ಅಪರಾಧ
Mangalore-ಮಂಗಳೂರು: ಎಲೆಕ್ಟ್ರಿಷಿಯನ್‌ಗೆ ಹಲ್ಲೆ, ಹಣ ಸುಲಿಗೆ ಆರೋಪ: ಪಾಂಡೇಶ್ವರ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಕೇಸ್
ಎಲೆಕ್ಟ್ರಿಷಿಯನ್ ಒಬ್ಬರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು, ನ.6: ಎಲೆಕ್ಟ್ರಿಷಿಯನ್ ಒಬ್ಬರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಿಟ್ಲದ ಮುಳ್ಳೂರು ಮೂಲದವರಾದ, ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ಶಿವನಗರದಲ್ಲಿ ವಾಸವಾಗಿರುವ ರವಿರಾಜ್ (39) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಪಾಂಡೇಶ್ವರ ಠಾಣೆಯ ಶಿವರಾಜ್, ಹೊಯ್ಸಳ ವಾಹನದ ಚಾಲಕ ಹೀರಣ್ಣ ಬೆನ್ನಿ ಹಾಗೂ ಇನ್ನೋರ್ವ ಸಿಬ್ಬಂದಿ ಉಮಾನಾಥ ಆರೋಪಿಗಳಾಗಿದ್ದಾರೆ. ಈ ಪೈಕಿ ಶಿವರಾಜ್ ಮತ್ತು ಹೀರಣ್ಣ ಬೆನ್ನಿಯನ್ನು ಬಂಧಿಸಲಾಗಿದೆ.
ವಾಕಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಲ್ಲೆ ಆರೋಪ
ದೂರಿನ ಪ್ರಕಾರ, ಅಕ್ಟೋಬರ್ 25ರಂದು ರಾತ್ರಿ ಸುಮಾರು 10 ಗಂಟೆಗೆ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ರವಿರಾಜ್ ಅವರನ್ನು ಆರ್‌ಟಿಒ ಕಚೇರಿ ಮುಂಭಾಗದ ಮೈದಾನದ ಗೇಟ್ ಬಳಿ ಹೊಯ್ಸಳ ವಾಹನದಲ್ಲಿ ಬಂದ ಹೀರಣ್ಣ ಬೆನ್ನಿ ಮತ್ತು ಶಿವರಾಜ್ ತಡೆದು ನಿಲ್ಲಿಸಿದ್ದಾರೆ.
ಈ ವೇಳೆ ಶಿವರಾಜ್ ಬೆತ್ತದಿಂದ ರವಿರಾಜ್ ಅವರ ಭುಜ ಮತ್ತು ಕಾಲಿಗೆ ಹೊಡೆದು, ಅವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಮೊಬೈಲ್ ಕವರ್‌ನಲ್ಲಿದ್ದ 300 ರೂ. ತೆಗೆದುಕೊಂಡು ಅವಾಚ್ಯವಾಗಿ ನಿಂದಿಸಿ, ಮತ್ತೆ ಕಂಡರೆ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎರಡನೇ ಬಾರಿ ತಡೆದು 2 ಸಾವಿರ ರೂ. ಪಡೆದ ಆರೋಪ
ಅಕ್ಟೋಬರ್ 27ರಂದು ರಾತ್ರಿ ಸುಮಾರು 9.30ರ ವೇಳೆಗೆ ಅದೇ ಸ್ಥಳದಲ್ಲಿ ತೆರಳುತ್ತಿದ್ದ ರವಿರಾಜ್ ಅವರನ್ನು ಹೊಯ್ಸಳ ವಾಹನದಲ್ಲಿ ಬಂದ ಹೀರಣ್ಣ ಬೆನ್ನಿ ಮತ್ತು ಶಿವರಾಜ್ ಮತ್ತೆ ತಡೆದಿದ್ದಾರೆ. ಬಲವಂತವಾಗಿ ಮೊಬೈಲ್ ಕಸಿದುಕೊಂಡು, ಅದರ ಕವರ್‌ನಲ್ಲಿದ್ದ ಎರಡು ಎಟಿಎಂ ಕಾರ್ಡ್‌ಗಳು, 1,000 ರೂ. ನಗದು ಹಾಗೂ ದ್ವಿಚಕ್ರ ವಾಹನದ ಕೀಯನ್ನು ತೆಗೆದುಕೊಂಡು, ಅಲ್ಲಿಯೇ ಕಾಯುವಂತೆ ಹೇಳಿ ತೆರಳಿದ್ದಾರೆ ಎನ್ನಲಾಗಿದೆ.
ರಾತ್ರಿ 11.30ರ ಸುಮಾರಿಗೆ ವಾಪಸ್ ಬಂದ ಆರೋಪಿಗಳು ರವಿರಾಜ್ ಅವರನ್ನು ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ತನ್ನ ಬಳಿ ಹಣವಿಲ್ಲ, ಎಟಿಎಂ ಕಾರ್ಡ್ ಮಾತ್ರ ಇದೆ ಎಂದು ತಿಳಿಸಿದಾಗ ಮೊಬೈಲ್ ಪಾಸ್‌ವರ್ಡ್ ಪಡೆದು ಬ್ಯಾಂಕ್ ಖಾತೆಯಲ್ಲಿದ್ದ ಹಣ ಪರಿಶೀಲಿಸಿದ್ದಾರೆ. ಖಾತೆಯಲ್ಲಿ 5 ಸಾವಿರ ರೂ. ಇರುವುದನ್ನು ಕಂಡು 2 ಸಾವಿರ ರೂ. ನೀಡುವಂತೆ ಒತ್ತಾಯಿಸಿ, ಹಣ ನೀಡದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ಸಾಲದ ಕಂತು ಪಾವತಿಸಲು ಹಣ ಬೇಕೆಂದು ರವಿರಾಜ್ ಹೇಳಿದರೂ ಕೇಳದೆ, ಮಂಗಳಾದೇವಿ ಬಳಿಯ ಎಟಿಎಂಗೆ ಕರೆದುಕೊಂಡು ಹೋಗಿ ಹಣ ಡ್ರಾ ಮಾಡುವಂತೆ ಒತ್ತಾಯಿಸಿದ್ದಾರೆ. ಅದರಂತೆ ರವಿರಾಜ್ 1,000 ರೂ. ಡ್ರಾ ಮಾಡಿ, ಮೊಬೈಲ್ ಕವರ್‌ನಲ್ಲಿದ್ದ ಮತ್ತೊಂದು 1,000 ರೂ. ಸೇರಿಸಿ ಒಟ್ಟು 2 ಸಾವಿರ ರೂ. ನೀಡಿದ್ದಾರೆ. ಬಳಿಕ ಮೊಬೈಲ್, ಇನ್ನೊಂದು ಎಟಿಎಂ ಕಾರ್ಡ್ ಹಾಗೂ ವಾಹನದ ಕೀಯನ್ನು ಹಿಂದಿರುಗಿಸಿ ಸಿಬ್ಬಂದಿ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ.
ನ. 4ರಂದು ಮತ್ತೆ ಕಿರುಕುಳ ನೀಡಿದ ಆರೋಪ
ನವೆಂಬರ್ 4ರಂದು ರಾತ್ರಿ ಕೆಲಸ ಮುಗಿಸಿ ನೆಹರು ಮೈದಾನದಲ್ಲಿ ವಾಕಿಂಗ್ ಮಾಡಿದ ಬಳಿಕ ಹೊರಗೆ ನಿಂತಿದ್ದ ರವಿರಾಜ್ ಅವರನ್ನು ರಾತ್ರಿ 9.15ರ ಸುಮಾರಿಗೆ ಹೊಯ್ಸಳ ವಾಹನದಲ್ಲಿ ಬಂದ ಶಿವರಾಜ್ ಮತ್ತು ಉಮಾನಾಥ ಕರೆಸಿಕೊಂಡಿದ್ದಾರೆ. ಅವರ ಮೊಬೈಲ್ ಹಾಗೂ ದ್ವಿಚಕ್ರ ವಾಹನದ ಕೀಯನ್ನು ಪಡೆದು ವಾಹನದಲ್ಲಿ ಕುಳ್ಳಿರಿಸಿಕೊಂಡ ಶಿವರಾಜ್, ದಂಡ ಕಟ್ಟಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.
ಹಣವಿಲ್ಲದಿದ್ದಾಗ ದಂಡ ಏಕೆ ಕಟ್ಟಬೇಕು ಎಂದು ರವಿರಾಜ್ ಪ್ರಶ್ನಿಸಿದಾಗ, ಪಾಂಡೇಶ್ವರದ ಮಾಲ್‌ವರೆಗೆ ಕರೆದೊಯ್ದು ವಾಪಸ್ ಕರೆತಂದು ಮೊಬೈಲ್ ನೀಡಿದ್ದಾರೆ. ಬಳಿಕ ರವಿರಾಜ್ ಅವರ ಮೊಬೈಲ್ ಸಂಖ್ಯೆ ಪಡೆದು, ಮರುದಿನ ಬೆಳಗ್ಗೆ 10 ಗಂಟೆಗೆ ಠಾಣೆಗೆ ಬರುವಂತೆ ಸೂಚಿಸಿ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಶಿವರಾಜ್ ವಾಪಸ್ ಬಂದು ಹಣ ನೀಡಿದರೆ ವಾಹನ ಹಿಂದಿರುಗಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ರವಿರಾಜ್ ಮರುದಿನ ಠಾಣೆಗೆ ಬರುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದಾರೆ. ಅದೇ ರಾತ್ರಿ ಸಿಬ್ಬಂದಿ ಉಮಾನಾಥ ಕರೆ ಮಾಡಿ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ರವಿರಾಜ್ ತಮ್ಮ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದು, ಅವರ ಸಲಹೆಯಂತೆ ದೂರು ನೀಡಿದ್ದಾರೆ.
ಅಪರಾಧ
ಪುತ್ತೂರು : ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ಪುತ್ತೂರು: ನವವಿವಾಹಿತೆ ವಿಷ ಪದಾರ್ಥ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ..
ವೀರಮಂಗಲದ ಸುಂದರ ಅವರ ಪತ್ನಿ ಮಮತಾ (32) ಮೃತಪಟ್ಟವರು. ಅಕ್ಟೋಬರ್ 24ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 25ರಂದು ಮೃತಪಟ್ಟಿದ್ದರು.
ಮಮತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅವರು ಮೃತಪಟ್ಟ ಬಳಿಕ ನೀಡಿದ್ದ ಹೇಳಿಕೆಯ ಆಧಾರದಲ್ಲಿ ಪತಿಯ ಸಹೋದರ ಉಮೇಶ್ ಹಾಗೂ ಆತನ ಪತ್ನಿ ವಸಂತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರಿನ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 108, 85 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಆರೋಪಿಗಳಾದ ವಸಂತಿ ಕೆ. ಮತ್ತು ಉಮೇಶ್ ಬಿ. ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಉಭಯ ಕಡೆಯ ವಾದಗಳನ್ನು ಆಲಿಸಿದ ಬಳಿಕ ಇಬ್ಬರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಅಪರಾಧ
Bantwal-ಬಂಟ್ವಾಳ: ಜಾಗದ ತಕರಾರಿನಲ್ಲಿ ದಂಪತಿಗೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ₹1.01 ಲಕ್ಷ ದಂಡ
ಜಾಗದ ವಿಚಾರದಲ್ಲಿ ಉಂಟಾದ ತಕರಾರಿನ ಹಿನ್ನೆಲೆಯಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳಿಗೆ ಬಂಟ್ವಾಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ, ಒಟ್ಟು ₹1,01,000 ದಂಡ ಪಾವತಿಸುವಂತೆ ಆದೇಶಿಸಿದೆ.
ಬಂಟ್ವಾಳ: ಜಾಗದ ವಿಚಾರದಲ್ಲಿ ಉಂಟಾದ ತಕರಾರಿನ ಹಿನ್ನೆಲೆಯಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳಿಗೆ ಬಂಟ್ವಾಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ, ಒಟ್ಟು ₹1,01,000 ದಂಡ ಪಾವತಿಸುವಂತೆ ಆದೇಶಿಸಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಅಲಿಪಾದೆಯಲ್ಲಿ 2022ರ ಅಕ್ಟೋಬರ್ 24ರಂದು ರಾತ್ರಿ ಈ ಘಟನೆ ನಡೆದಿತ್ತು. ಜಾಗದ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಮನಸ್ತಾಪ ಉಂಟಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ ರಾಜೇಶ್ ಮತ್ತು ಅವರ ಪತ್ನಿಯ ಮೇಲೆ ನೆರೆಮನೆಯವರಾದ ಕೃಷ್ಣಪ್ಪ ನಾಯ್ಕ್, ಅವರ ಪತ್ನಿ ಜಯಂತಿ, ಪುತ್ರ ವಿನೋದ್ ಹಾಗೂ ಪಕ್ಕದ ಮನೆಯವರಾದ ಮನು ಮತ್ತು ಲಕ್ಷ್ಮಣ ಸೇರಿದಂತೆ ನಾಲ್ಕೈದು ಮಂದಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿತ್ತು.
ಈ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2022ರಂತೆ ಐಪಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಟ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೃಷ್ಣಪ್ಪ ನಾಯ್ಕ್, ಜಯಂತಿ, ಮುನ್ನ ಅಲಿಯಾಸ್ ಹೇಮಂತ್ ನಾಯ್ಕ್, ವಿಶ್ವನಾಥ, ಭೋಜ, ಹರಿ ಅಲಿಯಾಸ್ ಹರಿಶ್ಚಂದ್ರ, ಗುಲಾಬಿ ಹಾಗೂ ರುಕ್ಮಿಣಿ ಸೇರಿದಂತೆ ಎಂಟು ಮಂದಿ ಆರೋಪಿಗಳಿಗೆ 2026ರ ನವೆಂಬರ್ 5ರಂದು ಒಟ್ಟು ₹1,01,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಅಪರಾಧ
Mangalore-ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಬಂಧನ; 3.8 ಕೆ.ಜಿ. ಗಾಂಜಾ, ಕಾರು ವಶಕ್ಕೆ
ಗಾಂಜಾ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ತೂಕದ ಗಾಂಜಾ ಸೇರಿದಂತೆ ಒಟ್ಟು 3.94 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು: ಗಾಂಜಾ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ತೂಕದ ಗಾಂಜಾ ಸೇರಿದಂತೆ ಒಟ್ಟು 3.94 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟಕ್ಕೆ ತಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಹಾಗೂ ಪಣಂಬೂರು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದರು.
ಈ ವೇಳೆ ಪುತ್ತೂರು ತಾಲೂಕಿನ ಪಡ್ನೂರು ಅಂಚೆ ವ್ಯಾಪ್ತಿಯ ಪಡ್ಡಾಯೂರು ಹೌಸ್ ನಿವಾಸಿ ಹಂಜಾ ಅವರ ಪುತ್ರ ಮೊಹಮ್ಮದ್ ನಿಸಾರ್ (23) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯಿಂದ ಅಂದಾಜು 1.90 ಲಕ್ಷ ರೂ. ಮೌಲ್ಯದ 3.8 ಕೆ.ಜಿ. ಗಾಂಜಾ, 4 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಕೆಎಲ್ 14 1662 ನೋಂದಣಿ ಸಂಖ್ಯೆಯ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಈ ಹಿಂದೆಯೂ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 137/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
-
ನಿಧನ ವಾರ್ತೆ9 hours ago
ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ
-
ನಿಧನ ವಾರ್ತೆ14 hours agoSuicide-ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!
-
ಅಪರಾಧ17 hours ago
ಪುತ್ತೂರು : ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
-
ರಾಜಕೀಯ15 hours agoAishwarya Hegde-ಸಿಎಂ ಮುಂದೆಯೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ..!
-
ಸ್ಥಳೀಯ14 hours agoAddahole-ಅಡ್ಡಹೊಳೆಯಲ್ಲಿ ಕಾರಿನ ಮೇಲೆ ಮಗುಚಿಬಿದ್ದ ಕಂಟೈನರ್ ಲಾರಿ: ದಂಪತಿ, ಮಕ್ಕಳು ಪವಾಡಸದೃಶ ಪಾರು..!
-
ಉಡುಪಿ14 hours agoAnil Kumar-ಬಾಳೆಕುದ್ರು ಶ್ರೀಗಳು ಪರಾರಿಯಾಗಿಲ್ಲ, ವಿಗ್ರಹಗಳೂ ಕಳವಾಗಿಲ್ಲ: ಆಡಳಿತಾಧಿಕಾರಿ ಅನಿಲ್ ಕುಮಾರ್ ಸ್ಪಷ್ಟನೆ
-
ಬಿಗ್ ನ್ಯೂಸ್14 hours agoChatGPT- ಪತ್ನಿಗೆ ಹತ್ಯೆ ಸಂಚು ರೂಪಿಸಲು ಸಲಹೆ ನೀಡಿದ ಆರೋಪ: ಚಾಟ್ಜಿಪಿಟಿ ವಿರುದ್ಧ ಪತಿ ಕಾನೂನು ದಾವೆ..!
-
ಅಂತರ ರಾಜ್ಯ14 hours agoArrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್ಟೇಕರ್ ಅರೆಸ್ಟ್..!
















