ಕ್ರೈಂ
Rajajinagar-ರಾಜಾಜಿನಗರದ 7 ಕೊಲೆ ಪ್ರಕರಣ: ಆರೋಪಿ ಕೃತ್ಯದ ಆಡಿಯೊ ಪೊಲೀಸರ ಕೈಗೆ
ರಾಜಾಜಿನಗರದ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಇಂದುಶೇಖರ್‌ನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಬಾಮೈದ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರನಿಂದಲೇ ಸಂಬಂಧಿಕರಿಗೆ ಕರೆ ಮಾಡಿಸಿ, ‘ಮೂರು ತಿಂಗಳು ವಾಪಸ್ ಬರುವುದಿಲ್ಲ’ ಎಂದು ಹೇಳಿಸಿದ್ದ ಆಡಿಯೊ ಸಂಭಾಷಣೆ ಪೊಲೀಸರ ಕೈಗೆ ಸಿಕ್ಕಿದೆ.
ಬೆಂಗಳೂರು: ರಾಜಾಜಿನಗರದ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಇಂದುಶೇಖರ್‌ನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಬಾಮೈದ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರನಿಂದಲೇ ಸಂಬಂಧಿಕರಿಗೆ ಕರೆ ಮಾಡಿಸಿ, ‘ಮೂರು ತಿಂಗಳು ವಾಪಸ್ ಬರುವುದಿಲ್ಲ’ ಎಂದು ಹೇಳಿಸಿದ್ದ ಆಡಿಯೊ ಸಂಭಾಷಣೆ ಪೊಲೀಸರ ಕೈಗೆ ಸಿಕ್ಕಿದೆ.
ಶಂಕರ್ ಮತ್ತು ನಳಿನಿ ದಂಪತಿಯನ್ನು ಕೊಲೆ ಮಾಡಿ, ಅವರ ಮೃತದೇಹಗಳನ್ನು ಶಿರಾಡಿ ಘಾಟ್‌ನ ಅರಣ್ಯ ಪ್ರದೇಶಕ್ಕೆ ಎಸೆದಿದ್ದ ಇಂದುಶೇಖರ್, ದಂಪತಿಯ ಪುತ್ರನನ್ನು ತನ್ನೊಂದಿಗೆ ಕರೆದೊಯ್ದಿದ್ದ. ಈ ವೇಳೆ ಉತ್ತರ ಭಾರತದ ತೀರ್ಥಯಾತ್ರೆಗೆ ಬಂದಿರುವುದಾಗಿ ಸಂಬಂಧಿಕರಿಗೆ ಹೇಳುವಂತೆ ಬಾಲಕನಿಗೆ ಸೂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಡಿಯೊ ಸಂಭಾಷಣೆಯಲ್ಲಿ ಏನಿದೆ?
ನಳಿನಿ ಅವರ ಸಹೋದರಿ ಬಾಲಕನೊಂದಿಗೆ ಮಾತನಾಡುತ್ತಾ, ‘ಒಂದೇ ಒಂದು ಬಾರಿ ನಿಮ್ಮ ಅಮ್ಮನೊಂದಿಗೆ ಮಾತನಾಡುತ್ತೇನೆ. ನೀ ಎಲ್ಲಿದ್ದೀಯ ಮಗನೇ?’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕ, ‘ಆಫೀಸರ್ ಎಲ್ಲ ಇರುತ್ತಾರೆ. ಫೋನ್‌ನಲ್ಲಿ ಮಾತನಾಡಲು ಬಿಡುವುದಿಲ್ಲ. ಏನೇ ಇದ್ದರೂ ಮೆಸೇಜ್ ಮಾಡಿ ದೊಡ್ಡಮ್ಮ’ ಎಂದು ಹೇಳಿದ್ದಾನೆ.
ಬಳಿಕ ‘ಬಸ್‌ನಿಂದ ಆಚೆ ಇದ್ದೇನೆ. ನೀವು ಫೋನ್ ಮಾಡುತ್ತಿದ್ದೀರಲ್ಲ, ಅದಕ್ಕೆ ಮಾತನಾಡಲು ಕಳುಹಿಸಿದ್ದಾರೆ’ ಎಂದು ತಿಳಿಸಿದ್ದಾನೆ. ಸಂಬಂಧಿಕರು ಅಮ್ಮನೊಂದಿಗೆ ಮಾತನಾಡಿಸುವಂತೆ ಕೇಳಿದಾಗಲೂ, ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದಾಗಲೂ ಬಾಲಕ ನಿರ್ದಿಷ್ಟ ಸ್ಥಳದ ಮಾಹಿತಿ ನೀಡದೆ, ‘ಯಾವುದೋ ಊರಲ್ಲಿದ್ದೇವೆ’ ಎಂದು ಉತ್ತರಿಸಿದ್ದಾನೆ.
ಶವ ಸಾಗಿಸಲು ಬೆಡ್‌ಶೀಟ್ ಖರೀದಿ!
ಮೃತದೇಹಗಳನ್ನು ಸಾಗಿಸಲು ಆರೋಪಿ ಒಂದು ಬಂಡಲ್ ಬೆಡ್‌ಶೀಟ್ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಸುನಿತಾ ಮತ್ತು ಅತ್ತೆ ರೂಪಾವತಿ ಅವರ ಮೃತದೇಹಗಳನ್ನು ಸುತ್ತಲು ನಾಲ್ಕು ಬೆಡ್‌ಶೀಟ್‌ಗಳನ್ನು ಬಳಸಿದ್ದಾನೆ. ಶಿವಕುಮಾರ್ ಹಾಗೂ ಶಂಕರ್ ದಂಪತಿಯನ್ನು ಅವರ ಬಟ್ಟೆಗಳಿಂದಲೇ ಕೈ ಮತ್ತು ಮೊಣಕಾಲುಗಳನ್ನು ಕಟ್ಟಿ, ಬಳಿಕ ಬೆಡ್‌ಶೀಟ್ ಸುತ್ತಿ ಮೃತದೇಹಗಳನ್ನು ಎಸೆದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತ್ವರಿತ ನ್ಯಾಯಾಲಯ ಸ್ಥಾಪನೆಗೆ ಚಿಂತನೆ
ಏಳು ಮಂದಿಯ ಹತ್ಯೆ ಪ್ರಕರಣದ ಹಿಂದೆ ವೈಯಕ್ತಿಕ ಕಾರಣಗಳ ಜತೆಗೆ ಆರ್ಥಿಕ ಕಾರಣಗಳೂ ಇರುವ ಸುಳಿವು ಸಿಕ್ಕಿದೆ. ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವುದು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ಮೃತದೇಹಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಾಬಾ ಸಾಹೇಬ್ ನೇಮಗೌಡ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಕೃತ್ಯದ ಹಿಂದಿರುವ ಉದ್ದೇಶಗಳ ಕುರಿತು ನಿರ್ಣಾಯಕ ಸುಳಿವುಗಳು ಲಭ್ಯವಾಗಿವೆ. ಆದಷ್ಟು ಬೇಗ ಸಾಕ್ಷ್ಯಗಳು ಹಾಗೂ ಕೃತ್ಯಕ್ಕೆ ಬಳಸಿದ ಪರಿಕರಗಳನ್ನು ಒಳಗೊಂಡಂತೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಕ್ರೈಂ
Mani-ಮಾಣಿ: ವ್ಯಕ್ತಿಯ ಮೇಲೆ ಜೀಪು ಹತ್ತಿಸಲು ಯತ್ನಿಸಿ ಕೊಲೆ ಬೆದರಿಕೆ; ಆರೋಪಿ ಜಗದೀಶ್ ಜೈನ್ ಬಂಧನ
ಮಾಣಿ ಜಂಕ್ಷನ್‌ನ ಮೈದಾನದ ಬಳಿ ನಿಂತಿದ್ದ ವ್ಯಕ್ತಿಗೆ ಬೊಲೆರೋ ಜೀಪಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಗದೀಶ್ ಜೈನ್ ಎಂದು ಗುರುತಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ: ಮಾಣಿ ಜಂಕ್ಷನ್‌ನ ಮೈದಾನದ ಬಳಿ ನಿಂತಿದ್ದ ವ್ಯಕ್ತಿಗೆ ಬೊಲೆರೋ ಜೀಪಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಗದೀಶ್ ಜೈನ್ ಎಂದು ಗುರುತಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆಯ ವಿವರದಂತೆ, ಬಂಟ್ವಾಳ ಮಾಣಿ ನಿವಾಸಿ ವಿಕೇಶ್ ಕೆ. (32) ಅವರು ನ.9ರಂದು ಸಂಜೆ ಮಾಣಿ ಜಂಕ್ಷನ್‌ನ ಮೈದಾನದಲ್ಲಿರುವ ಪಟಾಕಿ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಅವರಿಗೆ ಪರಿಚಯವಿದ್ದ ಜಗದೀಶ್ ಜೈನ್ ಎಂಬಾತ ಬೊಲೆರೋ ಜೀಪನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಜೀಪು ತಮ್ಮತ್ತ ಬರುತ್ತಿರುವುದನ್ನು ಗಮನಿಸಿದ ವಿಕೇಶ್ ಅವರು ಬೊಲೆರೋ ವಾಹನದ ಬಾನೆಟ್ ಮೇಲೆ ಹಾರಿ, ಬಳಿಕ ಅಲ್ಲಿಯೇ ಇದ್ದ ಮಣ್ಣಿನ ಮೇಲೆ ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಅವರ ಎಡಕಾಲಿನ ಮೊಣಗಂಟಿಗೆ ಗಾಯವಾಗಿದೆ. ವಿಕೇಶ್ ಅವರ ಸಂಬಂಧಿಕ ತೀರ್ಥಪ್ರಸಾದ್ ಅವರಿಗೂ ಜೀಪಿನಿಂದ ಡಿಕ್ಕಿ ಹೊಡೆಯಲು ಆರೋಪಿ ಯತ್ನಿಸಿದ್ದು, ಅವರು ಕೂಡ ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳದಲ್ಲಿ ಜನರು ಸೇರುವುದನ್ನು ಕಂಡ ಆರೋಪಿ ಜಗದೀಶ್ ಜೈನ್, ವಿಕೇಶ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.
ಕ್ರೈಂ
7 ಮಂದಿಯ ಕೊಲೆ : ಶಿರಾಡಿ ಘಾಟ್ ನಲ್ಲಿ ಕೊನೆಯ ಎರಡು ಶವ ಪತ್ತೆ..! ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ..!
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜಾಜಿನಗರ ಠಾಣೆ ಪೊಲೀಸರು ಶಿರಾಡಿ ಘಾಟ್‌ನ ಅರಣ್ಯ ಪ್ರದೇಶದಲ್ಲಿ ಕೊನೆಯ ಎರಡು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಇದರೊಂದಿಗೆ ಆರೋಪಿ ಎಸ್. ಇಂದುಶೇಖರ್ ಹತ್ಯೆಗೈದಿದ್ದ ಏಳೂ ಮಂದಿಯ ಮೃತದೇಹಗಳ ಪತ್ತೆ ಕಾರ್ಯ ಪೂರ್ಣಗೊಂಡಿದೆ.
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜಾಜಿನಗರ ಠಾಣೆ ಪೊಲೀಸರು ಶಿರಾಡಿ ಘಾಟ್‌ನ ಅರಣ್ಯ ಪ್ರದೇಶದಲ್ಲಿ ಕೊನೆಯ ಎರಡು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಇದರೊಂದಿಗೆ ಆರೋಪಿ ಎಸ್. ಇಂದುಶೇಖರ್ ಹತ್ಯೆಗೈದಿದ್ದ ಏಳೂ ಮಂದಿಯ ಮೃತದೇಹಗಳ ಪತ್ತೆ ಕಾರ್ಯ ಪೂರ್ಣಗೊಂಡಿದೆ.
ಆರೋಪಿಯ ಬಾಮೈದ ಶಂಕರ್ (44) ಮತ್ತು ಅವರ ಪತ್ನಿ ನಳಿನಿ (29) ಅವರ ಮೃತದೇಹಗಳು ಸಕಲೇಶಪುರ ಸಮೀಪದ ಮಾರನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ದಂಪತಿಯ 11 ವರ್ಷದ ಪುತ್ರ ಈ ಭೀಕರ ಘಟನೆಯಿಂದ ಬದುಕುಳಿದಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾನೆ.
ನವೆಂಬರ್ ಮೊದಲ ವಾರದಲ್ಲೇ ಆರೋಪಿ ಮೃತದೇಹಗಳನ್ನು ತಂದು ಅರಣ್ಯ ಪ್ರದೇಶದಲ್ಲಿ ಎಸೆದಿದ್ದ ಎನ್ನಲಾಗಿದೆ. ನವೆಂಬರ್ 5ರಂದು ಪೊಲೀಸರು ಇಂದುಶೇಖರ್‌ನನ್ನು ಬಂಧಿಸಿ, ಅದೇ ದಿನ ಬಾಲಕನನ್ನು ರಕ್ಷಿಸಿದ್ದರು. ಬಳಿಕ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಯಿತು.
ಹಗ್ಗದಿಂದ ಕೈಕಾಲು ಕಟ್ಟಿ, ಗೋಣಿ ಚೀಲದಲ್ಲಿ ತುಂಬಿ ಎಸೆದಿದ್ದ!
ಶಂಕರ್ ಮತ್ತು ನಳಿನಿ ಅವರ ಮೃತದೇಹಗಳನ್ನು ಕೈಕಾಲುಗಳಿಗೆ ಹಗ್ಗ ಬಿಗಿದು, ಕೆಂಪು ಬಣ್ಣದ ಬೆಡ್‌ಶೀಟ್‌ಗಳಲ್ಲಿ ಸುತ್ತಲಾಗಿತ್ತು. ಬಳಿಕ ಗೋಣಿ ಚೀಲಗಳಲ್ಲಿ ತುಂಬಿ ಕಂದಕಕ್ಕೆ ಎಸೆಯಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರು, ಸುಕೋ ತಂಡ ಹಾಗೂ ಸ್ಥಳೀಯ ಪೊಲೀಸರ ನೆರವಿನಿಂದ ಪೊದೆಗಳ ಮಧ್ಯೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು. ನಳಿನಿ ಅವರ ಸಂಬಂಧಿಕರು ಮೃತದೇಹಗಳನ್ನು ಗುರುತಿಸಿದ್ದಾರೆ.
ಹಾಸನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಕೆ.ಆರ್. ಆಸ್ಪತ್ರೆಯಲ್ಲಿ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸೇಲಂ ಸಮೀಪದ ಅರಣ್ಯದಲ್ಲಿ ಪತ್ತೆಯಾಗಿದ್ದ ಸುನಿತಾ ಮತ್ತು ರೂಪಾವತಿ ಅವರ ಮೃತದೇಹಗಳನ್ನು ನಗರಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಮೂವರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೃತದೇಹಗಳ ಪತ್ತೆಗಾಗಿ ವಿಶೇಷ ತಂಡಗಳು ನಾಲ್ಕು ದಿನಗಳಿಂದ ವಿವಿಧ ಅರಣ್ಯ ಪ್ರದೇಶಗಳು ಹಾಗೂ ಅಂತರರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಇದೀಗ ಆರೋಪಿಯ ಹೇಳಿಕೆಗಳು, ಸಾಕ್ಷ್ಯಾಧಾರಗಳು ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ಯಾವ ದಿನ ಎಲ್ಲಿ ಮೃತದೇಹ ಪತ್ತೆಯಾಗಿತ್ತು?
- ನವೆಂಬರ್ 6: ನಂದಿ ಬೆಟ್ಟದಲ್ಲಿ ಶಿವಕುಮಾರ್-ದಿವ್ಯಾ ದಂಪತಿಯ ಪುತ್ರ ಪುನೀತ್ (7) ಮೃತದೇಹ ಪತ್ತೆ.
- ನವೆಂಬರ್ 7: ಸೇಲಂ ಸಮೀಪದ ಏರ್ಕಾಡ್ ಅರಣ್ಯ ಪ್ರದೇಶದಲ್ಲಿ ಇಂದುಶೇಖರ್‌ನ ಪತ್ನಿ ಸುನಿತಾ ಮತ್ತು ಅತ್ತೆ ರೂಪಾವತಿ ಅವರ ಮೃತದೇಹ ಪತ್ತೆ.
- ನವೆಂಬರ್ 8: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಾಮೈದ ಶಿವಕುಮಾರ್ ಮತ್ತು ಅವರ ಪತ್ನಿ ದಿವ್ಯಾ ಮೃತದೇಹ ಪತ್ತೆ.
- ನವೆಂಬರ್ 9: ಶಿರಾಡಿ ಘಾಟ್‌ನಲ್ಲಿ ಮತ್ತೊಬ್ಬ ಬಾಮೈದ ಶಂಕರ್ ಮತ್ತು ಅವರ ಪತ್ನಿ ನಳಿನಿ ಮೃತದೇಹ ಪತ್ತೆ.
- 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
- ಆರೋಪಿ ಅಕ್ಟೋಬರ್ 14ರಿಂದ ನವೆಂಬರ್ 3ರವರೆಗೆ ಎಲ್ಲೆಲ್ಲಿ ಸಂಚರಿಸಿದ್ದ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆತನ ಮನೆಯ ಸುತ್ತಮುತ್ತಲಿನ ಅಂಗಡಿಗಳು, ಪ್ರಮುಖ ಜಂಕ್ಷನ್‌ಗಳು, ಟೋಲ್‌ಗೇಟ್‌ಗಳು ಸೇರಿದಂತೆ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ.
ಆದರೆ ಕೆಲವು ಕ್ಯಾಮೆರಾಗಳ ಹಳೆಯ ದೃಶ್ಯಾವಳಿಗಳ ಬ್ಯಾಕಪ್ ಅಳಿಸಿಹೋಗಿರುವುದರಿಂದ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಕ್ಟೋಬರ್ 24ಕ್ಕೂ ಹಿಂದಿನ ದೃಶ್ಯಾವಳಿಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದವರನ್ನು ಹತ್ಯೆಗೈದ ಬಳಿಕ ಮೃತದೇಹಗಳನ್ನು ಸಾಗಿಸಲು ಅಗತ್ಯವಿದ್ದ ಗೋಣಿ ಚೀಲಗಳನ್ನು ಯಶವಂತಪುರದ ಆರ್‌ಎಂಸಿ ಯಾರ್ಡ್‌ನಿಂದ ಖರೀದಿಸಿದ್ದ ಎನ್ನಲಾಗಿದೆ. ಹತ್ಯೆಗೆ ಸಂಚು ರೂಪಿಸಿದ ಬಳಿಕ ನಿದ್ರೆ ಮಾತ್ರೆಗಳು, ಹಗ್ಗ, ಸೆಲೋ ಟೇಪ್, ಪ್ಲಾಸ್ಟಿಕ್ ಕವರ್‌ಗಳು ಹಾಗೂ ರಾಸಾಯನಿಕ ವಸ್ತುಗಳನ್ನು ಮನೆಯ ಸಮೀಪದ ಭಾಷ್ಯಂ ಸರ್ಕಲ್ ಸುತ್ತಮುತ್ತಲಿನ ಅಂಗಡಿಗಳಿಂದ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸಂಬಂಧಪಟ್ಟ ಅಂಗಡಿಗಳಿಗೆ ತೆರಳಿ ಮಾಲೀಕರು ಹಾಗೂ ಸಿಬ್ಬಂದಿಯಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಪ್ರತಿಯೊಬ್ಬರನ್ನು ಹತ್ಯೆಗೈದ ಬಳಿಕ ಮೃತದೇಹಗಳನ್ನು ಸ್ನಾನದ ಕೋಣೆಗೆ ಕೊಂಡೊಯ್ದು ರಕ್ತ ಸಂಪೂರ್ಣವಾಗಿ ಹೊರಹೋಗುವವರೆಗೆ ಇರಿಸುತ್ತಿದ್ದ. ಬಳಿಕ ಹಗ್ಗದಿಂದ ಬಿಗಿಯಾಗಿ ಕಟ್ಟಿ, ಚೀಲಗಳಲ್ಲಿ ತುಂಬಿ ಕಾರಿನಲ್ಲಿ ಸಾಗಿಸಿ ದೂರದ ಅರಣ್ಯ ಪ್ರದೇಶಗಳಲ್ಲಿ ಎಸೆಯುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಾಲಕನಿಂದ ಸುಳ್ಳು ಹೇಳಿಕೆ ಕೊಡಿಸಲು ಯತ್ನಿಸಿದ್ದ ಆರೋಪಿ
ಶಂಕರ್ ಮತ್ತು ನಳಿನಿ ದಂಪತಿಯ 11 ವರ್ಷದ ಪುತ್ರನನ್ನು ಬಳಸಿಕೊಂಡು ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಸುಳ್ಳು ಮಾಹಿತಿ ನೀಡಲು ಆರೋಪಿ ಪ್ರಯತ್ನಿಸಿದ್ದ ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
‘ಅಪ್ಪ-ಅಮ್ಮ ತೀರ್ಥಯಾತ್ರೆಗೆ ತೆರಳಿದ್ದಾರೆ. ಮೂರು ತಿಂಗಳ ಕಾಲ ಉತ್ತರ ಭಾರತದಲ್ಲೇ ಇರುತ್ತಾರೆ’ ಎಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹೇಳುವಂತೆ ಬಾಲಕನ ಮೇಲೆ ಒತ್ತಡ ಹೇರಿದ್ದ ಎನ್ನಲಾಗಿದೆ.
ಪೊಲೀಸರಿಗೆ ಬಾಲಕ ನೀಡಿರುವ ಮಾಹಿತಿಯ ಪ್ರಕಾರ, ಮೊದಲು ತಂದೆ ಶಂಕರ್ ಕಾಣೆಯಾಗಿದ್ದರು. ಮಧ್ಯಾಹ್ನದ ವೇಳೆಗೆ ತಾಯಿ ನಳಿನಿ ಕೂಡ ಕಾಣಿಸದಿದ್ದಾಗ ಈ ಬಗ್ಗೆ ಇಂದುಶೇಖರ್‌ನನ್ನು ಪ್ರಶ್ನಿಸಿದ್ದ. ಆಗ ತಂದೆ-ತಾಯಿ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹೇಳಿ, ಬಾಲಕನನ್ನು ಧರ್ಮಸ್ಥಳ ಪ್ರವಾಸಕ್ಕೆ ಕರೆದೊಯ್ಯುವುದಾಗಿ ತಿಳಿಸಿದ್ದ.
ಬಳಿಕ ಕಾರಿನಲ್ಲೇ ಬಾಲಕನ ಧ್ವನಿಯನ್ನು ರೆಕಾರ್ಡ್ ಮಾಡಿ ಶಂಕರ್ ಅವರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ವಿವಿಧ ಮೊಬೈಲ್ ಫೋನ್‌ಗಳನ್ನು ಬಾಲಕನ ಕೈಗೆ ನೀಡಿ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡಿಸಿದ್ದ. ಈ ಸಂದೇಶಗಳನ್ನು ಯಾರಿಗೆಲ್ಲ ಕಳುಹಿಸಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮೃತದೇಹ ಸಾಗಿಸಲು ಒಂದೇ ಮಾದರಿಯ ವಿಧಾನ!
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಪರಿಶೀಲನೆಯ ವೇಳೆ ಆರೋಪಿ ಎಲ್ಲ ಮೃತದೇಹಗಳನ್ನು ಸಾಗಿಸಲು ಒಂದೇ ರೀತಿಯ ವಿಧಾನ ಅನುಸರಿಸಿರುವುದು ತಿಳಿದುಬಂದಿದೆ.
ಹಳೆಯ ಬಟ್ಟೆಗಳು ಹಾಗೂ ಬೆಡ್‌ಶೀಟ್‌ಗಳಿಂದ ಮೃತದೇಹಗಳನ್ನು ಸುತ್ತಿ, ದಪ್ಪ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿತ್ತು. ಮೃತದೇಹಗಳಿಂದ ದುರ್ವಾಸನೆ ಹರಡದಂತೆ ಕಾರಿನೊಳಗೆ ರಾಸಾಯನಿಕ ವಸ್ತುಗಳು ಹಾಗೂ ಸುಗಂಧ ದ್ರವ್ಯಗಳನ್ನು ಸಿಂಪಡಿಸುತ್ತಿದ್ದ ಎನ್ನಲಾಗಿದೆ.
ಬೇರೆ ಬೇರೆ ದಿನಗಳಲ್ಲಿ ಒಂದೇ ಕಾರನ್ನು ಬಳಸಿಕೊಂಡು ನೂರಾರು ಕಿಲೋಮೀಟರ್ ದೂರದಲ್ಲಿರುವ ವಿವಿಧ ಅರಣ್ಯ ಪ್ರದೇಶಗಳಿಗೆ ಮೃತದೇಹಗಳನ್ನು ಸಾಗಿಸಿ ಎಸೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಉಡುಪಿ
Udupi: ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ಮದ್ಯಪಾನ; ಆಕ್ಷೇಪಿಸಿದ ಮಾಲಕರ ಸಂಬಂಧಿಗೆ ಐವರಿಂದ ಹಲ್ಲೆ
ಪೆಟ್ರೋಲ್ ಬಂಕ್ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಐವರು ಹಲ್ಲೆ ನಡೆಸಿದ ಘಟನೆ ಉಡುಪಿಯ ಗುಂಡಿಬೈಲ್‌ನಲ್ಲಿ ನ.7ರ ರಾತ್ರಿ ನಡೆದಿದೆ. ಹಲ್ಲೆಗೊಳಗಾದವರನ್ನು ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಎಂದು ಗುರುತಿಸಲಾಗಿದೆ. ಇವರು ಪೆಟ್ರೋಲ್ ಬಂಕ್ ಮಾಲಕರ ಸಂಬಂಧಿಯಾಗಿದ್ದಾರೆ.
ಉಡುಪಿ: ಪೆಟ್ರೋಲ್ ಬಂಕ್ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಐವರು ಹಲ್ಲೆ ನಡೆಸಿದ ಘಟನೆ ಉಡುಪಿಯ ಗುಂಡಿಬೈಲ್‌ನಲ್ಲಿ ನ.7ರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಎಂದು ಗುರುತಿಸಲಾಗಿದೆ. ಇವರು ಪೆಟ್ರೋಲ್ ಬಂಕ್ ಮಾಲಕರ ಸಂಬಂಧಿಯಾಗಿದ್ದಾರೆ.
ನ.7ರಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಖಾಸಗಿ ಬಸ್ ಚಾಲಕ ಆಕಾಶ್ ಎಂಬಾತ ಪೆಟ್ರೋಲ್ ಬಂಕ್ ಆವರಣದಲ್ಲಿ ಬಸ್ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ. ಇದನ್ನು ಗಮನಿಸಿದ ಆಶಿಶ್ ಶೆಟ್ಟಿ, ಬಂಕ್ ಆವರಣದಲ್ಲಿ ಮದ್ಯಪಾನ ಮಾಡದಂತೆ ಆಕ್ಷೇಪಿಸಿ ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ತಳ್ಳಾಟವೂ ನಡೆದಿತ್ತು.
ಇದಾದ ಕೆಲ ಹೊತ್ತಿನ ಬಳಿಕ ನಾಲ್ವರು ಕಾರಿನಲ್ಲಿ ಹಾಗೂ ಮತ್ತೊಬ್ಬ ಲಾರಿಯಲ್ಲಿ ಪೆಟ್ರೋಲ್ ಬಂಕ್‌ಗೆ ವಾಪಸ್ ಬಂದಿದ್ದಾರೆ. ಲಾರಿಗೆ ಸುಮಾರು 3,000 ರೂ. ಮೌಲ್ಯದ ಡೀಸೆಲ್ ಹಾಕಿಸಿಕೊಂಡ ಬಳಿಕ ಏಕಾಏಕಿ ಆಶಿಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಪುನೀತ್ ಎಂಬಾತ ತನ್ನ ಕೈಯಲ್ಲಿದ್ದ ಕಡಗದಿಂದ ಆಶಿಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಆಶಿಶ್ ಶೆಟ್ಟಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
-
ನಿಧನ ವಾರ್ತೆ21 hours agoAccident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
-
ಬಿಗ್ ನ್ಯೂಸ್19 hours agoSheikh Hasina-ಮರಣದಂಡನೆ ಎದುರಿಸುವುದೇ ಶೇಖ್ ಹಸೀನಾಗೆ ಉಳಿದಿರುವ ಆಯ್ಕೆ ಎಂದ ಬಾಂಗ್ಲಾ ಪ್ರಾಸಿಕ್ಯೂಟರ್
-
ಶಿಕ್ಷಣ22 hours agoPuttur-ಪುತ್ತೂರು: ಕರ್ನಾಟಕ ಅಂಡರ್-23 ಮಹಿಳಾ ಕ್ರಿಕೆಟ್ ತಂಡಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನಘಾ ಆಯ್ಕೆ
-
ಶಿಕ್ಷಣ20 hours agoVivekananda Law College-ವಿವೇಕಾನಂದ ಕಾನೂನು ಕಾಲೇಜಿನ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ವಿಶ್ವಾಸ್ ಶೆಣೈ, ಸಂಚಾಲಕರಾಗಿ ಮಹೇಶ್ ಕಜೆ, ಕೋಶಾಧಿಕಾರಿಯಾಗಿ ಸುರೇಶ್ ರೈ ಪಡ್ಡಂಬೈಲು ಆಯ್ಕೆ
-
ಶಿಕ್ಷಣ21 hours agoMedha – 2027-ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ “ಮೇಧಾ – 2027” – ಉಚಿತ ಶಿಕ್ಷಣ ಯೋಜನೆ ; ಡಿ.6ರಂದು ಪ್ರವೇಶ ಪರೀಕ್ಷೆ
-
ಶಿಕ್ಷಣ19 hours agoVivekananda-ಜ್ಞಾನಸೇತು :2026:, “ಸೈನ್ಸ್ ಫಾರ್ ಪೀಸ್” ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ.
-
ಅಪರಾಧ4 hours ago
ಪುತ್ತೂರು ಮೆಸ್ಕಾಂ ಭ್ರಷ್ಟಚಾರದ ಕೂಪ- ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ಆರೋಪ! ; ‘ಜನರಿಗೆ ಬೇಕಿರುವುದು ಬ್ಯಾನರ್ಗಳಲ್ಲ, ನೈಜ ಅಭಿವೃದ್ಧಿ’ – ಅಶೋಕ್ ರೈಗೆ ಬೂಡಿಯಾರ್ ತಿರುಗೇಟು
-
ಅಂತರ ರಾಜ್ಯ3 hours agoMDMA-ಬಾಳೆಗೊನೆಗಳಲ್ಲಿ MDMA ಸಾಗಾಟ: ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ ವಿಜೇತ ಅರೆಸ್ಟ್..!
















