Connect with us

ಸಿನೆಮಾ

Shilpa Shetty : ಗಣೇಶ ವಿಸರ್ಜನೆಯ ವೇಳೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ, ಶಮಿತಾ ಶೆಟ್ಟಿ ಸಹೋದರಿಯರ ಸಕ್ಕತ್ ಡ್ಯಾನ್ಸ್ – ಗಾಲಿ ಕುರ್ಚಿಯಲ್ಲಿದ್ದ ಶಿಲ್ಪಾಳ ನೃತ್ಯಕ್ಕೆ ಪಿಧಾ ಆದ ನೆಟ್ಟಿಗರು – ಇಲ್ಲಿದೆ ವಿಡಿಯೋ

Ad Widget

Ad Widget

Ad Widget

Ad Widget

ಶೂಟಿಂಗ್‌ ವೇಳೆ ಕಾಲು ಮುರಿತಕ್ಕೆ ಒಳಗಾಗಿ ಕಳೆದೊಂದು ತಿಂಗಳಿನಿಂದ ಗಾಲಿ ಖುರ್ಚಿಯಲ್ಲಿ ಓಡಾಟ ನಡೆಸುತ್ತಿರುವ ಬಾಲಿವುಡ್‌ ನಟಿ (Bollywood Actress) ಶಿಲ್ಪಾಶೆಟ್ಟಿ (Shilpa Shetty) ಮತ್ತೆ ಸುದ್ದಿಯಲ್ಲಿದ್ದಾರೆ.  ಪ್ರತಿವರ್ಷ ಮನೆಯಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಸಲ್ಲಿಸುವ ವಾಡಿಕೆಯನ್ನು ಶಿಲ್ಪಾಶೆಟ್ಟಿ ಕುಂದ್ರಾ ಹಾಗೂ ಮನೆಯವರು ಇಟ್ಟುಕೊಂಡಿದ್ದಾರೆ. ಅದೇ ರೀತಿ ಈ ಬಾರಿಯು ನಟಿ ತನ್ನ ಕುಂದ್ರಾ ನಿವಾಸದಲ್ಲಿ ಗಣೇಶ ಚತುರ್ಥಿಯ ಶುಭ ದಿನದಂದು ಗಣೇಶನನ್ನು ತಂದು ಕೂರಿಸಿ ಅದ್ದೂರಿಯಾಗಿ ಆಚರಿಸಿದ್ದಾರೆ ಇದರಲ್ಲೇನು ವಿಶೇಷ ಅಂತೀರಾ ?

Ad Widget

Ad Widget

Ad Widget

ಕಡಿಮೆಯಾಗದ ಜೋಶ್

ಕಾಲು ನೋವಿನಿಂದಾಗಿ ಗಾಲಿ ಕುರ್ಚಿಯಲ್ಲಿ ಕೂತಿದ್ದರೂ ಶಿಲ್ಪಾಳ  ಹಬ್ಬ ಆಚರಿಸುವ ಜೋಷ್‌ ಗಾಗಲಿ, ಸಂಭ್ರಮ ಸಡಗರಕ್ಕಾಗಲಿ ಒಂದಷ್ಟು ಕೊರತೆಯಾಗಿಲ್ಲ.  ಗಾಲಿ ಖುರ್ಚಿಯಲ್ಲಿಯೇ ಕೂತೇ ಗಣಪ ವಿಸರ್ಜನೆಯ ವೇಳೆ ಹಾಕಲಾಗಿದ್ದ ಸಂಗೀತಕ್ಕೆ ಆಕೆ ಸಕ್ಕತಾಗಿ  ನೃತ್ಯ ಮಾಡುವ ಮೂಲಕ ಎಂಜಾಯ್‌ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್‌ ಆಗಿದೆ.  ಸಹೋದರಿ ಶಮಿತಾ ಶೆಟ್ಟಿ (shamita Shetty) ಗಣೇಶ ವಿಸರ್ಜನೆಯ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರೇ, ಅದಕ್ಕೆ ಶಿಲ್ಪಾ ಸಾಥ್‌ ನೀಡಿದ್ದಾರೆ. ಅಲ್ಲದೇ ಗಾಲಿ ಖುರ್ಚಿಯಲ್ಲಿ ಕೂತೆ ಹುರಿದುಂಬಿಸಿದ್ದಾರೆ.

Ad Widget

ಗಣೇಶ ವಿಸರ್ಜನೆಯ ವೇಳೆ ಅಕ್ಕ ತಂಗಿ ಸಂಭ್ರಮಿಸುತ್ತಿರುವ ದೃಶ್ಯಗಳು ಪಾಪಾರಾಜಿ ಕ್ಯಾಮಾರಗಳಲ್ಲಿ ಸೆರೆಯಾಗಿದೆ. ಅದನ್ನು ಆತ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು ಅದು ಸಖತ್‌ ಟ್ರೆಂಡಿಂಗ್‌ ಆಗಿದೆ.   ಒಂದು ಹಂತದಲ್ಲಿ ಗಾಲಿ ಖುರ್ಚಿಯಿಂದ ಮೇಲೆ ಎದ್ದ ಶಿಲ್ಪಾ ಶಮಿತಾ ಅವರ ಜತೆ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.  ಈ ವೇಳೆ ಹೆಜ್ಜೆಗಳು ಸರಿಯಾಗಿ ತಾಳೆಯಾಗುತ್ತಿದ್ದವು.  

Ad Widget

Ad Widget

ಬ್ಲಾಕ್‌ ಬ್ಲಾಸ್ಟರ್‌  ಹಿಟ್ ʼಪುಷ್ಪಾ  ಸಿನಿಮಾದ ಜನಪ್ರಿಯ ಹಾಡು  ಸಾಮಿ ಸಾಮಿ ಹಾಡಿಗೆ ಸಹೋದರಿಯರು  ಹೆಜ್ಜೆ ಹಾಕಿದ್ದಾರೆ. ಶರರಾ ಸೂಟ್‌ನಲ್ಲಿ ಶಿಲ್ಪಾ ಸುಂದರವಾಗಿ ಕಾಣಿಸಿಕೊಂಡರೆ, ಶಮಿತಾ ಗುಲಾಬಿ ಬಣ್ಣದ ಶರಾರಾ ಸೂಟ್‌ನಲ್ಲಿ ಕಾಂತಿಯುತವಾಗಿ ಕಾಣಿಸಿದ್ದಾರೆ. ಕಾಲು ನೋವಿನ ಲವಲೇಶವೂ ತೋರಿಸದೇ ತನ್ನ ಎಂದಿನ ಅಕರ್ಷಕ ನಗು ಬೀರುತ್ತಾ  ನಟಿ ಶಿಲ್ಪಾ  ಸಂತೋಷದಿಂದ ಗಣೇಶನಿಗೆ ವಿದಾಯ ಹೇಳಿದ್ದಾರೆ.

Ad Widget

Ad Widget

Ad Widget

ಇದನ್ನೂ ಓದಿ : Shilpa Shetty : ಗಾಲಿ ಖುರ್ಚಿಯಲ್ಲಿ ಕೂತು ಅಭಿಮಾನಿಗಳಿಗೆ ಶಾಕ್‌ ನೀಡಿದ ಬಾಲಿವುಡ್ ನಟಿ-ಅಷ್ಟಕ್ಕೂ ಆಕೆಗೆ ಆಗಿದ್ದೇನು ?

ಆಕೆ ಕೂತಿದ್ದ ವ್ಹೀಲ್‌ ಚಯರನ್ನು  ಸಹಾಯಕನೊಬ್ಬ ಮುನ್ನಡೆಸುತ್ತಿದ್ದ. ಮಗಳು ಸಮೀಶಾ ಶೆಟ್ಟಿ ತಾಯಿ ಜತೆ ಡೋಲ್‌ ಬಾರಿಸಲು ಆಪೇಕ್ಷೆ ಪಟ್ಟಾಗ ನಟಿ ಆಸರೆಯೊಂದರ ನೆರವಿನಿಂದ ನಿಂತು ಡೋಲ್‌ ಕೂಡ ಬಾರಿಸಿದ್ದಾರೆ. ತಾಯಿ-ಮಗಳು ಗಣೇಶ ವಿಸರ್ಜನೆಯ ಸಂಭ್ರಮವನ್ನು ಸಕ್ಕತಾಗಿ ಎಂಜಾಯ್‌ ಮಾಡಿದ್ದಾರೆ . ಶಿಲ್ಪಾ ತಾಯಿ ಸುನಂದ ಶೆಟ್ಟಿ ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದರು. ತಾಯಿ ಜತೆ ಶಮಿತಾ ಟೀಸ್‌ ಮಾಡುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  

ಪ್ರತಿ ವರ್ಷದಂತೆ ಈ ವರ್ಷವೂ ಶಿಲ್ಪಾ ಶೆಟ್ಟಿ ಮನೆಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ.  ಸೆ 31 ರಂದು ಪತಿ  ರಾಜ್ ಕುಂದ್ರಾ( Raj Kundra) ಗಣಪತಿ ತರುವುದಕ್ಕಾಗಿ ಮಾರುಕಟ್ಟೆಗೆ  ಈ ವೇಳೆ ಆತ ಮಾಸ್ಕ್ ಹಾಕಿಕೊಂಡು ಮುಖ ಮುಚ್ಚಿಕೊಂಡಿದ್ದರು.ರಾಜ್‌ ಕುಂದ್ರ ಮುಖ ಮುಚ್ಚಿಕೊಂಡಿರುವ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.  ಕೆಲ ತಿಂಗಳುಗಳ ಹಿಂದೆ ವೆಬ್‌ ಸಿರೀಸ್‌ ಗೆ  ಅಶ್ಲೀಲ ವಿಡಿಯೋ  ನಿರ್ಮಿಸಿದ ಆರೋಪದಲ್ಲಿ  ರಾಜ್‌ ಕುಂದ್ರಾ  ಬಂಧನವಾಗಿದ್ದರು. ಅದಾದ ಬಳಿಕ  ಹಲವು ದಿನಗಳ ಕಾಲ ಅವರು  ಜೈಲುವಾಸ ಅನುಭವಿಸಿದ್ದರು. 

ಶಿಲ್ಪಾ ಶೆಟ್ಟಿ ಮನೆಗೆ ಬಂದ ಗಣಪ

ತಾಯಿ ಜತೆ ಶಮಿತಾ ವಿಡಿಯೋ ನೋಡಿ

ಕ್ಯಾಮಾರಗಳಿಂದ ದೂರ:

ಆ ಬಳಿಕ ಜಾಮೀನಿನ ಮೇಲೆ  ಜೈಲಿನಿಂದ  ಹೊರ ಬಂದಿದ್ದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಏರ್ ಪೋರ್ಟ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ರಾಜ್ ಕುಂದ್ರಾ ಕಂಡರೂ, ಮುಖಕ್ಕೆ ಪೂರ್ತಿ ಮಾಸ್ಕ್ ಹಾಕಿಕೊಂಡೆ ಇರುತ್ತಾರೆ. ಕ್ಯಾಮೆರಾಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ. ಗಣೇಶ ವಿಗ್ರಹ ಖರೀದಿಗೆ ಕುಂದ್ರಾ ಮಾಸ್ಕ್‌ ದರಿಸಿ ಹೋಗಿರುವುದಕ್ಕೆ ನೆಟ್ಟಿಗರು ಆತನ ಕಾಲು ಎಳೆದಿದ್ದಾರೆ.

ಪತಿಯ ಮಾಸ್ಕ್‌ ರಿಮೂವ್‌

ಇನ್ನು ಗಣೇಶ ವಿಸರ್ಜನೆಯ ವೇಳೆ ಕೂಡ ರಾಜ್‌ ಕುಂದ್ರಾ ಮಾಸ್ಕ್‌ ಧರಿಸಿದ್ದು , ಒಂದು ವಿಡಿಯೋದಲ್ಲಿ ಶಿಲ್ಪಾ ತನ್ನ ಪತಿಯ ಮಾಸ್ಕ್‌ ಅನ್ನು ಜಾಣತನದಿಂದ ತೆಗೆಯುವುದನ್ನು ಕಾಣಬಹುದಾಗಿದೆ. ನೆಟ್ಟಿಗರು ಆಕೆಯ ಗೆಸ್ಚರ್‌ ಗೆ ಕೊಂಡಾಡಿದ್ದಾರೆ. ಶಿಲ್ಪಾ ಕುಟಂಬದ ಸದಸ್ಯರು, ಹತ್ತಿರದ ಬಂಧು ಮಿತ್ರರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.  

Click to comment

Leave a Reply

ಸಿನೆಮಾ

Rockline gifts car-‘ಕಾಟೇರ’ ಸೂಪರ್ ಹಿಟ್ – ಸಿನಿಮಾ ಕಥೆ ಬರೆದವರಿಗೆ ಕಾರು ಗಿಫ್ಟ್ ನೀಡಿದ ನಿರ್ಮಾಪಕ ರಾಕ್ ಲೈನ್

Ad Widget

Ad Widget

Ad Widget

Ad Widget

ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಕತೆ, ಸಂಭಾಷಣೆ, ನಿರೂಪಣೆ ಎಲ್ಲ ಸ್ಟ್ರಾಂಗ್ ಇದ್ದಾಗ ಮಾತ್ರ ಒಂದು ಸಿನಿಮಾ ಗೆಲ್ಲಲು ಸಾಧ್ಯ. ಒಂದು ಹಾಡಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶೂಟಿಂಗ್ ಮಾಡಿದ್ರೂ, ಎಷ್ಟೇ ದೊಡ್ಡ ಅಭಿಮಾನಿ ಬಳಗ ಇದ್ರೂ ಕಂಟೆಂಟ್ ಮುಖ್ಯ ಅಂತ ಸಾಕಷ್ಟು ಬಾರಿ ಸಾಬೀತಾಗಿದೆ. ಈಗ ‘ಕಾಟೇರ’ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕಂಟೆಂಟ್ ಸೃಷ್ಟಿ ಮಾಡುವ ಕಥೆಗಾರ, ಸಂಭಾಷಣೆಕಾರರಿಗೆ ಕಾರ್ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Ad Widget

Ad Widget

Ad Widget

ಒಂದು ಸಿನಿಮಾ ಹಿಟ್ ಆದರೆ ಅದರ ಹೀರೋ, ಹೀರೋಯಿನ್ ಜೊತೆಗೆ ತಾರಾಗಣದ ಬಗ್ಗೆ ಮಾತನಾಡಲಾಗುವುದು. ಆದರೆ ಆ ಸಿನಿಮಾ ಹಿಂದಿನ ದೊಡ್ಡ ಶಕ್ತಿ ಬರವಣಿಗೆ ಅಷ್ಟಾಗಿ ಯಾರೂ ಮಾತನಾಡಲ್ಲ, ಬರಹಗಾರರನ್ನು ಪ್ರೋತ್ಸಾಹಿಸೋದಿಲ್ಲ ಎಂಬ ದೂರು ಇದ್ದೇ ಇದೆ. ಆದರೆ ರಾಕ್‌ಲೈನ್ ವೆಂಕಟೇಶ್ ಅವರು ಇದಕ್ಕೆ ತದ್ವಿರುದ್ಧ ಎಂಬ ಕೆಲಸ ಮಾಡಿದ್ದಾರೆ

Ad Widget

ಕೆಲಸ ಮೆಚ್ಚಿದ ರಾಕ್‌ಲೈನ್ ವೆಂಕಟೇಶ್
ಯಾವುದೇ ಸಿನಿಮಾ ಗೆಲ್ಲಬೇಕು ಎಂದರೆ ಕಂಟೆಂಟ್‌ ಬಹಳ ಮುಖ್ಯ. ಕಂಟೆಂಟ್‌ ಈಸ್‌ ದಿ ಕಿಂಗ್‌ ಎಂಬ ಮಾತಿಗೆ ಉದಾಹರಣೆಯಾದವರು ಜಡೇಶ್‌ ಹಾಗೂ ಮಾಸ್ತಿ. ಇವರಿಬ್ಬರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎನ್ನಬಹುದು. ಏಕೆಂದರೆ ಜನರು ಗುರುತಿಸುವುದರ ಜತೆಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಕೂಡ ಇವರಿಬ್ಬರ ಕೆಲಸವನ್ನು ಮೆಚ್ಚಿ ಗೌರವ ನೀಡಿದ್ದಾರೆ.

Ad Widget

Ad Widget

ಕಂಟೆಂಟ್ ಈಸ್ ದಿ ಕಿಂಗ್
ಒಂದು ಸಿನಿಮಾ ಗೆಲ್ಲಬೇಕು ಎಂದರೆ ಕಂಟೆಂಟ್‌ ಬಹಳ ಮುಖ್ಯ. ಕಂಟೆಂಟ್‌ ಈಸ್‌ ದಿ ಕಿಂಗ್‌ ಎಂದು ಹೇಳಲಾಗುತ್ತದೆ. ಇಂದು ಸ್ಟಾರ್ ಸಿನಿಮಾವಾದರೂ ಕೂಡ ಅಲ್ಲಿ ಕಂಟೆಂಟ್ ಇದ್ದರೆ ಮಾತ್ರ ಹಿಟ್ ಆಗುತ್ತದೆ. ಕಂಟೆಂಟ್ ಗಟ್ಟಿಯಿಲ್ಲದ, ಹುರುಳಿಲ್ಲದ ಸ್ಟಾರ್ ಸಿನಿಮಾಗಳಿಗೂ ಕೂಡ ವೀಕ್ಷಕರು ಸೋಲಿನ ರುಚಿ ತೋರಿಸಿದ್ದಾರೆ. ಇಂದು ಕಂಟೆಂಟ್ ಇರುವ, ಯಾವುದೇ ಆಡಂಬರವಿಲ್ಲದ, ಖರ್ಚೇ ಮಾಡಿರದ ಹೊಸಬರ ಸಿನಿಮಾಗಳು ಕೂಡ ದೊಡ್ಡ ಹಿಟ್ ಆದ ಉದಾರಹಣೆ ಇವೆ.

Ad Widget

Ad Widget

Ad Widget

ಸೂರಜ್‌ಗೂ ಕಾರ್ ಗಿಫ್ಟ್
ಹೌದು, ‘ಕಾಟೇರ’ ಸಿನಿಮಾ ತಂಡ ಈಗ ನೂರು ದಿನಗಳನ್ನು ಪೂರೈಸಿರುವ ಸಂಭ್ರಮದಲ್ಲಿದೆ. ಇದೇ ಖುಷಿಯಲ್ಲಿ ಈ ಸಿನಿಮಾಗೆ ಅದ್ಭುತ ಕಥೆ ನೀಡಿದ ಜಡೇಶ್‌ ಹಂಪಿ ಹಾಗೂ ಸಂಭಾಷಣೆಕಾರ ಮಾಸ್ತಿ ಅವರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸೂರಜ್‌ಗೆ ಕೂಡ ಕಾರು ನೀಡಲಾಗಿದೆ.

ಈ ಹಿಂದೆ ಯಾರು ಯಾರಿಗೆ ಉಡುಗೊರೆ ಕೊಟ್ಟಿದ್ದಾರೆ?
ಈ ಹಿಂದೆ ‘ಗುರುದೇವ್ ಹೊಯ್ಸಳ’ ಸಿನಿಮಾ ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಅವರು ನಟ ‘ಡಾಲಿ’ ಧನಂಜಯಗೆ 1.50 ಕೋಟಿ ರೂ. ಮೌಲ್ಯದ ದುಬಾರಿ ಕಾರ್ ನೀಡಿದ್ದರು. ‘ವಿಕ್ರಮ್‌’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಕಮಲ್‌ ಹಾಸನ್‌ ಅವರು ನಿರ್ದೇಶಕ ಲೋಕೇಶ್‌ ಕನಗರಾಜ್‌ ಹಾಗೂ ನಾಯಕ ಸೂರ್ಯಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದರು. ಈ ಥರದ ಉದಾಹರಣೆಗಳು ಅಪರೂಪ. ಕನ್ನಡ ಚಿತ್ರರಂಗದಲ್ಲಿ ಈ ಬಾರಿ ಕಥೆಗಾರ ಹಾಗೂ ಸಂಭಾಷಣೆಕಾರರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದು ವಿಶೇಷ.

ಸಿನಿಮಾ ಯಶಸ್ವಿಯಾದಾಗ ಇಡೀ ಸಿನಿಮಾಕ್ಕೆ ಒಂದು ನೆನಪಿನ ಕಾಣಿಕೆ ಕೊಟ್ಟೋ, ಅಥವಾ ಒಮ್ಮೊಮ್ಮೆ ದುಬಾರಿ ಉಡುಗೊರೆ ಕೂಡ ನೀಡಲಾಗುವುದು. ಆದರೆ ಈ ಬಾರಿ ತಂತ್ರಜ್ಞರಿಗೆ ಆದ್ಯತೆ ಕೊಟ್ಟಿದ್ದು ದೊಡ್ಡ ವಿಶೇಷ ಎನ್ನಬಹುದು.

Continue Reading

ಸಿನೆಮಾ

Gabbar Singh-ಮೇ 3ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಂಡ ʻಗಬ್ಬರ್ ಸಿಂಗ್’ ತುಳು ಸಿನೆಮಾ – ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್

Ad Widget

Ad Widget

Ad Widget

Ad Widget

ಮೇ 3ರಂದು ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ “ಗಬ್ಬರ್ ಸಿಂಗ್’ ತುಳು ಚಲನಚಿತ್ರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಂಡಿದೆ. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಮೂವಿ ಕುರಿತಾಗಿ ಉತ್ತಮ ರೆಸ್ಪಾನ್ಸ್ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget

“ಗಬ್ಬರ್ ಸಿಂಗ್’ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆ ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನೆಮಾ ಚೆನ್ನಾಗಿ ಮೂಡಿ ಬಂದಿದೆ.

Ad Widget

ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನೆಮಾಸ್, ಸಿನೆಪೊಲೀಸ್, ಪಿವಿಆರ್, ಉಡುಪಿಯ ಕಲ್ಪನಾ ಭಾರತ್ ಸಿನೆಮಾಸ್, ಮಣಿಪಾಲದ ಐನಾಕ್ಸ್, ಭಾರತ್ ಸಿನೆಮಾಸ್, ಸುರತ್ಕಲ್ನ ಸಿನೆಗ್ಯಾಲಕ್ಸಿ, ಪಡುಬಿದ್ರಿಯ ಭಾರತ್ ಸಿನೆಮಾಸ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಪುತ್ತೂರಿನ ಭಾರತ್ ಸಿನೆಮಾಸ್, ಬೆಳ್ತಂಗಡಿಯ ಭಾರತ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಂಡಿದೆ.

Ad Widget

Ad Widget

ಸಿನೆಮಾದಲ್ಲಿ 6 ಹಾಡುಗಳಿವೆ. ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನೆಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ.

Ad Widget

Ad Widget

Ad Widget

ಕಥೆ ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರ್ ಅವರದ್ದಾಗಿದ್ದು ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿಕೊಂಡಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.

ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರು, ರವಿ ರಾಮಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರು ತಾರಾಗಣದಲ್ಲಿದ್ದಾರೆ

Continue Reading

ಸಿನೆಮಾ

Dwarakeesh | ಕನ್ನಡ ಚಿತ್ರರಂಗದ ‘ಪ್ರಚಂಡ ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ : ಪತ್ನಿ ಸತ್ತ ದಿನವೇ ಇಹಲೋಕ ತ್ಯಜಿಸಿದ ವಿಷ್ಣು ಆಪ್ತ

Ad Widget

Ad Widget

Ad Widget

Ad Widget

ಕನ್ನಡ ಚಿತ್ರರಂಗದ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ಏಪ್ರಿಲ್ 16, ಮಂಗಳವಾರ ಬೆಳಗ್ಗೆ 9.45 ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ದ್ವಾರಕೀಶ್ ಚಿರನಿದ್ರೆಗೆ ಜಾರಿದ್ದಾರೆ.

Ad Widget

Ad Widget

Ad Widget

ಇವತ್ತಿಗೆ ಸರಿಯಾಗಿ ಮೂರು ವರ್ಷಗಳ ಹಿಂದೆ ತಮ್ಮ ಪ್ರೀತಿಯ ಮಡದಿ ಅಂಬುಜಾರನ್ನ ದ್ವಾರಕೀಶ್ ಕಳೆದುಕೊಂಡಿದ್ದರು. ಪತ್ನಿ ವಿಧಿವಶರಾದ ಮೇಲೆ ದ್ವಾರಕೀಶ್ ಒಬ್ಬಂಟಿಯಾಗ್ಬಿಟ್ಟರು.

Ad Widget

ಅರ್ಧಾಂಗಿಯನ್ನ ಪ್ರತಿ ಕ್ಷಣ ಮಿಸ್ ಮಾಡಿಕೊಳ್ಳುತ್ತಿದ್ದರು. ಅಂಬುಜಾ ಇಲ್ಲದೆ ನೊಂದುಕೊಂಡಿದ್ದ ದ್ವಾರಕೀಶ್‌, ಪತ್ನಿ ಇಹಲೋಕ ತ್ಯಜಿಸಿದ ದಿನದಂದೇ ನಿಧನರಾಗಿದ್ದಾರೆ.

Ad Widget

Ad Widget

ಇದು ಕಾಕತಾಳೀಯವೋ.. ಅಥವಾ ವಿಧಿಬರಹವೋ.. ದೇವರೇ ಬಲ್ಲ.ಏಪ್ರಿಲ್ 15 ಸೋಮವಾರ ರಾತ್ರಿಯಿಂದಲೂ ದ್ವಾರಕೀಶ್‌ ಅವರಿಗೆ ಸಂಕಟವಾಗುತ್ತಿತ್ತು. ಲೂಸ್‌ ಮೋಷನ್ ಆಗುತ್ತಿತ್ತು. ರಾತ್ರಿ ಪೂರ್ತಿ ನಿದ್ದೆ ಮಾಡಿರಲಿಲ್ಲ. ಏಪ್ರಿಲ್ 16 ಮಂಗಳವಾರ ಬೆಳಗ್ಗೆ ಎದ್ದು ಕಾಫಿ ಕುಡಿದರು. ಬಳಿಕ ‘’ಸುಸ್ತಾಗ್ತಿದೆ. ಸ್ವಲ್ಪ ಹೊತ್ತು ನಿದ್ದೆ ಮಾಡ್ತೀನಿ. 10 ಗಂಟೆ ಸುಮಾರಿಗೆ ಎಬ್ಬಿಸು’’ ಅಂತ ಮಗ ಯೋಗೀಶ್‌ಗೆ ದ್ವಾರಕೀಶ್ ಹೇಳಿದ್ದಾರೆ.

Ad Widget

Ad Widget

Ad Widget

ಆನಂತರ, 9.45 ಸುಮಾರಿಗೆ ಅಪ್ಪನನ್ನ ಎಬ್ಬಿಸಲು ಯೋಗೀಶ್‌ ಕೋಣೆಗೆ ತೆರಳಿದ್ದಾರೆ. ಮಲಗಿದ್ದ ದ್ವಾರಕೀಶ್ ಮೇಲೇಳಲೇ ಇಲ್ಲ. ಹೃದಯಾಘಾತದಿಂದ ದ್ವಾರಕೀಶ್‌ ಕೊನೆಯುಸಿರೆಳೆದಿದ್ದಾರೆ.

ಏಪ್ರಿಲ್ 16, 2021 ರಂದು ಬೆಳಗ್ಗೆ 9.45 ಸುಮಾರಿಗೆ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಬಾರದ ಲೋಕಕ್ಕೆ ಪಯಣಿಸಿದರು.

ಇದು ಕಾಕತಾಳೀಯವೋ.. ಅಥವಾ ವಿಧಿಬರಹವೋ.. ದೇವರೇ ಬಲ್ಲ.ಏಪ್ರಿಲ್ 16, 2021 ರಂದು ಬೆಳಗ್ಗೆ 9.45 ಸುಮಾರಿಗೆ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಬಾರದ ಲೋಕಕ್ಕೆ ಪಯಣಿಸಿದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading