ರಾಜ್ಯ
SIR-ಎಸ್‌ಐಆರ್ ಬಳಿಕ ಕರ್ನಾಟಕದಲ್ಲಿ ಎಷ್ಟು ಮತದಾರರು? ಅಂತಿಮ ಪಟ್ಟಿ ಇಂದು ಪ್ರಕಟ
ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಇಂದು (ಅ.27) ಪ್ರಕಟಿಸಲಾಗುವುದು. ಎಸ್‌ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ, 2026ರ ಜೂನ್ 16ರ ವೇಳೆಗೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದರು.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಇಂದು (ಅ.27) ಪ್ರಕಟಿಸಲಾಗುವುದು.
ಎಸ್‌ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ, 2026ರ ಜೂನ್ 16ರ ವೇಳೆಗೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದರು. ಇವರಲ್ಲಿ 1,07,96,339 ಮಂದಿಯನ್ನು ಗೈರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತದಾರರು ಹಾಗೂ ಇತರೆ (ASDDO) ವರ್ಗಗಳ ಅಡಿಯಲ್ಲಿ ಗುರುತಿಸಲಾಗಿತ್ತು.
ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 4,46,35,975 ಮತದಾರರ ಹೆಸರುಗಳು ದಾಖಲಾಗಿದ್ದವು.
ಮತದಾರರ ವಿವರಗಳಲ್ಲಿನ ತಾರ್ಕಿಕ ವ್ಯತ್ಯಾಸಗಳು ಹಾಗೂ ಮ್ಯಾಪಿಂಗ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 43,82,824 ನೋಟಿಸ್‌ಗಳನ್ನು ನೀಡಲಾಗಿತ್ತು.
ಇದಲ್ಲದೆ, ಜೂನ್ 16ರಿಂದ ಅಕ್ಟೋಬರ್ 23ರವರೆಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಿಧ ಅರ್ಜಿಗಳು ಸ್ವೀಕೃತವಾಗಿವೆ. ಹೊಸ ಮತದಾರರ ನೋಂದಣಿಗಾಗಿ 10,42,863 ನಮೂನೆ-6 ಅರ್ಜಿಗಳು ಹಾಗೂ ವಿದೇಶಿ ಮತದಾರರ ನೋಂದಣಿಗಾಗಿ 4,840 ನಮೂನೆ-6ಎ ಅರ್ಜಿಗಳು ಸಲ್ಲಿಕೆಯಾಗಿವೆ.
ಅದೇ ಅವಧಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸುವುದಕ್ಕಾಗಿ 2,28,917 ನಮೂನೆ-7 ಅರ್ಜಿಗಳು ಮತ್ತು ಹೆಸರು ಹಾಗೂ ಇತರ ವಿವರಗಳ ತಿದ್ದುಪಡಿಗಾಗಿ 13,10,841 ನಮೂನೆ-8 ಅರ್ಜಿಗಳು ಸ್ವೀಕೃತವಾಗಿವೆ.
ಈ ಎಲ್ಲ ಪ್ರಕ್ರಿಯೆಗಳ ಬಳಿಕ ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದ ಒಟ್ಟು ಮತದಾರರ ಸಂಖ್ಯೆಯಲ್ಲಿ ಎಷ್ಟು ಬದಲಾವಣೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಜಕೀಯ
Election-ಕರ್ನಾಟಕ ವಿಧಾನಪರಿಷತ್ ಚುನಾವಣೆ : ಎಲ್ಲ ನಾಲ್ಕು ಸೀಟ್ NDA ಪಾಲು : ಆಡಳಿತರೂಡ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ – ಸಿದ್ದರಾಮಯ್ಯ ರಾಜೀನಾಮೆ ಬಳಿಕದ ಮೊದಲ ಚುನಾವಣೆ
ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ 1 ಜೆಡಿಎಸ್, 3 ಬಿಜೆಪಿ ಗೆಲುವು ದಾಖಲಿಸಿದೆ. ಈ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಆಡಳಿತರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ 1 ಜೆಡಿಎಸ್, 3 ಬಿಜೆಪಿ ಗೆಲುವು ದಾಖಲಿಸಿದೆ. ಈ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಆಡಳಿತರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.
ಅಕ್ಟೋಬರ್ 23 ರಂದು ನಡೆದಿದ್ದ ಮತದಾನದ ಬಳಿಕ, ಅಂತಿಮ ಫಲಿತಾಂಶಕ್ಕಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬ್ಯಾಲೆಟ್ ಪೇಪರ್ ಹಿನ್ನೆಲೆ ಅಕ್ಟೋಬರ್ 27 ಕ್ಕೆ ಆರಂಭವಾದ ಮತ ಎಣಿಕೆ ಕೆಲ ಕ್ಷೇತ್ರಗಳಲ್ಲಿ ಮಧ್ಯರಾತ್ರಿವರೆಗೂ, ಕೆಲವೆಡೆ ಮರು ದಿನದವರೆಗೂ ನಡೆಯಿತು. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಮೇಲ್ಮನೆ ಚುನಾವಣೆ ಯಶಸ್ಸು ಎನ್‌ಡಿಎ ಮೈತ್ರಿಕೂಟದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಹೊಸ ಹುರುಪು ಮೂಡಿಸಿದೆ.
ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗೆಲುವು
ಬೆಂಗಳೂರು ಶಿಕ್ಷಕರ ಕ್ಷೇತ್ರ: ಜೆಡಿಎಸ್ ಬಿಜೆಪಿ ಮೈತ್ರಿ ಎನ್‌ಡಿಎ ಅಭ್ಯರ್ಥಿ ಎಪಿ ರಂಗನಾಥ್ ಅವರು 10,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪುಟ್ಟಣ್ಣನವರಿಂದ 9902 ಮತಪಡೆದಿದ್ದಾರೆ. 908 ಮತಗಳ ಅಂತರದಲ್ಲಿ ಎಪಿ ರಂಗನಾಥ್ ಚುನಾಯಿತರಾಗಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರ: ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರು 5ನೇ ಬಾರಿಗೆ ಪುನರಾಯ್ಕೆ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಪರಾಭವಗೊಂಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರ: ಬಿಜೆಪಿಯ ಎಸ್ ವಿ ಸಂಕನೂರ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ ಸೋಲುಂಡಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರ: ಬಿಜೆಪಿಯ ಕೆಎಂ ಸುರೇಶ್ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಶಶಿ ಹುಲಿಕುಂಟೆಮಂಠ ಸೋಲುಂಡಿದ್ದಾರೆ.
ಕ್ಷೇತ್ರವಾರು ವಿವರ
ಕ್ರ.ಸಂ. ಕ್ಷೇತ್ರಗಳು ಕಾಂಗ್ರೆಸ್ ಅಭ್ಯರ್ಥಿ – ಮತಗಳು ಎನ್‌ಡಿಎ (ಬಿಜೆಪಿ / ಜೆಡಿಎಸ್) ಅಭ್ಯರ್ಥಿ- ಮತಗಳು
1 ಬೆಂಗಳೂರು ಶಿಕ್ಷಕರ ಕ್ಷೇತ್ರ ಪುಟ್ಟಣ್ಣ – ಸೋಲು (9,902 ಮತಗಳು) ಎಪಿ ರಂಗನಾಥ್ – ಗೆಲುವು
2 ಪಶ್ಚಿಮ ಪದವೀಧರರ ಕ್ಷೇತ್ರ ಮೋಹನ್ ಲಿಂಬಿಕಾಯಿ – ಸೋಲು (9323 ಮತಗಳು) ಎಸ್.ವಿ. ಸಂಕನೂರ – ಗೆಲುವು (33,711 ಮತಗಳು)
3 ಈಶಾನ್ಯ ಶಿಕ್ಷಕರ ಕ್ಷೇತ್ರ ಶರಣಪ್ಪ ಮತ್ತೂರ್ – ಸೋಲು (12,299 ಮತಗಳು) ಶಶೀಲ್ ಜಿ. ನಮೋಶಿ – ಗೆಲುವು (15,596 ಮತಗಳು)
4 ಆಗ್ನೇಯ ಪದವೀಧರರ ಕ್ಷೇತ್ರ ಶಶಿ ಹುಲಿಕುಂಟೆಮಠ – ಸೋಲು (42,922) ಕೆ.ಎಂ. ಸುರೇಶ್ -ಗೆಲುವು (66,020 ಮತಗಳು)
ಈಶಾನ್ಯ ಪದವೀಧರ ಕ್ಷೇತ್ರ ಅಭ್ಯರ್ಥಿವಾರು ಪಡೆದ ಮತಗಳ ವಿವರ
ಕ್ರಮ ಸಂಖ್ಯೆ ಅಭ್ಯರ್ಥಿಯ ಹೆಸರು ಪಡೆದ ಒಟ್ಟು ಮೊದಲ ಪ್ರಾಶಸ್ತ್ಯದ ಮತಗಳು
1 ಕೆಎಂ ಸುರೇಶ (ಬಿಜೆಪಿ) 66,020
2 ಶಶಿ ಹುಲಿಕುಂಟೆಮಠ (ಕಾಂಗ್ರೆಸ್) 42,922
3 ಅಡ್ವೊಕೇಟ್ ಬರೀದ್ 1,107
4 ಶಶಿ ಹುಲಿಕಟ್ಟಿ 449
5 ಲಕ್ಷ್ಮಯ್ಯ ಆರ್. (ಆರ್.ಎಲ್) 387
6 ಚಿಕ್ಕರಾಜು ಎಸ್. ಯಾದವ್ 377
7 ಲಕ್ಷ್ಮೀಕಾಂತ ಎಸ್. ಯಾದವ್ 369
8 ಜಿ.ಸಿ. ಪಟೇಲ್ 162
9 ಕಪನಿಗೌಡ 156
10 ಸೈಯದ್ ಅಫಾಕ್ ಅಹಮದ್ 113
ತಿರಸ್ಕೃತಗೊಂಡ ಮತಗಳು 20,076
ಈಶಾನ್ಯದಲ್ಲಿ ಶಶೀಲ್ ನಮೋಶಿ ಸತತ 5ನೇ ಗೆಲುವು
ರಾಜಕೀಯವಾಗಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಎನ್ ಡಿಎ ಮೈತ್ರಿಕೂಟದ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರು 5ನೇ ಬಾರಿಗೆ ಪುನರಾಯ್ಕೆ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ನಮೋಶಿ ಅವರು 3,297 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.
ಶಶೀಲ್ ನಮೋಶಿ: 15,596(ಬಿಜೆಪಿ)
ಶರಣಪ್ಪ ಮಟ್ಟೂರ್ : 12,299(ಕಾಂಗ್ರೆಸ್ )
ಗೆಲುವಿಗೆ ಬೇಕಾಗಿದ್ದ ಮತ: 14,191
ಗೆಲುವಿನ ಅಂತರ: 3,297
ಅಸಿಂಧು ಮತ: 1,873
ಪಶ್ಚಿಮ ಪದವೀಧರ ಕ್ಷೇತ್ರದ ಮತದಾನ ಎಣಿಕೆ ವಿವರ
ಕ್ರ. ಸಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1 ಎಸ್.ವಿ. ಸಂಕನೂರ ಬಿಜೆಪಿ 33,711 – ಗೆಲುವು
2 ಮೋಹನ ಲಿಂಬಿಕಾಯಿ ಕಾಂಗ್ರೆಸ್ 24,388
3 ಕಾಂತಕುಮಾರ ಆರ್ ಪಕ್ಷೇತರ 4,055
4 ಡಾ. ಜಿ.ಎಚ್. ಇಮ್ರಾಪುರ ಪಕ್ಷೇತರ 338
5 ಉಮೇಶ ಕೃಷ್ಣಪ್ಪ ದೈವಜ್ಞ್ ಪಕ್ಷೇತರ 228
6 ನಿಶಾಂತ ಶಂಕರ ಬಂಕಾಪುರ ಪಕ್ಷೇತರ 143
7 ಕೃಷ್ಣಾ ಎಚ್. ಬಳೆಗಾರ ಕೆ.ಆರ್. ಎಸ್ 141
8 ಅಬ್ದುಲ್ ಮನ್ನಾನ ಪಕ್ಷೇತರ 120
9 ಸಂತೋಷ ಮನೋಹರ ವೆರ್ಣಿಕರ ಪಕ್ಷೇತರ 85
10 ಜೀಶಾನ್ ಅಹ್ಮದಖಾನ್ ಪಟ್ಹಾನ್ ಪಕ್ಷೇತರ 62
11 ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಪಕ್ಷೇತರ 55
12 ತಳವಾರ ಶಿವಕುಮಾರ ಪಕ್ಷೇತರ 42
13 ಜಿಶಾನ್ ಡಿ. ಶಿರಸಂಗಿ ಪಕ್ಷೇತರ 39
14 ಬಸವರಾಜ ಶಂಕರಪ್ಪ ಕೊಟಗಿ ಪಕ್ಷೇತರ 39
10,245 ಮತಗಳು ತಿರಸ್ಕೃತಗೊಂಡಿದೆ. ಒಟ್ಟು ಮತಗಳು 63,446
ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣಾ ಫಲಿತಾಂಶದ ವಿವರ
ಕ್ರ. ಸಂ. ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
1 ಎ.ಪಿ. ರಂಗನಾಥ್ ಬಿಜೆಪಿ+ಜೆಡಿಎಸ್ 10,810
2 ಪುಟ್ಟಣ್ಣ ಕಾಂಗ್ರೆಸ್ 9,902
3 ಉಮೇಶ್ ಬಾಬು ಪಿಳ್ಳೆಗೌಡ ಪಕ್ಷೇತರ 215
4 ಡಾ. ಜಿ.ಆರ್. ಹೆಬ್ಬೂರು ಕರ್ನಾಟಕ ರಾಷ್ಟ್ರ ಸಮಿತಿ 94
5 ಡಾ. ಎನ್. ಲಕ್ಷ್ಮಣ ಸ್ವಾಮಿ ಪಕ್ಷೇತರ 24
6 ಬಿ. ಎಸ್. ನಾಗರಾಜು ಪಕ್ಷೇತರ 11
ಸತ್ಯಮೇವ ಜಯತೆ ಎಂದ ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎಪಿ ರಂಗನಾಥ್ ಭರ್ಜರಿ ಗೆಲುವು ಸಾಧಿಸಿದ್ದು, ಆ ಗೆಲುವನ್ನು ಸತ್ಯಮೇವ ಜಯತೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಬಣ್ಣಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸುಳ್ಳು, ದುರಾಡಳಿತ, ಹಣಬಲ, ತೋಳ್ಬಲಗಳು ಸೋತಿವೆ. ಈ ಚುನಾವಣೆ ಹೊಸ ಭರವಸೆಯ ಸೂರ್ಯೋದಯಕ್ಕೆ ನಾಂದಿ ಹಾಡಿದೆ ಎಂದಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಭರ್ಜರಿ ಜಯಭೇರಿ ಸಾಧಿಸಿದ್ದು, ನಮ್ಮ ಒಮ್ಮತದ ಅಭ್ಯರ್ಥಿ ಶ್ರೀ ಎ.ಪಿ.ರಂಗನಾಥ್ ಅವರಿಗೆ ಅಭಿನಂದನೆಗಳು. ಹಾಗೆಯೇ, ಉಳಿದ ಮೂರು ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಸಂತೋಷದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರು ಹಾಗೂ ಆಮಿಷ, ಅಧಿಕಾರದ ದರ್ಪವನ್ನು ದಿಕ್ಕರಿಸಿ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಗುರುವೇ ದಾರಿ ಎನ್ನುವಂತೆ ಮುಂದಿನ ಬದಲಾವಣೆಗೆ ಭಾಷ್ಯ ಬರೆದಿದ್ದಾರೆ ಎಂದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಗೆಲವು ಐತಿಹಾಸಿಕ. 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶ. ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ, ಮುಂದಿನ ದೀಪಾವಳಿಗೆ ಕನ್ನಡ ನಾಡಿನಲ್ಲಿ ಮೈತ್ರಿಯ ಮುಂಬೆಳಕು ಮೂಡುವುದು ಖಚಿತ ಎಂದಿರುವ ಅವರು; ನಮ್ಮ ಮೈತ್ರಿಯ ಪ್ರೇರಕಶಕ್ತಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೂ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಎಪಿ ರಂಗನಾಥಗೆ ನಿಖಿಲ್ ಕುಮಾರಸ್ವಾಮಿ ಶುಭಾಶಯ
“ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಐತಿಹಾಸಿಕ ಗೆಲುವಿಗಾಗಿ ಅಹೋರಾತ್ರಿ ಶ್ರಮಿಸಿದ ಮೈತ್ರಿಕೂಟದ ಎರಡೂ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಮುಖ್ಯವಾಗಿ ಎನ್.ಡಿ.ಎ ಮೈತ್ರಿಕೂಟದ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಗೌರವಾನ್ವಿತ ಶಿಕ್ಷಕರ ಸಮುದಾಯಕ್ಕೆ ನನ್ನ ಧನ್ಯವಾದಗಳು ” ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಿರ್ಗಮನದ ದಿನಗಳು ಆರಂಭ
“ವಿಶೇಷವಾಗಿ, ಎರಡೂ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾವು ಎರಡೂ ಪಕ್ಷಗಳು ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಈ ಅದ್ಭುತ ಫಲಿತಾಂಶ ಲಭಿಸಿದೆ. ಕಾರ್ಯಕರ್ತರ ಈ ಅಪಾರ ಶ್ರಮ ಮತ್ತು ಒಗ್ಗಟ್ಟೇ ನಮ್ಮ ಗೆಲುವಿನ ನೈಜ ಶಕ್ತಿ. ಜನವಿರೋಧಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಈ ಚುನಾವಣೆ ಸ್ಪಷ್ಟ ಮುನ್ನುಡಿ ಬರೆದಿದ್ದು, ಅಧಿಕಾರದಿಂದ ಕಾಂಗ್ರೆಸ್ ನಿರ್ಗಮನದ ದಿನಗಳು ಈಗಿನಿಂದಲೇ ಆರಂಭವಾಗಿವೆ” ಎಂದಿದ್ದಾರೆ ನಿಖಿಲ್.
ಹಿಂದೆಯೂ ಬಿಜೆಪಿ ಮೇಲುಗೈ ಸಾಧಿಸಿತ್ತು
ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು (ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕ, ಆಗ್ನೇಯ ಪದವೀಧರ) ಈ ಹಿಂದೆ ಬಿಜೆಪಿಯ ವಶದಲ್ಲಿದ್ದವು. ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಬಳಿ ಇತ್ತು. ಈ ಚುನಾವಣೆಯು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಜನಪ್ರಿಯತೆ ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಹೊಂದಾಣಿಕೆಗೆ ಒಂದು ಪ್ರಮುಖ ಪರೀಕ್ಷೆಯಾಗಿತ್ತು.
ರಾಜಕೀಯ
Ashok Rai On Sting Operation ಸ್ಟಿಂಗ್ ಆಪರೇಷನ್ ಬಗ್ಗೆ ನನಗೆ ಮಾಹಿತಿಯಿಲ್ಲ: ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟನೆ

ಪುತ್ತೂರು, ಅ. 23: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದ ಕೆಲವರು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ನಡೆಸಿರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ತಾನು ಯಾವುದೇ ಸ್ಟಿಂಗ್ ಆಪರೇಷನ್ ಮಾಡಿಲ್ಲ. ಸುಮಾರು ಮೂರು ವರ್ಷಗಳ ಹಿಂದೆ ಕೆಲವರು ಈ ಕೃತ್ಯ ನಡೆಸಿದ್ದಾರೆ ಎಂಬ ವಿಚಾರ ಮಾಧ್ಯಮಗಳ ವರದಿಗಳ ಮೂಲಕವಷ್ಟೇ ತನಗೆ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದವರಿಂದ ಸ್ಟಿಂಗ್ ಆಪರೇಷನ್?
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದ ಕೆಲವರು ಸ್ಟಿಂಗ್ ಆಪರೇಷನ್ ನಡೆಸಿದ್ದರು ಎಂಬ ಆರೋಪಗಳು ಇದೀಗ ಮುನ್ನೆಲೆಗೆ ಬಂದಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪುತ್ತೂರು ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಸ್ಟಿಂಗ್ ಆಪರೇಷನ್‌ನ ಉದ್ದೇಶ, ಅದರ ಹಿಂದಿರುವ ವ್ಯಕ್ತಿಗಳು ಹಾಗೂ ಪ್ರಕರಣದ ಸಂಪೂರ್ಣ ಹಿನ್ನೆಲೆಯ ಕುರಿತು ಅಧಿಕೃತವಾಗಿ ದೃಢಪಟ್ಟ ಮಾಹಿತಿಗಳು ಲಭ್ಯವಾಗಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಪಕ್ಷ ತನಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ ತನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಕಾನೂನು ಪ್ರಕಾರ ಕ್ರಮವಾಗಲಿ
ಸ್ಟಿಂಗ್ ಆಪರೇಷನ್‌ನಲ್ಲಿ ತಮ್ಮ ಪಾತ್ರವಿದೆ ಎಂಬುದನ್ನು ನಿರಾಕರಿಸಿರುವ ಅಶೋಕ್ ಕುಮಾರ್ ರೈ, ತಾನು ಯಾವುದೇ ರೀತಿಯ ಸ್ಟಿಂಗ್ ಆಪರೇಷನ್ ನಡೆಸಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಮೂರು ವರ್ಷಗಳ ಹಿಂದಿನ ಘಟನೆ ಎಂದು ಹೇಳಲಾಗುತ್ತಿರುವ ಈ ಪ್ರಕರಣದ ಬಗ್ಗೆ ಮಾಧ್ಯಮಗಳ ಮೂಲಕವೇ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ನಡೆದಿದೆ ಎನ್ನಲಾಗುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಹಿಂದಿನ ಉದ್ದೇಶ, ಭಾಗಿಯಾಗಿದ್ದಾರೆ ಎನ್ನಲಾದವರ ಪಾತ್ರ ಹಾಗೂ ಮುಂದಿನ ಕಾನೂನು ಕ್ರಮಗಳ ಕುರಿತು ಸ್ಪಷ್ಟತೆ ದೊರೆಯಬೇಕಿದೆ.
ರಾಜ್ಯ
Kodishri-ʻಹಿಂಗಾರು ಮಳೆ ಉತ್ತಮ, ನಾಡು ಸುಭಿಕ್ಷʼ; ಧಾರವಾಡ ಜಂಬೂಸವಾರಿಯಲ್ಲಿ ಕೋಡಿಶ್ರೀ ಭವಿಷ್ಯ
ಈ ಬಾರಿ ʻʻಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದ್ದು, ನಾಡಿನಲ್ಲಿ ಸುಭಿಕ್ಷೆ ನೆಲೆಸಲಿದೆʼʼ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮಂಗಳವಾರ ಧಾರವಾಡದಲ್ಲಿ ನಡೆದ ಜಂಬೂಸವಾರಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆಯ ಕೊರತೆಯಿಂದ ಎದುರಾಗಿದ್ದ ಸಂಕಷ್ಟಗಳು ಹಿಂಗಾರು ಮಳೆಯಿಂದ ದೂರವಾಗುವ ನಿರೀಕ್ಷೆ ವ್ಯಕ್ತಪಡಿಸಿದರು.
ಧಾರವಾಡ: ಈ ಬಾರಿ ʻʻಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದ್ದು, ನಾಡಿನಲ್ಲಿ ಸುಭಿಕ್ಷೆ ನೆಲೆಸಲಿದೆʼʼ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಧಾರವಾಡದಲ್ಲಿ ನಡೆದ ಜಂಬೂಸವಾರಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆಯ ಕೊರತೆಯಿಂದ ಎದುರಾಗಿದ್ದ ಸಂಕಷ್ಟಗಳು ಹಿಂಗಾರು ಮಳೆಯಿಂದ ದೂರವಾಗುವ ನಿರೀಕ್ಷೆ ವ್ಯಕ್ತಪಡಿಸಿದರು.
ಹಿಂಗಾರು ಮಳೆಯಿಂದ ರೈತರಿಗೆ ನೆಮ್ಮದಿಯ ನಿರೀಕ್ಷೆ
ಈ ಹಿಂದೆ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ ನೀರಿನ ಅಭಾವ, ಆಹಾರದ ಕೊರತೆ ಹಾಗೂ ಜನಜೀವನದಲ್ಲಿ ಹಲವು ಸಂಕಷ್ಟಗಳು ಎದುರಾಗಿದ್ದವು. ಆದರೆ, ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ಇದರಿಂದ ನಾಡಿನಲ್ಲಿ ಸಮೃದ್ಧಿ ನೆಲೆಸಿ, ಜನರ ಸಂಕಷ್ಟಗಳು ದೂರವಾಗಲಿವೆ ಎಂದು ಶ್ರೀಗಳು ತಿಳಿಸಿದರು.
ಉತ್ತಮ ಮಳೆಯಿಂದ ಜಲಾಶಯಗಳು ತುಂಬಲಿದ್ದು, ಜಲಚರಗಳಿಗೂ ಅನುಕೂಲವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ರೈತರು, ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಒಳಿತಾಗಲಿ. ರೋಗ-ರುಜಿನಗಳು ದೂರವಾಗಿ ಎಲ್ಲರಿಗೂ ನೆಮ್ಮದಿ ಮತ್ತು ಮನಶ್ಶಾಂತಿ ದೊರೆಯಲಿ ಎಂದು ಸ್ವಾಮೀಜಿ ಹಾರೈಸಿದರು.
ಅಖಂಡ ಕರ್ನಾಟಕದ ಸಾಂಸ್ಕೃತಿಕ ಏಕತೆಯ ಸಂಕೇತ ಜಂಬೂಸವಾರಿ
ಧಾರವಾಡದ ಜಂಬೂಸವಾರಿ ಉತ್ಸವದ ಮಹತ್ವವನ್ನು ವಿವರಿಸಿದ ಕೋಡಿಶ್ರೀಗಳು, ದಕ್ಷಿಣ ಕರ್ನಾಟಕದಲ್ಲಿ ಮೈಸೂರು ದಸರಾ ಜಂಬೂಸವಾರಿ ಪ್ರಸಿದ್ಧಿ ಪಡೆದಿರುವಂತೆ, ಉತ್ತರ ಕರ್ನಾಟಕದಲ್ಲಿ ಧಾರವಾಡದ ಜಂಬೂಸವಾರಿ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ ಎಂದರು.
ಇಂತಹ ಸಾಮೂಹಿಕ ಉತ್ಸವಗಳು ಜನರಲ್ಲಿ ಸದ್ಗುಣಗಳನ್ನು ಬೆಳೆಸಲು, ದುರ್ಗುಣಗಳನ್ನು ದೂರಮಾಡಲು ಹಾಗೂ ಹಿರಿಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಅಖಂಡ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಜನಜೀವನ ಹಾಗೂ ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರು ಒಗ್ಗಟ್ಟಿನಿಂದ ಸಾಗಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.
ಹಬ್ಬಗಳ ಸಂದರ್ಭದಲ್ಲಿ ಭವಿಷ್ಯ ನುಡಿಯುವ ಕೋಡಿಶ್ರೀಗಳು
ಕೋಡಿಮಠದ ಸ್ವಾಮೀಜಿಗಳು ಮಕರ ಸಂಕ್ರಾಂತಿ, ಯುಗಾದಿ ಹಾಗೂ ದಸರಾ ಸಂದರ್ಭಗಳಲ್ಲಿ ಮಳೆ-ಬೆಳೆ ಮತ್ತು ದೇಶದ ಪರಿಸ್ಥಿತಿಯ ಕುರಿತು ಭವಿಷ್ಯ ನುಡಿಯುವುದು ವಾಡಿಕೆ. ಶ್ರೀಗಳು ಈ ಹಿಂದೆ ನುಡಿದ ಕೆಲವು ಭವಿಷ್ಯವಾಣಿಗಳು ನಿಜವಾಗಿವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಉಕ್ರೇನ್–ರಷ್ಯಾ ಹಾಗೂ ಇಸ್ರೇಲ್–ಇರಾನ್ ಯುದ್ಧಗಳ ಕುರಿತು ಅವರು ನುಡಿದಿದ್ದಾರೆ ಎನ್ನಲಾದ ಭವಿಷ್ಯವಾಣಿಗಳ ಬಗ್ಗೆಯೂ ವಿವಿಧೆಡೆ ಚರ್ಚೆಗಳು ನಡೆದಿವೆ.
-
Uncategorized23 hours ago
ಸುರತ್ಕಲ್ : ಪೊಲೀಸ್ ವಿಚಾರಣೆಗೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ: ಠಾಣೆ ಎದುರು ಶವವಿಟ್ಟು ಪ್ರತಿಭಟನೆ, ಹೆದ್ದಾರಿ ಸಂಚಾರ ಸ್ಥಗಿತ | ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ
-
ದಕ್ಷಿಣ ಕನ್ನಡ22 hours ago
kukke Temple Contravercy: ಭಕ್ತರ ವಿರೋಧಕ್ಕೆ ಮಣಿದ ಕುಕ್ಕೆ ದೇಗುಲ ಆಡಳಿತ: ಅ.28ರಿಂದಲೇ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭ | ಮಾಜಿ ಟ್ರಸ್ಟಿ ಪ್ರಸನ್ನ ದರ್ಭೆ ಹೋರಾಟಕ್ಕೆ ಜಯ
-
Uncategorized22 hours ago
ಸುರತ್ಕಲ್: ಸೋಮನಾಥ ಆ#ತ್ಮಹತ್ಯೆ ಪ್ರಕರಣ; ಪೊಲೀಸ್ ಠಾಣೆ ಎದುರು ಮೃತದೇಹವಿಟ್ಟು ಸ್ಥಳೀಯರ ಆಕ್ರೋಶ; ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆ- ಪ್ರತಿಭಟನೆ ಅಂತ್ಯ;
-
ಅಪರಾಧ6 hours ago
Puttur Pickup Accident : ಪುತ್ತೂರು: ಕೋಡಿಂಬಾಡಿಯಲ್ಲಿ ತೆಂಗಿನ ಕಾಯಿ ಸಾಗಿಸುತ್ತಿದ್ದ ಪಿಕಪ್ ಪಲ್ಟಿ; ಚಾಲಕ ಸಾವು
-
ಬಿಗ್ ನ್ಯೂಸ್10 hours agoPuttur-ಪುತ್ತೂರು: ವಿಷ ಪದಾರ್ಥ ಸೇವಿಸಿ ನವವಿವಾಹಿತೆ ಸಾವು; ಇಬ್ಬರ ವಿರುದ್ಧ ಪ್ರಕರಣ ದಾಖಲು
-
ಬಿಗ್ ನ್ಯೂಸ್5 hours ago
Prasanna Darbe On Ashok kumar Rai“ಇದು ಗುಲಾಮರ ನೆಲವಲ್ಲ, ಸ್ವಾಭಿಮಾನದ ಪುತ್ತೂರು – ಶಾಸಕರ ಅಭಿವೃದ್ಧಿ ರೀಲ್ಸ್, ಫ್ಲೆಕ್ಸ್ಗಳಿಗೆ ಸೀಮಿತ : ಪ್ರಸನ್ನ ದರ್ಬೆ
-
ಅಪರಾಧ10 hours agoDeralkatte-ದೇರಳಕಟ್ಟೆ ಕಾಲೇಜಿನಲ್ಲಿ ರ್ಯಾಗಿಂಗ್ ಆರೋಪ: ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
-
ಬಿಗ್ ನ್ಯೂಸ್4 hours agoPuttur-ಪುತ್ತೂರು: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಹೊಸಂಗಡಿಯಲ್ಲಿ ಪತ್ತೆ..!


















