Connect with us

ರಾಜ್ಯ

Lunar eclipse 2023: ಚಂದ್ರಗ್ರಹಣ ಎಪೆಕ್ಟ್‌ – ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ (ಅ 28)ದೇವರ ದರ್ಶನ ಸಮಯ ಬದಲು – ಕೆಲ ಸೇವೆಗಳೂ ಬಂದ್‌

Ad Widget

Ad Widget

Ad Widget

Ad Widget

Kukke Subramanya Temple: ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ(Kukke Subramanya Temple) ಅಕ್ಟೋಬರ್​ 28ರ ಶನಿವಾರದಂದು ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಚಂದ್ರಗ್ರಹಣ ಇರುವುದರಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಅಕ್ಟೋಬರ್​ 28ರ ಶನಿವಾರದಂದು ಭಕ್ತಾದಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆಯೆಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Ad Widget

Ad Widget

Ad Widget

ಶ್ರೀ ದೇವರ ದರ್ಶನ ಹಾಗೂ ಸೇವಾ ಸಮಯವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ. ಅಕ್ಟೋಬರ್​ 28ರ ರಾತ್ರಿ ಮಹಾಪೂಜೆಯು ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯವಾಗಲಿದೆ. ಶನಿವಾರದಂದು ಸಾಯಂಕಾಲ ಆಶ್ಲೇಷ ಬಲಿ ಸೇವೆಯು ಇರುವುದಿಲ್ಲ. ಸಾಯಂಕಾಲ ಗಂಟೆ 6.30ರ ನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾತ್ರವಲ್ಲದೆ ರಾತ್ರಿ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Ad Widget

ಶನಿವಾರ ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ (Annadana) ಸೇವೆಯೂ ಬಂದ್ ಆಗಿರುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ

Ad Widget

Ad Widget

ಚಂದ್ರಗ್ರಹಣದ ಸಮಯ :
ಗ್ರಹಣ ಸ್ಪರ್ಶ : ರಾತ್ರಿ ಗಂಟೆ 1.04
ಗ್ರಹಣ ಮೋಕ್ಷ : ರಾತ್ರಿ ಗಂಟೆ 2.24

Ad Widget

Ad Widget

Ad Widget

ಪಂಚಾಂಗದ ಪ್ರಕಾರ ಖಂಡಗ್ರಾಸ ಚಂದ್ರಗ್ರಹಣ: ಶೋಭಕೃತ್‌ ಸಂವತ್ಸರ, ಅಶ್ವಿನಿ ನಕ್ಷತ್ರ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ, ಶನಿವಾರ ದಿನಾಂಕ 28-10-2023ರ ಅಶ್ವಿನಿ ನಕ್ಷತ್ರ, ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣ ಉಂಟಾಗುತ್ತಿದೆ

Click to comment

Leave a Reply

ರಾಜ್ಯ

Heavy rainfall-ನಾಳೆಯಿಂದ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆಯಾಗುವ ಸಾಧ್ಯತೆ; ಪ್ರವಾಹ ಎದುರಿಸಲು ಸಜ್ಜಾಗುವಂತೆ ಸೂಚನೆ

Ad Widget

Ad Widget

Ad Widget

Ad Widget

ಬೆಂಗಳೂರು: ಹವಾಮಾನ ಇಲಾಖೆಯು ಮುಂದಿನ 4 ದಿನ ರಾಜ್ಯದ ಹಲವೆಡೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 7ರಿಂದ ಐದು ದಿನ, ಉತ್ತರ ಕನ್ನಡದಲ್ಲಿ ಮೇ 10ರಿಂದ ಮೂರು ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮೇ 7ರಿಂದ ಮೇ 10ರವರೆಗೆ ಜೋರಾಗಿ ಮಳೆಯಾಗಲಿದೆ.

Ad Widget

Ad Widget

Ad Widget

40ರ ಗಡಿ ದಾಟಿದ ಉಷ್ಣಾಂಶ: ಕಲಬುರಗಿಯಲ್ಲಿ ಭಾನುವಾರ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಯಾದಗಿರಿ 44, ಕೊಪ್ಪಳ 43.3, ಬಳ್ಳಾರಿ 43.3, ತುಮಕೂರು 43.1, ವಿಜಯಪುರ 42.5, ಬಾಗಲಕೋಟೆ 42.5, ಬೀದರ್ 42, ಧಾರವಾಡ 40 ಹಾಗೂ ಬೆಳಗಾವಿ 40 ಡಿ.ಸೆ. ಉಷ್ಣಾಂಶ ವರದಿಯಾಗಿದ್ದು, ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಬಿಸಿ ಗಾಳಿ ಬೀಸಲಿದೆ. ಸತತ ನಾಲ್ಕು ದಿನದ ಬಳಿಕ ಬೆಂಗಳೂರಿನಲ್ಲಿ 37 ಡಿ.ಸೆ.ಗೆ ಇಳಿದಿದೆ. ಮೇ 1ರಿಂದ ಮೇ 4ರವರೆಗೆ ನಗರದಲ್ಲಿ ಉಷ್ಣಾಂಶ 40ರ ಗಡಿ ದಾಟಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ವಾತಾವರಣ ಇರಲಿದೆ.

Ad Widget

ರಾಯಚೂರಿನಲ್ಲಿ 44.4 ಡಿಗ್ರಿ: ರಾಯಚೂರು ಜಿಲ್ಲೆಯಲ್ಲಿ ಕಳೆದ ಇಪ್ಪತ್ತೊಂದು ವರ್ಷಗಳಲ್ಲಿ ಶನಿವಾರ ಅತ್ಯಧಿಕ ತಾಪಮಾನ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ 26 ವರ್ಷಗಳ ನಂತರ ಕಂಡ ಅತ್ಯಧಿಕ ತಾಪಮಾನ ಇದಾಗಿದೆ. ಜನರು ಬಿಸಿಲ ಬೇಗೆಯಿಂದ ಸಂಕಷ್ಟ ಎದುರಿಸುವಂಥ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 1998ರ ಮೇನಲ್ಲಿ 44 ಡಿಗ್ರಿ ಸೆಲ್ಸಿಯಸ್ ಮತ್ತು 2019ರ ಮೇನಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಇದುವರೆಗಿನ ಅತ್ಯಧಿಕ ತಾಪಮಾನವಾಗಿತ್ತು.

Ad Widget

Ad Widget

ಪ್ರವಾಹ ಎದುರಿಸಲು ಸಜ್ಜಾಗಿ:
ರಾಜ್ಯದಲ್ಲಿ ಮುಂಗಾರು ಮಳೆ ಶೇ.104 ಇರುತ್ತದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಮಳೆ ಈ ಬಾರಿ ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಸಜ್ಜಾಗುವಂತೆ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕಂದಾಯ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವ ಇಲಾಖೆಯಿಂದ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

Ad Widget

Ad Widget

Ad Widget

ತಾಲೂಕು ಆಡಳಿತಗಳ ಜತೆ ಸಭೆ ನಡೆಸಿ ಪ್ರವಾಹದಿಂದಾಗುವ ಹಾನಿ ತಡೆಗಟ್ಟಲು ಸಜ್ಜಾಗುವಂತೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳನ್ನು ಸರಿಪಡಿಸಬೇಕು. ಚರಂಡಿ, ಸೇತುವೆಗಳಲ್ಲಿ ತುಂಬಿರುವ ಹೂಳು ತೆಗೆಯಬೇಕು.

ನದಿ, ನೀರಾವರಿ ಕೆರೆ ಕಾಲುವೆಗಳ ಸಮೀಪದ ನೆರೆಪೀಡಿತ ಪ್ರದೇಶವನ್ನು ಗುರುತಿಸಿ ಚರಂಡಿಗಳ ಮೇಲಿನ ಚಪ್ಪಡಿಗಳನ್ನು ಸುಸ್ಥಿತಿಯಲ್ಲಿರಿಸಲು ತಿಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ ಮೊಬೈಲ್ ನಂಬರ್ ಸಂಗ್ರಹಿಸಿ ವಾಟ್ಸ್ಆಪ್ ಗ್ರೂಪ್ ರಚಿಸಬೇಕು. ತುರ್ತು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಭೂ ಕುಸಿತವಾಗುವ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ವರುಣಾ ಮಿತ್ರದ ನೆರವು ಪಡೆಯಬೇಕು. ವಿದ್ಯುತ್, ಆರೋಗ್ಯ, ಪಶು ಸಂಗೋಪನೆ, ಕೌಶಲಾಭಿವೃದ್ಧಿ, ಅಗ್ನಿಶಾಮಕ ಸೇರಿ ಅಗತ್ಯ ಇಲಾಖೆಗಳನ್ನು ಸಜ್ಜುಗೊಳಿಸಬೇಕೆಂದು ಡಿಸಿಗಳಿಗೆ ನಿರ್ದೇಶನ ನೀಡಲಾಗಿದೆ.

