Connect with us

ಸ್ಥಳೀಯ

ಉಡುಪಿ : ಬಯಲಾಯಿತು ಆತ್ಮಹತ್ಯೆ ಎಂದು ಬಿಂಬಿತವಾಗಿದ್ದ ಪ್ರಕರಣದ ರಹಸ್ಯ – ಕೊಂದ ಗೆಳೆಯ ಪೊಲೀಸ್ ಬಲೆಗೆ | ಹತ್ಯೆಗೆ ಬಳಸಿದ ಟೆಕ್ನಿಕ್ ಭಯಾನಕ

Ad Widget

Ad Widget

Ad Widget

Ad Widget

ಉಡುಪಿ ಅ 23 : ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಕುಕ್ಕೆಹಳ್ಳಿ ಬಳಿ ನಡೆದ ಯುವಕನ ಅಸಹಜ ಸಾವಿನ ಪ್ರಕರಣವನ್ನು ಒಂದು ತಿಂಗಳ ಬಳಿಕ ಬೇಧಿಸುವಲ್ಲಿ  ಪೊಲೀಸರು ಸಫಲರಾಗಿದ್ದಾರೆ. ಆರಂಭದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮನೆಯವರು ಭಾವಿಸಿದ್ದರು. ಆದರೇ ಯುವಕನ ಬ್ಯಾಂಕ್‌ ಅಕೌಂಟ್‌ ನ ಟ್ರಾನ್ಸ್‌ ಕ್ಷನ್‌, ಹಾಗೂ ಮಿಸ್‌ ಪ್ಲೇಸ್‌ ಆಗಿದ್ದ ಮೊಬೈಲ್‌ ಫೋನ್‌ ಪ್ರಕರಣದ ರಹಸ್ಯ ಬಿಡಿಸಲು ನೆರವಾಯಿತು.

Ad Widget

Ad Widget

Ad Widget

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ-ಬಜೆ ಎಂಬಲ್ಲಿನ ಹಾಡಿಯಲ್ಲಿ ಕೃತಿಕ್ ಜೆ.ಸಾಲಿಯಾನ್ ಎಂಬಾತನ ಮೃತದೇಹ ಸೆ.14 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈತನನ್ನು ಆತನ ಆತ್ಮೀಯ ಗೆಳೆಯ ವಿನೂತನ ತಂತ್ರಗಾರಿಕೆ ಬಳಸಿ  ಅತ್ಯಂತ ಚಾಣಾಕ್ಷ್ಯತನದಿಂದ ಕೊಂದು ಹಾಕಿದ್ದ.

Ad Widget

ಮೃತನ ಅತ್ತೆ ಶೈಲಜಾ ಕರ್ಕೇರಾ ಇವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿತ್ತು.  ಆರಂಭದಲ್ಲಿ  ಮೃತ ದೇಹ ನೋಡಿದ ಮನೆಯವರಿಗಾಗಲಿ,  ಪೊಲೀಸರಿಗಾಗಲಿ ಅನುಮಾನಸ್ಪದ ಸಂಗತಿಗಳು ಗೋಚರಿಸಿರಲಿಲ್ಲ .ಹೀಗಾಗಿ  ಆರಂಭದಲ್ಲಿ ಯಾರು ಕೂಡ ಇದೊಂದು ಆತ್ಮಹತ್ಯೆಯಲ್ಲ ಎಂಬ ತಗಾದೆ ತೆಗೆದಿರಲಿಲ್ಲ.

Ad Widget

Ad Widget

ಆದರೇ  ಕೃತಿಕ್‌ ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಬ್ಯಾಂಕ್ ಖಾತೆಯಿಂದ  ಸಂಪೂರ್ಣ ಡ್ರಾ ಆಗಿರುವುದು ಮನೆಯವರ ಗಮನಕ್ಕೆ ಬರುತ್ತಲೇ ಅವರಿಗೆ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ.   ಹೀಗಾಗಿ ಈ ಬಗ್ಗೆ ಮಾಹಿತಿ ಸಂಗ್ರಹಿಸಲು   ಪೊಲೀಸರು ತಂಡ ರಚಿಸಿದ್ದಾರೆ.  ಮೃತನ ಬ್ಯಾಂಕ್ ಖಾತೆಯ ಮಾಹಿತಿ,  ಬ್ಯಾಂಕಿನ ಸಿ.ಸಿ.ಟಿ.ವಿ ದೃಶ್ಯಾವಳಿ ,  ಸ್ಥಳೀಯ ವ್ಯಕ್ತಿಗಳಿಂದ  ಮಾಹಿತಿ,  ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಫೋನ್ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಆತನ ಗೆಳೆಯರ  ಬಳಗದ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದರು. 

Ad Widget

Ad Widget

Ad Widget

ಕೊಲೆಗೆ ಕಾರಣ

 ಸಂಗ್ರಹಿಸಿದ ಎಲ್ಲ ಮಾಹಿತಿಯು ಕೃತಿಕ್‌ ಸ್ನೇಹಿತ ದಿನೇಶ ಸಫಲಿಗ (42) ಎಂಬಾತನ ಬಗ್ಗೆ ಬೊಟ್ಟು ಮಾಡಿತ್ತು. ಹೀಗಾಗಿ ಕಳೆದ 15 ದಿನಗಳಿಂದ ಹಗಲು ರಾತ್ರಿ ಪೊಲೀಸರು ಈತನ ಚಲನವಲನಗಳನ್ನು ಬೆಂಬಿಡದೆ ಗಮನಿಸಿದ್ದಾರೆ. ಈ ವೇಳೆ ಮಹತ್ವದ ಸುಳಿವು ಸಂಗ್ರಹಿಸಿದ ಪೊಲೀಸರು ಆರೋಪಿಯನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ಕೊಲೆಯ ರಹಸ್ಯ , ಹತ್ಯೆಯ ವಿಧಾನ ಬೆಳಕಿಗೆ ಬಂದಿದೆ

ಆರೋಪಿ ದಿನೇಶ್‌  10 ವರ್ಷ ಗಳ ಹಿಂದೆ  ಮುಂಬೈಯ ಹೋಟೆಲ್‍ ವೊಂದರಲ್ಲಿ ಉದ್ಯೋಗಿಯಾಗಿದ್ದ,  ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಆತ ಮರಳಿ ಊರಿಗೆ ಬಂದಿದ್ದ. ಈ ವೇಳೆ ತನ್ನ ಸಂಬಂಧಿಕ ಕೃತಿಕ್ ನ ಗೆಳೆತನ ಬೆಳೆಸಿಕೊಂಡು ಕೃತಿಕ್ ನಿಂದ ಸುಮಾರು 9 ಲಕ್ಷಕ್ಕೂ ಅಧಿಕ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದ. ಈ ಹಣವನ್ನು ಕೃತಿಕ್ ನು ಹಿಂತಿರುಗಿಸುವಂತೆ ಪದೇ ಪದೇ ಕೇಳುತ್ತಿದ್ದ. ಆದ್ದರಿಂದ ಈ ಹಣವನ್ನು ಹಿಂದಿರುಗಿಸದೇ ವಂಚಿಸುವ ಉದ್ದೇಶದಿಂದ  ಹತ್ಯೆಗೆ ಸಂಚು ರೂಪಿಸಿದ್ದ.

Gold Rate Today : ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರೀ ಇಳಿಕೆ – ದೀಪಾವಳಿ ಹಬ್ಬಕ್ಕೂ ಮುಂಚೆ ಚಿನಿವಾರ ಪೇಟೆಯಲ್ಲಿ ಹೆಚ್ಚಿದ ಉತ್ಸಾಹ

ದೌರ್ಭಲ್ಯವನ್ನು ಬಳಸಿಕೊಂಡಿದ್ದ

ಕೃತಿಕ್‌ ಗೆ ಮಹಿಳೆಯೊಬ್ಬರ ಬಗ್ಗೆ ಒಲವು ಇತ್ತು. ಆದರೇ ಆ ಮಹಿಳೆಯಿಂದ ಸೂಕ್ತ ಪ್ರತಿಸ್ಪಂದನೆ ಸಿಕ್ಕಿರಲಿಲ್ಲ. ಇದನ್ನು ಕೃತಿಕ್‌ ತೀರ ಹಚ್ಚಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ಹೊಂದಿದ್ದ ದಿನೇಶ್‌ ಇದನ್ನೆ ಬಳಸಿಕೊಂಡು ಕೃತಿಕ್‌ ಹತ್ಯೆಗೆ ಸಂಚು ರೂಪಿಸಿದ್ದ. ನನ್ನನ್ನು ಒಪ್ಪಿಕೊಳ್ಳದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಆಕೆಯನ್ನು ಒಪ್ಪಿಸುವ ಎಂದು ಕೃತಿಕ್‌ ಬಳಿ ದಿನೇಶ್‌ ಹೇಳಿದ್ದ.

ಹೀಗೆ ಕೊಂದಿದ್ದ

ನಮ್ಮ ಈ ಬೆದರಿಕೆಯನ್ನು ಆ ಮಹಿಳೆ ನಿಜವೆಂದು ನಂಬಬೇಕಾದರೇ ಆದೇ ರೀತಿ ನಾಟಕವಾಡಬೇಕು ಎಂದು ತಿಳಿಸಿದ್ದ. ಮಹಿಳೆಯ ಹೆಸರಿನಲ್ಲಿ ಒಂದು ಡೆತ್ ನೋಟ್ ಬರೆಯಿಸಿ, ಆತ್ಮಹತ್ಯೆಯ ಅಣಕು ವಿಡಿಯೋವನ್ನು ಮಾಡಿ ಆ ಮಹಿಳೆಗೆ ಕಳುಹಿಸಿದರೆ ಆಕೆಯು ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ ” ಎಂದು ನಂಬಿಸಿದ್ದ . ಇದಕ್ಕೆ  ಕೃತಿಕ್‌ ಒಪ್ಪಿದ್ದರು.  

 ಅದರಂತೆ ಸೆ.14 ರಂದು ಮುಂಜಾನೆಯ ಸುಮಾರು 4 ಗಂಟೆ ಸಮಯಕ್ಕೆ ಕೃತಿಕ್ ನನ್ನು ಮನೆಯ ಹತ್ತಿರದ ಹಾಡಿಗೆ ದಿನೇಶ್‌  ಬರ ಮಾಡಿಕೊಂಡಿದ್ದಾನೆ. ಬಳಿಕ  ದಿನೇಶ ಸಫಲಿಗನೇ ಕುಣಿಕೆ ಹಗ್ಗವನ್ನು ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕ್ ನ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸಿದ್ದಾನೆ. ಕೆಳಗೆ  ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ಹತ್ತಿಸಿದ್ದಾನೆ. ಅಲ್ಲದೆ ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡಿದ್ದಾನೆ. ಬಳಿಕ  ಕೃತಿಕ್ ನನ್ನು ಎತ್ತಿದ ಕೈಯನ್ನು ತಾನು ಒಮ್ಮೆಲೆ ಬಿಟ್ಟಿದ್ದಾನೆ.  ಹಾಗೂ  ಕಾಲಿನ ಕೆಳಗೆ ಇದ್ದ ಕಲ್ಲನ್ನು ಜಾರಿಸಿದ್ದಾನೆ.  ಇದರಿಂದಾಗಿ ಕುಣಿಕೆಯ ಹಗ್ಗ ಕುತ್ತಿಗೆಗೆ  ಬಿಗಿದು ಕೃತಿಕ್ ಮೃತಪಟ್ಟಿರುತ್ತಾನೆ. ಆ ಬಳಿಕ ಆರೋಪಿ ದಿನೇಶ ಸಫಲಿಗನು ಕೃತಿಕ್ ನ ಮೊಬೈಲ್ ಫೋನನ್ನು ಹಿಡಿದುಕೊಂಡು  ಅಲ್ಲಿಂದ ಎಸ್ಕೆಪ್‌ ಆಗಿದ್ದಾನೆ ಎಂಬುದಾಗಿ ಪೊಲೀಸ್ ವಿಚಾರಣೆವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಪ್ರಕರಣದ ತನಿಖಾ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚೀಂದ್ರ ಹಾಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತೃತ್ವದಲ್ಲಿ, ಹಿರಿಯಡ್ಕ ಪೊಲೀಸ್ ಠಾಣಾ ಪಿ.ಎಸ್.ಐ ಅನಿಲ್ ಬಿ ಎಮ್, ಕೋಟ ಠಾಣಾ ಪ್ರೊಬೆಷನರಿ ಪಿ.ಎಸ್.ಐ ನೂತನ್, ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಎ.ಎಸ್.ಐ ಕೃಷ್ಣಪ್ಪ, ಹೆಡ್‍ಕಾನ್ಸ್‍ಟೇಬಲ್‍ಗಳಾದ ವಾಸುದೇವ ಪಿ, ಪ್ರದೀಪ ನಾಯಕ, ಕಾನ್ಸ್‍ಟೇಬಲ್‍ಗಳಾದ ರವೀಂದ್ರ ಹೆಚ್, ಕೃಷ್ಣ ಶೇರೆಗಾರ, ಶೇಖರ್, ಹಿರಿಯಡ್ಕ ಠಾಣಾ ಎ.ಎಸ್.ಐ ರವರಾದ ಸುಂದರ, ಜಯಂತ್, ಪರಮೇಶ್ವರ ಹೆಡ್‍ಕಾನ್‍ಸ್ಟೇಬಲ್‍ಗಳಾದ ರಾಜೇಶ್ ಡಿ ಗಾರ್, ಉದಯ ಕುಮಾರ್, ರಘು ಮೊಗವೀರ, ರಾಘವೇಂದ್ರ.ಕೆ, ದಯಾನಂದ ಪ್ರಭು, ಜ್ಯೋತಿ, ಸುರೇಖಾ, ಕಾನ್‍ಸ್ಟೇಬಲ್‍ಗಳಾದ ಆದರ್ಶ ನಾಯ್ಕ, ಭೀಮಪ್ಪ ಹಡಪದ, ಬಸವರಾಜ್ ಬಶೆಟ್ಟಿ, ನಿತಿನ್, ನಬಿ ರಸೂಲ್ ಕಡಣಿ, ಕಾರ್ತಿಕ್, ಸಂತೋಷ್, ಶಿವರಾಜ್, ಮಾರುತಿ, ಉಮೇಶ, ದರ್ಶನ್, ಅಶೋಕ್, ಸುಮಲತಾ, ಜಯಲಕ್ಷ್ಮಿ, ರಾಜೇಶ್ವರಿ, ರಾಜೇಶ್ ಮೇಸ್ತರವರು ಭಾಗವಹಿಸಿದ್ದರು.

ನೆಲಕಡಲೆ ಇದು ‘ಬಡವರ ಬಾದಾಮಿ’ !!!<br>ಇದರ ಸೇವನೆಯಿಂದ ಗಂಭೀರವಾದ ಆರೋಗ್ಯ ‌ಸಮಸ್ಯೆಯಿಂದ ಕಾಪಾಡಿಕೊಳ್ಳುವುದು ಹೇಗೆ? ಈ ಸ್ಟೋರಿ ಓದಿ

Click to comment

Leave a Reply

ಸ್ಥಳೀಯ

Marriage cancelled-ಸ್ವೀಟ್ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡ ಮದುವೆ

Ad Widget

Ad Widget

Ad Widget

Ad Widget

ಮದುವೆ ಹಿಂದಿನ ದಿನ ಊಟಕ್ಕೆ ಸಿಹಿತಿಂಡಿ ನೀಡಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಭಾನುವಾರ ಪಟ್ಟಣದ ಹಾಲ್ ಒಂದರಲ್ಲಿ ವಿವಾಹಕ್ಕೆ ಎಲ್ಲಾ ಸಿದ್ದತೆ ಮಾಡಲಾಗಿತ್ತು. ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದರು.

Ad Widget

Ad Widget

Ad Widget

ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭವಾಯಿತು. ಮಂಟಪದಲ್ಲಿಯೇ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಭಾನುವಾರ ಬೆಳಗ್ಗೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮದುವೆಯೇ ಬೇಡ ಎಂದು ವರ ಶನಿವಾರ ರಾತ್ರಿ ಉಂಗುರ ಕಳಚಿಕೊಟ್ಟಿದ್ದ. ನಂತರ ‘ನಾನು ಮದುವೆಯಾಗುತ್ತೇನೆ’ ಎಂದು ಹೊಸ ವರಸೆ ಶುರುಮಾಡಿದ್ದ.

Ad Widget

ಬೇಸತ್ತ ವಧು ‘ಈ ಮದುವೆಯೇ ಬೇಡ’ ಎಂದು ಪೊಲೀಸರೆದುರು ಹೇಳಿಕೆ ನೀಡಿದಳು. ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವುಗಳೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದರು. ಹಲವು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಮದುವೆ, ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡು, ಆಹ್ವಾನಿತರು, ಬಂಧುಗಳಲ್ಲಿ ಬೇಸರ ಮೂಡಿಸಿತು.

Ad Widget

Ad Widget
Continue Reading

ರಾಜಕೀಯ

Bollywood actress-ಪ್ರಜ್ವಲ್ ರೇವಣ್ಣ ಬದಲು ಆರೋಪಿ ಮುಸ್ಲಿಂ ಆಗಿದ್ರೆ ಬಿಜೆಪಿಯವರು ಬಿಡುತಿದ್ರಾ? ಬಾಲಿವುಡ್ ನಟಿಯ ಪ್ರಶ್ನೆ

Ad Widget

Ad Widget

Ad Widget

Ad Widget

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಇದೀಗ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಸೋಶಿಯಲ್ ಮೀಡಿಯಾ ಮೂಲಕ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Ad Widget

Ad Widget

Ad Widget

ಟ್ವೀಟ್ನಲ್ಲಿ ಏನಿದೆ?: ಸ್ವರಾ ಭಾಸ್ಕರ್‌ ತಮ್ಮ ಟ್ಟಿಟರ್‌ ಖಾತೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೌನವಾಗಿರುವುದು ಏಕೆ..? ಎಲ್ಲಾ ಗೊತ್ತಿದ್ದೂ ಮೋದಿ ಅವರ ಪರ ಪ್ರಚಾರ ಮಾಡಿದ್ದು ನಮಗೇಕೆ ಆಘಾತ ತಂದಿದೆ. ಕಥುವಾ, ಉನ್ನಾವೋ, ಹತ್ರಾಸ್, ಕುಲದೀಪ್ ಸೆಂಗರ್, ಬ್ರಿಜ್‌ಭೂಷಣ್‌ ಶರಣ್ ಮತ್ತು ಇತರರ ಉದಾಹರಣೆ ನಮ್ಮಲ್ಲಿದೆ.. ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ ಇಲ್ಲವೇ ಕಾಂಗ್ರೆಸ್‌ನವರಾಗಿದ್ದರೆ ಮಾತ್ರ ಅವರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಅಂತ ಬರೆದುಕೊಂಡಿದ್ದಾರೆ.

Ad Widget

ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ವಲ್‌ ರೇವಣ್ಣ ಅವರದು ಎನ್ನಲಾದ ಸೆಕ್ಸ್ ವೀಡಿಯೋಗಳು ಹಾಸನದ ಹಲವು ಕಡೆ ಓಡಾಡುತ್ತಿದ್ದಂತೆ, ಪ್ರಜ್ವಲ್ ರೇವಣ್ಣ ರಾಜ್ಯದಿಂದ ನಾಪತ್ತೆಯಾಗಿದ್ದಾರೆ. ರಾಜ್ಯ ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳನ್ನು ಆಡಳಿತಾರೂಢ ಕಾಂಗ್ರೆಸ್‌ ಟೀಕಿಸಿತ್ತು. ಈ ಪ್ರಕರಣ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

Ad Widget

Ad Widget

ಈ ಎಲ್ಲಾ ವಿಷಯ ತಿಳಿಯುತ್ತಿದ್ದಂತೆ ಪ್ರಜ್ವಲ್‌ ವಿದೇಶಕ್ಕೆ ತೆರಳಿದ್ದು ಅವರ ವಿರುದ್ಧ ಲುಕ್‌ ಔಟ್ ನೋಟಿಸ್ ನೀಡಲಾಗಿದೆ. ಅಲ್ಲದೇ ಇದೆ ವೇಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರೇವಣ್ಣ ಅವರನ್ನು ಬಂಧಿಸಲಾಗಿದೆ. ಎಸ್‌ಎಐಟಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

Ad Widget

Ad Widget

Ad Widget
Continue Reading

ಮಂಗಳೂರು

ವಿಟ್ಲ: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮಗು ಸಹಿತ ಮೂವರಿಗೆ ಗಾಯ

Ad Widget

Ad Widget

Ad Widget

Ad Widget


ವಿಟ್ಲ: ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ.
ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡುಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

Ad Widget

Ad Widget

Ad Widget

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟ ಗಾಯವಾಗಿದೆ.

Ad Widget

ಗಂಭೀರ ಗಾಯಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆ ಕೊಂಡೊಯ್ಯಲಾಗಿತ್ತು. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
,

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading