Connect with us

ರಾಜಕೀಯ

ಒಂದಂಕಿ ಲಾಟರಿಯಿಂದ ಹೆಣ್ಣುಮಕ್ಕಳು ಕಣ್ಣೀರು ಹಾಕಬಾರದು ಎಂದು ಲಾಟರಿ ಅಡ್ಡೆಗಳನ್ನು ನಾಶ ಮಾಡಿದ ಕೀರ್ತಿ ಪುತ್ತಿಲ ಅವರದ್ದಾಗಿದೆ – ‘ಸೀತಾ ಪರಿವಾರ’ ಕಾರ್ಯಕ್ರಮದಲ್ಲಿ ವಾಗ್ಮಿ ಅಕ್ಷಯ ಘೋಖಲೆ

Ad Widget

Ad Widget

Ad Widget

Ad Widget

ಪುತ್ತೂರು, ಎ 29 : ಮಹಿಳೆ ಬದಲಾಗುವ ಮೂಲಕ ಮನೆ, ಕುಲ ಬದಲಾದಾಗಿ ಪುತ್ತೂರಿನಲ್ಲಿ ಬದಲಾವಣೆ ಮಾಡಬಹುದು. ಪುತ್ತೂರನ್ನು ಬದಲಾಯಿಸಲು ಸಮಯ ಸಂದರ್ಭ ಎರಡೂ ಜನರ ಕೈಯಲ್ಲಿದ್ದು, ಮನಸ್ಸು ಮತ್ತು ಹೃದಯ ಮಾತ್ರ ಬೇಕಾಗಿದೆ. ಹಿಂದುತ್ವದ ಅಡಿಪಾಯದಲ್ಲಿ ಪುತ್ತೂರಿನ ನವನಿರ್ಮಾಣ ಮಾಡುವ ಜತೆಗೆ ಅಭಿವೃದ್ಧಿಗೊಳಿಸುವ ಯುವ ನಾಯತ್ವದ ಅಗತ್ಯ ಪುತ್ತೂರಿಗಿದೆ. ಪುತ್ತೂರಿನ ಮಹಿಳೆಯರು ಮನಸ್ಸು ಮಾಡಿದರೆ, ಹತ್ತೂರು ನೋಡುವ ರೀತಿಯ ಅರುಣೋದಯ ಸಾಧ್ಯವಿದೆ. ವ್ಯಕ್ತಿಯೊಬ್ಬ ತನಗಾಗಿ ನಿಲ್ಲದೆ ತನ್ನವರಿಗಾಗಿ ನಿಂತ ಕ್ಷೇತ್ರವಿದ್ದರೆ ಪುತ್ತೂರು ಮಾತ್ರ ಎಂದು ಖ್ಯಾತ ವಾಗ್ಮಿ ಅಕ್ಷಯ ಘೋಖಲೆ ಹೇಳಿದರು.
ಅವರು ಮುಕ್ರಂಪಾಡಿಯ ಸುಭದ್ರ ಸಭಾಂಗಣದಲ್ಲಿ ನಡೆದ ನಾರಿ ಶಕ್ತಿ- ಸಮಾಜದ ಪ್ರೇರಕ ಶಕ್ತಿ ಸೀತಾ ಪರಿವಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

Ad Widget

Ad Widget

Ad Widget

Ad Widget

ದಾರಿ ತಪ್ಪಿದ ಜನರಿಗೆ ಸಮಾಜಕ್ಕಾಗಿ ಬದುಕುವ ಆದರ್ಶನವನ್ನು ನೀಡುವ ಮೂಲಕ ಪರಿವರ್ತನೆಯಾಗಬೇಕಾಗಿದೆ. ನಾವು ಯಾವಾಗ ಬುಲ್ಡೋಜರ್ ನೋಡೋದು ಎಂಬ ಆಸೆ ಪುತ್ತೂರಿನ ಜನರಿಗಿದೆ. ಮೋದಿ, ಯೋಗಿ ಮಾದರಿಯನ್ನು ನಮ್ಮ ಊರಿನಲ್ಲಿ ಜಾರಿ ಮಾಡಲು ಅರುಣ್ ಕುಮಾರ್ ಪುತ್ತಿಲ ಅವರಿಂದ ಮಾತ್ರ ಸಾಧ್ಯ. ಮುಂದಿನ ದಿನ ಪುತ್ತಿಲ ಮೂಲಕ ಯೋಗಿ ಹಾಗೂ ಮೋದಿ ಮಾದರಿಯನ್ನು ನೋಡುವ ಭರವಸೆ ಜನರಿಗಿದೆ. ಯುವ ನಾಯಕತ್ವ ಇದ್ದಾಗ ಅಭಿವೃದ್ಧಿ, ಭ್ರಷ್ಟಾಚಾರ ರಹಿತ ಆಡಳಿತ, ಹಿಂದೂ ಎಂದು ತಲೆ ಎತ್ತಿ ನಡೆಯುವ ಅವಕಾಶ ಜನರಿಗೆ ಸಿಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ ತನಕ್ಕೆ ವಿಶೇಷ ಸ್ಥಾನಮಾನವಿದೆ. ಅಧರ್ಮವನ್ನು ತಾಂಡವಾಡುತ್ತಿದ್ದಾಗ ಧರ್ಮ ರಕ್ಷಣೆಗೆ ಪುರುಷನಿಗೆ ಸರಿಸಮಾನವಾಗಿ ಸ್ತ್ರೀ ನಿಂತು ಸಮಾಜವನ್ನು ಕಟ್ಟಿದ್ದಾಳೆ ಎಂದು ತಿಳಿಸಿದರು.

Ad Widget

Ad Widget

Ad Widget

Ad Widget

ಒಂದಂಕಿ ಲಾಟರಿಯಿಂದ ಹೆಣ್ಣುಮಕ್ಕಳು ಕಣ್ಣೀರು ಹಾಕಬಾರದು ಎಂದು ಲಾಟರಿ ಅಡ್ಡೆಗಳನ್ನು ನಾಶ ಮಾಡಿದ ಕೀರ್ತಿ ಪುತ್ತಿಲ ಅವರದ್ದಾಗಿದೆ. ಮತ್ತೆ ಮತ್ತೆ ಲಾಟರಿ ಅಡ್ಡೆಗಳು ಅಣಬೆಯ ರೀತಿ ಹುಟ್ಟಬಾರದು ಎಂದಾದರೆ ಅರುಣ್ ಕುಮಾರ್ ಪುತ್ತಿಲ ಬೇಕು. ಹೆದರಿಸಿದಾಗ ಹೆದರುವ ಕುರಿ ಮಂದೆಯಲ್ಲ ನಾವುಗಳಲ್ಲ, ಸಿಂಹವಂತರು ಎಂಬ ಉತ್ತರವನ್ನು ನೀಡಬೇಕಾಗಿದೆ. ಮನೆಯ ಮಗ ಅರುಣ ಎಂಬ ಮಾತು ಪ್ರತಿ ಮಾತೆಯ ಬಾಯಲ್ಲಿ ಬರಬೇಕು. ಜಾಗೃತ ಸಮಾಜವನ್ನು ಮೇ.10 ರವರೆಗೆ ಜಾಗೃತವಾಗಿಟ್ಟು, ವಿಜಯೋತ್ಸವ ದಿನ ಹಾರಿಸುವ ಧ್ವಜ ಹಿಂದುತ್ವದ ಜಯಭೇರಿಯನ್ನು ಸಮಾಜಕ್ಕೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮನೆಯ ಮಹಿಳೆಯೂ ಸೀತೆಯರಾಗಬೇಕಾಗಿದೆ.

Ad Widget

Ad Widget

Ad Widget

Ad Widget

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಅಧಿಕಾರಕ್ಕಾಗಿ, ಶಾಸಕ ಹುದ್ದೆಗಾಗಿ ಹಾಗೂ ಸಮಾಜವನ್ನು ಒಡೆದು ಅಶಾಂತಿಯನ್ನು ಸೃಷ್ಠಿಸುವ ಉದ್ದೇಶದಿಂದ ಚುನಾವಣೆಗೆ ನಿಂತಿಲ್ಲ. ಕಾರ್ಯಕರ್ತರ ನೋವು ನಲಿವೆ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಕಾರ್ಯಕರ್ತರ ಕೂಗು ವಿಧಾನ ಸೌಧದಲ್ಲಿ ಮೊಳಬೇಕೆಂಬ ನಿಟ್ಟಿನಲ್ಲಿ ಈ ಸ್ಪರ್ಧೆಯಾಗಿದೆ. ಕಾರ್ಯಕರ್ತರನ್ನು ಗುಲಾಮರಂತೆ ಕಂಡರೆ ಸಮಾಜ ಉತ್ತರ ಕೊಡುತ್ತದೆ ಎಂಬ ಸಂದೇಶವನ್ನು ಪುತ್ತೂರಿನಿಂದ ದೆಹಲಿಯವರೆಗೆ ಸಾರುವ ಕಾಲದಲ್ಲಿದ್ದೇವೆ. ಚುನಾವಣೆಯನ್ನು ಎದುರಿಸುವುದು ಕಷ್ಟ ಸಾಧ್ಯ ಎಂಬುದು ಗೊತ್ತಿರುವ ವಿಷಯವಾಗಿದ್ದು, ಮನೆ ಮಗನಾಗಿ ಸ್ವೀಕರಿಸಿ 10ರೂ ಭಿಕ್ಷೆ ಹಾಕಿ ಬೆಂಬಲಿಸಿ ಎಂದು ಭಾವುಕರಾದರು.

Ad Widget

Ad Widget

Ad Widget

ಕಾರ್ಯಕ್ರಮವನ್ನು ಗೃಹಿಣಿ ಮಲ್ಲಿಕಾ ಪ್ರಸಾದ್ ಗೌಡ ಕನ್ನಾಯ ಉದ್ಘಾಟಿಸಿದರು. ಚೇತನ ಆಸ್ಪತ್ರೆಯ ವೈದ್ಯ ಡಾ. ಜೆ. ಸಿ. ಅಡಿಗ, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ಯ ಹಿಂದಾರು, ಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಗೌಡ ಮುಂಡೂರು ಮತ್ತಿತರರು ಉಪಸ್ಥಿತರಿದ್ದರು.

ಸಮೃದ್ಧಿ ಶೆಣೈ ಪ್ರಾರ್ಥಿಸಿದರು. ಮಹಿಳಾ ಸಮಾವೇಶದ ಪ್ರಮುಖರಾದ ವಸಂತ ಲಕ್ಷ್ಮೀ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಪುಷ್ಪಾ ರೈ ವಂದಿಸಿದರು. ಜಯಮಾಲಾ ವಿ. ಎನ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಮಹಿಳೆಯರೆಲ್ಲರಿಗೂ ಅರಿಶಿನ ಕುಂಕುಮ ಹಾಗೂ ಹೂ ನೀಡಿ ಸ್ವಾಗತ ನೀಡಿದ್ದು ವಿಶೇಷವಾಗಿತ್ತು.

Click to comment

Leave a Reply

ಸ್ಥಳೀಯ

Dr Dhananjaya Sarji-ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡುವಂತೆ ಡಾ.ಧನಂಜಯ ಸರ್ಜಿ ಮನವಿ

Ad Widget

Ad Widget

Ad Widget

Ad Widget

ಶಿವಮೊಗ್ಗ : ಇದೇ ಜೂನ್ 3 ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡಿ ಅಭೂತ ಪೂರ್ವ ಗೆಲುವಿಗೆ ಕಾರಣರಾಗಬೇಕು ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮನವಿ ಮಾಡಿದರು.

Ad Widget

Ad Widget

Ad Widget

Ad Widget

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ವೈದ್ಯ ಶಿಕ್ಷಣ ಮುಗಿದ ತಕ್ಷಣ ನಾನು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ ಚಿಕ್ಕದಾಗಿ ಒಂದು ಕ್ಲಿನಿಕ್ ಆರಂಭಿಸಿದ್ದು, ಇದೀಗ 1000 ಸಿಬ್ಬಂದಿ ಹಾಗೂ 100 ವೈದ್ಯರು ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ, ವಿವಿಧ ಹಂತಗಳಲ್ಲಿ ಪದವೀದರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡಿದ್ದೇನೆ, ನೈರುತ್ಯ ಪದವೀಧರ ಕ್ಷೇತ್ರವು 14 ಮೆಡಿಕಲ್ ಕಾಲೇಜು, 30 ಎಂಜಿನಿಯರಿಂಗ್ ಕಾಲೇಜು, 100 ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ವಿದ್ಯಾಸ್ಥೆಗಳನ್ನು ಹೊಂದಿದ ಸುಶಿಕ್ಷಿತರ ಕ್ಷೇತ್ರ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳನ್ನು ಒಳಗೊಂಡಿದೆ, ಕ್ಷೇತ್ರದಲ್ಲಿ 85 ಸಾವಿರ ಮತದಾರರಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 27 ಸಾವಿರ ಮತದಾರರಿದ್ದಾರೆ, ನನ್ನ ಗೆಲುವಿಗಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಹೇಳಿದರು.

Ad Widget

Ad Widget

Ad Widget

Ad Widget

10 ನೇ ವಯಸ್ಸಿನಿಂದ ಆರ್ ಎಸ್ ಎಸ್ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸಿದ್ದೇನೆ, ಐಟಿಸಿ, ಒಟಿಸಿ ಮುಗಿಸಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು, ವೈದ್ಯ ವೃತ್ತಿಯೊಂದಿಗೆ ಸಂಘದ ಅನೇಕ ಜವಾಬ್ದಾರಿಗಳನ್ನು ನಿರ್ವಹಸಿದ್ದೇನೆ, ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಮುನ್ನ ವಿಕಾಸ ಟ್ರಸ್ಟ್ ಗೆ ರಾಜೀನಾಮೆ ಸಲ್ಲಿಸಿ, ಕಳೆದ ಎರಡು ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೂಂಡು ಬಿಜೆಪಿಯಲ್ಲೀಗ ಜಿಲ್ಲಾ ಉಪ[ಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷದ ಹಿರಿಯರು ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಅವರೆಲ್ಲರಿಗೂ ಅನಂತ ಧನ್ಯವಾದಗಳು, ಈ ಚುನಾವಣೆಯಲ್ಲಿ ತಮ್ಮೆಲ್ಲರ ಸಹಕಾರ, ಬೆಂಬಲದೊಂದಿಗೆ ಗೆಲುವು ಸಾಧಿಸಿ ಪದವೀದರರ ಸಮಸ್ಯೆಗಳಿಗೆ ಪ್ರಾಮಣಿಕವಾಗಿ ಸ್ಪಂದಿಸುವೆ ಎಂದು ಭರವಸೆ ನೀಡಿದರು.

Ad Widget

Ad Widget

Ad Widget

Ad Widget

ಶಾಸಕ ಎಸ್.ಎನ್. ಚನ್ನ ಬಸಪ್ಪ,ಮಾತನಾಡಿ, ಪಕ್ಷದ ಹಿರಿಯರು ತೀರ್ಮಾನ ಕೈಗೊಂಡು ಡಾ.ಧನಂಜಯ ಸರ್ಜಿ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ,ಎಲ್ಲ ಕಾರ್ಯಕರ್ತರು ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

Ad Widget

Ad Widget

Ad Widget

ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ರಾಜ್ಯ ಸಂಚಾಕರಾದ ಎಸ್.ದತ್ತಾತ್ರಿ, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಮಾಜಿ ಸೂಡಾ ಅಧ್ಯಕ್ಷರಾದ ನಾಗರಾಜ್ ಮತ್ತಿತರರು ಹಾಜರಿದ್ದರು.

Continue Reading

ಅಂತರ ರಾಜ್ಯ

Delhi-ದೆಹಲಿ ಮದ್ಯ ನೀತಿ ಪ್ರಕರಣ; ಆಮ್‌ ಆದ್ಮಿ ಪಕ್ಷ ಆರೋಪಿ; ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿಸಿದ ದೇಶದ ಮೊದಲ ಕೇಸ್‌

Ad Widget

Ad Widget

Ad Widget

Ad Widget

ನವದೆಹಲಿ: ರಾಜಕೀಯ ಪಕ್ಷವೊಂದನ್ನು ಆರೋಪಿ ಎಂದು ಹೆಸರಿಸಿರುವುದು ದೇಶದಲ್ಲಿ ಇದೇ ಮೊದಲು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯವು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಆಮ್‌ ಆದ್ಮಿ ಪಕ್ಷವನ್ನು ಆರೋಪಿ ಎಂದು ಹೆಸರಿಸಿದೆ.

Ad Widget

Ad Widget

Ad Widget

Ad Widget

ದೆಹಲಿಯ ವಿಶೇಷ ಕೋರ್ಟ್‌ಗೆ ಜಾರಿ ನಿರ್ದೇಶನಾಲಯವು ಪೂರಕ ದಾಖಲೆಗಳೊಂದಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಇದು ಈ ಪ್ರಕರಣದ 8ನೇ ಚಾರ್ಜ್‌ಶೀಟ್‌ ಆಗಿದೆ. ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ. ಎಎಪಿ ನಾಯಕರು, ಇತರ ವ್ಯಕ್ತಿಗಳೊಂದಿಗೆ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಇಡಿ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

Ad Widget

Ad Widget

Ad Widget

Ad Widget

ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವು ನಾಯಕರು ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದು, ಲಾಭದ ಸ್ವಲ್ಪ ಮೊತ್ತವನ್ನು ಎಎಪಿಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೂ ಬಳಸಲಾಗಿದೆ. ಅಲ್ಲದೇ ಈ ಪ್ರಕರಣದ ಮಾತುಕತೆ ನಡೆಸಲು ಕೇಜ್ರಿವಾಲ್ ಅವರು ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂಬುದಕ್ಕೆ ನಮ್ಮ ಬಳಿ ಪೂರಕ ದಾಖಲೆಗಳಿವೆ. ಅವರು ತಂಗಿದ್ದ ಹೋಟೆಲ್‌ ಬಿಲ್‌ ಅನ್ನು ಪ್ರಕರಣದ ಆರೋಪಿಯೊಬ್ಬರು ಭಾಗಶಃ ಪಾವತಿಸಿದ್ದಾರೆ ಎಂಬುದಕ್ಕೂ ಪುರಾವೆಗಳಿವೆ ಎಂಬ ಮಾಹಿತಿಯನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

Ad Widget

Ad Widget

Ad Widget

Ad Widget

ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ. ನ್ಯಾ. ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿದ್ದರೂ, ಕಕ್ಷಿದಾರರ ವಾದಗಳಿಗೆ ಯಾವುದೇ ಧಕ್ಕೆಯಾಗದಂತೆ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.

Ad Widget

Ad Widget

Ad Widget

ಕಳೆದ ಮಾರ್ಚ್ 21ರಂದು ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಜೂ.1 ರ ವರೆಗೆ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಮೇ 25 ರಂದು ದೆಹಲಿಯ 7 ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮತ್ತು ಇಂಡಿಯಾ ಬ್ಲಾಕ್‌ ಪರ ಕೇಜ್ರಿವಾಲ್‌ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Continue Reading

ರಾಜಕೀಯ

ಎಕ್ಸ್‌ ಖಾತೆಯಲ್ಲಿ ಅಟಲ್‌ ಸೇತುವೆ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಪೋಸ್ಟ್‌: ವಿಡಿಯೋ ರೀಶೇರ್‌ ಮಾಡಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ

Ad Widget

Ad Widget

Ad Widget

Ad Widget

ಮುಂಬೈ: ಮುಂಬೈನ ಅಟಲ್‌ ಸೇತುವೆ ಬಗ್ಗೆ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಮೆಚ್ಚುಗೆಯ ಮಾತುಗಳನ್ನಾಡಿದ ವಿಡಿಯೊ ಹಂಚಿಕೊಂಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ರಶ್ಮಿಕಾ ಅವರ ವಿಡಿಯೊವನ್ನು ರೀಶೇರ್‌ ಮಾಡಿದ್ದಾರೆ.

Ad Widget

Ad Widget

Ad Widget

Ad Widget

‘ಜನರನ್ನು ಸಂಪರ್ಕಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ’ ಎಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಮೋದಿ ಪ್ರತಿಕ್ರಿಯಿಸಿದ್ದಾರೆ.

Ad Widget

Ad Widget

Ad Widget

Ad Widget

ಪ್ರಧಾನಿ ಮೋದಿಯವರು ಉದ್ಘಾಟಿಸಿದ ಅಟಲ್ ಬಿಹಾರಿ ವಾಜಪೇಯಿ ಶೆವಾರಿ-ನವ ಶೇವಾ ಅಟಲ್ ಸೇತುವೆ ಮೂಲಕ ಪ್ರಯಾಣಿಸಿದ ಅನುಭವದ ಬಗ್ಗೆ ಮಾತನಾಡಿರುವ ವೀಡಿಯೊವನ್ನು ರಶ್ಮಿಕಾ ಮಂದಣ್ಣ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

Ad Widget

Ad Widget

Ad Widget

Ad Widget

‘ಎರಡು ಗಂಟೆಗಳ ಪ್ರಯಾಣ ಈಗ 20 ನಿಮಿಷಗಳಲ್ಲಿ ಮುಗಿಯುತ್ತದೆ. ಇಂಥದ್ದೊಂದು ಸಾಧ್ಯವಿತ್ತು ಎಂದು ಯಾರು ಭಾವಿಸಿರಲಿಲ್ಲ. ಇಂದು ನವಿ ಮುಂಬೈನಿಂದ ಮುಂಬೈವರೆಗೆ, ಗೋವಾದಿಂದ ಮುಂಬೈವರೆಗೆ, ಬೆಂಗಳೂರಿನಿಂದ ಮುಂಬೈವರೆಗೆ ತುಂಬಾ ಸುಲಭವಾಗಿ ಮತ್ತು ಅದ್ಭುತ ಮೂಲಸೌಕರ್ಯಗಳೊಂದಿಗೆ ಪ್ರಯಾಣಿಸಬಹುದು. ಇದು ನನಗೆ ಹೆಮ್ಮೆ ತರುತ್ತದೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

Ad Widget

Ad Widget

Ad Widget

‘ಯುವ ಪೀಳಿಗೆ, ಯುವ ಭಾರತ, ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಅತ್ಯಂತ ಬುದ್ಧಿವಂತ ದೇಶ. ಯುವ ಭಾರತೀಯರು ಮತ ಚಲಾಯಿಸಬೇಕು’ ಎಂದಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading