ಶಿಕ್ಷಣ
Vivekananda-ವಿದ್ಯಾಭಾರತಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ
ಉತ್ತರ ಪ್ರದೇಶದ ಗಜಿಯಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಉತ್ತರ ಪ್ರದೇಶದ ಗಜಿಯಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು 1 ಚಿನ್ನ, 3 ಬೆಳ್ಳಿ ,4 ಕಂಚು ಸೇರಿದಂತೆ ಒಟ್ಟು 8 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿಧಿಶ್ರೀ ಕೆ 10ನೇ ತರಗತಿ (ದೇರಣ್ಣ ಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ) 100 ಮೀಟರ್ ಹಡಲ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ವೈಭವ ಕಾಮತ್ ಹತ್ತನೇ ತರಗತಿ (ವಿದ್ಯಾಧರ ಕಾಮತ ಮತ್ತು ಮುಕ್ತ ಕಾಮತ್ ದಂಪತಿಗಳ ಪುತ್ರ ) ತ್ರಿವಿಧ ಜಿಗಿತದಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ಕೃತಿಕ್ .ಆರ್ 10ನೇ ತರಗತಿ (ರಾಜೇಶ್ ಮತ್ತು ರೇಖಾ ಆರ್ ದಂಪತಿಗಳ ಪುತ್ರ )110 ಮೀಟರ್ ಹೆಡಲ್ಸಿನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ವಂಶಿತ ಎನ್ 9ನೇ ತರಗತಿ ( ವಸಂತ ಗೌಡ ಮತ್ತು ಸುಜಾತ ದಂಪತಿಗಳ ಪುತ್ರಿ ) ಉದ್ದ ಜಿಗಿತದಲ್ಲಿ ಬೆಳ್ಳಿಯ ಪದಕವನ್ನು 400 ಮೀಟರ್ ಹಡಲ್ಸ್ ನಲ್ಲಿ ಕಂಚಿನ ಪದಕ ಹಾಗೂ ತ್ರಿವಿಧ ಜಿಗಿತದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಆತ್ಮಿ ಕೆ.ಎಲ್ 9ನೇ ತರಗತಿ (ಲಕ್ಷ್ಮಣ ಗೌಡ ಬೆಳ್ಳಿಪಾಡಿ ಮತ್ತು ಹೇಮಲತ ದಂಪತಿಗಳ ಪುತ್ರಿ.) 4*100 ಮೀಟರ್ ರಿಲೆಯಲ್ಲಿ ಕಂಚಿನ ಪದಕ ಹಾಗೂ 4*400 ಮೀಟರ್ ರಿಲೀ ಯಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ.
ಶಿಕ್ಷಣ
Philomena-ಕೊಂಕಣಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು
ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ನವೆಂಬರ್ 8 ರಂದು ಭಾಗವಹಿಸಿತು.
ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ನವೆಂಬರ್ 8 ರಂದು ಭಾಗವಹಿಸಿತು.
12 ದಿನಗಳು , 12 ಗಂಟೆಗಳು ಮತ್ತು 12 ನಿಮಿಷಗಳ ಗಾಯನ ಮ್ಯಾರಥಾನ್ ನಿರಂತರವಾಗಿ ಸುಮಾರು 300 ಗಂಟೆಗಳ ಕಾಲ ಈ ಕೊಂಕಣಿ ಗಾಯನವನ್ನು ಪ್ರಸ್ತುತಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. 300 ಗಾಯನ ತಂಡಗಳು ಭಾಗವಹಿಸಿ, 4,500ಕ್ಕೂ ಹೆಚ್ಚು ಕೊಂಕಣಿ ಗೀತೆಗಳನ್ನು ನಿರಂತರವಾಗಿ ಹಾಡಿ, 6,700ಕ್ಕೂ ಹೆಚ್ಚು ಗಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಂಡ್ ಸೊಭಾಣ್ ವತಿಯಿಂದ ಆಯೋಜಿಸಿದ ಈ ಅದ್ಧುರಿಯಾದ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸಂತ ಫಿಲೋಮಿನಾ (ಸ್ವಾಯತ್ತ)ಕಾಲೇಜು ಭಾಗವಹಿಸಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಒಟ್ಟು 24 ಜನರ ತಂಡ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಮಹಾಸಮ್ಮೇಳನದ ಈ ಐತಿಹಾಸಿಕ ಪಯಣದಲ್ಲಿ ಸಂಸ್ಥೆಯು ತೋರಿದ ಒಗ್ಗಟ್ಟು, ಸಮರ್ಪಣಾ ಭಾವ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿಕ್ಷಣ
Philomena-ಸಿಎ ಫೌಂಡೇಷನ್ ಪರೀಕ್ಷೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತೇರ್ಗಡೆ
ಸೆಪ್ಟೆಂಬರ್ 2026ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿ ಎ ಫೌಂಡೇಷನ್ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬಿ. ವಿ ಅನು ಮತ್ತು ಕೆ ಮೂಹಮ್ಮದ್ ಅಜ್ಮಲ್ ಇವರು ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.
ಪುತ್ತೂರು: ಸೆಪ್ಟೆಂಬರ್ 2026ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿ ಎ ಫೌಂಡೇಷನ್ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬಿ. ವಿ ಅನು ಮತ್ತು ಕೆ ಮೂಹಮ್ಮದ್ ಅಜ್ಮಲ್ ಇವರು ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.
ಬಿ. ವಿ. ಅನು ಬೆಂಗಳೂರು ನಿವಾಸಿ ವೀರಭದ್ರಯ್ಯ ಮತ್ತು ಭಾಗ್ಯ ದಂಪತಿಗಳ ಪುತ್ರಿ.
ಕೆ. ಮೊಹಮ್ಮದ್ ಅಜ್ಮಲ್ ಪುತ್ತೂರು ನಿವಾಸಿ ಕೆ.ಎಂ ಹಮ್ಜಾ ಮತ್ತು ಆಫ್ರಾ ಎಂ ದಂಪತಿಗಳ ಪುತ್ರ.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಉಪನ್ಯಾಸಕರಾದ ಸಂಜಯ್ ಎಸ್, ರಾಹುಲ್, ಭರತ್ ಜಿ. ಪೈ ಹಾಗೂ ಗೀತಾ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ಮಂಗಳೂರು ದಸರಾ 2026 : ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಮಕ್ಕಳ ದಸರಾ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಇಲ್ಲಿ ಅ. 13ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮಕ್ಕಳ ದಸರಾ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಿದ್ದರು.
ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15ಕ್ಕೂ ಅಧಿಕ ಶಾಲಾ ತಂಡಗಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
-
ಪುತ್ತೂರು21 hours agoPuttur-ಪುತ್ತೂರಿನಲ್ಲಿ ಮಹಿಳೆಯ ಹಿಂಬಾಲಿಸಿ ಅನುಚಿತ ವರ್ತನೆ ಆರೋಪ: ಯುವಕನ ಬಂಧನ
-
ಅಂತರ ರಾಜ್ಯ18 hours agoAstrologer-2029ರಲ್ಲೂ ಮೋದಿ ಪ್ರಧಾನಿ, ಮುಂದಿನ 15 ವರ್ಷ ಬಿಜೆಪಿ ಆಡಳಿತ? ಜ್ಯೋತಿಷಿ ಆಸ್ಟ್ರೋ ಶರ್ಮಿಷ್ಠಾ ಭವಿಷ್ಯವಾಣಿ ಭಾರೀ ಚರ್ಚೆ..!
-
ಅಪರಾಧ20 hours agoNMC ಹೆಲ್ತ್ಕೇರ್ ಬಹುಕೋಟಿ ವಂಚನೆ ಪ್ರಕರಣ: ಬಿ.ಆರ್. ಶೆಟ್ಟಿ, ಪ್ರಶಾಂತ್ ಮಂಗಾಟ್ಗೆ ಕೋರ್ಟ್ ಶಾಕ್; 5.397 ಬಿಲಿಯನ್ ಡಾಲರ್ ಹೊಣೆಗಾರಿಕೆ ನಿಗದಿ..!
-
ಅಪರಾಧ21 hours agoKanyana-ಕನ್ಯಾನದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಪತ್ತೆ: ಲಾರಿ ವಶಕ್ಕೆ
-
ದಿನ ಭವಿಷ್ಯ17 hours agoDaily Horoscope-ದಿನ ಭವಿಷ್ಯ : 12 ರಾಶಿಗಳ ಇಂದಿನ ರಾಶಿಫಲ ಹೀಗಿದೆ..!
-
ಅಪರಾಧ18 hours agoPuttur-ಪುತ್ತೂರು: ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಪೋಕ್ಸೋ ಆರೋಪಿಗೆ ಜಾಮೀನು
-
ಉಡುಪಿ18 hours agoUdupi: ಉಡುಪಿ: ಪೆಟ್ರೋಲ್ ಬಂಕ್ನಲ್ಲಿ ಮದ್ಯಪಾನ; ಆಕ್ಷೇಪಿಸಿದ ಮಾಲಕರ ಸಂಬಂಧಿಗೆ ಐವರಿಂದ ಹಲ್ಲೆ
-
ಮಂಗಳೂರು11 hours ago
ಮಂಗಳೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ : ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ಕೇಸ್


















