Connect with us

ಮಂಗಳೂರು

Police Raid on Prostitution: ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲದ ಮಹಿಳೆ ಸಹಿತ ನಾಲ್ವರ ಬಂಧನ- ಪಿಂಪ್‌ ಪರಾರಿ

Ad Widget

Ad Widget

Ad Widget

Ad Widget

Police Raid on Prostitution: ಉಳ್ಳಾಲ: ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿರುವ ಉಳ್ಳಾಲ ಪೊಲೀಸರು, ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ದಾಳಿಯ ವೇಳೆ ಗ್ರಾಹಕ ಹಾಗೂ ಮಹಿಳೆಯರ ಮಧ್ಯೆ ಪಿಂಪ್‌ ರೀತಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಪರಾರಿಯಾಗಿ ತಪ್ಪಿಸಿಕೊಂಡಿದ್ದಾನೆ.

Ad Widget

Ad Widget

Ad Widget

 ಬಂಟ್ವಾಳದ ಬೋಳಂತೂರು ವಿಟ್ಲಕೋಡಿ ನಿವಾಸಿ ರುಕಿಯಾ (50), ಉಳ್ಳಾಲ ಸುಭಾಶ್ ನಗರ, ಕಡಪರನಿವಾಸಿ ಅಬ್ದುಲ್ ಶಮೀರ್ (30), ಬೆಳ್ತಂಗಡಿ ಕಾಣಿಯೂರು ನೋಂಡಿಲ್ ಕಜೆ ಮನೆ ನಿವಾಸಿ ಅಬ್ದುಲ್ ರಝಾಕ್ ಉಸ್ಮಾನ್ (45) ಹಾಗೂ ಉಳ್ಳಾಲ ಅಕ್ಕರೆಕೆರೆಮಿಲಾಸ್ ಪ್ಲಾಟ್ ನಿವಾಸಿ ಮುಹಮ್ಮದ್ ಇಬ್ರಾಹೀಂ(38) ಬಂಧಿತ ಆರೋಪಿಗಳು. ಲತೀಫ್ ಎಂಬಾತ ತಲೆಮರೆಸಿಕೊಂಡಿರುವ ಪಿಂಪ್‌.

Ad Widget

ಉಳ್ಳಾಲದ ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ವಿಜೇತ ನಗರದಲ್ಲಿರುವ ʼ ಯಾನ್ವಿʼ   ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಉಳ್ಳಾಲ ಪೊಲೀಸರು ,  ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ.   ಈಸಂಬಂಧ ರುಕಿಯಾ ಮತ್ತು ಲತೀಫ್ ಎಂಬವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.

Ad Widget

Ad Widget

ರುಕಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಲತೀಫ್  ತಲೆಮರೆಸಿಕೊಂಡಿದ್ದಾನೆ. ದಾಳಿಯ ವೇಳೆ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್’ಗಳು, 5000 ರೂ.ನಗದು ಸೇರಿ ಒಟ್ಟು 1,76,580 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Ad Widget

Ad Widget

Ad Widget

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್ ಹಾಗೂ ಪಿಎಸ್ಐ ಮಂಜುಳಾ, ಸಿಬ್ಬಂದಿಗಳಾದ ಮಂಜುನಾಥ್, ವಾಸುದೇವ, ಚವ್ಹಾಣ್, ದಾಕ್ಷಾಯಿಣಿ, ಲಕ್ಷ್ಮೀ, ಎಸಿಪಿ ಸ್ಮಾಡ್ ಸಿಬ್ಬಂದಿ ರೆಜಿ ಭಾಗವಹಿಸಿದ್ದರು.

Click to comment

Leave a Reply

ಮಂಗಳೂರು

Luxury ship-ಮಂಗಳೂರಿಗೆ ಬಂದ 8ನೇ ಬೃಹತ್ ಐಷಾರಾಮಿ ಹಡಗು

Ad Widget

Ad Widget

Ad Widget

Ad Widget

ಪಣಂಬೂರು ಮೇ 5: ಈ ವರ್ಷದ 8ನೇ ಐಷಾರಾಮಿ ಕ್ರೂಸ್ ‘ಎಂಎಸ್ ಇನ್‌ಸೈನಿಯಾ’ ನವಮಂಗಳೂರು ಬಂದರಿಗೆ ರವಿವಾರ ಆಗಮಿಸಿತು. ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ವಿದೇಶೀ ಪ್ರವಾಸಿಗರಿಗೆ ಪರಿಚಯಿಸಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

