ನಿಧನ ವಾರ್ತೆ
Hormuz-ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ: ತಂದೆಯ ಹಾದಿಯಲ್ಲೇ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ಮಗ..!
ಸುಮಾರು ಎರಡು ದಶಕಗಳ ಹಿಂದೆ ಸಮುದ್ರದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಗುಜರಾತ್‌ನ ದ್ವಾರಕ ಜಿಲ್ಲೆಯ ಸಲಾಯಾ ಗ್ರಾಮದ ಗಂಧರ್ ಕುಟುಂಬಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ನವೆಂಬರ್ 2ರಂದು ಭಾರತೀಯ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕುಟುಂಬದ ಕಿರಿಯ ಸದಸ್ಯ, ನಾವಿಕ ನಹೀಮ್ ಅಜೀಜ್ ಗಂಧರ್ ಮೃತಪಟ್ಟಿದ್ದಾರೆ.
ಅಹಮದಾಬಾದ್: ಸುಮಾರು ಎರಡು ದಶಕಗಳ ಹಿಂದೆ ಸಮುದ್ರದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಗುಜರಾತ್‌ನ ದ್ವಾರಕ ಜಿಲ್ಲೆಯ ಸಲಾಯಾ ಗ್ರಾಮದ ಗಂಧರ್ ಕುಟುಂಬಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ನವೆಂಬರ್ 2ರಂದು ಭಾರತೀಯ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕುಟುಂಬದ ಕಿರಿಯ ಸದಸ್ಯ, ನಾವಿಕ ನಹೀಮ್ ಅಜೀಜ್ ಗಂಧರ್ ಮೃತಪಟ್ಟಿದ್ದಾರೆ.
ನಹೀಮ್ ಅವರು ‘ಅಲ್ ಜುಸುಫಿ’ ಎಂಬ ಹಡಗಿನಲ್ಲಿದ್ದ 14 ಸಿಬ್ಬಂದಿಗಳ ಪೈಕಿ ಒಬ್ಬರಾಗಿದ್ದರು. ಯುಎಇಯ ಹಮ್ಮಿಯಾ ಬಂದರಿನಿಂದ ಪೋರಬಂದರ್‌ಗೆ 900 ಮೆಟ್ರಿಕ್ ಟನ್ ಖರ್ಜೂರ ಸಾಗಿಸುತ್ತಿದ್ದ ಈ ಹಡಗಿನ ಮೇಲೆ ಒಮನ್‌ನ ಲಿಮಾ ಸಮೀಪ ಕ್ಷಿಪಣಿ ದಾಳಿ ನಡೆದಿತ್ತು ಎನ್ನಲಾಗಿದೆ. ಘಟನೆಯಲ್ಲಿ ನಹೀಮ್ ಮೃತಪಟ್ಟಿದ್ದು, ಉಳಿದ 13 ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಧರ್ ಕುಟುಂಬಕ್ಕೆ ಸಮುದ್ರದ ದುರಂತ ಹೊಸದೇನಲ್ಲ. ಸುಮಾರು 20-21 ವರ್ಷಗಳ ಹಿಂದೆ ನಹೀಮ್ ಅವರ ತಂದೆ ಅಜೀಜ್‌ಭಾಯಿ ಕೂಡ ಸಮುದ್ರದಲ್ಲೇ ಮೃತಪಟ್ಟಿದ್ದರು. ದುಬೈನಿಂದ ಹಿಂದಿರುಗುತ್ತಿದ್ದ ವೇಳೆ ಚಂಡಮಾರುತಕ್ಕೆ ಸಿಲುಕಿ ಅವರು ನಾಪತ್ತೆಯಾಗಿದ್ದರು. ಅವರ ಮೃತದೇಹವೂ ಪತ್ತೆಯಾಗಿರಲಿಲ್ಲ ಎಂದು ನಹೀಮ್ ಅವರ ಸಂಬಂಧಿ ಇರ್ಫಾನ್ ತಿಳಿಸಿದ್ದಾರೆ.
ಅಜೀಜ್‌ಭಾಯಿ ಅವರ ಐವರು ಮಕ್ಕಳಲ್ಲಿ ನಹೀಮ್ ಕೊನೆಯವರಾಗಿದ್ದರು. ಅವರಿಗೆ ನಾಲ್ವರು ಸಹೋದರಿಯರು ಹಾಗೂ ಒಬ್ಬ ಅಣ್ಣ ಇದ್ದಾರೆ. ನಾಲ್ವರು ಸಹೋದರಿಯರಿಗೂ ವಿವಾಹವಾಗಿದ್ದು, ಅಣ್ಣ ಸ್ವಗ್ರಾಮದಲ್ಲೇ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದಾರೆ.
ಒಮನ್‌ನಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧಾರ
ದುರಂತಕ್ಕೀಡಾದ ಹಡಗಿನ ಮಾಲೀಕ ಹಾಜಿ ಅಕ್ಟರ್ ಸುಂಭಾನಿಯಾ ಮಾತನಾಡಿ, ನಹೀಮ್ ಅವರ ಅಂತ್ಯಕ್ರಿಯೆಯನ್ನು ಒಮನ್‌ನಲ್ಲೇ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಟುಂಬದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಮನ್‌ಗೆ ತೆರಳಲು ಬಯಸಿದ್ದರೂ, ವೀಸಾ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ. ಹೀಗಾಗಿ ಅಂತ್ಯಕ್ರಿಯೆಯನ್ನು ಮುಂದೂಡಲು ಕುಟುಂಬದವರು ಇಚ್ಛಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತೀಯ ರಾಯಭಾರ ಕಚೇರಿ ವಿರುದ್ಧ ಮಾಲೀಕರ ಆರೋಪ
ಹಡಗಿನಲ್ಲಿರುವ ಇತರ ಸಿಬ್ಬಂದಿ ಅಂತ್ಯಕ್ರಿಯೆಗೆ ಅಗತ್ಯವಾದ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಒಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸೂಕ್ತ ನೆರವು ದೊರೆಯುತ್ತಿಲ್ಲ ಎಂದು ಹಡಗಿನ ಮಾಲೀಕರು ಆರೋಪಿಸಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಲು 24 ಗಂಟೆಗಳ ಕಾಲ ವಿಳಂಬ ಮಾಡಿದ್ದಾರೆ ಎಂದು ದೂರಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಭಾರತದ ಹಲವು ಹಡಗುಗಳು ಹಾನಿಗೊಳಗಾಗಿವೆ. ಈ ವರ್ಷದ ಫೆಬ್ರುವರಿಯಿಂದ ಆರು ಹಡಗುಗಳು ಸಂಪೂರ್ಣ ನಾಶವಾಗಿದ್ದರೂ, ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂದು ಸುಂಭಾನಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಡಗಿನಲ್ಲಿದ್ದ ಸರಕು ಹಾಗೂ ಸಿಬ್ಬಂದಿಗೆ ವಿಮೆ ಮಾಡಿಸಿರಲಿಲ್ಲ. ಇದುವರೆಗೆ ಸರ್ಕಾರದಿಂದ ಒಂದು ರೂಪಾಯಿ ನೆರವೂ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಅಲ್ತಾಫ್ ತಾಲಬ್ ಕೇರ್ ಅವರ ಕುಟುಂಬಕ್ಕೆ ಮಾತ್ರ ಹಡಗು ಸಾಗಣೆ ಮಹಾನಿರ್ದೇಶನಾಲಯದಿಂದ ₹10 ಲಕ್ಷ ಪರಿಹಾರ ನೀಡಲಾಗಿತ್ತು ಎಂದು ಸುಂಭಾನಿಯಾ ಮಾಹಿತಿ ನೀಡಿದ್ದಾರೆ.
ನಿಧನ ವಾರ್ತೆ
Kasaragod-ಕಾಸರಗೋಡು: ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿ; ಇಬ್ಬರು ಯುವಕರ ದಾರುಣ ಸಾವು
ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ನೆಹರೂ ಕಾಲೇಜಿನ ಮುಂಭಾಗ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ನೀಲೇಶ್ವರ ಪಡಿಂಜಾಟಂ ಕೊಳುವಲ್ ನಿವಾಸಿಗಳಾದ ಅನುರಾಗ್ (22) ಮತ್ತು ಆನಂದಕೃಷ್ಣನ್ (24) ಎಂದು ಗುರುತಿಸಲಾಗಿದೆ.
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ನೆಹರೂ ಕಾಲೇಜಿನ ಮುಂಭಾಗ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ನೀಲೇಶ್ವರ ಪಡಿಂಜಾಟಂ ಕೊಳುವಲ್ ನಿವಾಸಿಗಳಾದ ಅನುರಾಗ್ (22) ಮತ್ತು ಆನಂದಕೃಷ್ಣನ್ (24) ಎಂದು ಗುರುತಿಸಲಾಗಿದೆ. ಅನುರಾಗ್ ನೀಲೇಶ್ವರದ ವಸಂತ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ನೀಲೇಶ್ವರದಿಂದ ಕಾಞಂಗಾಡ್‌ನ ತಿರುವತ್ತೆ ಅರಯಿಲ್ ಭಗವತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ತೆಯ್ಯಂ ವೀಕ್ಷಿಸಲು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ರಾತ್ರಿ ಸುಮಾರು 9 ಗಂಟೆಗೆ ಪಡನ್ನಕ್ಕಾಡ್‌ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ನಿಧನ ವಾರ್ತೆ
Baikampadi-ಬೈಕಂಪಾಡಿಯಲ್ಲಿ ಭೀಕರ ಅಪಘಾತ; ಲಾರಿಗೆ ಸ್ಕೂಟರ್ ಢಿಕ್ಕಿ, ಸವಾರ ಸಾವು..!
ಸುರತ್ಕಲ್ ಸಮೀಪದ ಬೈಕಂಪಾಡಿಯಲ್ಲಿ ಸೋಮವಾರ ಬೆಳಿಗ್ಗೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಹಳೆಯಂಗಡಿ ಕದಿಕೆ ನಿವಾಸಿ ಇಮ್ತಿಯಾಝ್ (39) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ.
ಸುರತ್ಕಲ್ ಸಮೀಪದ ಬೈಕಂಪಾಡಿಯಲ್ಲಿ ಸೋಮವಾರ ಬೆಳಿಗ್ಗೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಹಳೆಯಂಗಡಿ ಕದಿಕೆ ನಿವಾಸಿ ಇಮ್ತಿಯಾಝ್ (39) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಇಮ್ತಿಯಾಝ್ ಅವರು ಖಾಸಗಿ ಶಿಪ್ಪಿಂಗ್ ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಪಣಂಬೂರಿನಲ್ಲಿರುವ ತಮ್ಮ ಕಂಪನಿಯ ಲಾರಿ ಕಚೇರಿಗೆ ಕೆಲಸದ ನಿಮಿತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಲಾರಿ ಹಾಗೂ ಇಮ್ತಿಯಾಝ್ ಅವರ ಸ್ಕೂಟರ್ ನಡುವೆ ತೀವ್ರ ಸ್ವರೂಪದ ಡಿಕ್ಕಿ ಸಂಭವಿಸಿದ್ದು, ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಇಮ್ತಿಯಾಝ್ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಗಳ ತೀವ್ರತೆಯಿಂದಾಗಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ (ಸುರತ್ಕಲ್) ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತಕ್ಕೆ ಕಾರಣವಾದ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ತನಿಖೆ ಮುಂದುವರಿಸಿದ್ದಾರೆ.
ನಿಧನ ವಾರ್ತೆ
Chikkamaglore-ಬಕೆಟ್‌ನಲ್ಲಿದ್ದ ಹೀಟರ್‌ನಿಂದ ವಿದ್ಯುತ್ ಪ್ರವಹಿಸಿ 8 ವರ್ಷದ ಬಾಲಕ ಸಾವು
ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದ 8 ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಖರಾಯಪಟ್ಟಣದ ನೀಲಾಂಶ್ (8) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು: ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದ 8 ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನನ್ನು ಸಖರಾಯಪಟ್ಟಣದ ನೀಲಾಂಶ್ (8) ಎಂದು ಗುರುತಿಸಲಾಗಿದೆ. ಈತ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ರವಿವಾರ ಶಾಲೆಗೆ ರಜೆ ಇದ್ದ ಕಾರಣ ನೀಲಾಂಶ್ ಮನೆಯಲ್ಲೇ ಇದ್ದನು. ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ ವೇಳೆ ನೀರು ಕಾಯಿಸಲು ಬಕೆಟ್‌ನಲ್ಲಿ ವಿದ್ಯುತ್ ವಾಟರ್ ಹೀಟರ್ ಅಳವಡಿಸಲಾಗಿತ್ತು. ಹೀಟರ್‌ನಿಂದ ಬಿಸಿಯಾಗುತ್ತಿದ್ದ ನೀರಿಗೆ ಕೈ ಹಾಕಿದಾಗ ಬಾಲಕನಿಗೆ ವಿದ್ಯುತ್ ಪ್ರವಹಿಸಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದಾನೆ.
ಕೂಡಲೇ ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಕ್ರೈಂ13 hours agoMurder case-ಬೆಂಗಳೂರಿನಲ್ಲಿ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ಕಾಡಿನಲ್ಲಿ 7 ವರ್ಷದ ಬಾಲಕನ ಮೃತದೇಹ ಪತ್ತೆ – ಉಳಿದವರಿಗಾಗಿ ಶೋಧ : ಬಾಲಕನಿಂದ ಮಹತ್ವದ ಸುಳಿವು : ಕೃತ್ಯಕ್ಕೆ ಆರೋಪಿಯ 17 ವರ್ಷದ ಮಗಳ ಸಾಥ್..!
-
ಕ್ರೈಂ15 hours agoBangalore-ಬೆಂಗಳೂರಿನಲ್ಲಿ ಭೀಕರ ಸಾಮೂಹಿಕ ಹತ್ಯೆ: ಪತ್ನಿ ಸಹಿತ ಕುಟುಂಬದ 7 ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಕೊಂದ ಕ್ಯಾಬ್ ಚಾಲಕ..!
-
ಮಂಗಳೂರು13 hours agoSoujanya Case-Big Breaking: ಸೌಜನ್ಯ ಪ್ರಕರಣ : ಸಂತೋಷ್ ರಾವೇ ನೈಜ ಆರೋಪಿ ಎಂದ ಬೆಂಗಳೂರಿನ ವಕೀಲ ಅಮೃತೇಶ್ ಎಸ್ಐಟಿ ಕಚೇರಿಗೆ – ದೂರು ದಾಖಲು..!
-
ಬಿಗ್ ನ್ಯೂಸ್14 hours agoPuttur-Big Breaking : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನೇಮಕ ಆದೇಶ ಹಿಂಪಡೆದ ಸರ್ಕಾರ – ಎರಡು ದಿನದಲ್ಲಿ ಎರಡು ಆದೇಶ..!
-
ಸ್ಥಳೀಯ8 hours agoArrested-ಬಿಸಿಲೆ ಘಾಟಿಯಲ್ಲಿ ಗರ್ಭಿಣಿ ಯುವತಿಯ ಕೊಲೆಗೆ ಯತ್ನ? ಹಲ್ಲೆ ನಡೆಸಿ ಚರಂಡಿಗೆ ಎಸೆದ ಪ್ರಿಯಕರ ಅರೆಸ್ಟ್
-
Uncategorized8 hours agoPetrol-Big Breaking: ರಾಜ್ಯದಲ್ಲಿ ಪೆಟ್ರೋಲ್ ಗೆ ಶೇ.31.2 ಇಥನಾಲ್ ಮಿಶ್ರಣ ಪತ್ತೆ..! ಲ್ಯಾಬ್ ವರದಿಯಲ್ಲಿ ಆಘಾತಕಾರಿ ಅಂಶ ಬಯಲು..! ಗಂಭೀರ ಆರೋಪ ಮಾಡಿದ ಸಚಿವ ರಿಜ್ವಾನ್ – ಮೈಲೇಜ್ ಕಡಿತ ವಾಹನ ದುಸ್ಥಿತಿಗೆ ಇದೆ ಕಾರಣ.!
-
ಅಪರಾಧ16 hours agoMangalore-ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಬಂಧನ; 3.8 ಕೆ.ಜಿ. ಗಾಂಜಾ, ಕಾರು ವಶಕ್ಕೆ
-
ಅಂತರ ರಾಜ್ಯ15 hours agoJnanesh Kumar-ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ಗೆ ಸಂಕಷ್ಟ: ಲಂಚ ಆರೋಪದ ತನಿಖೆಗೆ ಕೇರಳ ಸರಕಾರ ಅನುಮತಿ


