Continue Reading

ಉದ್ಯೋಗ

Nandini brand-ಭರ್ಜರಿ ಮಾರಾಟವಾಗುತ್ತಿರುವ ನಂದಿನಿ ಬ್ರಾಂಡ್ ಐಸ್ ಕ್ರೀಂ; 100ಕ್ಕೂ ಹೆಚ್ಚು ಪ್ಲೇವರ್ ನ ಐಸ್ ಕ್ರೀಂ ತಯಾರಿಸಿರುವ ಕೆಎಂಎಫ್

Ad Widget

Ad Widget

Ad Widget

Ad Widget

ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಬಿಸಿಲಿನ ಪ್ರಕೋಪ ಹೆಚ್ಚಾಗಿದ್ದು, ಜನರು ಶಾಖಾಘಾತದಿಂದ ಹೈರಾಣಾಗಿದ್ದಾರೆ. ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗಳಿಗೆ ಜನ ಮೊರೆ ಹೋಗಿದ್ದಾರೆ. ಇದರಲ್ಲಿ ಪ್ರಮುಖವಾದದ್ದು, ಕೂಲ್ ಡ್ರಿಂಕ್ಸ್ ಮತ್ತು ಐಸ್ ಕ್ರೀಂ. ಮಾರುಕಟ್ಟೆಯಲ್ಲಿ ನಾನಾ ಬಗ್ಗೆಯ ಐಸ್ ಕ್ರೀಂಗಳು ಲಭ್ಯವಿದ್ದು, ಎಲ್ಲದಕ್ಕೂ ಡಿಮ್ಯಾಂಡ್ ಹೆಚ್ಚಿದೆ.

Ad Widget

Ad Widget

Ad Widget

ರಾಜ್ಯದ ಪ್ರತಿಷ್ಟಿತ ಬ್ರ್ಯಾಂಡ್ ಆಗಿರುವ ನಂದಿನಿ ಬ್ರಾಂಡ್ನ ಐಸ್ ಕ್ರೀಂಗಳಿಗೂ ಭರ್ಜರಿ ಬೇಡಿಕೆ ಸಿಗುತ್ತಿದೆ. ಕೆಎಂಎಫ್ ವಿವಿಧ ಪ್ಲೇವರ್ ನ ಐಸ್ ಕ್ರೀಂ ತಯಾರು ಮಾಡುತ್ತಿದ್ದು ಇದಕ್ಕೆ ಸಕ್ಕತ್ ಬೇಡಿಕೆ ಕಾಣಿಸಿದೆ. ಕೆಎಂಎಫ್ ಮೊದಲು ಕೇವಲ 20 ಪ್ಲೇವರಿಂಗ್ ಐಸ್ ಕ್ರೀಂ ತಯಾರು ಮಾಡುತ್ತಿತ್ತು. ಆದರೆ ಈಗ ಮಾವು, ಹಲಸು, ಬಾದಾಮಿ ಸೇರಿದಂತೆ ನಾನಾ ಬಗೆಯ 100ಕ್ಕೂ ಹೆಚ್ಚು ಬಗೆಯ ಐಸ್ ಕ್ರೀಂ ತಯಾರು ಮಾಡುತ್ತಿದೆ.

Ad Widget

ಈ ಹಿಂದೆ 20 ಸಾವಿರ ಲೀಟರ್ ಆಜು ಬಾಜಿನಲ್ಲಿದ್ದ ಬೇಡಿಕೆ ಪ್ರಮಾಣ ಹೆಚ್ಚಾಗಿ ಸರಾಸರಿ 37 ಸಾವಿರ ಲೀಟರ್ ಐಸ್ ಕ್ರೀಂ ಮಾರಾಟವಾಗುತ್ತಿದೆ. ಇದರಿಂದಾಗಿ ಐಸ್ ಕ್ರೀಂ ಉತ್ಪಾದನೆಗೆ 37 ಸಾವಿರ ಲೀಟರ್ ಹಾಲು ಬಳಕೆಯಾಗುತ್ತಿರುವುದು ವಿಶೇಷ.

Ad Widget

Ad Widget

ಕೆಎಂಎಫ್ ನಂದಿನಿ ಬ್ರಾಂಡ್ನ ಮೊಸರು ರಾಮನವಮಿ ದಿನ 16.50 ಲಕ್ಷ ಕೆಜಿ ಮಾರಾಟವಾಗಿದ್ದು, ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಬೇಸಿಗೆ ಪ್ರಾರಂಭವಾದ ಮೇಲೆ ಮೊಸರು ಮಾರಾಟ ಪ್ರಮಾಣವೂ 12 ಲಕ್ಷ ಕೆಜಿಗೆ ಜಿಗಿದಿದೆ.

Ad Widget

Ad Widget

Ad Widget

6 ಸಾವಿರ ಟನ್ ಹಾಲಿನ ಪುಡಿಗೆ ಬೇಡಿಕೆ
ಕೆಎಂಎಫ್ ಹೆಚ್ಚುವರಿಯಾಗಿ ಹಾಲು ಬಂದದ್ದನ್ನು ಪೌಡರ್ ಮಾಡಿ ಸಂಗ್ರಹ ಮಾಡಿದ್ದು, ಗೋದಾಮಿನಲ್ಲಿ 15 ಸಾವಿರ ಟನ್ಗೂ ಹೆಚ್ಚು ಸಂಗ್ರಹವಾಗಿತ್ತು. ಉತ್ತರ ಭಾರತದಿಂದ ಸುಮಾರು 6 ಸಾವಿರ ಟನ್ ಕೆಎಂಎಫ್ ಹಾಲಿನ ಪುಡಿಗೆ ಬೇಡಿಕೆ ಬಂದಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ಕೆಜಿ. ಪೌಡರ್ಗೆ 250 ರೂಗೆ ಜಿಗಿದಿದೆ.

81.5ಲಕ್ಷ ಲೀಟರ್ ಹಾಲು
ಕೆಎಂಎಫ್ ಗೆ ಬೇಸಿಗೆಯಲ್ಲಿಯೂ ಪ್ರತಿ ನಿತ್ಯ 80 ಲಕ್ಷ ಲೀಟರ್ ಹಾಲು ಬರುತ್ತಿರುವುದು ವಿಶೇಷ. ಕಳೆದ ವರ್ಷ ಬೇಸಿಗೆಯಲ್ಲಿ 75 ಲಕ್ಷ ಲೀಟರ್ ಹಾಲು ಮಾತ್ರ ಬರುತ್ತಿತ್ತು. ಈ ವರ್ಷ 51 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿರುವುದು ಕೂಡ ದಾಖಲೆಯಾಗಿದೆ.

Continue Reading

ಕ್ರೈಂ

Prajwal Revanna Sex Scandal: ತಕ್ಷಣ ತನಿಖೆಗೆ ಹಾಜರಾಗಿ : ಪ್ರಜ್ವಲ್ ರೇವಣ್ಣ ಹಾಗೂ ಎಚ್‌ ಡಿ ರೇವಣ್ಣ  ಮನೆಗೆ ನೋಟಿಸ್‌ ಅಂಟಿಸಿದ SIT

Ad Widget

Ad Widget

Ad Widget

Ad Widget

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಾಸಲೀಲೆ  ಪ್ರಕರಣದ ತನಿಖೆ ಕಳೆದೆರಡು ದಿನಗಳಿಂದ ಎಸ್‍ಐಟಿ ಹೆಗಲೇರಿದೆ.  ತನಿಖೆಯ ಮೂರನೇಯ ದಿನವಾದ ಇಂದು ಇಳಿದಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್  ಜಾರಿ ಮಾಡಿದ್ದಾರೆ.

Ad Widget

Ad Widget

Ad Widget

ಮಾಜಿ ಸಚಿವ ಎಚ್‌.ಡಿ ರೇವಣ್ಣ ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣರ  ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು, ಎಚ್‌ಡಿ ರೇವಣ್ಣ ಅವರು ಉತ್ತರ ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ

Ad Widget

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಹೆಣ್ಣು ಮುಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಲೈಂಗಿಕ ಆರೋಪ ಎದುರಿಸುತ್ತಿದ್ದಾರೆ. ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT)ಕ್ಕೆ ಪ್ರಕರಣದ ತನಿಖೆ ಹಸ್ತಾಂತರಿಸಿತ್ತು.

Ad Widget

Ad Widget

ಪ್ರಕರಣ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳು ಹಾಸನ ಜಿಲ್ಲೆಯಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು ಐದು ಮಂದಿ ಸಂತ್ರಸ್ತರನ್ನು ಸೋಮವಾರ ವಿಚಾರಣೆ ಮಾಡಿದ್ದಾರೆ. ಎಸ್‌ ಐ ಟಿ ಒಟ್ಟು 3 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದೆ.

Ad Widget

Ad Widget

Ad Widget

ನೋಟಿಸ್‌ ನಲ್ಲಿ ಏನಿದೆ ?

ನೋಟಿಸ್ ಸಿಕ್ಕ ತಕ್ಷಣ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ಇಲ್ಲದೇ ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿಯೇ ಕಾನೂನು ಕ್ರಮದ ಎಚ್ಚರಿಕೆ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading