Connect with us

ಬಂಟ್ವಾಳ

ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಚುನಾವಣಾ ಕಚೇರಿ ನಾಳೆ ಉದ್ಘಾಟನೆ

Ad Widget

Ad Widget

Ad Widget

Ad Widget

ಬಂಟ್ವಾಳ : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಅವರ ಚುನಾವಣಾ ಕಚೇರಿ ಎ.12 ಬುಧವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಬಿ.ಸಿ. ರೋಡ್ ನ ಪದ್ಮ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಧನಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ನೂತನ ಕಚೇರಿ ಉದ್ಘಾಟನೆಯಾಗಲಿದೆ.

Ad Widget

Ad Widget

Ad Widget

ಕಾಂಗ್ರೆಸ್ ಅನ್ನು ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲೂ ಭರದ ಚುನಾವಣಾ ಪ್ರಚಾರ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಬಿ. ರಮಾನಾಥ ರೈಯವರನ್ನು ಭಾರೀ ಅಂತರದಲ್ಲಿ ಗೆಲ್ಲಿಸಲು ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ಚುನಾವಣಾ ಕಚೇರಿ ತೆರೆಯಲಾಗುತ್ತಿದೆ.

Ad Widget

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿವಿಧ ಸಮುದಾಯಗಳ ಹಿರಿಯ ಮುಖಂಡರು ಕಚೇರಿ ಉದ್ಘಾಟಿಸಲಿದ್ದಾರೆ. ಅಭ್ಯರ್ಥಿ ಬಿ. ರಮಾನಾಥ ರೈ ಮತ್ತು ಪಕ್ಷದ ವರಿಷ್ಠರು, ಬ್ಲಾಕ್ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ ತಿಳಿಸಿದ್ದಾರೆ.

Ad Widget

Ad Widget
Click to comment

Leave a Reply

ಅಪರಾಧ

Bantwal-ಬಂಟ್ವಾಳ : ಬಾಲಕಿಯೊಂದಿಗೆ ಅನುಚಿತ ವರ್ತನೆ – ಯುವಕನ ವಿರುದ್ಧ ಪ್ರಕರಣ ದಾಖಲು

Ad Widget

Ad Widget

Ad Widget

Ad Widget

ಬಂಟ್ವಾಳ: ಪೊಳಲಿಯಲ್ಲಿ ಬಾಲಕಿಯನ್ನು ಅಪ್ಪಿ ಹಿಡಿದು ಅನುಚಿತವಾಗಿ ವರ್ತಿಸಿದ ಘಟನೆಯು ಎ. 24ರಂದು ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಪ್ರಕರಣ ಆರೋಪಿಯಾಗಿದ್ದು, ಆತ ಬಾಲಕಿಯ ಹಿಂದಿನಿಂದ ಬಂದು ಜೋರಾಗಿ ಎದೆ ಭಾಗವನ್ನು ಅಪ್ಪಿ, ಕೈಯನ್ನು ಬಲವಾಗಿ ಹಿಡಿದು ತಿರುಗಿ ನೋಡಲು ಕೂಡ ಅವಕಾಶ ನೀಡದೆ ನಿನ್ನ ಮೊಬೈಲ್ ನಂಬರ್ ಕೊಡಬೇಕು, ಇಲ್ಲದಿದ್ದರೇ ನಿನ್ನನ್ನು ರೇಪ್ ಮಾಡದೇ ಬಿಡುವುದಿಲ್ಲ, ನೀನು ನನಗೆ ಬೇಕು ಎಂದು ಹೇಳಿದಾಗ ನೊಂದ ಬಾಲಕಿಯು ಬೊಬ್ಬೆ ಹಾಕಿದ್ದಾಳೆ.

Ad Widget

ಈ ವೇಳೆ ಸಂಬಂಧಿಕನೋರ್ವ ಬರುವುದನ್ನು ನೋಡಿ ಆರೋಪಿಯು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget
Continue Reading

ಅಪರಾಧ

Bantwal-ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ – ರವಿ ನಾವೂರು ವಿರುದ್ದ ಪ್ರಕರಣ ದಾಖಲು

Ad Widget

Ad Widget

Ad Widget

Ad Widget

ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿಯಿಂದ ಇರಿದು ಹತ್ಯೆ ಯತ್ನಿಸಿದ ಬಗ್ಗೆ ರವಿ ನಾವೂರು ಎಂಬಾತನ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ಮನಸ್ತಾಪದಲ್ಲಿ ಉಂಟಾದ ಜಗಳ ಕೊಲೆಯತ್ನದವರೆಗೆ ಮುಂದುವರಿದಿದೆ ಎಂದು ಬಡ್ಡಕಟ್ಟೆ, ಬಿ.ಕಸ್ಬಾ ಗ್ರಾಮ, ಬಂಟ್ವಾಳ ನಿವಾಸಿ ಗುರುರಾಜ್ (32) ಎಂಬವರು ಠಾಣೆಗೆ ದೂರು ನೀಡಿದ್ದಾರೆ.

Ad Widget

Ad Widget

Ad Widget

ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ಏ. 14ರಂದು ರಾತ್ರಿ ಪುಷ್ಪರಾಜ್ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಪರಸ್ಪರ ಪರಿಚಿತರಾದ ರವಿ ನಾವೂರು ಹಾಗೂ ಪುಷ್ಪರಾಜ್ ಎಂಬವರ ನಡುವೆ ಗಲಾಟೆ ನಡೆದಿದ್ದು, ಆರೋಪಿ ರವಿ ನಾವೂರು ಪುಷ್ಪರಾಜ್ ರವರಿಗೆ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

Ad Widget

ಹಲ್ಲೆಯಿಂದ ಗಾಯಗೊಂಡ ಪುಷ್ಪರಾಜ್ ರವರನ್ನು, ಗುರುರಾಜ್ ಹಾಗೂ ಮತ್ತೋರ್ವರು ಸೇರಿ, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ, ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಗಲಾಟೆ ಕುರಿತಾಗಿ ಪುಷ್ಪರಾಜ್ ಬಳಿ ಗುರುರಾಜ್‌ರವರು ವಿಚಾರಿಸಿದಾಗ, ಹಣಕಾಸಿನ ವಿಚಾರದಲ್ಲಿ ಆರೋಪಿ ಹಲ್ಲೆ ನಡೆಸಿರುವುದಾಗಿ ತಿಳಿಸಿರುತ್ತಾನೆ ಎಂಬುದಾಗಿ ಗುರುರಾಜ್‌ರವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಐಪಿಸಿ ಕಲಂ 504, 506, 307 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ad Widget

Ad Widget
Continue Reading

ಬಿಗ್ ನ್ಯೂಸ್

Bantwal-ಬಂಟ್ವಾಳ : ಕುದ್ಕೋಳಿ ಬಳಿ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಡಸ್ಟರ್ ಕಾರು

Ad Widget

Ad Widget

Ad Widget

Ad Widget

ಬಂಟ್ವಾಳ: ಇಲ್ಲಿನ ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಸೋಮವಾರ ಬೆಳಗ್ಗೆ(ಏ.8) ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದು ಹೋದ ಘಟನೆ ನಡೆದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

Ad Widget

Ad Widget

Ad Widget

ಬಂಟ್ವಾಳ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಕಾರಿನಲ್ಲಿದ್ದವರು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಿಂದ ಇಳಿದಿದ್ದು, ಯಾರಿಗೂ ಗಾಯಗಳಾಗಿಲ್ಲ. ಆದರೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಈ ಘಟನೆಯಿಂದಾಗಿ ಬಂಟ್ವಾಳ- ಮೂಡುಬಿದಿರೆ ರಸ್ತೆ ಸುಮಾರು ಒಂದು ತಾಸುಗಳ ಕಾಲ ಬ್ಲಾಕ್ ಆಗಿತ್ತು ಎನ್ನಲಾಗಿದೆ.

Ad Widget

ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಏಳಿಂಜೆಯ ಕೊಲ್ಲೆಟ್ಟು ನಿವಾಸಿ ಶರತ್ ಶೆಟ್ಟಿ ಅವರ ಕಾರಿನಲ್ಲಿ ಬೆಂಕಿ ಕಾಣಿಕೊಂಡಿದ್ದು, ಈ ವೇಳೆ ಕಾರು ಬ್ರೇಕ್ ಹಾಕಿದರೂ ನಿಲ್ಲದೇ, ಬಳಿಕ ಚಾಲಕನ ಸಮಯ ಪ್ರಜ್ಞೆಯಿಂದ ಕಾರು ನಿಂತಿದೆ. ಕಾರಿನಲ್ಲಿ ಮಗು ಸೇರಿದಂತೆ ಇತರ ನಾಲ್ಕು ಮಂದಿ ಇದ್ದು, ಯಾರಿಗೂ ಯಾವುದೇ ಹಾನಿ ಸಂಭವಿಸಿರುವುದಿಲ್ಲ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading