Connect with us

ಸುಳ್ಯ

Big Breaking : ಬಿಜೆಪಿ ಮುಖಂಡ ಪ್ರವೀಣ್‌ ಹತ್ಯೆ – ಕರ್ನಾಟಕ ಪೊಲೀಸರಿಗೆ ಭಾರೀ ಯಶಸ್ಸು –  ಹಂತಕ ಮೂವರು ಪೊಲೀಸ್‌ ಬಲೆಗೆ ? |Praveen Nettar Murder

Ad Widget

Ad Widget

Ad Widget

Ad Widget

ಮಂಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (Praveen Nettar Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಲ್ಲಿ ಭಾಗಿಯಾದ ಮೂವರು ಹಂತಕರನ್ನು ಕರ್ನಾಟಕ ಪೊಲೀಸರ (Karnataka Police ) ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಜು 26 ರಂದು ಸಂಜೆ ಬೆಳ್ಳಾರೆಯ ಮಾಸ್ತಿ ಕಟ್ಟೆ ಬಳಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕಡಿದು ಕೊಲೆ ಮಾಡಿದ್ದರು. ಈ ಬಗ್ಗೆ ಈಗಾಗಾಲೇ ಒಟ್ಟು 7 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದರು . ಆದರೇ ಹತ್ಯೆಯ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.

Ad Widget

Ad Widget

Ad Widget

ಆದರೇ ಇದೀಗ ಮೂವರು ಪ್ರಮುಖ ಆರೋಪಿಗಳನ್ನು ಬುಧವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಶಂಕಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ಹಿನ್ನಲೆಯಲ್ಲಿ ಮಧ್ಯಾಹ್ನ 12.30ಕ್ಕೆ ದಕ್ಷಿಣ ಕನ್ನಡ (Dakshina kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್‌ ಸೋನಾವಣೆಯವರು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಟಿ ಕರೆದಿದ್ದು ಅದರಲ್ಲಿ ಹತ್ಯೆ ಸಂಚಿನ ಸಂಪೂರ್ಣ ವಿವರ, ಹತ್ಯೆಯ ಹಿಂದಿನ ಕಾರಣ ಹಾಗೂ ಆರೋಪಿಗಳ ವಿವರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Ad Widget

ಇದೇ ಪ್ರಕರಣದಲ್ಲಿ ಜುಲೈ 28 ರಂದು ಶಫೀಕ್ ಮತ್ತು ಜಾಕೀರ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಬೆಳ್ಳಾರೆ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಹ್ಯಾರಿಸ್ ಎಂಬವರನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಸುಳ್ಯ ನಾವೂರು ನಿವಾಸಿ ಅಬಿದ್ ಹಾಗೂ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ ಎಂಬರನ್ನು ಬಂಧಿಸಲಾಗಿತ್ತು. . ಅ.9 ರಂದು ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ ಎಂಬತಾನನ್ನು ಕೂಡ ಬಂಧಿಸಿದ್ದರು . ಈ 7 ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Ad Widget

Ad Widget

ಎಸ್ಡಿಪಿಐ ಕಛೇರಿಯಲ್ಲಿನ  ಸ್ಥಳ ಮಹಜರು ಬಳಿಕ ಪ್ರವೀಣ್‌ ನೆಟ್ಟಾರ್‌ ಹತ್ಯೆ ಆರೋಪಿಗಳಿಗೆ ನ್ಯಾಯಾಂಗ ಬಂಧನ – ಇಂದು ಏನೆಲ್ಲಾ ಆಯಿತು ? ಇಲ್ಲಿದೆ ಮಾಹಿತಿ  

Ad Widget

Ad Widget

Ad Widget

ಈ ಹತ್ಯೆ ಆರೋಪಿಗಳಿಗೆ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾ (Popular Front Of India) ಎಂಬ ಸಂಘಟನೆಯ ಲಿಂಕ್ ಇರುವ ಸಾಧ್ಯತೆಯ ಬಗ್ಗೆ ತನಿಖೆಯ ಉಸ್ತುವಾರಿ ವಹಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Adgp Alok kumar) ಸುಳಿವು ನೀಡಿದ್ದರು. ಆರೋಪಿಗಳ ತನಿಖೆಯ ವೆಳೆ ಅವರಿಗೆ ಪಿಎಫೈ (PFI) ನಂಟು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಅದರೆ ಅದು ನೊಂದಾಯಿತ ಸಂಘಟನೆಯಲ್ಲ. ಅದು ಬೇರೆಯೆ ರೀತಿ ಕಾರ್ಯಚರಿಸುತ್ತದೆ. ತನಿಖೆ ವೇಳೆ ದಾಖಲೆ ಸಂಗ್ರಹದ ಬಳಿಕವಷ್ಟೆ ಎಷ್ಟು ಮಂದಿಗೆ ಪಿಎಫೈ ಲಿಂಕ್ ಇದೆ ಎಂದು ಪತ್ತೆ ಹಚ್ಚಲಾಗುವುದು ಎಂದು ಮಾಹಿತಿ ನೀಡಿದ್ದರು.‌

ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ – ಇನ್ನಿಬ್ಬರು ಆರೋಪಿಗಳ ಬಂಧನ | ಉಳಿದ ಆರೋಪಿಗಳ ಗುರುತು ಪತ್ತೆ – ಮುಂದುವರಿದ ಶೋಧ

Click to comment

Leave a Reply

ಸುಳ್ಯ

ಕಡಬ : ಮದುವೆ ಔತಣಕೂಟದಲ್ಲಿ ಯುವಕ – ಯುವತಿ ಜತೆಗಿರುವ ಫೋಟೊ ತೆಗೆದ ಆರೋಪ – ತಂಡದಿಂದ ಫೋಟೊ ತೆಗೆದವನ ಮನೆಗೆ ನುಗ್ಗಿ ಹಲ್ಲೆ : ಪ್ರಕರಣ ದಾಖಲು

Ad Widget

Ad Widget

Ad Widget

Ad Widget

 ಔತಣಕೂಟವೊಂದರಲ್ಲಿ ಯುವಕನೋರ್ವ ಯುವತಿಯೊಂದಿಗಿರುವುದನ್ನು ವ್ಯಕ್ತಿಯೊರ್ವ  ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ  ಎಂದು ಆರೋಪಿಸಿ  ತಂಡವೊಂದು  ಫೋಟೊ ತೆಗೆದ ವ್ಯಕ್ತಿಯ  ಮನೆಗೆ ಬಂದು ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಲಾಡಿ ಎಂಬಲ್ಲಿ ಇತ್ತೀಚೆಗೆ ನಡೆದಿದೆ.

Ad Widget

Ad Widget

Ad Widget

ರೆಂಜಲಾಡಿಯ ಯುವತಿಯ ವಿವಾಹದ ಔತಣಕೂಟ ಏ.29ರಂದು ನಡೆದಿತ್ತು. ಯುವತಿಯೊಂದಿಗೆ ನಿಶಾಂತ್‌ ಎಂಬ ಯುವಕ ಇರುವ  ಫೋಟೋವನ್ನು ಬಾಂತಾಜೆ ನಿವಾಸಿ ದಿವಾಕರ ಎಂಬವರು ತೆಗೆದಿದ್ದಾರೆ ಎನ್ನುವುದು ಹಲ್ಲೆ ಮಾಡಿದವರ ತಕರಾರು.

Ad Widget

 ಈ ವಿಚಾರವಾಗಿ ಮಾತನಾಡಲು  ಅದೇ ದಿನ ರಾತ್ರಿ 11.30ರ ಸುಮಾರಿಗೆ ನಿಶಾಂತ್ ತನ್ನ ಸಹಚರರಾದ ಜನಾರ್ದನ, ಲೋಕೇಶ, ರಮೇಶ್, ಉದಯ, ಭುವನ, ಅಶ್ವಿತ್ ಎಂಬವರೊಂದಿಗೆ  ದಿವಾಕರ   ಮನೆಗೆ ಬಂದಿದ್ದಾರೆ. ಈ ವೇಳೆ    ದಿವಾಕರ್‌ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೇಳಿ ಬಂದಿದೆ.

Ad Widget

Ad Widget

 ದಿವಾಕರ ಅವರ ಅತ್ತಿಗೆ ಭವ್ಯಶ್ರೀ ಅವರು ಜಗಳ ಬಿಡಿಸಲು ಯತ್ನಿಸಿದಾಗ ಸ್ವಾತಿ ಮತ್ತು ರೇಷ್ಮಾ, ಶೈನಿ ಎಂಬವರು ಭವ್ಯ ಶ್ರೀಯವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ನೆರೆಮನೆಯ ಶಿವಪ್ಪ ಎಂಬವರು ರಕ್ಷಣೆಗೆ ಬಂದಾಗ ಅವರಿಗೂ ನಿಶಾಂತ್ ಹಾಗೂ ತಂಡ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

Ad Widget

Ad Widget

ನೆರೆಮನೆಯ ಬಾಬು ಗೌಡ ಮತ್ತು ಪ್ರದೀಪ್ ಅವರುಗಳು ಗಾಯಾಳುಗಳನ್ನು ಉಪಚರಿಸಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ | ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸುಳ್ಯ

Kadaba-ಕಡಬ: ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್‌ನಲ್ಲಿ ತೆರಳಿ ಸಿಇಟಿ ಬರೆದ ಆ್ಯಸಿಡ್ ದಾಳಿ ಸಂತ್ರಸ್ತೆ

Ad Widget

Ad Widget

Ad Widget

Ad Widget

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಬರೆದಿದ್ದಾರೆ.

Ad Widget

Ad Widget

Ad Widget

ಮಾ. 4ರಂದು ಕಾಲೇಜಿನಲ್ಲಿ ಗಣಿತ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಜಿನ್ ಎಂಬಾತ ಆ್ಯಸಿಡ್ ಎರಚಿದ ಕಾರಣ ಮೂವರು ವಿದ್ಯಾರ್ಥಿನಿಯರಿಗೆ ಸುಟ್ಟಗಾಯಗಳಾಗಿತ್ತು. ಇಬ್ಬರು ವಿದ್ಯಾರ್ಥಿನಿಯರು 12% ಮತ್ತು 10% ಸುಟ್ಟಗಾಯಗಳನ್ನು – ಅನುಭವಿಸಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಖ್ಯ ಸಂತ್ರಸ್ತೆ 17 ವರ್ಷದ ಯುವತಿಗೆ ಸುಮಾರು 20% ಸುಟ್ಟಗಾಯಗಳಾಗಿತ್ತು. ಈಕೆ ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ ತನ್ನ ತಾಯಿಯೊಂದಿಗೆ ಐಸೋಲೇಶನ್ ವಾಡ್೯ನಲ್ಲಿ ಇದ್ದುಕೊಂಡೇ ಸಿಂಟಿಗೆ ತಯಾರಿ ನಡೆಸುತ್ತಿದ್ದರು.

Ad Widget

ಸಿಇಟಿಗಾಗಿ ಈಜೆ ಮತ್ತು ಸಂತ್ರಸ್ತ ಇತರ ಇಬ್ಬರು ಸಹಪಾಠಿಗಳಿಗೆ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. 6 ಆದರೆ ಚಿಕಿತ್ಸೆ ವೇಳೆ ದೂರದ ಪ್ರಯಾಣ ಮಾಡದಂತೆ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಲಹೆ ನೀಡಿದ್ದ ಕಾರಣ ದ.ಕ ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೆಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ರಮ್ಯಾ ಅವರ ಗಮನಕ್ಕೆ ತಂದಿದ್ದರು. ಹೀಗಾಗಿ ಮಂಗಳೂರಿನ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಪದವಿಪೂರ್ವ ಕಾಲೇಜುನಲ್ಲಿ ಈಕೆಗೆ ಸಿಐಟಿ ಬರೆಯಲು ರಮ್ಯಾ ಅವರು ಅನುಮತಿ ನೀಡಿದ್ದರು.

Ad Widget

Ad Widget

ಅದರಂತೆ ವಿದ್ಯಾರ್ಥಿನಿ ಸಿಐಟಿ ಕೇಂದ್ರಕ್ಕೆ ತನ್ನ ತಾಯಿಯೊಂದಿಗೆ ಅಂಬ್ಯುಲೆನ್ಸ್‌ನಲ್ಲಿ ಬಂದಿದ್ದು ಆಕೆಗೆ ಪ್ರತ್ಯೇಕ ತರಗತಿಯನ್ನು ನೀಡಲಾಗಿತ್ತು. ಅಲ್ಲಿ ಮೊದಲ ದಿನ ಜೀವಶಾಸ್ತ್ರ ಪರೀಕ್ಷೆ ಬರೆದು ಬಳಿಕ ಮಧ್ಯಾಹ್ನ 12.15ಕ್ಕೆ ಆಸ್ಪತ್ರೆಗೆ ಮರಳಿ 2.30ಕ್ಕೆ ವಾಪಸ್ ಬಂದು ಗಣಿತ ಪತ್ರಿಕೆ ಬರೆದಿದ್ದಾರೆ. ಏ. 19ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳನ್ನು ಬರೆದಿದ್ದಾರೆ.

Ad Widget

Ad Widget

Ad Widget

ಆ್ಯಸಿಡ್‌ ದಾಳಿಯಿಂದ ಸಂತ್ರಸ್ತರಾಗಿರುವ ಮೂವರು ವಿದ್ಯಾರ್ಥಿನಿಯರೂ ಎಪ್ರಿಲ್ 29ರಂದು ಪ್ರಾರಂಭವಾಗುವ ಪಿಯುಸಿ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ವೈದ್ಯರ ಸಲಹೆಯಂತೆ ಇಲಾಖೆಯು ಮರು ಪರಿಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. ಮಾಹಿತಿ ನೀಡಿದ್ದಾರೆ.

Continue Reading

ಸುಳ್ಯ

Padmaraj R. Poojary-ಅಪಪ್ರಚಾರಕ್ಕೆ ಕಿವಿಗೊಡಬೇಡಿ; ಪ್ರೀತಿಯಿಂದಲೇ ಚುನಾವಣೆ ಎದುರಿಸೋಣ; ಸಂಪಾಜೆಯ ಕಲ್ಲುಗುಂಡಿಯಲ್ಲಿ ನಡೆದ ಕಾರ್ನರ್ ಮೀಟಿಂಗಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

Ad Widget

Ad Widget

Ad Widget

Ad Widget

ಸುಳ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸ್ಪಷ್ಟವಾಗಿದೆ. ಹಾಗಾಗಿ ವಿರೋಧಿಗಳ ಅಪಪ್ರಚಾರವೂ ಹೆಚ್ಚಾಗುತ್ತಿದೆ. ಮನೆಮನೆಗಳಿಗೆ ತೆರಳಿ ಆಣೆ – ಪ್ರಮಾಣ ಮಾಡಿಸುವ ಕೆಲಸಕ್ಕೂ ಮುಂದಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ತಲೆಕೆಡಿಸಿಕೊಳ್ಳದೇ, ಪ್ರೀತಿಯಿಂದ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

Ad Widget

Ad Widget

Ad Widget

ಸಂಪಾಜೆಯಿಂದ ಕಲ್ಲುಗುಂಡಿವರೆಗೆ ರೋಡ್ ಶೋ ಬಳಿಕ ನಡೆದ ಕಾರ್ನರ್ ಮೀಟಿಂಗ್ ನಲ್ಲಿ ಮಾತನಾಡಿದರು.

Ad Widget

ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆಯನ್ನು‌ ಎದುರಿಸಲು ಸಿದ್ಧರಾಗಿ. ಅಭಿವೃದ್ಧಿಯ ವಿಚಾರವಾಗಿ ನಾವು ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದರು.

Ad Widget

Ad Widget

ಬಿಜೆಪಿ ಸಂಸದರಿದ್ದ ಕಳೆದ ಮೂವತ್ಮೂರು ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸಂಸದರಿದ್ದಾಗ ಆಗಿದ್ದ ಅಭಿವೃದ್ಧಿ, ಜಿಲ್ಲೆಗೆ ಬಂದಿದ್ದ ಯೋಜನೆಗಳು ಜಿಲ್ಲೆಯನ್ನು ಮಾದರಿಯಾಗಿ ರೂಪಿಸಿತ್ತು. ಮುಂದೆಯೂ ಜಿಲ್ಲೆ ದೇಶದಲ್ಲೇ ಮಾದರಿಯಾಗಿ ರೂಪುಗೊಳ್ಳಲು ಕಾಂಗ್ರೆಸನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Ad Widget

Ad Widget

Ad Widget

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಇಂದು ಅಭಿವೃದ್ಧಿಯ ವಿಚಾರವಾಗಿ ಚರ್ಚೆ ಆಗಬೇಕಾಗಿದೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಹಾಗೂ ನುಡಿದಂತೆ ನಡೆಯಲಿದ್ದೇವೆ. ಈಗಾಗಲೇ ಗ್ಯಾರೆಂಟಿ ಯೋಜನೆ ನೀಡಿ, ಅನುಷ್ಠಾನ ಮಾಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಇನ್ನು ಹಲವು ಗ್ಯಾರೆಂಟಿ ಯೋಜನೆಗಳು ಸಿಗಲಿವೆ ಎಂದರು.

ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಮಾತನಾಡಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತ್ಯುತ್ತಮ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಪೂಜಾರಿ ಇದ್ದಾರೆ. ನಮ್ಮ ಉತ್ತಮ‌ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದರು.

ದ‌.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಗೇರುನಿಗಮದ ಅಧ್ಯಕ್ಷೆ ಮಮತ ಗಟ್ಟಿ, ಗ್ರಾ.ಪಂ. ಅಧ್ಯಕ್ಷೆ ಸುಮತಿ ಶಕ್ತಿವೇಲು, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕಾಂಗ್ರೆಸ್ ಮುಖಂಡರಾದ ಜಿ. ಕೃಷ್ಣಪ್ಪ, ಟಿ.ಎಂ. ಶಹೀದ್, ವೆಂಕಪ್ಪ ಗೌಡ, ನಿತ್ಯಾನಂದ ಮುಂಡೋಡಿ, ಎಂ.ಎಸ್. ಮಹಮ್ಮದ್, ಜಿ.ಕೆ. ಹಮೀದ್, ಎಸ್.ಕೆ. ಹನೀಫ್, ಅಬೂಸಾಲಿ ಗೂನಡ್ಕ, ಕಿರಣ್ ಬುಡ್ಲೆಗುತ್ತು, ಮಹಮದ್ ಕುಂಞಿ ಗೂನಡ್ಕ, ಗೀತಾ ಕೋಲ್ಚಾರ್ , ಕೆ.ಪಿ. ಜಾನಿ ಕಲ್ಲುಗುಂಡಿ, ವಸಂತ ಪೆಲ್ತಡ್ಕ, ಎ.ಕೆ. ಇಬ್ರಾಹಿಂ, ಶೌವಾದ್ ಗೂನಡ್ಕ, ಯಮುನ ಬಿ.ಎಸ್., ಸುಂದರಿ ಮುಂಡಡ್ಕ, ಕಾಂತಿ ಬಿ.ಎಸ್., ಲೂಕಾಸ್ ಟಿ., ಲಿಸ್ಸಿ ಮೊನಾಲಿಸಾ, ರಾಜು ನೆಲ್ಲಿಕುಮೇರಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ವಹೀದಾ ಇಸ್ಮಾಯಿಲ್, ಡಿಸಿಸಿ ಉಪಾಧ್ಯಕ್ಷೆ ರಾಜೀವಿ ಆರ್. ರೈ, ಡಿಸಿಸಿ ಸದಸ್ಯೆ ಜೂಲಿಯಾನಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಭೇಟಿ:
ರೋಡ್ ಶೋ, ಕಾರ್ನರ್ ಸಭೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading