Connect with us

ಪುತ್ತೂರು

Puttur-ಪುತ್ತೂರಿನಲ್ಲಿ ಮಹಿಳೆಯ ಹಿಂಬಾಲಿಸಿ ಅನುಚಿತ ವರ್ತನೆ ಆರೋಪ: ಯುವಕನ ಬಂಧನ

Published

on



Ad Widget

Ad Widget

Ad Widget

Ad Widget

ಮಹಿಳೆಯೊಬ್ಬರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

ಪುತ್ತೂರು: ಮಹಿಳೆಯೊಬ್ಬರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ನ. 6ರಂದು ಮಧ್ಯಾಹ್ನ ಪುತ್ತೂರು ತಾಲೂಕಿನ ಕುರಿಯದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ಯುವಕನೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದು ಸಮೀಪದಲ್ಲಿ ಸ್ಕೂಟರ್ ನಿಲ್ಲಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದರಿಂದ ಭಯಗೊಂಡ ಮಹಿಳೆ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಯುವಕನನ್ನು ಹಿಡಿದು ವಿಚಾರಿಸಿದ್ದಾರೆ. ಈ ವೇಳೆ ಆತ ತನ್ನ ಹೆಸರನ್ನು ಇಯಾಸ್ ಪುರುಷರಕಟ್ಟೆ ಎಂದು ತಿಳಿಸಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Ad Widget

Ad Widget <> Ad Widget

ಇದೇ ಯುವಕ ಅ. 30ರಂದು ಕೂಡ ಮಹಿಳೆಯನ್ನು ಹಿಂಬಾಲಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್‌ 2023ರ ಕಲಂ 75(2), 78(1) ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



Ad Widget

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೂಕ್ತ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

ಕಾರ್ಯಕ್ರಮಗಳು

Puttur-ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ ಪಂಚಮುಖಿ ಆಂಜನೇಯ ಹವನ: ಪೂರ್ವ ಸಿದ್ಧತೆಗೆ ಚಪ್ಪರ ಮುಹೂರ್ತ

Published

on



Ad Widget

Ad Widget

Ad Widget

Ad Widget

ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ಪಂಚಮುಖಿ ಆಂಜನೇಯ ಹವನ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಅಂಗವಾಗಿ ಭಾನುವಾರ ಕ್ಷೇತ್ರದ ವಠಾರದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

Ad Widget

Ad Widget

Ad Widget

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ಪಂಚಮುಖಿ ಆಂಜನೇಯ ಹವನ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಅಂಗವಾಗಿ ಭಾನುವಾರ ಕ್ಷೇತ್ರದ ವಠಾರದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

Ad Widget

Ad Widget alt="Ad Widget"/>

Ad Widget

ಪಂಚಮುಖಿ ಆಂಜನೇಯ ಹವನದ ಸ್ವಾಗತ ಸಮಿತಿ ಸಂಚಾಲಕ ಹಾಗೂ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಹವನ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು, ಗೌರವಾಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಸಂಚಾಲಕ ಕೆ. ಜೀವಂಧರ್ ಜೈನ್ ಮತ್ತು ಉಪಾಧ್ಯಕ್ಷ ಉಜ್ವಲ್ ಪ್ರಭು ಅವರು ಜತೆಯಾಗಿ ಚಪ್ಪರ ಮುಹೂರ್ತ ನೆರವೇರಿಸಿದರು. ಸುದರ್ಶನ್ ವೈಲಾಯ ಕೊಡಿಪ್ಪಾಡಿ ಅವರು ವೈದಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

Ad Widget

Ad Widget <> Ad Widget

ಬಳಿಕ ಕ್ಷೇತ್ರದ ಕಾರ್ಯಾಲಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅರುಣ್ ಶ್ಯಾಮ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಪಂಚಮುಖಿ ಆಂಜನೇಯ ಹವನದ ಮೂಲಕ ಪುತ್ತೂರು ಭಾಗದಲ್ಲಿ ವಿಶೇಷ ಶಕ್ತಿ ಸಂಚಲನವಾಗಬೇಕು ಎಂಬ ಸಂಕಲ್ಪ ಹೊಂದಲಾಗಿದೆ ಎಂದರು.



Ad Widget

ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಶಕ್ತಿ ತುಂಬುವುದು, ಸ್ಥಳೀಯ ಜನರ ಶ್ರೇಯೋಭಿವೃದ್ಧಿ ಹಾಗೂ ರಾಷ್ಟ್ರ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ನೈತಿಕ ಬೆಂಬಲ ನೀಡುವುದು ಈ ವಿಶೇಷ ಸೇವೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

Ad Widget

Ad Widget

ಕಾರ್ಯಕ್ರಮದ ಅಂಗವಾಗಿ ಭಜನೆ, ಪ್ರವಚನ, ನೃತ್ಯ, ಸಂಗೀತ ಹಾಗೂ ಉಪನ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಹವನ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಸಮಾಜದ ಏಕತೆ ಮತ್ತು ಲೋಕಕಲ್ಯಾಣದ ಉದ್ದೇಶದಿಂದ ಈ ಹವನವನ್ನು ಆಯೋಜಿಸಲಾಗಿದೆ. ಪಂಚಮುಖಿ ಆಂಜನೇಯ ಹವನ ಅಪರೂಪದ ಹಾಗೂ ವೈಶಿಷ್ಟ್ಯಪೂರ್ಣ ಯಾಗವಾಗಿದ್ದು, ಯಾವುದೇ ವ್ಯಕ್ತಿಯ ವೈಯಕ್ತಿಕ ಸ್ವಾರ್ಥ ಅಥವಾ ಉನ್ನತಿಗಾಗಿ ನಡೆಯುವ ಕಾರ್ಯಕ್ರಮವಲ್ಲ. ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಧಾರ್ಮಿಕ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು.

ನ.26ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ನ.26ರಂದು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪವಿತ್ರ ತೀರ್ಥ ಸಂಗ್ರಹಿಸಿ, ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ತಂದು ತೀರ್ಥಕಲಶದ ರೂಪದಲ್ಲಿ ಆಂಜನೇಯನಿಗೆ ಸಮರ್ಪಿಸಲಾಗುವುದು. ಬಳಿಕ ಸಾಮೂಹಿಕ ಸಂಕಲ್ಪ ಹಾಗೂ 10 ಮಂದಿ ವೈದಿಕರಿಂದ ಪಾರಾಯಣ ನಡೆಯಲಿದೆ. ಸಂಜೆ 4.30ಕ್ಕೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಗೋಪಾಲ್ ಅವರು ಧರ್ಮಜಾಗೃತಿ ಸಂದೇಶ ನೀಡಲಿದ್ದಾರೆ.

ನ.28ರಂದು ಸಂಜೆ 6.30ರಿಂದ ಪಾವಗಡದ ಪ್ರಕಾಶ್ ಅವರಿಂದ ಸುಂದರಕಾಂಡ ಸಂವಾದ ನಡೆಯಲಿದ್ದು, ಸಂಜೆ 7ರಿಂದ ಗಾಯಕ ಜಗದೀಶ್ ಆಚಾರ್ಯ ಅವರ ನೇತೃತ್ವದಲ್ಲಿ ರಾಷ್ಟ್ರಜಾಗೃತಿಯ ಕುರಿತ ವಿಶೇಷ ಭಜನಾ ಕಾರ್ಯಕ್ರಮ ಜರುಗಲಿದೆ.

ನ.29ರಂದು ಪಂಚಮುಖಿ ಆಂಜನೇಯ ಹವನ

ನ.29ರಂದು ಬೆಳಿಗ್ಗೆ 7 ಗಂಟೆಗೆ 10 ಮಂದಿ ವೈದಿಕರ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಹವನ ಆರಂಭವಾಗಲಿದೆ. ಮೂರು ದಿನಗಳ ಕಾಲ ಪಾವಗಡದ ಪ್ರಕಾಶ್ ಅವರಿಂದ ರಾಮಾಯಣದ ಸುಂದರಕಾಂಡ ಪಾರಾಯಣ ನಡೆಯಲಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಮಾಹಿತಿ ನೀಡಿದರು.

ಹವನ ಸಮಿತಿ ಉಪಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಪುನೀತ್ ಅತ್ತಾವರ, ಕಾರ್ಯದರ್ಶಿ ಜನಾರ್ದನ ಬೆಟ್ಟ, ಸ್ವಾಗತ ಸಮಿತಿ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಸಮಿತಿ ಪ್ರಮುಖರಾದ ಜಯಂತಿ ನಾಯಕ್, ಸಂಕಪ್ಪ ಗೌಡ, ಸತೀಶ್ ಬಿ.ಎಸ್., ರಾಘವೇಂದ್ರ ಪ್ರಭು, ಆದರ್ಶ್‌ ಉಪ್ಪಿನಂಗಡಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ರವಿಕಿರಣ್ ನೆಲಪ್ಪಾಲು, ಭಾಮಿ ಜಗದೀಶ್ ಶೆಣೈ, ಜಗದೀಶ್ ಬನ್ನೂರು, ರಾಮ್‌ಪ್ರಸಾದ್‌ ಮಯ್ಯ, ಅಭಿಜಿತ್ ತೆಂಕಿಲ, ನಿತೇಶ್ ಕಲ್ಲೇಗ, ದಯಾನಂದ ಗೌಡ, ಮನೋಹರ್ ಕಲ್ಲಾರೆ ಭಾಗವಹಿಸಿದ್ದರು.

Ad Widget
Continue Reading

ಶಿಕ್ಷಣ

Philomena-ಕೊಂಕಣಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ನವೆಂಬರ್ 8 ರಂದು ಭಾಗವಹಿಸಿತು.

Ad Widget

Ad Widget

Ad Widget

ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ವತಿಯಿಂದ ನವೆಂಬರ್ 3 ರಿಂದ ನವೆಂಬರ್ 15 ರ ವರೆಗೆ  ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ನವೆಂಬರ್ 8 ರಂದು ಭಾಗವಹಿಸಿತು.

Ad Widget

Ad Widget alt="Ad Widget"/>

Ad Widget

12 ದಿನಗಳು , 12 ಗಂಟೆಗಳು ಮತ್ತು 12 ನಿಮಿಷಗಳ ಗಾಯನ ಮ್ಯಾರಥಾನ್ ನಿರಂತರವಾಗಿ ಸುಮಾರು 300 ಗಂಟೆಗಳ ಕಾಲ ಈ ಕೊಂಕಣಿ ಗಾಯನವನ್ನು ಪ್ರಸ್ತುತಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. 300 ಗಾಯನ ತಂಡಗಳು ಭಾಗವಹಿಸಿ, 4,500ಕ್ಕೂ ಹೆಚ್ಚು ಕೊಂಕಣಿ ಗೀತೆಗಳನ್ನು ನಿರಂತರವಾಗಿ ಹಾಡಿ, 6,700ಕ್ಕೂ ಹೆಚ್ಚು ಗಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Ad Widget

Ad Widget <> Ad Widget

ಮಾಂಡ್ ಸೊಭಾಣ್ ವತಿಯಿಂದ ಆಯೋಜಿಸಿದ ಈ ಅದ್ಧುರಿಯಾದ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸಂತ ಫಿಲೋಮಿನಾ (ಸ್ವಾಯತ್ತ)ಕಾಲೇಜು ಭಾಗವಹಿಸಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಒಟ್ಟು 24 ಜನರ ತಂಡ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಮಹಾಸಮ್ಮೇಳನದ ಈ ಐತಿಹಾಸಿಕ ಪಯಣದಲ್ಲಿ ಸಂಸ್ಥೆಯು ತೋರಿದ ಒಗ್ಗಟ್ಟು, ಸಮರ್ಪಣಾ ಭಾವ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.



Ad Widget
Ad Widget
Continue Reading

ಬಿಗ್ ನ್ಯೂಸ್

G.L. Acharya Jewellers-ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ದೀಪಾವಳಿ ಪ್ರಯುಕ್ತ ಚಿನ್ನಾಭರಣ. ವಜ್ರದ ಆಭರಣ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ; ಇನ್ನು ಕೊನೆಯ 3 ದಿನಗಳು ಮಾತ್ರ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲಸ್‌ರ್‌ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲು “ದೀಪಾವಳಿ ವಿಶೇಷ ಕೊಡುಗೆಯನ್ನು ಸಂಸ್ಥೆ ಪ್ರಕಟಿಸಿದೆ. ಈ ಆಫ‌ರ್ ಇನ್ನು ಕೇವಲ 3 ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

Ad Widget

Ad Widget

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲಸ್‌ರ್‌ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲು “ದೀಪಾವಳಿ ವಿಶೇಷ ಕೊಡುಗೆಯನ್ನು ಸಂಸ್ಥೆ ಪ್ರಕಟಿಸಿದೆ. ನವೆಂಬರ್ 5ರಿಂದ 11ರವರೆಗೆ ಗ್ರಾಹಕರಿಗೆ ಚಿನ್ನಾಭರಣಗಳ VA ಶುಲ್ಕದ ಮೇಲೆ 30% ನೇರ ರಿಯಾಯಿತಿ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.8000/- ನೇರ ರಿಯಾಯಿತಿ ಅಲ್ಲದೆ ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ರೂ.8000/- ನೇರ ರಿಯಾಯಿತಿ ನೀಡಲಾಗುವುದು.

Ad Widget

Ad Widget alt="Ad Widget"/>

Ad Widget

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ನಗದು ಪಾವತಿಸಿ ಚಿನ್ನಾಭರಣ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಅತ್ಯಂತ ಸೂಕ್ತ ಸಮಯವಾಗಿದ್ದು, ಚಿನ್ನ ಖರೀದಿಸಲು ಇದೊಂದು ಸುವರ್ಣಾವಕಾಶವಾಗಿದೆ. ಯಾವುದೇ ಜ್ಯುವೆಲ್ಲರ್ಸ್‌ನಿಂದ ಖರೀದಿಸಿದ ಹಳೆಯ 91.6% ಚಿನ್ನಾಭರಣಗಳ ಎಕ್ಸ್‌ಚೇಂಜ್ ದರದ ಮೇಲೆ 0% ಕಡಿತ. ಹಬ್ಬದ ಸಂದರ್ಭದಲ್ಲಿ ಹೊಸ ವಿನ್ಯಾಸದ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಕೊಡುಗೆ ಅನುಕೂಲವಾಗಲಿದೆ.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವೂ ಇದೆ. ಯೋಜನೆಗೆ ಸೇರ್ಪಡೆಯಾಗಿ ನಿಗದಿತ ಅವಧಿ ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷ ಇದೇ ಹಬ್ಬದ ಸಂಭ್ರಮದ ಸಮಯದಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶವಿದ್ದು, ಹಬ್ಬದ ಸಂದರ್ಭದಲ್ಲಿ ಉಳಿತಾಯದೊಂದಿಗೆ ಚಿನ್ನ ಖರೀದಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ.



Ad Widget

ಗ್ರಾಹಕರ ಉತ್ತಮ ಸ್ಪಂದನೆ ಗಳಿಸಿದ್ದು ನಮ್ಮ ಎಲ್ಲಾ ಶಾಖೆಗಳಾದ ಸುಳ್ಯ. ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ಲಭ್ಯವಿದೆ. ಈ ಆಫ‌ರ್ ಇನ್ನು ಕೇವಲ 3 ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!