆ ಮೊದಲಿಗೆ ನೆನಪಾಗೋದೆ ಕೊಡಗಿನ ಪ್ರವಾಸಿತಾಣಗಳು. ವಿಕೇಂಡ್ ಹಾಗೂ ಸಾಲು ಸಾಲು ರಜೆಗಳು ಬಂದ್ರೆ ಸಾಕು ಕೊಡಗಿನತ್ತ ಪ್ರವಾಸಿಗರ ದಂಡೆ ಹರಿದು ಬರುತ್ತೆ.

Ad Widget

Ad Widget

Ad Widget

ಇನ್ನೂ ಇಂತ‌ ಸಮಯದಲ್ಲಿ ಕೊಡಗಿನ ಎಲ್ಲಾ ಪ್ರವಾಸಿತಾಣಗಳು ಪ್ರವಾಸಿಗರಿಂದಲೇ ಗಿಜಿಗುಡುತ್ತಿದೆ. ಈ ಪ್ರವಾಸಿಗರ ಸ್ವರ್ಗಕ್ಕೆ ಇದೀಗ ಮತ್ತೋಂದು ಪ್ರವಾಸಿ ಸ್ಥಳ ಸೇರಿ ಕೊಂಡಿದೆ ಅದೆ ಗ್ಲಾಸ್ ಬ್ರೀಡ್ಜ್ .

Ad Widget

ಕೊಡಗಿನಲ್ಲಿ ಇದೀಗ ಎರಡನೇಯ ಗ್ಲಾಸ್ ಬ್ರೀಡ್ಜ್ ತಲೆ ಎತ್ತಿದೆ. ಕೊಡಗು ಜಿಲ್ಲೆ ಪ್ರಖ್ಯಾತ ಅಬ್ಬಿ ಫಾಲ್ಸ್ ಹೋಗುವ ರಸ್ತೆಯಲ್ಲೇ 2ನೇ ಗ್ಲಾಸ್ ಬ್ರೀಡ್ಲ್ ನಿರ್ಮಾಣವಾಗಿದ್ದು ಪ್ರವಾಸಿಗರನ್ನ ಸೆಳೆಯಲು ಸಜ್ಜಾಗಿದೆ.

Ad Widget

Ad Widget

ಈ ಒಂದು ಗ್ಲಾಸ್ ಬ್ರಿಡ್ಜ್ 270 ಅಡಿ ಎತ್ತರ, 180 ಉದ್ದ, ಹಾಗೂ 40 ಎಂ.ಎಂ ದಪ್ಪದ ಗ್ಲಾಸ್ ನ ಅಳವಡಿಸಲಾಗಿದೆ.

Ad Widget

Ad Widget

Ad Widget

ಜೊತೆಗೆ 33 ಜನರನ್ನ ಒಂದೇ ಸಮಯದಲ್ಲಿ ಹೋಗಲು ಹಾಗೂ 15 ಟನ್ ಕ್ಯಾಪಸಿಟಿಯನ್ನ ಈ ಗ್ಲಾಸ್ ಬ್ರಿಡ್ಜ್ ಹೊಂದಿದೆ. ಜೊತೆಗೆ ಎತ್ತರದಲ್ಲಿ ಮತ್ತೋಂದು ಪ್ಯಾಸೇಜ್ ನಿರ್ಮಿಸಿದ್ದು ಇಲ್ಲಿ ಬರ್ತಡೆ ಪಾರ್ಟಿ, ವೆಡ್ಡಿಂಗ್ ಫೋಟೋ ಶೂಟ್ ಗೆಂದೇ ವಿಶೇಷ ವಿನ್ಯಾಸ ಗೊಳಿಸಲಾಗಿದೆ.

ವೀವ್ ಪಾಯಿಂಟ್ ನಲ್ಲಿ ನಿಂತು ನೋಡಿದ್ರೆ 360 ಡಿಗ್ರಿ ಆ್ಯಾಂಗಲ್ ನಿಂದ ಒಳ್ಳೆಯ ವೀವ್ಸ್ ಕೂಡ ಇದ್ದು ಪ್ರವಾಸಿಗರು ಆಕರ್ಷಿತರಾಗೋದ್ರಲ್ಲಿ ಎರಡು ಮಾತಿಲ್ಲ. ಈ ಗ್ಲಾಸ್ ಬ್ರಿಡ್ಜ್ ಮೇ.5 ರಂದು ಪ್ರವಾಸಿಗರ ಪ್ರವೇಶಕ್ಕೆ ತೆರೆಯಲಿದೆ ಎಂದು ಸಂಸ್ಥೆಯ ಪಾಲುದಾರರಾದ ಭೀಮಯ್ಯ ತಿಳಿಸಿದ್ದಾರೆ.

ಹೀಗಾಗಿ ಕೊಡಗು ಪ್ರವಾಸೋದ್ಯಮ ಇಲಾಖೆ ಇಂತಹ ಒಂದು ವಿನೂತನ ಪ್ರಯತ್ನ ಮಾಡುವ ಮೂಲಕ ಪ್ರವಾಸಿಗರನ್ನ ಕೊಡಗಿನತ್ತ ಸೆಳೆಯಲು ಮುಂದಾಗಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading