Connect with us

ಕಾರ್ಯಕ್ರಮಗಳು

Kaavu-ಕಾವು ನವೋದಯ ಒಕ್ಕೂಟಕ್ಕೆ “ಶ್ರೀ ವಿಷ್ಣು ಯುವಸಿರಿ” ಸಾಂಘಿಕ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಮಜ್ಜಾರಡ್ಕ ಶ್ರೀ ವಿಷ್ಣು ಯುವ ಬಳಗದ ವತಿಯಿಂದ ನವೆಂಬರ್ 1ರಂದು ನಡೆದ ಕೆಸರಡೊಂಜಿ ದಿನ ಕಾರ್ಯಕ್ರಮದ ಸಮಾರಂಭದಲ್ಲಿ ಕಾವು ನವೋದಯ ಒಕ್ಕೂಟಕ್ಕೆ ಪ್ರತಿಷ್ಠಿತ ಶ್ರೀ ವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

Ad Widget

Ad Widget

Ad Widget

ಪುತ್ತೂರು: ಮಜ್ಜಾರಡ್ಕ ಶ್ರೀ ವಿಷ್ಣು ಯುವ ಬಳಗದ ವತಿಯಿಂದ ನವೆಂಬರ್ 1ರಂದು ನಡೆದ ಕೆಸರಡೊಂಜಿ ದಿನ ಕಾರ್ಯಕ್ರಮದ ಸಮಾರಂಭದಲ್ಲಿ ಕಾವು ನವೋದಯ ಒಕ್ಕೂಟಕ್ಕೆ ಪ್ರತಿಷ್ಠಿತ ಶ್ರೀ ವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

Ad Widget

Ad Widget alt="Ad Widget"/>

Ad Widget

ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗ್ರಾಮದ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಒಕ್ಕೂಟವು ನಡೆಸುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.

Ad Widget

Ad Widget <> Ad Widget

ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷರಾದ ಸುಬ್ರಾಯ ಗೌಡ, ಕಾರ್ಯದರ್ಶಿರೇವತಿ ಸಿ.ಎನ್. ಅಮ್ಮುಪೂಂಜ ಪಳನೀರು,ನಿಕಟಪೂರ್ವ ಪದಾಧಿಕಾರಿಗಳಾದ ನಿರ್ಮಲಾ ರೈ ಮದ್ಲ, ಪ್ರೇರಕರಾದ ಗಾಯತ್ರಿ, ಸುಮತಿ ಆಚಾರಿಮೂಲೆ, ಕೇಶವ ಸಸ್ಪೆಟ್ಟಿ, ಇಬ್ರಾಹಿಂ ಆಶ್ವತ್ತಡಿ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಚಿದಾನಂದ ಆಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.



Ad Widget

ಪ್ರಶಸ್ತಿ ಪ್ರದಾನವು ಒಕ್ಕೂಟದ ಸಮಾಜಮುಖಿ ಕಾರ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

Click to comment

Leave a Reply

ಸ್ಥಳೀಯ

Savanoor-ನ.16ರಂದು ಆದರ್ಶ ಸಹಕಾರ ಸಂಘದ ರಜತ ಮಹೋತ್ಸವ: ಸವಣೂರಿನಲ್ಲಿ ಕೇಂದ್ರ ಕಚೇರಿ, ಶಾಖೆ ಹಾಗೂ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Published

on



Ad Widget

Ad Widget

Ad Widget

Ad Widget

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಕೇಂದ್ರ ಕಚೇರಿ, ಸವಣೂರು ಶಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಮತ್ತು ಸಂಘದ ರಜತ ಮಹೋತ್ಸವ ಸಮಾರಂಭ ನ.16ರಂದು ಬೆಳಗ್ಗೆ 10.30ಕ್ಕೆ ಸವಣೂರು–ಸುಬ್ರಹ್ಮಣ್ಯ ರಸ್ತೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಕೆ. ತಿಳಿಸಿದರು.

Ad Widget

Ad Widget

Ad Widget

ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಕೇಂದ್ರ ಕಚೇರಿ, ಸವಣೂರು ಶಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಮತ್ತು ಸಂಘದ ರಜತ ಮಹೋತ್ಸವ ಸಮಾರಂಭ ನ.16ರಂದು ಬೆಳಗ್ಗೆ 10.30ಕ್ಕೆ ಸವಣೂರು–ಸುಬ್ರಹ್ಮಣ್ಯ ರಸ್ತೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಕೆ. ತಿಳಿಸಿದರು.

Ad Widget

Ad Widget alt="Ad Widget"/>

Ad Widget

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಜನರ ಅನುಕೂಲಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಮುಖ್ಯ ಶಾಖೆಯನ್ನು ಸವಣೂರಿಗೆ ಸ್ಥಳಾಂತರಿಸಲಾಗಿದೆ. ಸವಣೂರು ಭಾಗದ ಅಭಿವೃದ್ಧಿಗೆ ಸಂಘದ ವತಿಯಿಂದ ವಿಶೇಷ ಕೊಡುಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

Ad Widget

Ad Widget <> Ad Widget

ರಜತ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ₹2 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ವಿದ್ಯಾರಶ್ಮಿ ಸಂಸ್ಥೆಗೆ ₹1 ಲಕ್ಷ ಮೌಲ್ಯದ ಐದು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಜಿಲ್ಲೆಯ ಹಿರಿಯ ಸಹಕಾರಿ ಕಲ್ಮಡ್ಕ ಜಾಕೆ ಮಾಧವ ಗೌಡ ಅವರಿಗೆ ‘ಆದರ್ಶ ರಜತ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಂಘದಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದ ನಿರ್ದೇಶಕರು, ನಿವೃತ್ತ ಸಿಬ್ಬಂದಿ, ಪಗ್ಮಿ ಸಂಗ್ರಹಕಾರರು ಹಾಗೂ ಮಹಾಪ್ರಬಂಧಕರನ್ನು ಸನ್ಮಾನಿಸಲಾಗುವುದು. ನೌಕರರಿಗೆ ಅರ್ಧ ತಿಂಗಳ ವೇತನವನ್ನು ಉಡುಗೊರೆಯಾಗಿ ನೀಡುವುದರ ಜತೆಗೆ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.



Ad Widget

ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

Ad Widget

Ad Widget

ಕೇಂದ್ರ ಕಚೇರಿಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್, ಸಮಾರಂಭವನ್ನು ಎ.ಜೆ. ಶೆಟ್ಟಿ ಆಸ್ಪತ್ರೆಯ ಡಾ. ಎ.ಜೆ. ಶೆಟ್ಟಿ ಹಾಗೂ ಸವಣೂರು ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಸನ್ಮಾನ ನೆರವೇರಿಸಲಿದ್ದು, ಬಸ್ ನಿಲ್ದಾಣವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ರಶ್ಮೀ ಎಸ್. ರೈ, ಅಶ್ವಿನ್ ಎಲ್. ಶೆಟ್ಟಿ ಸವಣೂರು ಹಾಗೂ ಮಹಾಪ್ರಬಂಧಕ ವಸಂತ್ ಜಾಲಾಡಿ ಉಪಸ್ಥಿತರಿದ್ದರು.

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ ಪಂಚಮುಖಿ ಆಂಜನೇಯ ಹವನ: ಪೂರ್ವ ಸಿದ್ಧತೆಗೆ ಚಪ್ಪರ ಮುಹೂರ್ತ

Published

on



Ad Widget

Ad Widget

Ad Widget

Ad Widget

ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ಪಂಚಮುಖಿ ಆಂಜನೇಯ ಹವನ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಅಂಗವಾಗಿ ಭಾನುವಾರ ಕ್ಷೇತ್ರದ ವಠಾರದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

Ad Widget

Ad Widget

Ad Widget

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ಪಂಚಮುಖಿ ಆಂಜನೇಯ ಹವನ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಅಂಗವಾಗಿ ಭಾನುವಾರ ಕ್ಷೇತ್ರದ ವಠಾರದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

Ad Widget

Ad Widget alt="Ad Widget"/>

Ad Widget

ಪಂಚಮುಖಿ ಆಂಜನೇಯ ಹವನದ ಸ್ವಾಗತ ಸಮಿತಿ ಸಂಚಾಲಕ ಹಾಗೂ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಹವನ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು, ಗೌರವಾಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಸಂಚಾಲಕ ಕೆ. ಜೀವಂಧರ್ ಜೈನ್ ಮತ್ತು ಉಪಾಧ್ಯಕ್ಷ ಉಜ್ವಲ್ ಪ್ರಭು ಅವರು ಜತೆಯಾಗಿ ಚಪ್ಪರ ಮುಹೂರ್ತ ನೆರವೇರಿಸಿದರು. ಸುದರ್ಶನ್ ವೈಲಾಯ ಕೊಡಿಪ್ಪಾಡಿ ಅವರು ವೈದಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

Ad Widget

Ad Widget <> Ad Widget

ಬಳಿಕ ಕ್ಷೇತ್ರದ ಕಾರ್ಯಾಲಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅರುಣ್ ಶ್ಯಾಮ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಪಂಚಮುಖಿ ಆಂಜನೇಯ ಹವನದ ಮೂಲಕ ಪುತ್ತೂರು ಭಾಗದಲ್ಲಿ ವಿಶೇಷ ಶಕ್ತಿ ಸಂಚಲನವಾಗಬೇಕು ಎಂಬ ಸಂಕಲ್ಪ ಹೊಂದಲಾಗಿದೆ ಎಂದರು.



Ad Widget

ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಶಕ್ತಿ ತುಂಬುವುದು, ಸ್ಥಳೀಯ ಜನರ ಶ್ರೇಯೋಭಿವೃದ್ಧಿ ಹಾಗೂ ರಾಷ್ಟ್ರ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ನೈತಿಕ ಬೆಂಬಲ ನೀಡುವುದು ಈ ವಿಶೇಷ ಸೇವೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

Ad Widget

Ad Widget

ಕಾರ್ಯಕ್ರಮದ ಅಂಗವಾಗಿ ಭಜನೆ, ಪ್ರವಚನ, ನೃತ್ಯ, ಸಂಗೀತ ಹಾಗೂ ಉಪನ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಹವನ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಸಮಾಜದ ಏಕತೆ ಮತ್ತು ಲೋಕಕಲ್ಯಾಣದ ಉದ್ದೇಶದಿಂದ ಈ ಹವನವನ್ನು ಆಯೋಜಿಸಲಾಗಿದೆ. ಪಂಚಮುಖಿ ಆಂಜನೇಯ ಹವನ ಅಪರೂಪದ ಹಾಗೂ ವೈಶಿಷ್ಟ್ಯಪೂರ್ಣ ಯಾಗವಾಗಿದ್ದು, ಯಾವುದೇ ವ್ಯಕ್ತಿಯ ವೈಯಕ್ತಿಕ ಸ್ವಾರ್ಥ ಅಥವಾ ಉನ್ನತಿಗಾಗಿ ನಡೆಯುವ ಕಾರ್ಯಕ್ರಮವಲ್ಲ. ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಧಾರ್ಮಿಕ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು.

ನ.26ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ನ.26ರಂದು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪವಿತ್ರ ತೀರ್ಥ ಸಂಗ್ರಹಿಸಿ, ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ತಂದು ತೀರ್ಥಕಲಶದ ರೂಪದಲ್ಲಿ ಆಂಜನೇಯನಿಗೆ ಸಮರ್ಪಿಸಲಾಗುವುದು. ಬಳಿಕ ಸಾಮೂಹಿಕ ಸಂಕಲ್ಪ ಹಾಗೂ 10 ಮಂದಿ ವೈದಿಕರಿಂದ ಪಾರಾಯಣ ನಡೆಯಲಿದೆ. ಸಂಜೆ 4.30ಕ್ಕೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಗೋಪಾಲ್ ಅವರು ಧರ್ಮಜಾಗೃತಿ ಸಂದೇಶ ನೀಡಲಿದ್ದಾರೆ.

ನ.28ರಂದು ಸಂಜೆ 6.30ರಿಂದ ಪಾವಗಡದ ಪ್ರಕಾಶ್ ಅವರಿಂದ ಸುಂದರಕಾಂಡ ಸಂವಾದ ನಡೆಯಲಿದ್ದು, ಸಂಜೆ 7ರಿಂದ ಗಾಯಕ ಜಗದೀಶ್ ಆಚಾರ್ಯ ಅವರ ನೇತೃತ್ವದಲ್ಲಿ ರಾಷ್ಟ್ರಜಾಗೃತಿಯ ಕುರಿತ ವಿಶೇಷ ಭಜನಾ ಕಾರ್ಯಕ್ರಮ ಜರುಗಲಿದೆ.

ನ.29ರಂದು ಪಂಚಮುಖಿ ಆಂಜನೇಯ ಹವನ

ನ.29ರಂದು ಬೆಳಿಗ್ಗೆ 7 ಗಂಟೆಗೆ 10 ಮಂದಿ ವೈದಿಕರ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಹವನ ಆರಂಭವಾಗಲಿದೆ. ಮೂರು ದಿನಗಳ ಕಾಲ ಪಾವಗಡದ ಪ್ರಕಾಶ್ ಅವರಿಂದ ರಾಮಾಯಣದ ಸುಂದರಕಾಂಡ ಪಾರಾಯಣ ನಡೆಯಲಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಮಾಹಿತಿ ನೀಡಿದರು.

ಹವನ ಸಮಿತಿ ಉಪಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಪುನೀತ್ ಅತ್ತಾವರ, ಕಾರ್ಯದರ್ಶಿ ಜನಾರ್ದನ ಬೆಟ್ಟ, ಸ್ವಾಗತ ಸಮಿತಿ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಸಮಿತಿ ಪ್ರಮುಖರಾದ ಜಯಂತಿ ನಾಯಕ್, ಸಂಕಪ್ಪ ಗೌಡ, ಸತೀಶ್ ಬಿ.ಎಸ್., ರಾಘವೇಂದ್ರ ಪ್ರಭು, ಆದರ್ಶ್‌ ಉಪ್ಪಿನಂಗಡಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ರವಿಕಿರಣ್ ನೆಲಪ್ಪಾಲು, ಭಾಮಿ ಜಗದೀಶ್ ಶೆಣೈ, ಜಗದೀಶ್ ಬನ್ನೂರು, ರಾಮ್‌ಪ್ರಸಾದ್‌ ಮಯ್ಯ, ಅಭಿಜಿತ್ ತೆಂಕಿಲ, ನಿತೇಶ್ ಕಲ್ಲೇಗ, ದಯಾನಂದ ಗೌಡ, ಮನೋಹರ್ ಕಲ್ಲಾರೆ ಭಾಗವಹಿಸಿದ್ದರು.

Ad Widget
Continue Reading

ಸ್ಥಳೀಯ

Alike-ಅಳಿಕೆ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

Published

on



Ad Widget

Ad Widget

Ad Widget

Ad Widget

ಅಳಿಕೆ ಸತ್ಯಸಾಯಿ ಶಿಕ್ಷಣಸಂಸ್ಥೆಗಳ ಕಾರ್ಯದರ್ಶಿ, ಚಂದ್ರಶೇಖರ್ ಭಟ್ ನೇತೃತ್ವದಲ್ಲಿ ಶಿಕ್ಷಕರು ಮತ್ತು 36 ವಿದ್ಯಾರ್ಥಿಗಳು ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಿದರು.

Ad Widget

Ad Widget

Ad Widget

ಉಜಿರೆ : ಅಳಿಕೆ ಸತ್ಯಸಾಯಿ ಶಿಕ್ಷಣಸಂಸ್ಥೆಗಳ ಕಾರ್ಯದರ್ಶಿ, ಚಂದ್ರಶೇಖರ್ ಭಟ್ ನೇತೃತ್ವದಲ್ಲಿ ಶಿಕ್ಷಕರು ಮತ್ತು 36 ವಿದ್ಯಾರ್ಥಿಗಳು ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಿದರು.

Ad Widget

Ad Widget alt="Ad Widget"/>

Ad Widget

ಅಳಿಕೆ ಸಂಸ್ಥೆಗಳ ಕಾರ್ಯದರ್ಶಿ, ಚಂದ್ರಶೇಖರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಅಳಿಕೆಗೂ, ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು ಅಳಿಕೆಯ ಸಂಸ್ಥೆಗಳ ಪ್ರಗತಿಗೆ ಹೆಗ್ಗಡೆಯವರ ಕೊಡುಗೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಅಳಿಕೆಯಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಮಡಿಯಾಲ ನಾರಾಯಣ ಭಟ್ ಅವರ ಸೇವೆಯನ್ನು ಸ್ಮರಿಸಿದ ಅವರು ಇದೇ ನವಂಬರ್ 29ರಂದು ಭಾನುವಾರ ಮಡಿಯಾಲರ ಜನ್ಮಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದ್ದು ಅದಕ್ಕೆ ಹೆಗ್ಗಡೆಯವರನ್ನು ಆದರದಿಂದ ಆಹ್ವಾನಿಸಿದರು.

Ad Widget

Ad Widget <> Ad Widget

ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಹೆಗ್ಗಡೆಯವರು ಅಳಿಕೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಸೇವೆ, ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಮುಂದೆಯೂ ಎಲ್ಲಾ ಸಂಸ್ಥೆಗಳು ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಅವರು ಶುಭ ಹಾರೈಸಿದರು



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!