ರಾಜಕೀಯ
Puttur-ಚುನಾವಣಾ ಭರವಸೆ ಈಡೇರಿಸಿದ ಶಾಸಕ ಅಶೋಕ್ ರೈ; ಪುತ್ತೂರಿನಲ್ಲಿ ನಾಲ್ಕು ಸಮುದಾಯಗಳಿಗೆ ನಿವೇಶನ ಭಾಗ್ಯ: ಬ್ರಾಹ್ಮಣ, ವಿಶ್ವಕರ್ಮ, ಮುಸ್ಲಿಂ, ಮಲೆಯಾಳಿ ಬಿಲ್ಲವ ಸಮಾಜಕ್ಕೆ ಏಕಕಾಲದಲ್ಲಿ ಮಂಜೂರಾತಿ ಪತ್ರ
ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಗ್ರಾಮದ ಕಟ್ಟಕಡೆಯ ವ್ಯಕ್ತಿ ಬಳಸುವ ರಸ್ತೆಯ ಅಭಿವೃದ್ಧಿಯಿಂದ ಹಿಡಿದು ಮೆಡಿಕಲ್ ಕಾಲೇಜು ಸ್ಥಾಪನೆಯವರೆಗೆ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸಮುದಾಯಗಳಿಗೂ ನಿವೇಶನ ಒದಗಿಸುವ ಭರವಸೆ ನೀಡಿದ್ದು, ಅದರಂತೆ ಇದೀಗ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಗ್ರಾಮದ ಕಟ್ಟಕಡೆಯ ವ್ಯಕ್ತಿ ಬಳಸುವ ರಸ್ತೆಯ ಅಭಿವೃದ್ಧಿಯಿಂದ ಹಿಡಿದು ಮೆಡಿಕಲ್ ಕಾಲೇಜು ಸ್ಥಾಪನೆಯವರೆಗೆ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸಮುದಾಯಗಳಿಗೂ ನಿವೇಶನ ಒದಗಿಸುವ ಭರವಸೆ ನೀಡಿದ್ದು, ಅದರಂತೆ ಇದೀಗ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರಿನಲ್ಲಿ ಬ್ರಾಹ್ಮಣ, ವಿಶ್ವಕರ್ಮ, ಮುಸ್ಲಿಂ ಹಾಗೂ ಮಲೆಯಾಳಿ ಬಿಲ್ಲವ ಸಮಾಜಗಳಿಗೆ ಏಕಕಾಲದಲ್ಲಿ ನಿವೇಶನ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಮುಖ ಸಮುದಾಯಗಳಿಗೆ ಸರಕಾರದ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಈಗಾಗಲೇ ಕುಲಾಲ, ಭಂಡಾರಿ ಹಾಗೂ ಬಂಟ ಸಮಾಜಗಳಿಗೆ ನಿವೇಶನ ಒದಗಿಸಲಾಗಿದೆ. ನಿವೇಶನಗಳನ್ನು ಗುರುತಿಸಿ, ವಿವಿಧ ಸಮುದಾಯಗಳಿಗೆ ಹಂಚಿಕೆ ಮಾಡುವ ಸಂಬಂಧ ಕಡತವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರಿ ದಾಖಲೆಗಳ ಪ್ರಕಾರ ಆಯಾ ಸಮಾಜಗಳ ಹೆಸರಿನಲ್ಲಿ ನಿವೇಶನ ನೋಂದಣಿಯಾಗಲಿದೆ ಎಂದು ತಿಳಿಸಿದರು.
ಒಂದೇ ವಾರದಲ್ಲಿ ಅನುಮೋದಿತ ಪತ್ರ ಕೈಗೆ – ಮಹೇಶ್ ಕಜೆ:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಮುಖರ ನಿಯೋಗ ವಾರದ ಹಿಂದೆ ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ನಿವೇಶನಕ್ಕಾಗಿ ಮನವಿ ಸಲ್ಲಿಸಿತ್ತು. ಮನವಿ ಸಲ್ಲಿಸಿದ ಒಂದೇ ವಾರದಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ 2.50 ಎಕರೆ ನಿವೇಶನದ ಕಡತಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಅನುಮೋದನೆ ಪಡೆದು ಮಂಜೂರಾತಿ ಪತ್ರವನ್ನು ಶಾಸಕರು ನೀಡಿದ್ದಾರೆ ಎಂದು ಬ್ರಾಹ್ಮಣ ಸಮಾಜದ ಪ್ರಮುಖ ಹಾಗೂ ವಕೀಲ ಮಹೇಶ್ ಕಜೆ ಹೇಳಿದರು.
ರಾಜಕಾರಣಿಗಳು ನೀಡುವ ಭರವಸೆಗಳ ಪೈಕಿ ಕೆಲವೇ ಕೆಲವು ಈಡೇರುತ್ತವೆ. ಆದರೆ ಅಶೋಕ್ ರೈ ಅವರು ನೀಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂದಿನ ಕೆಲವೇ ತಿಂಗಳಲ್ಲಿ ಬ್ರಾಹ್ಮಣ ಸಭಾದ ಹೆಸರಿನಲ್ಲಿ ನಿವೇಶನ ಮಂಜೂರಾಗುವ ವಿಶ್ವಾಸವಿದೆ. ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಇಂತಹ ಶಾಸಕರನ್ನು ಪಡೆದಿರುವುದೇ ನಮ್ಮ ಪುಣ್ಯ – ಪುರುಷೋತ್ತಮ:
ಮಲೆಯಾಳಿ ಬಿಲ್ಲವ ಸಮಾಜಕ್ಕೆ ಒಂದು ಎಕರೆ ನಿವೇಶನ ಮಂಜೂರಾಗಿದ್ದು, ಅದರ ಅನುಮೋದಿತ ಪತ್ರವನ್ನು ಶಾಸಕರು ನೀಡಿದ್ದಾರೆ ಎಂದು ತೀಯಾ ಸಮಾಜದ ಗೌರವಾಧ್ಯಕ್ಷ ಪುರುಷೋತ್ತಮ ತಿಳಿಸಿದರು.
ಈ ಹಿಂದೆ ಹಲವು ಶಾಸಕರಿಗೆ ನಿವೇಶನಕ್ಕಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಮನವಿ ಸಲ್ಲಿಸಿದ ಒಂದೂವರೆ ತಿಂಗಳಲ್ಲೇ ನಿವೇಶನ ಮಂಜೂರಾತಿ ದೊರೆತಿದೆ. ಮಂಜೂರಾದ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ನಮ್ಮ ಬೇಡಿಕೆಗೆ ಸ್ಪಂದಿಸಿದ ಶಾಸಕರೊಂದಿಗೆ ಸಮಾಜ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.
ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಬಳಕೆ – ಆಝಾದ್:
ಮುಸ್ಲಿಂ ಸಮಾಜಕ್ಕೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲೇ 2.88 ಎಕರೆ ನಿವೇಶನ ಮಂಜೂರು ಮಾಡಿರುವುದು ಸಂತಸದ ವಿಚಾರ ಎಂದು ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ಹೇಳಿದರು.
ಮುಖ್ಯಮಂತ್ರಿಗಳಿಂದ ಅನುಮೋದನೆಗೊಂಡ ಪತ್ರವನ್ನು ಶಾಸಕರು ಹಸ್ತಾಂತರಿಸಿದ್ದು, ಮುಂದಿನ ದಿನಗಳಲ್ಲಿ ಈ ನಿವೇಶನವನ್ನು ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಶಾಸಕರು ಧರ್ಮಭೇದವಿಲ್ಲದೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಪರಿಗಣಿಸಿ ನಿವೇಶನ ಒದಗಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ಪ್ರಯತ್ನಕ್ಕಾಗಿ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಜಾತ್ಯತೀತ ಸಿದ್ಧಾಂತದಂತೆ ಶಾಸಕ ಅಶೋಕ್ ರೈ ಅವರು ಜಾತಿ, ಮತ ಭೇದವಿಲ್ಲದೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ನಿವೇಶನ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೆಸರುಗದ್ದೆ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದೆವು – ದಿವಾಕರ ಆಚಾರ್ಯ:
ಮೂರು ತಿಂಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕೆಸರುಗದ್ದೆ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ಅವರನ್ನು ಆಹ್ವಾನಿಸಿದ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಪರವಾಗಿ ನಿವೇಶನಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಇದೀಗ ಕೇವಲ ಮೂರು ತಿಂಗಳಲ್ಲೇ ಒಂದು ಎಕರೆ ನಿವೇಶನದ ಮಂಜೂರಾತಿ ಪತ್ರ ದೊರೆತಿದೆ ಎಂದು ವಿಶ್ವಕರ್ಮ ಯುವಮಿಲನ್ ಕಾರ್ಯದರ್ಶಿ ದಿವಾಕರ ಆಚಾರ್ಯ ಹೇಳಿದರು.
ಇದು ನಮ್ಮ ಸಮಾಜದ 15 ವರ್ಷಗಳ ಬೇಡಿಕೆಯಾಗಿತ್ತು. ಈ ಹಿಂದೆ ಹಲವು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿರಲಿಲ್ಲ. ಇದೀಗ ಬೇಡಿಕೆ ಈಡೇರಿರುವುದು ಸಂತಸದ ವಿಚಾರ. ನಮ್ಮ ಸಮಾಜದ ಪಾಲಿಗೆ ಈ ದಿನ ದೀಪಾವಳಿ ಹಬ್ಬದಂತಾಗಿದೆ ಎಂದರು.
ವಿಶ್ವಕರ್ಮ ಯುವಮಿಲನ್ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ, 15 ವರ್ಷಗಳಿಂದ ವಿವಿಧ ಶಾಸಕರಿಗೆ ನಿವೇಶನಕ್ಕಾಗಿ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜಿಲ್ಲಾ ಮಟ್ಟದಲ್ಲಿ ಪುತ್ತೂರಿನಲ್ಲೇ ವಿಶ್ವಕರ್ಮ ಸಮಾಜಕ್ಕೆ ಮೊದಲ ಬಾರಿಗೆ ನಿವೇಶನ ದೊರೆತಿರುವುದು ಸಂತಸದ ವಿಚಾರ. ಶಾಸಕರ ಈ ಕೊಡುಗೆಯನ್ನು ಸಮಾಜ ಮರೆಯುವುದಿಲ್ಲ ಎಂದು ಹೇಳಿದರು.
ರಾಜಕೀಯ
Puttur-“ನನ್ನಷ್ಟು ರಾಜಕೀಯ ಅನುಭವ ಅಶೋಕ್ ರೈಗಿಲ್ಲ, ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ” – ಪುತ್ತೂರು ಶಾಸಕರಿಗೆ ಸವಾಲು ಹಾಕಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
“ಅಶೋಕ್ ರೈ ಅವರಿಗೆ ವಯಸ್ಸಾಗಿರಬಹುದು. ಆದರೆ ರಾಜಕೀಯ ಅನುಭವದ ವಿಚಾರದಲ್ಲಿ ನನ್ನಷ್ಟು ಅನುಭವ ಅವರಿಗಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಮೂರನೇ ಮಹಡಿಯಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂಬುದೂ ತಿಳಿದಿದೆ. ನಮಗೆ ಬಂದು ಪಾಠ ಹೇಳಲು ಪ್ರಯತ್ನಿಸಬೇಡಿ. ಪುತ್ತೂರಿನಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಆಹ್ವಾನ ನೀಡಿ, ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸವಾಲು ಹಾಕಿದರು.
ಪುತ್ತೂರು: “ಅಶೋಕ್ ರೈ ಅವರಿಗೆ ವಯಸ್ಸಾಗಿರಬಹುದು. ಆದರೆ ರಾಜಕೀಯ ಅನುಭವದ ವಿಚಾರದಲ್ಲಿ ನನ್ನಷ್ಟು ಅನುಭವ ಅವರಿಗಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಮೂರನೇ ಮಹಡಿಯಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂಬುದೂ ತಿಳಿದಿದೆ. ನಮಗೆ ಬಂದು ಪಾಠ ಹೇಳಲು ಪ್ರಯತ್ನಿಸಬೇಡಿ. ಪುತ್ತೂರಿನಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಆಹ್ವಾನ ನೀಡಿ, ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸವಾಲು ಹಾಕಿದರು.
ಉಪ್ಪಿನಂಗಡಿ–ಪಿಲಿಗೂಡು ರಸ್ತೆಯ ಮರು ಡಾಮರೀಕರಣಕ್ಕೆ ಅನುದಾನ ಬಿಡುಗಡೆ ಮಾಡದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರದ ವತಿಯಿಂದ ನ.11ರಂದು ಆಯೋಜಿಸಿದ್ದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆಯ ಬಳಿಕ ಕಲ್ಲೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ಎಷ್ಟು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂಬುದಕ್ಕೆ ದಾಖಲೆಗಳನ್ನು ಮುಂದಿಡುತ್ತೇನೆ. ಅದೇ ರೀತಿ ನೀವು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದೀರಿ ಎಂಬುದಕ್ಕೆ ದಾಖಲೆ ನೀಡಿ ಎಂದು ಅವರು ಆಗ್ರಹಿಸಿದರು.
ಪುತ್ತೂರು ಶಾಸಕರು, ಮುಡಾ ಅಧ್ಯಕ್ಷರು ಹಾಗೂ ಪಕ್ಷದ ನಾಯಕರು ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದಾಗಲೆಲ್ಲ ಮೆಡಿಕಲ್ ಕಾಲೇಜು ಮತ್ತು ಮಹಾಲಿಂಗೇಶ್ವರ ದೇವಸ್ಥಾನವನ್ನು ಮುಂದಿಡುತ್ತಾರೆ. ಆದರೆ ಅಭಿವೃದ್ಧಿ ಎಂದರೆ ಈ ಎರಡು ಮಾತ್ರವಲ್ಲ. ಪುತ್ತೂರು ಕ್ಷೇತ್ರದಲ್ಲಿ 43 ಗ್ರಾಮಗಳಿವೆ ಎಂಬುದನ್ನು ಮರೆಯಬಾರದು. ಬೆಳ್ತಂಗಡಿ ಕ್ಷೇತ್ರದಲ್ಲಿ 81 ಗ್ರಾಮಗಳಿದ್ದು, ಈ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಕಳೆದ ಮೂರೂವರೆ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದೇನೆ. ಪುತ್ತೂರಿಗೆ ನೀವು ಎಷ್ಟು ಅನುದಾನ ತಂದಿದ್ದೀರಿ ಎಂದು ತಿಳಿಸಿ ಎಂದು ಹರೀಶ್ ಪೂಂಜ ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಆದರೆ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡುವುದು ರಾಜ್ಯ ಸರಕಾರವಲ್ಲ, ಕೇಂದ್ರ ಸರಕಾರದ ಅಧೀನದಲ್ಲಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ. ಜಿಲ್ಲೆಯ ಸಂಸದರು ಮನಸ್ಸು ಮಾಡಿದರೆ ಮಾತ್ರ ಅನುಮತಿ ಪಡೆಯಲು ಸಾಧ್ಯ. ಜಿಲ್ಲೆಯ ಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಸಂಸದರಲ್ಲಿ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದೇವೆ. ನಿಮ್ಮಂತೆ ನಾವು ಚೀಪ್ ಪಾಲಿಟಿಕ್ಸ್ ಮಾಡುವುದಿಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇಳಿದಷ್ಟು ಅನುದಾನ ನೀಡಲಾಗುತ್ತಿತ್ತು. ಆ ಸರಕಾರ ಜಿಲ್ಲೆಗೆ ಕಲ್ಪವೃಕ್ಷ, ಕಾಮಧೇನುವಿನಂತಿತ್ತು. ಗ್ರಾಮಗಳ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನೂ ಹೆಚ್ಚಿಸಲಾಗಿತ್ತು. ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹಲವು ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪುತ್ತೂರು ಕ್ಷೇತ್ರದಲ್ಲೇ ಅಂದಿನ ಶಾಸಕ ಸಂಜೀವ ಮಠಂದೂರು ಅವರು 40ರಿಂದ 50 ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಿದ್ದರು ಎಂದು ಹೇಳಿದರು.
ಹಾಲಿ ಶಾಸಕ ಅಶೋಕ್ ರೈ ಅವರು ಎಷ್ಟು ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ? ಎಷ್ಟು ಕಿಲೋಮೀಟರ್ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ? ಆರ್‌ಡಿಪಿಆರ್ ಇಲಾಖೆಯಡಿ ಎಷ್ಟು ಕಾಮಗಾರಿಗಳನ್ನು ಮಾಡಿಸಿದ್ದಾರೆ? ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ? ಎಂಬುದನ್ನು ದಾಖಲೆ ಸಮೇತ ತಿಳಿಸಲಿ ಎಂದು ಹರೀಶ್ ಪೂಂಜ ಸವಾಲು ಹಾಕಿದರು.
ರಾಜಕೀಯ
Ethanol controversy-ಓಟ್ ಚೋರಿ ಬಳಿಕ ಎಥೆನಾಲ್ ವಿವಾದ: ಕಾಂಗ್ರೆಸ್‌ನ ರಾಷ್ಟ್ರಮಟ್ಟದ ಹೋರಾಟಕ್ಕೆ ಕರ್ನಾಟಕವೇ ಹೊಸ ಅಸ್ತ್ರ..!
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಾಗೂ ವಿಪಕ್ಷಗಳು ರಾಷ್ಟ್ರಮಟ್ಟದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕದಿಂದಲೇ ಹೊಸ ಅಸ್ತ್ರಗಳು ಸಿಗುತ್ತಿವೆ. ಈ ಹಿಂದೆ ‘ಓಟ್ ಚೋರಿ’ (ಮತಗಳ್ಳತನ) ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ತಂದಿದ್ದ ಕಾಂಗ್ರೆಸ್, ಇದೀಗ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ವಿಚಾರವನ್ನೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವ ಸಿದ್ಧತೆಯಲ್ಲಿದೆ.
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಾಗೂ ವಿಪಕ್ಷಗಳು ರಾಷ್ಟ್ರಮಟ್ಟದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕದಿಂದಲೇ ಹೊಸ ಅಸ್ತ್ರಗಳು ಸಿಗುತ್ತಿವೆ. ಈ ಹಿಂದೆ ‘ಓಟ್ ಚೋರಿ’ (ಮತಗಳ್ಳತನ) ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ತಂದಿದ್ದ ಕಾಂಗ್ರೆಸ್, ಇದೀಗ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ವಿಚಾರವನ್ನೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವ ಸಿದ್ಧತೆಯಲ್ಲಿದೆ.
ಕರ್ನಾಟಕದ ಅಳಂದ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದೊಂದಿಗೆ ಆರಂಭವಾದ ಹೋರಾಟ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗಲೇ ಪತ್ರಿಕಾಗೋಷ್ಠಿ ನಡೆಸಿ, ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಹಾಗೂ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಎಥೆನಾಲ್ ಮಿಶ್ರಣದ ವಿಚಾರದಲ್ಲೂ ಕರ್ನಾಟಕದಿಂದಲೇ ಹೋರಾಟಕ್ಕೆ ಚಾಲನೆ ಸಿಗುತ್ತಿದೆ.
ಓಟ್ ಚೋರಿ ವಿರುದ್ಧ ಫ್ರೀಡಂ ಪಾರ್ಕ್‌ನಿಂದ ರಣಕಹಳೆ
ಮತಗಳ್ಳತನದ ಆರೋಪದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದಲೇ ಕಾಂಗ್ರೆಸ್ ಹೋರಾಟ ಆರಂಭಿಸಿತ್ತು. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿ, ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.
ಬಳಿಕ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ರಾಹುಲ್ ಗಾಂಧಿ ಕರ್ನಾಟಕದ ಉದಾಹರಣೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ನಂತರ ಈ ಹೋರಾಟ ‘ಎಸ್‌ಐಆರ್’ (ವಿಶೇಷ ತೀವ್ರ ಪರಿಷ್ಕರಣೆ) ವಿರೋಧಿ ಅಭಿಯಾನವಾಗಿ ವಿಸ್ತರಿಸಿತು. ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸುವಂತೆ ಆಗ್ರಹಿಸಿ ಕಾಂಗ್ರೆಸ್ ದೆಹಲಿಯ ಜಂತರ್ ಮಂತರ್ ಹಾಗೂ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿತ್ತು. ಹಬ್ಬಗಳ ಹಿನ್ನೆಲೆಯಲ್ಲಿ ಸದ್ಯ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದ್ದರೂ, ಮುಂದಿನ ದಿನಗಳಲ್ಲಿ ಮತ್ತೆ ತೀವ್ರಗೊಳ್ಳುವ ಸಾಧ್ಯತೆಯಿದೆ.
ಎಥೆನಾಲ್ ಮಿಶ್ರಣದ ಆರೋಪ: ಕಾಂಗ್ರೆಸ್‌ಗೆ ಹೊಸ ಅಸ್ತ್ರ
ಇದೀಗ ಸಚಿವ ರಿಜ್ವಾನ್ ಅರ್ಷದ್ ಅವರು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ವಾಹನಗಳ ಎಂಜಿನ್‌ಗಳಿಗೆ ಹಾನಿಯಾಗುತ್ತಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ. ಅಲ್ಲದೆ, ಪೆಟ್ರೋಲ್‌ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಬಗ್ಗೆ ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದೂ ಪಕ್ಷ ದೂರಿದೆ.
ಕೇವಲ ಆರೋಪಗಳಿಗೆ ಸೀಮಿತವಾಗದೆ, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಿಂದ ಪೂರೈಕೆಯಾಗುವ ಪೆಟ್ರೋಲ್ ಮಾದರಿಗಳನ್ನು ಅಧಿಕೃತ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ದಾಖಲೆಗಳ ಆಧಾರದಲ್ಲಿ ಈ ಆರೋಪಗಳನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನಾಯಕರು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಸಿದ್ಧತೆ
ಎಥೆನಾಲ್ ಮಿಶ್ರಣದ ವಿಚಾರವನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸದೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ರಾಜ್ಯ ಸರ್ಕಾರವೇ ದಾಖಲೆಗಳನ್ನು ಮುಂದಿಟ್ಟುಕೊಂಡು ಗಂಭೀರ ಆರೋಪ ಮಾಡಿರುವುದರಿಂದ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯ ಮೇಲೂ ಕುತೂಹಲ ಮೂಡಿದೆ.
ಈಗಾಗಲೇ E20 ಪೆಟ್ರೋಲ್ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಮಾಡಿರುವ ಆರೋಪಗಳು ಮತ್ತಷ್ಟು ಮಹತ್ವ ಪಡೆದುಕೊಂಡಿವೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ, ಅದರ ಪರಿಣಾಮಗಳು ಹಾಗೂ ಗ್ರಾಹಕರಿಗೆ ನೀಡಲಾಗುತ್ತಿರುವ ಮಾಹಿತಿಯ ಕುರಿತು ದಾಖಲೆ ಸಹಿತ ವಿವರಗಳನ್ನು ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, ಓಟ್ ಚೋರಿ ವಿಚಾರದ ಬಳಿಕ ಎಥೆನಾಲ್ ಮಿಶ್ರಣದ ವಿವಾದ ಕಾಂಗ್ರೆಸ್‌ಗೆ ಹೊಸ ರಾಜಕೀಯ ಅಸ್ತ್ರವಾಗಿ ಪರಿಣಮಿಸುವ ಸಾಧ್ಯತೆಯಿದೆ. ಜನಸಾಮಾನ್ಯರ ವಾಹನ ಬಳಕೆ ಹಾಗೂ ಇಂಧನ ವೆಚ್ಚಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಯಾವ ರೀತಿಯಲ್ಲಿ ಮುನ್ನೆಲೆಗೆ ತರಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಜಕೀಯ
Nitya Raman-ಲಾಸ್ ಏಂಜಲೀಸ್‌ನ ನೂತನ ಮೇಯರ್ ಆಗಿ ತಿರುವನಂತಪುರಂ ಮೂಲದ ನಿತ್ಯಾ ರಾಮನ್ ಆಯ್ಕೆ
ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ತಿರುವನಂತಪುರಂ ಮೂಲದ ನಿತ್ಯಾ ರಾಮನ್ ಅವರು ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಸ್ತುತ ಮೇಯರ್ ಆಗಿರುವ ಕರೆನ್ ಬಾಸ್ ಅವರನ್ನು ಸೋಲಿಸುವ ಮೂಲಕ, ಲಾಸ್ ಏಂಜಲೀಸ್‌ನ ಮೇಯರ್ ಹುದ್ದೆಯನ್ನು ಅಲಂಕರಿಸಲಿರುವ ಮೊದಲ ಏಷ್ಯನ್-ಅಮೆರಿಕನ್ ಹಾಗೂ ಮೊದಲ ದಕ್ಷಿಣ ಏಷ್ಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ನಿತ್ಯಾ ಪಾತ್ರರಾಗಿದ್ದಾರೆ.
ತಿರುವನಂತಪುರಂ: ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ತಿರುವನಂತಪುರಂ ಮೂಲದ ನಿತ್ಯಾ ರಾಮನ್ ಅವರು ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರಸ್ತುತ ಮೇಯರ್ ಆಗಿರುವ ಕರೆನ್ ಬಾಸ್ ಅವರನ್ನು ಸೋಲಿಸುವ ಮೂಲಕ, ಲಾಸ್ ಏಂಜಲೀಸ್‌ನ ಮೇಯರ್ ಹುದ್ದೆಯನ್ನು ಅಲಂಕರಿಸಲಿರುವ ಮೊದಲ ಏಷ್ಯನ್-ಅಮೆರಿಕನ್ ಹಾಗೂ ಮೊದಲ ದಕ್ಷಿಣ ಏಷ್ಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ನಿತ್ಯಾ ಪಾತ್ರರಾಗಿದ್ದಾರೆ.
2005ರ ನಂತರ ಲಾಸ್ ಏಂಜಲೀಸ್‌ನಲ್ಲಿ ಅಧಿಕಾರದಲ್ಲಿರುವ ಮೇಯರ್ ಅವರನ್ನು ಸೋಲಿಸಿ ಈ ಹುದ್ದೆಗೇರುತ್ತಿರುವ ಮೊದಲ ಅಭ್ಯರ್ಥಿ ಎಂಬ ಇತಿಹಾಸಕ್ಕೂ ಅವರು ಪಾತ್ರರಾಗಿದ್ದಾರೆ. ಅಮೆರಿಕದ ಎರಡನೇ ಅತಿ ದೊಡ್ಡ ನಗರವಾದ ಲಾಸ್ ಏಂಜಲೀಸ್‌ನ ಅತ್ಯುನ್ನತ ಆಡಳಿತ ಚುಕ್ಕಾಣಿ ಹಿಡಿಯುತ್ತಿರುವ ಎರಡನೇ ಮಹಿಳೆ ಕೂಡ ಇವರಾಗಿದ್ದಾರೆ.
ಕಳೆದ ಆರು ವರ್ಷಗಳಿಂದ ಡಿಸ್ಟ್ರಿಕ್ಟ್ 4 ಅನ್ನು ಪ್ರತಿನಿಧಿಸುತ್ತಿರುವ ನಿತ್ಯಾ, ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್ ಸದಸ್ಯರಾಗಿದ್ದಾರೆ. ಅಲ್ಲದೆ, ಸಿಟಿ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಏಷ್ಯನ್-ಅಮೆರಿಕನ್ ಮಹಿಳೆ ಮತ್ತು ಮೊದಲ ದಕ್ಷಿಣ ಏಷ್ಯನ್ ಮೂಲದ ವ್ಯಕ್ತಿ ಎಂಬ ಗೌರವವೂ ಇವರಿಗಿದೆ.
ಮತ ಎಣಿಕೆಯ ಅಂಕಿ-ಅಂಶಗಳ ಪ್ರಕಾರ, ಡೆಮಾಕ್ರಟಿಕ್ ಸೋಶಿಯಲಿಸ್ಟ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾದ ನಿತ್ಯಾ ರಾಮನ್ ಅವರು ಶೇ.52.1 ರಷ್ಟು ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಅವರ ಪ್ರತಿಸ್ಪರ್ಧಿ, ಪ್ರಭಾವಿ ರಾಜಕಾರಣಿ ಕರೆನ್ ಬಾಸ್ ಅವರಿಗೆ ಶೇ. 47.9ರಷ್ಟು ಮತಗಳು ಮಾತ್ರ ಲಭಿಸಿದ್ದು, ಅವರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.
ನಿತ್ಯಾ ರಾಮನ್ ಅವರ ಈ ವಿಜಯದೊಂದಿಗೆ, ಅಮೆರಿಕದ ಎರಡು ಅತಿ ದೊಡ್ಡ ನಗರಗಳಾದ ನ್ಯೂಯಾರ್ಕ್ (ಜೋಹ್ರಾನ್ ಮಮ್ದಾನಿ) ಮತ್ತು ಲಾಸ್ ಏಂಜಲೀಸ್ ಎರಡೂ ಈಗ ‘ಡೆಮಾಕ್ರಟಿಕ್ ಸೋಶಿಯಲಿಸ್ಟ್’ ನಾಯಕರ ಆಡಳಿತಕ್ಕೆ ಒಳಪಟ್ಟಂತಾಗಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ 45 ವರ್ಷದ ನಿತ್ಯಾ ರಾಮನ್, ಕ್ಯಾಲಿಫೋರ್ನಿಯಾದಲ್ಲಿ ಅರ್ಬನ್ ಪ್ಲಾನರ್ (ನಗರ ಯೋಜಕರು) ಆಗಿ ಕಾರ್ಯನಿರ್ವಹಿಸುತ್ತಿದ್ದು, ಲಾಸ್ ಏಂಜಲೀಸ್‌ನ ತೀವ್ರ ವಸತಿ ರಹಿತರ ಸಮಸ್ಯೆ, ಗಗನಕ್ಕೇರುತ್ತಿರುವ ಜೀವನ ವೆಚ್ಚ, ಪರಿಸರ ಕಾಳಜಿ ಮತ್ತು ಶೋಚನೀಯ ಸ್ಥಿತಿಯಲ್ಲಿರುವ ರಸ್ತೆ ಹಾಗೂ ಬೀದಿ ದೀಪಗಳಂತಹ ಮೂಲಭೂತ ಮೂಲಸೌಕರ್ಯಗಳ ಸುಧಾರಣೆಗೆ ತಮ್ಮ ಚುನಾವಣಾ ಪ್ರಚಾರದಲ್ಲಿ ಆದ್ಯತೆ ನೀಡಿದ್ದರು.
ಸಾರ್ವಜನಿಕರ ಮೂಲಭೂತ ಅಗತ್ಯಗಳನ್ನು ಮುಂದಿಟ್ಟುಕೊಂಡು ಅವರು ನಡೆಸಿದ ಪ್ರಚಾರವು ವಿಶೇಷವಾಗಿ ಯುವ ಮತದಾರರಲ್ಲಿ ಭಾರಿ ಬೆಂಬಲವನ್ನು ತಂದುಕೊಟ್ಟಿತು.
2025ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನ ಸಂದರ್ಭದಲ್ಲಿ ಮೇಯರ್ ಕರೆನ್ ಬಾಸ್ ಅವರು ದೇಶದ ಹೊರಗಿದ್ದುದು ಸಾರ್ವಜನಿಕರಲ್ಲಿ ಭಾರಿ ಅಸಮಾಧಾನ ಮೂಡಿಸಿತ್ತು. ಇದು ರಾಜಕೀಯ ವ್ಯವಸ್ಥೆಯ ಬದಲಾವಣೆ ಬಯಸಿದ್ದ ಯುವ ಮತದಾರರನ್ನು ನಿತ್ಯಾ ಅವರತ್ತ ಸೆಳೆಯಲು ಪ್ರಮುಖ ಕಾರಣವಾಯಿತು.
2028ರ ಪ್ರತಿಷ್ಠಿತ ಒಲಿಂಪಿಕ್ಸ್ ಪಂದ್ಯಾವಳಿ ಹಾಗೂ 2027ರ ಸೂಪರ್ ಬೌಲ್ ಪಂದ್ಯಾವಳಿಗೆ ಲಾಸ್ ಏಂಜಲೀಸ್ ನಗರವು ಆತಿಥೇಯತ್ವ ವಹಿಸಲಿರುವ ಹಿನ್ನೆಲೆಯಲ್ಲಿ, ನಗರದ ಸಾರಿಗೆ, ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುವ ಜವಾಬ್ದಾರಿ ಈಗ ನಿತ್ಯಾ ರಾಮನ್ ಅವರ ಹೆಗಲೇರಿದೆ.
-
ನಿಧನ ವಾರ್ತೆ21 hours agoAccident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
-
ಬಿಗ್ ನ್ಯೂಸ್19 hours agoSheikh Hasina-ಮರಣದಂಡನೆ ಎದುರಿಸುವುದೇ ಶೇಖ್ ಹಸೀನಾಗೆ ಉಳಿದಿರುವ ಆಯ್ಕೆ ಎಂದ ಬಾಂಗ್ಲಾ ಪ್ರಾಸಿಕ್ಯೂಟರ್
-
ಶಿಕ್ಷಣ22 hours agoPuttur-ಪುತ್ತೂರು: ಕರ್ನಾಟಕ ಅಂಡರ್-23 ಮಹಿಳಾ ಕ್ರಿಕೆಟ್ ತಂಡಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನಘಾ ಆಯ್ಕೆ
-
ಶಿಕ್ಷಣ20 hours agoVivekananda Law College-ವಿವೇಕಾನಂದ ಕಾನೂನು ಕಾಲೇಜಿನ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ವಿಶ್ವಾಸ್ ಶೆಣೈ, ಸಂಚಾಲಕರಾಗಿ ಮಹೇಶ್ ಕಜೆ, ಕೋಶಾಧಿಕಾರಿಯಾಗಿ ಸುರೇಶ್ ರೈ ಪಡ್ಡಂಬೈಲು ಆಯ್ಕೆ
-
ಶಿಕ್ಷಣ21 hours agoMedha – 2027-ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ “ಮೇಧಾ – 2027” – ಉಚಿತ ಶಿಕ್ಷಣ ಯೋಜನೆ ; ಡಿ.6ರಂದು ಪ್ರವೇಶ ಪರೀಕ್ಷೆ
-
ಶಿಕ್ಷಣ19 hours agoVivekananda-ಜ್ಞಾನಸೇತು :2026:, “ಸೈನ್ಸ್ ಫಾರ್ ಪೀಸ್” ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ.
-
ಅಪರಾಧ4 hours ago
ಪುತ್ತೂರು ಮೆಸ್ಕಾಂ ಭ್ರಷ್ಟಚಾರದ ಕೂಪ- ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ಆರೋಪ! ; ‘ಜನರಿಗೆ ಬೇಕಿರುವುದು ಬ್ಯಾನರ್ಗಳಲ್ಲ, ನೈಜ ಅಭಿವೃದ್ಧಿ’ – ಅಶೋಕ್ ರೈಗೆ ಬೂಡಿಯಾರ್ ತಿರುಗೇಟು
-
ಅಂತರ ರಾಜ್ಯ3 hours agoMDMA-ಬಾಳೆಗೊನೆಗಳಲ್ಲಿ MDMA ಸಾಗಾಟ: ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ ವಿಜೇತ ಅರೆಸ್ಟ್..!
















