Connect with us

ಸ್ಥಳೀಯ

Koragajja : ಕೊರಗಜ್ಜ ದೈವದ ಪವಾಡ-ಕರಿಗಂಧ ಹಾಕಿದ ಕೂಡಲೇ ಮಗುವಿನ ಆರೋಗ್ಯದಲ್ಲಿ ಧಿಡೀರ್ ಚೇತರಿಕೆ | ವಿಡಿಯೋ ನೋಡಿ

Ad Widget

Ad Widget

Ad Widget

Ad Widget Ad Widget

ಉಡುಪಿ, ದಕ್ಷಿಣ ಕನ್ನಡ ಹಾಗು ಕಾಸರಗೋಡನ್ನು ಒಳಗೊಂಡ ತುಳುನಾಡು ದೈವ ದೇವರುಗಳ ಬೀಡು. ಪ್ರತಿ ಬಾರಿಯು ಇಲ್ಲಿಯ ದೈವಗಳು ಕಾರಣೀಕತೆಯಿಂದ ಇಲ್ಲಿನ ಜನರನ್ನು ಅಚ್ಚರಿಯಲ್ಲಿ ಕೆಡವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿಯೇ ಇಲ್ಲಿನ ಜನರಿಗೆ ದೈವಗಳ ಮೇಲೆ ಅತೀವ ಭಕ್ತಿ. ಅವುಗಳ ಅಪರಿಮಿತ ಶಕ್ತಿಯ ಬಗ್ಗೆ ಅಪಾರ ನಂಬಿಕೆ.

Ad Widget

Ad Widget

Ad Widget

Ad Widget

Ad Widget

 ತುಳುನಾಡಿನ ಬಹು ಜನರ ನಂಬುಗೆಯ ಕೊರಗಜ್ಜ ದೈವ  ಉಡುಪಿಯಲ್ಲಿ  ಪವಾಡ ಮೆರೆದಿದೆ.ಅನಾರೋಗ್ಯಕ್ಕೆ ತುತ್ತಾಗಿದ್ದ ನಾಲ್ಕು ತಿಂಗಳ ಮಗು ಬದುಕುವ ಭರವಸೆಯನ್ನು ವೈದ್ಯರು ನೀಡದ ಸಂಧರ್ಭದಲ್ಲಿ   ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಮಗುವಿನ ಹಣೆಗೆ ಕರಿಗಂಧ ಹಚ್ಚಿದ್ದಾರೆ. ಅದಾದ  ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯದಲ್ಲಿ ಧಿಡೀರ್ ಚೇತರಿಕೆ ಕಂಡ ಘಟನೆ ಉಡುಪಿಯಲ್ಲಿ ನಡೆದಿದೆ.

Ad Widget

Ad Widget

 ಸಾಗರ ಮೂಲದ ನಾಗಶ್ರೀ ಎಂಬುವವರ ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರ  ಕಂಡು ಬಂದಿತ್ತು.ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು ಅಳು ನಿಲ್ಲಿಸುತ್ತಿರಲ್ಲಿಲ್ಲ.ಹೀಗಾಗಿ‌ ಕುಂದಾಪುರದ ಅಸ್ಪತ್ರೆಗೆ ದಾಖಲಿಸಲಾಗಿತ್ತು.ಅಸ್ಪತ್ರೆಯಲ್ಲಿ ಮಗುವಿಗೆ ಪಿಡ್ಸ್ ಇರುವುದಾಗಿಯೂ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಅಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಕೆ ಎಂಸಿಗೆ ದಾಖಲಿಸಲಾಗಿತ್ತು.

Ad Widget

Ad Widget

ಐಸಿಯು ನಲ್ಲಿದ್ದ ಮಗುವಿನ ಅರೋಗ್ಯ ಚಿಂತಾಜನಕವಾಗಿತ್ತು.ಅಷ್ಟೇ ಅಲ್ಲ ಪದೇ ಪದೇ ಮಗುವಿನ ಹೃದಯ ಸ್ತಬ್ಧವಾಗುತ್ತಿರುವುದರ ಬಗ್ಗೆ ವೈದರು  ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.ವೈದರ ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರೂ ಮಗುವಿನ ಪ್ರಾಣ ಉಳಿಯುವ ಬಗ್ಗೆ  ಸಂಶಯ ವ್ಯಕ್ಯಪಡಿಸಿದ್ದರು‌.

Ad Widget

Ad Widget

ಮಗುವಿನ ಪರಿಸ್ಥಿತಿ ಕಂಡ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದರು‌.ಅಷ್ಟರಲ್ಲಿ ಅಸ್ಪತ್ರೆ ಬಳಿಯಿದ್ದ ಒರ್ವ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ ಹಿನ್ನಲೆಯಲ್ಲಿ ಮಗುವಿನ ಹೆತ್ತವರು ಇಂದ್ರಾಳಿ ,ಎಂಜಿ ಎಂ ಹಾಸ್ಟೆಲ್ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾಧ ಪಡೆದು ತೆರಳಿದ್ದರು.

ಕೊರಗಜ್ಜ ನ ಕರಿಗಂಧವನ್ನು ಮಗುವಿನ ಹಣೆಗೆ ಹಚ್ಚುತ್ತಿದ್ದಂತೆಯೇ,ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಅರೋಗ್ಯ ಧೀಢಿರಾಗಿ ಚೇತರಿಕೆ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು.ವೈದರು ಕೂಡ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವ ಮೂಲಕ ಮಗು ಅರೋಗ್ಯವಾಗಿ ಹೆತ್ತಮ್ಮಳ ಕೈಯಲ್ಲಿ ಮತ್ತೆ ಬಂದು ಸೇರಿದೆ.

ಹೃದಯ ಬಡಿತವೇ ನಿಂತು ಹೋಯಿತು ಎಂದಿದ್ದ ಮಗು ಮತ್ತೆ ಕಿಲ ಕಿಲ‌ನಗುತ್ತಿರುವುದನ್ನ ಕಂಡ ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ.ಇದಕ್ಕೆಲ್ಲ ಕಾರಣ ನಂಬಿದ ಕೊರಗಜ್ಜ ಎನ್ನುವುದು ಕುಟುಂಬಸ್ಥರ ನಂಬಿಕೆ. ಹೀಗಾಗಿ ಅಸ್ಪತ್ರಯಿಂದ ನೇರವಾಗಿ ಇಂದ್ರಾಳಿ ಬಳಿಯ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಮಗುವನ್ನು ಕೊರಗಜ್ಜ ಸ್ವಾಮಿಯ ಮುಂದಿಟ್ಟು  ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದುಕೊಂಡರು.ಬದುಕಿರುವವರೆಗೂ ಈ ಮಗು ಕೊರಗಜ್ಜನ ಪ್ರಸಾದವೆಂದೇ ನಂಬಿ ಬದುಕುತ್ತೆವೆ ಎಂದು ಹೇಳುತ್ತಾ ಅನಂದ ಭಾಷ್ಟಗಳೊಂದಿಗೆ ತಮ್ಮೂರಿಗೆ ತೆರಳಿದ್ದಾರೆ.

ತುಳುನಾಡಿನ‌‌ ಕಾರ್ಣಿಕದ ದೈವ ಕೊರಗಜ್ಜ ಒಂದಲ್ಲ ಒಂದು ರೀತಿಯಲ್ಲಿ ತನ್ನ ಕಾರ್ಣಿಕತೆಯನ್ನು ತೋರಿಸಿ ಕೊಡುತ್ತಿರುತ್ತಾನೆ‌ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ. ಇಂದ್ರಾಳಿ ಬಳಿಯಿರುವ  ಕ್ಷೇತ್ರದಲ್ಲಿ ಇಂತಹ ಹತ್ತಾರು ಪವಾಡಗಳು ನಡೆಯುತ್ತಿರುತ್ತಿದ್ದು ಕೊರಗಜ್ಜ ಪವಾಡ ಕ್ಕೆ ಭಕ್ತರು ಮತ್ತೆ ಶರಣಾಗಿದ್ದಾರೆ.

Click to comment

Leave a Reply

ಅಪರಾಧ

Online acquaintance-ಆನ್ ಲೈನ್ ಪರಿಚಿತ ಗೆಳೆಯ ಮಹಿಳೆಯ ಜೀವಾಂತ್ಯಗೊಳಿಸಿದ

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎಂ. ಶೋಭಾ (48) ಕೊಲೆ ಪ್ರಕರಣದ ಆರೋಪಿ ನವೀನ್‌ ಗೌಡ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಆರೋಪಿ ನವೀನ್‌ ಗೌಡ, ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ. ಕೊಡಿಗೇಹಳ್ಳಿ ಬಳಿಯ ಗಣೇಶ ನಗರದ ಶೋಭಾ ಅವರನ್ನು ಏ. 18ರಂದು ಕೊಲೆ ಮಾಡಿ ಪರಾರಿಯಾಗಿದ್ದ.

Ad Widget

Ad Widget

ಶೋಭಾ ಮಗಳು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. ಶೋಭಾ ಅವರು ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ನೆಲೆಸಿದ್ದರು. ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ವಾಸವಿದ್ದರು. ಏ. 18ರಂದು ಬೆಳಿಗ್ಗೆ ಎರಡನೇ ಮಗಳು ತಮ್ಮ ಪತಿ ಮನೆಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ನವೀನ್ ಗೌಡ, ಶೋಭಾ ಅವರನ್ನು ಕತ್ತು ಹಿಸುಕಿ ಕೊಂದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

Ad Widget

Ad Widget

ಸಾಮಾಜಿಕ ಮಾಧ್ಯಮದಿಂದ ಪರಿಚಯ: ‘ಶೋಭಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿದ್ದರು. ಅದೇ ಖಾತೆಗೆ ಆರೋಪಿ ನವೀನ್‌ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಶೋಭಾ ಸ್ವೀಕರಿಸಿದ್ದರು. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

Ad Widget

Ad Widget

ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದ ಇಬ್ಬರೂ ಮಾತುಕತೆ ಆರಂಭಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು ಎಂಬ ಮಾಹಿತಿ ಇದೆ. ಭೇಟಿಯಾಗುವುದಾಗಿ ಹೇಳಿದ್ದ ನವೀನ್, ಕೆಲ ದಿನಗಳ ಹಿಂದೆಯಷ್ಟೇ ಶೋಭಾ ಅವರ ಮನೆಗೆ ಬಂದು ಹೋಗಿದ್ದ. ಏ. 18ರಂದು ಎರಡನೇ ಬಾರಿ ಮನೆಗೆ ಬಂದಿದ್ದ ನವೀನ್‌ ಹಾಗೂ ಶೋಭಾ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ತಿಳಿಸಿದರು.

ಕೊಲೆ ನಂತರ ಆರೋಪಿ ನವೀನ್, ಶೋಭಾ ಅವರ ಕಾರಿನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದ. ಸಲುಗೆ ಕಾರಣಕ್ಕೆ ಈ ಕೊಲೆ ನಡೆದಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

Continue Reading

ಶಿಕ್ಷಣ

Press Release-ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ

Ad Widget

Ad Widget

Ad Widget

Ad Widget Ad Widget

ವಿವೇಕಾನಂದ ಪದವಿಪೂರ್ವ ಕಾಲೇಜು 2024-25ನೇ ಶೈಕ್ಷಣಿಕ ವರ್ಷದಿಂದ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ಪದವಿಪೂರ್ವ ಶಿಕ್ಷಣ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ವಿನೂತನ ಪ್ರಯೋಗವನ್ನು ನಮ್ಮ ಸಂಸ್ಥೆ ಆರಂಭಿಸುತ್ತಿದ್ದು, ಈ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಶೇರು ವಹಿವಾಟು, Tally, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮುಂತಾದ ವಿಷಯಗಳ ಬಗ್ಗೆ ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶವಿದೆ.

Ad Widget

Ad Widget

Ad Widget

Ad Widget

Ad Widget

ಈ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಸಮಾರಂಭವು 24  ಏಪ್ರಿಲ್ 2024 ನೇ ಬುಧವಾರ 10 ಗಂಟೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇರುವ ನೇತಾಜಿ ಸಭಾಂಗಣದಲ್ಲಿ ಜರುಗಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ. ಪಿ. ಇವರು ವಹಿಸಲಿದ್ಧಾರೆ.

Ad Widget

Ad Widget

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಉದ್ಯಮಿಗಳು ಹಾಗೂ ಅಜೇಯ ವಿಶ್ವಸ್ಥ ಮಂಡಳಿ, ಮೂರ್ಕಜೆ, ವಿಟ್ಲ ಇದರ ಅಧ್ಯಕ್ಷರಾದ  ಪಿ. ಸುಬ್ರಾಯ ಪೈ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆಲ್ತ್ ವಿಷನ್ ಪುತ್ತೂರು ಹಾಗೂ ಹಾರ್ದಿಕ್ ಹರ್ಬಲ್ಸ್ ಬಂಟ್ವಾಳ ಇದರ ಸಂಸ್ಥಾಪಕರಾದ ಮುರಳೀಧರ ಕೆ. ಇವರು ಭಾಗವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಕೆ. ಎನ್. ಸುಬ್ರಹ್ಮಣ್ಯ ಹಾಗೂ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಇವರು ಉಪಸ್ಥಿತಲಿರಲಿದ್ದಾರೆ.