Ad Widget

Ad Widget

Ad Widget

ನಾರ್ವೇಜಿಯನ್ ಕ್ರೂಸ್ ಲೈನರ್ 509 ಪ್ರಯಾಣಿಕರು ಮತ್ತು 407 ಸಿಬಂದಿ ಒಳಗೊಂಡಿದೆ. ಎನ್‌ ಎಂಪಿಎಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕ್ಷಿಪ್ರ ಕ್ಲಿಯರಿಂಗ್ ವ್ಯವಸ್ಥೆ ಸೌಲಭ್ಯ ಅಳವಡಿಸಲಾಗಿದೆ.

Ad Widget

ಕಾರ್ಕಳ ಗೋಮಟೇಶ್ವರ ಬೆಟ್ಟ ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.

Ad Widget

Ad Widget
Continue Reading

ಮಂಗಳೂರು

Panolibail-ಪಣೋಲಿಬೈಲ್ನಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆ ಬುಕ್ಕಿಂಗ್; ಪೂರ್ಣಗೊಳ್ಳಬೇಕಾದರೆ ಕನಿಷ್ಠ ಎಷ್ಟು ವರ್ಷ  ಬೇಕು ಗೊತ್ತೇ ?

Ad Widget

Ad Widget

Ad Widget

Ad Widget

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಕಾರಣಿಕ ಕ್ಷೇತ್ರವಾಗಿದ್ದು, ದೈವಗಳನ್ನು ನಂಬುವ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಯಾವುದಾದರೂ ಸಂದರ್ಭದಲ್ಲಿ ಪಣೋಲಿಬೈಲು ದೈವಕ್ಕೆ ಹರಕೆ ಹೇಳಿಕೊಳ್ಳುವುದುಂಟು. ಅದನ್ನು ಈಡೇರಿಸಲು ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

Ad Widget

Ad Widget

Ad Widget

ಇಲ್ಲಿ ಅಗೇಲು ಸೇವೆ (ಕೋಳಿ, ಕುಚ್ಚಲಕ್ಕಿ, ಬಾಳೆ, ತೆಂಗಿನಕಾಯಿ, ಕೇಪುಳ ಹೂ ಒಪ್ಪಿಸುವುದು) ಹಾಗೂ ಕೋಲ ಸೇವೆ ಪ್ರಸಿದ್ಧ. ಕೋಲ ಸೇವೆಗಾಗಿ ಭಕ್ತರು ಬುಕ್ ಮಾಡುವುದುಂಟು. ಹೀಗೆ 23 ಸಾವಿರ ಸೇವೆಗಳು ಈ ಸನ್ನಿಧಿಯಲ್ಲಿ ಬುಕ್ ಆಗಿವೆ. ದಿನವೊಂದಕ್ಕೆ 4, ವಾರದಲ್ಲಿ 5 (ಕೆಲವು ದಿನ, ತಿಂಗಳು ಇರುವುದಿಲ್ಲ) ಸೇರಿ ಒಟ್ಟು 600ರಿಂದ 700 ಕೋಲ ಸೇವೆಗಳು ಇಲ್ಲಿ ನಡೆಯುತ್ತವೆ ಎಂದು ಲೆಕ್ಕ ಹಾಕಿದರೆ, ಇವತ್ತು ಬುಕ್ ಮಾಡಿದವರಿಗೆ 35 ವರ್ಷಗಳ ನಂತರ ಇಲ್ಲಿ ಸೇವೆ ಮಾಡಿಸಲು ಅವಕಾಶ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಈಗ ಕೋಲಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ.

Ad Widget

23 ಸಾವಿರಕ್ಕೂ ಅಧಿಕ ಕೋಲ ಸೇವೆ ಬುಕ್ಕಿಂಗ್ :
ಪಣೋಲಿಬೈಲಿಗೆ ತುಳುನಾಡ ಜಿಲ್ಲೆಗಳಷ್ಟೇ ಅಲ್ಲ, ಹೊರಗಿನಿಂದಲೂ ಆಗಮಿಸುವ ಭಕ್ತರು ಅಗೇಲು, ಕೋಲ ಸೇವೆ ನಡೆಸುತ್ತಾರೆ. ವಿಶೇಷ ಹರಕೆ ರೂಪದಲ್ಲಿ ಕೋಲ ಸೇವೆಯನ್ನು ನೀಡುತ್ತಾರೆ. ಇದುವರೆಗೆ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ ಆಗಿದೆ. ಕ್ಷೇತ್ರದಲ್ಲಿ ಅಗೇಲು ಮತ್ತು ಕೋಲ ಸೇವೆಗಳು ವಿಶೇಷವಾಗಿದೆ. ವಾರದ ಮೂರು ದಿನಗಳು ಅಗೇಲು ಹಾಗೂ ವಾರದ 5 ದಿನಗಳ ಕೋಲ ಸೇವೆ ಸಂದಾಯವಾಗುತ್ತದೆ. ಬೆಳಗ್ಗೆ ನಿಗದಿತ ಸಮಯದೊಳಗೆ ಬಂದವರಿಗೆ ಎಷ್ಟು ಬೇಕಾದರೂ ಅಗೇಲು ಸೇವೆ ನೀಡುವುದಕ್ಕೆ ಅವಕಾಶವಿದೆ. ದಿನವೊಂದಕ್ಕೆ ಕೋಲ ಸೇವೆ ನೀಡುವುದಕ್ಕೆ ಕೇವಲ ನಾಲ್ವರಿಗೆ ಮಾತ್ರ ಅವಕಾಶವಿತ್ತು. ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಾಗುತ್ತಿದ್ದು, ಅದು ಪೂರ್ಣಗೊಳ್ಳಬೇಕಾದರೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.

Ad Widget

Ad Widget

ಸುದೀರ್ಘ ವರ್ಷಕ್ಕೆ ಬುಕ್ಕಿಂಗ್ ಮಾಡಿದವರಿಗೆ ಶೀಘ್ರ ಸೇವೆ :
ಕೋಲಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆ ಮೇ 3ರಂದು ಆರಂಭಗೊಂಡಿದ್ದು, ಇದು ವಾರದಲ್ಲಿ 5 ದಿನ ಇರುತ್ತದೆ. ಇದರಿಂದ ಸುದೀರ್ಘ ವರ್ಷಕ್ಕೆ ಬುಕ್ಕಿಂಗ್ ಮಾಡಿದವರಿಗೆ ಶೀಘ್ರ ಸೇವೆ ಸಂದಾಯವಾಗುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಇದುವರೆಗೆ ವರ್ಷಕ್ಕೆ 600ರಿಂದ 700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು. ಬುಕಿಂಗ್ ಸಂಖ್ಯೆ ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಶೀಘ್ರ ಸೇವೆಗೆ ಅವಕಾಶ ನೀಡುವ ದೃಷ್ಟಿಯಿಂದ ದೈವದ ಬಳಿ ಹರಕೆ ಮಾಡಿ, ಮಾಗಣೆಯ ದೈವದ ಅಪ್ಪಣೆ ಪಡೆದು, ದಿನಕ್ಕೆ ನಾಲ್ಕು ಕೋಲ ಸೇವೆ ನೀಡಿದರೂ ಪ್ರತಿ ಕೋಲದಲ್ಲಿ ಇಬ್ಬರಿಗೆ ಪ್ರಸಾದದಂತೆ 8 ಮಂದಿಗೆ ಪ್ರಸಾದ ನೀಡುವುದಕ್ಕೆ ನಿರ್ಧರಿಸಲಾಯಿತು. ಹೀಗಾಗಿ ಮುಂದಿನ ದಿನಗಳಲ್ಲಿ ಕೋಲ ಸೇವೆ ನೀಡಲು ಬುಕಿಂಗ್ ಮಾಡುವವರಿಗೆ ಅನುಕೂಲವಾಗಲಿದೆ. ಪ್ರತಿದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ 4ರ ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸೇವೆ ಮಾಡಿಸುವವರಿಗೂ ಅನುಕೂಲವಾಗಿದೆ.

Ad Widget

Ad Widget

Ad Widget

ಕ್ಷೇತ್ರ ಪಣೋಲಿಬೈಲ್ ಎಲ್ಲಿದೆ
ಮಂಗಳೂರಿನಿಂದ ಬಿಸಿ ರೋಡಿಗೆ ಹೆದ್ದಾರಿಯಲ್ಲಿ ಬಂದು ಮುಂದಕ್ಕೆ ಸಾಗಿದಾಗ ಮೇಲ್ಕಾರ್‌ನಿಂದ ಬಲಭಾಗಕ್ಕೆ ಕೊಣಾಜೆ ಮಾರ್ಗದಲ್ಲಿ ಸಾಗುವ ಸಂದರ್ಭ ಮಾರ್ನಬೈಲ್ ನಲ್ಲಿ ಎಡಭಾಗಕ್ಕೆ ತಿರುಗಿ ಸುಮಾರು 4 ಕಿಮೀ ದೂರದಲ್ಲಿ ಸಾಗಿದರೆ, ಪಣೋಲಿಬೈಲ್ ಕ್ಷೇತ್ರ ಕಾಣಲು ಸಿಗುತ್ತದೆ. ಇಲ್ಲಿ ಕಲ್ಲುರ್ಟಿ ಕಲ್ಕುಡರು ನೆಲೆಯಾಗಿದ್ದಾರೆ.

ಕೋಲ ಯಾವಾಗೆಲ್ಲ ಇರುತ್ತದೆ
ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದೆ. ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜಿಪಮಾಗಣೆಯ ಜಾತ್ರೆ, ಉತ್ಸವಾದಿಗಳ ಸಂದರ್ಭ ಕೋಲ ಸೇವೆ ಇರುವುದಿಲ್ಲ.

ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರ ತುಳುನಾಡಿನ ಅತ್ಯಂತ ಶ್ರೀಮಂತ ಕ್ಷೇತ್ರ. ವಾರಕ್ಕೆ ಐದು ದಿವಸ ಇಪ್ಪತ್ತು ಹರಕೆಯ ಕೋಲ ಅದೇ ರೀತಿ ವಾರದ ಮೂರು ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಅಗೆಲು ಸೇವೆ ಹರಕೆಯನ್ನು ಪಡೆಯುತ್ತಿರುವ ಕ್ಷೇತ್ರವಿದು. ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ ಉದ್ಯೋಗಕ್ಕೆ ಅಲ್ಲದೆ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತ್ತರ ದುಷ್ಟಶಕ್ತಿಗಳನ್ನು ಕೋಲದಲ್ಲಿ ವಿಮೋಚನೆಗೊಳಿಸುತ್ತಾರೆ. ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು.

ಇಲ್ಲಿಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ನೆಲ್ಯಾಡಿ, ಮಡಿಕೇರಿ, ಮಂಗಳೂರು, ಮಂಜೇಶ್ವರ, ಕಾಸರಗೋಡು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ, ಕೊಡಗು ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ. ಇತರ ಪ್ರದೇಶಗಳಿಂದಲೂ ಗಮನಾರ್ಹ ಪ್ರಮಾಣದ ಭಕ್ತರು ನಡೆದುಕೊಳ್ಳುತ್ತಾರೆ. ಹರಕೆ ಕಾಣಿಕೆ, ಅಗೇಲು ಕೋಲ ಬೆಳ್ಳಿ ಬಂಗಾರದ ಸೇವೆಯನ್ನು ಕೊಡುತ್ತಿದ್ದಾರೆ. ಆಸ್ತಿ ವಿಚಾರ ತಕರಾರು, ಕೋರ್ಟ್ ವಿಚಾರ ಇನ್ನಿತರ ಕಷ್ಟ ಕಾರ್ಪಣ್ಯದಲ್ಲಿದ್ದವರು ಈ ಕ್ಷೇತ್ರಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ. ಸತ್ಯ, ಧರ್ಮ, ನ್ಯಾಯವನ್ನು ಎತ್ತಿ ಹಿಡಿಯುವ ಈ ದೈವವು ಎಲ್ಲಾ ಮೂಲೆಗಳಂದಲೂ ಭಕ್ತರನ್ನು ಸೆಳೆದುಕೊಳ್ಳುತ್ತಿದೆ.

Continue Reading

ಮಂಗಳೂರು

ವಿಟ್ಲ: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮಗು ಸಹಿತ ಮೂವರಿಗೆ ಗಾಯ

Ad Widget

Ad Widget

Ad Widget

Ad Widget


ವಿಟ್ಲ: ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ.
ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡುಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

Ad Widget

Ad Widget

Ad Widget

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟ ಗಾಯವಾಗಿದೆ.

Ad Widget

ಗಂಭೀರ ಗಾಯಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆ ಕೊಂಡೊಯ್ಯಲಾಗಿತ್ತು. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
,

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading