Uncategorized
Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ತುಡರ್ ಪರ್ಬ ಆಚರಣೆ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ವಿದ್ಯಾರ್ಥಿ ಸಂಘ ಹಾಗೂ ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಆಯೋಜಿಸಿದ ತುಡರ್ ಪರ್ಬ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್. ಅಧ್ಯಕ್ಷೀಯ ನುಡಿಗಳನ್ನಾಡಿದರು.
ಪುತ್ತೂರು: ಕತ್ತಲೆಯನ್ನು ಹೋಗಲಾಡಿಸಲು ಬೆಳಕು ಅತ್ಯಗತ್ಯ. ಅದೇ ರೀತಿ ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ದೂರವಿರಿಸಲು ಜ್ಞಾನದಿಂದ ಮಾತ್ರ ಸಾಧ್ಯ. ದೀಪಾವಳಿ ಎಂದರೆ ಅಂಧಾಕಾರದಿಂದ ಬೆಳಕಿನತ್ತ ಸಾಗುವುದಾಗಿದ್ದು, ಪ್ರತಿಯೊಬ್ಬರ ಬದುಕಿನಲ್ಲೂ ಜ್ಞಾನವು ವಿಜೃಂಭಿಸಬೇಕೆಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್. ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ವಿದ್ಯಾರ್ಥಿ ಸಂಘ ಹಾಗೂ ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಆಯೋಜಿಸಿದ ತುಡರ್ ಪರ್ಬ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ವಕೀಲ ಜಯರಾಮ ಎ, ಆಶಾ ಜಯರಾಮ, ಲಲಿತ ಕಲಾ ಸಂಘದ ಸಂಯೋಜಕಿ ಅನ್ನಪೂರ್ಣ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣಾಮ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರಿಗಮಪ ಟೈಟಲ್ ವಿನ್ನರ್ ಅಶ್ಮಿತ್ ಎ.ಜೆ ಅವರನ್ನು ಸನ್ಮಾನಿಸಲಾಯಿತು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿ ಬಂತು.
ಶೈಕ್ಷಣಿಕ
ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ವಿಷ್ಣುಪ್ರಸಾದ್ ಸಿ, ಸಂಚಾಲಕರಾಗಿ ರವಿನಾರಾಯಣ ಎಂ , ಕೋಶಾಧಿಕಾರಿಯಾಗಿ ಸಿಎ ದೀಪಕ್ ಕೆ ಆಯ್ಕೆ

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಆಡಳಿತ ಮಂಡಳಿಯ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಿಷ್ಣುಪ್ರಸಾದ್ ಸಿ, ಸಂಚಾಲಕರಾಗಿ ರವಿನಾರಾಯಣ ಎಂ ಹಾಗೂ ಕೋಶಾಧಿಕಾರಿಯಾಗಿ ಸಿಎ ದೀಪಕ್ ಕೆ ಜವಾಬ್ದಾರಿ ಸ್ವೀಕರಿಸಿದರು. ಡಾ. ಅಮೃತಾ ಕೃಷ್ಣ ಪ್ರಸಾದ್, ಪ್ರೀತಿ ಎಸ್. ಶೆಣೈ, ಶುಭದಾ ಜಿ. ಭಟ್, ಪಿ. ಗೋವಿಂದ ರಾಜ್, ರಾಧಾಕೃಷ್ಣ ಬಿ. ಹಾಗೂ ಶಾರದಾ ಶೆಟ್ಟಿ ಪಿ ಸಮಿತಿಯ ಇತರ ಸದಸ್ಯರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಅವರು ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿ ಸಂತೋಷ್ ಬೋನಂತಾಯ, ನಿರ್ದೇಶಕರಾದ ರವೀಂದ್ರ ರೈ, ರಮೇಶ್ಚಂದ್ರ ನಾಯಕ್, ಸಂಘದ ಸಿಇಒ ಲಕ್ಷ್ಮೀಪ್ರಸಾದ್, ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷೆ ವಾಸಂತಿ ಭಟ್, ಸಂಚಾಲಕ ಭರತ್ ಪೈ, ಸದಸ್ಯರಾದ ಶಂಕರಿ ಭಟ್, ಪ್ರೀತಿ ಶೆಣೈ, ಸಂಸ್ಥೆಯ ಪ್ರಾಂಶುಪಾಲೆ ಸಿಂಧು, ಉಪಪ್ರಾಂಶುಪಾಲೆ ಶ್ರೀದೇವಿ ಕೆ. ಹೆಗಡೆ, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿ, ಸಂಸ್ಥೆಯ ಎಲ್ಲ ಅಧ್ಯಾಪಕರು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷೆ ಹಾಗೂ ಸಂಚಾಲಕರು ಮಾತನಾಡಿ, ಕಳೆದ ಏಳು ವರ್ಷಗಳಲ್ಲಿ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಸ್ಮರಿಸಿ, ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ತಂಡಕ್ಕೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ವಿಷ್ಣುಪ್ರಸಾದ್ ಸಿ ಮಾತನಾಡಿ, ನಿರ್ದಿಷ್ಟ ಗುರಿ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನೂತನ ಸಂಚಾಲಕ ರವಿನಾರಾಯಣ ಎಂ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ತಂಡದೊಂದಿಗೆ ಕಾರ್ಯನಿರ್ವಹಿಸಿದ ಅನುಭವವಿದೆ. ವೈಯಕ್ತಿಕವಾಗಿ ಈ ಜವಾಬ್ದಾರಿಗೆ ಬಂದಿಲ್ಲ; ಸಂಘಟಿತ ವ್ಯವಸ್ಥೆಯ ಭಾಗವಾಗಿ ಬಂದಿದ್ದೇನೆ. ಎಲ್ಲರ ಆಲೋಚನೆ ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸಿಕೊಂಡು, ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗದಂತೆ ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಗುರಿ ಹೊಂದಿದ್ದೇವೆ. ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಅನುಭವದ ಹಿನ್ನೆಲೆಯ ನೂತನ ಸಾರಥಿಗಳು
ಅಧ್ಯಕ್ಷ ವಿಷ್ಣುಪ್ರಸಾದ್ ಸಿ:
1966ರ ಮೇ 30ರಂದು ಜನಿಸಿದ ವಿಷ್ಣುಪ್ರಸಾದ್ ಸಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. 1987ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 2010ರಿಂದ ವಿವೇಕಾನಂದ ಶಿಕ್ಷಣ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದು, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ.
ಸಂಚಾಲಕ ರವಿನಾರಾಯಣ ಎಂ:
ವಿವೇಕಾನಂದ ಶಿಶುಮಂದಿರದ ಕಾರ್ಯದರ್ಶಿಯಾಗಿ, ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರಾಗಿ ಹಾಗೂ ಕಳೆದ ಐದು ವರ್ಷಗಳಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಮೈತ್ರಿ ಎಲೆಕ್ಟ್ರಿಕ್ ಕಂಪನಿಯನ್ನು ಆರಂಭಿಸಿ, ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಣಮಟ್ಟದ ವ್ಯವಹಾರದ ಮೂಲಕ ಗುರುತಿಸಿಕೊಂಡಿದ್ದಾರೆ.
ಕೋಶಾಧಿಕಾರಿ ಸಿಎ ದೀಪಕ್ ಕೆ:
ಪುತ್ತೂರಿನ ಸಿಎ ದಾಮೋದರ ನಾಯಕ್ ಕೆ. ಮತ್ತು ದಿವ್ಯಾ ಡಿ. ನಾಯಕ್ ಅವರ ಪುತ್ರರಾದ ದೀಪಕ್ ಕೆ ಅವರು ಬಿಕಾಂ, ಡಿಐಎಸ್ಎ ಪದವಿಯೊಂದಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. 2012ರ ಮೇ ತಿಂಗಳ ಸಿಎ ಇಂಟರ್ಮೀಡಿಯೇಟ್ (ಐಪಿಸಿಸಿ) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 47ನೇ ರ‍್ಯಾಂಕ್ ಗಳಿಸಿದ್ದಾರೆ. ಪುತ್ತೂರಿನ ಎಂ/ಎಸ್ ದಾಮೋದರ್ ಆ್ಯಂಡ್ ಕೋ ಸಂಸ್ಥೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ಸಿಎಸ್ ಅಂತಿಮ ಹಂತದ ಅಧ್ಯಯನ ಮುಂದುವರಿಸಿದ್ದಾರೆ. ಮಂಗಳೂರು ಐಸಿಎಐ ಶಾಖೆಯಲ್ಲಿ ಐಸಿಐಟಿಎಸ್ಎಸ್ ಮತ್ತು ಎಐಸಿಐಟಿಎಸ್ಎಸ್ ತರಬೇತಿಗಳಿಗೆ ಅರೆಕಾಲಿಕ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸುಳ್ಯ
ಕಾಣಿಯೂರು : ಚಾರ್ವಕದ ಕೋಳಿ ಅಂಕದಲ್ಲಿ ಹಣದ ಪಣ; ಪೊಲೀಸರ ದಾಳಿಗೆ ಜೂಜಾಟಗಾರರ ಪಲಾಯನ!; ಓರ್ವನ ಬಂಧನ

ಕಡಬ: ತಾಲೂಕಿನ ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ನ.9ರಂದು ಸಂಜೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸ್ ಠಾಣೆಯ ಪ್ರಭಾರ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.
ಈ ವೇಳೆ ಜೂಜಾಟದಲ್ಲಿ ತೊಡಗಿದ್ದವರು ಪೊಲೀಸರನ್ನು ಕಂಡು ಓಡಿಹೋಗಿದ್ದು, ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತನ ಬಳಿಯಿಂದ ಜೂಜಾಟದಲ್ಲಿ ಗಳಿಸಿದ್ದ ₹1,030 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಐದು ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Uncategorized
Petrol-Big Breaking: ರಾಜ್ಯದಲ್ಲಿ ಪೆಟ್ರೋಲ್ ಗೆ ಶೇ.31.2 ಇಥನಾಲ್ ಮಿಶ್ರಣ ಪತ್ತೆ..! ಲ್ಯಾಬ್ ವರದಿಯಲ್ಲಿ ಆಘಾತಕಾರಿ ಅಂಶ ಬಯಲು..! ಗಂಭೀರ ಆರೋಪ ಮಾಡಿದ ಸಚಿವ ರಿಜ್ವಾನ್ – ಮೈಲೇಜ್ ಕಡಿತ ವಾಹನ ದುಸ್ಥಿತಿಗೆ ಇದೆ ಕಾರಣ.!
ರಾಜ್ಯದಲ್ಲಿ ಪ್ರಮುಖ ತೈಲ ಮಾರಾಟ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ಸರ್ಕಾರ ಮಾಡಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪೆಟ್ರೋಲ್‌ನಲ್ಲಿನ ಇಥನಾಲ್ ಪ್ರಮಾಣ ಗರಿಷ್ಠ ಶೇ.31.2ರಷ್ಟು ಇರುವುದು ಪತ್ತೆಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಪ್ರಮುಖ ತೈಲ ಮಾರಾಟ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ಸರ್ಕಾರ ಮಾಡಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪೆಟ್ರೋಲ್‌ನಲ್ಲಿನ ಇಥನಾಲ್ ಪ್ರಮಾಣ ಗರಿಷ್ಠ ಶೇ.31.2ರಷ್ಟು ಇರುವುದು ಪತ್ತೆಯಾಗಿದೆ.
ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಪರೀಕ್ಷಾ ವರದಿಯ ವಿವರಗಳನ್ನು ಬಹಿರಂಗಪಡಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ತಿಳಿಸಿದರು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಹಿಂದುಸ್ತಾನ್ ಪೆಟ್ರೋಲಿಯಂ (HPCL), ಭಾರತ್ ಪೆಟ್ರೋಲಿಯಂ (BPCL), ನಾಯರಾ ಎನರ್ಜಿ, ಶೆಲ್ ಮತ್ತು ಎಂಆರ್‌ಪಿಎಲ್ (MRPL) ಕಂಪನಿಗಳ ಪೆಟ್ರೋಲ್ ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಇಥನಾಲ್ ಮಿಶ್ರಣವಾಗಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ.
ಇಂಡಿಯನ್ ಆಯಿಲ್ ಕಂಪನಿಯ ಪೆಟ್ರೋಲ್ ಮಾದರಿಯಲ್ಲಿ ಗರಿಷ್ಠ ಶೇ.31.2ರಷ್ಟು ಇಥನಾಲ್ ಪತ್ತೆಯಾಗಿದ್ದರೆ, HPCL ಪವರ್ ಮಾದರಿಯಲ್ಲಿ ಶೇ.30.5ರಷ್ಟು ಇಥನಾಲ್ ಇರುವುದು ವರದಿಯಾಗಿದೆ.
ವಾಹನಗಳ ಮೈಲೇಜ್ ಇಳಿಕೆ, ದುರಸ್ತಿ ಸಮಸ್ಯೆ ಹಿನ್ನೆಲೆ ಪರೀಕ್ಷೆ
ವಾಹನ ಸವಾರರಿಂದ ಮೈಲೇಜ್ ಕಡಿಮೆಯಾಗುತ್ತಿರುವುದು ಹಾಗೂ ವಾಹನಗಳು ಪದೇಪದೇ ದುರಸ್ತಿಗೆ ಬರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ಮುಂದಾಗಿತ್ತು.
ಮೊದಲಿಗೆ ಸಂಗ್ರಹಿಸಿದ ಮಾದರಿಗಳನ್ನು ಸಂಬಂಧಪಟ್ಟ ತೈಲ ಕಂಪನಿಗಳ ಸ್ವಂತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ, ಇಥನಾಲ್ ಮಿಶ್ರಣದ ಪ್ರಮಾಣದ ಕುರಿತು ಕಂಪನಿಗಳಿಂದ ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನುಮಾನ ಮೂಡಿತ್ತು. ಬಳಿಕ ಎನ್‌ಎಬಿಎಲ್ (NABL) ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಈ ಪರೀಕ್ಷೆಯಲ್ಲಿ ಪರಿಶೀಲನೆಗೆ ಒಳಪಡಿಸಿದ ಐದು ಮಾದರಿಗಳಲ್ಲಿ ನಾಲ್ಕು ಮಾದರಿಗಳು ನಿಗದಿತ ಮಿತಿಯನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ರೀತಿಯ ಪರೀಕ್ಷೆ ನಡೆಸಿ ವರದಿಯನ್ನು ಬಹಿರಂಗಪಡಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದೂ ಅವರು ಹೇಳಿದ್ದಾರೆ.
ಶೇ.20ಕ್ಕಿಂತ ಹೆಚ್ಚಿನ ಇಥನಾಲ್ ವಾಹನಗಳಿಗೆ ಸಮಸ್ಯೆ?
ದೇಶದಲ್ಲಿ ಸುಮಾರು 35 ಕೋಟಿ ವಾಹನಗಳಿದ್ದು, ಅವುಗಳಲ್ಲಿ ಶೇ.99ರಷ್ಟು ವಾಹನಗಳು ಶೇ.20ಕ್ಕಿಂತ ಹೆಚ್ಚಿನ ಇಥನಾಲ್ ಹೊಂದಿರುವ ಇಂಧನ ಬಳಕೆಗೆ ಸೂಕ್ತವಾಗಿಲ್ಲ ಎಂದು ರಾಜ್ಯ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
2023ರ ಏಪ್ರಿಲ್ ಬಳಿಕ ತಯಾರಾದ ವಾಹನಗಳೂ E20 ಇಂಧನ ಬಳಕೆಗೆ ಮಾತ್ರ ಪ್ರಮಾಣೀಕೃತವಾಗಿವೆ ಎಂದು ತಿಳಿಸಲಾಗಿದೆ. ಮತ್ತೊಂದೆಡೆ, ಪೆಟ್ರೋಲ್ ಬಂಕ್‌ಗಳಲ್ಲಿರುವ ಇಂಧನ ವಿತರಣಾ ಯಂತ್ರಗಳು (ಡಿಸ್ಪೆನ್ಸಿಂಗ್ ಯುನಿಟ್‌ಗಳು) ಕೂಡ ಶೇ.15ರವರೆಗಿನ ಇಥನಾಲ್ ಮಿಶ್ರಣಕ್ಕೆ ಮಾತ್ರ ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಥನಾಲ್ ಮಿಶ್ರಣವಾಗುತ್ತಿರುವ ಆರೋಪವು ವಾಹನ ಸವಾರರಲ್ಲಿ ಆತಂಕ ಮೂಡಿಸಿದ್ದು, ಈ ಕುರಿತು ಮುಂದಿನ ಕ್ರಮಗಳ ಬಗ್ಗೆ ಕುತೂಹಲ ಮೂಡಿದೆ.
-
ಮಂಗಳೂರು18 hours agoDr. Mahabal Shetty-Big Breaking: ಸೌಜನ್ಯ ಎಸ್ಐಟಿ : ಸಂತೋಷ್ ರಾವ್ ನನ್ನು ಮೆಡಿಕಲ್ ಟೆಸ್ಟ್ ಮಾಡಿದ್ದ ಡಾ.ಮಹಾಬಲ ಶೆಟ್ಟಿ ವಿಚಾರಣೆ – ವಿಕ್ಟರಿ ಸಿಂಬಲ್ ತೋರಿಸಿದ ಪೋರೆನ್ಸಿಕ್ ತಜ್ಞ..!
-
ಅಂತರ ರಾಜ್ಯ19 hours agoMDMA-ಬಾಳೆಗೊನೆಗಳಲ್ಲಿ MDMA ಸಾಗಾಟ: ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ ವಿಜೇತ ಅರೆಸ್ಟ್..!
-
ಸ್ಥಳೀಯ12 hours agoSoujanya Case-Breaking News: ಪೋಸ್ಟ್ ಮಾರ್ಟಮ್ ವೇಳೆ ಸೌಜನ್ಯ ಮೃತದೇಹ ಕೊಯ್ದ ವಾರ್ಡ್ ಬಾಯ್ ನ ಸತತ 5 ಗಂಟೆ ವಿಚಾರಣೆ ನಡೆಸಿದ ಎಸ್ಐಟಿ..!
-
ಲೇಖನಗಳು17 hours agoMars star change-ಮಂಗಳನ ನಕ್ಷತ್ರ ಬದಲಾವಣೆ: ಈ 5 ರಾಶಿಗಳಿಗೆ ಶುಕ್ರದೆಸೆ; ಕೈತುಂಬಾ ಹಣ, ಉದ್ಯೋಗದಲ್ಲಿ ಬಡ್ತಿ..!
-
ರಾಜಕೀಯ18 hours agoPuttur-“ನನ್ನಷ್ಟು ರಾಜಕೀಯ ಅನುಭವ ಅಶೋಕ್ ರೈಗಿಲ್ಲ, ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ” – ಪುತ್ತೂರು ಶಾಸಕರಿಗೆ ಸವಾಲು ಹಾಕಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
-
ಅಪರಾಧ21 hours ago
ಪುತ್ತೂರು ಮೆಸ್ಕಾಂ ಭ್ರಷ್ಟಚಾರದ ಕೂಪ- ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ಆರೋಪ! ; ‘ಜನರಿಗೆ ಬೇಕಿರುವುದು ಬ್ಯಾನರ್ಗಳಲ್ಲ, ನೈಜ ಅಭಿವೃದ್ಧಿ’ – ಅಶೋಕ್ ರೈಗೆ ಬೂಡಿಯಾರ್ ತಿರುಗೇಟು
-
ಬಿಗ್ ನ್ಯೂಸ್19 hours agoMarriage-ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಜೊತೆ ಕಾವ್ಯಾ ಮಾರನ್ ಮದುವೆ: ಗ್ರೀಸ್ನಲ್ಲಿ ಅದ್ಧೂರಿ ಸಮಾರಂಭ..!
-
ಮಂಗಳೂರು14 hours agoDr. Mahabal Shetty-ಸೌಜನ್ಯ ಕೇಸ್: 4 ಗಂಟೆಗಳ ವಿಚಾರಣೆ ಎದುರಿಸಿದ ಡಾ. ಮಹಾಬಲ ಶೆಟ್ಟಿ
















