ಸ್ಥಳೀಯ
Dharmasthala-ಧರ್ಮಸ್ಥಳ: ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಿಐಎಸ್‌ಎಫ್ ವತಿಯಿಂದ ಗೌರವ ಸ್ಮರಣಿಕೆ
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವತಿಯಿಂದ 2026ರ ಫೆಬ್ರವರಿ ತಿಂಗಳಲ್ಲಿ ‘ಸುರಕ್ಷಿತ ತಟ್, ಸಮೃದ್ಧ ಭಾರತ್’ (ಸುರಕ್ಷಿತ ಕರಾವಳಿ, ಸಮೃದ್ಧ ಭಾರತ) ಎಂಬ ಧ್ಯೇಯವಾಕ್ಯದೊಂದಿಗೆ ಸಿಐಎಸ್‌ಎಫ್ ಸೈಕ್ಲೋಥಾನ್–2026 ಅನ್ನು ಆಯೋಜಿಸಲಾಗಿತ್ತು.
ಧರ್ಮಸ್ಥಳ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವತಿಯಿಂದ 2026ರ ಫೆಬ್ರವರಿ ತಿಂಗಳಲ್ಲಿ ‘ಸುರಕ್ಷಿತ ತಟ್, ಸಮೃದ್ಧ ಭಾರತ್’ (ಸುರಕ್ಷಿತ ಕರಾವಳಿ, ಸಮೃದ್ಧ ಭಾರತ) ಎಂಬ ಧ್ಯೇಯವಾಕ್ಯದೊಂದಿಗೆ ಸಿಐಎಸ್‌ಎಫ್ ಸೈಕ್ಲೋಥಾನ್–2026 ಅನ್ನು ಆಯೋಜಿಸಲಾಗಿತ್ತು.
ಕರಾವಳಿ ಭದ್ರತೆ, ರಾಷ್ಟ್ರೀಯ ಏಕತೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸೈಕಲ್ ಜಾಥಾದಲ್ಲಿ ಸಿಐಎಸ್‌ಎಫ್‌ನ 80 ಮಂದಿ ಸೈಕಲ್ ಸವಾರರು ಭಾಗವಹಿಸಿ, ಭಾರತದ ಸಂಪೂರ್ಣ ಪಶ್ಚಿಮ ಕರಾವಳಿಯನ್ನು ಒಳಗೊಂಡಂತೆ ಸಂಚರಿಸಿದ್ದರು.
ಈ ಸೈಕ್ಲೋಥಾನ್–2026ರ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರೀತಿ, ಗೌರವ ಹಾಗೂ ಮೆಚ್ಚುಗೆಯ ಸಂಕೇತವಾಗಿ ಸಿಐಎಸ್‌ಎಫ್ ವತಿಯಿಂದ ಸ್ಮರಣಿಕೆಯನ್ನು ಸಮರ್ಪಿಸಲಾಯಿತು.
ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಸಿಐಎಸ್‌ಎಫ್ ಘಟಕದ ಉಪ ಕಮಾಂಡೆಂಟ್ ಆರ್. ಪಿ. ಪಾಠಕ್ ಅವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸ್ಮರಣಿಕೆಯನ್ನು ಹಸ್ತಾಂತರಿಸಿದರು.
ಬಿಗ್ ನ್ಯೂಸ್
Puttur-ಪುತ್ತೂರಿಗೆ ನಾಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ಸಂವಾದ
ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಹಲವು ಮಹತ್ವದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಮಧ್ಯಾಹ್ನ ಸುಮಾರು 2 ಗಂಟೆಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿರುವ ಸಚಿವರು, ಸ್ಥಳೀಯರು, ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಮಂಗಳೂರು: ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಹಲವು ಮಹತ್ವದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಮಧ್ಯಾಹ್ನ ಸುಮಾರು 2 ಗಂಟೆಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿರುವ ಸಚಿವರು, ಸ್ಥಳೀಯರು, ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಇಂದು ರಾತ್ರಿ ಮಂಗಳೂರು ನಗರಕ್ಕೆ ಆಗಮಿಸಲಿರುವ ಸಚಿವರು, ನಾಳೆ, ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಲಿರುವ ಮೊತ್ತ ಮೊದಲ ವಂದೇ ಭಾರತ್ ಹೈಸ್ಪೀಡ್ ರೈಲು ಸೇವೆಗೆ ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.
ಕೇಂದ್ರ ಸಚಿವರಾಗಿ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಅಶ್ವಿನಿ ವೈಷ್ಣವ್ ಅವರ ಪ್ರವಾಸದ ವೇಳೆ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೂರು ಪ್ರಮುಖ ರೈಲ್ವೆ ಯೋಜನೆಗಳು ಲೋಕಾರ್ಪಣೆಗೊಳ್ಳಲಿವೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಲೋಕಾರ್ಪಣೆಗೊಳ್ಳಲಿರುವ ಮೂರು ಪ್ರಮುಖ ಯೋಜನೆಗಳು
- ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ಬೆಂಗಳೂರು ಮತ್ತು ಮಂಗಳೂರು ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ಇದರಿಂದ ರಾಜಧಾನಿ ಮತ್ತು ಕರಾವಳಿ ನಡುವಿನ ಪ್ರಯಾಣ ಮತ್ತಷ್ಟು ವೇಗವಾಗಲಿದ್ದು, ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
- ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗ ವಿದ್ಯುದ್ದೀಕರಣ
ಪಶ್ಚಿಮ ಘಟ್ಟದ ಸವಾಲಿನ ಘಾಟ್ ವಿಭಾಗದಲ್ಲಿರುವ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಇದನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಇದರಿಂದ ಈ ಮಾರ್ಗದಲ್ಲಿ ರೈಲು ಸಂಚಾರದ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಲಿದೆ.
- ಸುಬ್ರಹ್ಮಣ್ಯ ರಸ್ತೆ ಅಮೃತ್ ಭಾರತ್ ರೈಲ್ವೆ ನಿಲ್ದಾಣ
ಕೇಂದ್ರ ಸರ್ಕಾರದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಣಗೊಂಡಿರುವ ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುತ್ತದೆ.
ಸಚಿವರ ಪ್ರವಾಸದ ವೇಳಾಪಟ್ಟಿ
- ಬೆಳಗ್ಗೆ 8:00: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ.
- ಬೆಳಗ್ಗೆ 10:30: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ.
- ಬೆಳಗ್ಗೆ 11:30: ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ.
- ಮಧ್ಯಾಹ್ನ 12:00: ಪ್ರಧಾನಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ.
- ಮಧ್ಯಾಹ್ನ 1:30: ಮಂಗಳೂರು ಜಂಕ್ಷನ್‌ನಿಂದ ನೂತನ ವಂದೇ ಭಾರತ್ ರೈಲಿನಲ್ಲಿ ಸುಬ್ರಹ್ಮಣ್ಯದತ್ತ ಪ್ರಯಾಣ.
- ಮಧ್ಯಾಹ್ನ 2:00: ಕಬಕ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ.
- ನಂತರ: ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ನವೀಕೃತ ಕಟ್ಟಡ ಹಾಗೂ ಪ್ರಯಾಣಿಕರ ಸೌಲಭ್ಯಗಳ ಪರಿಶೀಲನೆ.
- ಸಂಜೆ 4:00: ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ.
ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಚಿವರು ನವದೆಹಲಿಗೆ ವಾಪಸಾಗಲಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಸಚಿವರ ಈ ಭೇಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸಂಪರ್ಕ ಜಾಲದ ಬಲವರ್ಧನೆ ಹಾಗೂ ಬಹುದಿನಗಳ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಬೇಡಿಕೆಗಳಿಗೆ ಹೊಸ ವೇಗ ಸಿಗುವ ನಿರೀಕ್ಷೆಯಿದೆ.
ಸ್ಥಳೀಯ
Dharamsthala-Big Breaking: ಧರ್ಮಸ್ಥಳ : ಸ್ನಾನಘಟ್ಟದ ಹೆದ್ದಾರಿ ಬದಿಯಲ್ಲಿ ಮಾನವನ ತಲೆಬುರುಡೆ ಪತ್ತೆ
ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಮುಂಭಾಗದ ರಾಜ್ಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಮಾನವನ ತಲೆಬುರುಡೆಯೊಂದು ಪತ್ತೆಯಾಗಿರುವ ಘಟನೆ ನ.12ರ ಸಂಜೆ ಬೆಳಕಿಗೆ ಬಂದಿದೆ. ತಲೆಬುರುಡೆ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಧರ್ಮಸ್ಥಳ ಪೊಲೀಸರು ಹಾಗೂ ಸೋಕೋ (SOCO) ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಮುಂಭಾಗದ ರಾಜ್ಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಮಾನವನ ತಲೆಬುರುಡೆಯೊಂದು ಪತ್ತೆಯಾಗಿರುವ ಘಟನೆ ನ.12ರ ಸಂಜೆ ಬೆಳಕಿಗೆ ಬಂದಿದೆ.
ತಲೆಬುರುಡೆ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಧರ್ಮಸ್ಥಳ ಪೊಲೀಸರು ಹಾಗೂ ಸೋಕೋ (SOCO) ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ತಲೆಬುರುಡೆ ಯಾರದ್ದು ಮತ್ತು ಅದು ಅಲ್ಲಿ ಹೇಗೆ ಬಂತು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸ್ಥಳೀಯ
Soujanya Case-Breaking News: ಪೋಸ್ಟ್ ಮಾರ್ಟಮ್ ವೇಳೆ ಸೌಜನ್ಯ ಮೃತದೇಹ ಕೊಯ್ದ ವಾರ್ಡ್ ಬಾಯ್ ನ ಸತತ 5 ಗಂಟೆ ವಿಚಾರಣೆ ನಡೆಸಿದ ಎಸ್ಐಟಿ..!
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಮುಂದುವರಿದಿದ್ದು, ಸೌಜನ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ವೈದ್ಯರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಮುಂದುವರಿದಿದ್ದು, ಸೌಜನ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ವೈದ್ಯರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸೌಜನ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಸಹಾಯಕರಾಗಿದ್ದ ಅನಿಲ್ ಕುಮಾರ್ ಅವರು, ಮೃತದೇಹವನ್ನು ಪರೀಕ್ಷೆಗಾಗಿ ಕೊಯ್ದ ಪ್ರಕ್ರಿಯೆಯಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಅನಿಲ್ ಕುಮಾರ್ ಅವರನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ವಿಚಾರಣೆ ಇದೀಗ ಮುಕ್ತಾಯಗೊಂಡಿದೆ.
ಸೌಜನ್ಯ ಪ್ರಕರಣದ ಮರುತನಿಖೆಯ ಹಿನ್ನೆಲೆಯಲ್ಲಿ ಅಂದು ಮರಣೋತ್ತರ ಪರೀಕ್ಷೆ ಹಾಗೂ ತನಿಖೆಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸುತ್ತಿದೆ.
-
ಮಂಗಳೂರು9 hours agoDr. Mahabal Shetty-Big Breaking: ಸೌಜನ್ಯ ಎಸ್ಐಟಿ : ಸಂತೋಷ್ ರಾವ್ ನನ್ನು ಮೆಡಿಕಲ್ ಟೆಸ್ಟ್ ಮಾಡಿದ್ದ ಡಾ.ಮಹಾಬಲ ಶೆಟ್ಟಿ ವಿಚಾರಣೆ – ವಿಕ್ಟರಿ ಸಿಂಬಲ್ ತೋರಿಸಿದ ಪೋರೆನ್ಸಿಕ್ ತಜ್ಞ..!
-
ಅಂತರ ರಾಜ್ಯ10 hours agoMDMA-ಬಾಳೆಗೊನೆಗಳಲ್ಲಿ MDMA ಸಾಗಾಟ: ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ ವಿಜೇತ ಅರೆಸ್ಟ್..!
-
ಲೇಖನಗಳು8 hours agoMars star change-ಮಂಗಳನ ನಕ್ಷತ್ರ ಬದಲಾವಣೆ: ಈ 5 ರಾಶಿಗಳಿಗೆ ಶುಕ್ರದೆಸೆ; ಕೈತುಂಬಾ ಹಣ, ಉದ್ಯೋಗದಲ್ಲಿ ಬಡ್ತಿ..!
-
ರಾಜಕೀಯ8 hours agoPuttur-“ನನ್ನಷ್ಟು ರಾಜಕೀಯ ಅನುಭವ ಅಶೋಕ್ ರೈಗಿಲ್ಲ, ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ” – ಪುತ್ತೂರು ಶಾಸಕರಿಗೆ ಸವಾಲು ಹಾಕಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
-
ಅಪರಾಧ11 hours ago
ಪುತ್ತೂರು ಮೆಸ್ಕಾಂ ಭ್ರಷ್ಟಚಾರದ ಕೂಪ- ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ಆರೋಪ! ; ‘ಜನರಿಗೆ ಬೇಕಿರುವುದು ಬ್ಯಾನರ್ಗಳಲ್ಲ, ನೈಜ ಅಭಿವೃದ್ಧಿ’ – ಅಶೋಕ್ ರೈಗೆ ಬೂಡಿಯಾರ್ ತಿರುಗೇಟು
-
ಬಿಗ್ ನ್ಯೂಸ್10 hours agoMarriage-ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಜೊತೆ ಕಾವ್ಯಾ ಮಾರನ್ ಮದುವೆ: ಗ್ರೀಸ್ನಲ್ಲಿ ಅದ್ಧೂರಿ ಸಮಾರಂಭ..!
-
ನಿಧನ ವಾರ್ತೆ9 hours agoArrested-ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ: ಯುವಕನನ್ನು ತಳ್ಳಿ ಕೊಂದ ಆರೋಪ; ಇಬ್ಬರ ಬಂಧನ-ಅಪ್ರಾಪ್ತ ವಶಕ್ಕೆ..!
-
ರಾಜಕೀಯ8 hours agoPuttur-ಚುನಾವಣಾ ಭರವಸೆ ಈಡೇರಿಸಿದ ಶಾಸಕ ಅಶೋಕ್ ರೈ; ಪುತ್ತೂರಿನಲ್ಲಿ ನಾಲ್ಕು ಸಮುದಾಯಗಳಿಗೆ ನಿವೇಶನ ಭಾಗ್ಯ: ಬ್ರಾಹ್ಮಣ, ವಿಶ್ವಕರ್ಮ, ಮುಸ್ಲಿಂ, ಮಲೆಯಾಳಿ ಬಿಲ್ಲವ ಸಮಾಜಕ್ಕೆ ಏಕಕಾಲದಲ್ಲಿ ಮಂಜೂರಾತಿ ಪತ್ರ
















