Connect with us

ಶಿಕ್ಷಣ

Vivekananda-ಮಂಗಳೂರು ದಸರಾ 2026 : ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Published

on



Ad Widget

Ad Widget

Ad Widget

Ad Widget

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಮಕ್ಕಳ ದಸರಾ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

Ad Widget

Ad Widget

Ad Widget

ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಇಲ್ಲಿ ಅ. 13ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Ad Widget

Ad Widget alt="Ad Widget"/>

Ad Widget

ಮಕ್ಕಳ ದಸರಾ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಿದ್ದರು.

Ad Widget

Ad Widget <> Ad Widget

ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15ಕ್ಕೂ ಅಧಿಕ ಶಾಲಾ ತಂಡಗಳು ಭಾಗವಹಿಸಿದ್ದರು.



Ad Widget

ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

Click to comment

Leave a Reply

ಶಿಕ್ಷಣ

Sahyadri College-ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಮತ್ತು ಶೈನ್ ಫೌಂಡೇಶನ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವ ‘ಸೈನೆರ್ಜಿಯಾ’26’

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಶೈನ್ ಫೌಂಡೇಶನ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವವಾದ ‘ಸೈನೆರ್ಜಿಯಾ’26’ ಅನ್ನು ಆಯೋಜಿಸಲಾಗಿದೆ.

Ad Widget

Ad Widget

Ad Widget

ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಶೈನ್ ಫೌಂಡೇಶನ್‌ನ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವವಾದ‘ಸೈನೆರ್ಜಿಯಾ’26’ ಅನ್ನು ಆಯೋಜಿಸಲಾಗಿದೆ.

Ad Widget

Ad Widget alt="Ad Widget"/>

Ad Widget

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ತಾಂತ್ರಿಕ ಜ್ಞಾನ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಉತ್ಸವವನ್ನು ರೂಪಿಸಲಾಗಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಒಂದಾಗಿ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸೃಜನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಉತ್ಸವ ಅವಕಾಶ ಕಲ್ಪಿಸಲಿದೆ.

Ad Widget

Ad Widget <> Ad Widget

ಉದ್ಘಾಟನಾ ಸಮಾರಂಭವು 2026ರ ನವೆಂಬರ್ 12ರಂದು ನಡೆಯಲಿದ್ದು, ಶೈಕ್ಷಣಿಕ, ಕೈಗಾರಿಕಾ ಹಾಗೂ ಸರ್ಕಾರಿ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಜಿಟಿಟಿಸಿ (GTTC) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ ಅವರು ಹಾಗು ಇಜಿ ಇಂಡಿಯಾ (EG India) ಸಂಸ್ಥೆಯ ಮುಖ್ಯ ಡೇಟಾ ವಿಜ್ಞಾನಿ ಹಾಗೂ ತಂಡದ ವ್ಯವಸ್ಥಾಪಕರಾದ ಡಾ. ಪ್ರಖ್ಯಾತ್ ರೈ (Dr. Prakyath Rai) ಅವರು ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.



Ad Widget

ನವೆಂಬರ್ 14ರಂದು ನಡೆಯಲಿರುವ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಶ್ರೀ ಶಶಿಧರ್ ಹೆಗ್ಡೆ (Shashidhar Hegde) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗಣ್ಯರು ಹಾಗೂ ಕೈಗಾರಿಕಾ ಕ್ಷೇತ್ರದ ತಜ್ಞರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಮೂರು ದಿನಗಳ ಉತ್ಸವದಲ್ಲಿ 425ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಂದ 5,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸೈನೆರ್ಜಿಯಾ’26 ಉತ್ಸವವು 2026ರ ನವೆಂಬರ್ 12ರಿಂದ 14ರವರೆಗೆ ನಡೆಯಲಿದೆ.

Ad Widget

Ad Widget

ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH) ಸೈನೆರ್ಜಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 13ನೇ ಆವೃತ್ತಿಯ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH) ಶಾಲಾ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ತಮ್ಮ ನಾವೀನ್ಯಪೂರ್ಣ ಆಲೋಚನೆಗಳನ್ನು ಮತ್ತು ಸ್ಥಳೀಯ ಸಮುದಾಯದ ಸಮಸ್ಯೆಗಳಿಗೆ ಪರಿಹಾರಗಳನ್ನು ಪ್ರಸ್ತುತಪಡಿಸಲು ವೇದಿಕೆಯಾಗಲಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಟ್ಟು ₹2,00,000 ಮೊತ್ತದ ಆರಂಭಿಕ ಅನುದಾನ (Seed Grant) ನೀಡಲಾಗುವುದು. ಅಲ್ಲದೆ, ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ತಜ್ಞರ ಮಾರ್ಗದರ್ಶನ ಹಾಗೂ ನಾವೀನ್ಯತಾ ಮೂಲಸೌಕರ್ಯಗಳನ್ನು ಬಳಸಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು. ಇದರಿಂದ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಪ್ರಾಯೋಗಿಕ
ಪರಿಕಲ್ಪನಾ ಮಾದರಿಗಳಾಗಿ (Proof of Concept – PoC) ಅಭಿವೃದ್ಧಿಪಡಿಸಿಕೊಳ್ಳಬಹುದು.

ಡೆವ್‌ಹೋಸ್ಟ್ (DevHost)ಈ ಬಾರಿಯ ಸೈನೆರ್ಜಿಯಾದಲ್ಲಿ 9ನೇ ಆವೃತ್ತಿಯ ಡೆವ್‌ಹೋಸ್ಟ್ ಕೂಡ ನಡೆಯಲಿದೆ. EG ಸಂಸ್ಥೆಯು ಇದರ ಶೀರ್ಷಿಕೆ ಪ್ರಾಯೋಜಕರಾಗಿದೆ. ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯುನಿಟಿ (SOSC) ಆಯೋಜಿಸುವ ಈ ರಾಷ್ಟ್ರೀಯ ಮಟ್ಟದ ತಾಂತ್ರಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ 36 ಗಂಟೆಗಳ ಹ್ಯಾಕಥಾನ್. ಇದರೊಂದಿಗೆ ಸಾಫ್ಟ್‌ವೇರ್ ಡೆವಲಪರ್‌ಗಳ ವಿಶೇಷ ಉಪನ್ಯಾಸಗಳು, ಮಾಸ್ಟರ್‌ಕ್ಲಾಸ್‌ಗಳು, ಕೈಗಾರಿಕಾ ತಜ್ಞರಿಂದ ಕಾರ್ಯಾಗಾರಗಳು ಹಾಗೂ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿವೆ.

ಏರೋಫಿಲಿಯಾ (Aerophilia) ಟೀಮ್ ಚಾಲೆಂಜರ್ಸ್ ಆಯೋಜಿಸುವ ಮತ್ತು ನೈನೆಟ್ರಾನ್ ಟೆಕ್ (Ninetron Tech) ಪ್ರಾಯೋಜಕತ್ವ ವಹಿಸಿರುವ ರಾಷ್ಟ್ರೀಯ ಮಟ್ಟದ ಏರೋ-ಟೆಕ್ ಉತ್ಸವ ಏರೋಫಿಲಿಯಾ ಎರಡು ದಿನಗಳ ಕಾಲ ನಡೆಯಲಿದೆ. 13ನೇ ತಾರೀಕು ಬೆಳಿಗ್ಗೆ 9 ಗಂಟೆಗೆ ಏರ್ ಶೋ ನಡೆಯಲಿದೆ ಈ ಉತ್ಸವದಲ್ಲಿ ಏರೋಮಾಡೆಲಿಂಗ್ ಪ್ರದರ್ಶನಗಳು, ಡ್ರೋನ್ ರೇಸಿಂಗ್, ರಿಮೋಟ್ ಕಂಟ್ರೋಲ್ ವಿಮಾನಗಳ ಹಾರಾಟ, ಏರ್ ಶೋಗಳು, ಗೇಮಿಂಗ್ ಸ್ಪರ್ಧೆಗಳು ಹಾಗೂ ಸಂವಾದಾತ್ಮಕ ಕಾರ್ಯಾಗಾರಗಳು ನಡೆಯಲಿವೆ. ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುವುದು ಇದರ ಉದ್ದೇಶವಾಗಿದೆ.

ರೋಬೋಟಿಕ್ಸ್ ಸ್ಪರ್ಧೆಗಳು ಸಹ್ಯಾದ್ರಿ ರೋಬೋಟಿಕ್ಸ್ ಕ್ಲಬ್ (SRC) ವತಿಯಿಂದ ರೋಬೋ ಸಾಕರ್, ಸುಮೋ ರೋಬೋಟಿಕ್ಸ್ ಹಾಗೂ ಸ್ವಯಂಚಾಲಿತ ಸಂಚರಣೆ (Autonomous Navigation) ಸೇರಿದಂತೆ ವಿವಿಧ ರೋಬೋಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಯಾಂತ್ರಿಕ ವಿನ್ಯಾಸ, ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳಲ್ಲಿನ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸಲಿವೆ.

ಯುವ ಉದ್ಯಮಶೀಲತೆಗೆ ಸೈನೆರ್ಜಿಯಾದ ಕೊಡುಗೆ ಕಳೆದ ಹಲವು ವರ್ಷಗಳಿಂದ ಸೈನೆರ್ಜಿಯಾ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮೂಲವಾಗಿದ್ದು, ಅನೇಕ ಪ್ರಾದೇಶಿಕ
ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಪ್ರೇರಣೆಯಾಗಿದೆ. ಸಹ್ಯಾದ್ರಿಯ ಇನ್‌ಕ್ಯುಬೇಷನ್ ವ್ಯವಸ್ಥೆಯ ಮೂಲಕ ಬೆಳವಣಿಗೆ ಕಂಡ ಯಶಸ್ವಿ ಉದ್ಯಮಗಳೆಂದರೆ STEM ಆಟಿಕೆಗಳ ಬ್ರ್ಯಾಂಡ್ Dreamkit.cc, ಸಹಾಯಕ ತಂತ್ರಜ್ಞಾನ ಉದ್ಯಮ Prafal ಹಾಗೂ ಡೀಪ್-ಟೆಕ್ ಆಡಿಯೋ ಸ್ಟಾರ್ಟ್‌ಅಪ್ Sonic Lamb. ಇಂತಹ ಯಶೋಗಾಥೆಗಳು ವಿದ್ಯಾರ್ಥಿಗಳ ನವೀನ ಆಲೋಚನೆಗಳನ್ನು ಉದ್ಯಮಶೀಲತೆಯಾಗಿ ಪರಿವರ್ತಿಸುವಲ್ಲಿ ಸೈನೆರ್ಜಿಯಾದ ಪಾತ್ರವನ್ನು ಪ್ರತಿಬಿಂಬಿಸುತ್ತವೆ.

ಸಾರ್ವಜನಿಕರಿಗೆ ಮುಕ್ತ ಆಹ್ವಾನ ಸೈನೆರ್ಜಿಯಾ’26 ಸಾರ್ವಜನಿಕರಿಗೂ ಮುಕ್ತವಾಗಿದ್ದು, ನವೆಂಬರ್ 12ರಿಂದ 14ರವರೆಗೆ ನಡೆಯಲಿರುವ ಈ ಮೂರು ದಿನಗಳ ನಾವೀನ್ಯತಾ ಉತ್ಸವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ತಂತ್ರಜ್ಞಾನ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಆಸಕ್ತರಿಗೆ ಸ್ಥಳದಲ್ಲಿಯೇ ನೋಂದಣಿ (Spot Registration) ಮಾಡಿಕೊಳ್ಳುವ ಅವಕಾಶವಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಹಾಗೂ ಭವಿಷ್ಯದ ಬದಲಾವಣೆಯ ಹರಿಕಾರರನ್ನು ರೂಪಿಸಲು ಕೈಗಾರಿಕಾ ಸಂಸ್ಥೆಗಳು ಮತ್ತು ಉದ್ಯಮದ ಪ್ರಮುಖರು ಸಹ್ಯಾದ್ರಿ ಕಾಲೇಜಿನೊಂದಿಗೆ ಸಹಕರಿಸುವಂತೆ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಇ-ಮೇಲ್: synergia@sahyadri.edu.in
ಡಾ. ಪ್ರಶಾಂತ್ ರಾವ್ – 9448983914 (ಪ್ರಾದ್ಯಾಪಕ ಸಂಯೋಜಕರು)
ಭವಿಷ್ ಶೆಟ್ಟಿ – 9535670414 (ಕಾರ್ಯಕ್ರಮ ಸಂಯೋಜಕರು)
ಖುಷಿ ಶೆಟ್ಟಿ – 7676938425 (ಕಾರ್ಯಕ್ರಮ ಸಂಯೋಜಕರು)

ಸಹ್ಯಾದ್ರಿ ಕಾಲೇಜು ಆಡಳಿತಾಧಿಕಾರಿ ಮತ್ತು ಟ್ರಸ್ಟೀ ಶ್ರೀಕೃಷ್ಣ ಹೆಗ್ಡೆ, ಪ್ರಾಂಶುಪಾಲ ಡಾ. ಇಂಜಗನೇರಿ, ಡೀನ್ ಅಕ್ಯಾಡೆಮಿಕ್ ಡಾ ಶಮಂತ್ ರೈ ಹಾಗೂ ಕಾರ್ಯಕ್ರಮದ ಸಂಯೋಜಕರು ಮತ್ತು ಡೀನ್ ಸ್ಟೂಡೆಂಟ್ ವೆಲ್ಫೇರ್ ಡಾ. ಪ್ರಶಾತ್ ರಾವ್ ಇವರುಗಳು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

Ad Widget
Continue Reading

ಶಿಕ್ಷಣ

Philomena-ಕೊಂಕಣಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ನವೆಂಬರ್ 8 ರಂದು ಭಾಗವಹಿಸಿತು.

Ad Widget

Ad Widget

Ad Widget

ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ  ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ನವೆಂಬರ್ 8 ರಂದು ಭಾಗವಹಿಸಿತು.

Ad Widget

Ad Widget alt="Ad Widget"/>

Ad Widget

12 ದಿನಗಳು , 12 ಗಂಟೆಗಳು ಮತ್ತು 12 ನಿಮಿಷಗಳ ಗಾಯನ ಮ್ಯಾರಥಾನ್ ನಿರಂತರವಾಗಿ ಸುಮಾರು 300 ಗಂಟೆಗಳ ಕಾಲ ಈ ಕೊಂಕಣಿ ಗಾಯನವನ್ನು ಪ್ರಸ್ತುತಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. 300 ಗಾಯನ ತಂಡಗಳು ಭಾಗವಹಿಸಿ, 4,500ಕ್ಕೂ ಹೆಚ್ಚು ಕೊಂಕಣಿ ಗೀತೆಗಳನ್ನು ನಿರಂತರವಾಗಿ ಹಾಡಿ, 6,700ಕ್ಕೂ ಹೆಚ್ಚು ಗಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Ad Widget

Ad Widget <> Ad Widget

ಮಾಂಡ್ ಸೊಭಾಣ್ ವತಿಯಿಂದ ಆಯೋಜಿಸಿದ ಈ ಅದ್ಧುರಿಯಾದ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸಂತ ಫಿಲೋಮಿನಾ (ಸ್ವಾಯತ್ತ)ಕಾಲೇಜು ಭಾಗವಹಿಸಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಒಟ್ಟು 24 ಜನರ ತಂಡ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಮಹಾಸಮ್ಮೇಳನದ ಈ ಐತಿಹಾಸಿಕ ಪಯಣದಲ್ಲಿ ಸಂಸ್ಥೆಯು ತೋರಿದ ಒಗ್ಗಟ್ಟು, ಸಮರ್ಪಣಾ ಭಾವ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.



Ad Widget
Ad Widget
Continue Reading

ಶಿಕ್ಷಣ

Philomena-ಸಿಎ ಫೌಂಡೇಷನ್ ಪರೀಕ್ಷೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತೇರ್ಗಡೆ

Published

on



Ad Widget

Ad Widget

Ad Widget

Ad Widget

ಸೆಪ್ಟೆಂಬರ್ 2026ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿ ಎ ಫೌಂಡೇಷನ್ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬಿ. ವಿ ಅನು ಮತ್ತು ಕೆ ಮೂಹಮ್ಮದ್ ಅಜ್ಮಲ್ ಇವರು ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.

Ad Widget

Ad Widget

Ad Widget

ಪುತ್ತೂರು: ಸೆಪ್ಟೆಂಬರ್ 2026ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿ ಎ ಫೌಂಡೇಷನ್ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬಿ. ವಿ ಅನು ಮತ್ತು ಕೆ ಮೂಹಮ್ಮದ್ ಅಜ್ಮಲ್ ಇವರು ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಬಿ. ವಿ. ಅನು ಬೆಂಗಳೂರು ನಿವಾಸಿ ವೀರಭದ್ರಯ್ಯ ಮತ್ತು ಭಾಗ್ಯ ದಂಪತಿಗಳ ಪುತ್ರಿ.
ಕೆ. ಮೊಹಮ್ಮದ್ ಅಜ್ಮಲ್ ಪುತ್ತೂರು ನಿವಾಸಿ ಕೆ.ಎಂ ಹಮ್ಜಾ ಮತ್ತು ಆಫ್ರಾ ಎಂ ದಂಪತಿಗಳ ಪುತ್ರ.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಉಪನ್ಯಾಸಕರಾದ ಸಂಜಯ್ ಎಸ್, ರಾಹುಲ್, ಭರತ್ ಜಿ. ಪೈ ಹಾಗೂ ಗೀತಾ ಉಪಸ್ಥಿತರಿದ್ದರು.



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!