Ad Widget

Ad Widget

ಈ ಕಾರ್ಯಕ್ರಮದಲ್ಲಿ ಪೋಷಕರು, ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್‌ಗಳು ಆರಂಭಗೊಳ್ಳಲಿದ್ದು ಹಲವಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

Ad Widget

Ad Widget
Continue Reading

ರಾಜಕೀಯ

Siddaramaiah-ಮೋದಿಯವರ ಮಂಗಳಸೂತ್ರ ಹೇಳಿಕೆ ಪ್ರಧಾನಿ ಸ್ಥಾನಕ್ಕೆ ತೋರಿದ ಅಗೌರವ : ಸಿದ್ದರಾಮಯ್ಯ

Ad Widget

Ad Widget

Ad Widget

Ad Widget Ad Widget

ಬೆಂಗಳೂರು (ಏ.23): ಕಾಂಗ್ರೆಸ್‌ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ಮುಖಂಡರಿಂದ ಸೋಮವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ಮುಖಂಡರು ಇದೊಂದು ಕೀಳು ಹೇಳಿಕೆ, ಪ್ರಧಾನಿ ಮೋದಿ ಅವರು ಸೋಲಿನ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಶ್ರಮದಿಂದ ಗಳಿಸಿದ ಸಂಪತ್ತನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗಾದರೂ ಇದೆಯೇ? ಆದರೂ ಇದನ್ನು ಕಾಂಗ್ರೆಸ್ ಮಾಡಲಿದೆ.

Ad Widget

Ad Widget

Ad Widget

Ad Widget

Ad Widget

ಪ್ರಧಾನಿ ಮೋದಿಯವರು ಜೈಪುರದಲ್ಲಿ ನಡೆಸಿದ ಸಮಾವೇಶದಲ್ಲಿ ತಾಯಂದಿರು ಶ್ರಮದಿಂದ ಮಾಡಿಸಿಕೊಂಡಿರುವ ಚಿನ್ನದ ತಾಳಿಯನ್ನು ಕಿತ್ತುಕೊಳ್ಳಲಾಗುತ್ತದೆ. ಅದನ್ನು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಮುಸ್ಲಿಮರು ಎಂದಿದ್ದ ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಮತ್ತು ಹೆಣ್ಣುಮಕ್ಕಳಿದ್ದವರಿಗೆ ಹಂಚಲಾಗುತ್ತದೆ ಎಂದು ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪ್ರಧಾನಿಯಾಗಿ ಅವರು ಇಷ್ಟೊಂದು ಕೀಳುಹೇಳಿಕೆ ನೀಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮೋದಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

Ad Widget

Ad Widget

ಸೋಲಿನ ಭೀತಿ: ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತದೆ ಎಂದು ದೇಶದ ಪ್ರಧಾನಿ ಹೇಳುತ್ತಿದ್ದಾರೆ. ಮೋದಿಯವರಿಗೆ ಸೋಲುವ ಭೀತಿ ಉಂಟಾಗಿದೆ. ಹೀಗಾಗಿ ಅವರು ಹೀಗೆ ಮಾತನಾಡುತ್ತಿದ್ದಾರೆ. ಭಾರತೀಯರೆಲ್ಲರೂ ಸಮಾನರು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆಂದರೆ ಏನರ್ಥ? ಈ ಮಾತುಗಳನ್ನು ನೋಡಿದರೆ ಬಿಜೆಪಿಯ ಹತಾಶೆ ಕಾಣಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

Ad Widget

Ad Widget

ರಾಜ್ಯದ 25 ದಂಡಪಿಂಡಗಳನ್ನು ಜನರು ಮನೆಗೆ ಕಳಿಸಬೇಕು: ಬಿ.ವಿ.ಶ್ರೀನಿವಾಸ್ ವಿಶೇಷ ಸಂದರ್ಶನ!
ಪ್ರಧಾನಿ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಮಾತನಾಡಿರುವುದು ನಾನು ನೋಡಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರೆ, ಮೋದಿ ಅವರು ಮತೀಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಈ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದೆಯೋ ಗೊತ್ತಿಲ್ಲ. 70 ವರ್ಷಗಳಿಂದ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಯಾವ ಹಿಂದೂಗೂ ಅನ್ಯಾಯವಾಗಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading